ಮಡಿಕೇರಿ ನ.19 NEWS DESK : ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಐ ಕ್ಯೂ ಎಸಿ ವತಿಯಿಂದ ಡಿಜಿಟಲ್ ಲೈಬ್ರರಿ ಪೋರ್ಟಲ್ ಉದ್ಘಾಟಿಸಲಾಯಿತು. ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಡಿಜಿಟಲ್ ಲೈಬ್ರರಿ ಪೋರ್ಟಲ್ ಅನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಸಮಯವನ್ನು ಹೆಚ್ಚಾಗಿ ಕಳೆಯುತ್ತಿದ್ದರು. ಆದರೆ ಪ್ರಸ್ತುತದಿನಗಳಲ್ಲಿ ಗ್ರಂಥಾಲಯಕ್ಕೆ ಬಂದು ಓದುವ ಹಾವ್ಯಸ ಕಡಿಮೆಯಾಗಿದ್ದು, ವಿದ್ಯಾರ್ಥಿಗಳು ಡಿಜಿಟಲ್ ಲೈಬ್ರರಿ ಪೋರ್ಟಲ್ ನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ಬಿ.ರಾಘವ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಹೆಚ್ಚು ಸಮಯವನ್ನು ಕಳೆದಷ್ಟು ಜೀವನದಲ್ಲಿ ಜ್ಞಾನದ ಅಭಿವೃದ್ಧಿಯನ್ನು ಹೊಂದಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಲೈಬ್ರೆರಿಯನ್ ಪ್ರೊಫೆಸರ್ ವಿಜಯಲತಾ ಡಿಜಿಟಲ್ ಲೈಬ್ರರಿಯ ಮಹತ್ವವನ್ನು ತಿಳಿಸಿದರು. E Edwise…
ಲೇಖಕ: admin
ಕುಶಾಲನಗರ NEWS DESK ನ.19 : ಕುಶಾಲನಗರ ಐತಿಹಾಸಿಕ ದೇವಾಲಯ ಶ್ರೀ ಗಣಪತಿ ದೇವರ ರಥೋತ್ಸವ ಸಾವಿರಾರು ಸಂಖ್ಯೆಯ ಭಕ್ತಾದಿಗಳ ಉಪಸ್ಥಿತಿಯಲ್ಲಿ ಭಕ್ತಿ ಭಾವದಿಂದ ಜರುಗಿತು. ಕಾರ್ತಿಕ ಮಾಸ ಕೃಷ್ಣ ಪಕ್ಷದಲ್ಲಿ ನಡೆಯುವ ದೇವಾಲಯದ ರಥೋತ್ಸವ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಬೆಳಗಿನಿಂದಲೇ ದೇವರಿಗೆ ಪಂಚಾಮೃತ ಅಭಿಷೇಕ, ಏಕವಾರ, ರುದ್ರಾಭಿಷೇಕ ಪುಷ್ಪಾಲಂಕಾರ ರಥ ಪೂಜೆ ರಥ ಬಲಿ ನಂತರ ಗಣಪತಿ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಿ ಭಕ್ತಾದಿಗಳು ರಥ ಬೀದಿಯ ಮೂಲಕ ಆಂಜನೇಯ ದೇವಾಲಯ ತನಕ ಘೋಷಣೆಗಳೊಂದಿಗೆ ಭಕ್ತಿಭಾವದಿಂದ ಎಳೆದರು. ದೇವಾಲಯದ ಪ್ರಧಾನ ಅರ್ಚಕರಾದ ಆರ್ ಕೆ ನಾಗೇಂದ್ರ ಬಾಬು, ರಾಘವೇಂದ್ರ ಭಟ್ ಮತ್ತು ಅರ್ಚಕರ ತಂಡದಿಂದ ಪೂಜಾ ವಿಧಿ ವಿಧಾನಗಳು ಜರಗಿದವು. ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು. ಜಾತ್ರೋತ್ಸವ ಅಂಗವಾಗಿ ದೇವಾಲಯದ ಒಳ ಆವರಣವನ್ನು ವಿಶೇಷವಾಗಿ ಹೂಗಳಿಂದ ಸಿಂಗರಿಸಲಾಗಿತ್ತು. ಅಯ್ಯಪ್ಪ ಸ್ವಾಮಿ ದೇವರ ಮಾಲಾಧಾರಿಗಳು ರಥದ ಮುಂದೆ ಕರ್ಪೂರ ಆರತಿ ಬೆಳಗಿ ಅಯ್ಯಪ್ಪ ಸ್ವಾಮಿ ಘೋಷಣೆ ಕೂಗಿದರು. …
ಸುಂಟಿಕೊಪ್ಪ,ನ.19 NEWS DESK : ಮಕ್ಕಳ ದಿನಾಚರಣೆ ಅಂಗವಾಗಿ ಗದ್ದೆಹಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಕವಾಯತ್ ನಡೆಸಲು ಉಪಯುಕ್ತವಾದ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಪಂಚಾಯಿತಿ ಸದಸ್ಯೆ ನಾಗರತ್ನ, ಸಮಾಜ ಸೇವಕ ಇಚ್ಚಾ ರಶೀದ್ ಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳಿಗೆ ಕವಾಯತ್ ನಡೆಸಲು ಬೇಕಾದ ಡಂಬಲ್ಸ್, ಲೇಜಿಮ್ಸ್ ಹಾಗೂ ರಿಂಗ್‍ಗಳನ್ನು ಶಾಲೆಯ ಮುಖ್ಯೋಪಾದ್ಯಾಯನಿ ಹೇಮಕುಮಾರಿ, ಸಹಶಿಕ್ಷಕರುಗಳಾದ ಅನಿತಾ, ಮೀನಾಕುಮಾರಿ ಅವರಿಗೆ ನೀಡಿದರು.
ಸುಂಟಿಕೊಪ್ಪ ನ.19 NEWS DESK : ಕೊಡಗು ಜಿಲ್ಲಾ ಎಸ್.ಡಿ.ಟಿ.ಯು ಸಮಿತಿ ವತಿಯಿಂದ ಸುಂಟಿಕೊಪ್ಪ ಠಾಣಾಧಿಕಾರಿ ಚಂದ್ರಶೇಖರ ಮತ್ತು ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಲಾಯಿತು. ಅಂತರಾಜ್ಯದ ವ್ಯಕ್ತಿಯೊಬ್ಬರನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣಾ ಅಧಿಕಾರಿಗಳನ್ನು ಮತ್ತು ತಂಡವನ್ನು ಕೊಡಗು ಜಿಲ್ಲಾ ಸೋಶಿಯಲ್ ಡೆಮೊಕ್ರೆಟಿಕ್ ಟ್ರೇಡ್ ಯೂನಿಯನ್ ತಂಡದ ಪ್ರಮುಖರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಕೊಡಗು ಜಿಲ್ಲಾ ಎಸ್.ಡಿ.ಟಿ.ಯು ಜಿಲ್ಲಾಧ್ಯಕ್ಷ ಅಣ್ಣ ಶರೀಫ್, ಉಪಾಧ್ಯಕ್ಷ ಇಬ್ರಾಹಿಂ ಹೊಸತೋಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎ.ಅಬ್ದುಲ್ ರಜಾಕ್, ಸಂಘಟನಾ ಕಾರ್ಯದರ್ಶಿ ಲತೀಫ್ ಸುಂಟಿಕೊಪ್ಪ, ಸದಸ್ಯರಾದ ಆಲಿ, ಪಿರೋಜ್ ಸೇರಿದಂತೆ ಕೂಡಿಗೆ ಯೂನಿಯನ್ ಸದಸ್ಯರು ಹಾಜರಿದ್ದರು.
ಮಡಿಕೇರಿ NEWS DESK ನ.19 : ಮದ್ರಾಸ್ ಎಂಜಿನಿಯರಿOಗ್ ಆರ್ಮಿ ಗ್ರೂಪ್‌ನ ಬೈಕ್ ರ‍್ಯಾಲಿ ಮಡಿಕೇರಿ ನಗರದಲ್ಲಿ ನಡೆಯಿತು. ಬೆಳಗಾವಿಯಿಂದ ಹೊರಟ ಬೈಕ್ ರ‍್ಯಾಲಿ ಧಾರವಾಡ, ಹುಬ್ಬಳ್ಳಿ ಮೂಲಕ ಮಡಿಕೇರಿಗೆ ತಲುಪಿತು. ನಗರದ ಗಾಂಧಿ ಮೈದಾನದಲ್ಲಿ ಕಾರ್ಯಕ್ರಮ ನಡೆಯಿತು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಿ.ಕೆ.ಕುಟ್ಟಪ್ಪ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು ನ.19 NEWS DESK : ಸಂಬಾರ ಪದಾರ್ಥಗಳ ರಾಣಿ ಎಂದೇ ಕರೆಯಲ್ಪಡುವ ಘಮ ಘಮಿಸುವ ಏಲಕ್ಕಿ ಯ ಬೆಲೆ ದಿನೇ ದಿನೇ ಏರುಮುಖವಾಗಿ ಸಾಗುತ್ತಿದೆ. ಕಳೆದ ಮೂರು ತಿಂಗಳಿನಲ್ಲಿ ಕಿಲೋಗೆ 500 ರೂಪಾಯಿ ಏರಿಕೆ ದಾಖಲಿಸಿರುವ ಏಲಕ್ಕಿ ಈಗ ದೇಶೀ ಮಾರುಕಟ್ಟೆಯಲ್ಲಿ ಉತ್ತಮ ದರ್ಜೆಯದಕ್ಕೆ ಕಿಲೋಗೆ 2500 ರೂಪಾಯಿಗಳಿಂದ 2800 ರೂಪಾಯಿಗಳವರೆಗೂ ಮಾರಾಟವಾಗುತ್ತಿದೆ. ಆದರೆ ಈ ವರ್ಷ ವಿಶ್ವದ ಮೂರನೇ ಅತೀ ದೊಡ್ಡ ಏಲಕ್ಕಿ ಉತ್ಪಾದಕ ದೇಶ ಆಗಿರುವ ಗ್ವಾಟೆಮಾಲಾದಲ್ಲಿ ಪ್ರತೀಕೂಲ ಹವಾಮಾನದ ಕಾರಣದಿಂದಾಗಿ ಉತ್ಪಾದನೆ ಶೇಕಡಾ 40 ರಿಂದ 50 ರಷ್ಟು ಕುಸಿಯಲಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಸರಬರಾಜಿನ ಕೊರತೆ ಇರುವುದರಿಂದ ಸಹಜವಾಗಿಯೇ ಏರಿಕೆ ಆಗುತಿದ್ದು ಜನವರಿ-ಮಾರ್ಚ್ ವೇಳೆಗೆ ಕಿಲೋಗೆ 3500 ಮೀರಲಿದೆ ಎಂದು ಮಾರುಕಟ್ಟೆ ತಜ್ಞರು ಆಭಿಪ್ರಾಯಿಸಿದ್ದಾರೆ. ವಿಶ್ವದ ಒಟ್ಟು ಏಲಕ್ಕಿ ಉತ್ಪಾದನೆ ಸುಮಾರು 1.90 ಲಕ್ಷ ಟನ್ ಗಳಷ್ಟಿದ್ದು ಭಾರತ ಏಲಕ್ಕಿ ಉತ್ಪಾದನೆಯಲ್ಲಿ (41,000 ಟನ್ ) ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ…
ನಾಪೋಕ್ಲು ನ.19 NEWS DESK : ಬಲ್ಲಮಾವಟಿಯ ಭಜರಂಗಿ ಯೂಥ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಮೂರನೇ ವರ್ಷದ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಪ್ರಶಸ್ತಿಯನ್ನು ಕಟ್ಟೆಮಾಡುವಿನ ಬ್ಯಾಕ್ ಈಗಲ್ಸ್ ತಂಡ ಮುಡಿಗೇರಿಸಿಕೊಂಡಿತು. ಮೂರ್ನಾಡಿನ ಎನ್.ಸಿ.ಡಿ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಅಂತಿಮ ಪಂದ್ಯದಲ್ಲಿ ಎಂ.ಎಸ್.ಡಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಗದಿತ ಎಂಟು ಓವರ್ ಗಳಲ್ಲಿ 42 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಬ್ಲ್ಯಾಕ್ ಈಗಲ್ಸ್ ತಂಡ 6.5 ನಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ಸಾಧಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಈ ತಂಡಕ್ಕೆ ರಾಟೆ ದೇವಸ್ಥಾನದ ಅಪ್ಪಣ್ಣ ಪ್ರಾಯೋಜಿಸಿದ ಟ್ರೋಫಿ ಹಾಗೂ 33,333 ನಗದು ಬಹುಮಾನಗಳನ್ನು ವಿತರಿಸಲಾಯಿತು. ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಎಡಿಕೇರಿ ಜಗನ್ನಾಥ್ ಪ್ರಾಯೋಜಿಸಿದ ಟ್ರೋಫಿ ಹಾಗೂ 22,222 ರೂ.ನಗದು ನೀಡಿ ಪುರಸ್ಕರಿಸಲಾಯಿತು. ಭಜರಂಗಿ ಯೂತ್ ಕ್ಲಬ್ ಅಧ್ಯಕ್ಷ ಎಡಿಕೇರಿ ಪ್ರಸನ್ನ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನೇತಾಜಿ…
ಮಡಿಕೇರಿ ನ.19 NEWS DESK : ಮಾದಾಪುರ ಜಂಬೂರು ಬಾಣೆಯ ನಿವಾಸಿ ವಿಜಯ ಕುಮಾರ್ (ಬಾಬು) ಅವರು ನಿಧನರಾದರು. ಮೃತರ ಅಂತ್ಯಕ್ರಿಯೆ ಇಂದು (ನ.19) ಮಡಿಕೇರಿಯ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಚೆಟ್ಟಳ್ಳಿ ನ.19 NEWS DESK : ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಕೇಂದ್ರದಲ್ಲಿ ಮೂರುದಿನಗಳ ಕಾಲ ಜೇನುಕೃಷಿ ತರಬೇತಿ ಕಾರ್ಯಕ್ರಮ ನಡೆಯಿತು. ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಕೇಂದ್ರದಲ್ಲಿ ಪ್ರಾರಂಭಗೊಂಡು ನಂತರ ಪೊನ್ನಂಪೇಟೆಯ ಅರಣ್ಯ ಕಾಲೇಜಿನಲ್ಲಿ ಜೇನುಕೃಷಿ ಪ್ರಾತ್ಯಕ್ಷಿಕಾ ತರಬೇತಿಯನ್ನು ಕಾಲೇಜಿನ ಮುಖ್ಯಸ್ಥರಾದ ಡಾ.ಕೆಂಚಾರೆಡ್ಡಿ ನೀಡಿದರು. ನ.14ರಂದು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಕೇಂದ್ರದಲ್ಲಿ ಸಮಾರೋಪ ನೆರವೇರಿತು. ಕಾರ್ಯಾಗಾರದಲ್ಲಿ ಕೇಂದ್ರದ ಮುಖ್ಯಸ್ಥ ಡಾ. ರಾಜೇಂದ್ರನ್, ಹಣ್ಣಿನ ವಿಜ್ಞಾನಿಗಳಾದ ಡಾ.ಮುರುಳಿದರ್, ಡಾ.ನಯನ್ ದೀಪಕ್.ಜಿ, ಡಾ.ಎ.ಟಿರಾಣಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಕಾಫಿಮಂಡಳಿಯ ವಿಸ್ತರಣಾ ಉಪನಿರ್ದೇಶಕರಾದ ಡಾ.ಶ್ರೀದೇವಿ, ಕೊಡಗು ಜಿಲ್ಲಾ ಜೇನುಕೃಷಿಕರ ಸಂಘದ ಮುಖ್ಯಸ್ಥ ಎನ್.ಸಿ.ಸುಬ್ಬಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಐಐಹೆಚ್ಆರ್ ಗೀತೆಯೊಂದಿಗೆ ಕಾರ್ಯಾಗಾರ ಪ್ರಾರಂಭಗೊಂಡು ಕೀಟ ವಿಜ್ಞಾನಿ ಡಾ. ಎ.ಟಿ.ರಾಣಿ ಸ್ವಾಗತಿಸಿದರು. ವಿಜ್ಞಾನಿ ಡಾ. ಬಿ.ಎಂ.ಮುರುಳಿಧರ್ ವಂದಿಸಿದರು. ಚೈತ್ರ ನಿರೂಪಿಸಿದರು. ಕಾರ್ಯಾಗಾರದ ಮೇಲ್ವಿಚಾರಕ ಕೇಂದ್ರದ ಕೀಟ ವಿಜ್ಞಾನಿ ಡಾ.ರಾಣಿ ಜೇನು ಕೃಷಿಯ ಬಗ್ಗೆ ತರಬೇತಿ ನೀಡಿದರು.
ಮಡಿಕೇರಿ ನ.19 NEWS DESK : ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ, ಕೊಳಕೇರಿ ವಿವಿಧೊದ್ಧೇಶ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ‘ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವ’ ದಿನಾಚರಣೆಯನ್ನು ವೆಸ್ಟ್ ಕೊಳಕೇರಿಯ ಭಗವತಿ ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ, 1905 ರಲ್ಲಿ ಗದಗಿನ ಕಣಗಿನಹಾಳ ಗ್ರಾಮದಲ್ಲಿ ಶಿದ್ದನಗೌಡ ಸಂಣರಾಮನಗೌಡ ಪಾಟೀಲರು ಪ್ರಪ್ರಥಮ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸುವುದರ ಮೂಲಕ ಪ್ರಾರಂಭಗೊಂಡ ಕ್ರಾಂತಿ ಇಂದು ಎಲ್ಲಾ ವಿಧಧ ಸಹಕಾರ ಸಂಘವನ್ನು ಸ್ಥಾಪಿಸುವಷ್ಟರ ಮಟ್ಟಿಗೆ ಬೆಳೆದಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕೊಳಕೇರಿ ಸಹಕಾರ ದವಸ ಭಂಡಾರವು ಸಹಕಾರ ಸಪ್ತಾಹವನ್ನು ಆಚರಿಸುತ್ತಿರುವುದಕ್ಕೆ ಅಭಿನಂದನೆಗಳನ್ನು ತಿಳಿಸಿದರು. ಸಹಕಾರ ದವಸ ಭಂಡಾರವನ್ನು ಭತ್ತದ ರೂಪದಲ್ಲಿ ಕಾರ್ಯನಿರ್ವಹಿಸುವ ಉದ್ದೇಶದಿಂದ ಪ್ರಾರಂಭಿಸಲಾಯಿತು. ಅಂದು ತುತ್ತು ಅನ್ನಕ್ಕೂ ಕ್ಷಾಮ ತಲೆದೋರಿದ ಸಂದರ್ಭದಲ್ಲಿ…






