Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಬೊಳ್ಳುಮಾಡು – ಕಾಕೋಟುಪರಂಬು : ನೂತನ ಕಾಂಕ್ರೀಟ್ ರಸ್ತೆಗಳ ಉದ್ಘಾಟನೆ*
  • *ಎಸ್‍ಐಆರ್ : ಡಿಜಟಲೀಕರಣ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*
  • *ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ತರಬೇತಿ ಕಾರ್ಯಾಗಾರ : ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ಗಮನಹರಿಸಿ : ಪ್ರಸನ್ನ ಕುಮಾರ್*
  • *ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ವಿಷ ನಿರೋಧಕ ಔಷಧಿ ದಾಸ್ತಾನು ಮಾಡಿ : ಜಿಲ್ಲಾಧಿಕಾರಿ*
  • *ಯುವ ಜನರ ಸಬಲೀಕರಣಕ್ಕೆ `ಮೈ ಭಾರತ್’ ವೇದಿಕೆ ಬಳಸಿಕೊಳ್ಳಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಕರೆ*
  • *ಸೋಮವಾರಪೇಟೆ : ವಾಕರ್ಸ್ ವಿಂಗ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಹರ್ಷ ಆಯ್ಕೆ*
  • ಜು.26 ರಂದು ಮಡಿಕೇರಿಯಲ್ಲಿ ಕಾಗಿ೯ಲ್ ವಿಜಯ್ ದಿವಸ್ : 125 ಸಂಘಟನೆಗಳಿಂದ ಯೋಧರಿಗೆ ಗೌರವ ನಮನ
  • *ಬಾಲಕರ ಟೇಬಲ್ ಟೆನ್ನಿಸ್ ಪಂದ್ಯಾವಳಿ – ಕೊಡಗು ವಿದ್ಯಾಲಯ ತಂಡಕ್ಕೆ ಕಂಚಿನ ಪದಕ*
  • *ಬಿಡದಿ ಹೋರಾಟಕ್ಕೆ ತೆರಳುತ್ತಿದ್ದ ರೈತ ಸಂಘದ ಪ್ರಮುಖರನ್ನು ವಶಕ್ಕೆ ಪಡೆದ ಪೊಲೀಸರು : ಮುಖಂಡರ ಅಸಮಾಧಾನ*
  • *”ನೀಟ್” ಕೇಂದ್ರದ ಧೋರಣೆ ಖಂಡಿಸಿ ವಿರಾಜಪೇಟೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ : ಕೇಂದ್ರದಿಂದ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟ : ಶಾಸಕ ಎ.ಎಸ್.ಪೊನ್ನಣ್ಣ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗಿನಲ್ಲಿ ಸುಗ್ಗಿ ಹಬ್ಬ ಪುತ್ತರಿಯ ಸಂಭ್ರಮ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗಿನಲ್ಲಿ ಸುಗ್ಗಿ ಹಬ್ಬ ಪುತ್ತರಿಯ ಸಂಭ್ರಮ*

ಡಿಸೆಂಬರ್ 14, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

 


ಮಡಿಕೇರಿ ಡಿ.14 NEWS DESK : ಕೊಡಗಿನಲ್ಲಿ ಈಗ ಬೆಳದಿಂಗಳಿನ ಹಬ್ಬ ಪುತ್ತರಿಯ ಸಂಭ್ರಮ. ಕೊಡವರ ನಾಡಿನಲ್ಲಿ ಪ್ರತಿ ವರ್ಷ ಪುತ್ತರಿಯಂದು ಹರಡುವ ಬೆಳದಿಂಗಳಿಗೆ ವಿಶೇಷ ಸಡಗರವಿದೆ. ಕೊಡಗಿನ ಕೃಷಿಕರ ಪಾಲಿಗೆ ಪುತ್ತರಿಯೆಂಬುದು ಸುಗ್ಗಿ ಹಬ್ಬ, ಹಿಗ್ಗಿನ ಹಬ್ಬ. ತಾವು ಬೆವರು ಸುರಿಸಿ ಶ್ರಮದಿಂದ ಹೊಲದಲ್ಲಿ ಬೆಳೆದ ಭತ್ತದ ಪೈರನ್ನು ಭೂದೇವಿಗೆ ಪೂಜೆ ಸಲ್ಲಿಸಿ ಗದ್ದೆಯಿಂದ ಮನೆಗೆ ಸಾಂಪ್ರದಾಯಿಕವಾಗಿ ತರುವ ಹಬ್ಬವೇ ಪುತ್ತರಿ. ಈ ಬಾರಿಯ ಹಬ್ಬ ಡಿ.14 ರಂದು ಕೊಡಗು ಜಿಲ್ಲೆಯಾದ್ಯಂತ ನಡೆಯಲಿದೆ. ಕೊಡವ ಭಾಷೆಯಲ್ಲಿ ಪುದಿಯ ಎಂದರೆ ಹೊಸ ಮತ್ತು ಅರಿ ಎಂದರೆ ಅಕ್ಕಿ ಎಂಬ ಅರ್ಥವಿದೆ. ಪುದಿಯ ಅರಿ-ಹೊಸ ಅಕ್ಕಿ ಎಂಬುದೇ ಪುತ್ತರಿಯಾಗಿದ್ದು, ಕೊಡಗಿನ ಪ್ರತೀ ಹೊಲದಲ್ಲೂ ಪುತ್ತರಿ ಹಬ್ಬದಂದು ಪೂಜೆ ನಡೆಯುತ್ತದೆ. ಕುಟುಂಬಸ್ಥರೆಲ್ಲ ಸೇರಿ ಪುತ್ತರಿಯ ರಾತ್ರಿ ಬೆಳದಿಂಗಳ ಬೆಳಕಿನಲ್ಲಿ ಹಬ್ಬದೂಟ ಸೇವಿಸುತ್ತಾರೆ. ಕೊಡಗಿನಲ್ಲಿ ಕೈಲ್ ಮುಹೂರ್ತ, ಕಾವೇರಿ ಸಂಕ್ರಮಣ ಬಿಟ್ಟರೆ ಮೂರನೇ ಪ್ರಮುಖ ಹಬ್ಬವೇ ಪುತ್ತರಿ. ಕೊಡಗಿನವರು ದೇಶ-ವಿದೇಶ ಎಲ್ಲೇ ನೆಲೆಸಿರಲಿ ತವರಿನ ಪ್ರಮುಖ ಸುಗ್ಗಿ ಹಬ್ಬ ಪುತ್ತರಿ ಬಂತೆಂದರೆ ಬಹುತೇಕರು ಹಬ್ಬದ ಸಡಗರದೊಂದಿಗೆ ಕೊಡಗಿಗೆ ಧಾವಿಸುತ್ತಾರೆ. ಅನಿವಾರ್ಯವಾಗಿ ಊರಿಗೆ ಬರಲಾಗದವರು, ತಾವಿರುವ ಸ್ಥಳದಲ್ಲಿಯೇ ಕುಲದೇವಿ ಕಾವೇರಿ, ಮಳೆದೈವ ಪಾಡಿ ಇಗುತ್ತಪ್ಪನಿಗೆ ಪೂಜೆ ಸಲ್ಲಿಸಿ ಪುತ್ತರಿ ಆಚರಿಸುವುದಿದೆ. ಮನೆಯನ್ನು ಶುಚಿಗೊಳಿಸುವುದರಿಂದ ಪುತ್ತರಿ ಹಬ್ಬದ ತಯಾರಿ ಆರಂಭವಾಗುತ್ತದೆ. ಇಡೀ ಮನೆಯ ಕಸತೆಗೆದು, ಸುಣ್ಣ ಬಣ್ಣ ಬಳಿದು, ಮನೆಯನ್ನು ಸ್ವಚ್ಛವಾಗಿಡುವುದು ಮಾತ್ರವಲ್ಲ ಮನೆಯ ಅಂಗಳಕ್ಕೆ ಸಗಣಿ ಸಾರಿಸಿ ಶುಚಿಗೊಳಿಸಲಾಗುತ್ತದೆ. ಮನೆಯಿಂದ ಗದ್ದೆಗೆ ತೆರಳುವ ಹಾದಿಯನ್ನು ಶುಚಿಯಾಗಿಸಿ, ದಾರಿಯ ಎರಡೂ ಬದಿಗಳಿಗೆ ಬಾಳೆ ಕಂಬ ನೆಟ್ಟು, ಮಾವಿನ ತೋರಣದಿಂದ ಸಿಂಗರಿಸಲಾಗುತ್ತದೆ. ಮನೆಯ ಗೃಹಿಣಿಯರು ಪುತ್ತರಿಯ ವಿಶೇಷ ತಿನಿಸಾದ ತಂಬಿಟ್ಟು ಉಂಡೆ ತಯಾರಿಕೆಗೆ ಸಿದ್ಧತೆ ನಡೆಸುತ್ತಾರೆ. ಕುಸಲಕ್ಕಿಯನ್ನು ಹುರಿದು ಪುಡಿ ಮಾಡಿ, ಬಾಳೆಹಣ್ಣನ್ನು ಸಂಗ್ರಹಿಸಿ, ತಂಬಿಟ್ಟು ತನಿಸಿಗಾಗಿ ಮನೆಮಂದಿ ಕಾತುರದಿಂದ ಕಾಯುವಂತೆ ಮಾಡುತ್ತಾರೆ. ಅಂತೆಯೇ ಚಳಿಗಾಲದಲ್ಲಿ ದೊರಕುವ ಗೆಣಸನ್ನು ಬೇಕಾದಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಡಲಾಗುತ್ತದೆ. ತಂಬಿಟ್ಟು, ಪುತ್ತರಿಗೆಣಸು ಹಬ್ಬದ ವಿಶೇಷ ಖಾದ್ಯಗಳು. ಪುತ್ತರಿಯ ದಿನ ಸಂಜೆ ಸೂರ್ಯಾಸ್ತಮಾನಾವಾಗಿ ಬೆಳದಿಂಗಳು ಚೆಲ್ಲುತ್ತಿರುವಂತೆಯೇ, ಕುಟುಂಬದ ಯಜಮಾನ ಸರ್ವಸದಸ್ಯರೊಂದಿಗೆ ಮನೆಯಲ್ಲಿ ದೇವರಿಗೆ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸುತ್ತಾರೆ. ಹೊಲದಲ್ಲಿ ಕದಿರು ತೆಗೆಯಲು ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಸೂಕ್ತ ನಿಮಿಷದ ಮುಹೂರ್ತ ನಿಗದಿಯಾಗಿರುತ್ತದೆ. ಆ ಮುಹೂರ್ತಕ್ಕೆ ಸರಿಯಾಗಿ ಮನೆಮಂದಿಯೆಲ್ಲ, ಸಂಭ್ರಮದಿಂದ ಪಟಾಕಿ ಸಿಡಿಸುತ್ತಾ ಮನೆಯಿಂದ ಹೊಲಕ್ಕೆ ತೆರಳುತ್ತಾರೆ. ಹೊಲದಲ್ಲಿ ಬೆಳೆದು ನಿಂತ ಭತ್ತದ ಪೈರಿನ ಬುಡಕ್ಕೆ ಹಾಲು ಸುರಿದು, ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಒಲಿದು ಬಾ ಬಾರೋ ದೇವಾ ಎಂಬರ್ಥ ಹೊಂದಿರುವ ಪೆÇಲಿ ಪೆÇಲಿಯೇ ದೇವಾ ಬಾ ಎಂಬ ಉದ್ಘೋಷ ಎಲ್ಲರಿಂದಲೂ ಕೇಳಿ ಬರುತ್ತಿರುವಂತೆಯೇ, ಕುಟುಂಬದ ಹಿರಿಯರು, ಪೈರಿಗೆ ನಮಿಸಿ, ಅದನ್ನು ಕೊಯ್ಯುತ್ತಾರೆ. ಈ ಸಂದರ್ಭ ಮೂರು ಬಾರಿ ಆಕಾಶಕ್ಕೆ ಗುಂಡು ಹಾರಿಸಲಾಗುತ್ತದೆ. ನಮ್ಮ ಗದ್ದೆಗಳಲ್ಲಿ ಫಸಲಿನ ಸಂಪತ್ತು ಸದಾ ಅಕ್ಷಯವಾಗಿರಲಿ ಎಂದು ಪಾರ್ಥಿಸುತ್ತಾ, ಕುಟುಂಬಸ್ಥರು, ಬಂಧು-ಮಿತ್ರರೊಂದಿಗೆ ಮನೆಗೆ ಮರಳುತ್ತಾರೆ. ಈ ರೀತಿ ಹೊಲದಲ್ಲಿ ಕದಿರು ತೆಗೆಯುವಾಗ, ಮೆರವಣಿಗೆಯಲ್ಲಿ ಬರುವಾಗ ಯುವಕರು ಪಟಾಕಿಗಳ ಸರಮಾಲೆಯನ್ನೇ ಸಿಡಿಸುತ್ತಾರೆ. ಪ್ರತೀ ಗ್ರಾಮದ ಗದ್ದೆಗಳಲ್ಲಿ ಏಕಕಾಲದಲ್ಲಿ ಕದಿರು ಕೊಯ್ಯುವುದರಿಂದ ಪುತ್ತರಿ ರಾತ್ರಿಯಲ್ಲಿ ಕೊಡಗಿನ ಎಲ್ಲೆಲ್ಲೊ ಪಟಾಕಿಗಳ ಸದ್ದು ಮಾರ್ದನಿಸುತ್ತದೆ. ಮನೆಗೆ, ಬೆಳದಿಂಗಳ ಬೆಳಕಿನಲ್ಲಿ ದೀಪ ಹಿಡಿದ ಬಾಲೆಯರ ಮುಂಚೂಣಿಯಲ್ಲಿ ಬರುವ ಮನೆ ಮಂದಿ ದೇವರ ಕೋಣೆಯಲ್ಲಿ ಹೊಲದಿಂದ ತಂದ ಭತ್ತದ ಪೈರನ್ನು ಇಟ್ಟು ಪೂಜೆಸಲ್ಲಿಸುವರು. ನಂತರ ತಂಬಿಟ್ಟು ಪ್ರಸಾದ ಸೇವನೆ. ಪುತ್ತರಿ ಹಬ್ಬಕ್ಕೆ ಸಂಪೂರ್ಣ ಸಸ್ಯಾಹಾರದ ಭೋಜನವಿರುತ್ತದೆ. ರಸದೌತಣದ ಬಳಿಕ ಮನೆ ಮುಂದೆ ಒಟ್ಟು ಸೇರುವ ಬಂಧು-ಮಿತ್ರರು, ಉಭಯಕುಶಲೋಪರಿ ಮಾತುಕತೆ ನಡೆಸುತ್ತಾರೆ. ಮತ್ತೆ, ಪಟಾಕಿಗಳ ಸಿಡಿಸುವಿಕೆಯೊಂದಿಗೆ ಹಿರಿಯ-ಕಿರಿಯರು ಪುತ್ತರಿಗೆ ಮತ್ತಷ್ಟು ಸಂತಸ ತಂದುಕೊಳ್ಳುತ್ತಾರೆ. ಮಧ್ಯ ರಾತ್ರಿ ಸಮೀಪಿಸುತ್ತಿರುವಂತೆಯೇ ಬೆಳದಿಂಗಳ ಬೆಳಕಿನಲ್ಲಿ ಸಾಂಪ್ರದಾಯಿಕ ವಾದ್ಯದ ಶಬ್ದಕ್ಕೆ ತಕ್ಕಂತೆ ಪುರುಷರು-ಮಹಿಳೆಯರು ಮಕ್ಕಳು ಒಟ್ಟಾಗಿ ಸಾಮೂಹಿಕ ನೃತ್ಯ ಮಾಡುತ್ತಾರೆ. ಈ ರಾತ್ರಿಯ ಸಂಭ್ರಮ-ಕುಟುಂಬದ ಮಿಲನ ಜೀವನದುದ್ದಕ್ಕೂ ಹೀಗೆಯೇ ಮುಂದುವರೆಯಲಿ ಎಂಬ ಮನದ ಪ್ರಾರ್ಥನೆಗೆ ಬಾನಿನಲ್ಲಿ ಮಿನುಗುತ್ತಿರುವ ಚಂದಿರನೇ ಸಾಕ್ಷಿಯಾಗುತ್ತಾನೆ. ಪುತ್ತರಿ ಹಬ್ಬ ಮುಗಿದರೂ ಅದರ ಸಂಭ್ರಮ ಮತ್ತೂ ಒಂದು ವಾರದ ಕಾಲದ ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುತ್ತದೆ. ಹಳ್ಳಿಗಳಲ್ಲಿ ಪುತ್ತರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಪುತ್ತರಿ ಕೋಲಾಟ ವಿಶೇಷ ರೀತಿಯಲ್ಲಿ ನಡೆಯುತ್ತದೆ. ಸಮರ ನೃತ್ಯ ಪರೆಯಕಳಿ, ಬೊಳಕಾಟ್, ಕಪ್ಪೆಯಾಟ್ ಸೇರಿದಂತೆ ಕೋಡವರ ಹತ್ತಾರು ಜನಪದ ಕಲೆಗಳ ಪ್ರದರ್ಶನದಲ್ಲಿ ಹಳ್ಳಿಗರು ಪಾಲ್ಗೊಳ್ಳುತ್ತಾರೆ. ತಮ್ಮ ಸಾಂಪ್ರದಾಯಿಕ ಉಡುಗೆ ಧರಿಸಿ ಹಬ್ಬದಲ್ಲಿ ಪಾಲ್ಗೊಂಳ್ಳುವ ಕೊಡವರು, ಈ ರೀತಿ ಸಾಂಪ್ರದಾಯಿಕ ನೃತ್ಯಗಳ ಪ್ರದರ್ಶನದೊಂದಿಗೆ ಭವಿಷ್ಯದ ತಲೆಮಾರಿಗೂ ಈ ವಿಶೇಷ ನೃತ್ಯ ಪ್ರಕಾರಗಳನ್ನು ಪರಿಚಯಿಸುತ್ತಾರೆ. ಕೊಡಗಿನ ಪ್ರಮುಖ ಹಬ್ಬವಾಗಿ ಆಚರಿಸಲ್ಪಡುವ ಪುತ್ತರಿಯ ವಿಶಿಷ್ಟತೆಯಿಂದಾಗಿಯೇ ಕೊಡಗಿನ ಜನತೆ ಪುತ್ತರಿ ಬಪ್ಪಕ ಬಣ್ಣತೆ ಬಾತ್. . ಪುತ್ತರಿ ಪೋಪಕ ಎಣ್ಣತೆ ಪೋಯಿತ್. . ದಮ್ಮಯ್ಯ ಪುತ್ತರಿ ನೀ ಒಮ್ಮಲು ಪೋವತೆ ಎಂದು ಹಾಡುತ್ತಾರೆ. ಇದರ ಅರ್ಥ ಪುತ್ತರಿ ನೀ ಬರುವಾಗ ಬಣ್ಣದ ಸಡಗರದ ರಂಗಿನೊಂದಿಗೆ ಬರುತ್ತಿಯ. . . ಆದರೆ ನೀ ಹೋಗುವಾಗ ಹೇಳದೇ ಹೋಗುತ್ತೀಯ. . . ದಮ್ಮಯ್ಯ ಪುತ್ತರಿಯೇ. . . ನೀನು ಒಮ್ಮೆಗೆ ಸಂಭ್ರಮದೊಂದಿಗೆ ಹೋಗದಿರು ಎಂದು ಪ್ರಾರ್ಥಿಸುತ್ತಾರೆ. ಪುತ್ತರಿ ಕೊಡಗಿನ ಬೆಳದಿಂಗಳ ಹಬ್ಬವಾಗಿ ವರ್ಷಕ್ಕೊಮೆ ಬರಬಹುದು. ಆದರೆ, ಇದು ತರುವ ಸಂಭ್ರಮ, ಕೊಡಗಿನ ಜನತೆಯ ಮನದಲ್ಲಿ ವರುಷವಿಡೀ ನೆಲೆ ನಿಂತಿರುತ್ತದೆ.

ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ತಕ್ಕಮುಖ್ಯಸ್ಥರು, ಗ್ರಾಮಸ್ಥರು, ಭಕ್ತಾದಿಗಳ ಸಮ್ಮುಖದಲ್ಲಿ ಅಮ್ಮಂಗೇರಿ ಜ್ಯೋತಿಷ್ಯರು ಪುತ್ತರಿ ಹಬ್ಬದ ದಿನ, ಸಮಯ ಹಾಗೂ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ವಾರ್ಷಿಕ ಕಲಾಡ್ಚ ಹಬ್ಬದ ದಿನವನ್ನು ನಿಗದಿ ಪಡಿಸಿದರು. ಪುತ್ತರಿ ಹಬ್ಬದ ದಿನವಾದ ಡಿ.14 ರಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ರಾತ್ರಿ 7.30ಕ್ಕೆ ನೆರೆ ಕಟ್ಟುವುದು, 8.30ಕ್ಕೆ ಕದಿರು ತೆಗೆಯುವುದು ಮತ್ತು 9.30ಕ್ಕೆ ತೀರ್ಥ ಪ್ರಸಾದ ಸ್ವೀಕಾರವೆಂದು ಸಮಯ ನಿಗದಿ ಪಡಿಸಲಾಯಿತು. ನಾಡಿನಾದ್ಯಂತ ಜನರು ಅಂದು ರಾತ್ರಿ 7.50 ಕ್ಕೆ ನೆರೆ ಕಟ್ಟುವುದು, 8.50 ಕ್ಕೆ ಕದಿರು ತೆಗೆಯವುದು ಮತ್ತು 9.50ಕ್ಕೆ ಭೋಜನ ಮಾಡುವುದು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಬೊಳ್ಳುಮಾಡು – ಕಾಕೋಟುಪರಂಬು : ನೂತನ ಕಾಂಕ್ರೀಟ್ ರಸ್ತೆಗಳ ಉದ್ಘಾಟನೆ*

ಜುಲೈ 24, 2026

*ಎಸ್‍ಐಆರ್ : ಡಿಜಟಲೀಕರಣ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*

ಜುಲೈ 24, 2026

*ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ತರಬೇತಿ ಕಾರ್ಯಾಗಾರ : ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ಗಮನಹರಿಸಿ : ಪ್ರಸನ್ನ ಕುಮಾರ್*

ಜುಲೈ 24, 2026

*ಎಸ್‍ಐಆರ್ : ಡಿಜಟಲೀಕರಣ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*

ಜುಲೈ 24, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಜು.24 NEWS DESK : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಗಣತಿ ನಮೂನೆಯ ಡಿಜಿಟಲೀಕರಣವು ಶೇ.80…

*ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ತರಬೇತಿ ಕಾರ್ಯಾಗಾರ : ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ಗಮನಹರಿಸಿ : ಪ್ರಸನ್ನ ಕುಮಾರ್*

ಜುಲೈ 24, 2026

*ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ವಿಷ ನಿರೋಧಕ ಔಷಧಿ ದಾಸ್ತಾನು ಮಾಡಿ : ಜಿಲ್ಲಾಧಿಕಾರಿ*

ಜುಲೈ 24, 2026

*ಯುವ ಜನರ ಸಬಲೀಕರಣಕ್ಕೆ `ಮೈ ಭಾರತ್’ ವೇದಿಕೆ ಬಳಸಿಕೊಳ್ಳಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಕರೆ*

ಜುಲೈ 24, 2026

*ಸೋಮವಾರಪೇಟೆ : ವಾಕರ್ಸ್ ವಿಂಗ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಹರ್ಷ ಆಯ್ಕೆ*

ಜುಲೈ 24, 2026

ಜು.26 ರಂದು ಮಡಿಕೇರಿಯಲ್ಲಿ ಕಾಗಿ೯ಲ್ ವಿಜಯ್ ದಿವಸ್ : 125 ಸಂಘಟನೆಗಳಿಂದ ಯೋಧರಿಗೆ ಗೌರವ ನಮನ

ಜುಲೈ 24, 2026

*ಬಾಲಕರ ಟೇಬಲ್ ಟೆನ್ನಿಸ್ ಪಂದ್ಯಾವಳಿ – ಕೊಡಗು ವಿದ್ಯಾಲಯ ತಂಡಕ್ಕೆ ಕಂಚಿನ ಪದಕ*

ಜುಲೈ 24, 2026

*ಬಿಡದಿ ಹೋರಾಟಕ್ಕೆ ತೆರಳುತ್ತಿದ್ದ ರೈತ ಸಂಘದ ಪ್ರಮುಖರನ್ನು ವಶಕ್ಕೆ ಪಡೆದ ಪೊಲೀಸರು : ಮುಖಂಡರ ಅಸಮಾಧಾನ*

ಜುಲೈ 24, 2026

*”ನೀಟ್” ಕೇಂದ್ರದ ಧೋರಣೆ ಖಂಡಿಸಿ ವಿರಾಜಪೇಟೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ : ಕೇಂದ್ರದಿಂದ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟ : ಶಾಸಕ ಎ.ಎಸ್.ಪೊನ್ನಣ್ಣ*

ಜುಲೈ 24, 2026

*ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ : ಪ್ರಮುಖರ ಬಂಧನ, ಬಿಡುಗಡೆ*

ಜುಲೈ 24, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.