Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕುಶಾಲನಗರ ತಾಲೂಕನ್ನು ಬರಪೀಡಿತವೆಂದು ಘೋಷಿಸಲು ಒತ್ತಾಯ*
  • *ವಿರಾಜಪೇಟೆ: ಸೋದರತೆಯ ಸಂಕೇತವನ್ನು ಬಿತ್ತುವ ಹಬ್ಬ ರಕ್ಷಾ ಬಂಧನ ಆಚರಣೆ*
  • *ಪೇರಿಯಂಡ ಪಿ.ಪೆಮ್ಮಯ್ಯ–ಜಿ.ಕೆ.ದೇವಕಿ ಪೆಮ್ಮಯ್ಯ ದತ್ತಿ ಪ್ರಶಸ್ತಿ : ಕೃತಿಗಳ ಆಹ್ವಾನಕ್ಕೆ ಅವಧಿ ವಿಸ್ತರಣೆ*
  • *ಶೇ.100 ಫಲಿತಾಂಶ: ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿಗೆ ಸನ್ಮಾನ*
  • *ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕಾವೇರಿ ಶಾಲಾ ವಿದ್ಯಾರ್ಥಿಗಳ ಅಮೋಘ ಸಾಧನೆ*
  •  *ರೋಟರಿ ವುಡ್ಸ್ ನಿಂದ ರಕ್ಷಾ ಬಂಧನ್ – ನಮ್ಮ ಹಬ್ಬ ನಮ್ಮ ಸೇವಾ ಯೋಜನೆ*
  • *ಕುಶಾಲನಗರ ಬಾಲಕಿಯರ ಪ್ರೌಢಶಾಲಾ ಮಕ್ಕಳಿಗೆ ಲೇಖನ ಸಾಮಾಗ್ರಿ ವಿತರಣೆ : ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವುದು ಅವಶ್ಯಕ : ಡಾ‌ ಅಚ್ಯುತನ್*
  • *ಕೊಡಗು: ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಮಂಡಳಿ ಸಭೆ*
  • *ಆಧುನೀಕತೆಯ ಭರಾಟೆಯ ದಿನಗಳಲ್ಲಿ ಪ್ರಾಚೀನ  ಸಂಸ್ಕೖತಿ ಮರೆಯದಿರಿ – ಡಾ. ಉದಯಶಂಕರ್ ಕರೆ | ಶೖತಿಲಯ ತಂಡದಿಂದ ರಾಘವೇಂದ್ರ ಆರಾಧನೆಯ ಪ್ರಯುಕ್ತ ದಾಸರಕೀತ೯ನೆ*
  • *ವಿವಿಧೆಡೆ ರಾಖಿ ಕಟ್ಟಿದ  ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವಿರಾಜಪೇಟೆಯಲ್ಲಿ ಮೌನದ ಮನಸ್ಸಿನಲ್ಲಿ ಕೃತಿ ಲೋಕಾರ್ಪಣೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವಿರಾಜಪೇಟೆಯಲ್ಲಿ ಮೌನದ ಮನಸ್ಸಿನಲ್ಲಿ ಕೃತಿ ಲೋಕಾರ್ಪಣೆ*

ನವೆಂಬರ್ 29, 20253 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ವಿರಾಜಪೇಟೆ ನ.29 NEWS DESK : ಮನುಷ್ಯನ ಅಂತರಾಳದಲ್ಲಿ ವಿಭಿನ್ನ ಭಾವನೆ ಗುಚ್ಛವಿದ್ದು, ಅದನ್ನು ಹೊರಗೆಡವಿ ಲೋಕ ಹಿತಕ್ಕೆ ಮುಡಿಸಿ ಮುಕ್ತಿ ಹೊಂದುವುದೇ ನಿಸ್ವಾರ್ಥ ಬದುಕು ಎಂದು ಕೂರ್ಗ್ ವ್ಯಾಲಿ ಶಾಲೆಯ ಪ್ರಾಂಶುಪಾಲರಾದ ಸುಮ ಚಿತ್ರಭಾನು ಹೇಳಿದರು. ವಿರಾಜಪೇಟೆಯ ಮೊಗರಗಲ್ಲಿಯಲ್ಲಿನ ಕಲಾ ಉತ್ಸವ ವೇದಿಕೆಯಲ್ಲಿ ನಡೆದ ವಿರಾಜಪೇಟೆಯ ಕೆದಮುಳ್ಳೂರು ಗ್ರಾಮದ ಯುವಕವಿ ಲವಿನ್ ಲೋಪೇಸ್ ಬರೆದಿರುವ ಮೌನದ ಮನಸ್ಸಿನಲ್ಲಿ ಚೊಚ್ಚಲ ಕೃತಿಯ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಲವಿನ್ ತಮ್ಮ ಕವನ ಸಂಕಲನದಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಕವನಗಳು ಎಲ್ಲರಿಗೂ ಮನ ಮುಟ್ಟುವ ಹಾಗೆ ರಚಿಸಿದ್ದು, ನೆಲ, ಜಲ, ಪ್ರೀತಿ, ವ್ಯಾತ್ಸಲ್ಯ ಹಾಗೂ ರೈತರ ಬಗ್ಗೆ ಕವನಗಳನ್ನು ರಚಿಸಿದ್ದಾರೆ. ಕನ್ನಡ ಸಾಹಿತ್ಯದ ಲೋಕ ವಿಶಾಲವಾಗಿದ್ದು, ಈ ನೆಲ, ಕವಿಗಳ ಬೀಡು. ಇಂತಹ ನಾಡಿನೊಳಗೆ ಉದಯಿಸಿ ಕಾವ್ಯ ಲೋಕಕ್ಕೆ ತನ್ನ ಕೃತಿ ಕೊಟ್ಟಿದ್ದು ಶ್ರೇಷ್ಠ ಭಾವ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರಲ್ಲದೆ, ಮುಂದೆಯೂ ಕನ್ನಡದಲ್ಲೇ ಕವನ ರಚನೆ ಮಾಡುವಂತೆ ಹೇಳಿದರು. ಸಾಹಿತಿ ವಿ.ಎನ್.ರಜಿತ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಲವಿನ್ ಅವರು ತಮ್ಮ ಸ್ವಂತ ಪ್ರಕಾಶನದ ಮೂಲಕ ಕನಸಿನ ಕೂಸು ಮೌನದ ಮನಸ್ಸಿನಲ್ಲಿ ಕೃತಿಯನ್ನು ಹೊರತಂದಿರುವುದು ಶ್ಲಾಘನೀಯ. ಪ್ರತಿಭಾನ್ವಿತ ಬರಹಗಾರರು ಸಮಾಜವನ್ನು ತಮ್ಮ ವಿಶಿಷ್ಟ ದೃಷ್ಟಿಕೋನಗಳಿಂದ ವಿಭಿನ್ನವಾಗಿ ಗ್ರಹಿಸುವ ಮಾದರಿಗಳನ್ನು ಕೊಡುಗೆ ನೀಡುತ್ತಾರೆ. ಮನುಷ್ಯ ಎಷ್ಟೇ ಬುದ್ಧಿ, ವಿದ್ಯೆ ಪಡೆದರೂ ಅದೆಲ್ಲಕ್ಕಿಂತ ಮುಖ್ಯವಾಗಿ ಅದನ್ನು ಸದ್ಬಳಕೆ ಮಾಡಿಕೊಳ್ಳುವುದು ಮುಖ್ಯ. ಭಾವನೆಗಳಿಂದ ಜೀವನವನ್ನು ವಿಭಿನ್ನವಾಗಿ ನೋಡುವ ಮೂಲಕ ಸಾಹಿತ್ಯ ರಚಿಸುವ ಜವಾಬ್ದಾರಿಯನ್ನು ನಿರ್ವಹಿಸುವ ಬರಹಗಾರರು ಸಮಾಜಕ್ಕೆ ಮಾರ್ಗದರ್ಶನ ನೀಡುವ ರೀತಿಯಲ್ಲಿ ಕಾವ್ಯ ಮತ್ತು ನಿರೂಪಣೆಯನ್ನು ನಿರ್ಮಿಸುವ ಶಕ್ತಿಯನ್ನು ಹೊಂದಿರುತ್ತಾರೆ ಎಂದು ಅವರು ವಿಶ್ಲೇಷಿಸಿದರು. ಹೃದಯದಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಇರುವವರಿಗೆ ಸಾಹಿತ್ಯ ಒಳ್ಳೆಯದು. ಅವರು ತಮ್ಮ ಕವಿತೆಗಳು ಮತ್ತು ಕಥೆಗಳ ಮೂಲಕ ಜೀವನದ ವಿವಿಧ ಚಿತ್ರಗಳನ್ನು ತೋರಿಸುತ್ತಾರೆ. ಜೀವನದ ಮೌಲ್ಯವು ಅವರ ಸಾಹಿತ್ಯದ ಮೂಲಕ ಪ್ರತಿಫಲಿಸುತ್ತದೆ. ಸಾಹಿತ್ಯವು ಓದುಗರ ಭಾವನೆಗಳು ಮತ್ತು ಆಲೋಚನೆಗಳಿಗೆ ಅನುಗುಣವಾಗಿ ಹೊಸ ಅರ್ಥಗಳನ್ನು ಹುಟ್ಟುಹಾಕುವಷ್ಟು ಪ್ರಬುದ್ಧವಾಗಿದೆ. ಈ ಕಾರಣಕ್ಕಾಗಿಯೇ ಅದು ಓದುಗರಲ್ಲಿ ಯೋಗಕ್ಷೇಮದ ಭಾವನೆಯನ್ನು ಸೃಷ್ಟಿಸುತ್ತದೆ. ಅದರ ಸಾರವನ್ನು ಎಳೆಯುತ್ತದೆ. ಸಾಹಿತ್ಯವು ಓದುಗರಲ್ಲಿ ಜೀವನ ಪ್ರೀತಿಯನ್ನು ಹೇಗೆ ಹೆಚ್ಚಿಸುತ್ತದೆ ಎಂದು ಹೇಳಿದರು. ಕೃತಿಯ ಕುರಿತು ಸಾಹಿತಿ ಪುಷ್ಪಲತಾ ಶಿವಪ್ಪ ಮಾತನಾಡಿ, ಬೌದ್ಧಿಕ ಹಸಿವುಳ್ಳವರಿಗೆ ಸಾಹಿತ್ಯ ರಚಿಸುವ ಶಕ್ತಿ ಸಿಗುತ್ತದೆ. ಅವರು ತಮ್ಮ ಸಾಹಿತ್ಯದ ಮೂಲಕ ಹೊಸದನ್ನು ನೀಡುತ್ತಾರೆ. ಈ ಕಾರಣದಿಂದಾಗಿಯೇ ಅವರ ಬರವಣಿಗೆ ಪ್ರಕಾಶಮಾನವಾಗಿದೆ. ಲವಿನ್ ಅವರೊಳಗೆ ಒಂದು ಬೌದ್ಧಿಕ ಹಸಿವು ಇತ್ತು, ಅದು ಅವರನ್ನು ನವೀನ ಕಾವ್ಯ ಶಕ್ತಿಗೆ ಸಿದ್ಧಪಡಿಸಿತು. ಈ ಕಾವ್ಯ ಶಕ್ತಿಯ ವಿಶೇಷತೆಯನ್ನು ಅವರ ಕವನ ಸಂಕಲನದ ಮೂಲಕ ಪ್ರಸ್ತುತಪಡಿಸಲಾಗಿದೆ. ಬಹುಮುಖಿ, ಪ್ರತಿಭಾನ್ವಿತ ವ್ಯಕ್ತಿತ್ವವು ಒಂದು ಪ್ರಮುಖ ಆಸ್ತಿ. ನಮ್ಮ ಜೀವನದಲ್ಲಿ ಕಷ್ಟಗಳು, ಸವಾಲುಗಳು ಮತ್ತು ಏರಿಳಿತಗಳು ಇಲ್ಲದಿದ್ದರೆ, ನಾವು ವಿಫಲರಾಗುತ್ತೇವೆ. ಪ್ರತಿಯೊಬ್ಬ ಸಾಧಕನು ದೈನಂದಿನ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಾಗ ಸೃಜನಶೀಲ ವ್ಯಕ್ತಿತ್ವದ ಜೊತೆಗೆ ಪ್ರತಿಭೆ ರೂಪುಗೊಳ್ಳುತ್ತದೆ. ಅದೇ ರೀತಿ, ಮೌನದ ಮನಸ್ಸಿನಲ್ಲಿ ಕೃತಿಯಲ್ಲಿ ಕಾವ್ಯದ ಸುಂದರವಾದ ಹಾರವನ್ನು ಹೆಣೆದಿದ್ದಾರೆ ಎಂದು ಹೇಳಿದರು. ಹಿರಿಯ ಸಾಹಿತಿ ಗಿರೀಶ್ ಕಿಗ್ಗಾಲು ಮಾತನಾಡಿ, ಜೀವನಾನುಭವದ ವಿವಿಧ ಭಾವನೆಗಳು ಕವನ ಸಂಕಲನದ ರೂಪವನ್ನು ಪಡೆದುಕೊಂಡಿವೆ. ಕಾವ್ಯ ಎನ್ನುವುದು ಪ್ರತಿ ಹೃದಯದಲ್ಲಿ ಪ್ರವಹಿಸುವ ಅಮೃತಧಾರೆಯಾಗಿದ್ದು, ಮಾನವತೆಯೆಡೆಗಿನ ನಿರಂತರ ತುಡಿತವಾಗಿದೆ ಎಂದರು. ಮುಖ್ಯ ಅತಿಥಿಗಳಾಗಿದ್ದ ಶಿಕ್ಷಕರಾದ ಮಹಮ್ಮದ್ ಶಾಫಿ ಮಾತನಾಡಿ, ಲವಿನ್ ಲೋಪೆಸ್ ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದು, ಚಿಕ್ಕ ವಯಸ್ಸಿನಲ್ಲೇ ಬರವಣಿಗೆಯನ್ನು ಕರಗತ ಮಾಡಿಕೊಂಡು, ತಮ್ಮ ಮನಸ್ಸಿನ ಬಾವನೆಗಳನ್ನು ಕವಿತೆ ಮೂಲಕ ಹೊರಹಾಕಿ ಸಂಕಲನ ರೂಪದಲ್ಲಿ ಹೊರತಂದಿದ್ದಾರೆ. ಅವರ ಇನ್ನೋಂದು ಕೃತಿ ಮುದ್ರಣದ ಹಂತದಲ್ಲಿದ್ದು ಅವರ ಸಾದನೆ ಹೆಮ್ಮೆ ತಂದಿದೆ ಎಂದರು. ಕೃತಿಕಾರ ಲವಿನ್ ಲೋಪೇಸ್ ಮಾತನಾಡಿ, ಕಾವ್ಯ ಪರಂಪರೆ ಓದುಗರಿಗೆ ಹೊಸತನವನ್ನು ನೀಡುತ್ತದೆ. ಅನಾದಿ ಕಾಲದ ಜನರ ಸಂವಹನವೇ ಕಾವ್ಯ. ಯಾವತ್ತೂ ನಡೆಯುವವನೇ ಎಡವುದಲ್ಲದೇ ಮಲಗಿದವನು ಎಡವುದಿಲ್ಲ, ಇದೀಗ ಕಾವ್ಯದ ಹರಿವು ನನ್ನೊಳಗೆ ಹರಿಯುತ್ತಿದೆ. ಪ್ರಾದ್ಯಾಪಕರಾದ ಡಾ. ಕಾವೇರಿ ಪ್ರಕಾಶ್ ಮುನ್ನುಡಿ, ಸಾಹಿತಿ ವಿ.ಎನ್. ರಜಿತ ಬೆನ್ನುಡಿ ಬರೆದು ಹರಸಿದ್ದಾರೆ. ಸಾಹಿತ್ಯದೆಡೆಗೆ ಮನಸ್ಸು ತುಡಿಯುತ್ತಿದ್ದು ಸದ್ಯದಲ್ಲೇ ಇನ್ನೊಂದು ಕೃತಿ ಹೊರಬರಲಿದೆ ಎಂದು ಮನಸ್ಸಿನ ಭಾವನೆ ವ್ಯಕ್ತಪಡಿಸಿದರು. ಸಾಹಿತಿಗಳಾದ ರಜಿತ, ಪುಷ್ಪಲತಾ, ಮಹಮ್ಮದ್ ಶಾಫಿ, ಸುಮಚಿತ್ರಭಾನು, ಅನಿಮೋಳ್, ಸಾದಿಕ್, ಲವಿನ್, ಲೂಸಿ ಡಿಸೋಜಾ, ತೆರೆಸಾ ಮಿನೇಜಸ್ ಇವರನ್ನು ವಿಶೇಷವಾಗಿ ಗೌರವಿಸಲಾಯಿತು. ದಿಲಿಶ್ ನಾಯರ್ ಅವರು ಕವನ ಸಂಕಲನದಲ್ಲಿನ ಕವನವನ್ನು ರಾಗ ಸಂಯೋಜಿಸಿ ಹಾಡಿದರು. ಸಾದಿಕ್ ಆಟ್ರ್ಸ್ ಕಲಾ ವೇದಿಕೆಯ ಸಂಸ್ಥಾಪಕ ಸಾದಿಕ್ ಹಂಸ, ಸಂಗೀತ ಶಿಕ್ಷಕರಾದ ಅನಿಮೋಳ್, ಸಾಹಿತಿ ವೈಲೇಶ್ ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಕೃತಕಾರರ ಮಾತೃಶ್ರಿ ಲೂಸಿ ಡಿಸೋಜಾ, ತೆರೆಸಾ ಮಿನೇಜಸ್, ಲಿಖಿನ್ ಲೋಪೇಸ್, ದೀಪಕ್, ಸರಿತಾ, ದಿವಾನ್, ಆಶಾ, ಸುಪ್ರಿತಾ, ವಿಶಾಲಾಕ್ಷಿ ಸೇರಿದಂತೆ ಸಾಹಿತ್ಯಾಭಿಮಾನಿಗಳು ಇದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕುಶಾಲನಗರ ತಾಲೂಕನ್ನು ಬರಪೀಡಿತವೆಂದು ಘೋಷಿಸಲು ಒತ್ತಾಯ*

ಆಗಷ್ಟ್ 30, 2026

*ವಿರಾಜಪೇಟೆ: ಸೋದರತೆಯ ಸಂಕೇತವನ್ನು ಬಿತ್ತುವ ಹಬ್ಬ ರಕ್ಷಾ ಬಂಧನ ಆಚರಣೆ*

ಆಗಷ್ಟ್ 30, 2026

*ಪೇರಿಯಂಡ ಪಿ.ಪೆಮ್ಮಯ್ಯ–ಜಿ.ಕೆ.ದೇವಕಿ ಪೆಮ್ಮಯ್ಯ ದತ್ತಿ ಪ್ರಶಸ್ತಿ : ಕೃತಿಗಳ ಆಹ್ವಾನಕ್ಕೆ ಅವಧಿ ವಿಸ್ತರಣೆ*

ಆಗಷ್ಟ್ 30, 2026

*ವಿರಾಜಪೇಟೆ: ಸೋದರತೆಯ ಸಂಕೇತವನ್ನು ಬಿತ್ತುವ ಹಬ್ಬ ರಕ್ಷಾ ಬಂಧನ ಆಚರಣೆ*

ಆಗಷ್ಟ್ 30, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ, NEWS DESK ಆ.30 : ರಕ್ಷಾ ಬಂಧನ ಹಬ್ಬವು ಪುರಾಣ ಕಾಲದಿಂದಲೂ ಸಹೋದರತೆಯ ಸಂಕೇತವಾಗಿ ಅಣ್ಣ ತಂಗಿಯ ಮಧುರ…

*ಪೇರಿಯಂಡ ಪಿ.ಪೆಮ್ಮಯ್ಯ–ಜಿ.ಕೆ.ದೇವಕಿ ಪೆಮ್ಮಯ್ಯ ದತ್ತಿ ಪ್ರಶಸ್ತಿ : ಕೃತಿಗಳ ಆಹ್ವಾನಕ್ಕೆ ಅವಧಿ ವಿಸ್ತರಣೆ*

ಆಗಷ್ಟ್ 30, 2026

*ಶೇ.100 ಫಲಿತಾಂಶ: ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿಗೆ ಸನ್ಮಾನ*

ಆಗಷ್ಟ್ 30, 2026

*ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕಾವೇರಿ ಶಾಲಾ ವಿದ್ಯಾರ್ಥಿಗಳ ಅಮೋಘ ಸಾಧನೆ*

ಆಗಷ್ಟ್ 30, 2026

 *ರೋಟರಿ ವುಡ್ಸ್ ನಿಂದ ರಕ್ಷಾ ಬಂಧನ್ – ನಮ್ಮ ಹಬ್ಬ ನಮ್ಮ ಸೇವಾ ಯೋಜನೆ*

ಆಗಷ್ಟ್ 30, 2026

*ಕುಶಾಲನಗರ ಬಾಲಕಿಯರ ಪ್ರೌಢಶಾಲಾ ಮಕ್ಕಳಿಗೆ ಲೇಖನ ಸಾಮಾಗ್ರಿ ವಿತರಣೆ : ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವುದು ಅವಶ್ಯಕ : ಡಾ‌ ಅಚ್ಯುತನ್*

ಆಗಷ್ಟ್ 30, 2026

*ಕೊಡಗು: ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಮಂಡಳಿ ಸಭೆ*

ಆಗಷ್ಟ್ 30, 2026

*ಆಧುನೀಕತೆಯ ಭರಾಟೆಯ ದಿನಗಳಲ್ಲಿ ಪ್ರಾಚೀನ  ಸಂಸ್ಕೖತಿ ಮರೆಯದಿರಿ – ಡಾ. ಉದಯಶಂಕರ್ ಕರೆ | ಶೖತಿಲಯ ತಂಡದಿಂದ ರಾಘವೇಂದ್ರ ಆರಾಧನೆಯ ಪ್ರಯುಕ್ತ ದಾಸರಕೀತ೯ನೆ*

ಆಗಷ್ಟ್ 30, 2026

*ವಿವಿಧೆಡೆ ರಾಖಿ ಕಟ್ಟಿದ  ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು*

ಆಗಷ್ಟ್ 30, 2026

*ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ : ಸಂಘಕ್ಕೆ ರೂ.35.20 ಲಕ್ಷ ಲಾಭ : ಪ್ರತಿಭಾವಂತ ವಿದ್ಯಾಥಿಗಳಿಗೆ ಪ್ರೋತ್ಸಾಹ ಧನ ವಿತರಣೆ*

ಆಗಷ್ಟ್ 30, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.