ಸೋಮವಾರಪೇಟೆ NEWS DESK ಅ.7 : ಭಾರತ ಆಧ್ಯಾತ್ಮಿಕ ದೇಶವಾಗಿದ್ದು, ಇಡೀ ಪ್ರಪಂಚಕ್ಕೆ ಜ್ಞಾನ ಹಂಚುವ ಶಕ್ತಿಯಿದೆ. ಆಧುನಿಕ ಯುಗದಲ್ಲಿ ಮನಸ್ಸುಗಳು ಹಂಚಿಹೋಗಿದ್ದು, ಇವುಗಳನ್ನು ಒಂದುಗೂಡಿಸುವ ಶಕ್ತಿ ಆಧ್ಯಾತ್ಮಿಕಕ್ಕೆ ಇದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮೈಸೂರು ವಲಯದ ಪ್ರಧಾನ ಸಂಚಾಲಕಿ ಬಿ.ಕೆ.ಲಕ್ಷ್ಮಿ ಅಭಿಪ್ರಾಯಪಟ್ಟರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಪಟ್ಟಣದ ಅಟಲ್‌ಜೀ ಕನ್ನಡ ಭವನದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಆಧ್ಯಾತ್ಮಿಕ ಜ್ಞಾನದಿಂದ ಜೀವನದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ನಕಾರಾತ್ಮಕ ಚಿಂತನೆಯಿಂದ ದೂರ ಉಳಿಯಲು ಇದು ಸಹಕಾರಿಯಾಗಿದೆ. ಕರ್ಮದಲ್ಲಿ ಶುದ್ಧತೆಯಿಟ್ಟುಕೊಳ್ಳಬೇಕು. ಕರ್ಮ ಶ್ರೇಷ್ಠತೆ ಮಾತ್ರ ಮಾನವನನ್ನು ಮರಣಾನಂತರವೂ ಹಿಂಬಾಲಿಸುತ್ತದೆ ಎಂದು ತಿಳಿ ಹೇಳಿದರು. ಜೀವನವನ್ನು ಸುಧಾರಿಸಿಕೊಳ್ಳಲು ಭಗವಂತನು ಕಲಿಸುವ ರಾಜಯೋಗವು ಸಹಕಾರಿಯಾಗುತ್ತದೆ. ದಿನದ 24 ಗಂಟೆಯಲ್ಲಿ ಒಂದು ಗಂಟೆಯನ್ನು ಆಧ್ಯಾತ್ಮಿಕ ಪ್ರವಚನ ಕೇಳಲು ಮೀಸಲಿಟ್ಟರೆ ಆರೋಗ್ಯ, ನೆಮ್ಮದಿ ಲಭಿಸುತ್ತದೆ. ರಾಜಯೋಗ ಕಾರ್ಯಕ್ರಮದಲ್ಲಿ ನೀತಿ ಶಿಕ್ಷಣದ ಜೊತೆಗೆ ವ್ಯಸನಮುಕ್ತ ಆಂದೋಲನವನ್ನು ನಡೆಸಲಾಗುತ್ತಿದೆ ಎಂದರು. ಅ.12ರವರೆಗೆ ಜರುಗಲಿರುವ…
ಲೇಖಕ: admin
ಸೋಮವಾರಪೇಟೆ NEWS DESK ಅ.7 : ನಿವೇಶನ ರಹಿತ ಕಾರ್ಮಿಕರಿಗೆ ಸರ್ಕಾರ ಉಚಿತ ನಿವೇಶನ ನೀಡಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಸಿ.ಪಿ.ಐ) ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ, ಜೇಸಿ ವೇದಿಕೆಯಲ್ಲಿ ಧರಣಿ ನಡೆಸಲಾಯಿತು. ಕಕ್ಕೆಹೊಳೆ ಜಂಕ್ಷನ್‌ನಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಕೂಲಿ ಕಾರ್ಮಿಕರ ಪರವಾಗಿ ಘೋಷಣೆ ಕೂಗಿದರು. ಜೇಸಿ ವೇದಿಕೆಗೆ ಆಗಮಿಸಿದ ಉಪ ತಹಶೀಲ್ದಾರ್ ಅವರ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು. ಕೊಡಗಿನಾದ್ಯಂತ ಗುರುತು ಮಾಡಿರುವ ಸರ್ಕಾರಿ ಪೈಸಾರಿ ಜಾಗಗಳನ್ನು ಶ್ರೀಮಂತರು ಒತ್ತುವರಿ ಮಾಡಿಕೊಂಡಿದ್ದಾರೆ. ಅಕ್ರಮ ಒತ್ತುವರಿಯನ್ನು ಸರ್ಕಾರ ತೆರವು ಮಾಡಿಸುವುದನ್ನು ಬಿಟ್ಟು, ಒತ್ತುವರಿ ಮಾಡಿಕೊಂಡವರಿಗೆ ಲೀಸ್‌ಗೆ ಕೊಡಲು ತಂತ್ರ ರೂಪಿಸುತ್ತಿದೆ ಎಂದು ಸಿ.ಪಿ.ಐ ಜಿಲ್ಲಾ ಸಹ ಕಾರ್ಯದರ್ಶಿ ಎಚ್.ಎಂ.ಸೋಮಪ್ಪ ಆರೋಪಿಸಿದರು. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಬಡವ ಇನ್ನೂ ಬಡವನಾಗಿಯೇ ಉಳಿದಿದ್ದಾನೆ. ಸರ್ಕಾರವೂ ಎಲ್ಲರಿಗೂ ಸೂರು ಎಂದು ಭರವಸೆಗಳನ್ನು ಮಾತ್ರ ನೀಡುತ್ತಿದೆ. ಬಡ ಕೂಲಿ ಕಾರ್ಮಿಕರನ್ನು ಶೋಷಣೆ ಮಾಡಿ ಭೂ ಮಾಲೀಕರಿಗೆ ಪೂರಕವಾದ ನಿಯಮಗಳನ್ನು…
ಮಡಿಕೇರಿ NEWS DESK ಅ.7 : ದೀರ್ಘಕಾಲಿಕವಾದ “ಕಾಫಿ ಕೃಷಿ”ಯ ಬಗ್ಗೆ ಕಾಫಿ ಬೆಳೆೆಗಾರರಲ್ಲಿ ಯಾವುದೇ ಗೊಂದಲ ಅಥವಾ ಆತಂಕ ಬೇಡ, ಈ ಕೃಷಿಯನ್ನು ನಂಬಿ ಮುಂದುವರೆಯಿರಿ ಎಂದು ಸಕಲೇಶಪುರದ ಪ್ರಗತಿಪರ ಕೃಷಿಕ ಧರ್ಮರಾಜ ಅವರು ಕರೆ ನೀಡಿದ್ದಾರೆ. ಮಡಿಕೇರಿ ದಸರಾ ಸಮಿತಿಯಿಂದ ಆಯೋಜಿತ ಕಾಫಿ ದಸರಾದ ದ್ವಿತೀಯ ದಿನದಂದು ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಆಯೋಜಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪ್ರಮುಖ ಬೆಳೆಯಾಗಿ ಕಾಫಿ ಕೃಷಿಯನ್ನು ನಡೆಸುವುದರೊಮದಿಗೆ ಮಿಶ್ರ ಬೆಳೆಯಾಗಿ ಇತರೆ ಬೆಳೆಗಳನ್ನು ನಿಮಗೆ ಅಗತ್ಯವಿರುವಷ್ಟು ಬೆಳೆಯಿರಿ. ಆದರೆ, ಕಾಫಿಗೆ ಪರ್ಯಾಯವಾಗಿ ಬಟರ್ ಫ್ರೂಟ್ ಇನ್ನಿತರ ಬೆಳೆಗಳನ್ನು ದೀರ್ಘ ಕಾಲಿಕವಾಗಿ, ದೊಡ್ಡ ಪ್ರಮಾಣದಲ್ಲಿ ಬೆಳೆಯುವುದು ಸುಲಭ ಸಾಧ್ಯವಲ್ಲವೆಂದು ಅಭಿಪ್ರಾಯಿಸಿ, ಯಾವುದೇ ರೀತಿಯ ವೈಫರೀತ್ಯಗಳ ನಡುವೆಯೂ ಕಾಫಿ ಕೃಷಿ ಬೆಳೆÉಗಾರರನ್ನು ಕೈ ಬಿಟ್ಟಿಲ್ಲವೆಂದು ನುಡಿದರು. ಪೋಷಕಾಂಶಗಳನ್ನು ಬಗ್ಗೆ ನಿಗಾ ಇರಲಿ- ಪ್ರಸ್ತುತ ಕಾಫಿ ಬೆಳೆಗಾರರು ತಾವು ಯಾವ ರೀತಿಯಲ್ಲಿ ಕೃಷಿ ನಡೆಸಬೇಕು, ರಾಸಾಯನಿಕ ಗೊಬ್ಬರಗಳನ್ನು ಬಳಸಿ ಕೃಷಿ ಮಾಡಬೇಕೆ,…
ಮಡಿಕೇರಿ ಅ.7 NEWS DESK : ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಯನ್ನು ಹೆಚ್ಚಾಗಿ ಉತ್ಪಾದಿಸುತ್ತಿದ್ದು, ಆ ನಿಟ್ಟಿನಲ್ಲಿ ಕಾಫಿ ಬೆಳೆಗಾರರನ್ನು ಪ್ರೋತ್ಸಾಹಿಸುವುದು ಅತ್ಯಗತ್ಯವಾಗಿದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು. ಮಡಿಕೇರಿ ನಗರ ದಸರಾ ಸಮಿತಿ ವತಿಯಿಂದ ಇದೇ ಮೊದಲ ಬಾರಿಗೆ ಎರಡು ದಿನಗಳ ಕಾಲ ಏರ್ಪಡಿಸಲಾಗಿದ್ದ ಮೊದಲ ವರ್ಷ ಕಾಫಿ ದಸರಾ ಕಾರ್ಯಕ್ರಮದಲ್ಲಿ ಕಾಫಿ ಹಾಗೂ ವಿವಿಧ ಕೃಷಿ ಸಂಬಂಧಿಸಿದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ ಕಾಫಿ ದಸರಾವು ಒಂದು ವೇದಿಕೆಯಾಗಿದ್ದು, ಕಾಫಿ ಕೃಷಿಯಲ್ಲಿ ಕೊಡಗಿನ ಜನರು ತೊಡಗಿಸಿಕೊಂಡಿರುವುದು ವಿಶೇಷವಾಗಿದೆ. ಆದ್ದರಿಂದ ಕಾಫಿ ಬೆಳೆಯನ್ನು ಮತ್ತಷ್ಟು ಔನತ್ಯಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸಬೇಕಿದೆ ಎಂದು ಡಾ.ಮಂತರ್ ಗೌಡ ಸಲಹೆ ಮಾಡಿದರು. ಕಾಫಿ ದಸರಾ ವಿಚಾರ ಸಂಕಿರಣದಲ್ಲಿ ವಿವಿಧ ತಜ್ಞರು, ವಿಜ್ಞಾನಿಗಳು, ಕೃಷಿಕರು ಪಾಲ್ಗೊಂಡು ಕಾಫಿ ಉತ್ತೇಜನ ಸಂಬಂಧಿಸಿದಂತೆ ಹಲವು ಅಭಿಪ್ರಾಯ, ಸಲಹೆ, ಮಾರ್ಗದರ್ಶನ ನೀಡಿದ್ದಾರೆ. ತಜ್ಞರ ಅಭಿಪ್ರಾಯವನ್ನು ಕ್ರೊಢೀಕರಿಸಿ ಕಾಫಿ ಬೆಳೆಯಲ್ಲಿ ಮತ್ತಷ್ಟು ಉತ್ತಮ ಇಳುವರಿ…
ಮಡಿಕೇರಿ ಅ.7 NEWS DESK : ಕಾರ್ಮಾಡು ಗ್ರಾ.ಪಂ ವ್ಯಾಪ್ತಿಯ ಶ್ರೀಕಾವಾಡಿ ಭಗವತಿ ದೇವಸ್ಥಾನದ ಸುತ್ತಮುತ್ತ ದೇವರಕಾಡು ಇದ್ದು, ಇದರಲ್ಲಿ ಒಂದು ಏಕರೆಯನ್ನು ಹಿಂದೂ ರುದ್ರಭೂಮಿಗಾಗಿ ನೋಂದಣಿ ಮಾಡಿಕೊಳ್ಳಲು ಕೊಡಗು ಜಿ.ಪಂ ಅನುಮತಿ ನೀಡಿರುವುದನ್ನು ತೀವ್ರವಾಗಿ ವಿರೋಧಿಸುವುದಾಗಿ ದೇವಸ್ಥಾನದ ಆಡಳಿತ ಮಂಡಳಿ, ಅಮ್ಮತ್ತಿ ರೈತ ಸಂಘ, ಅಖಿಲ ಕೊಡವ ಸಮಾಜ ಹಾಗೂ ಅಮ್ಮತ್ತಿ ಕೊಡವ ಸಮಾಜದ ಪದಾಧಿಕಾರಿಗಳು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮ್ಮತ್ತಿ ರೈತ ಸಂಘದ ಕಾನೂನು ಸಲಹೆಗಾರ ಬಿದ್ದಂಡ ಸಿ.ಸುಬ್ಬಯ್ಯ ಅವರು, ಕಾರ್ಮಾಡು ಪಂಚಾಯಿತಿ ವ್ಯಾಪ್ತಿಯ ಕುಂಬೇರಿ ಗ್ರಾಮದಲ್ಲಿ ಹಿಂದೂ ಸ್ಮಶಾನಕ್ಕೆಂದು 1.70 ಏಕರೆ ಜಾಗವಿದ್ದರೂ ದೇವರಕಾಡಿನಲ್ಲಿ ಮತ್ತೆ ಸ್ಮಶಾನಕ್ಕೆ ಜಾಗ ನೀಡಿರುವುದನ್ನು ಎಲ್ಲರೂ ವಿರೋಧಿಸುತ್ತೇವೆ. ಸಿಇಓ ಅವರು ನೀಡಿದ ಅನುಮತಿಯನ್ನು ತಕ್ಷಣ ಹಿಂಪಡೆದು ದೇವರಕಾಡನ್ನು ಹಾಗೆಯೇ ಉಳಿಸಲು ಕ್ರಮ ಕೈಗೊಳ್ಳಬೇಕು ಎಂದರು. ಕೊಡಗಿನ ಎಲ್ಲಾ ಊರು ಊರಿನಲ್ಲಿರುವ ದೇವಸ್ಥಾನಗಳಿಗೆ ದೇವರ ಕಾಡು ಇದ್ದು, ಅದನ್ನು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಊರಿನವರು ಪುರಾತನ ಕಾಲದಿಂದಲೂ ಪೋಷಿಸಿ, ಸಂರಕ್ಷಿಸಿ…
ಮಡಿಕೇರಿ ಅ.7 NEWS DESK : ಮಡಿಕೇರಿ ನಗರ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಅ.8 ರಂದು 7 ನೇ ವಷ೯ದ ಮಹಿಳಾ ದಸರಾ ಆಯೋಜಿಸಲಾಗಿದ್ದು, ವೈವಿಧ್ಯಮಯ ಸ್ಪಧೆ೯ಗಳನ್ನು ಜಿಲ್ಲೆಯ ಮಹಿಳೆಯರಿಗಾಗಿ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ ಮತ್ತು ಮಹಿಳಾ ದಸರಾ ಸಂಚಾಲಕಿ ಕುಡೆಕಲ್ ಸವಿತಾ ಸಂತೋಷ್ ತಿಳಿಸಿದ್ದಾರೆ. ಮಹಿಳಾ ದಸರಾ ಅಂಗವಾಗಿ ಮಡಿಕೇರಿ ನಗರಸಭೆಯ ಸದಸ್ಯೆಯರು, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೖದ್ದಿ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಮಹಿಳೆಯರಿಗಾಗಿಯೇ ವೈವಿಧ್ಯಮಯ ಸ್ಪಧೆ೯ಗಳು, ಕಾಯ೯ಕ್ರಮಗಳು ನಗರದ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಆಯೋಜಿತವಾಗಿದೆ. 18 ವರ್ಷ ಮೇಲ್ಪಟ್ಟ ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಮೆಹಂದಿ ಹಾಕುವ ಸ್ಪರ್ಧೆ, ಭಾರತೀಯ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ಒಂಟಿ ಕಾಲಿನ ಓಟ, ಕಪ್ಪೆ ಜಿಗಿತ, ಕೇಶವಿನ್ಯಾಸ, ಗಾರ್ಭ ನೃತ್ಯ, ಸೀರೆಗೆ ನಿಖರ ಬೆಲೆ ಹೇಳುವ ಸ್ಪರ್ಧೆ, 60 ವರ್ಷ ಮೇಲ್ಪಟ್ಟವರಿಗೆ ಅಜ್ಜಿ ಜೊತೆ ಮೊಮಕ್ಕಳ ನಡಿಗೆ, ವಾಲಗ ನೃತ್ಯ, ಕಣ್ಣಿಗೆ ಬಟ್ಟೆ ಕಟ್ಟಿ…
ಸುಂಟಿಕೊಪ್ಪ ಅ.7 NEWS DESK : ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಂತರ ಸೋಮವಾರಪೇಟೆ ತಾಲೂಕಿನ ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಕೆ.ಎಸ್.ಕಾರ್ಯಪ್ಪ (76) ಅವರು ಮುಂಜಾನೆ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ಅ.8 ರಂದು ವಿರಾಜಪೇಟೆ ತಾಲೂಕಿನ ಹಾತೂರಿನಲ್ಲಿ ನಡೆಯಲಿದೆ. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ನಿವೃತ್ತ ಶಿಕ್ಷಕ ಕೆ.ಎಸ್.ಕಾರ್ಯಪ್ಪ ಆಗಲಿಕೆಗೆ ಸರ್ಕಾರಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.
ವಿರಾಜಪೇಟೆ ಅ.7 NEWS DESK : ಮಾನವೀಯತೆಗಿಂತ ಮಿಗಿಲಾದ ನೈತಿಕತೆ ಬೇರೆ ಇಲ್ಲ ಎಂದು ಮಂಗಳೂರಿನ ಸಾಮಾಜಿಕ ಕಾರ್ಯಕರ್ತೆ ಲುಬ್ನಾ ಝಕಿಯಾ ಹೇಳಿದ್ದಾರೆ. ವಿರಾಜಪೇಟೆ ಸಮೀಪದ ಅರಮೇರಿ ಶ್ರೀ ಕಳಂಚೇರಿ ಮಠದಲ್ಲಿ ಮಾಸಿಕ ತತ್ವ ಚಿಂತನ ಗೋಷ್ಠಿ ಹೊಂಬೆಳಕಿನ 224ನೇಯ ಕಿರಣ ಕಾರ್ಯಕ್ರಮದಲ್ಲಿ “ನೈತಿಕತೆಯೇ ಸ್ವಾತಂತ್ರ್ಯದ ಭರವಸೆ” ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾಜದಲ್ಲಿ ಅನೈತಿಕತೆಗೆ ಕಾರಣವಾಗುವ ಎಲ್ಲಾ ಹಾದಿಗಳಿಗೆ ಕಡಿವಾಣ ಹಾಕಲು ಕಾನೂನು ನಿರ್ಮಾಣ ಆಗಬೇಕು. ಮಾನವ ನಿರ್ಮಿತ ಕಾನೂನುಗಳಿಗಿಂತ ದೇವ ನಿರ್ಮಿತ ಕಾನೂನುಗಳು ಕೆಡುಕುಗಳನ್ನು ತಡೆಯುತ್ತವೆ. ಮನುಷ್ಯ ತಾನೊಬ್ಬ ಉತ್ತರದಾಯಿತ್ವವಿರುವ ಪ್ರಜೆ ಎಂಬುದನ್ನು ಮರೆತು ಬಿಟ್ಟಿರುವುದು ಕೆಡುಕುಗಳಿಗೆ ಕಾರಣವಾಗಿದೆ. ಹೊಣೆಗಾರಿಕೆಯಿಂದ ಜಾರುವ ಮನೋಧರ್ಮ ಇಂದಿನ ಪೀಳಿಗೆಯ ಮುಖಮುದ್ರಯೆನಿಸಿಬಿಟ್ಟಿದೆ. ಇಂದು ವಿಶ್ವವು ನೈತಿಕ ದಿವಾಳಿತನವನ್ನು ಅತಿಯಾಗಿ ಎದುರಿಸುತ್ತಿದೆ. ಆಧುನಿಕತೆಯು ಪ್ರಗತಿಪರ ಎಂಬ ವಾದದೊಂದಿಗೆ ನೈತಿಕತೆಯ ಎಲ್ಲೆಗಳನ್ನು ಮೀರಲಾಗುತ್ತಿದೆ” ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆÉಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯೆ ಡಾ.ಹೆಚ್.ಎಂ.ಕಾವೇರಿ “ನೈತಿಕತೆ…
ಮಡಿಕೇರಿ ಅ.7 NEWS DESK : ಬಲ್ಲಮಾವಟಿಯ ನಾಲ್‍ನಾಡ್ ಹಾಕಿ ಕ್ಲಬ್ ವತಿಯಿಂದ ಅ.29 ರಿಂದ ನ.2ರವರೆಗೆ ನಾಲ್‍ನಾಡ್ ವ್ಯಾಪ್ತಿಯ ಅಂತರ ಗ್ರಾಮ ಹಾಕಿ ಪಂದ್ಯಾವಳಿ ಮತ್ತು ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾವಳಿ ನಡೆಯಲಿದೆ ಎಂದು ಕ್ಲಬ್ ನ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೇ ತಿಂಗಳಿನಲ್ಲಿ ನಡೆಯಬೇಕಿದ್ದ ಈ ಪಂದ್ಯಾವಳಿಯನ್ನು ಮಳೆಯ ಕಾರಣದಿಂದ ಮುಂದೂಡಲಾಗಿತ್ತು. ಇದೀಗ ಬಲ್ಲಮವಾಟಿಯ ನೇತಾಜಿ ವಿದ್ಯಾಸಂಸ್ಥೆಯ ಆಟದ ಮೈದಾನದಲ್ಲಿ ಕ್ರೀಡಾಕೂಟ ನಡೆಯಲಿದೆ ಎಂದರು. ಹಾಕಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದ್ದು, ನಾಲ್‍ನಾಡ್ ವ್ಯಾಪ್ತಿಯ 16 ತಂಡಗಳು ಭಾಗವಹಿಸಲಿವೆ. ಮುಂದಿನ ದಿನಗಳಲ್ಲಿ ಶಾಲೆಯ ಬೇಸಿಗೆ ರಜೆಯ ದಿನಗಳಲ್ಲಿ ಕಿರಿಯ ಮಕ್ಕಳಿಗೆ ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುವುದೆಂದು ತಿಳಿಸಿದರು. ಕಾರ್ಯದರ್ಶಿ ಚಂಗೇಟಿರ ಸೋಮಣ್ಣ ಮಾತನಾಡಿ, ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಈ ಪಂದ್ಯಾವಳಿಯ ಪ್ರಯೋಜಕರಾಗಿದ್ದು, ಹಾಕಿ ಪಂದ್ಯಾವಳಿಯ ಪ್ರಥಮ ಸ್ಥಾನದ ಟ್ರೋಫಿಯನ್ನು ನೆಲಜಿ ಗ್ರಾಮದ ಮಾಳೆಯಂಡ ದಿ.ಲಲಿತ ಚೋಂದವ್ವ ಜ್ಞಾಪಕಾರ್ಥವಾಗಿ ಅವರ…
ಮಡಿಕೇರಿ ಅ.7 NEWS DESK : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮೃಸೂರು ಜಗನ್‍ಮೋಹನ ಅರಮನೆಯಲ್ಲಿ ನಡೆಯುತ್ತಿರುವ ಪಂಚ ಕವಿ ಗೋಷ್ಠಿಗೆ ಕೊಡವ ಭಾಷೆಯ ಕವಿಯಾಗಿ ಮುಲ್ಲೇಂಗಡ ಮಧೋಷ್ ಪೂವಯ್ಯ ಭಾಗವಹಿಸಲಿದ್ದಾರೆ. ಅ.8 ರಂದು ನಡೆಯಲಿರುವ ನಾಲ್ಕನೇ ದಿನದ ಸಮಷ್ಟಿ ಬಹುಭಾಷಾ ಕವಿಗೋಷ್ಠಿಯಲ್ಲಿ ಮದೋಷ್ ಪೂವಯ್ಯ ಕೊಡವ ಭಾಷೆಯನ್ನು ಪತಿನಿಧಿಸುತ್ತಿದ್ದಾರೆ.






