


ಮಡಿಕೇರಿ ಮಾ.10 NEWS DESK : ಏಷ್ಯಾ ಖಂಡದ ಬೃಹತ್ ಸಾಹಿತ್ಯೋತ್ಸವ ‘ಫೆಸ್ಟಿವಲ್ ಆಫ್ ಲೆಟರ್ಸ್’ ಸಾಹಿತ್ಯೋತ್ಸವದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಮುಲ್ಲೇಂಗಡ ರೇವತಿ ಪೂವಯ್ಯ ಕೊಡಗನ್ನು ಪ್ರತಿನಿಧಿಸಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಮಾ.11 ರಂದು ದೆಹಲಿಯಲ್ಲಿ ಆಯೋಜಿಸಿರುವ “ಫೆಸ್ಟಿವಲ್ ಆಫ್ ಲೆಟರ್ಸ್” ಸಾಹಿತ್ಯೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಆಹ್ವಾನಿತ ಕೊಡವ ಭಾಷಾ ಕವಯಿತ್ರಿಯಾಗಿ ಪಾಲ್ಗೊಳ್ಳಲಿದ್ದಾರೆ.