ಲೇಖಕ: admin

ಮಡಿಕೇರಿ ಜೂ.26 NEWS DESK : ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಗರದ ಹಾಲ್‍ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಉದ್ಘಾಟಿಸಿ, ಮಾತನಾಡಿ ಯುವಕರು ದುಶ್ಚಟಗಳಿಂದ ದೂರವಿರಬೇಕು. ವಿದ್ಯಾರ್ಥಿಗಳು, ಮಾದಕ ದ್ರವ್ಯ ಸೇವನೆ ಮಾಡದಂತೆ ಜನರಿಗೆ ತಿಳಿವಳಿಕೆ ನೀಡಬೇಕು ಎಂದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪುಟ್ಟರಾಜು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಾದ ರಂಗಧಾಮಪ್ಪ, ನಗರಸಭೆ ಪೌರಾಯುಕ್ತ ವಿಜಯ್ ಹಾಗೂ ಇತರರು ಇದ್ದರು. ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಹೊರಟು ಮಂಗೇರಿರ ಮುತ್ತಣ್ಣ ವೃತ್ತ, ಅಜ್ಜಮಾಡ ದೇವಯ್ಯ ವೃತ್ತ, ಇಂದಿರಾಗಾಂಧಿ ವೃತ್ತ ಹಾಗೂ ಕಾಲೇಜು ರಸ್ತೆ ಮೂಲಕ ಜಾಗೃತಿ ಜಾಥಾ ಹೊರಟು ನಗರದ ಕಾವೇರಿ ಹಾಲ್  ಜಾಗೃತಿ ಜಾಥ ನಡೆಯಿತು.

Read More

ಮಡಿಕೇರಿ ಜೂ.26 NEWS DESK : ಕೊಡಗಿನ ಹಾಕಿಯ ಪಿತಾಮಹ ಎಂದೆ ಹೆಸರಾದ ಶಂಕರ ಸ್ವಾಮಿ ಅವರ ಗರಡಿಯಲ್ಲಿ ಪಳಗಿದ ಅದೆಷ್ಟೋ ಆಟಗಾರರು ಬಾನಿನಲ್ಲಿ ನಕ್ಷತ್ರಗಳಿದ್ದಂತೆ, ಅವರ ಲೆಕ್ಕ ಸಿಕ್ಕುವುದಿಲ್ಲ. ಇವರ ಲೇಖನದಲ್ಲಿ “ಮುದ್ದಯ್ಯ ಒಬ್ಬ ಅದ್ಭುತ ಆಟಗಾರ ಹಾಗೂ ತರಬೇತಿದಾರನಾಗಬಹುದು ಹಾಗೂ ತಾನು ಹುಟ್ಟು ಹಾಕಿದ ವಾಂಡರರ್ಸ್ ಸಂಸ್ಥೆಯನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುವ ಆಟಗಾರನಾಗುತ್ತಾನೆ” ಎಂದು ಕಾಫಿ ಲ್ಯಾಂಡ್ ಪತ್ರಿಕೆಯಲ್ಲಿ ಕೆಲವು ವರ್ಷಗಳ ಹಿಂದೆ ಮುನ್ನುಡಿ ಬರೆದಿದ್ದರು. ಕೊಡಗಿನ ಕೋಟೇರ ನಂಜುಂಡ ಹಾಗೂ ಕಾಮವ್ವ (ತಾಮನೆ ಕೀತಿಯಂಡ) ದಂಪತಿಯರ ಪುತ್ರನಾಗಿ ಮುದ್ದಯ್ಯನವರು 5 ಏಪ್ರಿಲ್ 1949 ರಲ್ಲಿ ಜನಿಸಿದರು. ಇವರ ತಂದೆ ನಿವೃತ್ತ ಅಸಿಸ್ಟೆಂಟ್ ಕಮಿಷನರ್. ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮಡಿಕೇರಿಯ ಸೆಂಟ್ರಲ್ ಹೈಸ್ಕೂಲ್ ನಲ್ಲಿ ಪಡೆದರು. :: ಅದ್ಭುತ ಕಲೆ :: ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಪದವಿ ಓದುತ್ತಿದ್ದಾಗ ಮೈಸೂರು ವಿಶ್ವವಿದ್ಯಾನಿಲಯವನ್ನು 3 ವರ್ಷಗಳ ಕಾಲ ಪ್ರತಿನಿಧಿಸಿದ್ದರು. ಪೂನಾದ ವಿರುದ್ಧ ನಡೆದ ಅಂತರ…

Read More

ಕೊಡ್ಲಿಪೇಟೆ ಜೂ.26 NEWS DESK : ಎಸ್‌ಕೆಎಸ್‌ಎಸ್‌ಎಫ್ ಹಾಗೂ ಎಸ್ ವೈ ಎಸ್ ಕೊಡ್ಲಿಪೇಟೆ ಶಾಖೆಯ ವತಿಯಿಂದ ಸಮಸ್ತ ಸ್ಥಾಪನಾ ದಿನದ ಅಂಗವಾಗಿ “ಆದರ್ಶ ಪರಿಶುದ್ಧತೆಯೊಂದಿಗೆ ಶತಮಾನದೆಡೆಗೆ” ಎಂಬ ಧ್ಯೇಯ ವಾಕ್ಯದೊಂದಿಗೆ ಹ್ಯಾಂಡ್ ಪೋಸ್ಟ್ ನಲ್ಲಿರುವ ಶಾಖಾ ಕಚೇರಿಯ ಮುಂಭಾಗ ಧ್ವಜಾರೋಹಣ ಹಾಗೂ ಪ್ರಾರ್ಥನಾ ಕಾರ್ಯಕ್ರಮ ನಡೆಯಿತು. ಅಧ್ಯಕ್ಷರಾದ ಝಹೀರ್ ನಿಝಾಮಿ ಧ್ವಜಾರೋಹಣ ನೆರವೇರಿಸಿದರು. ಎಸ್ ವೈ ಎಸ್ ಸದಸ್ಯರಾದ ಉಮ್ಮರ್, ಕಾರ್ಯದರ್ಶಿಗಳಾದ ತೌಫೀಕ್, ಅಷ್ಫಾಕ್, ಅಬ್ದುಲ್ ರಶೀದ್ ಹಾಗೂ ಸಮಿತಿ ಸದಸ್ಯರುಗಳಾದ ರಶೀದ್ ಎಲೆಕ್ಟ್ರಿಷಿಯನ್, ಸೌಕತ್ ಅಲಿ, ಶಾಕಿರ್ ಹಾಜರಿದ್ದರು.

Read More

ಮಡಿಕೇರಿ ಜೂ 25 NEWS DESK : ಕರ್ನಾಟಕ ಟಿಇಟಿ ಪರೀಕ್ಷೆಯು ಇದೇ ಜೂ.30 ರಂದು ಮಡಿಕೇರಿಯಲ್ಲಿ ನಡೆಯಲಿದೆ. ಒಟ್ಟು ಮೂರು ಪರೀಕ್ಷಾ ಕೇಂದ್ರಗಳ ಪರೀಕ್ಷೆ ನಡೆಯಲಿದ್ದು, ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಇಲ್ಲಿ ಎರಡು ಕೇಂದ್ರಗಳು ಹಾಗೂ ಸಂತ ಮೈಕಲರ ಶಾಲೆ ಇಲ್ಲಿ ಒಂದು ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 759 ಪರೀಕ್ಷಾರ್ಥಿಗಳು ಮೂರು ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಜೂನ್ 30 ರಂದು ಬೆಳಗ್ಗೆ ಪರೀಕ್ಷೆ 9.30 ಗಂಟೆಯಿಂದ 12 ಗಂಟೆ ವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷಾರ್ಥಿಗಳು ಬೆಳಗ್ಗೆ 9 ಗಂಟೆಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕಿದೆ. ಮಧ್ಯಾಹ್ನದ ಅವಧಿಯಲ್ಲಿ 2 ಗಂಟೆಯಿಂದ ನಾಲ್ಕುವರೆವರೆಗೆ ಪರೀಕ್ಷೆ ನಡೆಯಲಿದೆ. ಒಬ್ಬರು ಮಾರ್ಗ ಅಧಿಕಾರಿಯನ್ನು ನೇಮಿಸಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಒಬ್ಬರಂತೆ ಸ್ಥಾನಿಕ ಜಾಗೃತ ದಳವನ್ನು ನೇಮಿಸಲಾಗಿದೆ ಹಾಗೆಯೇ ಪರೀಕ್ಷಾರ್ಥಿಗಳ ಮೊಬೈಲನ್ನು ಪರೀಕ್ಷಾ ವೇಳೇಲಿ ಸಂರಕ್ಷಿಸಿ ಇಟ್ಟು ಪರೀಕ್ಷೆಯ ನಂತರ ಅವರಿಗೆ ಹಿಂತುರುಗಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ…

Read More

ಸುಂಟಿಕೊಪ್ಪ ಜೂ.26 NEWS DESK :  ಶಾಲಾ ಸಂಸತ್ ರಚನೆಯಿಂದ ಶಾಲೆಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದು ಸುಂಟಿಕೊಪ್ಪ ಗ್ರೇಡ್ 1 ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಹೇಳಿದರು. ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಸರಕಾರಿ ಪ್ರೌಢಶಾಲಾ ಶಾಲಾ ಸಂಸತ್ ರಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ಹಿನ್ನಲೆಯಲ್ಲಿ ಮಕ್ಕಳು ಶಾಲಾ ಕಾಲೇಜು ದಿನಗಳಿಂದಲೇ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯ ಮತ್ತು ವ್ಯವಸ್ಥೆ ಯ ಕುರಿತು ಜ್ಞಾನ ಹೊಂದಲು ಶಾಲಾ ಸಂಸತ್ ತುಂಬಾ ಸಹಕಾರಿಯಾಗಿದೆ ಎಂದರು. ಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುವ ಮೂಲಕ ಸರಕಾರಿ ಶಾಲೆಗಳ ಉಳಿವಿಕೆಗೆ ಕೈಜೋಡಿಸಿದ ಬಗ್ಗೆ ಅಭಿನಂದಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸಿರಿಲ್ ರಾಡ್ರಿಗಸ್ ವಹಿಸಿದ್ದರು. ಉಪಪ್ರಾಂಶುಪಾಲ ಬಾಲಕೃಷ್ಣ  ನೂತನ ಸಂಸತ್ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋದಿಸಿದರು. ವೇದಿಕೆಯಲ್ಲಿ ಗ್ರಾ.ಪಂ ಸದಸ್ಯರುಗಳಾದ ಪ್ರಸಾದ್ ಕುಟ್ಟಪ್ಪ, ಆಲಿಕುಟ್ಟಿ, ಶಬ್ಬೀರ್, ರಫೀಕ್ ಖಾನ್, ಸೋಮನಾಥ್, ಕೊಡಗು ಜಿಲ್ಲಾ…

Read More

ಮಡಿಕೇರಿ ಜೂ.25 NEWS DESK : ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ವಾರ್ಷಿಕ 57 ಸಾವಿರ ಕೋಟಿ ರೂ.ಗಳ ಅಗತ್ಯವಿದೆ. ಆದರೆ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವುದರಿಂದ ಕೇವಲ 500 ಕೋಟಿ ರೂ. ಆದಾಯ ಕ್ರೋಢೀಕರಣವಾಗುತ್ತದೆ. ಬಿಜೆಪಿ ವಿನಾಕಾರಣ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆ ಮತ್ತು ಪ್ರತಿಭಟನೆ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ 22 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿದಾಗ ಬಿಜೆಪಿಗೆ ಜನರ ಬಗ್ಗೆ ಕಾಳಜಿ ಇರಲಿಲ್ಲವೇ, ಇವುಗಳ ಬೆಲೆಯನ್ನು ನೂರರ ಗಡಿ ದಾಟಿಸಿದವರು ಯಾರು ಎಂದು ಪ್ರಶ್ನಿಸಿದರು. ಅಂತರರಾಷ್ಟ್ರೀಯ ಬೆಲೆಯನ್ನು ಆಧರಿಸಿ ಕೇಂದ್ರ ಸರ್ಕಾರ ಪೆಟ್ರೋಲ್ ದರ ಲೀಟರ್ ಗೆ 50 ರೂ. ಮತ್ತು ಡೀಸೆಲ್ ಗೆ 45 ರೂ. ಎಂದು ನಿಗಧಿ ಮಾಡಬಹುದಾಗಿದೆ. ಆದರೆ ಕೆಲವು ಹೊರ ದೇಶಗಳಿಗೆ ಭಾರತ ರೂ.32 ಕ್ಕೆ ಪೆಟ್ರೋಲ್…

Read More

ಮಡಿಕೇರಿ ಜೂ.25 NEWS DESK : ಕೊಡವ ಸಮಾಜಗಳು ಯಾವುದೇ ಕಾರಣಕ್ಕು ರಾಜಕೀಯದಲ್ಲಿ ಮೂಗು ತೂರಿಸಬಾರದು ಮತ್ತು ಸಾಮಾಜಿಕ ಜಾಲತಾಣಗಳ ಪ್ರಚೋದನೆಗೆ ಒಳಗಾಗಬಾರದು ಎಂದು ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮನು ಮುತ್ತಪ್ಪ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿರಾಜಪೇಟೆಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ಸಂದರ್ಭ ಶಾಸಕ ಎ.ಎಸ್.ಪೊನ್ನಣ್ಣ ಅವರ ಪ್ರತಿಕೃತಿ ದಹನಕ್ಕೆ ಸಂಬಂಧಿಸಿದಂತೆ ಕೆಲವು ಕೊಡವ ಸಮಾಜಗಳು ಪ್ರತಿಕ್ರಿಯೆ ನೀಡಿರುವುದನ್ನು ತೀವ್ರವಾಗಿ ಖಂಡಿಸಿದರು. ಪೊನ್ನಣ್ಣ ಅವರ ಪರ ಪ್ರತಿಕ್ರಿಯೆ ನೀಡುವಂತೆ ಸಾಮಾಜಿಕ ಜಾಲತಾಣದ ವೀರರು ಕೊಡವ ಸಮಾಜಗಳಿಗೆ ಪ್ರಚೋದನೆ ನೀಡಿದ್ದಾರೆ. ಕೊಡವ ಸಮಾಜಗಳ ಒಕ್ಕೂಟ ಕೂಡ ಪ್ರತಿಕ್ರಿಯೆ ನೀಡಿದ್ದು, ಇದು ಸರಿಯಾದ ಕ್ರಮವಲ್ಲ. ಕಾಂಗ್ರೆಸ್ಸಿಗರಿಗೆ ಚುನಾವಣೆ ಬಂದಾಗ ಮಾತ್ರ ಕೊಡವರ ಬಗ್ಗೆ ಕಾಳಜಿ ಹೆಚ್ಚಾಗುತ್ತದೆ. ಪೊನ್ನಣ್ಣ ಅವರು ಮಾತ್ರ ಕೊಡವ ಜನಪ್ರತಿನಿಧಿಯೇ ಬೇರೆ ಯಾರು ಇಲ್ಲವೇ, ಈ ಹಿಂದೆ ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರ ಪ್ರತಿಕೃತಿ ದಹಿಸಿದಾಗ ಯಾಕೆ ಯಾರೂ ಧ್ವನಿ ಎತ್ತಲಿಲ್ಲ, ಅಪ್ಪಚ್ಚು ರಂಜನ್ ಕೊಡವರಲ್ಲವೇ…

Read More

ಸೋಮವಾರಪೇಟೆ ಜೂ.25 NEWS DESK : ಆಧುನಿಕತೆ ಮತ್ತು ಆವಿಷ್ಕಾರಗಳ ಎದುರು ಪ್ರಾಚೀನತೆಯ ನೆನಪುಗಳು ಕಳೆದುಹೋಗಬಾರದು. ಆಧುನಿಕತೆಯೂಬೇಕು, ಪ್ರಾಚೀನತೆಯೂ ಉಳಿಯಬೇಕು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಿಸಿದರು. ನಂಜಮ್ಮ ಸಮುದಾಯ ಭವನದಲ್ಲಿ ನಡೆದ ಸೋಮೇಶ್ವರ ದೇವಾಲಯದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸಮ ಸಮಾಜ ನಿರ್ಮಾಣದಲ್ಲಿ ಎಲ್ಲರ ಕೊಡುಗೆ ಅಗತ್ಯವಾಗಿದೆ. ಪುರಾತನ ಪದ್ದತಿಗಳು ಹಾಗು ಪ್ರಗತಿಯ ಮಧ್ಯೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಮುಖ್ಯ ಅತಿಥಿಯಾಗಿದ್ದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಸಣ್ಣ ಸಮುದಾಯಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸೋಮವಾರಪೇಟೆಯ ಶ್ರೀ ಸೋಮೇಶ್ವರ ದೇವಾಲಯ ಅಭಿವೃದ್ಧಿ ಹಾಗು ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ಮೂಲಕ ಹಾಗು ವೈಯುಕ್ತಿಕವಾಗಿಯೂ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಮತ್ತೋರ್ವ ಅತಿಥಿ ಸಾಹಿತಿ ನರಹಳ್ಳಿ ಡಾ. ಬಾಲಸುಬ್ರಹ್ಮಣ್ಯ ಮಾತನಾಡಿ, ದೇವಾಲಯಗಳು ಸಂಸ್ಕೃತಿಯ ಕೇಂದ್ರಗಳಾಗಿದ್ದು, ಇಲ್ಲಿ ನಡೆಯುವ ಪೂಜೆ ಪುನಸ್ಕಾರಗಳು ಇಂದ್ರಿಯಗಳಿಗೆ ಚೈತನ್ಯ ತುಂಬುತ್ತವೆ. ಸಾತ್ವಿಕ…

Read More

ಬೆಂಗಳೂರು ಜೂ.25 NEWS DESK : ರಾಜ್ಯದಲ್ಲಿ ಡೆಂಘಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಗ್ಯ ಸಚಿವರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದರು. :: ಸಭೆಯ ಮುಖ್ಯಾಂಶಗಳು ::  ರಾಜ್ಯದಲ್ಲಿ ನಿನ್ನೆಯ ವರೆಗೆ ಒಟ್ಟು 5374 ಪ್ರಕರಣ ವರದಿಯಾಗಿದ್ದು, 5 ಮರಣಗಳು ಸಂಭವಿಸಿವೆ ಭಾರತ ಸರ್ಕಾರವು ಡೆಂಗಿ ಪ್ರಕರಣಗಳಲ್ಲಿ Case fatality rate ಅಂದರೆ ಮರಣ ಪ್ರಮಾಣ ಶೇ. 0.5 ನ್ನು ಮೀರುವಂತಿಲ್ಲ ಎಂದು ನಿಗದಿ ಪಡಿಸಿದೆ* ರಾಜ್ಯದಲ್ಲಿ ಮರಣ ಪ್ರಮಾಣ ಇನ್ನೂ ಕಡಿಮೆ ಪ್ರಮಾಣದಲ್ಲಿದೆ. ಅಂದರೆ, Case fatality rate 0.09% ಇದೆ ಬೆಂಗಳೂರು, ಚಿಕ್ಕಮಗಳೂರು, ಮೈಸೂರು, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಕಾಣಿಸಿಕೊಂಡಿವೆ *ಬಿಬಿಎಂಪಿ ವ್ಯಾಪ್ತಿಯಲ್ಲಿ 1230 ಪ್ರಕರಣಗಳು ವರದಿಯಾಗಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ನಿಯಂತ್ರಣಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ* ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸಾ ಸೌಲಭ್ಯಗಳು,…

Read More

ಮಡಿಕೇರಿ ಜೂ.25 NEWS DESK : ವಿರೋಧ ಪಕ್ಷದ ಜನಪರ ಹೋರಾಟವನ್ನು ದಮನ ಮಾಡುವುದಕ್ಕಾಗಿ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ಸುಳ್ಳು ದೂರು ದಾಖಲಿಸಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಆರೋಪಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ, ಪ್ರತಿಭಟನೆಯ ಸಂದರ್ಭ ಪ್ರತಿಕೃತಿ ದಹಿಸುವುದು ಸಾಮಾನ್ಯ, ಪ್ರತಿಭಟನೆ ಮಾಡಲು ಮತ್ತು ಆಡಳಿತ ಪಕ್ಷದ ದುರಾಡಳಿತವನ್ನು ಖಂಡಿಸಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಕ್ಕೆ ಸಂಪೂರ್ಣ ಸ್ವಾತಂತ್ರ್ಯವಿದೆ. ಆದರೆ ವಿರಾಜಪೇಟೆಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯನ್ನೇ ದೊಡ್ಡ ಅಪರಾಧ ಎನ್ನುವಂತೆ ಪ್ರತಿಬಿಂಬಿಸಿರುವ ಕಾಂಗ್ರೆಸ್ಸಿಗರು ಪ್ರತಿಕೃತಿ ದಹನದ ವಿಚಾರಕ್ಕೆ ಜಾತಿಯ ಬಣ್ಣ ಬಳಿಯುತ್ತಿದ್ದು, ಇದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು. ಸುಳ್ಳು ದೂರು ದಾಖಲಿಸಿ ಬಿಜೆಪಿ ಕಾರ್ಯಕರ್ತರ ಮನೋಸ್ಥೈರ್ಯ ಕುಗ್ಗಿಸಲು ಸಾಧ್ಯವಿಲ್ಲ. ಮುಂದೆಯೂ ಸರ್ಕಾರದ ದುರಾಡಳಿತದ ವಿರುದ್ಧ ಹೋರಾಟ ನಡೆಸಲಿದ್ದೇವೆ. ಕಾಂಗ್ರೆಸ್ಸಿಗರು ಕ್ಷುಲ್ಲಕ ವಿಚಾರವನ್ನು ಮುಂದಿಟ್ಟುಕೊಂಡು ಸಮಾಜದಲ್ಲಿ ಒಡಕು ಮೂಡಿಸುವ ರಾಜಕಾರಣ ಮಾಡದೆ…

Read More