
ಸುಂಟಿಕೊಪ್ಪ ಜು.1 NEWS DESK : ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್‍ಬೈಲ್ ಪ್ರೆಂಡ್ಸ್ ಯೂತ್ ವತಿಯಿಂದ ಕಾನ್‍ಬೈಲ್ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ಕಾನ್‍ಬೈಲ್ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೆಳೆದು ನಿಂತಿದ್ದ ಕಾಡು ಗಿಡಗಂಟಿಗಳನ್ನು ಪ್ರೆಂಡ್ಸ್ ಯೂತ್ ಕ್ಲಬ್‍ನ ಅಧ್ಯಕ್ಷ ಶಂಕನಾರಾಯಣ, ಉಪಾಧ್ಯಕ್ಷ ಧರ್ಮು, ಪದಾಧಿಕಾರಿಗಳು ಸೇರಿದಂತೆ ಆವರಣದಲ್ಲಿ ಬೆಳೆದು ನಿಂತಿದ್ದ ಕಾಡು ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು. ಗೌರವಧ್ಯಕ್ಷ ವಸಂತ, ಮಾಜಿ ಅಧ್ಯಕ್ಷ ಪೌಲೋಸ್, ಕಾರ್ಯದರ್ಶಿ ಪ್ರಶಾಂತ್, ಕ್ರೀಡಾ ಕಾರ್ಯದರ್ಶಿ ಚಂದ್ರು, ಸದಸ್ಯರಾದ ಅನಿಲ್‍ಕುಮಾರ್, ದಿನೇಶ್, ದಯಾನಂದ ರೈ, ದಿವಾಕರ ಸೇರಿದಂತೆ ಮತ್ತಿರರು ಪಾಲ್ಗೊಂಡಿದ್ದರು.









