





ಕುಶಾಲನಗರ, ಮಾ.29 NEWS DESK : ಅಸ್ಪೃಶ್ಯತೆ , ಅಸಮಾನತೆ ನಿವಾರಣೆಗೆ ಸಾಹಿತ್ಯ ಸಹಕಾರಿ. ಸಾಹಿತ್ಯವು ಸಮಾಜದಲ್ಲಿನ ಅಸ್ಪೃಶ್ಯತೆ ಹಾಗೂ ಅಸಮಾನತೆಯನ್ನು ತೊಡೆದು ಹಾಕಿ ಜಾತ್ಯತೀತ ನೆಲೆಗಟ್ಟಿನ ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಖ್ಯಾತ ಸಾಹಿತಿ ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಕಾಳೇಗೌಡ ನಾಗವಾರ ಹೇಳಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಕುಶಾಲನಗರ ಕನ್ನಡ ಭಾರತ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಚಕೋರ ಕೊಡಗು ಸಾಹಿತ್ಯ ವಿಚಾರ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಜಾತಿ ತಾನೊಂದೇ ವಲಂ ಎಂದು ಸಾರಿದ ಆದಿಕವಿ ಪಂಪ ನಮಗೆಲ್ಲಾ ಆದರ್ಶವಾಗಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕುವೆಂಪು ಅವರ ಸಂದೇಶವನ್ನು ಸಾಕಾರಗೊಳಿಸುವುದು ಯುವ ಜನಾಂಗದ ಮೊದಲ ಆದ್ಯತೆಯಾಗಿದೆ ಎಂದು ಆಶಿಸಿದರು. ಮೌಢ್ಯ ಮತ್ತು ಅಸ್ಪೃಶ್ಯತಾ ರಹಿತ ಸಮಾಜ ಕಟ್ಟಲು ಪಂಪನಿಂದ ಮೊದಲು ಗಂಡು ವಚನಕಾರಾದಿಯಾಗಿ ಕನ್ನಡದ ಎಲ್ಲ ಸಾಹಿತಿಗಳು ಶ್ರಮಿಸಿದರು ಎಂದು ಹಿರಿಯ ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ಹೇಳಿದರು. ವಚನಕಾರರಾದ ಬಸವಣ್ಣ, ಅಕ್ಕಮಹಾದೇವಿ ,ಅಲ್ಲಮಪ್ರಭು ಮೊದಲಾದವರು, ಮತ್ತು ಅಸ್ಪೃಶ್ಯತೆ ಮತ್ತು ಮೌಡ್ಯ ನಿವಾರಣೆ ಮಾಡಿ ಸಮ ಸಮಾಜವನ್ನು ಕಟ್ಟಲು ಶ್ರಮಿಸಿದರು. ಇವರ ತತ್ವಾ ದರ್ಶಗಳನ್ನು ಚಿಂತಿಸಿ ಆಲೋಚನೆ ಮತ್ತು ಪುನರ್ ಆಲೋಚನೆ ಮೂಲಕ ಹೊಸ ಸಮಾಜವನ್ನು ಕಟ್ಟುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ನುಡಿದರು. ಅಕ್ಷರಸ್ಥರ ನಾಡಾದ ಕೇರಳದಲ್ಲಿ ಅಸ್ಪೃಶ್ಯತೆ ತುಂಬಿ ತುಳುಕುತ್ತಿತ್ತು. ಅಲ್ಲಿ ದೇವಾಲಯಕ್ಕೆ ಅಸ್ಪೃಶ್ಯರ ಪ್ರವೇಶ ಇರದಿದ್ದರೂ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿಯೂ ಕೂಡ ಡಿ ನಡೆದಾಡುವಂತಿರಲಿಲ್ಲ.ಇದನ್ನು ಗಮನಿಸಿದ ವಿವೇಕಾನಂದರು ಕೇರಳವನ್ನು ಹುಚ್ಚಾಸ್ಪತ್ರೆ ಎಂದು ಕರೆದರು.ಇಂತಹ ಅಮಾನವೀಯ ನಡತೆ ಆಧುನಿಕ ಕಾಲದಲ್ಲಿಯೂ ಕಡಿಮೆಯಾಗಿಲ್ಲದಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯದ ಅತ್ಯುತ್ತಮ ಕಥೆಗಾರ್ತಿ ಕೊಡಗಿನ ಗೌರಮ್ಮ ತಮ್ಮ ಹದಿ ಹರದ ವಯಸ್ಸಿನಲ್ಲಿ ಉಪವಾಸ ಕುಳಿತು ಗಾಂಧೀಜಿಯವರನ್ನು ತಮ್ಮ ಮನೆಗೆ ಬರುವಂತೆ ಮಾಡಿ ಬಳಿಕ ತಮ್ಮ ಮೈ ಮೇಲಿದ್ದ ಆಭರಣಗಳನ್ನು ತಾವು ಕೈಗೊಂಡಿದ್ದ ಹರಿಜನೋದ್ಧಾರ ಚಳುವಳಿಗೆ ಬಳಸಿಕೊಳ್ಳಲು ಗ ಒಪ್ಪಿಸಿದರು. ಇಂತಹ ಆದರ್ಶ ಆದರ್ಶವಾದ ಮಹಿಳೆ ಕೊಡಗಿನಲ್ಲಿ ಇದ್ದರು ಎಂಬುದೇ ನಮಗೆಲ್ಲ ಹೆಮ್ಮೆಯ ವಿಷಯ. ಪ್ರಗತಿಪರವಾದ ಆಲೋಚನೆಗಳನ್ನು ಇಟ್ಟುಕೊಂಡು ವಿಧವೆಯರ ಬಗ್ಗೆ ಅತಿಹೆಚ್ಚಿನ ಕಥೆಗಳನ್ನು ಬರೆದ ಕಥೆಗಾರ್ತಿ ಕೊಡಗಿನ ಗೌರಮ್ಮನ ಕಥೆಗಳನ್ನು ಎಲ್ಲರೂ ಓದಬೇಕು. ಈ ಮೂಲಕ ಪ್ರಗತಿಪರವಾದ ಹೊಸ ಸಮಾಜವನ್ನು ಕಟ್ಟಬೇಕು ಎಂದು ಒತ್ತಿ ಹೇಳಿದರು. ವಿದ್ಯಾರ್ಥಿಗಳು ಹಾಗೂ ಯುವ ಸಮೂಹವನ್ನು ಸಾಹಿತ್ಯ ಕ್ಷೇತ್ರದತ್ತ ಆಕರ್ಷಿಸುವಂತಹ ಸಾಹಿತ್ಯಪರ ಚಟುವಟಿಕೆಗಳು ಹೆಚ್ಚಾಗಿ ಎಲ್ಲೆಡೆ ನಡೆಯಬೇಕು ಎಂದು ಮೈಸೂರಿನ ಹಿರಿಯ ಸಾಹಿತಿ, ಸಂಸ್ಕ್ರತಿ ಚಿಂತಕ ಪ್ರೊ.ಕಾಳೇಗೌಡ ನಾಗವಾರ ಹೇಳಿದರು. ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಕುಶಾಲನಗರದ ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ” ಚಕೋರ ” ಸಾಹಿತ್ಯ ವಿಚಾರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕುವೆಂಪು ಅವರ ಆಶಯಗಳನ್ನು ಸಾಹಿತ್ಯದ ಮೂಲಕ ಸಾಕಾರಗೊಳಿಸಬೇಕಿದೆ. ಇದನ್ನೇ ಪಂಪ ಮಾನವ ಕುಲಂ ತಾನೊಂದೇ ವಲಂ ಎಂದಿದ್ದಾರೆ. ಬಸವಣ್ಣನವರುಟಿ ಕೂಡ ಮಾನವ ಸಮಾಜ ಕಟ್ಟುವುದಕ್ಕೆ ಶ್ರಮಿಸಿದ್ದಾರೆ. ಇಂತಹ ಎಲ್ಲಾ ಸಾಹಿತ್ಯವನ್ನು ನಮ್ಮ ಯುವಜನಾಂಗಕ್ಕೆ ಒತ್ತಿ ಹೇಳುವ ಮೂಲಕ ಜಾತ್ಯಾತೀತ ಹಾಗೂ ಮನುಷ್ಯಪರವಾದ ಪ್ರೀತಿಯ ಸಮಾಜವನ್ನು ಕಟ್ಟುವ ಕೆಲಸ ಅತೀ ತುರ್ತಾಗಿ ಆಗಬೇಕಿದೆ ಎಂದು ಪ್ರೊ.ನಾಗವಾರ ಹೇಳಿದರು. ಸಾಮಾಜಿಕ ಚಿಂತಕ ವಿ.ಪಿ.ಶಶಿಧರ್ ಮಾತನಾಡಿ, ನೈತಿಕವಾಗಿ ಗಟ್ಟಿಯಾಗಬೇಕಾದರೆ ಆಳವಾಗಿ ಓದಿಕೊಳ್ಳಬೇಕಾಗಿದೆ. ಮೊದಲು ಮಾನವನಾಗು ಎನ್ನುವ ಬಹು ದೊಡ್ಡ ವಿಶ್ವಚಿಂತನೆಯನ್ನು ಕೊಟ್ಟಿದ್ದೇ ಕನ್ನಡ ಸಾಹಿತ್ಯ. ಇಂತಹ ಸಾಹಿತ್ಯಿಕ ಮೌಲ್ಯಗಳನ್ನು ನಾವು ರೂಢಿಸಿಕೊಳ್ಳಬೇಕಾಗಿದೆ. ನಮ್ಮನ್ನು ಉದ್ದೀಪನಗೊಳಿಸುವ ಹೊಸ ಸಾಹಿತ್ಯದ ಮಾರ್ಗದತ್ತ ಯುವಜನಾಂಗ ಆಕರ್ಷಿತರಾಗಬೇಕಿದೆ ಎಂದರು. ಚಕೋರ ಸಾಹಿತ್ಯ ವೇದಿಕೆ ಜಿಲ್ಲಾ ಸಂಚಾಲಕ ಡಾ.ಜೆ.ಸೋಮಣ್ಣ ಮಾತನಾಡಿ, ಇವತ್ತಿನ ತಂತ್ರಜ್ಞಾನದ ಯುಗದಲ್ಲಿ ಆಧುನಿಕ ಜನಾಂಗ ಕೇವಲ ಕ್ಷಣಿಕ ವಿಷಯಗಳಿಗಷ್ಟೇ ಸ್ಪಂದಿಸುತ್ತಿದ್ದಾರೆ. ಆದರೆ ಮನುಷ್ಯ ಪರವಾದ ಆಲೋಚನೆಗಳ ಹೊಸ ಸಮಾಜ ಕಟ್ಟುವ ಕಡೆಗೆ ಯುವಜನಾಂಗ ಹಾಗೂ ಜಿವಿದ್ಯಾರ್ಥಿ ಸಮೂಹ ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಚಕೋರ ಕೊಡಗು ಇಡೀ ಜಿಲ್ಲೆಯಾದ್ಯಂತ ಯುವ ಜನರಲ್ಲಿ ಸಾಹಿತ್ಯ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಲಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಚಿಕ್ಕಮಂಗಳೂರು ಡಾ. ಗಣೇಶ್, ಯುವಜನತೆಯನ್ನು ದೃಷ್ಟಿಯಲ್ಲಿರಿಸಿ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮವಿದು. ಸಾಹಿತ್ಯಪರ ಚಿಂತನೆ ಹಾಗೂ ಚಟುವಟಿಕೆಗಳಿಗೆ, ಗ್ರಾಮೀಣ ಭಾಗದ ಯುವ ಬರಹಗಾರರಿಗೆ, ಸಾಹಿತಿಗಳಿಗೆ, ಚಿಂತಕರಲ್ಲಿ ಜಾಗತಿಕ ಚಿಂತನೆಗಳ ಜಾಗೃತಿ ಮೂಡಿಸುವುದು ‘ ಚಕೋರ ‘ ದ ಉದ್ದೇಶವಾಗಿದೆ. ಕರ್ನಾಟಕ ಕಟ್ಟಿದ ನೂರು ಬರಹಗಾರರ, ನಾಡಿನ 50 ಮಂದಿ ಮಹಿಳೆಯರನ್ನೂ ಒಳಗೊಂಡ ಚಿಂತನೆಗಳ ಹೊತ್ತಿಗೆ ಕೂಡ ಹೊರತರಲಾಗುತ್ತಿದೆ. ಸರ್ವ ಜನಾಂಗದ ಹಿತರಕ್ಷಣೆಗಾಗಿ ನಾಡಿನ ಜನರ ಸಂಕಟ – ಸಂತಸಗಳನ್ನು ಗಮನದಲ್ಲಿಟ್ಟು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸಾಹಿತ್ಯ ಹೊರಹೊಮ್ಮಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಚಕೋರ ಸಾಹಿತ್ಯ ವೇದಿಕೆ ಸಂಚಾಲಕಿ ರಮ್ಯಾ ಮೂರ್ನಾಡು,
ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೆ.ಎಸ್.ರುದ್ರಪ್ಪ, ರಂಗಭೂಮಿ ಕಲಾವಿದ. ಭರ್ಮಣ್ಣ ಬೆಟಗೇರಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಚಿಕ್ಕಮಂಗಳೂರು ಗಣೇಶ ಪ್ರಾಸ್ತಾವಿಕ ನುಡಿಗಳಾಡಿದರು. ಸಾಹಿತ್ಯ ಚಿಂತಕರಾದ ಕೆ.ಎಸ್.ಮೂರ್ತಿ, ಮೆ.ನಾ.ವೆಂಕಟನಾಯಕ್, ಉಮೇಶ್ ಭಟ್, ಮಾಲಾಮೂರ್ತಿ, ಉಪನ್ಯಾಸಕಿ ಆಶಿತಾ ಸ್ವಾಗತಿಸಿದರು. ಅನಿತಾ ನಿರೂಪಿಸಿದರು. ವಿದ್ಯಾರ್ಥಿನಿ ಸಿಂಚನಾ ಪ್ರಾರ್ಥಿಸಿದರು.