ಲೇಖಕ: admin

ಮಡಿಕೇರಿ NEWS DESK ನ.26 : ದೇಶದ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿರುವುದನ್ನು ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ನ ವಿರಾಜಪೇಟೆ ಘಟಕ ತೀವ್ರವಾಗಿ ಖಂಡಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಅಸೋಸಿಯೇಷನ್ ನ ವಿರಾಜಪೇಟೆ ಅಧ್ಯಕ್ಷ ಅಂತೋಣಿ ರಾಬಿನ್, ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ, ಪ್ರಧಾನ ಕಾರ್ಯದರ್ಶಿ ಜ್ಯೂಡಿ ವಾಸ್ ಹಾಗೂ ಸಂಚಾಲಕ ಜಾನ್ಸನ್, ಇಬ್ಬರು ಮಹಾನ್ ಸೇನಾಧಿಕಾರಿಗಳು ಭಾರತೀಯ ಸೇನೆಗೆ ನೀಡಿದ ಕೊಡುಗೆಯನ್ನು ಮತ್ತು ರಕ್ಷಣಾ ಪಡೆಯಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸದೆ ಅಗೌರವ ತೋರಿರುವ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ದೇಶಭಕ್ತಿ ಮತ್ತು ಶಿಸ್ತಿಗೆ ಹೆಸರುವಾಸಿಯಾದ ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಅವಹೇಳನ ಸೇನಾ ಘನತೆಗೆ ದಕ್ಕೆ ತಂದಿದೆ. ಇದೊಂದು ಪ್ರಚೋದನಾಕಾರಿ ಹೇಳಿಕೆಯಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್…

Read More

ಮಡಿಕೇರಿ NEWS DESK  ನ.26 : ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಬಳಸಿ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಅವಹೇಳನ ಮಾಡಿರುವ ವ್ಯಕ್ತಿಯ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಅರ್ಚಕರ ಸಂಘ ಪೊನ್ನಂಪೇಟೆ ಠಾಣೆಯಲ್ಲಿ ದೂರು ದಾಖಲಿಸಿದೆ. ನಕಲಿ ಖಾತೆಯಲ್ಲಿ ಬಳಸಿರುವ ಹೆಸರು ಬ್ರಾಹ್ಮಣ ಸಮಾಜಕ್ಕೆ ಕಳಂಕ ತರುವ ಉದ್ದೇಶದಿಂದ ಕೂಡಿದ್ದು, ಇದನ್ನು ಖಂಡಿಸುವುದಾಗಿ ಸಂಘದ ಪ್ರಮುಖರು ತಿಳಿಸಿದರು. ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ದೂರು ಸಲ್ಲಿಸುವ ಸಂದರ್ಭ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರು ಹಾಜರಿದ್ದರು.

Read More

ವಿರಾಜಪೇಟೆ ನ.26 NEWS DESK : ರಾಷ್ಟ್ರದ ಮೂಲಭೂತ ಕಾನೂನು ಆದ ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಸಂತ ಅನ್ನಮ್ಮ ಪದವಿ ಕಾಲೇಜಿನ ವ್ಯವಸ್ಥಾಪಕರು ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಮದಲೈ ಮುತ್ತು ಅಭಿಪ್ರಾಯಪಟ್ಟರು. ಪದವಿ ಕಾಲೇಜಿನ ಐಕ್ಯೂಎಸಿ ಘಟಕ, ಎನ್. ಎಸ್. ಎಸ್ ಘಟಕ ಹಾಗೂ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನಲ್ಲಿ ನಡೆದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ನಮ್ಮ ಸಂವಿಧಾನವು ನಮಗೆ ಅನೇಕ ಹಕ್ಕನ್ನು ನೀಡಿದ್ದು ಕರ್ತವ್ಯ ಪ್ರತಿಪಾದನೆಯು ಅತೀ ಮುಖ್ಯವಾಗಿದೆ. ಸ್ವತಂತ್ರ, ಸಮಾನತೆ, ಬ್ರಾತೃತ್ವ, ನ್ಯಾಯ ನಮ್ಮ ಸಂವಿಧಾನದ ಮೂಲ ಆಶಯಗಳಾಗಿದ್ದು ಸಂವಿಧಾನಕ್ಕೆ ಬದ್ಧರಾಗಿ ರಾಷ್ಟ್ರೀಯ ಐಕ್ಯತೆಯನ್ನು ಎತ್ತಿ ಹಿಡಿಯಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಂವಿಧಾನದ ಪೂರ್ವ ಪೀಠಿಕೆಯ ಪ್ರತಿಜ್ಞಾವಿಧಿಯನ್ನು ಭೋದಿಸಿದರು. ಪದವಿ ಕಾಲೇಜಿನ ಎನ್.ಎಸ್. ಎಸ್. ಅಧಿಕಾರಿಗಳಾದ ಬಿ.ಎನ್. ಶಾಂತಿಭೂಷಣ್  ಪ್ರಾಸ್ತಾವಿಕವಾಗಿ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ…

Read More

ಮಡಿಕೇರಿ ನ.26 NEWS DESK :  ವ್ಯಾಂಡಮ್ ಎಂಟರ್ ಪ್ರೈಸಸ್ ನ 29ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾದ ಪ್ರತಿ 2 ಸಾವಿರ ರೂಪಾಯಿಗಳ ಖರೀದಿಗೆ ನೀಡಲಾದ ಉಚಿತ ಕೂಪನ್ ಲಕ್ಕಿ ಡ್ರಾ ಸಮಾರಂಭ ಮಡಿಕೇರಿ ಬ್ರಾಹ್ಮಣರ ಬೀದಿಯ ಅಶ್ವಥ ಕಟ್ಟೆ ಬಳಿ ಇರುವ ವ್ಯಾಂಡಮ್ ಎಂಟರ್ ಪ್ರೈಸಸ್ ನಲ್ಲಿ ನಡೆಯಿತು. ಲಯನ್ಸ್ ಕ್ಲಬ್‌ನ ನಿಕಟ ಪೂರ್ವ ಪ್ರಾಂತೀಯ ಅಧ್ಯಕ್ಷ ಪಟ್ರಪಂಡ ಪಿ.ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ  ಕಾರ್ಯಕ್ರಮವನ್ನು ಮದೆನಾಡಿನ ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಸಿದ್ದರಾಜು ಉದ್ಘಾಟಿದರು. ಮಕ್ಕಂದೂರು ಪ್ರೌಢಶಾಲಾ ಶಿಕ್ಷಕರಾದ ಜಿ.ವನಜಾಕ್ಷಿ ದಾಮೋದರ್, ನ್ಯಾಯಾಂಗ ಇಲಾಖೆಯ ನಿವೃತ್ತ ಅಧಿಕಾರಿ ರವಿ ಕುಂಞಪ್ಪ, ಕೊಡಗು ಬ್ಲಡ್ ಡೋರ‍್ಸ್ ಸಂಸ್ಥೆಯ ಖಜಾಂಚಿ ಖಲೀಲ್ ಕ್ರಿಯೇಟಿವ್ ಹಾಗೂ ವ್ಯಾಂಡಮ್ ಎಂಟರ್ ಪ್ರೈಸಸ್‌ನ ಮಾಲೀಕರಾದ ಕೆ.ಕೆ.ದಾಮೋದರ್ ಹಾಜರಿದ್ದರು. ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತುಗಳ ಮಾರಾಟಕ್ಕೆ ಹೆಸರುವಾಸಿಯಾದ ವ್ಯಾಂಡಮ್ ಎಂಟರ್ ಪ್ರೈಸಸ್ ಕುರಿತು ಗಣ್ಯರು ಪ್ರಶಂಸೆ ವ್ಯಕ್ತಪಡಿಸಿದರು. ಉಚಿತ ಕೂಪನ್ ಲಕ್ಕಿ ಡ್ರಾದಲ್ಲಿ ಮೊದಲನೇ…

Read More

ಬೆಂಗಳೂರು ನ.26 NEWS DESK : ಸಂವಿಧಾನ ದಿನಾಚರಣೆ ಪ್ರಯುಕ್ತ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ‘ಸಂವಿಧಾನ ಸನ್ಮಾನ ಅಭಿಯಾನʼ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಉದ್ಘಾಟಿಸಿದರು. ಈ ಸಂದರ್ಭ  ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದ ಬಸವರಾಜ ಎಸ್.‌ ಬೊಮ್ಮಾಯಿ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ವಿಧಾನ ಪರಿಷತ್ ಸದಸ್ಯ ಎನ್.‌ ರವಿಕುಮಾರ್, ಬಿ.ಸಿ.‌ಪಾಟೀಲ್,  ಶಶಿಲ್ ಜಿ. ನಮೋಶಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ರಾಜ್ಯ ಕಾರ್ಯದರ್ಶಿಗಳು ಹಾಗೂ ಶಾಸಕ ಬಸವರಾಜ ಮತ್ತಿಮಡು, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷರಾದ ಸಿ.ಮಂಜುಳಾ, ಪ್ರಕೋಷ್ಠಗಳ ರಾಜ್ಯ ಸಂಚಾಲಕ ದತ್ತಾತ್ರಿ ಎಸ್, ರಾಜ್ಯ ಕಾರ್ಯದರ್ಶಿಗಳಾದ ಲಲಿತಾ ಆನಾಪುರ, ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ  ಉಮೇಶ್ ಕಾರಜೋಳ, ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ನಾಪೋಕ್ಲು ನ.25 NEWS DESK : ಭಾರತೀಯ ಸೇನೆಯ ಚಿನ್ನದ ಕಿರೀಟದಂತಿದ್ದ ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ವಕೀಲರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುರುವುದು ಶಿಕ್ಷಾರ್ಹ ಅಪರಾಧ ಎಂದು ನಾಪೋಕ್ಲು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೊಂಡೀರ ನಾಣಯ್ಯ ಹೇಳಿದರು. ಮಾಜಿ ಸೈನಿಕರ ಸಂಘದ ವತಿಯಿಂದ ನಾಪೋಕ್ಲು ಮಹಿಳಾ ಸಮಾಜದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಗರಿಕ ಸಮಾಜದಲ್ಲಿ ಈ ರೀತಿಯ ಬೆಳವಣಿಗೆ ಒಳ್ಳೆಯದಲ್ಲ. ದೇಶದ್ರೋಹಿಗಳನ್ನು ಪ್ರಚೋದಿಸುವ ಹೇಳಿಕೆ ನೀಡಿರುವುದನ್ನು ಮಾಜಿ ಸೈನಿಕರ ಸಂಘ ತೀವ್ರವಾಗಿ ಖಂಡಿಸುತ್ತದೆ. ಇವರನ್ನು ಸರ್ಕಾರ ಗಡಿಪಾರು ಮಾಡಿ ವಕೀಲ ವೃತ್ತಿಯಲ್ಲಿ ಮುಂದುವರಿಯದಂತೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷ ಅಪ್ಪುಮಣಿಯಂಡ ನಾಣಯ್ಯ, ಕಾರ್ಯದರ್ಶಿ ಕೇಟೋಳಿರ ಅಚ್ಚಪ್ಪ, ಖಜಾಂಚಿ ಕರೀಂ, ನಿರ್ದೇಶಕರಾದ ಪುಲ್ಲೇರ ಪಳಂಗಪ್ಪ, ಪಾಡಿಯಮ್ಮಂಡ ಅಪ್ಪಣ್ಣಮಯ್ಯ, ಅಮ್ಮಂಡ ಅಶೋಕ್ ಉಪಸ್ಥಿತರಿದ್ದರು. ವರದಿ :…

Read More

ಮಡಿಕೇರಿ ನ.26 NEWS DESK :  ಮಡಿಕೇರಿಯ ನೊಂದವರ ಬಾಳಿನ ಆಶಾಕಿರಣ ಹಾಗೂ ಫೈವ್ ಸ್ಟಾರ್ ಸಿಂಗರ್ಸ್ ತಂಡದ ವಾರ್ಷಿಕೋತ್ಸವದ ಪ್ರಯುಕ್ತ ಮಡಿಕೇರಿಯ 3 ಆಶ್ರಮಗಳ ನೊಂದ ಹಿರಿಯರಿಗೆ  ಅನ್ನದಾನ ಹಾಗೂ ಕ್ರೀಡಾ ಕೂಟ ನಡೆಯಿತು. ವಿಕಾಸ್ ಜನಸೇವಾ ಟ್ರಸ್ಟ್ ಆಶ್ರಮದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಕೆ.ಎಸ್.ರಮೇಶ್, ಅಮೀನ್ ಮೊಹಿಸಿನ್, ಮನ್ಸೂರ್ ಅಲಿ, ನಿವೃತ್ತ ಸೈನಿಕರಾದ ಮೇಜರ್ ಡೇವಿಡ್ ವೆಗಸ್ ಹಾಗೂ ವಿಕಾಸ್ ಟ್ರಸ್ಟ್ ನ ಕರಿಯಪ್ಪ,  ಸ್ನೇಹಜೀವಿ ನೊಂದವರ ಬಾಳಿನ ಆಶಾಕಿರಣದ ಅಧ್ಯಕ್ಷ ಜಿ.ಇ.ಸಿ, ಕಾರ್ಯದರ್ಶಿ ಎಂ.ಎ.ಅಬ್ದುಲ್ ರಜಾಕ್, ಖಜಾಂಚಿ ಶಿವಣ್ಣ, ಸ್ಟಾರ್ ಸಿಂಗರ್ಸ್ ನಾಭಾಷಾ ಹಬೀಬ್. ಗಾಯಕಿ ಮಮತಾ ಹಾಗೂ ಉಮಾ, ಮಡಿಕೇರಿಯ ಮೂಡ ಅಧ್ಯಕ್ಷರು ನಗರಸಭಾ ಸದಸ್ಯ ಬಿ.ವೈ.ರಾಜೇಶ್, ಸ್ನೇಹಜೀವಿ ತಂಡದ ತರಕಾರಿ ವ್ಯಾಪಾರಿ ಅಬ್ದುಲ್ ರಜಾಕ್, ಗಿಲ್ಬಾರ್ಟ್ ಜಿಯಾ, ಉದ್ಯಮಿ ಮಕ್ಬುಲ್ ಜನ ವಿಕಾಸ್ ಟ್ರಸ್ಟಿನ ಮಂಜುನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಕ್ರೀಡಾ ವಿಜೇತರಿಗೆ ಬಹುಮಾನ ಗಣ್ಯರು ಬಹುಮಾನ ವಿತರಿಸಿದರು.

Read More

ಮಡಿಕೇರಿ ನ.26 NEWS DESK : ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರುದ್ರ ಬೀಡು ಗ್ರಾಮದ ಬೆಳ್ಳಿ ಕಾಲೋನಿಯ 60 ಕುಟುಂಬಗಳಿಗೆ ರೂ.10 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿತು. ಮಾಯಮುಡಿ ಗ್ರಾ.ಪಂ ಅಧ್ಯಕ್ಷ ಟಾಟು ಮೊಣ್ಣಪ್ಪ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಮಾತನಾಡಿ ಬೆಳ್ಳಿ ಕಾಲೋನಿಯ 60 ಕುಟುಂಬಗಳಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಅನೂಕೂಲ ಮಾಡಿ ಕೊಟ್ಟಿರುವ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ  ಎ.ಎಸ್.ಪೊನ್ನಣ್ಣ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ವಲಯ ಅಧ್ಯಕ್ಷ  ಸಿ.ಕೆ.ಚಿಣ್ಣಪ್ಪ, ತಿಮ್ಮಯ್ಯ ಹಾಗೂ ಶಿವು ಉಪಸ್ಥಿತರಿದ್ದರು.

Read More

ಮಡಿಕೇರಿ ನ.26 NEWS DESK : ಇತಿಹಾಸ ಪ್ರಸಿದ್ಧ ಕುಂದಾ ಬೆಟ್ಟದಲ್ಲಿರುವ ಬೊಟ್ಲಪ್ಪ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಕಾರ್ತಿಕ ಪೂಜೆ ನಡೆಯಿತು.  ಕಾರ್ತಿಕ ಮಾಸದಲ್ಲಿ ನಾಲ್ಕು ಕಾರ್ತಿಕ ಸೋಮವಾರ ಇಲ್ಲಿ ವಿಶೇಷ ಪೂಜೆ ವರ್ಷಂಪ್ರತಿ ನಡೆಯುತ್ತಿದ್ದು, ಕೊನೆಯ ಕಾರ್ತಿಕ ಪೂಜೆಯ ದಿನವಾದ ಸೋಮವಾರ ಬೊಟ್ಟಿಯತ್ ನಾಡಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ವಿವಿಧ ಭಾಗಗಳಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಬೊಟ್ಟಿಯತ್ ನಾಡಿನ ಕುಂದಾ ಗ್ರಾಮದಲ್ಲಿರುವ ಕುಂದಾ ಬೆಟ್ಟದ ಮೇಲಿರುವ ಬೊಟ್ಲಪ್ಪ (ಈಶ್ವರ) ದೇವಸ್ಥಾನಕ್ಕೆ ಪಾಂಡವರ ಕಾಲದ ಇತಿಹಾಸವಿದ್ದು, ಕಲ್ಲಿನಲ್ಲಿ ನಿರ್ಮಿಸಲಾದ ಇಲ್ಲಿನ ದೇವಸ್ಥಾನವನ್ನು ಈ ಹಿಂದೆ ಪಾಂಡವರು ನಿರ್ಮಿಸಿದರು ಎಂಬ ಪ್ರತೀತಿಯಿದೆ. ಇಲ್ಲಿ ವರ್ಷಕ್ಕೆ ಎರಡು ಬಾರಿ ಮಾತ್ರ ವಿಶೇಷ ಪೂಜೆ ಜರುಗುತ್ತದೆ. ಕಾವೇರಿ ತೀರ್ಥೋದ್ಭವ ಮರು ದಿನ ಇಲ್ಲಿ ನಡೆಯುವ ಬೋಡ್ ನಮ್ಮೆ ಕೊಡಗಿನ ಮೊದಲ ಬೋಡ್ ನಮ್ಮೆಯಾಗಿ ಸಂಭ್ರಮದಿಂದ ಆಚರಿಸಲ್ಪಟರೆ, ನಂತರ ಕಾರ್ತಿಕ ಮಾಸದಲ್ಲಿ ನಡೆಯುವ ಕಾರ್ತಿಕ ಪೂಜೆ…

Read More

ಮಡಿಕೇರಿ ನ.26 NEWS DESK :  ಕುಶಾಲನಗರ ಕೊಡವ ಸಮಾಜದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ವಾ0ಚೀರ ಮನು ನಂಜುಡ ಆಯ್ಕೆಯಾಗಿದ್ದಾರೆ. ಕುಶಾಲನಗರದ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಾಂಚೀರ ಮನು ನಂಜುಂಡ ಅವರು 240 ಮತಗಳನ್ನು ಪಡೆದು ಜಯಶೀಲರಾಗಿರುತ್ತಾರೆ. ಕಾರ್ಯದರ್ಶಿಯಾಗಿ ಐಲಪಂಡ ಸಂಜು ಬೆಳ್ಳಿಯಪ್ಪ, ಜಂಟಿ ಕಾರ್ಯದರ್ಶಿಯಾಗಿ ಮೈಂದಪಂಡ ಜಗ್ಗು , ಜಯಶೀಲರಾಗಿದ್ದಾರೆ.  24 ಸದಸ್ಯರ ಆಡಳಿತ ಮಂಡಳಿಯಲ್ಲಿ ಉಳಿದ ಸದಸ್ಯರುಗಳನ್ನು ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಜಾಲಿ ತಿಮ್ಮಯ್ಯ ಮದಂಡ ಸಾಬು ಮೊಣ್ಣಪ್ಪ, ಪಟ್ಟಡ ಕೇಸು ಕಾರ್ಯನಿರ್ವಹಿಸಿದರು.

Read More