ನಾಪೋಕ್ಲು ಫೆ.5 NEWS DESK : ಕಾಫಿ ಕೊಯ್ಲಿನ ಸಮಯ. ರೆಂಬೆಗಳಲ್ಲಿರುವ ಕಾಫಿ ಕೊಯ್ಲು ಮಾಡಿ ತಂದು ಒಣಗಿಸುವುದು ಸಾಮಾನ್ಯ. ಆದರೆ ಇಲ್ಲಿ ಕಾಫಿ ಗಿಡದ ಮುಖ್ಯ ಕಾಂಡದಲ್ಲೇ ಕಾಫಿಯ ಗೊಂಚಲು ಹಣ್ಣಾಗಿ ಅಚ್ಚರಿಯನ್ನುಂಟು ಮಾಡಿದೆ. ಈ ವಿಚಿತ್ರ ಕಂಡು ಬಂದಿದ್ದು, ಸಮೀಪದ ಕಕ್ಕಬೆ ಗ್ರಾ.ಪಂ ವ್ಯಾಪ್ತಿಯ ಯವಕಪಾಡಿಯ ಗ್ರಾಮದ ಕೋಡಿಮನಿಯಂಡ ಎಂ.ಮೊಣ್ಣಪ್ಪ ಅವರ ಕಾಫಿ ತೋಟದಲ್ಲಿ. ಕಾಂಡದಲ್ಲಿ ಮೂಡಿದ ಗೊಂಚಲು-ಗೊಂಚಲು ಕಾಫಿ ಹಣ್ಣು ಅಚ್ಚರಿಗೆ ಕಾರಣವಾಗಿದೆ. ಈ ವಿಸ್ಮಯವನ್ನು ಗ್ರಾಮದ ಕಾಫಿ ಬೆಳೆಗಾರ ಪಾಂಡಂಡ ನರೇಶ್ ಗಮನಿಸಿದ್ದು, ಈ ಒಂದು ಗಿಡದಲ್ಲಿ ಪ್ರತಿ ವರ್ಷ ಕಾಂಡದಲ್ಲೇ ಹೂ ಬಿಟ್ಟು ಕಾಫಿ ಆಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.











