
ಮಡಿಕೇರಿ ಜು.29 NEWS DESK : ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಹೈಪಟೈಟಿಸ್ ದಿನಾಚರಣೆಯನ್ನು ಆಚರಿಲಾಯಿತು. ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ವೈರಲ್ ಹೈಪಟೈಟಿಸ್ ನೋಡಲ್ ಅಧಿಕಾರಿ ಡಾ. ಜಿ.ಕೆ.ಸನತ್ ಕುಮಾರ್ ಮಾತನಾಡಿ, ವೈರಲ್ ಹೈಪಟೈಟಿಸ್ ರೋಗದ ಲಕ್ಷಣ, ಚಿಕಿತ್ಸೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಿದರು. ಫಿಜಿಷಿಯನ್ ಡಾ.ರಾಜೇಶ್ ಮಾತನಾಡಿ, ವೈರಲ್ ಹೈಪಟೈಟಿಸ್ ಕಾಯಿಲೆ ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ವಿಶ್ವನಾಥ್ ಸಿಂಪಿ ಅವರ ಮಾರ್ಗದರ್ಶನದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ವೈರಲ್ ಹೈಪಟೈಟಿಸ್ ಕಾಯಿಲೆಯ ಅರಿವು ಮೂಡಿಸುವ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ನಂತರ ಸಾರ್ವಜನಿಕ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಹೈಪಟೈಟಿಸ್ ಲಸಿಕೆಯನ್ನು ನೀಡಲಾಯಿತು. ಶಿಬಿರದಲ್ಲಿ ಒಟ್ಟು 51 ಮಂದಿ ಫಲಾನುಭವಿಗಳಿಗೆ ಲಸಿಕೆಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಪ್ರಜ್ಷಲ್, ಶ್ರೂಶ್ರೂ಼ಷಣಾಧಿಕಾರಿ ಹಂಸ ಮತ್ತು ಕಾವೇರಿ, ಸಮಾರಂಭದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾ ಕೇಂದ್ರದ ಶ ನವೀನ್, ಕಾರ್ಯಕ್ರಮ ಸಂಜೋಜ ಮಂಜು.ಎಂ ಹಾಜರಿದ್ದರು. ಶುಶ್ರೂಷಣಾಧಿಕಾರಿ ಚಂದ್ರಕಲಾ ಮತ್ತು ನಿಷಾದ ಪ್ರಾರ್ಥಿಸಿದರು. ಕ್ಷ ಕಿರಣ ತಂತ್ರಜ್ಞ ವಿಜೇಯಂತ್ರ ಸ್ವಾಗತಿಸಿದರು. ಗೋಣಿಕೊಪ್ಪ STS ಚಿಕಿತ್ಸಾ ಘಟಕದ ಕೆ.ಬಿ.ವಿನಿಲ್ ನಿರೂಪಿಸಿದರು. LT ಹೆಚ್.ಎಸ್.ದಿನೇಶ್ ವಂದಿಸಿದರು.








