ಮಡಿಕೇರಿ ಜೂ.25 NEWS DESK : ಕೊಡಗು ಸಹಾಯಕ ಔಷಧ ನಿಯಂತ್ರಕರಾಗಿ ಮೈಸೂರು ಜಿಲ್ಲೆಯ ಸಹಾಯಕ ಔಷಧ ನಿಯಂತ್ರಕ ಷರೀಫ್ ಅವರನ್ನ ಪ್ರಭಾರ ಆಗಿ ನಿಯೋಜಿಸಲಾಗಿದೆ. ಕಳೆದ ಐದು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಸಹಾಯಕ ಔಷಧ ನಿಯಂತ್ರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್ ಮಾಗಣಗೇರಿ ವರ್ಗಾವಣೆ ಹಿನ್ನಲೆ ಷರೀಫ್ ಅವರನ್ನು ನೇಮಿಸಲಾಗಿದೆ. ಮಂಗಳವಾರ ಅಧಿಕಾರ ವಹಿಸಿಕೊಂಡ ಷರೀಫ್ ಅವರನ್ನು ಕೊಡಗು ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಸ್ವಾಗತಿಸಿ, ಅಭಿನಂದಿಸಿದರು. ನಂತರ ಅಧ್ಯಕ್ಷ ಅಂಬೆಕಲ್ಲು ಜೀವನ್ ನೇತೃತ್ವದಲ್ಲಿ ಕೆಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭ ಕೊಡಗು ಔಷಧ ವ್ಯಾಪಾರಿಗಳ ಸಂಘದ ಹಿರಿಯ ಸದಸ್ಯ ಅಂಬೇಕಲ್ ಕುಶಾಲಪ್ಪ, ಸಂಘದ ಉಪಾಧ್ಯಕ್ಷ ಅಂಬೇಕಲ್ ವಿನೋದ್, ಖಜಾಂಚಿ ಪ್ರಸಾದ್ ಗೌಡ, ಜಂಟಿ-ಕಾರ್ಯದರ್ಶಿ ವಸಂತ್, ಸದಸ್ಯರಾದ ಶಶಿಧರ್ ರೈ, ಧನಂಜಯ ಶಾಸ್ತ್ರೀ, ಸುರೇಶ್ ಬಿಳಿಗೇರಿ ಉಪಸ್ಥಿತರಿದ್ದರು.












