


ಮಡಿಕೇರಿ ಮಾ.7 NEWS DESK : ರಾಜ್ಯ ಸರ್ಕಾರದ ಬಜೆಟ್ ಒಂದು ವರ್ಗವನ್ನು ಓಲೈಸುವ ಬಜೆಟ್ ಆಗಿದೆ ಎಂದು ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಟೀಕಿಸಿದ್ದಾರೆ. ಅಲ್ಪಸಂಖ್ಯಾತರ ಓಲೈಕೆಯ ಭಾಗವಾಗಿ ಬಜೆಟ್‍ನಲ್ಲಿ, ಅವರ ಅಭ್ಯುದಯಕ್ಕಾಗಿ 1800 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದೇಶಿ ಶಿಕ್ಷಣದ ನೆರವನ್ನು ರೂ.30 ಲಕ್ಷಕ್ಕೆ ಹೆಚ್ಚಿಸಿರುವುದು ಇದೇ ಕಾರಣದಿಂದ ಎಂದು ಅಭಿಪ್ರಾಯಪಟ್ಟಿದ್ದಾರೆ.