Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮೇ 2 ರಂದು ಜಂಬೂರುವಿನಲ್ಲಿ ಶ್ರೀ ಮುತ್ತಪ್ಪನ್ ದೇವರ ವೆಳ್ಳಾಟಂ (ಕೋಲ)*
  • *ಕುಶಾಲನಗರದಲ್ಲಿ ವಾಸವಿ ಮಾತೆಗೆ ಪುಷ್ಪಾರ್ಚನೆ*
  • *ಭಾರತದ ಸರ್ವೋಚ್ಛ ನ್ಯಾಯಾಲಯದಿಂದ ‘ಸಮಾಧಾನ ಸಮಾರೋಹ-2026’ : ಪ್ರಥಮ ಬಾರಿಗೆ ವಿಶೇಷ ಲೋಕ್ ಅದಾಲತ್ ಆಯೋಜನೆ*
  • ಹಲೋ ಆಕಾಶವಾಣಿ ‘ಬೆಳಕ ಹುಡುಕುತ್ತಾ’ ನೇರಪೋನ್ ಇನ್ ಕಾರ್ಯಕ್ರಮ : ಜಿಲ್ಲಾಧಿಕಾರಿ ಸೋಮಶೇಖರ್ ಭಾಗಿ : ಸಾರ್ವಜನಿಕರಿಂದ ಉತ್ತಮ ಸ್ಪಂದನೆ*
  • *ಕೊಡಗು : ಜಿಲ್ಲಾ ಕುಲಾಲ ಕುಂಬಾರ ಕ್ರೀಡೋತ್ಸವ : ಮಂತ್ರಣ ಪತ್ರಿಕೆ ಲೋಕಾರ್ಪಣೆ*
  • *ತಾವುರೂ ಗ್ರಾಮದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಮಹಿಷಾಸುರ ಮರ್ದಿನಿ ಅಷ್ಟಬಂಧ ಬ್ರಹ್ಮಕಲಶೋತ್ಸವ*
  • *ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಾರ್ಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ*
  • *ಮಣ್ಣು ಪರೀಕ್ಷೆ ಮತ್ತು ತರಬೇತಿ ಕಾರ್ಯಾಗಾರ*
  • *ಯಿಫಾ ಹಾಕಿ ಚಾಂಪಿಯನ್ ಟ್ರೋಫಿ ಕ್ರೀಡಾಕೂಟ : ಜರ್ಸಿ ಬಿಡುಗಡೆ*
  • *KANNIKA CONVENTION CENTER : CELEBRATE YOUR SPECIAL MOMENTS : HOTEL KANNIKA INTERNATIONAL , KUSHALANAGAR*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸುತ್ತೂರು ಮಠದ 23ನೇ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಂಸ್ಮರಣೆ : ವಚನ ಸಾಹಿತ್ಯ ಅಂತರಂಗ ಬಹಿರಂಗ ಶುದ್ದಿಗೆ ದಿವ್ಯ ಔಷಧಿ : ಹೆಚ್.ವಿ.ಶಿವಪ್ಪ ಶ್ಲಾಘನೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಸುತ್ತೂರು ಮಠದ 23ನೇ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಂಸ್ಮರಣೆ : ವಚನ ಸಾಹಿತ್ಯ ಅಂತರಂಗ ಬಹಿರಂಗ ಶುದ್ದಿಗೆ ದಿವ್ಯ ಔಷಧಿ : ಹೆಚ್.ವಿ.ಶಿವಪ್ಪ ಶ್ಲಾಘನೆ*

ಸೆಪ್ಟೆಂಬರ್ 8, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಕುಶಾಲನಗರ ಸೆ.8 NEWS DESK : ಜನಮಾನಸದಲ್ಲಿ ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಶರಣ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸುವ ಮೂಲಕ ಜನರಲ್ಲಿ ಅಂತರಂಗ ಹಾಗೂ ಬಹಿರಂಗ ಶುದ್ದಿಗೆ ಔಷಧಿ ನೀಡಿದ ಕೀರ್ತಿ ಸುತ್ತೂರು ಸಂಸ್ಥಾನದ 23ನೇ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಸ್ವಾಮಿಗಳದ್ದು ಎಂದು ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ.ಶಿವಪ್ಪ ಹೇಳಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಚಿಕ್ಕಹೊಸೂರಿನ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಗ್ರಾಮದ ಗಣಪತಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಸುತ್ತೂರು ಮಠದ 23ನೇ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಸಂಸ್ಮರಣೆ ಅಂಗವಾಗಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ವಚನ ಸಾಹಿತ್ಯದ ವಾಸ್ತವಿಕ ಮತ್ತು ವೈಚಾರಿಕ ಚಿಂತನೆಗಳನ್ನು ಸಮಾಜಕ್ಕೆ ನಿರಂತರವಾಗಿ ತಲುಪಿಸುವ ಉದ್ದೇಶದಿಂದ 1986 ರಲ್ಲಿ ಶರಣ ಸಾಹಿತ್ಯ ಪರಿಷತ್ತು ಆರಂಭಿಸಿ ನಾಡಿನಾದ್ಯಂತ ಶರಣರ ವಚನಗಳು ಹಾಗೂ ಚಿಂತನೆಗಳ ಹರಿವಿಗೆ ಮುನ್ನುಡಿ ಬರೆದರು. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ನಾಡಿನಲ್ಲಿದ್ದ ಬಡತನ, ದಾರಿದ್ರ್ಯ, ಹಸಿವು, ನಿರುದ್ಯೋಗ ಹೋಗಲಾಡಿಸಲು ಹಳ್ಳಿ ಹಳ್ಳಿಗಳಿಗೆ ಉಳ್ಳವರ ಬಳಿ ತೆರಳಿ ಭಿಕ್ಷಾಟನೆ ಮಾಡಿ ನೊಂದವರಿಗೆ ಅನ್ನ, ಅರಿವು, ಆಶ್ರಯ ಕಲ್ಪಿಸಿದರು. ಜೆಎಸ್ ಎಸ್ ವಿದ್ಯಾಪೀಠದ ಮೂಲಕ ರಾಜ್ಯವಷ್ಟೇ ಅಲ್ಲದೇ, ದೇಶದ ಮೂಲೆ ಮೂಲೆಗಳು ಹಾಗೂ ವಿದೇಶಗಳಲ್ಲಿ 350 ಕ್ಕೂ ಹೆಚ್ಚಿನ ಶಿಕ್ಷಣ ಹಾಗೂ ಆರೋಗ್ಯ ಸಂಸ್ಥೆಗಳನ್ನು ತೆರೆದ್ದರ ಫಲ ಲಕ್ಷಾಂತರ ಮಂದಿ ಇಂದು ಬದುಕು ಕಟ್ಟಿಕೊಳ್ಳಲು ನೆರವಾಯಿತು ಎಂದು ಡಾ. ರಾಜೇಂದ್ರ ಸ್ವಾಮೀಜಿಯವರ ಸೇವೆ ಹಾಗೂ ಸಾಧನೆಗಳನ್ನು ಶಿವಪ್ಪ ಸ್ಮರಿಸಿದರು. ತೊರೆನೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಇಂದು ಎಳೆಯ ಮಕ್ಕಳಲ್ಲಿ ವಚನಗಳ ಅರಿವಿನ ಉತ್ತಮ ಸಂಸ್ಕಾರಗಳನ್ನು ತುಂಬುವ ಮೂಲಕ ತಾಯಂದಿರು ಸಮಾಜದ ಮಹತ್ತರ ಬದಲಾವಣೆಗೆ ಚಿಂತನೆ ನಡೆಸಬೇಕಿದೆ. ಅನ್ನದ ಬಟ್ಟಲು ಆಗಿರುವ ಭೂಮಿಗೆ ಯಥೇಚ್ಛವಾಗಿ ಸುರಿಯುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ಗಳ ನಿಯಂತ್ರಿಸಲು ಬಟ್ಟೆಗಳ ಕೈ ಚೀಲಗಳನ್ನು ಹೊಂದಬೇಕಿದೆ. ಹಳ್ಳಿಗಳಲ್ಲಿ ಮಹಿಳೆಯರು ಸತ್ಸಂಗಗಳ ಮೂಲಕ ಸಾಹಿತ್ಯ, ಸಂಸ್ಕ್ರತಿಯ ಅರಿವು ಹೊಂದಬೇಕಿದೆ ಎಂದರು. ಕೊಪ್ಪಾದ ಭಾರತಮಾತಾ ಪಿಯು ಕಾಲೇಜು ಉಪನ್ಯಾಸಕಿ ಮಮತಾ ಪ್ರವೀಣ್ ಮಾತನಾಡಿ, ತಾನು ಹೇಳಿದ್ದೇ ನಂಬಬೇಕೆನ್ನುವ ಧರ್ಮ, ಅಧಿಕಾರಕ್ಕೆ ತಲೆ ಬಾಗಬೇಕೆಂಬ ರಾಜಶಾಹಿ, ತಾನು ಕಲಿಸಿದ್ದನ್ನೇ ಕಲಿಯಬೇಕೆಂಬ ಶಿಕ್ಷಣ ಇತ್ಯಾದಿ ಸ್ಥಾಪಿತ ವ್ಯವಸ್ಥೆ ಗಳನ್ನು ಪ್ರಶ್ನಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ ತಂದುಕೊಟ್ಟ ವಚನ ಸಾಹಿತ್ಯದ ಅರಿವು ಹಾಗೂ ಆಚರಣೆಗೆ ಮಹತ್ವ ಕೊಟ್ಟ ಡಾ.ರಾಜೇಂದ್ರ ಸ್ವಾಮೀಜಿಗಳ ಸಾಮಾಜಿಕ ಸೇವೆಗೆ ಬೆರಗಾದ ಮೈಸೂರು ರಾಜರು ರಾಜಗುರುತಿಲಕ ಎಂಬ ಬಿರುದು ನೀಡಿ ಗೌರವಿಸಿದ ಬಗೆಯನ್ನು ವಿವರಿಸಿದರು. ಗ್ರಾಮದ ಪಟೇಲರೂ ಹಾಗೂ ವಕೀಲರೂ ಅದ ಸಿ.ಎಸ್.ಮಂಜುನಾಥ ಸ್ವಾಮಿ ಮಾತನಾಡಿ, ಚಿಕ್ಕಹೊಸೂರು ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ದೇವಾಲಯ ನಿರ್ಮಾಣದ ಭೂಮಿ ಪೂಜೆಗೆ ಡಾ.ರಾಜೇಂದ್ರ ಸ್ವಾಮೀಜಿ ಆಗಮಿಸಿದ್ದನ್ನು ಸ್ಮರಿಸಿದರು. ಕುಶಾಲನಗರ ತಾಲ್ಲೂಕು ಕದಳಿ ವೇದಿಕೆ ಅಧ್ಯಕ್ಷೆ ಹೇಮಲತಾ ವಿರೂಪಾಕ್ಷ ಮಾತನಾಡಿ, ನಾಡಿನಲ್ಲಿ ಶಿಕ್ಷಣ ಕ್ರಾಂತಿಗೈದ ಡಾ.ರಾಜೇಂದ್ರ ಸ್ವಾಮೀಜಿ ಲಕ್ಷಾಂತರ ಮಂದಿಯ ಮನೆ ಬೆಳಕಾಗಿರುವ ಬಗ್ಗೆ ವಿವರಿಸಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಕೆ.ಪಿ.ಪರಮೇಶ್, ಕುಶಾಲನಗರ ಅಕ್ಕನ ಬಳಗದ ಗೌರವ ಅಧ್ಯಕ್ಷೆ ವಿಜಯಪಾಲಾಕ್ಷ, ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಸಿ.ಎಸ್.ರೇಣುಕಾಸ್ವಾಮಿ, ನಿವೃತ್ತ ಕಂದಾಯ ಅಧಿಕಾರಿ ಸೋಮಶೇಖರ್, ಗ್ರಾಮದ ಯಜಮಾನ ಪ್ರಭುಸ್ವಾಮಿ, ಕದಳಿ ವೇದಿಕೆ ಮಾಜಿ ಅಧ್ಯಕ್ಷೆ ಲೇಖನಾ ಧರ್ಮೇಂದ್ರ ಇದ್ದರು. ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಬಿ.ನಟರಾಜು ಕುಟುಂಬಸ್ಥರಿಂದ ಗ್ರಾಮದ ಭಕ್ತಾಧಿಗಳಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮೇ 2 ರಂದು ಜಂಬೂರುವಿನಲ್ಲಿ ಶ್ರೀ ಮುತ್ತಪ್ಪನ್ ದೇವರ ವೆಳ್ಳಾಟಂ (ಕೋಲ)*

ಮೇ 1, 2026

*ಕುಶಾಲನಗರದಲ್ಲಿ ವಾಸವಿ ಮಾತೆಗೆ ಪುಷ್ಪಾರ್ಚನೆ*

ಏಪ್ರಿಲ್ 30, 2026

*ಭಾರತದ ಸರ್ವೋಚ್ಛ ನ್ಯಾಯಾಲಯದಿಂದ ‘ಸಮಾಧಾನ ಸಮಾರೋಹ-2026’ : ಪ್ರಥಮ ಬಾರಿಗೆ ವಿಶೇಷ ಲೋಕ್ ಅದಾಲತ್ ಆಯೋಜನೆ*

ಏಪ್ರಿಲ್ 30, 2026

*ಕುಶಾಲನಗರದಲ್ಲಿ ವಾಸವಿ ಮಾತೆಗೆ ಪುಷ್ಪಾರ್ಚನೆ*

ಏಪ್ರಿಲ್ 30, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಶಾಲನಗರ ಏ.30 NEWS DESK : ಆರ್ಯವೈಶ್ಯ ಕುಲದೇವತೆ ಶ್ರೀಮದ್ ವಾಸವಿ ಕನ್ನಿಕಾಪರಮೇಶ್ವರಿ ದೇವಿಯ ಜಯಂತಿಯ ಅಂಗವಾಗಿ ವಾಸವಿ ಮಾತೆಗೆ…

*ಭಾರತದ ಸರ್ವೋಚ್ಛ ನ್ಯಾಯಾಲಯದಿಂದ ‘ಸಮಾಧಾನ ಸಮಾರೋಹ-2026’ : ಪ್ರಥಮ ಬಾರಿಗೆ ವಿಶೇಷ ಲೋಕ್ ಅದಾಲತ್ ಆಯೋಜನೆ*

ಏಪ್ರಿಲ್ 30, 2026

ಹಲೋ ಆಕಾಶವಾಣಿ ‘ಬೆಳಕ ಹುಡುಕುತ್ತಾ’ ನೇರಪೋನ್ ಇನ್ ಕಾರ್ಯಕ್ರಮ : ಜಿಲ್ಲಾಧಿಕಾರಿ ಸೋಮಶೇಖರ್ ಭಾಗಿ : ಸಾರ್ವಜನಿಕರಿಂದ ಉತ್ತಮ ಸ್ಪಂದನೆ*

ಏಪ್ರಿಲ್ 30, 2026

*ಕೊಡಗು : ಜಿಲ್ಲಾ ಕುಲಾಲ ಕುಂಬಾರ ಕ್ರೀಡೋತ್ಸವ : ಮಂತ್ರಣ ಪತ್ರಿಕೆ ಲೋಕಾರ್ಪಣೆ*

ಏಪ್ರಿಲ್ 30, 2026

*ತಾವುರೂ ಗ್ರಾಮದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಮಹಿಷಾಸುರ ಮರ್ದಿನಿ ಅಷ್ಟಬಂಧ ಬ್ರಹ್ಮಕಲಶೋತ್ಸವ*

ಏಪ್ರಿಲ್ 30, 2026

*ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಾರ್ಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ*

ಏಪ್ರಿಲ್ 30, 2026

*ಮಣ್ಣು ಪರೀಕ್ಷೆ ಮತ್ತು ತರಬೇತಿ ಕಾರ್ಯಾಗಾರ*

ಏಪ್ರಿಲ್ 30, 2026

*ಯಿಫಾ ಹಾಕಿ ಚಾಂಪಿಯನ್ ಟ್ರೋಫಿ ಕ್ರೀಡಾಕೂಟ : ಜರ್ಸಿ ಬಿಡುಗಡೆ*

ಏಪ್ರಿಲ್ 30, 2026

*KANNIKA CONVENTION CENTER : CELEBRATE YOUR SPECIAL MOMENTS : HOTEL KANNIKA INTERNATIONAL , KUSHALANAGAR*

ಏಪ್ರಿಲ್ 30, 2026

*ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ತಲುಪಿಸಿ : ಎಂ.ಜಿ.ಮೋಹನ್ ದಾಸ್ ಸಲಹೆ* 

ಏಪ್ರಿಲ್ 29, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.