ಮಡಿಕೇರಿ ನ.18 NEWS DESK : ಮಡಿಕೇರಿಯ ಹೊರವಲಯದಲ್ಲಿರುವ ಕ್ಯಾಪಿಟಲ್ ವಿಲೇಜ್ ನಲ್ಲಿ ಕನಾ೯ಟಕ ಪ್ಲಾಂಟಸ್೯ ಅಸೋಸಿಯೇಷನ್ ನ 66ನೇ ಎರಡು ದಿನಗಳ ವಾಷಿ೯ಕ ಸಮ್ಮೇಳನ ನಡೆಯುತ್ತಿದ್ದು, ಕೃಷಿ ಯಂತ್ರೋಪಕರಣಗಳು, ಕಾಫಿಯ ಹೊಸ ಅವಿಷ್ಕಾರಗಳ ಬಗೆಗಿನ ಪ್ರದಶ೯ನ ಮಳಿಗೆಗಳು ಗಮನ ಸೆಳೆಯಿತು. ಈ ಸಂದಭ೯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದಕ್ಷಿಣ ಭಾರತ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಮ್ಯಾಥ್ಯು ಅಬ್ರಾಹಂ ಕಾಮಿ೯ಕರನ್ನೇ ನಂಬಿರುವ ಕಾಫಿ ಉದ್ಯಮವು ಇಂದು ಕವಲುದಾರಿಯಲ್ಲಿದೆ. ಕಾಫಿ ಬೆಳೆಗೆ ಇನ್ನು 3 ವಷ೯ಗಳ ಕಾಲ ಅತ್ಯುತ್ತಮ ಬೆಲೆ ನಿರೀಕ್ಷಿಸಬಹುದಾಗಿದ್ದರೂ ಕಾಫಿ ತೋಟಗಳಲ್ಲಿ ಅಕಾಲಿಕ ಮಳೆ, ಗಾಳಿಯಂಥ ಹವಾಮಾನ ವೈಪರಿತ್ಯದಿಂದಾಗಿ ಕಾಫಿಯ ಉತ್ಪಾದನೆ ನಿರೀಕ್ಷೆಗೂ ಮೀರಿ ಕಡಮೆಯಾಗುತ್ತಿದೆ, ಅಂತೆಯೇ ಅಕಾಲಿಕ ಮಳೆ ಹಾಗೂ ಕಾಮಿ೯ಕರು ಸರಿಯಾದ ಸಮಯಕ್ಕೆ ದೊರಕದ ಹಿನ್ನಲೆಯಲ್ಲಿಯೂ ಕಾಫಿ ಬೆಳೆಯ ಗುಣಮಟ್ಟ ಕೂಡ ಕುಂಠಿತವಾಗಿದೆ, ಈ ಸವಾಲುಗಳನ್ನು ಎದುರಿಸುವುದೇ ಇಂದಿನ ತುತು೯ ಅಗತ್ಯವಾಗಿದೆ ಎಂದು ಹೇಳಿದರು. ಬ್ರೆಜಿಲ್, ಕೊಲಂಬಿಯಾ, ಮೆಕ್ಸಿಕೋದಂಥ ಜಗತ್ತಿನ ಪ್ರಮುಖ ಕಾಫಿ ಬೆಳೆಗಾರ ದೇಶಗಳಲ್ಲಿಯೂ ಈಗ ಕಾಫಿ…
ಲೇಖಕ: admin
ಮಡಿಕೇರಿ ನ.18 NEWS DESK : ಹರಿವು ಬುಕ್ಸ್ ಪ್ರಕಾಶನದ ವತಿಯಿಂದ ಬೆಂಗಳೂರಿನ ಶಾಲಿನಿ ಮೈದಾನದ ಪುಸ್ತಕ ಸಂತೆಯಲ್ಲಿ ಕೊಡಗಿನ ಖ್ಯಾತ ವೈದ್ಯ ಡಾ. ಕೆ.ಬಿ.ಸೂರ್ಯ ಕುಮಾರ್ ಬರೆದಿರುವ “ಮಂಗಳಿ” ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕರ್ನಾಟಕದ ಪ್ರಥಮ ನ್ಯೂಕ್ಲಿಯರ್ ಮೆಡಿಸಿನ್ ತಜ್ಞೆ, ಬರಹಗಾರ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಡಾ.ಆರ್.ಕೆ.ಸರೋಜಾ ಪುಸ್ತಕವನ್ನು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು ಸಾಮಾಜಿಕ ಜೀವನದಿಂದ ದೂರವಿರುವ ಮಂಗಳಮುಖಿಯರ ಬಗ್ಗೆ ಕನ್ನಡದಲ್ಲಿ ಕೆಲವೇ ಪುಸ್ತಕಗಳು ಬಂದಿರುವುದಾಗಿ ತಿಳಿಸಿದರು. ಡಾ.ಸೂರ್ಯಕುಮಾರ್ ಅವರು ಬರೆದ ಇತರ ಪುಸ್ತಕಗಳ ಬಗ್ಗೆ ಮೆಲುಕು ಹಾಕಿ ಅಪರಾಧ ಲೋಕದ ವಿವರಗಳನ್ನು ವೈದ್ಯರ ದೃಷ್ಟಿಯಿಂದ ಜನ ಮಾನಸಕ್ಕೆ ಮನದಟ್ಟಾಗುವಂತೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಿವೃತ್ತ ಐಎಎಸ್ ಅಧಿಕಾರಿ ಡಾ.ನಾಗಾಂಬಿಕಾ ದೇವಿ ಅವರು ಡಾ.ಸೂರ್ಯ ಕುಮಾರ್ ರನ್ನು ಸನ್ಮಾನಿಸಿದರು.
ಸಿದ್ದಾಪುರ ನ.18 NEWS DESK : ಭಾರತೀಯ ನೃತ್ಯ ಕಲಾ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಸಿದ್ದಾಪುರದ ಚರ್ಚ್ ಹಾಲ್‍ನಲ್ಲಿ ಸಭಾಂಗಣದಲ್ಲಿ ನೃತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು. ಭಾರತೀಯ ನೃತ್ಯ ಕಲಾ ಶಾಲೆಯ ಶಿಕ್ಷಕಿ ವಿದುಷಿ ಜಲಜ ನಾಗರಾಜ್ ಅವರ ನೇತೃತ್ವದಲ್ಲಿ ನಡೆದ ನೃತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ನೃತ್ಯಶಾಲೆಯ 46 ಕಲಾವಿದರು ಭರತ ನಾಟ್ಯ, ಜಾನಪದ, ರಾಮಾಯಾಣ ಮತ್ತು ಮಹಾಭಾರತ ರೂಪಕಗಳಂತಹ ವೈವಿಧ್ಯಮಯ ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ನೆರೆದಿದ್ದವರ ಗಮನ ಸೆಳೆದರು. ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕಿ ಕೃಷ್ಣವೇಣಿ ಉದ್ಘಾಟಿಸಿ, ಶುಭ ಹಾರೈಸಿದರು. ಎಸ್‍ಎನ್‍ಡಿಪಿ ಕೊಡಗು ಯೂನಿಯನ್‍ನ ಅಧ್ಯಕ್ಷ ವಿ.ಕೆ.ಲೋಕೇಶ್ ಮಾತನಾಡಿ, ದೇಶದ ಆಚಾರ, ವಿಚಾರ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ಆಯೋಜಿಸಬೇಕಾಗಿದೆ. ಸಿದ್ದಾಪುರ ಸುತ್ತಮುತ್ತಲ ಭಾಗದ ವಿದ್ಯಾರ್ಥಿಗಳು ಸಂಸ್ಕೃತಿಯನ್ನು ಬಿಂಬಿಸುವ ಕಲೆಯ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಮಾದರಿಯಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್-5ರ ವಿಜೇತ ರಾಹುಲ್ ರಾವ್ ಅವರ ಸಾಧನೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು. ಈ…
ಮಡಿಕೇರಿ ನ.18 NEWS DESK : ಎಮ್ಮೆಮಾಡುವಿನಲ್ಲಿ ನಡೆದ ಎಸ್.ಕೆ.ಎಸ್.ಎಸ್.ಎಫ್ ವಿರಾಜಪೇಟೆ ವಲಯ ಮಟ್ಟದ ಇಸ್ಲಾಮಿಕ್ ಕಲೋತ್ಸವದಲ್ಲಿ ವಿರಾಜಪೇಟೆ ಯೂನಿಟ್ ಚಾಂಪಿಯನ್ ಪಟ್ಟವನ್ನ ಅಲಂಕರಿಸಿದೆ. ರನ್ನರ್ಸ್ ಪ್ರಶಸ್ತಿಯನ್ನು ಗೋಣಿಕೊಪ್ಪ ಯೂನಿಟ್ ಹಾಗೂ ತೃತೀಯ ಸ್ಥಾನವನ್ನು ಕಲ್ಲುಬಾಣೆ ಯೂನಿಟ್ ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟು 14 ಯೂನಿಟ್ ಭಾಗವಹಿಸಿದ್ದ ಇಸ್ಲಾಮಿಕ್ ಕಲೋತ್ಸವದಲ್ಲಿ ವಿರಾಜಪೇಟೆ ಯೂನಿಟ್ 175, ಗೋಣಿಕೊಪ್ಪ 155 ಹಾಗೂ ಕಲ್ಲುಬಾಣೆ ಯೂನಿಟ್ 137 ಅಂಕಗಳನ್ನು ಪಡೆದುಕೊಂಡಿತ್ತು. ಸಬ್ ಜೂನಿಯರ್, ಜೂನಿಯರ್ ಹಾಗೂ ಜನರಲ್ ವಿಭಾಗದಲ್ಲಿ ಗೋಣಿಕೊಪ್ಪ ಯೂನಿಟ್ ಪ್ರಥಮ ಹಾಗೂ ಸೀನಿಯರ್ ಹಾಗೂ ಸೂಪರ್ ಸೀನಿಯರ್ ವಿಭಾಗದಲ್ಲಿ ವಿರಾಜಪೇಟೆ ಯೂನಿಟ್ ಪ್ರಥಮ ಸ್ಥಾನ ಪಡೆಯಿತು. ತೀರ್ಪುಗಾರರಾಗಿ ರಾಸಿಖ್ ಹುದವಿ,ಸಿರಾಜ್ ಕೌಸರಿ ಹಾಗೂ ರಿಜ್ವಾನ್ ಕೌಸರಿ,ಝಕೀರ್ ಹುದವಿ,ಇರ್ಷಾದ್ ಕೌಸರಿ,ಅಸೀಬ್ ಫೈಝಿ,ಹಾಗೂ ಸಮದ್ ಮೌಲವಿ, ಕಾರ್ಯನಿರ್ವಹಿಸಿದರು.
ಸುಂಟಿಕೊಪ್ಪ ನ.18 NEWS DESK : ಸುಂಟಿಕೊಪ್ಪ ಸಂತಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕರಾದ ರೆ.ಫಾ.ವಿಜಯಕುಮಾರ್ ನೇತೃತ್ವದಲ್ಲಿ ಶಾಲೆಯ ಪ್ರಾಂಶುಪಾಲರಾದ ಸೆಲ್ವರಾಜ್ ಹಾಗೂ ಸಹಶಿಕ್ಷಕರು ಆಕರ್ಷಕ ನೃತ್ಯದ ಮೂಲಕ ಮಕ್ಕಳನ್ನು ರಂಜಿಸಿದರು. ನಂತರ ಪ್ರೌಢ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳ ನೃತ್ಯ ಗಮನ ಸೆಳೆಯಿತು. ಸಭಾ ಕಾರ್ಯಕ್ರಮದ ನಂತರ ಪುಟಾಣಿ ಮಕ್ಕಳಿಗೆ ಕಾಳು ಹೆಕ್ಕುವುದು, ಓಟದ ಸ್ಪರ್ಧೆ, ಚೆಂಡು ಊದಿ ತಳ್ಳುವುದು, ಬೆಲೂನಿನಲ್ಲಿ ವಿವಿಧ ಬಗೆಯ ಆಟಗಳು, ಚಿತ್ರಕಲೆ ಇನ್ನಿತರ ಸ್ಪರ್ಧೆಗಳು ನಡೆಯಿತು.
ಮಡಿಕೇರಿ ನ.18 NEWS DESK : ಕನಕಜಯಂತಿ ಅಂಗವಾಗಿ ಭುವನಗಿರಿಯ ಶ್ರೀ ಭಕ್ತ ಕನಕದಾಸರು ಹಾಗೂ ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗದ ವತಿಯಿಂದ ಪ್ರಥಮ ವರ್ಷದ ಜಿಲ್ಲಾಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ “‘ಡಾ.ಮಂತರ್ ಗೌಡ ಕಪ್’ ನಡೆಯಿತು. ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಆವರಣದಲ್ಲಿ ನಡೆದ ಪಂದ್ಯಾವಳಿಯನ್ನು ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಡಿ.ಆರ್.ಪ್ರಭಾಕರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, 537ನೇ ಕನಕ ಜಯಂತಿ ಅಂಗವಾಗಿ ಎರಡು ದಿನಗಳ ಕಾಲ ಏರ್ಪಡಿಸಿರುವ ಪಂದ್ಯಾವಳಿಯಲ್ಲಿ ಜಿಲ್ಲೆ ಹಾಗೂ ನೆರೆಜಿಲ್ಲೆಗಳ ಪ್ರತಿಭೆಗಳು ಪಾಲ್ಗೊಂಡಿದ್ದು, ಕ್ರೀಡಾಕೂಟ ಯಶಸ್ವಿಯಾಗಲು ಶುಭ ಹಾರೈಸಿದರು. ಕನಕದಾಸರು ಈ ಹಿಂದೆಯೇ ಕರೆ ನೀಡಿದಂತೆ, ಜಾತಿ ಬೇಧ ಇಲ್ಲದೆ ನಾವೆಲ್ಲರೂ ಒಂದೇ ಎಂಬಂತೆ ಎಲ್ಲರೂ ಒಗ್ಗೂಡಿ ಸಾಮರಸ್ಯದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಅವರ ಚಿಂತನೆಯನ್ನು ಸಾಕಾರಗೊಳಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.ಈ ಸಂದರ್ಭ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಸಿ.ಕೆ.ಉದಯಕುಮಾರ್, ಉಪಾಧ್ಯಕ್ಷ ಭುವನಗಿರಿ ದೊಡ್ಡಯ್ಯ, ತೊರೆನೂರು ಚಿಕ್ಕಯ್ಯ,…
ಮಡಿಕೇರಿ NEWS DESK ನ.18 : ನಗರದ ಪೆನ್‌ಷನ್‌ಲೇನ್ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮಡಿಕೇರಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಮಕ್ಕಳ ಪ್ರತಿಭೆಗೆ ಪೋಷಕರು ಸಂಪೂರ್ಣ ಸಹಕಾರ ನೀಡಬೇಕು ಎಂದರು. ಈ ಅಂಗನವಾಡಿ ಕೇಂದ್ರ ಬಾಡಿಗೆ ಮನೆಯಲ್ಲಿ ನಡೆಯುತ್ತಿದ್ದು, ಸರ್ಕಾರದಿಂದ ಕಟ್ಟಡ ನಿರ್ಮಿಸಿದರೆ ಮಕ್ಕಳಿಗೆ ಸಹಕಾರಿಯಾಗಲಿದೆ. ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳುವಂತಾಗಬೇಕು ಎಂದು ಹೇಳಿದರು. ಅಂಗನವಾಡಿ ಕಾರ್ಯಕರ್ತೆ ಬಬಿತಾ, ಸಹಾಯಕಿ, ಮಕ್ಕಳ ಪೋಷಕರು, ಬಾಲವಿಕಾಸ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಪುಟಾಣಿಗಳು ನೇತಾಜಿ ಸುಭಾಷ್‌ಚಂದ್ರ ಬೋಸ್, ಸ್ವಾಮಿ ವಿವೇಕಾನಂದ, ರಾಧಕೃಷ್ಣ, ಹೂ ಮಾರುವ ಹುಡುಗಿ, ಫ್ಯಾಷನ್ ಲೇಡಿ ಸೇರಿದಂತೆ ವಿವಿಧ ಛದ್ಮವೇಷಗಳಲ್ಲಿ ಗಮನ ಸೆಳೆದರು.
ಮಡಿಕೇರಿ ನ 18 NEWS DESK : ಬ್ರಹ್ಮಗಿರಿ ಸಹೋದಯ ಅಥ್ಲೆಟಿಕ್ ಪಂದ್ಯಾವಳಿಯಲ್ಲಿ ನಗರದ ಕೊಡಗು ವಿದ್ಯಾಲಯ ತಂಡವು ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ನಗರದ ಕೊಡಗು ವಿದ್ಯಾಲಯದ ಮೈದಾನದಲ್ಲಿ ನಡೆದ ಬ್ರಹ್ಮಗಿರಿ ಸಹೋದಯ ಅಥ್ಲೆಟಿಕ್ ಪಂದ್ಯಾವಳಿಯಲ್ಲಿ 8 ಸಿಬಿಎಸ್‌ಇ ಶಾಲೆಗಳ ಒಟ್ಟು 300 ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಸೈನಿಕ್ ಶಾಲೆ ಕೂಡಿಗೆ, ಜ್ಞಾನಗಂಗಾ ರೆಸಿಡೆನ್ಷಿಯಲ್ ಶಾಲೆ ಕುಶಾಲನಗರ, ನ್ಯಾಷನಲ್ ಅಕಾಡೆಮಿ ಗೋಣಿಕೊಪ್ಪ, ಎಸ್‌ಎಮ್‌ಎಸ್ ವಿದ್ಯಾಪೀಠ ಅರಮೇರಿ, ಅಂಕೂರು ಪಬ್ಲಿಕ್ ಶಾಲೆ ನಾಪೋಕ್ಲು, ಕುರುಂಜಿ ವೆಂಕಟರಮಣ ಪಬ್ಲಿಕ್ ಶಾಲೆ ಸುಳ್ಯ, ಕ್ರೆಸೆಂಟ್ ಶಾಲೆ ಮಡಿಕೇರಿ ಮತ್ತು ಆತಿಥೇಯ ಶಾಲೆ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಿದವು. ಪಂದ್ಯಾಟವನ್ನು ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಾಯಕ ನಿರ್ದೇಶಕಿ ಮಿನ್ನಿ ಉಣ್ಣಿರಾಜ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಕೆ.ಎಸ್. ಸುಮಿತ್ರಾ, ಆಡಳಿತ ವ್ಯವಸ್ಥಾಪಕ ಪಿ.ರವಿ, ಶಿಕ್ಷಕರು ಮತ್ತು ತಂಡದ ಕೋಚ್‌ಗಳು ಹಾಜರಿದ್ದರು. ಕೊಡಗು ವಿದ್ಯಾಲಯವು ಪಂದ್ಯಾವಳಿಯಲ್ಲಿ ಚಾಂಪಿಯನ್ ಶಿಪ್ ಅನ್ನು ಗೆಲ್ಲುವ ಮೂಲಕ ಕ್ರೀಡಾ ಕೌಶಲ್ಯವನ್ನು ನಿರೂಪಿಸಿತು. ಪಂದ್ಯಾವಳಿಯ…
ಬೆಂಗಳೂರು NEWS DESK ನ.18 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಕ ಜಯಂತಿ ಪ್ರಯುಕ್ತ ಶಾಸಕರ ಭವನದ ಆವರಣದಲ್ಲಿರುವ ದಾಸಶ್ರೇಷ್ಠ ಕನಕದಾಸರ ಪ್ರತಿಮೆಗೆ ಮತ್ತು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಿದರು. ಸಚಿವರಾದ ಹೆಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವು ಶಾಸಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಬೆಂಗಳೂರು ನ.18 NEWS DESK : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಣಮಶ್ರೀ ಪ್ರತಿಷ್ಠಾನ ಆಯೋಜಿಸಿದ್ದ 19ನೇ ವರ್ಷದ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ, ಪ್ರಶಸ್ತಿ ವಿಜೇತ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.






