ಮಡಿಕೇರಿ NEWS DESK ಆ.17 : ಹಲವು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿರುವ ಮೂರ್ನಾಡು ಫ್ರೆಂಡ್ಸ್ ವಾಹನ ಮಾಲೀಕರ ಹಾಗೂ ಚಾಲಕರ ಸಂಘ 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಕೊಡುಗೆಯನ್ನು ನೀಡಿ ಮಾದರಿ ಸಂಘ ಎನಿಸಿಕೊಂಡಿತು. ಮೂರ್ನಾಡು ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಸಮವಸ್ತçಕ್ಕೆ “ಟೈ”ಗಳನ್ನು ವಿತರಿಸಿದ ಸಂಘದ ಪ್ರಮುಖರು ಶೈಕ್ಷಣಿಕ ಗುರಿ ಸಾಧಿಸುವಂತೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭ ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಇದಕ್ಕೂ ಮೊದಲು ವಾಹನ ಮಾಲೀಕರ ಹಾಗೂ ಚಾಲಕರ ಸಂಘ 78ನೇ ಸ್ವಾತಂತ್ರ್ಯೋತ್ಸವವನ್ನು ಸಂಘದ ಕಚೇರಿ ಆವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಿತು. ಕಾಂತೂರು- ಮೂರ್ನಾಡು ಗ್ರಾಮ ಪಂಚಾಯಿತಿ ಸದಸ್ಯ ಮೂಡೆರ ಅಶೋಕ್ ಅಯ್ಯಪ್ಪ ಅವರು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ಸಂದೇಶ ನೀಡಿದರು. ಗ್ರಾ.ಪಂ ಸದಸ್ಯ ಅವರೇಮಾದಂಡ ಅನಿಲ್, ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ನೆರೆದಿದ್ದವರಿಗೆ ಸಿಹಿ ವಿತರಿಸಿ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಹಂಚಿಕೊಳ್ಳಲಾಯಿತು.
ಲೇಖಕ: admin
ಮಡಿಕೇರಿ NEWS DESK ಆ.17 : ವನ್ಯಜೀವಿ-ಮಾನವ ಸಂಘರ್ಷ ತಡೆಗೆ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಕರ್ನಾಟಕ ರಾಜ್ಯ ವನ್ಯಜೀವಿ ಸಂರಕ್ಷಣಾ ಸಮಿತಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಅಧ್ಯಕ್ಷರಾಗಿ, ಅರಣ್ಯ ಸಚಿವರು ಉಪಾಧ್ಯಕ್ಷರಾಗಿ, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಹೋರಾಟಗಾರರನ್ನು ಒಳಗೊಂಡ ಸಮಿತಿ ಕಾರ್ಯನಿರ್ವಹಿಸುತ್ತಿದೆ. ವನ್ಯಜೀವಿ-ಮಾನವ ಸಂಘರ್ಷಕ್ಕೆ ವೈಜ್ಞಾನಿಕ ಪರಿಹಾರ ಕಂಡುಹಿಡಿಯುವ ಕಾರ್ಯ ಪ್ರಗತಿಯಲ್ಲಿದೆ ಎಂದರು. ಅತೀ ಹೆಚ್ಚು ವನ್ಯಜೀವಿ-ಮಾನವ ಸಂಘರ್ಷ ನಡೆಯುವ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದ್ದು, ಅದರಲ್ಲೂ ಕೊಡಗು ಜಿಲ್ಲೆಯ ವಿರಾಜಪೇಟೆ ಕ್ಷೇತ್ರದಲ್ಲಿ ಸಾಕಷ್ಟು ಪ್ರಾಣಹಾನಿ, ಅಂಗವೈಫಲ್ಯ, ಬೆಳೆಹಾನಿ ಸಂಭವಿಸಿ ರೈತರು, ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅರಣ್ಯ ಮಂತ್ರಿಗಳನ್ನು ಖುದ್ದು ಜಿಲ್ಲೆಗೆ ಕರೆತಂದು ಸಾವುನೋವುಗಳು…
ಮಡಿಕೇರಿ ಆ.17 NEWS DESK : ನಗರದ ಶ್ರೀಕೋಟೆ ಮಾರಿಯಮ್ಮ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಚೋರರು ಚಿನ್ನಾಭರಣ ಮತ್ತು ಕಾಣಿಕೆ ಹಣವನ್ನು ದೋಚಿದ್ದಾರೆ. ದೇವಾಲಯದ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿರುವ ಕಳ್ಳರು ಮಾರಿಯಮ್ಮ ದೇವಿಯ ಮೂರ್ತಿ ಮೇಲಿನ ಲಕ್ಷಾಂತರ ರೂ.ಮೌಲ್ಯದ ಆಭರಣ ಮತ್ತು ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕದ್ದೊಯ್ದಿದ್ದಾರೆ. ಕೆಲವು ಆಭರಣಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ದೇವಾಲಯದಲ್ಲಿರುವ ಸಿಸಿ ಕ್ಯಾಮರಾದ ದಿಕ್ಕನ್ನು ಬದಲಿಸಿ ಈ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸ್ಥಳಕ್ಕೆ ಮಡಿಕೇರಿ ನಗರ ಠಾಣಾ ಪೋಲಿಸರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚೋರರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
ಮಡಿಕೇರಿ NEWS DESK ಆ.17 : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರದ ಕುರಿತು ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್ಸಿಗರು ನಡೆದುಕೊಳ್ಳುತ್ತಿರುವ ರೀತಿ ಖಂಡನೀಯವೆಂದು ಭಾರತೀಯ ಜನತಾ ಪಾರ್ಟಿಯ ವಿರಾಜಪೇಟೆ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಕರಣದ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಿ ಕಾನೂನಿನ ಚೌಕಟ್ಟಿನಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ಸಿಗರು ನೀಡುತ್ತಿರುವ ಹೇಳಿಕೆಗಳು ಹಾಸ್ಯಾಸ್ಪದ ಮತ್ತು ರಾಜಕೀಯ ಹತಾಶೆಯ ಒಂದು ಭಾಗವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರು ಯಾವುದೇ ರೀತಿಯಲ್ಲಿ ರಾಜಕೀಯ ಒತ್ತಡಕ್ಕೆ ಮಣಿಯುವುದಿಲ್ಲ. ತನಿಖೆಯಿಂದ ಅಕ್ರಮ ಬಯಲಾಗುತ್ತದೆ ಎನ್ನುವ ಆತಂಕದಿಂದ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ಸಿಗರು ವಿನಾಕಾರಣ ಗೂಬೆ ಕೂರಿಸುತ್ತಿದ್ದಾರೆ. ಮೂಡ ಹಗರಣದಲ್ಲಿ ತಪ್ಪೇ ಮಾಡಿಲ್ಲವೆಂದಾದರೆ ತನಿಖೆಯನ್ನು ಎದುರಿಸಲು ಮುಖ್ಯಮಂತ್ರಿಗಳಿಗೆ ಭಯವೇಕೆ, ಕೆಲವು ಸಚಿವರು,…
ಗೋಣಿಕೊಪ್ಪ ಆ.17 NEWS DESK : ಓದಿದ ಪತ್ರಿಕೆಯನ್ನು ನಾಳೆ ರದ್ದಿಗೆ ಹಾಕುವ ಬದಲಾಗಿ ಪತ್ರಿಕೆಯಿಂದ ಪೆನ್ನುಗಳನ್ನು ತಯಾರಿಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಿ ವಿಜಯಕರ್ನಾಟಕ ಪತ್ರಿಕೆಯ ಮಹಿಳಾ ಓದುಗರೊಬ್ಬರು ಗಮನ ಸೆಳೆದಿದ್ದಾರೆ. ಮೂರು ವರ್ಷಗಳಿಂದ ಗನ್ನುಬಿಡಿ ಪೆನ್ನು ಹಿಡಿಯಿರಿ ಎಂಬ ಸಂದೇಶ ಸಾರುತ್ತ ಸಾವಿರಾರು ವಿದ್ಯಾರ್ಥಿಗಳಿಗೆ ಲೇಖನಗಳನ್ನು ವಿತರಿಸುವ ಮೂಲಕ ವಿಶ್ವಶಾಂತಿ ಜಾಗೃತಿಯನ್ನು ಮೂಡಿಸುವಲ್ಲಿ ಅರುವತ್ತೊಕ್ಲು ನಿವಾಸಿ ಕೆ.ಟಿ ವಾತ್ಸಲ್ಯ ಮುಂದಾಗಿದ್ದಾರೆ. ಮೂರು ವರ್ಷಗಳಿಂದ ಲೇಖನಿ ಅಭಿಯಾನದ ಮೂಲಕ ಶಾಲಾ ಕಾಲೇಜುಗಳಿಗೆ ತೆರಳಿ ಗನ್ನ್ನಿಂದ ಉಂಟಾಗಬಹುದಾದ ಅಶಾಂತಿ ಮತ್ತು ಅದನ್ನು ತಡೆಯಲು ಲೇಖನಿಯಿಂದ ಸಾಧ್ಯ ಎಂಬ ವಿಚಾರವನ್ನು ವಿದ್ಯಾರ್ಥಿಗಳ ಮನಸ್ಸಿನಾಳಕ್ಕೆ ದಾಟಿಸುವ ಮೂಲಕ ಶಾಂತಿಯ ಕರೆ ನೀಡುತ್ತಿದ್ದಾರೆ. ಸಾಹಿತ್ಯ ಸಮ್ಮೇಳನ, ಗೋಷ್ಠಿಗಳು, ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಉಚಿತವಾಗಿ ಕಾಗದದ ಲೇಖನಿ ನೀಡುತ್ತಿದ್ದಾರೆ. ಇವರಿಗೂ ತಾವೇ ತಯಾರಿಸಿದ ಮೂರು ಸಾವಿರಕ್ಕೂ ಹೆಚ್ಚು ಕಾಗದದ ಪೆನ್ನುಗಳನ್ನು ವಿತರಿಸುತಲೆ ಸೌಮ್ಯತೆಯೋಳಡಗಿದ್ದಾರೆ. ಒಂದು ಪೆನ್ನು ತಯಾರಿಸಲು ಮೂರು ನಿಮಿಷಗಳ ಕಾಲಾವಕಾಶ ಸಾಕು. ಒಂದು ಪತ್ರಿಕೆಯಿಂದ ಸುಮಾರು 30…
ನಾಪೋಕ್ಲು ಆ.17 NEWS DESK : ಎಮ್ಮೆಮಾಡು ಗ್ರಾಮದ ಮಖಾಂ ಉರೂಸ್ ಅನ್ನು 2025ರ ಫೆಬ್ರವರಿ 21ರಿಂದ 28 ವರೆಗೆ ವಿಜ್ರಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ. ಎಮ್ಮೆಮಾಡು ಗ್ರಾಮದಲ್ಲಿ ಸೈಯದ್ ಹಸನ್ ಸಖಾಫಿ ಅವರ ಹೆಸರಿನಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಮಖಾಂ ಉರುಸ್ ಅನ್ನು ಒಂದು ವಾರಗಳ ಕಾಲ ನಡೆಸಲು ನಿರ್ಧರಿಸಲಾಯಿತು. ಜುಮ್ಮಾ ನಮಾಜಿನ ನಂತರ ದರ್ಗಾ ಶರೀಫದಲ್ಲಿ ಜಮಾಯತ್ ಅಧ್ಯಕ್ಷ ಪಿ.ಎ ಅಬೂಬಕರ್ ಸಕಾಫಿ ಅವರು ದಿನಾಂಕವನ್ನು ಘೋಷಣೆ ಮಾಡಿದರು. ಸೈಯದ್ ಅಬ್ದುಲ್ ಅಜೀಜ್ ತಂಗಳ ದುವಾ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಮ್ಮೆ ಮಾಡು ಮದರಾಸದ ಹಂಸ ಸಖಾಫಿ, ಖತೀಬ ಅಬ್ದುಲ್ ರಾಜೀಕ್ ಫೈ ಜಿ, ತಾಜಲ್ ಇಸ್ಲಾಂ ಮುಸ್ಲಿಂ ಜಮಾಯತ್ ನ ಆಡಳಿತ ಮಂಡಳಿ ಸದಸ್ಯರು ,ಮಾಜಿ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರು ,ಸ್ಥಳೀಯರು ಉಪಸ್ಥಿತರಿದ್ದರು ವರದಿ : ದುಗ್ಗಳ ಸದಾನಂದ.
ಸೋಮವಾರಪೇಟೆ ಆ.17 NEWS DESK : ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಹಾಗೂ ಸಿ ಮತ್ತು ಡಿ(ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿ) ಭೂಮಿಯನ್ನು ವ್ಯವಸಾಯ ಭೂಮಿ ಎಂದು ಪರಿವರ್ತಿಸಿ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಆ.19ರ ಪಟ್ಟಣದಲ್ಲಿ ರೈತರ ಬೃಹತ್ ಮೌನ ಪ್ರತಿಭಟನೆ ಮೆರವಣಿಗೆ ನಡೆಯಲಿದೆ ಎಂದು ರೈತ ಹೋರಾಟ ಸಮಿತಿಯ ಸಂಚಾಲಕರಾದ ಕೆ.ಬಿ.ಸುರೇಶ್ ಹೇಳಿದರು. ಅಂದು ಬೆಳಿಗ್ಗೆ 10 ಗಂಟೆಗೆ ಒಕ್ಕಲಿಗರ ಸಮುದಾಯಭವನದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಗಲಿದ್ದು ಪಟ್ಟಣದ ಜೇಸಿವೇದಿಕೆಯಲ್ಲಿ ಸಮಾವೇಶಗೊಳ್ಳಲಿದೆ. ಮಡಿಕೇರಿ ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳು, ಡಿಸಿಎಫ್ ಸ್ಥಳಕ್ಕೆ ಬಂದು ರೈತರ ಮನವಿಯನ್ನು ಸ್ವೀಕರಿಸಬೇಕು ಎಂದು ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಿ ಮತ್ತು ಡಿ ಜಾಗವೆಂದು ಅವೈಜ್ಞಾನಿಕವಾಗಿ ವರ್ಗೀಕರಿಸಿರುವ ಭೂಮಿಯನ್ನು ರಕ್ಷಿತ ಅರಣ್ಯವೆಂದು ಘೋಷಣೆ ಮಾಡಲು ಸರ್ಕಾರ ಮುಂದಾಗಿದೆ. ಅರಣ್ಯ ವ್ಯವಸ್ಥಾಪನ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯಿಂದ ರೈತರಿಗೆ ನೋಟೀಸು ಜಾರಿಯಾಗುತ್ತಿದೆ. ಸಿ ಮತ್ತು ಡಿ ಭೂಮಿ ರಕ್ಷಿತ ಅರಣ್ಯವೆಂದು ಘೋಷಿಸಿದರೆ ರೈತರು ಬೀದಿಪಾಲಾಗಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಶಾಂತಳ್ಳಿ…
ಮಡಿಕೇರಿ ಆ.17 NEWS DESK : ಯೂರೋಪ್ ಖಂಡದ ಅತಿದೊಡ್ಡ ಶಿಖರ ಮೌಂಟ್ ಎಲ್ ಬ್ಯೂಸ್ ನಲ್ಲಿ ಸ್ವಾತಂತ್ರ್ಯೋತವದಂದು ಭಾರತದ ಬಾವುಟವನ್ನು ಎತ್ತಿ ಹಿಡಿಯುವ ಮೂಲಕ ದೇಶಾಭಿಮಾನವನ್ನು ಮೆರೆದಿದ್ದಾರೆ. ದಕ್ಷಿಣ ಕೊಡಗಿನ ಗೋಣಿಕೊಪ್ಪಲಿನ ಅತ್ತೂರು ಜಮ್ಮಡ ಅಯ್ಯಣ್ಣ ಅವರ ಪತ್ನಿ ಜಮ್ಮಡ ಪ್ರೀತ್ ಅಪ್ಪಯ್ಯ (ತವರು ಮನೆ ಅಮ್ಮತ್ತಿ ಕುಂಞಯಂಡ) ಈವರೆಗೆ ಹಲವು ಪರ್ವತ ರೋಹಣದ ಸಾಧನೆಯನ್ನು ಮಾಡಿದ್ದಾರೆ. ಈ ಬಾರಿ ಯೂರೋಪ್‍ನ ಅತೀ ದೊಡ್ಡ ಶಿಖರ, ರಷ್ಯಾದ ಸುಮಾರು 5642 ಮೀಟರ್, 18510 ಸಾವಿರ ಅಡಿಗಳಷ್ಟು ಎತ್ತರದ ಮೌಂಟ್ ಎಲ್ ಬ್ಯೂಸ್ ಪರ್ವತ ಏರುವ ಸಾಧನೆ ಮಾಡಿದ ಕರ್ನಾಟಕದ ಹಾಗೂ ಕೊಡಗಿನ ಮಹಿಳೆಯಾಗಿದ್ದಾರೆ. 2012ರಲ್ಲಿ ನಾಪೋಕ್ಲು ಸಮೀಪದ ಪೇರೂರು ಗ್ರಾಮದ ಪರ್ವತರೋಹಿ ತೆಕ್ಕಡ ಭವಾನಿಮೌಂಟ್ ಎಲ್ ಬ್ಯೂಸ್ ಏರಿ ಭಾರತದ ಪತಾಕೆಯನ್ನು ಹಾರಿಸಿದ ಕರ್ನಾಟಕದ ಹಾಗೂ ಕೊಡಗಿನ ಮೊದಲ ಮಹಿಳೆಯಾದರೆ ಜಮ್ಮಡ ಪ್ರೀತ್ ಅಪ್ಪಯ್ಯ ದ್ವಿತೀಯ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ವರದಿ : ಪುತ್ತರಿರ ಕರುಣ್ ಕಾಳಯ್ಯ
ಮಡಿಕೇರಿ ಆ.17 NEWS DESK : ಎಮ್ಮೆಮಾಡುವಿನ ಶಾದಿ ಮಹಾಲ್‌ನಲ್ಲಿ ಕೊಡಗು ಜಿಲ್ಲಾ ಸದಾತ್ ಸಂಗಮ ನಡೆಯಿತು. ಕಾರ್ಯನಿರ್ವಹಣಾ ಸಮಿತಿ ಅಧ್ಯಕ್ಷ ಅಬ್ದುಲ್ ಅಜೀಜ್ ತಂಙಳ್ ಪಡಿಯಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಯ್ಯದ್ ಕಿಲ್ಲೂರ್ ತಂಙಳ್ ಉದ್ಘಾಟನಾ ಭಾಷಣ ಮಾಡಿದರು. ಅಬ್ದುಲ್ ಜಬ್ಬಾರ್ ಸಕಾಫಿ ಪಾತೂರು ಮುಖ್ಯ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಮ್ಮೆಮಾಡು ಜಮಾತ್ ಅಧ್ಯಕ್ಷ ಅಬೂಬಕರ್ ಸಕಾಫಿ. ಪ್ರಮುಖರಾದ ಸೈಯದ್ ಅಬ್ದುಲ್ ಖಾದರ್ ತಂಙಳ್ ಅಯ್ಯಂಗೇರಿ, ಸಯ್ಯದ್ ಶರಫುದ್ದೀನ್ ತಂಙಳ್, ಸಯ್ಯದ್ ಇಸ್ಹಾಕ್, ಸೈಯದ್ ಅಬ್ದುಲ್ ಖಾದರ್ ತಂಙಳ್ ಅಯ್ಯಂಗೇರಿ, ಶಿಹಾ ಬುದ್ಧೀನ್ ತಂಙಳ್ ಗೋಣಿಕೊಪ್ಪ ಹಾಗೂ ವಿ.ಪಿ.ಎಸ್. ಮುತ್ತುಕೋಯ ತಂಙಳ್ ಸೇರಿದಂತೆ ಹಲವಾರು ಧಾರ್ಮಿಕ ನೇತಾರರು ಪಾಲ್ಗೊಂಡರು. ಸಯ್ಯದ್ ಇಲ್ಯಾಸ್ ತಂಙಳ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಕೊಡಗು ಜಿಲ್ಲಾ ಅಧ್ಯಕ್ಷರಾಗಿ ಸೈಯದ್ ಇಲ್ಯಾಸ್ ತಂಙಳ್, ಪ್ರಧಾನ ಕಾರ್ಯದರ್ಶಿಯಾಗಿ ಸಯ್ಯದ್ ಅಬ್ದುಲ್ ಖಾದರ್ ತಂಙಳ್, ಖಜಾಂಚಿಯಾಗಿ ಸಯ್ಯದ್ ಶಿಹಾಬುದ್ದೀನ್ ತಂಙಳ್ ಹಾಗೂ ಇತರ ಸಮಿತಿಯನ್ನು…
ನಾಪೋಕ್ಲು ಆ.17 NEWS DESK : ಬಲ್ಲಮಾವಟಿ ದವಸ ಬಂಡಾರದ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ದವಸ ಬಂಡಾರದ ಆವರಣದಲ್ಲಿ ಮಾಜಿ ಸೈನಿಕ ನೆರವಂಡ ಭೀಮಯ್ಯ ಧ್ವಜಾರೋಹಣ ನೆರವೇರಿಸಿದರು. ದವಸ ಬಂಡಾರದ ಅಧ್ಯಕ್ಷರಾದ ಬೊಟ್ಟೋಳಂಡ ಜಾನಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದಿನದ ಮಹತ್ವದ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭ ಉಪ ಅಧ್ಯಕ್ಷ ಕೋಟೆರ ಸುಬ್ಬಯ್ಯ, ಕಾರ್ಯದರ್ಶಿ ಭರತ್, ನಿರ್ದೇಶಕರು ಹಾಗೂ ಗ್ರಾಮಸ್ಥರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಸಿಹಿ ಹಂಚಿ ಸ್ವಾತಂತ್ರ್ಯ ಹಬ್ಬವನ್ನು ಸಂಭ್ರಮಿಸಿದರು.. ವರದಿ : ದುಗ್ಗಳ ಸದಾನಂದ.






