ವಿರಾಜಪೇಟೆ ಜು.26 NEWS DESK : ಕೆದಮುಳ್ಳೂರು ಗ್ರಾಮದ ತೆರ್ಮೆಮೊಟ್ಟೆ ನಿವಾಸಿ ವೃದ್ದೆ ಕಮಲ ಅವರ ವಾಸದ ಮನೆ ಕುಸಿದು ಬಿದ್ದು ವಾಸಿಸಲು ಮನೆ ಇಲ್ಲದ ಪರಿಸ್ಥಿತಿ ಎದುರಾಗಿತ್ತು. ಕುಟುಂಬಸ್ಥರಿAದ ವಿಚಾರ ತಿಳಿದುಕೊಂಡ ವಿರಾಜಪೇಟೆ ತಾಲೂಕು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಗಣೇಶ್ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದಂತೆ ಮನೆ ನಿರ್ಮಾಣ ಮಾಡಿಕೊಟ್ಟಿದ್ದರು. ಗಣೇಶ್ ಅವರ ಮಾನವೀಯ ಕಾರ್ಯಕ್ಕೆ ಮನಸೋತ ಕೆದಮುಳ್ಳೂರು ಗ್ರಾಮದ ತೆರ್ಮೆಮೊಟ್ಟೆ ನಿವಾಸಿಗಳು ಹಾಗೂ ಕುಟುಂಬಸ್ಥರು ಗಣೇಶ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಕೆದಮುಳ್ಳೂರು ಗ್ರಾ.ಪಂ ಉಪಾಧ್ಯಕ್ಷ ಪರಮೇಶ್ ಮಾತನಾಡಿ ಮನೆ ಕುಸಿದು ಬಿದ್ದ ಸಂದರ್ಭ ಗ್ರಾಮಸ್ಥರು ಸೇರಿ ಅವರಿಗೆ ಸಹಾಯ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಅವರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಪಂಚಾಯಿತಿ ವತಿಯಿಂದ ಮಾಡಿಕೊಡಲಾಗುತ್ತದೆ ಎಂದು ಭರವಸೆ ನೀಡಿದರಲ್ಲದೆ, ಮಾನವೀಯ ನೆಲೆಗಟ್ಟಿನಲ್ಲಿ ಬಡಕುಟುಂಬಕ್ಕೆ ಸಹಾಯ ಹಸ್ತ ಚಾಚಿ ಕುಟುಂಬಕ್ಕೆ ಆಸರೆಯಾಗಿದ್ದು ಮೆಚ್ಚುವ ಕಾರ್ಯ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಸ್ಥಳೀಯರಾದ ಗೌಡುದಾರೆ ಚೋಟು ಬಿದ್ದಪ್ಪ ಮಾತನಾಡಿ, ಸ್ಥಳೀಯ ಪಂಚಾಯಿತಿ…
ಲೇಖಕ: admin
ಮಡಿಕೇರಿ ಜು.26 NEWS DESK : ವಿರಾಜಪೇಟೆ ತಾಲ್ಲೂಕಿನ ಬೈರಾಂಬಾಡಿ ಶಾಲೆಯ ಕಟ್ಟಡದ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಹಾನಿಯಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಭೇಟಿ ನೀಡಿ ಪರಿಶೀಲಿಸಿದರು.
ಮಡಿಕೇರಿ ಜು.26 NEWS DESK : ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಕಾರ್ಗಿಲ್ ವಿಜಯ್ ದಿವಸದ ಅಂಗವಾಗಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು. ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂ ಆವರಣದಲ್ಲಿರುವ ಅಮರ್ ಜವಾನ್ ಸ್ಮಾರಕದಲ್ಲಿ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಹುತಾತ್ಮರಿಗೆ ಪುಪ್ಪನಮನ ಸಲ್ಲಿಸಿದರು. ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ರವಿಕಾಳಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಜಿಲ್ಲಾ ವಕ್ತಾರ ಅರುಣ್ ಕುಮಾರ್, ಜಿಲ್ಲಾ ಉಪಾಧ್ಯಕ್ಷರು ಮನು ಮಂಜುನಾಥ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ಅನಿತಪೂವಯ್ಯ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿನೋದ್, ಪ್ರಸಾದ್ ಚಂಗಪ್ಪ, ಮಡಿಕೇರಿ ನಗರ ಯುವ ಮೋರ್ಚಾದ ಅಧ್ಯಕ್ಷ ಪಾಂಡಿರ ಪೂಣಚ್ಚ, ಪ್ರಧಾನ ಕಾರ್ಯದರ್ಶಿಗಳಾದ ಮನು, ವಿಘ್ನೇಶ್, ಗ್ರಾಮಾಂತರ ಮಂಡಲ ಅಧ್ಯಕ್ಷ ಚೇತನ್ ಬಂಗೇರ, ಪ್ರಧಾನ ಕಾರ್ಯದರ್ಶಿಗಳಾದ ದರ್ಶನ್, ಪ್ರವೀಣ್, ನಗರ ಓ ಬಿ ಸಿ ಮೋರ್ಚಾದ ಅಧ್ಯಕ್ಷ ಗಜೇಂದ್ರ (ಕುಶ), ಮಡಿಕೇರಿ ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್, ನಗರ ಸಭೆ ಸ್ಥಾಯಿ…
ಮಡಿಕೇರಿ ಜು.26 NEWS DESK : ಶನಿವಾರಸಂತೆ ಹೋಬಳಿಯ ಮಾಲಂಬಿ ಬಳಿ ಕುಶಾಲನಗರ- ಶನಿವಾರಸಂತೆ ರಸ್ತೆ ಬದಿಯಲ್ಲಿ ಬೃಹತ್ ಮರ ಬಿದ್ದು ವಾಹನ ಸಂಚಾರಕ್ಕೆ ವ್ಯತ್ಯಯವಾಗಿದೆ. ಅಗ್ನಿಶಾಮಕ ಅಧಿಕಾರಿಗಳು ಸಿಬ್ಬಂದಿಗಳು ಮರ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಮಡಿಕೇರಿ ಜು.26 NEWS DESK : ಹೆಚ್ಚಿನ ಮಳೆಗೆ ಸೋಮವಾರಪೇಟೆ – ಶಾಂತಳ್ಳಿ ಮುಖ್ಯರಸ್ತೆಯ ಜೇಡಿಗುಂಡಿ ಬಳಿ ಬರೆ ಕುಸಿದು ಸಂಪೂರ್ಣ ರಸ್ತೆ ಮುಚ್ಚಿಹೋಗಿದ್ದು, ಜೆಸಿಬಿ ಗಳ ಮೂಲಕ ರಸ್ತೆ ತೆರವು ಕಾರ್ಯ ನಡೆದಿದೆ.
ಕಾರ್ಗಿಲ್ ಯುದ್ಧ ಸ್ಮಾರಕ(ಲಡಾಕ್) ಜು.26 : ಕಾರ್ಗಿಲ್ ವಿಜಯ್ ದಿವಾಸ್ ಹಿನ್ನೆಲೆ ದ್ರಾಸ್ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದರು. ನಂತರ ಅಲ್ಲಿರುವ ಮ್ಯೂಸಿಯಂಗೆ ಭೇಟಿ ನೀಡಿದ ಪ್ರಧಾನ ಮಂತ್ರಿಗಳು ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಬಳಸಿರುವ ಮಿಲಿಟರಿ ಉಪಕರಣಗಳು, ಭಾರತೀಯ ಸೇನೆಯ ಯುದ್ಧ ಸಲಕರಣೆಗಳು, ಹುತಾತ್ಮ ಯೋಧರ ಛಾಯಾಚಿತ್ರಗಳನ್ನು ವೀಕ್ಷಿಸಿದರು.
ನಾಪೋಕ್ಲು ಜು.26 NEWS DESK : ಆಟೋ ಚಾಲಕರು ಅಪಾಯಕಾರಿ ರಸ್ತೆ ಗುಂಡಿಗಳನ್ನು ಮುಚ್ಚುವುದರ ಮೂಲಕ ಶ್ರಮದಾನ ಮಾಡಿ ಸರ‍್ವಜನಿಕರ ಪ್ರಶಂಸೆಗೆ ಪಾತ್ರರಾದರು. ಹಳೆ ತಾಲೂಕಿನ ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಬಳಿ ರಸ್ತೆ ಹೊಂಡಗಳಾಗಿದ್ದು, ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆಯ ಗುಂಡಿಗಳಲ್ಲಿ ನಿಂತು ಕೆರೆಯಂತಾಗಿದ್ದರಿ0ದ ವಾಹನ ಚಾಲಕರು ಹಾಗೂ ಪಾದಚಾರಿಗಳು ಸಮಸ್ಯೆ ಎದುರಿಸುವಂತಾಗಿತ್ತು. ಇದನ್ನು ಮನಗಂಡು ನಾಪೋಕ್ಲುವಿನ ಆಟೋ ಚಾಲಕರು ಸ್ವಯಂ ಪ್ರೇರಿತರಾಗಿ ಜಲ್ಲಿ ಕಲ್ಲುಗಳನ್ನು ತಂದು ರಸ್ತೆಹೊಂಡ ಮುಚ್ಚುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.. ಈ ಸಂದರ್ಭ ಆಟೋ ಚಾಲಕ ಸಂಘದ ಮಾಜಿ ಅಧ್ಯಕ್ಷ ರಜಾಕ್, ಆಟೋ ಚಾಲಕರಾದ ಸತೀಶ್, ಚೇತನ್ , ಕಿರಣ್, ವಿನು, ಬಿಪಿನ್, ವಿಜು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ರಸ್ತೆ ಹೊಂಡಗಳಿಂದ ವಾಹನ ಸಂಚಾರಕ್ಕೆ ಬಹಳ ಸಮಸ್ಯೆ ಉಂಟಾಗುತ್ತಿದೆ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಆಟೋ ಚಾಲಕರ ಶ್ರಮದಾನ ಮಾಡಿದ್ದಾರೆ. ಈ ಹಿಂದೆ ಗ್ರಾಮೀಣ ಜಲಜೀವನ್ ಮಿಷನ್ ವತಿಯಿಂದ ರಸ್ತೆಗಡ್ಡಲಾಗಿ ಪೈಪ್…
ಮಡಿಕೇರಿ ಜು.26 NEWS DESK : ಭಾರಿ ಗಾಳಿ ಮಳೆಯಿಂದಾಗಿ ಕೊಡಗಿನ ವಿವಿಧೆಡೆ ಹಾನಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಜಿಲ್ಲೆಯ ಬಹುತೇಕ ಕಡೆ ರಭಸವಾಗಿ ಗಾಳಿ ಬೀಸುತ್ತಿದ್ದು, ಬರೆಗಳು ಕುಸಿಯುತ್ತಿವೆ, ಮರಗಳು ಧರೆಗುರುಳುತ್ತಿವೆ. ವಿದ್ಯುತ್ ಕಂಬಗಳು ಬಿದ್ದು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ವಿರಾಜಪೇಟೆ ತಾಲ್ಲೂಕಿನ ಕಳತ್ಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಮರ ಬಿದ್ದು ಹಾನಿಯಾಗಿದ್ದು, ಮರ ತೆರವುಗೊಳಿಸಿ, ಗ್ರಾಮಸ್ಥರು ಹಾನಿಯಾಗಿದ್ದ ಕೊಠಡಿಯನ್ನು ದುರಸ್ತಿಗೊಳಿಸಿದರು. ಶನಿವಾರಸಂತೆ ಹೋಬಳಿ ಹಾರೆ ಹೊಸೂರು ಗ್ರಾಮದ ಗಂಗಾಧರವರ ಎಂಬುವವರ ಮನೆಯ ಪಕ್ಕದಲ್ಲಿ ಮರ ಬಿದ್ದು ಹಾನಿಯಾಗಿದ್ದು, ತೆರವುಗೊಳಿಸುವ ಕಾರ್ಯ ನಡೆದಿದೆ.
ಮಡಿಕೇರಿ ಜು.26 NEWS DESK : ಭಾರಿ ಹಾಳಿ ಮಳೆಯಿಂದಾಗಿ ವಿದ್ಯುತ್ ಅಡಚಣೆ ಉಂಟಾಗಿ ನೀರಿನ ಸಮಸ್ಯೆ ಎದುರಿಸುತ್ತಿದ್ದ ಮಾದಾಪುರ ಬಳಿಯ ಜಂಬೂರಿನ ನಿವಾಸಿಗಳಿಗೆ ಸ್ಥಳೀಯ ಸಂಸ್ಥೆ ವತಿಯಿಂದ ಟ್ಯಾಂಕ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ.
ಬೆಂಗಳೂರು ಜು.26 NEWS DESK : ಬೆಂಗಳೂರಿನ ರಾಷ್ಟಿçÃಯ ಮಿಲಿಟರಿ ಸ್ಮಾರಕದಲ್ಲಿ ರಾಷ್ಟ್ರೀಯ ಸೈನಿಕ ಸ್ಮಾರಕ ಮ್ಯಾನೇಜ್ ಮೆಂಟ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ “ಕಾರ್ಗಿಲ್ ವಿಜಯ ದಿನ” ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುತಾತ್ಮ ಯೋಧರಿಗೆ ಗೌರವ ನಮನ ಅರ್ಪಿಸಿದರು. ದೇಶ ರಕ್ಷಣೆಗಾಗಿ ಬಲಿದಾನಗೈದ ಸೈನಿಕರ ನಿಸ್ವಾರ್ಥ ಸೇವಯನ್ನು ಮುಖ್ಯಮಂತ್ರಿಗಳು ಸ್ಮರಿಸಿಕೊಂಡರು.






