ಸುಂಟಿಕೊಪ್ಪ ಆ.20 NEWS DESK : ವಿಶ್ವ ಹಿಂದೂ ಪರಿಷದ್‍ನ 60ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಎಸ್.ವಿಘ್ನೇಶ್ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರುಗಳಾಗಿ ಬಿ.ಕೆ.ಪ್ರಶಾಂತ್, ಎಂ.ಗಣೇಶ್, ಸಿ.ಸಿ.ಸುನಿಲ್‍ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಹೆಚ್.ನಿಖಿಲ್, ಖಜಾಂಚಿಯಾಗಿ ಬಿ.ಡಿ.ಪದ್ಮನಾಭ, ಕಾರ್ಯದರ್ಶಿಗಳಾಗಿ ಎಂ.ಪಾಂಡ್ಯನ್, ಜಿ.ಹೃತಿಕ್, ಹೆಚ್.ನವೀನ್, ಸಹಕಾರ್ಯದರ್ಶಿಯಾಗಿ ಆರ್.ಮಣಿ, ಪಿ.ಕೆ.ಸೂರ್ಯ, ಆರ್.ಪ್ರಶಾಂತ್, ಸಂಘಟನಾ ಕಾರ್ಯದರ್ಶಿಗಳಾ ಎಸ್.ರಾಜೇಶ್, ಬಿ.ಡಿ.ಅಶ್ವಥ್, ಹೆಚ್.ಸಿ.ಯೋಗೇಶ್, ಕೆ.ಮಧು, ಚೇತನ್, ಶಿವು, ಆರ್.ಪುನೀತ್, ಗುಣಶೇಖರ್, ತ್ರೀಜಲ್ ಹಾಗೂ ಮಹೇಶ್ ಅವರುಗಳನ್ನು ಆಯ್ಕೆ ಗೊಳಿಸಲಾಯಿತು.
ಲೇಖಕ: admin
ಪುತ್ತೂರು ಆ.20 NEWS DESK : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಆಶ್ರಯದಲ್ಲಿ ಅತ್ಯುತ್ತಮ ಸಂಶೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಎನ್ನುವ ವಿಷಯದ ಬಗ್ಗೆ 3 ದಿನಗಳ ಅಧ್ಯಾಪಕರ ಜ್ಞಾನಾಭಿವೃದ್ಧಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಉತ್ತಮ ಸಂಶೋಧನಾ ಸಂಸ್ಕೃತಿಯನ್ನು ಪರಿಚಯಿಸಿಕೊಳ್ಳುವುದು, ಸಹಯೋಗದ ಸಂಶೋಧನೆಯ ಅಳವಡಿಕೆ ಮತ್ತು ನಿಧಿಯ ಅವಕಾಶಗಳು, ನಿಖರವಾದ ಮತ್ತು ವಿಮರ್ಶಾತ್ಮಕವಾದ ಸಂಶೋಧನಾ ಪ್ರಬಂಧಗಳ ಬರವಣಿಗೆ, ಸಂಶೋಧನಾ ಪ್ರಸ್ತಾಪದ ಅಭಿವೃದ್ಧಿಯ ಬಗ್ಗೆ ಜಾಗೃತಿ ಮೂಡಿಸುವುದು ಇದೇ ಮುಂತಾದ ವಿಷಯಗಳ ಬಗ್ಗೆ ಸಂಶೋಧನಾ ನಿರತರಿಗೆ ಮಾಹಿತಿಯನ್ನು ನೀಡುವುದಕ್ಕಾಗಿ ಇದನ್ನು ಆಯೋಜಿಸಲಾಗಿದೆ. ಆ.22 ರಿಂದ 24ರ ವರೆಗೆ ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ಈ ಕಾರ್ಯಕ್ರಮವು ನಡೆಯಲಿದ್ದು ರಾಜ್ಯಾದ್ಯಂತ ವಿವಿಧ ಕಾಲೇಜುಗಳ ಸಂಶೊಧನಾ ನಿರತ ಪ್ರಾಧ್ಯಾಪಕರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ದಿನಾಂಕ 22 ರಂದು ಬೆಳಿಗ್ಗೆ 9.30ಕ್ಕೆ ಇದರ ಉದ್ಘಾಟನೆಯು ನಡೆಯಲಿದ್ದು ಐಐಟಿ ಧಾರವಾಡದ ಪೂರ್ವ ರಿಜಿಸ್ಟ್ರಾರ್ ಡಾ.ಚೆನ್ನಬಸಪ್ಪ.ಬಿ.ಅಕ್ಕಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ…
ಸೋಮವಾರಪೇಟೆ ಆ.20 NEWS DESK : ಯಾವುದೇ ಸಮಾಜದ ಕಲೆ, ಸಂಸ್ಕೃತಿ, ಆಚಾರ ವಿಚಾರ ಪದ್ದತಿ ಪರಂಪರೆಗಳು ಉಳಿಯಬೇಕಾದರೆ ಅದನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಕೆಲಸ ಆಗಬೇಕೆಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು. ಸೋಮವಾರಪೇಟೆ ತಾಲೂಕು ಶ್ರೀ ನಾರಾಯಣ ಗುರು ಸೇವಾ ಸಮಿತಿ ಮತ್ತು ತುಳುನಾಡು ಬಿಲ್ಲವ ಮಹಿಳಾ ಸಂಘದ ಆಶ್ರಯದಲ್ಲಿ ಜಾನಕಿ ಕನ್ವೆನ್‍ಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 9ನೇ ವರ್ಷದ ಆಟಿ ಸಂಭ್ರಮೋತ್ಸವ ಹಾಗೂ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಜನಾಂಗದ ಹೆಗ್ಗುರುತು ಆಗಿರುವ ಹಬ್ಬ ಹರಿದಿನಗಳ ಆಚರಣೆಯೂ ಮಹತ್ವ ಪೂರ್ಣವಾದದ್ದು, ಇದನ್ನು ನಾವು ನಮ್ಮ ಮಕ್ಕಳಿಗೆ ಪರಿಚಯಿಸಬೇಕು. ಆಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರವಾಗುವುದರೊಂದಿಗೆ ಕಲೆ, ಸಂಸ್ಕೃತಿ ಉಳಿಯಲು ಸಾಧ್ಯ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಿಂದೂ ಮಲಯಾಳ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳು ಮಾನವ ಕುಲವೆಲ್ಲ ಒಂದೇ ಎಂದು ಸಾಧಿಸಿ ತೋರಿಸಿದವರು. ಶಿಕ್ಷಣ ಪಡೆದು…
ಸೋಮವಾರಪೇಟೆ ಆ.20 NEWS DESK : ಗೌಡಳ್ಳಿ ಹನುಮಾನ್ ಕಬಡ್ಡಿ ಕ್ಲಬ್ ವತಿಯಿಂದ ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ನಡೆದ 17 ವರ್ಷದೊಳಗಿನ ವಯೋಮಿತಿಯ ಬಾಲಕರ ಕಬಡ್ಡಿ ಪಂದ್ಯಾವಳಿಯ ಪ್ರಶಸ್ತಿಯನ್ನು ಗೌಡಳ್ಳಿ ಹನುಮಾನ್ ಬಾಯ್ಸ್ ತಂಡ ಮುಡಿಗೇರಿಸಿಕೊಂಡಿತು. ಮೂರು ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಪಡೆಯಿತು. ಕಳಲೆ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನದೊಂದಿಗೆ 1500 ರೂ.ನಗದು ಹಾಗೂ ಟ್ರೋಫಿಯನ್ನು ಗಳಿಸಿತು. ಪಂದ್ಯಾವಳಿಯಲ್ಲಿ 9 ತಂಡಗಳು ಭಾಗವಹಿಸಿದ್ದವು. ಗೌಡಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಆರ್.ಸುರೇಶ್, ಬಹುಮಾನ ಮತ್ತು ಟ್ರೋಫಿ ದಾನಿಗಳಾದ ಶಾಂತಮಲ್ಲಪ್ಪ, ಸುಮಂತ್ ಕೂಗೂರು, ಪವನ್, ನಾಗರಾಜು, ನವೀನ್ ಅಜ್ಜಳ್ಳಿ, ಸುನಿಲ್ ಗೌಡಳ್ಳಿ ಇದ್ದರು. ತೀರ್ಪುಗಾರರಾಗಿ ಮಧುಸೂದನ್, ಗಣೇಶ್ ಕಾರ್ಯನಿರ್ವಹಿಸಿದರು.
ಕುಶಾಲನಗರ, ಆ.19 NEWS DESK : ಬೆಂಗಳೂರಿನಲ್ಲಿ ಮುಕ್ತಾಯಗೊಂಡ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಪುರುಷರ ಹಾಕಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಕೊಡಗು ಜಿಲ್ಲಾ ತಂಡವು ಜಯಗಳಿಸಿ ರಾಷ್ಟ್ರೀಯ ಹಾಕಿ ಪಂದ್ಯಾವಳಿಗೆ ಆಯ್ಕೆಗೊಂಡಿದೆ. ಬೆಂಗಳೂರಿನ ಶಾಂತಿನಗರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರೀಡಾಕೂಟ ತಂಡದ ವ್ಯವಸ್ಥಾಪಕ ಬಿ.ಟಿ.ಪೂರ್ಣೇಶ್ ನೇತೃತ್ವದಲ್ಲಿ ನಡೆದ ಅಂತಿಮ ಟೂರ್ನಿಯಲ್ಲಿ ಕೊಡಗು ಜಿಲ್ಲಾ ತಂಡವು ಬೀದರ್ ಜಿಲ್ಲಾ ತಂಡವನ್ನು 5-0 ಗೋಲುಗಳಿಂದ ಮಣಿಸಿ ಗೆಲುವು ಪಡೆಯಿತು. ಕೊಡಗು ತಂಡದ ಪರವಾಗಿ ಸತೀಶ್ , ಶ್ರೀನಿವಾಸ್ ರೈ ,ಪೂನಚ್ಚ, ಜಾಗೃತ್ , ಮಂಜುನಾಥ್ ತಲಾ ಒಂದೊಂದು ಗೋಲು ಗಳಿಸಿ ಸತತ 19ನೇ ಬಾರಿ 5-0 ಗೋಲು ನೊಂದಿಗೆ ವಿರೋಚಿತ ಗೆಲುವು ಸಾಧಿಸಿದ್ದಾರೆ. ಇದಕ್ಕೂ ಮೊದಲು ನಡೆದ ಸೆಮಿ ಫೈನಲ್ ಟೂರ್ನಿಯಲ್ಲಿ ಕೊಡಗು ಜಿಲ್ಲಾ ತಂಡವು ಬೆಂಗಳೂರು ನಗರ ತಂಡವನ್ನು 5-0 ಗೋಲುಗಳ ಅಂತರದಿಂದ ಮಣಿಸಿ ಅಂತಿಮ ಟೂರ್ನಿಗೆ ಅರ್ಹತೆ ಪಡೆಯಿತು. ಹಾಕಿ ಟೂರ್ನಿ ತಂಡದಲ್ಲಿ ತಂಡದ…
ಸೋಮವಾರಪೇಟೆ NEWS DESK ಆ.19 : ಸೋಮವಾರಪೇಟೆ ತಾಲ್ಲೂಕಿನ ತೋಳೂರು ಶೆಟ್ಟಳ್ಳಿ ಗ್ರಾಮದ ನಿವಾಸಿ ನಿವೃತ್ತ ಅಂಚೆ ನೌಕರ ಟಿ.ಈ.ಗಣೇಶ(65) ಅವರು ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಸೋಮವಾರಪೇಟೆ ಆ.19 NEWS DESK : ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರೋಧಿಸಿ, ಸಿ ಮತ್ತು ಡಿ ಭೂಮಿಗೆ ಹಕ್ಕುಪತ್ರಕ್ಕೆ ಆಗ್ರಹಿಸಿ ಸೋಮವಾರಪೇಟೆ ರೈತಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ತಾಲ್ಲೂಕು ಒಕ್ಕಲಿಗರ ಸಮುದಾಯ ಭವನದಿಂದ ಪಟ್ಟಣದಲ್ಲಿ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿದ ರೈತರು ವಿವೇಕಾನಂದ ಸರ್ಕಲ್ ಮೂಲಕ ತೆರಳಿ, ಜೇಸಿ ವೇದಿಕೆಯಲ್ಲಿ ಸಮಾವೇಶಗೊಂಡರು. ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ರೈತರ ಪ್ರತಿಭಟನೆಗೆ ಸಹಕಾರ ನೀಡಿದರು. ಸಿ ಮತ್ತು ಡಿ ಭೂಮಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಹಾಗೂ ಸಿ ಆ ್ಯಂಡ್ ಡಿ ಭೂಮಿಯನ್ನು ಸಾಮಾಜಿಕ ಅರಣ್ಯ ಎಂದು ಘೋಷಿಸಲು ಸಿದ್ದತೆ ನಡೆಯುತ್ತಿರುವುದರಿಂದ ಸಾವಿರಾರು ರೈತ ಕುಟುಂಬಗಳು ಆಸ್ತಿಯನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿಯನ್ನು ಸರ್ವೇ ಮಾಡಿ ಗುರುತಿಸಿ ಸಾಮಾಜಿಕ ಅರಣ್ಯ ಮಾಡಲಿ. ಕೃಷಿ ಮಾಡುತ್ತಿರುವ ಭೂಮಿಗೆ ಹಕ್ಕುಪತ್ರ ನೀಡಲಿ ಈ ಬಗ್ಗೆ ಕಾನೂನು ಹೋರಾಟವನ್ನು ಮುಂದುವರಿಸಬೇಕು ಎಂದು ಸಮಿತಿ…
ಮಡಿಕೇರಿ ಆ.19 NEWS DESK : ಕೇರಳದ ತ್ರಿವಂದ್ರಂನಲ್ಲಿ ಆಯೋಜಿತ ಸ್ಟೀಫನ್ ಕೋಶಿ ಜಾಕಬ್ ಮೆಮೊರಿಯಲ್ ಇಂಟರ್‍ನ್ಯಾಷನಲ್ ಮಾಸ್ಟರ್ಸ್ ಬಾಸ್ಕೆಟ್ ಬಾಲ್ ಟೂರ್ನಮೆಂಟ್‍ನಲ್ಲಿ ಕೊಡಗಿನ ‘ಇಂಡಿಯಾ ವಾರಿಯರ್ಸ್’ ತಂಡ ದ್ವಿತೀಯ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದೆ. ಆ.16, 17 ಮತ್ತು 18 ರಂದು 50 ಹಾಗೂ 55 ವರ್ಷ ಮೇಲ್ಪಟ್ಟ ಮಹಿಳೆಯರಿಗೆಗಾಗಿ ಬಾಸ್ಕೆಟ್ ಬಾಲ್ ಪಂದ್ಯಾಟ ಆಯೋಜಿಸಲಾಗಿತ್ತು. ಕ್ರೀಡಾಕೂಟದಲ್ಲಿ ಅಂತರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರ್ತಿ ಹಾಗೂ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಮಂಡೇಪಂಡ ಪುಷ್ಪ ಕುಟ್ಟಣ್ಣ ಅವರ ನೇತೃತ್ವದ ಕೊಡಗಿನ ಇಂಡಿಯಾ ವಾರಿಯರ್ಸ್ ತಂಡ ಎರಡು ವರ್ಗದಲ್ಲೂ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂಡಿತು. ಅಂತರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರರಾದ ಕಾಡ್ಯಮಾಡ ದೇಚಮ್ಮ, ಕಲಿಯಂಡ ರೇಷ್ಮ ಚಂಗಪ್ಪ, ರಾಜ್ಯ ಆಟಗಾರರಾದ ಪಳಂಗಂಡ ವಾಣಿ, ತಾತಂಡ ಜ್ಯೋತಿ, ಬಲ್ಯಮೀದೇರಿರ ಆಶಾ, ಕೊಳ್ಳಿಮಾಡ ರಶ್ಮಿ, ಪೊನ್ನಚಂಡ ಸಬಿತ, ಗುಣಶೀಲ ಅಮರ್‍ನಾಥ್, ಮೇಕೇರಿರ ಶರ್ಮಿಳಾ, ಕಾಂಡೇರ ಜಲಜ, ಕೋದೇಂಗಡ…
ಮಡಿಕೇರಿ ಆ.19 NEWS DESK : ಪ್ರಸಕ್ತ(2024-25) ಸಾಲಿಗೆ ಕಾಫಿ ಮಂಡಳಿ ವತಿಯಿಂದ ಕಾಫಿ ತೋಟದ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಕಾಫಿ ಮರುನಾಟಿ, ನೀರಾವರಿ ಯೋಜನೆಯಡಿ ಕೆರೆ, ತೆರೆದ ಬಾವಿ, ರಿಂಗ್ ಬಾವಿ, ಸ್ಪ್ರಿಂಕ್ಲರ್ ಇರಿಗೇಷನ್, ಹನಿ ನೀರಾವರಿಗೆ-ವಾಟರ್ ಅಗ್‍ಮೆಂಟೇಷನ್, ಕಾಫಿಗೋಡೌನ್, ಕಾಫಿ ಕಣ, ಪಲ್ಪರ್ ಯುನಿಟ್, ಇಕೋ ಪಲ್ಪರ್, ಮೆಕಾನಿಕಲ್ ಡ್ರೈಯರ್, ಸೋಲಾರ್ ಟನೆಲ್ ಡ್ರೈಯರ್-ಕ್ವಾಲಿಟಿ ಅಪ್‍ಗ್ರೇಡೇಷನ್, ಬಿಳಿಕಾಂಡ ಕೊರಕದ ಹತೋಟಿಗಾಗಿ ನಾನ್ ವೋವನ್ ಪ್ಯಾಬ್ರಿಕ್ ರ್ಯಾಪಿಂಗ್ ಮೆಟಿರಿಯಲ್, ಕಾಫಿ ತೋಟದಲ್ಲಿ ಬಳಸಬಹುದಾದ ಯಂತ್ರೋಪಕರಣಗಳು ಮತ್ತಿತರ ಕಾರ್ಯ ಚಟುವಟಿಕೆಗಳಿಗೆ ಸಹಾಯಧನದ ಯೋಜನೆಯನ್ನು ಅನುಮೋದಿಸಲಾಗಿದೆ. 25ಎಚ್‍ಎ(61.75 ಎಕರೆ) ವರೆಗಿನ ಕಾಫಿ ತೋಟ ಹೊಂದಿರುವ ಎಲ್ಲಾ ಬೆಳೆಗಾರರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ತಮ್ಮ ತೋಟವನ್ನು ಅಭಿವೃದ್ಧಿ ಪಡಿಸಲಿಚ್ಚಿಸುವ ಅರ್ಹ ಕಾಫಿ ಬೆಳೆಗಾರರು, ಈ ಎಲ್ಲಾ ಚಟುವಟಿಕೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಸಲು ಸೆಪ್ಟೆಂಬರ್, 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಕಾಫಿ ಮಂಡಳಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕಾಫಿ ಮಂಡಳಿಯ ಉಪ…
ಗುಡ್ಡೆಹೊಸೂರು ಆ.19 NEWS DESK : ಪತ್ರಿಕೆಗಳಲ್ಲಿ ಛಾಯಾಚಿತ್ರವಿಲ್ಲದೆ ಸುದ್ದಿ ಅಪೂರ್ಣ. ಛಾಯಾಚಿತ್ರ ಮುದ್ರಣ ಮಾಧ್ಯಮದ ಅವಿಭಾಜ್ಯ ಅಂಗ. ಯಾವುದೇ ವರದಿ ಇದ್ದರೂ ಛಾಯಾಚಿತ್ರ ಇದ್ದರೆ ಮಾತ್ರ ಅದು ಪರಿಣಾಮಕಾರಿಯಾಗಿರುತ್ತದೆ ಎಂದು ಹಿರಿಯ ಪತ್ರಕರ್ತ ಅನಿಲ್ ಎಚ್.ಟಿ. ಹೇಳಿದ್ದಾರೆ. ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದಿಂದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಸಮುದಾಯ ಭವನದಲ್ಲಿ ಸೋಮವಾರ ನಡೆದ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಿಕೆಗಳಲ್ಲಿ ಸುದ್ದಿಗಳು ಮಾತ್ರವೇ ಇದ್ದರೆ ಅದು ನೀರಸವಾಗುತ್ತದೆ. ಛಾಯಾಚಿತ್ರ ಇದ್ದರೆ ಮಾತ್ರ ಆ ಸುದ್ದಿಗೆ ಹೆಚ್ಚಿನ ಮಹತ್ವ ಇರುತ್ತದೆ. ಒಂದು ಛಾಯಾಚಿತ್ರ ಸಾವಿರ ಪದಗಳಿಗೆ ಸಮಾನ ಎಂಬುದು ಸತ್ಯ. ಒಂದು ಚಿತ್ರ ಹಲವು ಭಾವನೆಗಳನ್ನು ಹುಟ್ಟುಹಾಕುತ್ತದೆ. ಇಂದು ಸುದ್ದಿ ಛಾಯಾಗ್ರಾಹಕರು ಹಲವು ಸವಾಲುಗಳನ್ನು ಎದುರಿಸುವಂತಾಗಿದೆ. ಛಾಯಾಗ್ರಾಹಕರ ಕಷ್ಟ ಸಾಕಷ್ಟಿದೆ ಎಂದರು. 20ನೇ ಶತಮಾನದಲ್ಲಿ ಪ್ರಿಂಟ್ ಫೋಟೋಗ್ರಾಪಿ ಇತ್ತು. ನಂತರ ಡಿಜಿಟಲ್ ಫೋಟೋಗ್ರಫಿ ಆರಂಭವಾಗಿ ಇಂದು ಛಾಯಾಚಿತ್ರ ಕ್ಷೇತ್ರದಲ್ಲಿ…






