ಲೇಖಕ: admin

ಸೋಮವಾರಪೇಟೆ ಅ.7 NEWS DESK : ಸೋಮವಾರಪೇಟೆ ಶ್ರೀ ಬಸವೇಶ್ವರ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ದುರ್ಗಾದೇವಿಗೆ ಬಾಳೆ ಎಲೆ ಅಲಂಕಾರ ಮಾಡಲಾಯಿತು. ವಿವಿಧೆಡೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

Read More

ಸೋಮವಾರಪೇಟೆ ಅ.7 NEWS DESK : ಸೋಮವಾರಪೇಟೆ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಶ್ರೀ ಶಕ್ತಿಪಾರ್ವತಿ ದೇವಿಗೆ ಕುಂಕುಮ ಅಲಂಕಾರ ಮಾಡಲಾಯಿತು. ನಗರದ ವಿವಿಧೆಡೆಯಿಂದ ಭಕ್ತಾಧಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

Read More

ಸೋಮವಾರಪೇಟೆ ಅ.7 NEWS DESK : ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಉತ್ತಮ ನಿರ್ವಹಣೆ ಹಾಗೂ ವ್ಯವಹಾರಕ್ಕಾಗಿ ಸೋಮವಾರಪೇಟೆ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಬಹುಮಾನ ದೊರೆಯಿತು. ಕೊಡಗು ಜಿಲ್ಲೆ ಸಹಕಾರ ಬ್ಯಾಂಕಿನ 99ನೇ ವಾರ್ಷಿಕ ಮಹಾಸಭೆಯಲ್ಲಿ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಶರತ್ ಶೇಖರ್ ಅವರಿಂದ ಮಾದಾಪುರ ಸಂಘದ ಅಧ್ಯಕ್ಷ ನಾಪಂಡ ಉಮೇಶ್ ಉತ್ತಪ್ಪ ಹಾಗೂ ಸಿಇಒ ಕಾವೇರಪ್ಪ 25,000 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ಸ್ವೀಕರಿಸಿದರು. ಈ ಸಂದರ್ಭ ಬ್ಯಾಂಕಿನ ಅಧ್ಯಕ್ಷ ಬಾಂಡ್ ಗಣಪತಿ ಇದ್ದರು.

Read More

ಮಡಿಕೇರಿ ಅ.7 NEWS DESK : ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೈವ ನರ್ತನವನ್ನು ಮನರಂಜನೆಗಾಗಿ ಬಳಸಿಕೊಂಡು ಅಪಮಾನಿಸಲಾಗಿದೆ ಎಂದು ದೈವ ಆರಾಧಕರು ಹಾಗೂ ದೈವ ನರ್ತಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಸಂಘದ ಸ್ಥಾಪಕಾಧ್ಯಕ್ಷ ಪಿ.ಎಂ.ರವಿ ಅವರು ದೈವ ನರ್ತನ ಎನ್ನುವುದು ತುಳುನಾಡು ಹಾಗೂ ಕರಾವಳಿ ಭಾಗದ ದೈವಶಕ್ತಿಯ ಆರಾಧನೆ, ಸಂಸ್ಕೃತಿ ಮತ್ತು ಸಂಪ್ರದಾಯವಾಗಿದೆ. ಇದನ್ನು ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಮನರಂಜನೆಗಾಗಿ ಬಳಸಿಕೊಂಡು ದೈವ ಆರಾಧಕರು ಹಾಗೂ ದೈವ ನರ್ತಕರಿಗೆ ಮಾನಸಿಕವಾಗಿ ನೋವುಂಟು ಮಾಡುವುದು ಖಂಡನೀಯವೆಂದರು. ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ವೇದಿಕೆಯಲ್ಲಿ ನೃತ್ಯ ತಂಡಗಳು ದೈವ ನರ್ತನವನ್ನು ತಮಗಿಷ್ಟ ಬಂದಂತೆ ಬಳಸಿಕೊಂಡು ಸಂಪ್ರದಾಯಕ್ಕೆ ಅಪಚಾರವೆಸಗಿದ್ದಾರೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಖಂಡನೆ ವ್ಯಕ್ತವಾಗಿದೆ. ಕೊಡಗಿನಲ್ಲಿ ನಮ್ಮ ಸಂಘ ಮನರಂಜನೆಗಾಗಿ ದೈವ ವೇಷ ತೊಟ್ಟು ನರ್ತನ ಮಾಡುವುದನ್ನು ಅನೇಕ ಬಾರಿ ವಿರೋಧಿಸುತ್ತಲೇ ಬಂದಿದೆ. ಶಾಲಾ ಕಾಲೇಜುಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಹಿಂದೆ ಸರ್ಕಾರ…

Read More

ಸೋಮವಾರಪೇಟೆ ಅ.7 NEWS DESK : ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರಕ್ಕೆ ಒತ್ತಡ ತರಬೇಕು ಎಂದು ಸೋಮವಾರಪೇಟೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ.ದಿನೇಶ್ ಆಗ್ರಹಿಸಿದರು. ಕೂತಿ ಗ್ರಾಮದ ಸಮುದಾಯಭವನದಲ್ಲಿ ನಡೆದ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಅವರೊಂದಿಗೆ ನಡೆದ ರೈತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರರ ಸಂಕಷ್ಟವನ್ನು ಹೇಳಿದರು. ಕಾಫಿಯನ್ನು ಆಹಾರ ಬೆಳೆಯೆಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದರೆ ಮಾತ್ರ, ಕಾಫಿ ಬೆಳೆಗಾರರಿಗೆ ಸೂಕ್ತ ಸೌಲಭ್ಯಗಳು ಸಿಗುತ್ತವೆ. ವಿಶೇಷ ಸವಲತ್ತುಗಳನ್ನು ಒದಗಿಸದಿದ್ದರೆ ಮುಂದಿನ ಕೆಲವೇ ವರ್ಷಗಳಲ್ಲಿ ಕೊಡಗಿನ ಕಿತ್ತಳೆಯಂತೆ ಕಾಫಿಯೂ ಕಣ್ಮರೆಯಾದರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ಹೇಳಿದರು. ಕಾಫಿ ಹೂ ಅರಳುವ ಸಂದರ್ಭದಲ್ಲಿ ನಿಗದಿತ ಸಮಯದಲ್ಲಿ ಹೂಮಳೆ ಬೀಳುವುದಿಲ್ಲ. ಮತ್ತು ಬ್ಯಾಕಿಂಗ್ ಮಳೆ ಸಿಗುವುದಿಲ್ಲ. ಈ ಕಾರಣದಿಂದ ಬಹುತೇಕ ಸಣ್ಣ ಬೆಳೆಗಾರರು ಬೋರ್‍ವೆಲ್‍ಗಳಿಂದ ನೀರನ್ನು ಹಾರಿಸಿ, ಕಾಫಿ ಹೂ ಅರಳಿಸಬೇಕಾಗಿದೆ. ಈ ಕಾರಣದಿಂದ ಸಂಕಷ್ಟದಲ್ಲಿರುವ ಸಣ್ಣ ಕಾಫಿ ಬೆಳೆಗಾರರ ಎಲ್‍ಟಿ4ಸಿ ಪಂಪ್‍ಸೆಟ್‍ಗಳಿಗೆ ಯಾವುದೇ ಷರತ್ತುಗಳಿಲ್ಲದೆ ಉಚಿತ ವಿದ್ಯುತ್…

Read More

ಮಡಿಕೇರಿ ಅ.7 NEWS DESK : ಕೊಡಗು ಜಿಲ್ಲೆಯ ವಿವಿಧೆಡೆ ಸಿ ಮತ್ತು ಡಿ ಭೂಮಿಯಲ್ಲಿ ಬದುಕು ಕಟ್ಟಿಕೊಂಡಿರುವ ಬಡವರ ಜಮೀನುಗಳನ್ನು ಮೀಸಲು ಅರಣ್ಯವೆಂದು ಘೋಷಿಸುವ ಕುರಿತು ಮೈಸೂರು ವಿಭಾಗದ ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಗ್ರಾ.ಪಂ ಗಳಿಗೆ ಸುತ್ತೋಲೆ ಹೊರಡಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ತಾಲ್ಲೂಕಿನ ಮುಕ್ಕೋಡ್ಲು ಗ್ರಾಮದ ಸರ್ವೆ ನಂಬರ್ 55ರ ಒಟ್ಟು ವಿಸ್ತೀರ್ಣ 109.44 (ಹೆಕ್ಟೇರುಗಳಲ್ಲಿ) ಜಮೀನುಗಳನ್ನು ಕರ್ನಾಟಕ ಅರಣ್ಯ ಅಧಿನಿಯಮ 1963ರ ಕಲಂ-05 ರನ್ವಯ ಮೀಸಲು ಅರಣ್ಯವೆಂದು ಘೋಷಿಸುವ ಕುರಿತು ಎಂದು ಅರಣ್ಯ ವ್ಯವಸ್ಥಾಪನಾಧಿಕಾರಿಯಾಗಿರುವ ನಿವೃತ್ತ ಕೆಎಎಸ್ ಅಧಿಕಾರಿ ರೇಣುಕಾಂಬ ಅವರು ಮಕ್ಕಂದೂರು ಗ್ರಾ.ಪಂ ಗೆ 2024 ಜುಲೈ 5ಕ್ಕೆ ಸುತ್ತೋಲೆ ಹೊರಡಿಸಿದ್ದಾರೆ. ಇದೇ ರೀತಿಯ ಸುತ್ತೋಲೆ ಜಿಲ್ಲೆಯ ಇನ್ನಿತರ ಗ್ರಾ.ಪಂ ಗಳಿಗೂ ಕಳುಹಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ಇದನ್ನು ಸ್ಪಷ್ಟಪಡಿಸಿಕೊಳ್ಳಲು ತಾವು ಹಾಗೂ ಗ್ರಾಮಸ್ಥರು ರೇಣುಕಾಂಬ…

Read More

ಮಡಿಕೇರಿ ಅ.7 NEWS DESK : ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಅಸಾಧಾರಣ ಸಾಧನೆಗಾಗಿ ಕೊಡಗಿನ ಮೂಕಳೇರ ಟೈನಿ ಪೂಣಚ್ಚ ಅವರು “ಪುನೀತ ಪ್ರಶಸ್ತಿ”ಗೆ ಆಯ್ಕೆಯಾಗಿದ್ದಾರೆ. ಡಾ.ಪುನೀತ್ ರಾಜಕುಮಾರ್ ಪುಣ್ಯ ಸ್ಮರಣೆ ಅಂಗವಾಗಿ ಚಲನಚಿತ್ರ ಮತ್ತು ಕಲಾವಿದರ ಕ್ಷೇಮಾಭಿವೃದ್ಧಿ ಮಂಡಳಿಯ ವತಿಯಿಂದ ಧಾರವಾಡದಲ್ಲಿ ಅ.27, 28 ಮತ್ತು 29 ರಂದು ಜರುಗುವ “ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್” ಕಾರ್ಯಕ್ರಮದಲ್ಲಿ  ಮೂಕಳೇರ ಟೈನಿ ಪೂಣಚ್ಚ ಅವರಿಗೆ “ಪುನೀತ”ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಂಡಳಿಯ ಪ್ರಮುಖರು ತಿಳಿಸಿದ್ದಾರೆ.

Read More

ಮಡಿಕೇರಿ ಅ.7 NEWS DESK : ನಗರದ ನಾಲ್ಕು ಶಕ್ತಿ ದೇವಾಲಯಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿಯ 94ನೇ ವರ್ಷದ ದಸರಾ ಉತ್ಸವಕ್ಕೆ ಸಜ್ಜಾಗುತ್ತದೆ ಎಂದು ಸಮಿತಿಯ ಅಧ್ಯಕ್ಷ ಬಿ.ಎಂ.ರಮೇಶ್ ತಿಳಿಸಿದ್ದಾರೆ. ಎರಡು ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ಕೌಶಿಕೆ ಮಹಾತ್ಮೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ದಿಂಡಿಗಲ್‍ನ ಜೆಮ್ಸ್ ಲೈಟಿಂಗ್ ಬೋರ್ಡ್ ಅಳವಡಿಸಿದ್ದು, ಸಮಿತಿ ಸದಸ್ಯರೇ ಪ್ಲಾಟ್‍ಫಾರಂ ನಿರ್ಮಿಸಲಿದ್ದಾರೆ. ಧ್ವನಿವರ್ಧಕ ಹಾಗೂ ಸ್ಟುಡಿಯೋ ವ್ಯವಸ್ಥೆಯನ್ನು ಮಡಿಕೇರಿಯ ಶಿವು ಇವೆಂಟ್ ಮ್ಯಾನೆಜ್‍ಮೆಂಟ್‍ನವರು ಒದಗಿಸಲಿದ್ದಾರೆ. 21 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಕಲಾಕೃತಿಗಳ ರಚನೆ ಹಾಗೂ ಟ್ರ್ಯಾಕ್ಟರ್ ಸೆಟ್ಟಿಂಗ್ಸ್‍ನ್ನು ಮಡಿಕೇರಿಯ ಆನಂದ್ ಆಟ್ರ್ಸ್‍ನವರು ಮಾಡಲಿದ್ದಾರೆ. ಮಡಿಕೇರಿಯ ಅಶ್ರಫ್ ಹಾಗೂ ಪ್ರಕಾಶ್ ಸ್ಪೆಷಲ್ ಎಫೆಕ್ಟ್ ನೀಡಲಿದ್ದಾರೆ. ಮಡಿಕೇರಿ ಓಜೋನ್ ಫ್ಯಾಬ್‍ನ ದಿನೇಶ್ ನಾಯರ್ ತಂಡ ಕಲಾಕೃತಿಗಳಿಗೆ ಚಲನವಲನ ನೀಡಲಿದೆ. ಒಟ್ಟು 27 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಜನಾಕರ್ಷಣೆ ಪಡೆಯುವುದರೊಂದಿಗೆ ಬಹುಮಾನಕ್ಕೂ ಪೈಪೋಟಿ ನೀಡಲಾಗವುದು ಎಂದು ರಮೇಶ್ ಮಾಹಿತಿ ನೀಡಿದರು.

Read More

ಮಡಿಕೇರಿ NEWS DESK ಅ.7 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀದಂಡಿನ ಮಾರಿಯಮ್ಮ ದೇವಿಗೆ ದಸರಾದ ಐದನೇ ದಿನವಾದ ಇಂದು ನಿಂಬೆ ಹಣ್ಣಿನ ಅಲಂಕಾರ ಮಾಡಲಾಯಿತು. ನೂರಾರು ಭಕ್ತರು ಪೂಜೆ ಸಲ್ಲಿಸಿ ವಿಶೇಷ ಅಲಂಕಾರವನ್ನು ವೀಕ್ಷಿಸಿದರು. ನವರಾತ್ರಿಯ ಪ್ರಯುಕ್ತ ಶ್ರೀದಂಡಿನ ಮಾರಿಯಮ್ಮ ದೇವಾಲಯದಲ್ಲಿ ಪ್ರತಿದಿನ ವಿಶೇಷ ಅಲಂಕಾರ ಸೇವೆ ಮತ್ತು ವಿಶೇಷ ಪೂಜೆ ನಡೆಯುತ್ತಿದೆ. ಅ.8 ರಂದು ಮಹಾಲಕ್ಷ್ಮಿ ಅಲಂಕಾರ ನಡೆಯಲಿದೆ.

Read More

ಸಿದ್ದಾಪುರ ಅ.7 NEWS DESK :  ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಿದ್ದಾಪುರದಲ್ಲಿ 31ನೇ ವರ್ಷದ ಆಯುಧ ಪೂಜೆಯನ್ನು ಈ ಬಾರಿ ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆಚರಿಲು ನಿರ್ಧರಿಸಲಾಗಿದ್ದು, ಸಿದ್ದತೆ ನಡೆಯುತ್ತಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಸೂದನ ಸತೀಶ್ ತಿಳಿಸಿದರು. ನಗರದ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.11 ರಂದು ಸಿದ್ದಾಪುರ ಬಸ್ ನಿಲ್ದಾಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಮಕ್ಕಳ ಸೈಕಲ್ ನಿಧಾನ ಸ್ಪರ್ಧೆ, 16ವರ್ಷ ಮೇಲ್ಪಟ್ಟವರಿಗೆ ಯುವಕರಿಗೆ ರಸ್ತೆ ಓಟ, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು. ಆಯುಧ ಪೂಜೆ ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಮಾತನಾಡಿ. ಸಾಂಸ್ಕೃತಿಕ ಕಾರ್ಯಕ್ರಮವು ನಾಲ್ಕು ವಿಭಾಗಗಳಲ್ಲಿ ನಡೆಯುತ್ತಿದ್ದು,  ಒಂದರಿಂದ ಏಳನೇ ತರಗತಿವರೆಗೆ ಭರತನಾಟ್ಯ, ಜಾನಪದ ನೃತ್ಯ ,ಸಾಮೂಹಿಕ ನೃತ್ಯ, ಪ್ರೌಢಶಾಲಾ ವಿಭಾಗದಲ್ಲಿ ಭರತನಾಟ್ಯ, ಜಾನಪದ ನೃತ್ಯ, ಸಾಮೂಹಿಕ ನೃತ್ಯ, ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಸಾಮೂಹಿಕ ನೃತ್ಯ, ಜಾನಪದ ನೃತ್ಯ , ನೃತ್ಯಶಾಲಾ ವಿಭಾಗದಲ್ಲಿ ಸಾಮೂಹಿಕ…

Read More