ಮಡಿಕೇರಿ ಅ.3 NEWS DESK : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಿಯು ಶರನ್ನವರಾತ್ರಿಯ ಮೊದಲನೇ ದಿನವಾದ ಇಂದು ಬೆಳ್ಳಿಯ ಅಲಂಕಾರದಲ್ಲಿ ಗಮನ ಸೆಳೆಯುತ್ತಿದ್ದಾರೆ. ಅ.4 ರಂದು ಹೂವಿನ ಅಲಂಕಾರ ನಡೆಯಲಿದೆ.
ಲೇಖಕ: admin
ಸುಂಟಿಕೊಪ್ಪ ಅ.3 NEWS DESK : ಸುಂಟಿಕೊಪ್ಪ ಮಹಾತ್ಮಾ ಗಾಂಧಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಗರಗಂದೂರು ಮೊರಾರ್ಜಿ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಗಾಂಧಿ ಜಯಂತಿಯ ಅಂಗವಾಗಿ ವಿದ್ಯಾರ್ಥಿಗಳ ಕಾಲೇಜಿನ ಆವರಣದಲ್ಲಿ 25 ಕ್ಕೂ ಹೆಚ್ಚು ಹಣ್ಣಿನ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಲು ವಿದ್ಯಾರ್ಥಿಗಳಿಗೆ ದತ್ತು ನೀಡಲಾಯಿತು. ಟ್ರಸ್ಟ್ ಕಾರ್ಯದರ್ಶಿ ಡೆನಿಸ್ ಡಿಸೋಜ ಮಾತನಾಡಿ, 1934ರಲ್ಲಿ ಮಹಾತ್ಮಾ ಗಾಂದೀಜಿಯವರು ಕೊಡಗು ಜಿಲ್ಲೆಗೆ ಬಂದು ಗುಂಡುಗುಟ್ಟಿಯ ಮಂಜನಾಥಯ್ಯನವರ ಬಂಗಲೆಗೆ ಆಗಮಿಸಿ ಸಾರ್ವಜನಿಕ ಸಭೆಯನ್ನು ಏರ್ಪಡಿಸಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿದರು. ಅವರು ಬಂದು ತಂಗಿ ಹೋದ ಸವಿನೆನಪಿಗಾಗಿ ಆ ತೋಟದ ಮಾಲೀಕರಾದ ಮುಕುಲ್ ಮಹೀಂದ್ರ ಅವರೊಂದಿಗೆ ಒಂದು ಟ್ರಸ್ಟ್ ರಚಿಸಿದ್ದು ಆ ಟ್ರಸ್ಟ್ ಮೂಲಕ ಪ್ರತೀ ವರ್ಷ ಗಾಂಧಿ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು. ಟ್ರಸ್ಟ್ ಸಂಚಾಲಕರಾದ ಎಂ.ಇ.ಮೊಹಿದ್ದೀನ್ ಮಾತನಾಡಿ, ಪರಿಸರದ ಬಗ್ಗೆ ನಾವುಗಳು ಜವಾಬ್ದಾರಿಕೆಯನ್ನು ಹೊಂದಬೇಕು ಮತ್ತು ಮರಗಳನ್ನು ಬೆಳೆಸುವುದರಿಂದ ನಾವು ನಿಸರ್ಗಕ್ಕೆ…
ಮಡಿಕೇರಿ ಅ.3 NEWS DESK : ಇಂದಿನ ಯುವ ಜನಾಂಗ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನ ನಡೆಸಬೇಕೆಂದು ಸುಂಟ್ಟಿಕೊಪ್ಪ ನಾಡ ಪ್ರೌಢ ಶಾಲೆಯ ವಿದ್ಯಾರ್ಥಿ ಹಾಗೂ ಬಾಲ ವಾಗ್ಮಿ ಶ್ರೀಶಾ ಅಭಿಪ್ರಾಯಪ್ಟರು. ಕಂಡಕರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಯುವಕ ಸಂಘದಿಂದ ಗಾಂಧಿ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಯ ಜನ್ಮದಿನ ಹಾಗೂ ಶ್ರಮದಾನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಮಹಾತ್ಮ ಗಾಂಧೀಜಿಯವರು ಪ್ರಸ್ತುತ ಸಮಾಜಕ್ಕೆ ಮಾದರಿ. ನಾವೆಲ್ಲರೂ ಗಾಂಧೀಜಿಯ ಜೀವನ ಶೈಲಿಯನ್ನು ಸರಿಯಾಗಿ ಅರ್ಥೈಸಿಕೊಂಡು ಮುನ್ನಡೆಯಬೇಕು. ಗಾಂಧೀಜಿಯವರ ತ್ಯಾಗ, ಹೋರಾಟದ ಫಲವಾಗಿ ನಾವೆಲ್ಲರೂ ಇಂದು ಒಂದುಗೂಡಿ ಜೀವನ ನಡೆಸುತ್ತಿರುವುದು. ಅದಲ್ಲದೇ ಮುಖ್ಯವಾಗಿ ಇಂದಿನ ಯುವ ಸಮೂಹ ಮತ್ತು ವಿದ್ಯಾರ್ಥಿಗಳು ಗಾಂಧೀಜಿಯವರ ಅಹಿಂಸಾ ಮಾರ್ಗವನ್ನು ಅನುಸರಿಬೇಕಾಗಿದೆ ಎಂದು ಶ್ರೀಶಾ ಕರೆ ನೀಡಿದರು. ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ಟಿ.ಎನ್.ರತೀಶ್ ಮಾತನಾಡಿ ಗಾಂಧೀಜಿಯವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ನಾವೆಲ್ಲರೂ ಸೇರಿ ನಮ್ಮ ಗ್ರಾಮ, ಮನೆಯ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛತೆಯಿಂದ…
ಸುಂಟಿಕೊಪ್ಪ ಅ.3 NEWS DESK : ಜೌಪಚಾರಿಕ ಶಿಕ್ಷಣದ ಜೊತೆಗೆ ಅನಾಜೌಪಚಾರಿಕ ಶಿಕ್ಷಣವು ವಿದ್ಯಾರ್ಥಿಗಳಿಗೆ ಅತ್ಯಗತ್ಯವೆಂದು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ವತಿಯಿಂದ ಸುಂಟಿಕೊಪ್ಪ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಪೊಲೀಸ್ ನಿಮ್ಮ ಸ್ನೇಹಿತ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಅಂತಂರಿಕವಾಗಿ ಕಾನೂನು ಸುವ್ಯವಸ್ಥೆ ಹಾಗೂ ನಾಗರೀಕ ಸೇವೆಗಳು ಉತ್ತಮವಾಗಿ ಲಭ್ಯವಾದಾಗ ರಾಷ್ಟ್ರವೊಂದು ಉತ್ತಮ ರಾಷ್ಟ್ರ ಎನ್ನಿಸಿಕೊಳ್ಳುತ್ತದೆ. ವಿದ್ಯಾರ್ಥಿಗಳು ಶಾಲೆಯ ಒಳಗೆ ಹೊರಗೆ ಕಲಿಯುವುದಕ್ಕಿಂತಲೂ ಶಾಲೆಯ ಹೊರಗೆ ಕಲಿಯುವುದು ಬಹಳಷ್ಟಿದೆ. ಈಗಾಗಿ ಮಕ್ಕಳು ಏನ್ನನ್ನು ಕಲಿಯಬೇಕು ಏನ್ನನು ಕಲಿಯಬಾರದು ಎನ್ನುವ ಬಗ್ಗೆ ಜೀವನವಿಡಿ ಕಲಿಯುವ ಅಂಶಗಳಿದೆ ಎಂದು ಅವರು ವಿಶ್ಲೇಷಿಸಿದರು. ಪಾಸ್‍ಪೊರ್ಟ್ ಸೇರಿದಂತೆ ಕೆಲವೊಂದು ಮಹತ್ವದ ದಾಖಲೆಗಳಲ್ಲಿ ಪೊಲೀಸರ ಅಭಿಪ್ರಾಯ ಪರಿಶೀಲನೆ ಎಷ್ಟು ಅಗತ್ಯ ಎಂಬುದನ್ನು ಅವರು ಉದಾಹರಣೆಗಳೊಂದಿಗೆ ವಿವರಿಸಿದರು. ಇಂದಿನ ಮಕ್ಕಳಿಗೆ ಪತ್ರ ಬರೆಯುವ ಕಲ್ಪನೆಯೇ. ಇಲ್ಲ ಕಾಲ ಬದಲಾಗಿದ್ದು,…
ಸುಂಟಿಕೊಪ್ಪ ಅ.3 NEWS DESK : ಮಕ್ಕಳಿಗೆ ಶಿಕ್ಷಣದ ಜೋತೆಗೆ ಕ್ರೀಡೆಗೂ ಪ್ರೋತ್ಸಾಹ ನೀಡಬೇಕು ಎಂದು ಏಕಲವ್ಯ ಪ್ರಶಸ್ತಿ ಪುರಸ್ಕೃತೆ ಹಾಗೂ ಅಥ್ಲಟಿಕ್ ಭಾನುಮತಿ ಮೆಂಡನ್ ಹೇಳಿದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮ ಸಭೆಯಲ್ಲಿ ಸ್ವಚ್ಛತಾ ಈ ಸೇವಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕ್ರೀಡೆಯಲ್ಲಿ ಸಾಧನೆ ಮಾಡಲು ಪೋಷಕರ ಮತ್ತು ಶಿಕ್ಷಕರ ಹಾಗೂ ಒಡನಾಡಿ ಸಹಕಾರ ತುಂಬಾ ಅಗತ್ಯ ತಾವು ವಿವಾಹವಾದ ಮೇಲೂ ಕ್ರೀಡೆಯಲ್ಲಿ ಸಾಧನೆ ಮಾಡಲು ತಮ್ಮ ಪತಿ ಪ್ರೊ.ಎಂ.ಪಿ.ಪ್ರೇಮ್‍ಸುಬ್ಬಯ್ಯ ಸಹಕಾರ ನೀಡಿರುವುದನ್ನು ಸ್ಮರಿಸಿದ ಅವರು ಮಕ್ಕಳ ಆಸಕ್ತಿಯನ್ನು ಗುರುತಿಸಿ ಉತ್ತಮ ತರಬೇತಿ ನೀಡಿದಲ್ಲಿ ಸಾಧನೆ ಮಾಡುವುದರಲ್ಲಿ ಸಂಸಯವಿಲ್ಲ ಎಂದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಹೆಚ್.ಟಿ.ರವೀಶ್ ಮಾತನಾಡಿ, ಗಾಂಧಿ ಜಯಂತಿಯ ದಿನದಂದು ಸರ್ಕಾರದ ಆದೇಶದ ಅನುಸಾರ ವಿಶೇಷ ಗ್ರಾಮಸಭೆಯನ್ನು ನಡೆಸಿ ವಿಶೇಷ ಕ್ರೀಯಾ ಯೋಜನೆಗಳನ್ನು ಘೋಷಣೆ ಮಾಡಿ ಗ್ರಾಮಸ್ಥರು ಮತ್ತು ಸಾರ್ವಜನಿಕರ ತಿಳುವಳಿಕೆಗೆ ತರಲಾಗುತ್ತದೆ. ಸ್ವಚ್ಛತಾ ಈ ಸೇವಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ…
ಮಡಿಕೇರಿ ಅ.3 NEWS DESK : ಸೋಮವಾರಪೇಟೆ ತಾಲ್ಲೂಕಿನ ಕಿರಗಂದೂರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ತಾಕೇರಿ ಗ್ರಾಮದ ಚಂದಾಣಿ ಬಾಣೆಯಲ್ಲಿರುವ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿ, ಬಣ್ಣ ಬಳಿಯಲಾಯಿತು. ಕಿರಗಂದೂರು ಶಕ್ತಿ ಕೇಂದ್ರದ ಅಧ್ಯಕ್ಷ ಎಚ್.ಎಂ. ಸುಧೀರ್, ಕಿರಗಂದೂರು ಬೂತ್ ಅಧ್ಯಕ್ಷ ಕೆ.ಪಿ.ಚಂದ್ರಾಜು, ತಾಕೇರಿ ಬೂತ್ ಅಧ್ಯಕ್ಷ ರಾಜ್ ಕುಮಾರ್, ಶಿವಕುಮಾರ್, ಸಂತೋಷ್, ಸಚಿನ್, ಸುರೇಶ, ನಿತ್ಯ ಹಾಗೂ ಇತರೆ ಕಾರ್ಯಕರ್ತರು ಇದ್ದರು.
ವಿರಾಜಪೇಟೆ NEWS DESK ಅ.2 :ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿಯ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರಾಜ್ಯ ಮಟ್ಟದಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಯ ಪ್ರೌಢ ಶಾಲಾ ವಿಭಾಗದಲ್ಲಿ ವಿರಾಜಪೇಟೆಯ ಸಂತ ಅನ್ನಮ್ಮ ಪ್ರೌಢ ಶಾಲೆಯ ಹತ್ತನೇಯ ತರಗತಿಯ ವಿದ್ಯಾರ್ಥಿನಿ ಚೈತನ್ಯ ಕೆ. ಎಂ. ಭಾಗವಹಿಸಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನವನ್ನು ಪಡೆದು ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾಳೆ. ಗಾಂಧಿ ಜಯಂತಿಯ ದಿನದಂದು ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿನಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದರು. ಚೈತನ್ಯ ವಿರಾಜಪೇಟೆಯ ಮಂಜುನಾಥ ಹಾಗೂ ಕುಮಾರಿ ಟಿ. ದಂಪತಿಗಳ ಪುತ್ರಿ. ವಿದ್ಯಾರ್ಥಿನಿಯನ್ನು ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಜೇಮ್ಸ್ ಡೊಮಿನಿಕ್ ಹಾಗೂ ಪ್ರೌಢ ಶಾಲಾ ಮುಖ್ಯ ಶಿಕ್ಷಕ…
ಮಡಿಕೇರಿ NEWS DESK ಅ.2 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ನಗರದಲ್ಲಿ ನಡೆದ ಅಂಗನವಾಡಿ ದಿನಾಚರಣೆಯಲ್ಲಿ ಮಡಿಕೇರಿ ತಾಲ್ಲೂಕು ಮಟ್ಟದ ಉತ್ತಮ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಾಲಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶುಭ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಬಾಡಗ-1 ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಬಿ.ಬಿ.ಜಯಂತಿ, ಕರಡ ಅಂಗನವಾಡಿ ಕಾರ್ಯಕರ್ತೆ ಈಶ್ವರಿ ಕೆ.ಪಿ ತಾಲ್ಲೂಕು ಮಟ್ಟದ ಉತ್ತಮ ಕಾರ್ಯಕರ್ತೆ ಪ್ರಶಸ್ತಿ ಹಾಗೂ ಕೆ.ಬಾಡಗ ಅಂಗನವಾಡಿ ಕೇಂದ್ರದ ಸಹಾಯಕಿ ಎನ್.ಜಿ.ಸಾವಿತ್ರಿ, ಹಳೇ ತಾಲ್ಲೂಕು ಅಂಗನವಾಡಿಯ ಮಮತಾ ಸಿ.ಎಲ್ ಉತ್ತಮ ಸಹಾಯಕಿ ಪ್ರಶಸ್ತಿಯನ್ನು ಪಡೆದರು. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ಒದಗಿಸಲು ತೆಗೆದುಕೊಂಡಿರುವ ಕ್ರಮಗಳನ್ನು ಮತ್ತು ಯೋಜನೆಯ ಚಟುವಟಿಕೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಇವರುಗಳಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಮಹಿಳಾ ಮತ್ತು…
ಕುಶಾಲನಗರ NEWS DESK ಅ.2 : ಯುವ ಪೀಳಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ತೊಡಗಿಸಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣದ ಕನಸು ನನಸಾಗಿಸಬೇಕಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕೊಡಗು ಜಿಲ್ಲಾ ಸದಸ್ಯರಾದ ಎಂ.ಎನ್.ಚಂದ್ರಮೋಹನ್ ಕರೆ ನೀಡಿದ್ದಾರೆ. ಕುಶಾಲನಗರ ಮೂಕಾಂಬಿಕಾ ವಿದ್ಯಾ ಸಂಸ್ಥೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುಡ್ಡೆ ಹೊಸೂರು ವಲಯ ಮತ್ತು ವಿದ್ಯಾ ಸಂಸ್ಥೆ ಸಹಯೋಗದೊಂದಿಗೆ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು. ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು. ಪ್ರತಿಯೊಬ್ಬರು ಸಮಾಜದಲ್ಲಿ ಇತರರಿಗೆ ಮಾರ್ಗದರ್ಶನ ನೀಡುವಂತಹ ಪ್ರಜೆಗಳಾಗಬೇಕಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸೂದನ ಗೋಪಾಲ್ ಅವರು ಮಾತನಾಡಿ, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ನಿರಂತರ ಚಟುವಟಿಕೆಗಳು ಕಾರ್ಯಕ್ರಮಗಳ ಮೂಲಕ ಮಾತ್ರ ಸ್ವಾಸ್ಥ್ಯ ಸಮಾಜ ಕಾಣಲು ಸಾಧ್ಯ ಎಂದರು. ಈ ಸಂದರ್ಭ ಗುಡ್ಡೆ ಹೊಸೂರು ವಲಯದ ಮೇಲ್ವಿಚಾರಕರಾದ ಸತೀಶ್, ಮುಳ್ಳುಸೋಗೆ ವ್ಯಾಪ್ತಿಯ ಒಕ್ಕೂಟದ ಅಧ್ಯಕ್ಷರಾದ ವನಿತ,…
ಮಡಿಕೇರಿ NEWS DESK ಅ.2 : ಅಂತರಾಷ್ಟ್ರೀಯ ಮಾದಕ ವಸ್ತು ದಂಧೆ ಪ್ರಕರಣವನ್ನು ಭೇದಿಸಿರುವ ಕೊಡಗು ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿ, ಕೋಟ್ಯಾಂತರ ಮೌಲ್ಯದ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಕೊಡಗು ಜಿಲ್ಲೆಯ ಹೆಗ್ಗಳ ಗ್ರಾಮದ ನಾಸಿರುದ್ದೀನ್ ಎಂ.ಯು(26), ಎಡಪಾಲ ಗ್ರಾಮದ ಯಾಹ್ಯಾ ಸಿ.ಹೆಚ್(28), ಕುಂಜಿಲ ಗ್ರಾಮದ ಅಕನಾಸ್(26), ಬೇಟೋಳಿ ಗ್ರಾಮದ ವಾಜಿದ್(26), ಕೇರಳದ ಕಣ್ಣೂರು ಗ್ರಾಮದ ರಿಯಾಜ್(44), ಕಾಸರಗೋಡಿನ ಮೆಹರೂಫ್(37) ಹಾಗೂ ರವೂಫ್(28) ಬಂಧಿತ ಆರೋಪಿಗಳು. ಇವರ ಬಳಿಯಿಂದ ಸುಮಾರು ರೂ.3 ಕೋಟಿ ಬೆಲೆ ಬಾಳುವ 3.31 ಕೆ.ಜಿ ಹೈಡ್ರೋ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಹೈಡ್ರೋ ಗಾಂಜಾವನ್ನು ವಿಮಾನದ ಮೂಲಕ ಭಾರತ ಮತ್ತು ದುಬೈಗೆ ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ ಅಂತರ ರಾಷ್ಟ್ರೀಯ ವ್ಯವಸ್ಥಿತ ಜಾಲವೊಂದನ್ನು ಕೊಡಗು ಪೊಲೀಸ್ ಅಧಿಕಾರಿಗಳು ಪತ್ತೆ ಹಚ್ಚಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸುದ್ದಿಗೋಷ್ಠಿಯಲ್ಲಿ ಹೆಮ್ಮೆ ವ್ಯಕ್ತಪಡಿಸಿದರು. ಥೈಲ್ಯಾಂಡ್ ದೇಶದ ಬ್ಯಾಂಕಾಕ್ ನಗರದಲ್ಲಿ ಕೆಫೆ ಇಟ್ಟುಕೊಂಡಿರುವ ಕೇರಳ…






