ನಾಪೋಕ್ಲು ಫೆ.5 NEWS DESK : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಸಮಾರಂಭವು ಫೆ.21 ರಿಂದ 28 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಎಮ್ಮೆಮಾಡು ಎಮ್ಮೆಮಾಡು ಜಮಾಯತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ ತಿಳಿಸಿದ್ದಾರೆ. ಎಮ್ಮೆಮಾಡು ಗ್ರಾಮದಲ್ಲಿ ಸೂಫಿ ಶಹೀದ್ ದರ್ಗಾದಲ್ಲಿ ಉರೂಸ್ ಸಮಾರಂಭದ ಪ್ರಯುಕ್ತ ಉರೂಸ್ ಕುರಿಕ್ಕಲ್ ಕಾರ್ಯಕ್ರಮದಲ್ಲಿ ಅಸರ್ ನಮಾಜಿನ ಬಳಿಕ ಸಂಪ್ರದಾಯದಂತೆ ದಫ್ ಪ್ರದರ್ಶನದೊಂದಿಗೆ ಸೂಫಿ ಶಹೀದ್ ದರ್ಗಾಕ್ಕೆ ತೆರಳಿದ ಸಮುದಾಯ ಬಾಂಧವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಎಮ್ಮೆಮಾಡು ಮಸೀದಿಯ ಖತೀಬರಾದ ರಾಝಿಕ್ ಫೈಝಿ, ಮುದರ್ರಿಸ್ ಹಂಝ ಸಖಾಫಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಮಾತನಾಡಿದ ಎಮ್ಮೆಮಾಡು ಜಮಾಯತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ ಉರೂಸ್ ಸಮಾರಂಭದ ಅಂಗವಾಗಿ ಸಂಪ್ರದಾಯದಂತೆ ಉರೂಸ್ ಕುರಿಕ್ಕಲ್ ಕಾರ್ಯಕ್ರಮ ನಡೆಸಲಾಗಿದೆ ಎಂದರು. ಜಮಾಯತ್ ಕಾರ್ಯದರ್ಶಿ ಸಿ.ಕೆ.ಹಾರಿಸ್, ಸಹ ಕಾರ್ಯದರ್ಶಿ ಸಿ.ಎಸ್.ಇಬ್ರಾಹಿಂ, ಸಯ್ಯದ್ ಅಝೀಝ್ ತಂಙಳ್, ಸಯ್ಯದ್ ಇಲ್ಯಾಸ್ ತಂಙಳ್,ಶಿಹಾಬುದ್ದೀನ್ ಮತ್ತಿತರ ಪ್ರಮುಖರು, ಸಮುದಾಯ ಬಾಂಧವರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ











