ಕುಶಾಲನಗರ ಅ.2 NEWS DESK : ಶ್ರೀ ಶಿರಡಿ ಸಾಯಿ ಟ್ರಸ್ಟ್ ಆಶ್ರಯದಲ್ಲಿ ಕುಶಾಲನಗರ ಸಾಯಿ ಬಾಬಾ ದೇವಾಲಯದಲ್ಲಿ ಅ.3 ರಿಂದ 12 ರ ವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ ಎಂದು ಟ್ರಸ್ಟ್ ಅಧ್ಯಕ್ಷ ಧರೇಶ್ ಬಾಬು ತಿಳಿಸಿದ್ದಾರೆ. ಕುಶಾಲನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು 3 ರಂದು ದೇವಾಲಯದಲ್ಲಿ ಅಲಂಕಾರ ಪೂಜಾ ಕಾರ್ಯಕ್ರಮ, 4 ರಂದು ಗಾಯತ್ರಿ ದೇವಿ ಪೂಜಾ ಕಾರ್ಯಕ್ರಮ, 5 ರಂದು ಅನ್ನಪೂರ್ಣ ದೇವಿ, 6 ರಂದು ಲಲಿತ ತ್ರಿಪುರ ಸುಂದರಿ ದೇವಿ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಅ.7 ರಂದು ಮಹಾ ಚಂಡಿಕಾ ದೇವಿ ಪೂಜಾ ಕಾರ್ಯಕ್ರಮ, 8 ರಂದು ಮಹಾಲಕ್ಷ್ಮಿ ದೇವಿ ವಿಶೇಷ ಪೂಜಾ ಕಾರ್ಯಕ್ರಮ, ಅ.9 ರಂದು ಸರಸ್ವತಿ ದೇವಿ ಆರಾಧನೆ 10 ರಂದು ದುರ್ಗಾದೇವಿ ಅಲಂಕಾರ ಪೂಜೆ ಮತ್ತು ನಾಗದೇವರ ಹಾಗೂ ಸುಬ್ರಹ್ಮಣ್ಯೇಶ್ವರ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅ.11 ರಂದು ಮಹಿಷಾಸುರ…
ಲೇಖಕ: admin
ಸಿದ್ದಾಪುರ ಅ.2 NEWS DESK : ಮಾಲ್ದಾರೆಯ ಜನಪರ ಸಂಘಟನೆ ವತಿಯಿಂದ ಗುಡ್ಲೂರು ಗ್ರಾಮದಲ್ಲಿ 155ನೇ ಗಾಂಧಿ ಜಯಂತಿಯನ್ನ ಅಚರಿಸಲಾಯಿತು. ಗ್ರಾಮದ ನಿಲ್ದಾಣ ಬಳಿ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಮಾಜ ಸೇವಕ ಬಾಲನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಾತ್ಮ ಗಾಂಧಿಯ ಜೀವನ ಸಂದೇಶವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಜನಪರ ಸಂಘದ ಅಧ್ಯಕ್ಷ ಭಾವ ಮಾಲ್ದಾರೆ ಮಾತನಾಡಿ, ದೇಶದಲ್ಲಿ ಪ್ರತಿಯೊಬ್ಬರು ಸ್ವತಂತ್ರವಾಗಿ ಸಂವಿಧಾನದ ಆಶಯದಂತೆ ಬದುಕಲು ಮಹಾತ್ಮ ಗಾಂಧೀಜಿಯವರ ತ್ಯಾಗ ಪರಿಶ್ರಮ ಕಾರಣವಾಗಿದೆ. ಶಾಂತಿಯುತವಾಗಿ ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮಹಾತ್ಮ ಗಾಂಧಿ ಪ್ರಮುಖ ಪಾತ್ರ ವಹಿಸಿದ್ದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಅಳವಡಿಸಿಕೊಂಡು, ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿಶ್ವದಾದ್ಯಂತ ಗಾಂಧಿ ಜಯಂತಿಯನ್ನು ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಸಂಘದ ಯೋಜನಾಧಿಕಾರಿ ರೂಪೇಶ್, ನಿವೃತ್ತ ಬ್ಯಾಂಕ್ ಅಧಿಕಾರಿ ನಾರಾಯಣ, ಪ್ರಮುಖರಾದ ಪ್ರೇಮ, ಮೂರ್ತಿ, ಚೋಳರಾಜ್, ಅಗಸ್ಟಿನ್, ಪ್ರಭಾಕರ್, ಎರ್ಮು, ರಂಜು, ಶಿಜು…
ಮಡಿಕೇರಿ ಅ.2 NEWS DESK : ತಾಜುಲ್ ಉಲಮಾ ಉಳ್ಳಾಲ ತಂಙಲ್(ಖ.ಸಿ)ರವರ 11ನೇ ಉರೂಸ್ ಕಾರ್ಯಕ್ರಮ ಯಶಸ್ವಿಗೊಳಿಸಲು ಕೊಡಗು ಜಿಲ್ಲಾ ಮದನೀಸ್ ಅಸ್ಸೋಸಿಯೇಷನ್ ಕರೆ ನೀಡಿದೆ. 6 ದಶಕಗಳ ಕಾಲ ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿ ಪಡೆದ ಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ)ರವರು ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಉಳ್ಳಾಲವನ್ನು ಕೇಂದ್ರವಾಗಿಸಿಕೊಂಡು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ರಂಗಗಳಲ್ಲಿ ಮಹೋನ್ನತ ಸೇವೆಗಳನ್ನು ಮಾಡುವುದರೊಂದಿಗೆ ಸುನ್ನೀ ಜಗತ್ತಿಗೆ ಆಧ್ಯಾತ್ಮಿಕ ಬೆಳಕನ್ನು ಹಚ್ಚಿದ, 4 ಸಾವಿರಕ್ಕೂ ಅಧಿಕ ಉನ್ನತ ಉಲಮಾಗಳನ್ನು ಸಮುದಾಯಕ್ಕೆ, ಪವಿತ್ರ ಧರ್ಮಕ್ಕೆ ಸಮರ್ಪಿಸಿದ, ನೂರಾರು ಮೊಹಲ್ಲಾಗಳ ಖಾಝಿಯಾಗಿದ್ದ, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಸುಧೀರ್ಘಕಾಲದ ಅಧ್ಯಕ್ಷರು, ಅಖಿಲ ಭಾರತ ಉಲಮಾ ಒಕ್ಕೂಟದ ನಿರ್ದೇಶಕರೂ ಆಗಿದ್ದ ಶೈಖುನಾ ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ -ಬುಖಾರಿ(ಖ.ಸಿ)ರವರ 11ನೇ ಉರೂಸ್ ಇದೇ ಅಕ್ಟೋಬರ್ 4, 5, 6 ದಿನಾಂಕಗಳಲ್ಲಿ ಕೇರಳದ ಪಯ್ಯನ್ನೂರಿನ ಎಟ್ಟಿಕುಳಂನಲ್ಲಿ ನಡೆಯಲಿದೆ. ಈ ಉರೂಸ್ ನಲ್ಲಿ ಕರ್ನಾಟಕ ಹಾಗೂ ಕೇರಳ…
ಮಡಿಕೇರಿ ಅ.2 NEWS DESK : ವಿಶ್ವ ಹಿಂದೂ ಪರಿಷದ್ ಧರ್ಮ ಪ್ರಸಾರ ವಿಭಾಗದ ವತಿಯಿಂದ ಹಿಂದೂ ಸಮಾಜದ ದೇವಾಲಯಗಳು ಹಾಗೂ ಪೂಜಾ ಮಂದಿರಗಳ ಮೂಲಕ ಸಮಾಜದಲ್ಲಿ ಏಕತೆ ಮತ್ತು ಸನಾತನ ಧರ್ಮ ವಿರೋಧಿ ಚಟುವಟಿಕೆಗಳ ವಿರುದ್ಧ ಜಾಗೃತಿ ಮೂಡಿಸಲು ಒಂದು ದಿನದ ಅರ್ಚಕರ ಚಿಂತನಾ ಬೈಠಕ್ ಸಭೆ ನಡೆಯಿತು. ವಿರಾಜಪೇಟೆಯ ಕಾಕೋಟು ಪರಂಬುವಿನ ಶ್ರೀ ಕಾಳಭೈರವ ದೇವಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರೀಯ ಧರ್ಮ ಪ್ರಸಾರದ ಪ್ರಮುಖ ಸೂರ್ಯನಾರಾಯಣ ಅವರು ಬೌದ್ಧಿಕ್ ಮೂಲಕ ಜಾಗೃತಿ ಸಂದೇಶ ನೀಡಿದರು. ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಚಿ.ನಾ.ಸೋಮೇಶ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಜಿಲ್ಲಾ ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಸಹ ಕಾರ್ಯದರ್ಶಿ ಯತೀಶ್ ನಂಜಪ್ಪ ವಂದಿಸಿದರು. ಜಿಲ್ಲಾ ಸಹ ಕಾರ್ಯದರ್ಶಿ ಸಂತೋಷ್ ಪರಿಷದ್ ಗೀತೆಯನ್ನು ಪ್ರಸ್ತುತ ಪಡಿಸಿದರು. ಜಿಲ್ಲಾ ಮಠ ಮಂದಿರ ಪ್ರಮುಖ್ ಡಾ.ಮಹಾಭಲೇಶ್ವರ ಭಟ್, ಶ್ರೀಕಾಳಭೈರವ ದೇವಾಲಯದ…
ಮಡಿಕೇರಿ ಅ.2 NEWS DESK : ತಾಳತ್ತಮನೆಯ ಶ್ರೀ ದುರ್ಗಾಭಗವತಿ ದೇವಾಲಯದಲ್ಲಿ ನವರಾತ್ರಿಯ ಅಂಗವಾಗಿ ಅ.3 ರಿಂದ ಅ.12ರ ವರೆಗೆ ವಿಶೇಷ ಅಲಂಕಾರ ಪೂಜೆ ನಡೆಯಲಿದೆ. ಭಕ್ತಾಧಿಗಳು ಬೆಳಿಗ್ಗೆ 9 ಹಾಜರಿದ್ದು, ಅಲಂಕಾರ ಪೂಜಾ ಸೇವೆಯನ್ನು ಮಾಡಿಸಬಹುದಾಗಿ ದೇವಾಲಯದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ 9449476138, 9448303653, 9449679460, 9449933457 ಸಂಪರ್ಕಿಸಬಹುದಾಗಿದೆ.
ಮಡಿಕೇರಿ ಅ.2 NEWS DESK : ಮಡಿಕೇರಿ ದಸರಾದಲ್ಲಿ ಈ ವಷ೯ದಿಂದ ಕಾಫಿ ದಸರಾ ಎಂಬ ವಿನೂತನ ಕಾಯ೯ಕ್ರಮವನ್ನು ಜಾರಿಗೊಳಿಸಲಾಗುತ್ತಿದ್ದು, ಅ.6 ಮತ್ತು 7 ರಂದು ಆಯೋಜಿತ ಕಾಫಿ ದಸರಾದಲ್ಲಿ ಕಾಫಿ ಮತ್ತು ಇತರ ಕೃಷಿಗೆ ಸಂಬಂಧಿಸಿದ ಅನೇಕ ಮಾಹಿತಿ ಕೃಷಿಕರಿಗೆ ದೊರಕಲಿದೆ. ಅಲ್ಲದೆ ಜಿಲ್ಲೆಯ 7 ಮಂದಿ ಸಾಧಕ ಕೃಷಿಕರನ್ನೂ ಕಾಫಿ ದಸರಾ ಸಂದಭ೯ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ತಿಳಿಸಿದ್ದಾರೆ. ನಗರದಲ್ಲಿ ಕಾಫಿ ದಸರಾ ಸಂಬಂಧಿತ ಪೂವ೯ಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಡಾ.ಮಂಥರ್ ಗೌಡ, ಇದೇ ಮೊದಲ ಬಾರಿಗೆ ಆಯೋಜಿತವಾಗಿರುವ ಕಾಫಿ ದಸರಾಕ್ಕೆ ಕಾಫಿ ಮಂಡಳಿ, ಕನಾ೯ಟಕ ಪ್ಲಾಂಟಸ್೯ ಅಸೋಸಿಯೇಷನ್, ಕೊಡಗು ಪ್ಲಾಂಟಸ್೯ ಅಸೋಸಿಯೇಷನ್ ಸೇರಿದಂತೆ ಕಾಫಿ ವಲಯದಿಂದ ಉತ್ತಮ ಸ್ಪಂದನ ದೊರಕಿದೆ. ಈಗಾಗಲೇ 32 ಮಳಿಗೆಗಳು ಭತಿ೯ಯಾಗಿದ್ದು, ಕಾಫಿ, ಹೈನುಗಾರಿಕೆ, ಬಿದಿರು, ತೋಟಗಾರಿಕಾ ಬೆಳೆಗಳು, ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಈ ಮಳಿಗೆಗಳಲ್ಲಿ ದೊರಕಲಿದೆ. ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಮೀನುಗಾರಿಕಾ…
ಮಡಿಕೇರಿ ಅ.2 NEWS DESK : ಗಾಂಧಿ ಜಯಂತಿ ಪ್ರಯುಕ್ತ ಅರಣ್ಯ ಇಲಾಖೆಯ ವತಿಯಿಂದ ವಿರಾಜಪೇಟೆ ತಾಲ್ಲೂಕಿನ ಚೇಲಾವಾರ ಕಬ್ಬೆ ಬೆಟ್ಟದ ಭಾಗದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಡಿಎಫ್ ಜಗನಾಥ್, ಎಸ್.ಎಫ್. ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಕಬ್ಬೆ ಬೆಟ್ಟದ ಭಾಗದಲ್ಲಿ 30ಕ್ಕೂ ಅಧಿಕ ಸಿಬ್ಬಂದಿಗಳು ಪಾಲ್ಗೊಂಡು ಸ್ವಚ್ಛತಾ ಶ್ರಮದಾನ ನಡೆಸಿದರು.
ಮೈಸೂರು ಅ.2 NEWS DESK : ಗಾಂಧಿ ಜಯಂತಿಯ ಅಂಗವಾಗಿ ಪ್ರಧಾನಿ ಮೋದಿಯವರ ‘ಸ್ವಚ್ಛತೆಯೇ ಸೇವೆ’ ಅಭಿಯಾನದ ಧ್ಯೇಯದಂತೆ ಮೈಸೂರು ವಿಶ್ವವಿದ್ಯಾನಿಲಯದ ಓಪನ್ ಏರ್ ಥಿಯೇಟರ್ ನಲ್ಲಿ ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ವಚ್ಛತಾ ಶ್ರಮದಾನ ನಡೆಸಿದರು. ಈ ಸಂದರ್ಭ ಹೆಚ್ಚಿನ ಸಂಖ್ಯೆಯಲಿ ಕಾರ್ಯಕರ್ತರು ಹಾಜರಿದ್ದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು.
ಕುಶಾಲನಗರ, ಅ.2 NEWS DESK : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆ , ಕುಶಾಲನಗರ ಪುರಸಭೆಯ ಕಾರ್ಯಾಲಯ ಹಾಗೂ ಕುಶಾಲನಗರ ಫಾತಿಮ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಶಾಲಾ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ನ ಸಹಯೋಗದೊಂದಿಗೆ ಕುಶಾಲನಗರ ಫಾತಿಮ ಪ್ರೌಢಶಾಲೆಯಲ್ಲಿ 155ನೇ ವರ್ಷದ ಮಹಾತ್ಮ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಮತ್ತು ಸ್ವಚ್ಚತಾ ಹೀ ಸೇವಾ ಶ್ರಮದಾನ ಕಾರ್ಯಕ್ರಮ ನಡೆಯಿತು. ಫಾತಿಮ ಶಾಲಾವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶಾಲಾವರಣದಲ್ಲಿ ಅಮ್ಮನ ಹೆಸರಿನಲ್ಲಿ ಗಿಡನೆಡುವ ಮೂಲಕ ಸ್ವಚ್ಚತಾ ಆಂದೋಲನಕ್ಕೆ ಚಾಲನೆ ನೀಡಲಾಯಿತು. ಸ್ವಚ್ಚತಾ ಶ್ರಮದಾನ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಸ್ಕೌಟ್ಸ್, ಗೈಡ್ಸ್ ನ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ.ಪ್ರವೀಣ್ ದೇವರಗುಂಡ ಸೋಮಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ತಮ್ಮನ್ನು ಸದಾಕಾಲ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. …
ವಿರಾಜಪೇಟೆ ಅ.2 NEWS DESK : ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಬೆನಾಡಿಕ್ ಆರ್.ಸಲ್ದಾನ ಮಹಾತ್ಮ ಗಾಂಧಿ ಹಾಗೂ ಭಾರತದ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಮಾತನಾಡಿ, ಗಾಂಧೀಜಿ ನಮ್ಮ ರಾಷ್ಟ್ರಪಿತ. ಅವರ ತತ್ವ ಆದರ್ಶಗಳು ಪ್ರಸ್ತುತ ಸಮಾಜಕ್ಕೆ ಬಹು ಮುಖ್ಯ. ಅವರ ಸರಳ ಜೀವನ, ರಾಮರಾಜ್ಯ, ಗ್ರಾಮ ಸ್ವರಾಜ್ಯ ಪರಿಕಲ್ಪನೆ ಅದ್ಭುತವಾದದ್ದು, ಅವರು ಬೋಧಿಸಿದ ಕೆಲವು ತತ್ವಗಳನ್ನಾದರೂ ಇಂದಿನ ಯುವ ಸಮಾಜ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸರಳತೆಯಿಂದ ಜೀವನ ನಡೆಸಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಬೇಕೆಂದರು. ಈ ಸಂದರ್ಭ ಕಾಲೇಜಿನ ಉಪನ್ಯಾಸಕರಾದ ನಾಗರಾಜು, ಸೋಮಣ್ಣ, ನಿರ್ಮಿತ, ಕಚೇರಿ ಸಿಬ್ಬಂದಿಗಳಾದ ಸೋಮನಾಥ್, ಜಯಮ್ಮ, ಶಶಿಕಲಾ, ಸೋಮಣ್ಣ , ಸುಮತಿ, ರೇಷ್ಮ , ಎನ್.ಸಿ.ಸಿ ಅಧಿಕಾರಿ ಭೋಜಮ್ಮ, ಎನ್.ಎಸ್ .ಎಸ್ ಯೋಜನಾಧಿಕಾರಿ ಸುನಿಲ್ ಕುಮಾರ್ ಹಾಗೂ ಸ್ವಯಂಸೇವಕರು ಹಾಜರಿದ್ದರು. ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ…






