ಸೋಮವಾರಪೇಟೆ ಜು.25 NEWS DESK : ಸೋಮವಾರಪೇಟೆ ತಾಲ್ಲೂಕಿನ ಕಿರಗಂದೂರು, ತಾಕೇರಿ, ತಲ್ತಾರೆಶೆಟ್ಟಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದು, ತಕ್ಷಣ ವಿದ್ಯುತ್ ಮಾರ್ಗವನ್ನು ದುರಸ್ತಿಪಡಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಸೆಸ್ಕ್ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಕಿರಗಂದೂರು ಗ್ರಾಮದಲ್ಲಿ 10 ಕಂಬಗಳು ನೆಲಕ್ಕುರುಳಿದ್ದು ಕಳೆದ 20 ದಿನಗಳಿಂದ ವಿದ್ಯುತ್ ಇಲ್ಲ ಎಂದು ಕಿರಗಂದೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಚಿದಾನಂದ ಅಸಮಾಧಾನ ವ್ಯಕ್ತಪಡಿಸಿದರು. ತಾಕೇರಿ ಗ್ರಾಮದ 40 ಮನೆಗಳಿಗೆ ಒಂದು ವಾರದಿಂದ ವಿದ್ಯುತ್ ಇಲ್ಲದೆ ಸಮಸ್ಯೆಯಾಗಿದೆ. ಕೂಡಲೆ ವಿದ್ಯುತ್ ಮಾರ್ಗ ಸರಿಪಡಿಸಬೇಕು ಎಂದು ತಾಕೇರಿ ಪೊನ್ನಪ್ಪ ಆಗ್ರಹಿಸಿದರು. ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಸೆಸ್ಕ್ ಸಿಬಂದಿಗಳು ಶಕ್ತಿಮೀರಿ ದುರಸ್ತಿ ಕಾರ್ಯ ಮಾಡುತ್ತಿದ್ದಾರೆ. 3-4 ದಿನಗಳಲ್ಲಿ ಮಾರ್ಗ ಸರಿಪಡಿಸಿ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದು ಎಇಇ ರವಿಕುಮಾರ್ ಭರವಸೆ ನೀಡಿದ ನಂತರ ಪ್ರತಿಭಟನೆಯಿಂದ ಹಿಂದೆ ಸರಿಯಲಾಯಿತು. ಈ ಸಂದರ್ಭ ಗ್ರಾಮಸ್ಥರಾದ ಶಿವಕುಮಾರ್, ಈರಪ್ಪ, ಜೀವನ್, ಸಂದೀಪ್, ಬಿ.ಪಿ.ಅನಿಲ್, ಸುರೇಶ್, ಬಿ.ಎಸ್.ನಾಗೇಶ್, ಸೋಮಯ್ಯ ಮತ್ತಿತರರು ಇದ್ದರು.
ಲೇಖಕ: admin
ಸೋಮವಾರಪೇಟೆ ಜು.25 NEWS DESK : ಸೋಮವಾರಪೇಟೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಬಿರುಗಾಳಿ ಸಹಿತ ವರುಣ ಅರ್ಭಟಿಸುತ್ತಿದ್ದು, ಹಾನಿ ಪ್ರಮಾಣ ಹೆಚ್ಚಾಗುತ್ತಿದೆ. ಸೋಮವಾರಪೇಟೆ, ಶಾಂತಳ್ಳಿ, ಸಕಲೇಶಪುರ ರಾಜ್ಯ ಹೆದ್ದಾರಿಯ ಯಡೂರು ಗ್ರಾಮದ ಸಮೀಪ ಬರೆ ಕುಸಿದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಗುರುವಾರ ಬೆಳಗ್ಗಿನ ಜಾವ ಬರೆ ಕುಸಿದಿದ್ದು, ರಸ್ತೆಯಲ್ಲಿ ಮಣ್ಣು ಸಂಗ್ರಹವಾಗಿದೆ. ಯಂತ್ರಗಳ ಮೂಲಕ ಮಣ್ಣನ್ನು ಸಾಗಾಟ ಮಾಡಿದರೂ, ಮಣ್ಣು ಜರಿದು ರಸ್ತೆಗೆ ಬರುತ್ತಿದೆ. ಆ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಗೌಡಳ್ಳಿಯ ಗ್ರಾಮ ಪಂಚಾಯಿತಿ ಶುಂಠಿ ಗ್ರಾಮದ ಸಂಜಯ್ ಎಂಬ ಅಡಕೆ ತೋಟ ಜಲಾವೃತಗೊಂಡಿದ್ದು, ನಷ್ಟದ ಭೀತಿ ಎದುರಾಗಿದೆ. ಕಲ್ಕಂದೂರು ಗ್ರಾಮದ ಪ್ರವೀಣ್ ಎಂಬವರ ಮನೆ ಮೇಲೆ ಮರಬಿದ್ದು ಹಾನಿಯಾಗಿದೆ. ಬಿಳಿಗೇರಿ ಗ್ರಾಮದಲ್ಲಿ ಟ್ರಾನ್ಸ್ಫರ‍್ಮರ್ ಮುರಿದು ಬಿದ್ದಿದ್ದು ಇಡೀ ಗ್ರಾಮಕ್ಕೆ ವಿದ್ಯುತ್ ಸರಬರಾಜು ಇಲ್ಲದಂತಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಶಾಂತಳ್ಳಿ ಹೋಬಳಿಗೆ 218.0ಮಿಲಿ ಮೀಟರ್ ಮಳೆಯಾಗಿದೆ. ಕೊಡ್ಲಿಪೇಟೆ 105.4, ಸೋಮವಾರಪೇಟೆ 110.8, ಶನಿವಾರಸಂತೆಗೆ…
ಸುಂಟಿಕೊಪ್ಪ ಜು.25 NEWS DESK : ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಂಧಲೆ ಮಿತಿ ಮೀರಿದ್ದು, ತೋಟಗಳಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ. ಕೃಷಿ ಫಸಲನ್ನು ತಿಂದು ತೇಗುತ್ತಿರುವ ಕಾಡಾನೆಗಳಿಂದ ಜೀವಭಯವಿದೆ ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡೂರು- ಉಪ್ಪುತೋಡು ನಿವಾಸಿ ಜೈ ಜವಾನ್ ಜೈ ಕಿಸಾನ್ ಮಾಜಿ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜಿ.ಶಿವನ್ ಎಂಬುವವರ ತೋಟಕ್ಕೆ ಪ್ರತಿದಿನ ಬರುತ್ತಿರುವ ಕಾಡಾನೆ ತೆಂಗು ಮತ್ತು ಕಾಫಿ ಗಿಡಗಳನ್ನು ನಾಶ ಮಾಡಿದೆ. ಮನೆಯ ಸಮೀಪವೂ ಸುಳಿದಾಡುವ ಕಾಡಾನೆಗಳಿಂದ ಅಪಾಯವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕಾನ್ ಬೈಲ್ ಬೈಚನಹಳ್ಳಿಯ ನೆಟ್ಲಿ ‘ಬಿ’ ತೋಟದಲ್ಲಿ ಹಗಲು ವೇಳೆಯಲ್ಲೇ ಕಾಫಿ ಗಿಡಗಳ ಮಧ್ಯೆ ಕಾಡಾನೆ ನಿಂತಿರುವ ದೃಶ್ಯವನ್ನು ಕಾರ್ಮಿಕರು ಗಮನಿಸಿದ ಹಿನ್ನೆಲೆ ಉಳಿದ ಕಾರ್ಮಿಕರು ಜೀವ ಉಳಿಸಿಕೊಂಡಿದ್ದಾರೆ. ಸಮೀಪದ ಕೆಳಪನ್ಯ ತೋಟದಲ್ಲೂ ಎರಡು ಕಾಡಾನೆಗಳು ಕಾಣಿಸಿಕೊಂಡಿವೆ. ವಿಷಯವರಿತ ತೋಟದ ಮಾಲೀಕರು ಕೆಲಸದಿಂದ ವಾಪಾಸ್ಸಾಗುವಂತೆ ಕಾರ್ಮಿಕರಿಗೆ ತಿಳಿಸಿದ್ದರಿಂದ ಅಪಾಯದಿಂದ…
ಮಡಿಕೇರಿ ಜು.25 NEWS DESK : ಕರ್ನಾಟಕ ರಾಜ್ಯ ಬರಹಗಾರರ ಸಂಘದ ಕೊಡಗು ಜಿಲ್ಲಾಧ್ಯಕ್ಷೆಯಾಗಿ ಮೂಕಳೆರ ಟೈನಿ ಪೂಣಚ್ಚ ನೇಮಕ ಗೊಂಡಿದ್ದಾರೆ. ನಿರಂತರವಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಅತ್ಯುತ್ತಮ, ಉತ್ತಮ, ಪ್ರಥಮ ಸ್ಥಾನಗಳನ್ನು ಪಡೆದು, ಸಾಹಿತ್ಯ ಸೇವೆ ಮಾಡಿ, ಕರುನಾಡ ಸಾಹಿತ್ಯ ರತ್ನ ಪ್ರಶಸ್ತಿ, ಕವಿಪ್ರೇರಣ ಪ್ರಶಸ್ತಿ, ರಾಜ್ಯ ವಿಭೂಷಣ ಪ್ರಶಸ್ತಿ ಮತ್ತು ಅಕ್ಕಮಹಾದೇವಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.
ಮಡಿಕೇರಿ ಜು.25 NEWS DESK : ಹೆಚ್ಚಿನ ಮಳೆ ಮತ್ತು ಗಾಳಿಯಿಂದ ವಿದ್ಯುತ್ ಕಂಬ ಹಾಗೂ ಪರಿವರ್ತಕಗಳಿಗೆ ಹಾನಿಯಾಗಿದ್ದು, ಸರಿಪಡಿಸುವ ಕಾರ್ಯ ನಡೆದಿದೆ. ಈ ಸಂಬಂಧ ಸೆಸ್ಕ್ ಇಇ ಅನಿತಾ ಬಾಯಿ ಇಂದು ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ವ್ಯಾಪ್ತಿಗೆ ಭೇಟಿ ನೀಡಿ ಪರಿಶೀಲಿಸಿದರು. ಹಾಗೆಯೇ ಮಾದಾಪುರ ವ್ಯಾಪ್ತಿಯ ಗ್ರಾಮಸ್ಥರ ಅಹವಾಲು ಆಲಿಸಿದರು.
ಮಡಿಕೇರಿ ಜು.25 NEWS DESK : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ಕೊಡಗು ಇವರ ವತಿಯಿಂದ 2024-25 ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಜನಾಂಗದವರಿಗೆ ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ(ಓವರ್‌ಸೀಸ್) ಸಾಲ ಯೋಜನೆಯಡಿಯಲ್ಲಿ ನಿಗಮದಿಂದ ಸಾಲ ಸೌಲಭ್ಯ ನೀಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾನ್ಯತೆ ಪಡೆದಿರುವ ಯಾವುದೇ ವಿದೇಶ ವಿಶ್ವವಿದ್ಯಾಲಯದಿಂದ ಸಂಸ್ಥೆಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಮಾಡಬಯಸುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದೇಶಿ ವಿದ್ಯಾಭ್ಯಾಸ (OVERSEAS EDUCATION) ಸಾಲ ಯೋಜನೆಯಲ್ಲಿ ಸಾಲ ಪಡೆಯಲು ಅಪೇಕ್ಷಿಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ನಿಗಮದ ವೆಬ್ ಸೈಟ್ https://kmdconline.karnataka.gov.in/ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್, 31 ಕೊನೆಯ ದಿನವಾಗಿದೆ. ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಕಂಪ್ಯೂಟರ್‌ನಲ್ಲಿ ಭರ್ತಿ ಮಾಡಿದ ಕೂಡಲೇ ಅರ್ಜಿಯನ್ನು ಪ್ರಿಂಟೌಟ್ ಪಡೆದು ಕ್ಯೂಆರ್ ಕೋಡ್ ಹೊಂದಿದ ಅರ್ಜಿಯೊಂದಿಗೆ…
ಸುಂಟಿಕೊಪ್ಪ ಜು.25 NEWS DESK : ಶ್ರೀ ಗೌರಿ ಗಣೇಶೋತ್ಸವ ಸಮಿತಿಯ 2024 -25ನೇ ಸಾಲಿನ ಮಹಾಸಭೆಯು ಜು.27 ರಂದು ಸಂಜೆ 6 ಗಂಟೆಗೆ ಸಮಿತಿಯ ಅಧ್ಯಕ್ಷ ಎಸ್.ವಿಘ್ನೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸುಂಟಿಕೊಪ್ಪ ಶ್ರೀ ಕೋದಂಡ ರಾಮಚಂದ್ರ ದೇವಾಲಯದ ಆವರಣದಲ್ಲಿ ನಡೆಯಲಿರುವ ಸಭೆಗೆ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಭಕ್ತಾಧಿಗಳು ಪಾಲ್ಗೊಳ್ಳುವಂತೆ ಸೇವಾ ಸಮಿತಿಯ ಕಾರ್ಯದರ್ಶಿ ಲೋಕೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ 2023-24ನೇ ಸಾಲಿನ ಲೆಕ್ಕ ಪತ್ರ ಮಂಡನೆ ಮತ್ತು ನೂತನ ಸಮಿತಿ ರಚಿಸಲಾಗುವುದೆಂದು ತಿಳಿಸಿದ್ದಾರೆ.
ಮಡಿಕೇರಿ ಜು.25 NEWS DESK : ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಜು.26 ರಂದು ಕಾಗಿ೯ಲ್ ವಿಜಯ್ ದಿವಸ್ ಅಂಗವಾಗಿ ದೀಪನಮನ ಎಂಬ ವಿನೂತನ ಕಾಯ೯ಕ್ರಮ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ತಿಳಿಸಿದ್ದಾರೆ, ಮಡಿಕೇರಿಯ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ವೖತ್ತದ ಬಳಿಯಿರುವ ಗಾಂಧಿ ಭವನದಲ್ಲಿ ಸಂಜೆ 6.30 ಗಂಟೆಗೆ ಆಯೋಜಿತ ಕಾಯ೯ಕ್ರಮದಲ್ಲಿ ದೇಶದ ಸೇನಾನಿಗಳನ್ನು ಸ್ಮರಿಸುವ ದೇಶಭಕ್ತಿಗೀತೆ ಕಾಯ೯ಕ್ರಮ ಇರುತ್ತದೆ. ಸುಂಟಿಕೊಪ್ಪದ ವಿದ್ಯಾಥಿ೯ನಿ ಶ್ರೀಜಾ ಅವರಿಂದ ದೇಶದ ಸೇನಾನಿಗಳ ಮಹತ್ವದ ಬಗ್ಗೆ ಮಾತು, ನಂತರ ಕಾಗಿ೯ಲ್ ಹುತಾತ್ಮರಿಗೆ ಗೌರವಸೂಚಕವಾಗಿ ದೀಪಗಳನ್ನು ಬೆಳಗಿಸಿ ನಮನ ಸಲ್ಲಿಸಲಾಗುತ್ತದೆ. ಇದೇ ಸಂದಭ೯ ಕಾರುಗುಂದದ ಮಾಜಿ ಯೋಧ ಬಿ.ಎ.ಲೋಕೇಶ್ ಅವರನ್ನು ಸನ್ಮಾನಿಸಲಾಗುತ್ತದೆ. ಸಾವ೯ಜನಿಕರೂ ಕಾಯ೯ಕ್ರಮದಲ್ಲಿ ಪಾಲ್ಗೊಂಡು ವೀರಯೋಧರಿಗೆ ತಮ್ಮ ಗೌರವ ಸೂಚಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮಡಿಕೇರಿ ಜು.25 NEWS DESK : ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ಜು.26 ರಂದು ಕಾಗಿ೯ಲ್ ವಿಜಯ ದಿವಸ್ -25 ಕಾಯ೯ಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂ ಆವರಣದಲ್ಲಿರುವ ಅಮರ್ ಜವಾನ್ ಸ್ಮಾರಕದಲ್ಲಿ ಹುತಾತ್ಮರಿಗೆ ಪುಪ್ಪನಮನ ಸಲ್ಲಿಸಲಾಗುತ್ತದೆ. ಬೆಳಗ್ಗೆ 10.30 ಗಂಟೆಗೆ ಮಡಿಕೇರಿ ರೋಟರಿ ಸಭಾಭವನದಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ನಿವೖತ್ತ ಯೋಧರಾದ ಬಾಬು ಪ್ರಸಾದ್ ರೈ, ಸಿ.ಸಿ.ಪ್ರಮೋದ್ ಕುಮಾರ್, ಜಿ.ಎಸ್.ರಾಜಾರಾಮ್, ಚಂದ್ರ ಎನ್, ಅವರುಗಳನ್ನು ಸನ್ಮಾನಿಸಲಾಗುತ್ತದೆ ಎಂದು ರೋಟರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲು ಮತ್ತು ಕಾಯ೯ದಶಿ೯ ಕಿರಣ್ ಕುಂದರ್ ಮಾಹಿತಿ ನೀಡಿದ್ದಾರೆ. ಸಾವ೯ಜನಿಕರು ಕೂಡ ಕಾಯ೯ಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಮಡಿಕೇರಿ ಜು.25 NEWS DESK : ಪರಿಶಿಷ್ಟ ಜಾತಿ ಪಂಗಡದ ಸಮುದಾಯಕ್ಕೆ ಸಮಾನ ಅವಕಾಶ ಕಲ್ಪಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುವುದಕ್ಕೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಛಲವಾದಿ ನಾರಾಯಣಸ್ವಾಮಿ ಅವರು ನೇಮಕಗೊಂಡಿರುವುದೇ ಸಾಕ್ಷಿಯಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ಎಸ್.ಸಿ ಮೋರ್ಚಾದ ಕೊಡಗು ಜಿಲ್ಲಾಧ್ಯಕ್ಷ ಪಿ.ಎಂ.ರವಿ ಮೊಗೇರ ಅಭಿಪ್ರಾಯಪಟ್ಟಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪರಿಶಿಷ್ಟ ಜಾತಿ ಪಂಗಡದವರನ್ನು ಪಂಚಾಯಿತಿನಿ0ದ ಪಾರ್ಲಿಮೆಂಟ್ ವರೆಗೂ ಅಧಿಕಾರ ನೀಡಿ ಸಹಕರಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ. ಉಳಿದ ಪಕ್ಷಗಳು ದಲಿತರನ್ನು ಮತ ಬ್ಯಾಂಕ್ ಗಳನ್ನಾಗಿ ಬಳಸಿಕೊಂಡು ನಾಟಕ ಮಾಡುವುದರಲ್ಲಿ ಕಾಲ ಕಳೆಯುತ್ತಿವೆ ಎಚಿದು ಟೀಕಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಅವಧಿಯಲ್ಲಿ ರಾಷ್ಟ್ರಪತಿಯ ಸ್ಥಾನಮಾನ, ಸಂಪುಟದಲ್ಲಿ ಅವಕಾಶ, ಈ ಹಿಂದೆ ಗೋವಿಂದ ಕಾರಜೋಳ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸೇರಿದಂತೆ ಅನೇಕ ಉನ್ನತ ಸ್ಥಾನಮಾನಗಳು ಪರಿಶಿಷ್ಟರಿಗೆ ಸಿಕ್ಕಿದೆ. ಡಾ.ಅಂಬೇಡ್ಕರ್ ಅವರ ಆಶಯದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಬಿಜೆಪಿ ಸಾಮಾಜಿಕ ನ್ಯಾಯದಡಿ…






