
ನಾಪೋಕ್ಲು ಡಿ.1 NEWS DESK : ಕೊಡಗಿನ ಕ್ರೀಡಾಪಟುಗಳು ರಾಜ್ಯಮಟ್ಟದ 45ನೇ ಅಥ್ಲೆಟಿಕ್ಸ್ ಕ್ರೀಡಾಕೂಟ ವೆಂಟ್ರನ್ಸ್ ಅಥ್ಲೆಟಿಕ್ ನಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ರಾಜ್ಯಮಟ್ಟದ 45ನೇ ಅಥ್ಲೆಟಿಕ್ಸ್ ಕ್ರೀಡಾಕೂಟ ವೆಂಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಕರ್ನಾಟಕ ಮತ್ತು ಬಳ್ಳಾರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಯುಕ್ತ ಆಶ್ರಯದಲ್ಲಿ ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟದಲ್ಲಿ ಕೊಡಗಿನ ಮಹಿಳಾ ಕ್ರೀಡಾಪಟುಗಳು ಪಾಲ್ಗೊಂಡು ಅತ್ಯುತ್ತಮ ಸಾಧನೆಯೊಂದಿಗೆ ಬಹುತೇಕ ಪದಕಗಳನ್ನು ಮುಡಿಗೇರಿಸಿಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ನಾಂಗಾಲ ಬಿಟ್ಟಂಗಲ ಗ್ರಾಮದ ಚೇಮೀರ ಸೀತಮ್ಮ ಪ್ರೇಮ ಭಾರತದ ಗುಂಡು ಎಸೆತದಲ್ಲಿ ಪ್ರಥಮ, ತಟ್ಟೆ ಎಸೆತದಲ್ಲಿ ಪ್ರಥಮ, ಜವಾಲಿನ್ ಎಸೆತದಲ್ಲಿ ಪ್ರಥಮ, ಹ್ಯಾಮರ್ ಎಸೆತದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಬಾಳೆಲೆಯ ಕೊಟ್ಟಗೇರಿ ಗ್ರಾಮದ ಅರಮಣಮಾಡ ಮಮತಾ ಮನು ಭಾರದ ಗುಂಡು ಎಸೆದ ಸ್ಪರ್ಧೆಯಲ್ಲಿ ಪ್ರಥಮ, ಜಾವಲಿನ್ ಎಸೆತದಲ್ಲಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಟಿ.ಶೆಟ್ಟಿಗೇರಿ ಪೆಮ್ಮಂಡ ಸಬಿತ ಕುಶಾಲಪ್ಪ ಡಿಸ್ಕಸ್ ಥ್ರೊ ಸ್ಪರ್ಧೆಯಲ್ಲಿ ಪ್ರಥಮ, ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ದ್ವಿತೀಯ, ಜವಲೀನ್ ಎಸೆತದಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾರೆ. ಐಮೂಡಿಯಂಡ ಶೈಲಾ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ, 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಪಟ್ಟಚೆರುವಂಡ ಗಗನ್ ಮೇದಪ್ಪ (ಜಿಮ್ಮ) 200 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ, 100 ಮೀಟರ್ ಓಟದ ಅರ್ಡಲ್ಸ್ ರನ್ನಿಂಗ್ ನಲ್ಲಿ ಪ್ರಥಮ ಸ್ಥಾನ, ತಟ್ಟೆ ಎಸೆತದಲ್ಲಿ ಪ್ರಥಮ ಗಳಿಸಿದ್ದಾರೆ. ಪಿರಿಯಾಪಟ್ಟಣ ತಾಲ್ಲೂಕು ಕೋಮಲಾಪುರ ಗ್ರಾಮದ ಆಶಾ ಅನಂತಕುಮಾರ್ ಬಾರದ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ, ಹ್ಯಾಮರ ಥ್ರೋ ನಲ್ಲಿ ಪ್ರಥಮ ಸ್ಥಾನ ಗಳಿಸಿದರೆ. ಮುಳ್ಳೆರ ಪೊನ್ನಮ್ಮ ಜವಲೀನ್ ಎಸೆತದಲ್ಲಿ ಪ್ರಥಮ ಪ್ರಥಮ, ಭಾರತದ ಗುಂಡ ಎಸೆತದಲ್ಲಿ ಪ್ರಥಮ, 100 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ತಟ್ಟೆ ಎಸೆತದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಹಾಗೂ ಬೆಳ್ಳಿಯ ಪದಕವನ್ನು ಪಡೆದಿದ್ದಾರೆ. ಬಿಟ್ಟಂಗಾಲ ಬಾಲುಗೋಡು ನಿವಾಸಿ ಶಾಂತಿ ಬೆಳ್ಯಯಪ್ಪ ಗುಂಡು ಎಸೆತ ಪ್ರಥಮ, ಜವಲೀನ್ ಎಸೆತದಲ್ಲಿ ದ್ವಿತೀಯ ಹಾಗೂ ಹ್ಯಾಮರ್ ಎಸೆತ ತೃತೀಯ ಸ್ಥಾನಗಳಿಸಿದ್ದಾರೆ.
ವರದಿ : ದುಗ್ಗಳ ಸದಾನಂದ









