ಮಡಿಕೇರಿ ಡಿ.2 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸೋಮವಾರಪೇಟೆ ತಾಲ್ಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ಐಗೂರು ಗ್ರಾಮದ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘದ ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷ ಎಂ.ಪಿ ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸೋಮವಾರಪೇಟೆ ಕಸಬಾ ಹೋಬಳಿ ಐಗೂರು ಕೇಂದ್ರದಲ್ಲಿ ಊರಿನ ಜನರ, ಸಂಘ-ಸಂಸ್ಥೆಗಳ, ಪಂಚಾಯಿತಿ ಸದಸ್ಯರ ಸಹಕಾರದೊಂದಿಗೆ ತಾಲೂಕು ಸಮ್ಮೇಳನ ನಡೆಸಲು ಸಭೆಯಲ್ಲಿ ಅನುಮತಿ ಪಡೆಯಲಾಯಿತು. ಸಭೆಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಸಮ್ಮೇಳನದ ರೂಪುರೇಷೆ, ಸ್ವಾಗತ ಸಮಿತಿಯ ಮತ್ತು ಉಪ ಸಮಿತಿಗಳ ವಿವರ ನೀಡಿದರು. ಸಮ್ಮೇಳನವು ಬೆಳಗಿನ ಜಾವ 8 ಗಂಟೆಗೆ ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜದ ಆರೋಹಣದೊಂದಿಗೆ ಪ್ರಾರಂಭವಾಗಿ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಸಮಾರಂಭ, ಗೀತ ಗಾಯನ ಕಾರ್ಯಕ್ರಮ, ಕವಿಗೋಷ್ಠಿ, ವಿಚಾರ ಗೋಷ್ಠಿ, ಬಹಿರಂಗ ಅಧಿವೇಶನ, ತಾಲೂಕಿನ ಸಾಧಕರಿಗೆ ಸನ್ಮಾನ, ಸ್ಥಳೀಯ ವಿದ್ಯಾರ್ಥಿಗಳಿಗೆ ಆದ್ಯತೆಯ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು ಎಂದರು. ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ ಐಗೂರಿನ ಮತ್ತು ಸುತ್ತುವತ್ತಲ ಗ್ರಾಮಗಳಲ್ಲಿ ಸೇವೆ ಸಲ್ಲಿಸಿ ಮರೆಯಾದ ಹಿರಿಯ ಗಣ್ಯರನ್ನು ಗುರುತಿಸಿ ಅವರ ನೆನಪಿಗಾಗಿ 9 ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗುವುದು. ಅಲ್ಲದೆ ಸಮ್ಮೇಳನದ ಸವಿನೆನಪಿಗಾಗಿ ಸ್ಮರಣ ಸಂಚಿಕೆಯನ್ನು ಹೊರತರಲು ಆಯೋಜಿಸಿದ್ದು, ಅದರಲ್ಲಿ ಸಮ್ಮೇಳನದ ಪೂರ್ಣ ವಿವರ, ಸೋಮವಾರಪೇಟೆ ತಾಲೂಕಿನ ಪ್ರವಾಸಿ ಕೇಂದ್ರಗಳ ವಿವರ, ಐಗೂರಿನಲ್ಲಿ ಸಮ್ಮೇಳನದಲ್ಲಿ ಸನ್ಮಾನಿಸಲ್ಪಡುವ ಸಾಧಕರ ವಿವರ, ಸಮ್ಮೇಳನಕ್ಕಾಗಿ ನಿರ್ಮಿಸಿದ ಪ್ರವೇಶ ದ್ವಾರಗಳ ಹಿರಿಯರ ತ್ಯಾಗ ಆದರ್ಶಗಳ ಕುರಿತು ಲೇಖನ ಗಳನ್ನು ಒಳಗೊಂಡಂತೆ ಸಂಗ್ರಹ ಯೋಗ್ಯ ಪುಸ್ತಕವನ್ನು ಹೊರತರಲಾಗುವುದು ಎಂದರು. ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮತ್ತು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ ಕೇಶವ ಕಾಮತ್ ಅವರನ್ನು ಆಯ್ಕೆ ಮಾಡಲಾಯಿತು. ಸಮ್ಮೇಳನದ ಮಹಾಪೋಷಕರಾಗಿ ಮಾಜಿ ಸಚಿವರಾದ ಬಿ.ಎ.ಜೀವಿಜಯ, ಎಂ.ಪಿ.ಅಪಚ್ಚು ರಂಜನ್, ವಿಧಾನಸಭಾ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ ಸೋಮವಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್.ಡಿ.ವಿಜೇತ್, ಪ್ರಧಾನ ಕಾರ್ಯದರ್ಶಿಯಾಗಿ ಐಗೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಂಗಾರು ಕೀರ್ತಿ ಪ್ರಸಾದ್, ಪ್ರದಾನ ಕಾರ್ಯದರ್ಶಿಯಾಗಿ ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಿ.ಕೆ.ವಿನೋದ್, ಕಾರ್ಯದರ್ಶಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್, ಪಿ.ರೇವತಿ ರಮೇಶ್, ಸಹ ಕಾರ್ಯದರ್ಶಿಯಾಗಿ ತಾಲ್ಲೂಕು ಕಾರ್ಯದರ್ಶಿಗಳಾದ ಕೆ.ಆರ್ ಜ್ಯೋತಿ ಅರುಣ್ ಮತ್ತು ಎ.ಪಿ.ವೀರರಾಜು, ಜಿಲ್ಲಾ ಕೋಶಾಧಿಕಾರಿ ಎಸ್.ಎಸ್ ಸಂಪತ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎನ್.ದೇವರಾಜ್ ಮತ್ತು ಬಿ.ಕೆ ವಾಸು ರೈ, ಸಹಕಾರ್ಯದರ್ಶಿ ಶ್ರೀಮತಿ ಜಲಜಾ ಶೇಖರ್, ಎ.ವಿ. ಮಂಜುನಾಥ್, ಹೋಬಳಿ ಗೌರವ ಕಾರ್ಯದರ್ಶಿಗಳಾದ ಎಂ.ಟಿ ಸರಳ ಕುಮಾರಿ, ಸಂಘಟನಾ ಕಾರ್ಯದರ್ಶಿ ವಿಶ್ವನಾಥ್ ರಾಜೇ ಅರಸ್, ಕೋಶಾಧಿಕಾರಿ ಎಸ್.ಎಂ.ಬೆಳ್ಳಿಯಪ್ಪ, ಶಾಂತಳ್ಳಿ ಹೋಬಳಿ ಕಸಾಪ ಅಧ್ಯಕ್ಷರಾದ ಸಿ.ಎಸ್ ನಾಗರಾಜ್, ಶನಿವಾರಸಂತೆ ಕಸಾಪ ಅಧ್ಯಕ್ಷರಾದ ಬಿ.ಬಿ.ನಾಗರಾಜ್, ಕೊಡ್ಲಿಪೇಟೆ ಕಸಾಪ ಅಧ್ಯಕ್ಷರಾದ ಬಿ.ಪಿ ಶಾಂತಮಲ್ಲಪ್ಪ, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರುಗಳಾದ ಜೆ ಸಿ ಶೇಖರ್ ಮತ್ತು ಜವರಪ್ಪ ರವರನ್ನು ಆರಿಸಲಾಯಿತು. ಸ್ವಾಗತ ಸಮಿತಿಯ ಸದಸ್ಯರುಗಳಾಗಿ ಎಚ್ ಬಿ ಶಿವಕುಮಾರ್, ಅಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಂಘ, ಐಗೂರು. ಬಿ.ಬಿ ಸತೀಶ್, ಅಧ್ಯಕ್ಷರು, ಪಿ.ಎಲ್.ಡಿ ಬ್ಯಾಂಕ್, ಸೋಮವಾರಪೇಟೆ. ಎ.ಪಿ.ಎಂ.ಸಿ ಅಧ್ಯಕ್ಷರು, ಶ್ರೀಮತಿ ಗೌರಮ್ಮ, ಉಪಾಧ್ಯಕ್ಷರು, ಐಗೂರು ಗ್ರಾಮ ಪಂಚಾಯಿತಿ. ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳು, ಹನುಮಂತಪ್ಪ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಮಿತಿಯ ಯೋಜಾನಾಧಿಕಾರಿ, ಶ್ರೀಮತಿ ವಿಜಯಲಕ್ಷ್ಮಿ ಸಂಜೀವಿನಿ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು, ಎಲ್ಲಾ ಉಪಸಮಿತಿಗಳ ಅಧ್ಯಕ್ಷರುಗಳು. ವಿಶೇಷ ಆಹ್ವಾನಿಕರಾಗಿ ಸೋಮವಾರಪೇಟೆ ತಾಲೂಕು ತಹಶೀಲ್ದಾರರು, ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಅಭಿಯಂತರರು, ಜಿಲ್ಲಾ ಪಂಚಾಯಿತಿ ಅಭಿಯಂತರರು, ಸಿ.ಡಿ.ಪಿ.ಓ. ಎ.ಪಿ.ಎಂ.ಸಿ ಕಾರ್ಯದರ್ಶಿ, ತಾಲೂಕು ಶಿಕ್ಷಕರ ಸಂಘಗಳ ಅಧ್ಯಕ್ಷರು, ತಾಲೂಕು ನೌಕರರ ಸಂಘದ ಅಧ್ಯಕ್ಷರು, ಆರ್.ಎಫ್.ಒ ಅರಣ್ಯ ಇಲಾಖೆ, ಟಾಟಾ ಕಾಫಿ ಎಸ್ಟೇಟ್ ಮ್ಯಾನೇಜರ್. ಎಂ.ಟಿ ದಾಮೋದರ್, ಗರಗಂದೂರು . ಶ್ರೀ ನಂದಾ ಬೆಳ್ಳಿಯಪ್ಪ, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರು. ಶ್ರೀಮತಿ ಎಚ್.ಬಿ. ಜಯಮ್ಮ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು. ಡಿ.ಎಸ್ ಪೊನ್ನಪ್ಪ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು. ಎಂ ಬಿ ಪೂವಯ್ಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಎ.ಐ.ಟಿ.ಯು.ಸಿ ಅಧ್ಯಕ್ಷರಾದ ಹೆಚ್. ಎಂ ಸೋಮಪ್ಪ, ಶ್ರೀಮತಿ ಶಾರದಾ ಮಂದಣ್ಣ,
ಅಧ್ಯಕ್ಷರು, ಮುತ್ತಪ್ಪ ದೇವಸ್ಥಾನ. ಅಧ್ಯಕ್ಷರು, ಗುಳಿಗಪ್ಪ ದೇವಸ್ಥಾನ, ಆನಂದ ಪೂಜಾರಿ, ಧರ್ಮದರ್ಶಿಗಳು, ಪಾಷಣ ಮೂರ್ತಿ ದೇವಸ್ಥಾನ. ಧರ್ಮಾಧಿಕಾರಿಗಳು, ಕ್ರೈಸ್ತ ದೇವಾಲಯ. ಅಧ್ಯಕ್ಷರು, ಜುಮ್ಮಾ ಮಸೀದಿ. ಎಂ. ಎಲ್ ನಾಗೇಶ್, ಮಾಜಿ ಮಂಡಲ ಸದಸ್ಯರು, ಮೂಲೆ ಮಜಲು ಕಾಳಪ್ಪ, ಮಾಜಿ ಸೈನಿಕ ಸಂಘದ ಅಧ್ಯಕ್ಷರು. ಬಾರನ ಭರತ್ ಕುಮಾರ್, ಅಧ್ಯಕ್ಷರು ಕೊಡಗು ಗೌಡ ಸಮಾಜ. ಎಸ್.ಎಂ ಚಂಗಪ್ಪ, ಅಧ್ಯಕ್ಷರು ಕೊಡಗು ಜಿಲ್ಲಾ ಒಕ್ಕಲಿಗರ ಸಂಘ. ಡಿ ಎಸ್ ಚೆಂಗಪ್ಪ, ಅಧ್ಯಕ್ಷರು ತಾಲೂಕು ಒಕ್ಕಲಿಗರ ಸಂಘ. ಶ್ರೀಮತಿ ಅನಿತಾ ಮಾಧವ, ಅಧ್ಯಕ್ಷರು, ತಾಲೂಕು ಹಿಂದು ಮಲೆಯಾಳಿ ಸಂಘ, ಅಧ್ಯಕ್ಷರು, ತಾಲೂಕು ಮುಗೇರ ಸಂಘ, ಸಮ್ಮೇಳನದ ಹಣಕಾಸು ಸಮಿತಿ ಅಧ್ಯಕ್ಷರಾಗಿ ಕಾಳೇರಮ್ಮನ ಪಿ.ರಾಯ್, ಸಂಚಾಲಕರಾಗಿ ಎಂ.ಮನೋಜ್ ಮುತ್ತಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಡಿ ಬೆಳ್ಳಿಯಪ್ಪ. ಸಮಿತಿ ನಿರ್ದೇಶಕರಾಗಿ ಕೆ.ಪಿ ರೋಷನ್ ಪ್ರಮೋದ್ ಬಿ.ಎಸ್, ಯೋಗೇಶ್ ಎಸ್.ಎನ್.
ಆಹಾರ ಸಮಿತಿ ಅಧ್ಯಕ್ಷರಾಗಿ ಮಚ್ಚಂಡ ಎನ್ ಅಶೋಕ್, ಸಂಚಾಲಕರಾಗಿ ಬಿ.ಬಿ.ಭರತ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಸಬೀತ ಡಿ.ಸಿ.,ವೇದಿಕೆ ನಿರ್ಮಾಣ ಸಮಿತಿ ಅಧ್ಯಕ್ಷರಾಗಿ ಸಿ.ಕೆ.ರೋಹಿತ್, ಸಂಚಾಲಕರಾಗಿ ವಿಶ್ವನಾಥ್ ರಾಜೆ ಅರಸ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಪಿ.ಮುತ್ತಪ್ಪ ,
ಮೆರವಣಿಗೆ ಸಮಿತಿ ಅಧ್ಯಕ್ಷರಾಗಿ ಡಿ.ಎಸ್ ಚಂಗಪ್ಪ, ಸಂಚಾಲಕರಾಗಿ ಎಸ್.ಪಿ.ಪೊನ್ನಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ ಎಚ್.ಎಮ್,
ಅಲಂಕಾರ ಮತ್ತು ದ್ವಾರ ಸಮಿತಿ ಅಧ್ಯಕ್ಷರಾಗಿ ಕೆ.ಪಿ ದಿನೇಶ್, ಸಂಚಾಲಕರಾಗಿ ಎಂ.ಪಿ ಮೇಘನ್, ಪ್ರಧಾನ ಕಾರ್ಯದರ್ಶಿಯಾಗಿ ಅನಿತಾ ಮಾಧವ್ ಮತ್ತು ಅನಿತಾ ರಮಾನಂದ. ವೇದಿಕೆ ನಿರ್ವಹಣಾ ಸಮಿತಿ ಅಧ್ಯಕ್ಷರಾಗಿ ಕಡ್ಲೇರ ಆರ್.ಹೊನ್ನಪ್ಪ, ಸಂಚಾಲಕರಾಗಿ ಬಿ.ಎಸ್.ಸತೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ್ ಬಿ ಮತ್ತು ಕೆ.ಆರ್.ಜ್ಯೋತಿ ಅರುಣ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ಹೆಚ್.ಕೆ ಉಮೇಶ್ ಕುಮಾರ್, ಸಂಚಾಲಕರಾಗಿ ಯಶ್ವಂತ್ ಕುಮಾರ್ ಮತ್ತು ಅಜಿತ್ ಕುಮಾರ್ ಪ್ರಧಾನ ಕಾರ್ಯದರ್ಶಿಯಾಗಿ ವಿಜು ತೋಳೂರು ಶೆಟ್ಟಳ್ಳಿ ಮತ್ತು ಅನುಸೂಯ ಸಿ ಇ. ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಮುರುಳಿಧರ್ ಎಸ್.ಎ.ಸಂಚಾಲಕರಾಗಿ ಸುಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಹಿರೀಕರ ರವಿ.
ಆರೋಗ್ಯ ಸಮಿತಿ ಅಧ್ಯಕ್ಷರಾಗಿ ಪೂಪತಿ, ಸಂಚಾಲಕರಾಗಿ ಪೂರ್ಣಿಮಾ, ಪ್ರಧಾನ ಕಾರ್ಯದರ್ಶಿಯಾಗಿ ಆಶಾ ಕಾರ್ಯಕರ್ತೆಯರಾದ ಅಮೋದ ಮತ್ತು ಇಂದಿರಾ ಸ್ಮರಣ ಸಂಚಿಕೆಯ ಅಧ್ಯಕ್ಷರಾಗಿ ಎಸ್.ಡಿ.ವಿಜೇತ್, ಗೌರವಾಧ್ಯಕ್ಷರಾಗಿ ಎಂ.ಪಿ ಕೇಶವ ಕಾಮತ್, ಪ್ರಧಾನ ಸಂಪಾದಕರಾಗಿ ಎಸ್.ಎಂ.ಚಂಗಪ್ಪ, ಉಪಸಂಪಾದಕರುಗಳಾಗಿ ಪಿ.ಕೆ.ಸೋಮಯ್ಯ, ಕಾಜೂರು ಸತೀಶ್, ಐಗೂರು ಮೋಹನ್ ದಾಸ್, ಹೇಮಂತ್ ಪಾರೇರ, ನಂಗಾರು ಕೀರ್ತಿ ಪ್ರಸಾದ್, ಕೆ.ಆರ್ ಜ್ಯೋತಿ ಅರುಣ್, ಎಂ.ಟಿ.ಸರಳ ಕುಮಾರಿ ಮಹೇಶ್ ತಿಮ್ಮಯ್ಯ ಸೇರಿದಂತೆ ಐಗೂರು ಗ್ರಾಮ ಪಂಚಾಯಿತಿ ಮತ್ತು ಸುತ್ತು ಮುತ್ತಲು ಪಂಚಾಯಿತಿಗಳ ಗೌರವಾನ್ವಿತ ಸದಸ್ಯರುಗಳು, ಸಹಕಾರ ಸಂಘಗಳ ಸದಸ್ಯರುಗಳು, ಸ್ತ್ರೀಶಕ್ತಿ ಸಂಘಗಳ ಅಧ್ಯಕ್ಷರುಗಳು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿ ಸದಸ್ಯರು, ಸೋಮವಾರಪೇಟೆ ತಾಲೂಕು ಹೋಬಳಿ ಕಾರ್ಯಕಾರಿ ಮಂಡಳಿ ಸದಸ್ಯರುಗಳನ್ನು ಎಲ್ಲಾ ಸಮಿತಿಗಳಲ್ಲೂ ಸೇರಿಸಿಕೊಂಡು ಎಲ್ಲರನ್ನೊಳಗೊಂಡ ಸಮಿತಿ ನಿರ್ಮಿಸುವಂತೆ ತೀರ್ಮಾನಿಸಲಾಯಿತು. ವೇದಿಕೆಯಲ್ಲಿ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್.ಡಿ.ವಿಜೇತ್, ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಸಂಘಟನಾ ಕಾರ್ಯದರ್ಶಿ ವಾಸು ರೈ, ತಾಲೂಕು ಗೌರವ ಕಾರ್ಯದರ್ಶಿ ವಿ.ಎ.ವೀರರಾಜ್, ಅರುಣ್ ಕೋಶಾಧ್ಯಕ್ಷ ಕೆ.ಪಿ.ದಿನೇಶ್, ಐಗೂರು ಹೋಬಳಿ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್, ಕೊಡ್ಲಿಪೇಟೆ ಹೋಬಳಿ ಅಧ್ಯಕ್ಷ ಬಿ.ಪಿ.ಶಾಂತಮಲ್ಲಪ್ಪ, ಶಾಂತಳ್ಳಿ ಹೋಬಳಿ ಅಧ್ಯಕ್ಷ ಸಿ.ಎಸ್.ನಾಗರಾಜ್, ಗ್ರಾಮ ಪಂಚಾಯಿತಿಯ ಪಿಡಿಒ ಪೂರ್ಣ ಕುಮಾರ್ ಟಿ.ಸಿ ಉಪಸ್ಥಿತರಿದ್ದರು. ಸಭಾಂಗಣದಲ್ಲಿ ಎಂ ಸಿ ಮುದ್ದಪ್ಪ, ಕೆ.ಎಂ.ಲಕ್ಷ್ಮಣ, ಕೆ.ವಿ.ಮಂಜುನಾಥ್, ಬಿ.ಕೆ.ಸೋಮಯ್ಯ, ಕೆ.ಎಂ.ಲಾವಣ್ಯ, ಎಂ.ಎಸ್.ತ್ರಿವರ್ಣ, ಬಿ.ಡಿ.ರವೀಂದ್ರ ಸಿ.ಸಿ.ಸಂತೋಷ್, ಎ.ಎಸ್.ಸುರೇಶ್, ಗೋಪಾಲಕೃಷ್ಣ, ಎಸ್.ಎಸ್.ಶಿವಪ್ಪ, ಎಚ್.ಎಂ.ಶ್ರೀಧರ್, ಪೂಪಪ್ಪ, ಸೋಮೇಶ್, ಬಿ.ಆರ್.ಸವಿತಾ, ವಿಜಯಲಕ್ಷ್ಮಿ,, ಮೀನಾಕ್ಷಿ , ಸುನೀತಾ, ಎಂ.ಪಿ.ಧರ್ಮಪ್ಪ , ಗೀತಾ, ರೂಪ, ಎಂ.ಪಿ, ಬಿ.ರವೀಂದ್ರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸೋಮವಾರಪೇಟೆ ತಾಲೂಕು ಗೌರವ ಕಾರ್ಯದರ್ಶಿಗಳಾದ ಕೆ.ಆರ್.ಜ್ಯೋತಿ ಅರುಣ್ ನಿರೂಪಿಸಿ, ಸ್ವಾಗತಿಸಿದರು. ಹೋಬಳಿ ಐಗೂರು ಹೋಬಳಿ ಗೌರವ ಕಾರ್ಯದರ್ಶಿ ಎಂ.ಟಿ.ಸರಳಾ ಕುಮಾರಿ ವಂದಿಸಿದರು.











