ಲೇಖಕ: admin

ಮಡಿಕೇರಿ ಸೆ.21 NEWS DESK : ಕೆ.ಪಿ.ಎಸ್.ಸಿ ಯಿಂದ ನೂತನವಾಗಿ ಸಹಾಯಕ ನಗರ ಆಯೋಜಕರಾಗಿ ನೇಮಕಗೊಂಡಿರುವ ಅಭ್ಯರ್ಥಿಗಳು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. 20-3-2024 ರಂದು ರಾಜ್ಯಾದ್ಯಂತ 60 ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದು ದಿನಾಂಕ 1-2-2023 ರ ಸರ್ಕಾರದ ಸುತ್ತೋಲೆ ಅನ್ವಯ ಹುದ್ದೆ ಪಡೆಯಲು ಕಾನೂನು ತೊಡಕು ಉಂಟಾದ ಹಿನ್ನಲೆ ಎ.ಎಸ್.ಪೊನ್ನಣ್ಣರಿಗೆ ಕಾನೂನು ತೊಡಕನ್ನು ಪರಿಹರಿಸಲು ಮನವಿ ಮಾಡಿದ್ದಾರೆ.

Read More

ಸುಂಟಿಕೊಪ್ಪ ಸೆ.21 NEWS DESK : ಮಾದಾಪುರ ಎಸ್‍ಜೆಎಮ್ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು. ಎಸ್‍ಜೆಎಮ್ ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಮುರುಗ ಮಠ ಮೋಕ್ಷ ಪತಿ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆಯಾಗಿದೆ. ಮಕ್ಕಳು ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಮೂಲಕ ಜಿಲ್ಲೆ ರಾಜ್ಯ ಮಟ್ಟದಲ್ಲಿ ಪ್ರತಿಭೆಗಳು ಬೆಳಗಲೆಂದು ಶುಭ ಹಾರೈಸಿದರು. ರಮಾನಾಥಪುರ ಆಯುರ್ವೇದಿಕ್ ಆಸ್ಪತ್ರೆಯ ಡಾ.ಹರ್ಷ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಸಂದರ್ಭದಲ್ಲಿ ಅತಿಥಿಗಳು, ಶಿಕ್ಷಕರು ಹಾಗೂ ಪೋಷಕರು ಹೇಳುವ ಮಾತುಗಳಿಂದ ಕಿರಿ ಕಿರಿ ಉಂಟಾಗುವ ಭಾವನೆ ನಿಮ್ಮಲ್ಲಿ ಮೂಡುತ್ತದೆ ಆದರೆ ಮುಂದಿನ ಭವಿಷ್ಯದಲ್ಲಿ ಈ ಮಾತುಗಳು ಬದುಕಿನ ದಾರಿ ದೀಪವಾಗಲಿದೆ ಎಂದು ಕಿವಿಮಾತು ಹೇಳಿದರು. ವೇದಿಕೆಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜಿನ ಉಪನ್ಯಾಸಕ ಪೆಮ್ಮಯ್ಯ, ಪ್ರೊ.ಕಬ್ಬಡ್ಡಿ ಆಟಗಾರ ಅವಿನಾಶ್, ಸುಂಟಿಕೊಪ್ಪ ಉದ್ಯಮಿ ಅನೂಪ್, ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಮಂಜುನಾಥ್, ಮುಖ್ಯ ಶಿಕ್ಷಕಿ ಪ್ರಜ್ಞಾ, ಶಾಲಾ ಆಡಳಿತ ಮಂಡಳಿಯ ಅನಿಶಕುಮಾರ್, ಕುಮಾರ್,…

Read More

ಮಡಿಕೇರಿ ಸೆ.21 NEWS DESK : 2024ನೇ ಸಾಲಿನ ಮಡಿಕೇರಿ ನಗರ ದಸರಾ ಅಲಂಕಾರ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನಗರದ ದಸರಾ ಸಮಿತಿ ಕಚೇರಿಯಲ್ಲಿ ಸಮಿತಿಯ ಅಧ್ಯಕ್ಷ ಎಂ.ಎ.ಮುನೀರ್ ಮಾಚರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೌರವ ಸಲಹೆಗಾರರಾಗಿ ಪಿ.ಜಿ.ಮಂಜುನಾಥ್,  ಉಪಾಧ್ಯಕ್ಷರಾಗಿ ರವಿಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಜಿ.ಎನ್.ಭರತ್, ಕಾರ್ಯದರ್ಶಿಯಾಗಿ ಲಿಲ್ಲಿಗೌಡ, ಸಹ ಕಾರ್ಯದರ್ಶಿಯಾಗಿ ಜಿ.ಎನ್.ಪುನೀತ್, ಖಜಾಂಚಿಯಾಗಿ ರಫೀಕ್ ( ದಾದಾ ) ಸಂಘಟನಾ ಕಾರ್ಯದರ್ಶಿ ಹರ್ಷಿತ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ  ರವಿಗೌಡ ಸ್ವಾಗತಿಸಿದರು. ಭರತ್ ವಂದಿಸಿದರು.

Read More

ಮಡಿಕೇರಿ ಸೆ.21 NEWS DESK : ಚೆಟ್ಟಿಮಾನಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಸ್ಥಳೀಯ ಸಂಸ್ಥೆ ಸಂಪಾಜೆಗೆ ಒಳಪಟ್ಟ ಶಾಲಾ ಕಾಲೇಜುಗಳ ಕಬ್, ಬುಲ್ ಬುಲ್, ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೆಂಜರ್ಸ್ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಮತ್ತು ಜನಪದ ಗೀತೆ ಸ್ಪರ್ಧೆ ನಡೆಯಿತು. ಕಾರ್ಯಕ್ರಮವನ್ನು ಕುಂದಚೇರಿ ಗ್ರಾ.ಪಂ ಅಧ್ಯಕ್ಷರು ಹಾಗೂ ಮಾಜಿ ಸೈನಿಕ  ಪೊಡನೊಳನ ದಿನೇಶ್ ಉದ್ಘಾಟಿಸಿ, ಪ್ರತಿಯೊಬ್ಬರು ಶಿಸ್ತು ಮತ್ತು ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಂಡಾಗ ನಮ್ಮ ಬದುಕು ಸುಂದರವಾಗಿರುತ್ತದೆ. ಇಂತಹ ಕಾರ್ಯಕ್ರಮ ಇದಕ್ಕೆ ಪೂರಕವಾಗಿದ್ದು, ಮಕ್ಕಳ ಪ್ರತಿಭೆಯನ್ನು ಗುರುತಿಸಲು ಸಹಕಾರಿಯಾಗಿದೆ ಎಂದರು. ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷ ಕೆ.ಎಸ್.ಅಣ್ಣಯ್ಯ ಮಾತನಾಡಿ, ನಮ್ಮ ದೇಶ ನಮ್ಮ ಹೆಮ್ಮೆ. ಸದಾ ನಾವು ದೇಶ ಪ್ರೇಮಿಗಳಾಗಿಯೇ ಬದುಕಿದಾಗ ಉತ್ತಮ ರಾಷ್ಟ್ರ ನಿರ್ಮಾಣ ಆಗುತ್ತದೆ. ಆಗ ಈ ರೀತಿಯ ಕಾರ್ಯಕ್ರಮಕ್ಕೆ ಅರ್ಥ ಬರಲು ಸಾಧ್ಯ ಎಂದು ಹೇಳಿದರು. ಸಭಾ ಅಧ್ಯಕ್ಷತೆಯನ್ನು ಸಂಪಾಜೆ ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಂ.ಧನಂಜಯ…

Read More

ಮಡಿಕೇರಿ NEWS DESK ಸೆ.20 : ಮಡಿಕೇರಿ ನಗರಸಭೆಯ ನೂತನ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಹೆಚ್.ಆರ್.ರಮೇಶ್ ಅವರನ್ನು ಫೀಲ್ಡ್ ಮಾರ್ಷಲ್  ಕೆ.ಎಂ.ಕಾರ್ಯಪ್ಪ  ಅಭಿಮಾನಿ ಸಂಘ, ವಿಷ್ಣುಸೇನಾ ಸಮಿತಿ, ಕೊಡಗು ಹಿತರಕ್ಷಣಾ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖರು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಇದೇ ಸಂದರ್ಭ ಮಡಿಕೇರಿ ನಗರದ ಸಮಸ್ಯೆಗಳಾದ ರಸ್ತೆ, ಬೀದಿ ದೀಪಗಳ ಅವ್ಯವಸ್ಥೆ, ಅವೈಜ್ಞಾನಿಕ ರೂಪದ ಕಸ ವಿಲೇವಾರಿ, ಅಶುಚಿತ್ವದ ಸಾರ್ವಜನಿಕ ಶೌಚಾಲಯಗಳು, ವಿಳಂಬವಾಗುತ್ತಿರುವ ಕಡತಗಳ ವಿಲೇವಾರಿ ಮತ್ತಿತರ ವಿಚಾರಗಳನ್ನು ಪೌರಾಯುಕ್ತರ ಗಮನಕ್ಕೆ ತಂದರು.  ಕೊಡಗು ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರವಿಗೌಡ, ಫೀಲ್ಡ್ ಮಾರ್ಷಲ್   ಕೆ.ಎಂ.ಕಾರ್ಯಪ್ಪ ಅಭಿಮಾನಿ ಸಂಘದ  ಅಧ್ಯಕ್ಷ ಎಂ.ಎ.ಮುನೀರ್ ಮಾಚರ್, ಕೊಡಗು ಜಿಲ್ಲಾ ವಿಷ್ಣು ಸೇನಾ ಸಮಿತಿಯ ಜಿಲ್ಲಾಧ್ಯಕ್ಷ ರಫೀಕ್ (ದಾದಾ) ಕರ್ನಾಟಕ ರಕ್ಷಣಾ ವೇದಿಕೆಯ ಮಡಿಕೇರಿ ನಗರಾಧ್ಯಕ್ಷ ಭರತ್, ಹಿತರಕ್ಷಣಾ ವೇದಿಕೆಯ ಲಿಲ್ಲಿಗೌಡ, ಸದಸ್ಯರುಗಳಾದ ಪುನೀತ್, ಹರ್ಷಿತ್ ಮತ್ತಿತರರು ಇದ್ದರು.

Read More

ಕುಶಾಲನಗರ NEWS DESK ಸೆ.20 : ಕುಶಾಲನಗರ ಪಟ್ಟಣ ಪಂಚಾಯಿತಿಯ 2ನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸೆ.25ರಂದು ನಿಗದಿಯಾಗಿದೆ. ಇಬ್ಬರು ನಾಮ ನಿರ್ದೇಶಿತ ಸದಸ್ಯರಿಗೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ತಹಶೀಲ್ದಾರ್ ಅವಕಾಶ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪ್ರಮುಖರು ಹಾಗೂ ಪುರಸಭೆಯ ಬಿಜೆಪಿ ಸದಸ್ಯರು ತಾಲ್ಲೂಕು ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು. ಕುಶಾಲನಗರ ಬಿಜೆಪಿ ಅಧ್ಯಕ್ಷ ಎಂ.ಎಂ.ಚರಣ್ ಮಾತನಾಡಿ ನಾಮನಿರ್ದೇಶಿತ ಸದಸ್ಯರುಗಳಿಗೆ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇರುವುದಿಲ್ಲ. ತಹಶೀಲ್ದಾರರು ಪಾರದರ್ಶಕವಾಗಿ ಚುನಾವಣೆ ನಡೆಸಬೇಕು. ಇಲ್ಲದಿದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಬಿಜೆಪಿ ಮಾಜಿ ಅಧ್ಯಕ್ಷ ಕೆ.ಜಿ.ಮನು ಮಾತನಾಡಿ, 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನಿಯಮಬಾಹಿರವಾಗಿ ಮುಳ್ಳುಸೋಗೆ ಭಾಗದ ಇಬ್ಬರು ನಾಮ ನಿರ್ದೇಶಿತ ಸದಸ್ಯರಿಗೆ ಮತದಾನ ಮಾಡುವಂತೆ ತಿಳಿಸಲಾಗಿದೆ. ಇದು ಕಾನೂನಿಗೆ ವಿರುದ್ಧವಾಗಿದ್ದು, ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ನಡುವೆ ಮಡಿಕೇರಿಗೆ ತೆರಳುತ್ತಿದ್ದ ವಿರೋಧ ಪಕ್ಷದ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್…

Read More

ಮಡಿಕೇರಿ NEWS DESK ಸೆ.20 : ಖ್ಯಾತ ನಿದೇರ್ಶಕ, ನಟ ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ನಿರ್ಮಾಣ ಮಾಡಿರುವ “ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರ ಇದೀಗ ಕುಶಾಲನಗರ ಮತ್ತು ಸುಂಟಿಕೊಪ್ಪದ ಚಿತ್ರಮಂದಿರಗಳಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. “ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರ ಪ್ರೇಮಕಾವ್ಯವಾಗಿದ್ದು, ಚಿತ್ರ ನೋಡಿದವರು ಹೃದಯಸ್ಪರ್ಶಿ ಪ್ರೇಮಕಥೆಯ ಕುರಿತು ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಕೊಡಗಿನ ಪೂಜಾರಿರ ಚಂದ್ರಜಿತ್ ಬೆಳ್ಯಪ್ಪ ನಿರ್ದೇಶಿಸಿರುವ “ಇಬ್ಬನಿ ತಬ್ಬಿದ ಇಳೆಯಲಿ” ಸಿನಿಮಾದಲ್ಲಿ ಸಿದ್ಧಾರ್ಥ್ ಅಶೋಕ್ ಆಗಿ ವಿಹಾನ್ ಗೌಡ, ಅನಹಿತಳಾಗಿ ಅಂಕಿತಾ ಅಮರ್, ಮಧುಮಿತಳಾಗಿ ಗಿರಿಜಾ ಶೆಟ್ಟರ್, ರಾಧಾ ಪಾತ್ರದಲ್ಲಿ ಮಯೂರಿ ನಟರಾಜ ನಟಿಸಿದ್ದಾರೆ. ಫರ್ಹಾನ್ ಆಗಿ ಶಂಕರ್ ಮೂರ್ತಿ ಎಸ್.ಆರ್, ಅಶೋಕ್ ನಾಚಪ್ಪ ಪಾತ್ರದಲ್ಲಿ ಸಲ್ಮಿನ್ ಶೆರಿಫ್ ನಟಿಸಿದ್ದಾರೆ. ಗಗನ್ ಬಡೇರಿಯಾ ಸಂಗೀತ ನೀಡಿದ್ದು, ಶ್ರೀನಿವಾಸನ್ ಸೆಲ್ವರಾಜನ್ ಛಾಯಾಗ್ರಹಣ ಮಾಡಿದ್ದಾರೆ. ರಕ್ಷಿತ್ ಕಾಪು ಸಂಕಲನ, ಶರತ್ ಕೆ.ವಿ ಪ್ರೊಡಕ್ಷನ್ ಡಿಸೈನರ್, ನವ್ಯಾ ಬಿ.ಆರ್ ವಸ್ತç ವಿನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. “ಬ್ಲಾಗ್ ಬರವಣಿಗೆಯ ಕಾಲದಲ್ಲಿ 9 ವರ್ಷಗಳ…

Read More

ಮಡಿಕೇರಿ ಸೆ.20 NEWS DESK : ಕೊಡಗು ಜಿಲ್ಲೆಯ 64 ಮಾರ್ಗಗಳಲ್ಲಿ ಕೆಎಸ್‍ಆರ್‍ಟಿಸಿ ಬಸ್ ಸಂಚಾರಕ್ಕೆ ಪರವಾನಗಿ ನೀಡುವ ಸಂಬಂಧ ಆಕ್ಷೇಪಣೆ ಇದ್ದಲ್ಲಿ ಲಿಖಿತವಾಗಿ ಮಾಹಿತಿ ಒದಗಿಸುವಂತೆ ಖಾಸಗಿ ಬಸ್ ಮಾಲೀಕರ ಸಂಸ್ಥೆಯವರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಲಹೆ ಮಾಡಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾರ್ವಜನಿಕರ ಬೇಡಿಕೆ ಸಂಬಂಧ ಈಗಾಗಲೇ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಬಗ್ಗೆ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಸರ್ವೇ ಮಾಡಲಾಗಿದ್ದು, ಈ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ಖಾಸಗಿ ಬಸ್ ಸಂಸ್ಥೆಯವರು ಅಕ್ಟೋಬರ್ ಕೊನೆವಾರದಲ್ಲಿ ನಡೆಯುವ ಸಭೆಗೂ ಮುಂಚಿತವಾಗಿ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಖಾಸಗಿ ಬಸ್‍ಗಳ ಓಡಾಟಕ್ಕೆ ಯಾವ ರೀತಿ ತೊಂದರೆಯಾಗುತ್ತದೆ ಎಂಬ ಬಗ್ಗೆ ನಿಖರ ಮಾಹಿತಿ ಒದಗಿಸಬೇಕು. ಸಾರಿಗೆ ಸಂಪರ್ಕ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಸ್ಪಂದಿಸುವುದು ಅತೀ ಮುಖ್ಯವಾಗಿದೆ. ಎಲ್ಲರೂ ಸಹಕಾರ ಮನೋಭಾವದಿಂದ ನಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಬಸ್ಸು ಸಂಚಾರ…

Read More

ಮಡಿಕೇರಿ ಸೆ.20 NEWS DESK : ತಾಲ್ಲೂಕು ದಸರಾ ಕ್ರೀಡಾಕೂಟಕ್ಕೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಅವರು ಚಾಲನೆ ನೀಡಿದರು. ಅಥ್ಲೆಟಿಕ್ಸ್ ಸಂಬಂಧಿಸಿದಂತೆ 100, 200, 400, 800 ಹಾಗೂ 1500 ಹಾಗೂ 5 ಸಾವಿರ, 10 ಸಾವಿರ ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ತಟ್ಟೆ ಎಸೆತ, ರಿಲೇ, ಹಾಗೆಯೇ ವಾಲಿಬಾಲ್, ಕೋಕೋ, ಥ್ರೋಬಾಲ್, ಪುಟ್ಬಾಲ್ ಆಟಗಳು ನಡೆದವು. ಮಡಿಕೇರಿ ತಾಲ್ಲೂಕಿಗೆ ಸಂಬಂಧಿಸಿದಂತೆ ಹಾಕಿ ಆಯ್ಕೆ ಪ್ರಕ್ರಿಯೆಯು ಕುಶಾಲನಗರ ಕೂಡಿಗೆಯ ಹಾಕಿ ಟರ್ಪ್ ಮೈದಾನದಲ್ಲಿ ಸೆಪ್ಟೆಂಬರ್ 21 ರಂದು ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದರು. ಸರ್ಕಾರ ದಸರಾ ಕ್ರೀಡಾಕೂಟಕ್ಕೆ ಅವಕಾಶ ಮಾಡಿದ್ದು, ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಜಿಲ್ಲಾ, ವಿಭಾಗ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟಗಳು ನಡೆಯಲಿದ್ದು, ಈ ಅವಕಾಶವನ್ನು ಕ್ರೀಡಾಪಟುಗಳು…

Read More

ಮಡಿಕೇರಿ ಸೆ.20 NEWS DESK  : ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿಗಳ ಯಶಸ್ವಿ ಅನುಷ್ಠಾನಕ್ಕಾಗಿ ರಚಿತಗೊಂಡಿರುವ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಕೊಡಗು ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಅವರ ನೂತನ ಕಚೇರಿಯನ್ನು ಮಡಿಕೇರಿ ಶಾಸಕ  ಡಾ.ಮಂತರ್ ಗೌಡ ಉದ್ಘಾಟಿಸಿದರು. ನಗರದ ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿ ಆರಂಭಗೊಂಡಿರುವ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಜಿಲ್ಲೆಯಲ್ಲಿ ಪ್ರತಿಯೊಬ್ಬರಿಗೂ ಸರಕಾರದ ಗ್ಯಾರಂಟಿ ತಲುಪಿಸುವಲ್ಲಿ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು. ಈ ಸಂದರ್ಭ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಡಿ.ಕೆ.ಬ್ರಿಜೇಶ್, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ, ಜಿಲ್ಲಾ ಹಾಗೂ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರುಗಳು, ಸದಸ್ಯರುಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಮುಂಚೂಣಿ ಘಟಕ/ಸೆಲ್ ಗಳ ಅಧ್ಯಕ್ಷರುಗಳು ಹಾಗೂ ಪಕ್ಷದ ಪ್ರಮುಖರು, ಫಲಾನುಭವಿಗಳು ಹಾಜರಿದ್ದರು.

Read More