ಲೇಖಕ: admin

ಮಡಿಕೇರಿ NEWS DESK ಸೆ.21 : ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಭಾಗಮಂಡಲ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯ ವತಿಯಿಂದ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರೆಯ ಪ್ರಯುಕ್ತ ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಸೆಪ್ಟೆಂಬರ್, 26 ರಂದು ಬೆಳಗ್ಗೆ 8.35 ನಿಮಿಷಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದು. ಅಕ್ಟೋಬರ್, 04 ರಂದು ಬೆಳಗ್ಗೆ 10.21 ನಿಮಿಷಕ್ಕೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ‘ಆಜ್ಞಾ ಮುಹೂರ್ತ’, ಅಕ್ಟೋಬರ್, 14 ರಂದು ಬೆಳಗ್ಗೆ 11.35 ನಿಮಿಷಕ್ಕೆ ಸಲ್ಲುವ ಧನು ಲಗ್ನದಲ್ಲಿ ‘ಅಕ್ಷಯ ಪಾತ್ರೆ ಇರಿಸುವುದು’, ಅಕ್ಟೋಬರ್, 14 ರಂದು ಸಂಜೆ 4.15 ನಿಮಿಷಕ್ಕೆ ಸಲ್ಲುವ ಕುಂಭ ಲಗ್ನದಲ್ಲಿ ‘ಕಾಣಿಕೆ ಡಬ್ಬಿ ಇಡುವುದು’. ಅಕ್ಟೋಬರ್, 17 ರಂದು ಬೆಳಗ್ಗೆ 7.40 ಗಂಟೆಗೆ ಸಲ್ಲುವ ತುಲಾ ಲಗ್ನದಲ್ಲಿ ‘ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ’ ಜರುಗಲಿದೆ.

Read More

ಮಡಿಕೇರಿ ಸೆ.21 NEWS DESK : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾ ಇಲಾಖೆ ವತಿಯಿಂದ ಸೋಮವಾರಪೇಟೆ ಗೆಜ್ಜೆ ಹಣಕೋಡು ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಹಾಗೂ ಮಾತೃವಂದನಾ ವಿಶೇಷ ಅಭಿಯಾನ ಕಾರ್ಯಕ್ರಮವು ಶನಿವಾರ ನಡೆಯಿತು. ಗ್ರಾ.ಪಂ. ಅಧ್ಯಕ್ಷರಾದ ಗೋಪಾಲಕೃಷ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಉತ್ತಮವಾದ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದು ಇಂದು ನಮ್ಮ ಆರೋಗ್ಯ ನಮ್ಮ ಕೈನಲ್ಲಿ ಹಿಡಿದಿಟ್ಟುಕೊಳ್ಳುವಂತಹ ಪರಿಸ್ಥಿತಿ ಉಂಟಾಗಿದೆ. ಸಾಧ್ಯವಾದಷ್ಟು ಮನೆಯ ಹಿತ್ತಲಿನಲ್ಲಿ ಬೆಳೆದ ತರಕಾರಿಗಳನ್ನು ಸೆವಿಸೋದು ಉತ್ತಮ ಎಂದರು. ಹಾಗೆಯೇ ಇಲಾಖಾ ವತಿಯಿಂದ ದೊರೆಯುವ ಹಲವಾರು ಯೋಜನೆಯ ಕುರಿತು ತಿಳಿದುಕೊಂಡು ಮುಂದಿನ ದಿನಗಳಲ್ಲಿ ಜನರಿಗೆ ಇಂತಹ ಮಾಹಿತಿಯ ಅವಶ್ಯಕತೆ ಇದೆ. ಈ ಕಾರ್ಯಕ್ರಮದ ಮುಖಾಂತರ ಎಲ್ಲಾ ಜನರ ಮನೆಗಳಿಗೆ ಮಾಹಿತಿ ಪಸರಿಸಲಿ, ಉತ್ತಮ ಸಮಾಜ ನಿರ್ಮಾಣವಾಗಲಿ ಎಂದು ತಿಳಿಸಿದರು. ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸಾವಿತ್ರವ್ವ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿ ಪೋಷಣ್…

Read More

ಮಡಿಕೇರಿ NEWS DESK ಸೆ.21 : ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಬಾಚರಣಿಯಂಡ ಸುಮನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಸಭಾಂಗಣದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಸುಮನ್ ಅವರು, ಸಂಘವು ಪ್ರಸ್ತುತ ಸಾಲಿನಲ್ಲಿ ಕೆಸಿಸಿ ಫಸಲು ಸಾಲ, ಆಭರಣ ಸಾಲ, ಗೊಬ್ಬರ ಖರೀದಿ ಸಾಲ ಇನ್ನಿತರ ಸಾಲಗಳು ಸೇರಿ ಒಟ್ಟು 13 ಕೋಟಿ ರೂ. ಸಾಲ ವಿತರಣೆ ಮಾಡಿದ್ದು, ವರ್ಷಾಂತ್ಯಕ್ಕೆ 5.29 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ಸಂಘವು ಆಡಿಟ್ A ವರ್ಗೀಕರಣದಲ್ಲಿ ಮುಂದುವರೆದಿದ್ದು, 2023-24 ನೇ ಸಾಲಿನಲ್ಲಿ ನಿವ್ವಳ ರೂ.28.62 ಲಕ್ಷ ಲಾಭ ಗಳಿಸಿದ್ದು, ಸಂಘದ ಸದಸ್ಯರುಗಳಿಗೆ ಶೇ.13 ಡಿವಿಡೆಂಟ್ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದರು. ಸAಘದ ಸದಸ್ಯರುಗಳು ಸಂಘದ ಅಭಿವೃದ್ಧಿಗಾಗಿ ಹಲವು ಸಲಹೆ ಸೂಚನೆಗಳನ್ನು ನೀಡಿದರು. 10ನೇ ತರಗತಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳ ವಿದ್ಯಾಭಾಸಕ್ಕೆ ಸಂಘದ ವತಿಯಿಂದ ಪ್ರೋತ್ಸಾಹ ಧನ…

Read More

ಮಡಿಕೇರಿ ಸೆ.21 NEWS DESK : ವಚನ ಸಾಹಿತ್ಯವೂ ಸದಾಚಾರ ಹಾಗೂ ಸದ್ವಿಚಾರಗಳ ಮೂಲಕ ಮನುಷ್ಯ ತನ್ನ ಅಮೂಲ್ಯ ಜೀವನವನ್ನು ಕಟ್ಟಿಕೊಳ್ಳಲು ಪ್ರೇರೇಪಿಸುವ ಸಂಜೀವಿನಿ ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ.ಅನಂತಶಯನ ಹೇಳಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಮಡಿಕೇರಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಮಡಿಕೇರಿಯ ಶರಣ ಮುರುಗೇಶ್ ಅವರು ಸ್ಥಾಪಿಸಿರುವ ಲಿಂ.ಹೆಚ್.ಬಿ.ಶೀಲವಂತ ಹಾಗೂ ಸಿದ್ದಲಿಂಗಪ್ರಸಾದ್ ದತ್ತಿ ಶರಣ ಸಂಸ್ಕೃತಿ ಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಚನ ಸಾಹಿತ್ಯ ಪ್ರತಿಪಾದಿಸುವ ಸರ್ವಸ ಮಾನತೆಯ ಮತ್ತು ಮಾನವ ಸಮಾಜದ ಸರ್ವಾಂಗೀಣ ಪ್ರಗತಿಯ ಪರಿಕಲ್ಪನೆಗಳು ಜಗತ್ತಿನ ಇಡೀ ಮನುಕುಲಕ್ಕೆ ಮಾರ್ಗದರ್ಶಿಯಾಗಿವೆ. ಹನ್ನೆರಡನೇ ಶತಮಾನದಲ್ಲಿ ತಾಂಡವಿಸಿದ್ದ ಮೂಢನಂಬಿಕೆ, ಅಂಧಶ್ರದ್ಧೆ ಹಾಗೂ ಮೂಲಭೂತವಾದಗಳನ್ನು ಪ್ರಶ್ನಿಸಿ ಪ್ರಗತಿಪರ ಚಿಂತನೆಗಳನ್ನು ಮೊಳಗಿಸಿದ ಕೀರ್ತಿ ವಚನಕಾರರದ್ದು ಎಂದು ಬಣ್ಣಿಸಿದ ಅನಂತಶಯನ, ಬಸವಣ್ಣ ಅವರು ನಾಡಿಗೆ ನೀಡಿರುವ ಸಪ್ತಸೂತ್ರಗಳ ವಚನ ಕಲಬೇಡ, ಕೊಲಬೇಡ, ಹುಸಿಯನುಡಿಲು ಬೇಡ ಎಂಬ ವಚನವನ್ನು ಎಲ್ಲರೂ…

Read More

ಮಡಿಕೇರಿ ಸೆ.21 NEWS DESK : ಕೊಡಗು ಜಿ.ಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ, ಸೋಮವಾರಪೇಟೆ ತಾ. ಸಮೂಹ ಸಂಪನ್ಮೂಲ ಕೇಂದ್ರ, ನಂಜರಾಯಪಟ್ಟಣದ ಸಂಯುಕ್ತಾಶ್ರಯದಲ್ಲಿ ಬಸನಳ್ಳಿಯ ಸರ್ಕಾರಿ ವಾಲ್ಮೀಕಿ ಶಾಲೆಯಲ್ಲಿ 2024-25ನೇ ಸಾಲಿನ “ನಂಜರಾಯಪಟ್ಟಣ ಕಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ  ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ಮುಖ್ಯ ಶಿಕ್ಷಕ ರವಿ,  ಪ್ರತಿಭಾ ಕಾರಂಜಿ ವಿನೂತನ ಕಾರ್ಯಕ್ರಮವಾಗಿದ್ದು, ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳಿಗೆ ಸಾಮಾನ್ಯ ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು. ಗುಡ್ಡೆಹೊಸೂರು ಗ್ರಾ.ಪಂ ಅಧ್ಯಕ್ಷೆ ರುಕ್ಮಿಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪಟ್ಟು ಮಾದಪ್ಪ, ಸದಸ್ಯರಾದ ಉಮಾ ಹಾಗೂ ಸೌಮ್ಯ, ಸಿ ಒ ಸಿ ಸಿ ನಿರ್ದೇಶಕ ವಸಂತ್, ಪ್ರಾಥಮಿಕ ಶಾಲಾ ಶಕ್ಷಕರ ಸಂಘದ ಪದಾಧಿಕಾರಿ ಸುರೇಶ್,…

Read More

ಮಡಿಕೇರಿ ಸೆ.21 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬೊಳ್ಳಜಿರ ಬಿ.ಅಯ್ಯಪ್ಪ, ಉಪಾಧ್ಯಕ್ಷರಾಗಿ ಬೊಟ್ಟಂಗಡ ಗಣಪತಿ ಹಾಗೂ ಕಾರ್ಯದರ್ಶಿಯಾಗಿ ಚಂದನ್ ನಂದರಬೆಟ್ಟು ಆಯ್ಕೆಯಾಗಿದ್ದಾರೆ. ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಹಳೆಯ ಅಧ್ಯಕ್ಷರಾಗಿದ್ದ ಪಾರ್ವತಿ ಅಪ್ಪಯ್ಯ ಹಾಗೂ ಬೊಳ್ಳಜಿರ ಬಿ.ಅಯ್ಯಪ್ಪ ಸ್ಪರ್ಧಿಸಿದ್ದು, ಚುನಾವಣೆಯಲ್ಲಿ 9-7 ಮತಗಳನ್ನ ಪಡೆಯುವ ಮೂಲಕ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಗೆಲುವು ಸಾಧಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಬೊಟ್ಟಂಗಡ ಗಣಪತಿ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಚಂದನ್ ನಂದರಬೆಟ್ಟು ಸ್ಪರ್ಧಿಸಿದ್ದು, ಯಾರು ಸ್ಪರ್ಧಿಸದ ಹಿನ್ನಲೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಮುಂದಿನ 5 ವರ್ಷ ಆಡಳಿತ ವಹಿಸಿಕೊಂಡಿದ್ದಾರೆ. ಅಧಿಕಾರ ವಹಿಸಿಕೊಂಡು ಮಾತನಾಡಿದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಹಿಂದಿನ ಆಡಳಿತ ಮಂಡಳಿಯ ಸದಸ್ಯರು ಸಾಕಷ್ಟು ಕೆಲಸಗಳನ್ನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಲೇಜನ್ನು ಉತ್ತಮ ಸ್ಥಾನಗಳಿಗೆ ತೆಗೆದುಕೊಂಡು ಹೊಗಲು ನಮ್ಮ ಆಡಳಿತ ಮಂಡಳಿ ಸಜ್ಜಾಗಿದೆ ಎಂದರು. ನಾನು ಆಡಳಿತ ಮಂಡಳಿಯಲ್ಲಿ ಇದ್ದುಕೊಂಡೆ ಕಾಲೇಜಿನ…

Read More

ನಾಪೋಕ್ಲು ಸೆ.21 NEWS DESK : ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಚೇರಂಬಾಣೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀ ರಾಜರಾಜೇಶ್ವರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ 16 ಪ್ರಥಮ 16 ದ್ವಿತೀಯ ಹಾಗೂ 4 ತೃತೀಯ ಬಹುಮಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಪ್ರಾಥಮಿಕ ವಿಭಾಗದಲ್ಲಿ ಹಿಂದಿ ಕಂಠಪಾಠ ಕೆ.ಜಿ.ಜಿತಿನ್ ಪ್ರಥಮ, ಕನ್ನಡ ಕಂಠಪಾಠ ಅನ್ವಿತಾ ಸುದೀಪ್ ತೃತೀಯ, ಸಂಸ್ಕೃತ ಧಾರ್ಮಿಕ ಪಠಣ ತನ್ವಿತ ರಾಜೇಶ್, ಅರೇಬಿಕ್ ಧಾರ್ಮಿಕ ಪಠಣ ಶಾಜಿನ್ ದ್ವಿತೀಯ, ದೇಶಭಕ್ತಿಗೀತೆ ನಿಖಿಲ್ ನಂಜಪ್ಪ ಪ್ರಥಮ, ಕಥೆ ಹೇಳುವುದು ಎ.ಎನ್.ರಶ್ವಿನ್ ದ್ವಿತೀಯ, ಚಿತ್ರಕಲೆಯಲ್ಲಿ ಯಶಸ್ಸ್ ಮಂದಣ್ಣ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಅಶುಭಾಷಣ ಸ್ಪರ್ಧೆಯಲ್ಲಿ ಕೆ.ಆರ್.ನಿಕ್ಷ ದ್ವಿತೀಯ, ಕನ್ನಡ ಕಂಠಪಾಠದಲ್ಲಿ ತನ್ವಿ ತೃತೀಯ, ಇಂಗ್ಲೀಷ್ ಕಂಠಪಾಠ ಎನ್.ಪಿ.ಧನ್ವಿ ದ್ವಿತೀಯ, ಹಿಂದಿ ಕಂಠಪಾಠ ಶಿಝ ಫಾತಿಮ ದ್ವಿತೀಯ, ಸಂಸ್ಕೃತ ಧಾರ್ಮಿಕ ಪಠಣ ಅಪ್ರಮೇಯ ಪ್ರಥಮ, ಅರೇಬಿಕಾ ಧಾರ್ಮಿಕ ಪಠಣ ಸುಹೈಬ್ ತೃತೀಯ, ದೇಶಭಕ್ತಿಗೀತೆ ಸಮೀಕ್ಷ ಪ್ರಥಮ, ಕಥೆ…

Read More

ನಾಪೋಕ್ಲು ಸೆ.21 NEWS DESK : ಅವಂದೂರು ಗ್ರಾಮದ ಗೋಪಾಲಕೃಷ್ಣ ಯುವ ಸಂಘದ ಆಶ್ರಯದಲ್ಲಿ ಅ.6 ರಂದು ಪ್ರಥಮ ವರ್ಷದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ. ಅವಂದೂರಿನ ಅನಂತ ಹೋಂಸ್ಟೇ ಬಳಿ ಸ್ಪರ್ಧೆ ಆಯೋಜಿಸಲಾಗಿದ್ದು, 0.22 ರೈಫಲ್, ತೋಟದ ಕೋವಿ ಮತ್ತು ಏರ್ ರೈಫಲ್ ವಿಭಾಗಗಳಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಕೀರ್ತನ್ ದೇವಾಯಿರ -9591094700, ಹರ್ಷಿತ್ ಉರೋಳನ-9845033429, ಮಧು ಕಾಳೇರಮ್ಮನ-8792004031, ದೇವಾಯಿರ ಅರುಣ-8861142814 ಸಂಪರ್ಕಿಸಬಹುದಾಗಿದೆ ಎಂದು ಸಂಘದ ಪ್ರಮುಖರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ : ದುಗ್ಗಳ ಸದಾನಂದ. 

Read More

ಮಡಿಕೇರಿ ಸೆ.21 NEWS DESK : ಸರ್ಕಾರದ ಮಹತ್ತರ ಯೋಜನೆಯಾದ ನೇಕಾರ್ ಸಮ್ಮಾನ್ ಯೋಜನೆಯಡಿ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನೇಕಾರರಿಗೆ ವಾರ್ಷಿಕವಾಗಿ ಒಂದು ಬಾರಿಗೆ ರೂ. 5 ಸಾವಿರ ಗಳ ಸಹಾಯಧನವನ್ನು ಸರ್ಕಾರದಿಂದ ಡಿ.ಬಿ.ಟಿ ಮೂಲಕ (ನೇರ ನಗದು ವರ್ಗಾವಣೆ) ನೀಡಲಾಗುತ್ತಿದೆ. 2024-25 ನೇ ಸಾಲಿಗೆ ಸಹಾಯಧನವನ್ನು ಪಡೆಯಲು ಜಿಲ್ಲೆಯ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನೇಕಾರರು ಹಾಗೂ ನೇಕಾರಿಕೆ ಪೂರಕ ವೃತ್ತಿಯನ್ನು ಅವಲಂಬಿಸಿರುವ ಎಲ್ಲಾ ನೇಕಾರರು ಈ ಯೋಜನೆಯಡಿ ರೂ. 5 ಸಾವಿರ ಗಳ ವಾರ್ಷಿಕ ಒಂದು ಬಾರಿಯ ಸಹಾಯಧನ ಪಡೆಯಲು ಅರ್ಹರಿದ್ದು, ಅರ್ಜಿ ನಮೂನೆಗಳನ್ನು ತಮ್ಮ ನೇಕಾರ ಸಹಕಾರ ಸಂಘಗಳಿಂದ/ ಕಚೇರಿಯಿಂದ ಪಡೆದು ಸಂಘದ ಮೂಲಕ ಸಲ್ಲಿಸಬೇಕಿದೆ. ವೈಯಕ್ತಿಕ ನೇಕಾರರಾಗಿದ್ದಲ್ಲಿ ನೇಕಾರ್ ಸಮ್ಮಾನ್ ಅರ್ಜಿ ನಮೂನೆಗಳನ್ನು ಈ ಕಚೇರಿಯಿಂದ ಪಡೆದು ಸಲ್ಲಿಸಬಹುದಾಗಿದೆ. ಕೈಮಗ್ಗ ನೇಕಾರರಿಂದ ಸಲ್ಲಿಸಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್, ರೇಷನ್ ಕಾರ್ಡ್, ನೇಕಾರ್ ಸಮ್ಮಾನ್ ಐಡಿ/ ಪೆಹಚಾನ್ ಕಾರ್ಡ್, ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆ ಪಾಸ್‍ಬುಕ್…

Read More

ಮಡಿಕೇರಿ ಸೆ.21 NEWS DESK : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು 2022 ಮತ್ತು 2023 ನೇ ವರ್ಷದ ‘ಗೌರವ ಪ್ರಶಸ್ತಿ’ ಗೆ ಅರ್ಜಿ ಆಹ್ವಾನಿಸಲಾಗಿದೆ. ಅರೆಭಾಷೆ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಅಧ್ಯಯನ ಮುಂತಾದ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಮಹನೀಯರನ್ನು 2022 ಮತ್ತು 2023 ನೇ ವರ್ಷದ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಪ್ರತಿ ವರ್ಷ ಪ್ರತಿಯೊಂದು ಕ್ಷೇತ್ರಕ್ಕೆ ಒಬ್ಬರಂತೆ 3 ಜನ ಸಾಧಕರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಅರ್ಜಿಗಳನ್ನು ಸ್ವತ: ಸಾಧಕರೇ ಸಲ್ಲಿಸಬಹುದು ಅಥವಾ ಸಾಧಕರ ಅಭಿಮಾನಿಗಳು ಶಿಫಾರಸ್ಸುಮಾಡಿ ಅರ್ಜಿ ಸಲ್ಲಿಸಬಹುದು. ಪ್ರಶಸ್ತಿಗೆ ಅರ್ಹರಾಗಿರುವವರ ಕುರಿತಾಗಿ ಹೆಚ್ಚಿನ ಅಥವಾ ವಿಶೇಷ ಮಾಹಿತಿ ಇದ್ದಲ್ಲಿ ಅಕಾಡೆಮಿಗೆ ಒದಗಿಸಬಹುದು. ಅರ್ಜಿ ಸಲ್ಲಿಸುವವರು ವ್ಯಕ್ತಿ ಪರಿಚಯದ ಜೊತೆ ಎಲ್ಲಾ ಮಾಹಿತಿಯನ್ನು ಅಕಾಡೆಮಿಯ ನಿಗದಿತ ಅರ್ಜಿ ನಮೂನೆಯಲ್ಲಿಯೇ ಕಳುಹಿಸಬೇಕು. ಇದಕ್ಕೆ ಸಂಬಂಧಿಸಿ ನಿಗದಿತ ಅರ್ಜಿ ನಮೂನೆಯನ್ನು ಅಕಾಡೆಮಿಯ ಕಚೇರಿಯಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಇತ್ತೀಚಿನ ಭಾವಚಿತ್ರ ಹಾಗೂ ದಾಖಲೆಗಳ ಪ್ರತಿಯೊಂದಿಗೆ…

Read More