*ಸಿದ್ದಾಪುರ ಅ.4 : ನವಪಲ್ಲವ ಸಾಹಿತ್ಯ ವೇದಿಕೆ ಹಾಗೂ ಕೆ.ಪಿ.ಎಸ್ ನೆಲ್ಯಹುದಿಕೇರಿ ಇದರ ಸಂಯುಕ್ತ ಆಶ್ರಯದಲ್ಲಿ ಜಯಲಕ್ಷ್ಮಿ ಎಂ.ಬಿ ಅವರ “ಸಾಂಚವ್ಯ” ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಅ.5ರಂದು ನೆಲ್ಯಹುದಿಕೇರಿಯ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಲಿದೆ. ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ನ ಪ್ರಾಂಶುಪಾಲರಾದ ಡಾ.ಕೋರನ ಸರಸ್ವತಿ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಅವರು ಪುಸ್ತಕ ಬಿಡುಗಡೆ ಮಾಡಲಿದ್ದು, ಜನಶಕ್ತಿ ವಾರಪತ್ರಿಕೆಯ ಸಂಪಾದಕ ಡಾ.ಎಸ್.ವೈ.ಗುರುಶಾಂತ ಪುಸ್ತಕ ಪರಿಚಯ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಗೋಣಿಕೊಪ್ಪಲು ಕಾಪ್ಸ್ ಶಾಲೆಯ ಪ್ರೊ.ಎಂ.ಡಿ.ನAಜುAಡ, ಗ್ಯಾರಂಟಿ ಅನುಷ್ಠಾನ ಸಮಿತಿಯ ಕುಶಾಲನಗರ ಅಧ್ಯಕ್ಷ ವಿ.ಪಿ.ಶಶಿಧರ್ ಪಾಲ್ಗೊಳ್ಳಲಿದ್ದಾರೆ.
ಲೇಖಕ: admin
ಮಡಿಕೇರಿ ಅ.4 NEWS DESK : ಕೊಡಗಿನ ಸುಂದರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರಯತ್ನದೊಂದಿಗೆ ದಸರಾ ಸಮಿತಿಗಳು ಅಧಿಕ ಶಬ್ಧದಿಂದ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಡಿಜೆ ಅಬ್ಬರಕ್ಕೆ ಸ್ವಯಂ ಕಡಿವಾಣ ಹಾಕಿಕೊಳ್ಳಬೇಕು ಮತ್ತು ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಮನವಿ ಮಾಡಿದ್ದಾರೆ. ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾ ಭವನದಲ್ಲಿ ನಡೆದ “ಸಂವಾದ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಬ್ಬರದ ಡಿಜೆ ಸಂಗೀತ ಯಾವುದೇ ಭಾಗಕ್ಕೆ ತೆರಳಿದರು ನಿಮಗೆ ಕಾಣಸಿಗುತ್ತದೆ. ಆದರೆ ಹಿರಿಯರಿಂದ ಬಳುವಳಿಯಾಗಿ ಬಂದ ಕೊಡಗಿನ ಸಂಸ್ಕೃತಿಯನ್ನು ನಾವು ಇಲ್ಲೆ ಕಾಣಲು ಸಾಧ್ಯವೆನ್ನುವುದನ್ನು ಅರ್ಥೈಸಿಕೊಂಡು, ಡಿಜೆ ಬದಲಾಗಿ ಇಲ್ಲಿನ ಸಂಸ್ಕೃತಿ ಮತ್ತು ವಾಲಗಕ್ಕೆ ಹೆಚ್ಚಿನ ಒತ್ತು ನೀಡುವಂತೆ ಕರೆ ನೀಡಿದರು. ಲೋಕಸಭೆ, ರಾಜ್ಯಸಭೆಗಳಲ್ಲಿ ಅಂಗೀಕಾರವಾಗಿ ಬಂದ ಶಬ್ಧ ಮಾಲಿನ್ಯ ನಿಯಂತ್ರಣ ಕಾನೂನು ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಿದ ಕಾನೂನೇ ಆಗಿದೆ. ಕಾನೂನು ಎನ್ನುವುದು “ಶಿಕ್ಷೆ” ನೀಡುವುದಕ್ಕೆ ಇರುವುದಲ್ಲ, ಬದಲಾಗಿ ತಪ್ಪುಗಳು ನಡೆಯದಂತೆ ನೋಡಿಕೊಳ್ಳುವುದಕ್ಕಾಗಿ…
ಮಡಿಕೇರಿ ಅ.4 NEWS DESK : ಸಿಬಿಎಸ್‍ಇ ದಕ್ಷಿಣ ವಲಯದ ಹಾಕಿ ಪಂದ್ಯಾವಳಿಗೆ ನಗರದ ಕೊಡಗು ವಿದ್ಯಾಲಯದ ಮೈದಾನದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು. ಪಂದ್ಯಾವಳಿಯಲ್ಲಿ ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿನ ಸಿಬಿಎಸ್‍ಇ 22 ಶಿಕ್ಷಣ ಸಂಸ್ಥೆಗಳ 36 ತಂಡದ 700 ಆಟಗಾರರು ಪಾಲ್ಗೊಂಡಿದ್ದಾರೆ. ಆಟಗಾರರನ್ನು ಆರತಿಯೊಂದಿಗೆ, ಹಣೆಗೆ ತಿಲಕವನ್ನಿಟ್ಟು, ಸಾಂಪ್ರದಾಯಿಕ ಕೊಡವ ವಾಲಗದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ರಾಷ್ಟ್ರೀಯ ಮಟ್ಟದ ಮಾಜಿ ಬಾಸ್ಕೆಟ್ ಬಾಲ್ ಆಟಗಾರ್ತಿ ಹಾಗೂ ಎಫ್‍ಎಂಕೆಎಂಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಪುಷ್ಪ ಕುಟ್ಟಣ್ಣ, ಸಿಬಿಎಸ್‍ಇ ಪರಿವೀಕ್ಷಕ ಅಫ್ಸರ್ ಅಹಮದ್ ಮತ್ತು ಶಾಲಾ ಕ್ರೀಡಾಧ್ಯಕ್ಷರಾದ ರಘು ಮಾದಪ್ಪ ಅವರನ್ನು ಒಳಗೊಂಡಂತೆ ಶಾಲಾ ಮುಖ್ಯಸ್ಥರು ಸಿಬಿಎಸ್‍ಇ ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಕ್ರೀಡಾ ಜ್ಯೋತಿ ಜ್ವಲನ : ಉದ್ಘಾಟನಾ ಸಮಾರಂಭದಲ್ಲಿ ಪಂದ್ಯಾವಳಿಯಲ್ಲಿ ಪಾಲ್ಗೊಂಡ ವಿವಿಧ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪರ್ಲಿನ್ ಪೊನ್ನಮ್ಮ ಅವರು ಮೈದಾನಕ್ಕೆ ತಂದ ಕ್ರೀಡಾ ಜ್ಯೋತಿಯನ್ನು…
ಮಡಿಕೇರಿ ಅ.4 NEWS DESK : ಬೇರ್ ನಾ ನೋಡಿದ ಕೊಡವ ಸಿನಿಮಾದಲ್ಲಿ ಅಪರೂಪದ ಸಿನಿಮಾ. ಕೊಡವ ಸಿನೆಮಾ ಅಂದರೆ ಇಂದು ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರ ಹೆಸರು ಟ್ಯಾಗ್ ಆಗುವುದು ಸಾಮಾನ್ಯವಾಗಿ ಹೋಗಿದೆ. ಬೇರ್ ಒಂದು ಕೌಟುಂಬಿಕ ಸಂಬಂಧ ಗಳ/ವಿಷೇಶವಾಗಿ ಅಪ್ಪ ಮಗಳ ಸಂಬಂಧ ದ ಸುತ್ತ ಹೆಣೆದ ಕಥೆ. ಇಡೀ ಸಿನಿಮಾ ನಿರೀಕ್ಷೆ ಗಳು ಹುಸಿಯಾದಾಗ ಆಗುವ ನೋವು, ಮಾನಸಿಕವಾಗಿ ಬದುಕನ್ನೇ ಹೇಗೆಲ್ಲ ಜರ್ಜರಿತ ಗೊಳಿಸುತ್ತದೆ ಎಂಬುದನ್ನ “ಬೇರ್” ತಿಳಿಸಿ ಕೊಡುತ್ತದೆ. ತೆಳಂಗ್ ನೀರ್ (ಗೋಪಿ ಪೀಣ್ಯ ರ) ಸಿನಿಮಾದ ನಂತರ ಕೊಡವ ಭಾಷೆಯಲ್ಲಿ ಅತ್ಯಂತ ವಿಭಿನ್ನ ವಾಗಿ ಮೂಡಿಬಂದಿರುವ ಸಿನಿಮಾ ಎಂದು ಹೆಮ್ಮೆಯಿಂದ ಹೇಳುವೆ. ಬೇರ್ ತಾಂತ್ರಿಕವಾಗಿ ಕೂಡಾ ತಾಂತ್ರಿಕ ತೆಯನ್ನ ಚೆನ್ನಾಗಿ ಬಳಸಿಕೊಂಡು ಕೊಡವ ಭಾಷಾ ಸಿನಿಮಾಗೆ ಹೊಸ ಭಾಷ್ಯವನ್ನು ಬರೆದಿದೆ. ಸಿನಿಮಾದ ನಿರ್ದೇಶಕರು ಪ್ರತೀ ಫ್ರೇಮ್ ನಲ್ಲೂ ಆಶಕ್ತಿಯನ್ನ ಬಹಳ ಶ್ರದ್ಧೆಯಿಂದ ಹೋಮ್ ಮಾಡಿರುವುದು ಅವರ ಇದುವರೆಗಿನ ಅನುಭವವನ್ನು ದಾರೆಎರೆದಿರುವುದನ್ನ ಪ್ರೇಕ್ಷಕರು “ಬೇರ್” ನಲ್ಲಿ…
ಮಡಿಕೇರಿ ಅ.4 NEWS DESK : ಜಿಲ್ಲೆಯಾದ್ಯಂತ ಸ್ವಚ್ಛತೆಯೇ ಸೇವೆ (ಸ್ವಚ್ಛತಾ ಹೀ ಸೇವಾ ) ಪಾಕ್ಷಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಕೊಡಗು ಜಿಲ್ಲಾ ಪಂಚಾಯತ್ ನ ಉಪಕಾರ್ಯದರ್ಶಿ ಜಿ.ಧನರಾಜು ತಿಳಿಸಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಶಂಸನಾ ಪತ್ರ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆಯಂತೆ ಸ್ವಚ್ಛತೆಯೇ ಸೇವೆ ಪಾಕ್ಷಿಕ ಅಭಿಯಾನವನ್ನು ಸೆ.17 ರಿಂದ ಅ.2 ರ ವರೆಗೆ ಜಿಲ್ಲೆಯ 102 ಗ್ರಾಮ ಪಂಚಾಯಿತಿಗಳಲ್ಲಿಯೂ ಉತ್ತಮ ಮತ್ತು ವಿಭಿನ್ನವಾಗಿ ಹಮ್ಮಿಕೊಳ್ಳಲಾಗಿದೆ ಎಂದರು. ಅಭಿಯಾನದ ಭಾಗವಾಗಿ ಶ್ರಮದಾನ, ಶಾಲಾ ಮಕ್ಕಳಿಗೆ ರಸಪ್ರಶ್ನೆ, ಚಿತ್ರಕಲಾ ಸ್ಪರ್ಧೆ, ಮಹಿಳಾ ಸಂಘದ ಸದಸ್ಯರಿಗೆ ರಂಗೋಲಿ ಸೇರಿದಂತೆ ವಿವಿಧ ಚಟುವಟಿಕೆಗಳನ್ನು 15 ದಿನಗಳ ಕಾಲ ಹಮ್ಮಿಕೊಂಡು ಸ್ವಚ್ಛತೆಯ ಸಂದೇಶವನ್ನು ಸಾರಲಾಗಿದೆ. ಸೆಪ್ಟಂಬರ್ 27 ರಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಪ್ರವಾಶಿ ಸ್ಥಳಗಳಲ್ಲಿ ಸ್ವಚ್ಛತಾ ಆಂದೋಲನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. 102 ಗ್ರಾ.ಪಂ.ಗಳ…
ಮಡಿಕೇರಿ ಅ.4 NEWS DESK : ಕೊಡಗು ಮಾನವ ಬಂಧುತ್ವ ವೇದಿಕೆ, ಕೊಡಗು ಜಿಲ್ಲಾ ಸಂಚಾಲನಾ ಸಮಿತಿ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ “ಮಾನವೀಯತೆಯೇ ಧರ್ಮ – ಸಂವಿಧಾನವೇ ಧರ್ಮ ಗ್ರಂಥ” ಎಂಬ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ನಗರದ ಪತ್ರಿಕಾ ಭವನದಲ್ಲಿ ಭಾರತೀಯ ದಂಡ ಸಂಹಿತೆ ಸಂವಾದ ಮತ್ತು ಅವಲೋಕನ ಕಾರ್ಯಕ್ರಮವನ್ನು ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‍ದಾಸ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ದೇಶದ ಕಾನೂನಿನಲ್ಲಿ ಬದಲಾವಣೆಗಳಾಗಿವೆ. ಕಳೆದ 75ವರ್ಷಗಳಲ್ಲಿ ಸಂವಿಧಾನಕ್ಕೆ 105 ಬಾರಿ ತಿದ್ದುಪಡಿ ತರಲಾಗಿದೆ. ಕಾಲಕಾಲಕ್ಕೆ ಬದಲಾಗುತ್ತಿರುವ ಸಮಾಜದೊಂದಿಗೆ ಸಂವಿಧಾನವೂ ಬದಲಾಗಿ ಇಂದಿನ ಸಮಾಜಕ್ಕೆ ಪ್ರಸ್ತುತವಾದ ಸಂವಿಧಾನ ಇರಿಸಿಕೊಳ್ಳುವಂತಾಗಿದೆ. ಸಂವಿಧಾನದ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲಾ ಒಟ್ಟು ಪ್ರಕ್ರಿಯೆಯನ್ನು ಕಾನೂನು ಪರಿಷ್ಕರಣೆ ಎನ್ನಲಾಗುತ್ತದೆ. ಯಾವುದೇ ಕಾನೂನು ತಿದ್ದುಪಡಿಯಾದರು ಅದು ಸಂವಿಧಾನದ ಮೂಲತತ್ವಗಳಿಗೆ ವಿರುದ್ಧವಾಗಿರಬಾರದು ಎಂದರು. ವಕೀಲ ಹಾಗೂ ವೇದಿಕೆಯ ಸಂಚಾಲಕ ಕೆ.ಆರ್.ವಿದ್ಯಾಧರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನಶಕ್ತಿ ವಾರಪತ್ರಿಕೆಯ ಸಂಪಾದಕ ಡಾ.ಎಸ್.ವೈ.ಗುರುಶಾಂತ್, ಪ್ರಮುಖರಾದ ಚಂದ್ರಮೌಳಿ,…
ಸೋಮವಾರಪೇಟೆ ಅ.4 NEWS DESK : ಗಾಂಧಿಜಯಂತಿ ಅಂಗವಾಗಿ ಡಾಲ್ಫಿನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ ಸಂದರ್ಭ ಡಾ.ಶಿವಪ್ರಸಾದ ಕ್ಲಬ್ ನ ಅಧ್ಯಕ್ಷ ಹೆಚ್.ಆರ್.ಅಶೋಕ್, ಕಾರ್ಯದರ್ಶಿ ಪ್ರಕಾಶ್, ಖಜಾಂಚಿ ಪ್ರಸನ್ನ , ಪ್ರಮುಖರಾದ ಬಿ.ಆರ್.ಮಹೇಶ್, ಕೆ.ಪಿ.ರಾಯ್, ಗಿರೀಶ್, ಮಂಜುನಾಥ್, ರಂಜು ಮಹೇಶ್, ವಿನಾಯಕ ಪಾಲ್ಗೊಂಡಿದ್ದರು.
ಮಡಿಕೇರಿ ಅ.4 NEWS DESK : ಅರವತೋಕ್ಲು ಸರ್ವದೈವತಾ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಸೋಮವಾರಪೇಟೆ ಜ್ಞಾನ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಗೋವಿಂದ್ ಸಿಂಗ್ ರಜಪೂತ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಇವನು ಸೋಮವಾರಪೇಟೆ ಪಟ್ಟಣದ ಭವಾನಿ ಎಲೆಕ್ಟ್ರಿಕಲ್ಸ್ ಮತ್ತು ಹಾರ್ಡ್‍ವೇರ್ ಅಂಗಡಿಯ ಮಾಲಿಕರಾದ ಭೈರುಸಿಂಗ್ ಮತ್ತು ಸೋಹನ್ ಕನ್ವರ್ ದಂಪತಿಯ ಪುತ್ರ.
ವಿರಾಜಪೇಟೆ ಅ.4 NEWS DESK : ಹುದಿಕೇರಿಯ ಜನತಾ ಪ್ರೌಢಶಾಲೆಯಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ 14-17 ರ ವಯೋಮಿತಿಯ ಕ್ರೀಡಾಕೂಟದಲ್ಲಿ ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆ ವಿದ್ಯಾರ್ಥಿಗಳು 4*100 ರಿಲೇ ಓಟದಲ್ಲಿ ಸ್ಪರ್ಧಿಸಿ ದ್ವಿತೀಯ ಸ್ಥಾನವನ್ನು ಗಳಿಸಿದರು. ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಾದ ಲೋಹಿತ್ ವಿ, ಕಾರ್ತಿಕ್ ಸಿ,ಆರ್, ಲಿಶನ್ ಕೆ.ಪಿ ಹಾಗೂ ಪ್ರಥನ್ ಎಂ., ಹಾಗೆಯೇ ಬಾಲಕರ ವಿಭಾಗದ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಮತ್ತು 200ಮೀ, 100 ಮೀಟರ್ ಓಟದಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನವನ್ನು ಪಡೆದು ವೈಯಕ್ತಿಕ ಚಾಂಪಿಯನ್ ಆಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಯ ಪ್ರಾಂಶುಪಾಲರಾದ ಪ್ರಶಾಂತ್ ಕುಮಾರ್ ಪಾಂಡೆ, ಉಪ ಪ್ರಾಂಶುಪಾಲರಾದ ದೀಪ ಮೌಳ್, ದೈಹಿಕ ಶಿಕ್ಷಣ ಶಿಕ್ಷರಾದ ಗಂಗಾಧರ ಮಾಗಳ್ದ, ತಂಡದ ವ್ಯವಸ್ಥಾಪಕರಾದ ಎಂ.ಕೆ.ಪುರಂದರ್ ಹಾಗೂ ಶಾಲಾ ಸಿಬ್ಬಂದಿಗಳು ಇದ್ದರು.
ಮಡಿಕೇರಿ ಅ.4 NEWS DESK : ಎನ್‌ಎಸ್‌ಯುಐ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಭಾರತದ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ದಿನಾಚರಣೆ ಎಂಬ ವಿಷಯದ ಕುರಿತು ನಡೆದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನೂರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಥಮ ಬಹುಮಾನವನ್ನು ಮಡಿಕೇರಿಯ ಸಂತ ಜೋಸೆಫ್ ಕಾಲೇಜಿನ ವಿದ್ಯಾರ್ಥಿನಿ ಕೆ.ಜಿ.ಸಾಹಿತ್ಯ ಪಡೆದುಕೊಂಡರು. ಸೋಮವಾರಪೇಟೆಯ ಸಂತ ಮೈಕಲ್ ಕಾಲೇಜಿನ ವಿದ್ಯಾರ್ಥಿನಿ ಅಹಲ್ಯ ಹೆಚ್.ಶೆಟ್ಟಿ ದ್ವಿತೀಯ, ಕೊಟ್ಟಮುಡಿ ಮರ್ಕಜುಲ್ ಹಿದಾಯ ಕಾಲೇಜಿನ ಸಹದತ್ ಇಸ್ಮಾಯಿಲ್ ತೃತೀಯ ಸ್ಥಾನ ಪಡೆದುಕೊಂಡರು. ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜಿಗೆ ತೆರಳಿ ಬಹುಮಾನ ವಿತರಿಸಲಾಯಿತು. ಲೇಖಕ ಹಾಗೂ ಸಾಹಿತಿ ಸಾಹಿತ್ಯ ನಂದಾವರ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಈ ಸಂದರ್ಭ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಅಬ್ದುಲ್ ರಾಶಿದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತಾಪ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಕಾಲೇಜಿನ ಪ್ರಾಂಶುಪಾಲರಾದ ಜೋಸೆಫ್, ಕಾಲೇಜಿನ ಪ್ರಾಂಶುಪಾಲರಾದ ನೂರಾನಿ ಉಸ್ತಾದ್, ವಿವಿಧ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.






