ಲೇಖಕ: admin

ಸಿದ್ದಾಪುರ ಜು.27 NEWS DESK : ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಹಿರಿಯ ಪತ್ರಕರ್ತ ಅಂಚೆಮನೆ ಸುಧಿ ಕುಮಾರ್ ಅವರು ಕಾವೇರಿ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಜಿಲ್ಲಾ ಘಟಕ, ಕುಶಾಲನಗರ ಪ್ರೆಸ್ ಕ್ಲಬ್ ಟ್ರಸ್ಟ್, ಸಂಗಮ ಟಿ.ವಿ ಹಾಗೂ ವಂಶಿ ನ್ಯೂಸ್ ಸಹಯೋಗದೊಂದಿಗೆ ಜು.31ರಂದು ಕುಶಾಲನಗರ ಗಾಯಿತ್ರಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆಯುವ ಪತ್ರಿಕಾ ದಿನಾಚರಣೆಯಲ್ಲಿ ಸುಧಿ ಕುಮಾರ್ ಅವರಿಗೆ ಕಾವೇರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಿದ್ದಾಪುರ ಸಮೀಪದ ಅಭ್ಯತ್ ಮಂಗಲ ಗ್ರಾಮದ ಅಂಚೆಮನೆ ದಿ.ನಂಜುಂಡ ಹಾಗೂ ಜಯಮ್ಮ ದಂಪತಿಗಳ ಪುತ್ರ ಅಂಚೆಮನೆ ಸುಧಿ ಕುಮಾರ್ ಅವರು ಕಳೆದ 25 ವರ್ಷಗಳಿಂದ ವಿವಿಧ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.  

Read More

ಮಡಿಕೇರಿ ಜು.27 NEWS DESK : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜು.28 ರಂದು ಪತ್ರಿಕಾ ದಿನಾಚರಣೆ ಹಾಗೂ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10.30 ಗಂಟೆಗೆ ನಗರದ ಪತ್ರಿಕಾ ಭವನದಲ್ಲಿ ಕಾರ್ಯಕ್ರಮ ಸಂಚಾಲಕ ಟಿ.ಎನ್.ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು‌ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಜಿ.ಪಂ. ಮಾಜಿ ಸದಸ್ಯ ಪಿ.ಎಂ. ಲತೀಫ್ ಭಾಗವಹಿಸಲಿದ್ದಾರೆ. ಮುಖ್ಯ ಭಾಷಣಗಾರರಾಗಿ ವೀರಾಜಪೇಟೆ ಲಿಟಲ್ ಸ್ಕಾಲರ್ ಅಕಾಡೆಮಿ ಅಧ್ಯಕ್ಷೆ ಪೂಜಾ ರವೀಂದ್ರ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭ ಹಿರಿಯ ಪತ್ರಿಕಾ ವಿತರಕರುಗಳಾದ ಸುಂಟಿಕೊಪ್ಪದ ಮುಕ್ಕಾಟಿರ ವಸಂತ್, ಚೆಟ್ಟಳ್ಳಿಯ ಟಿ.ಎನ್. ಧನಲಕ್ಷ್ಮಿ, ವೀರಾಜಪೇಟೆಯ ದೀಪಕ್ ದಾಸ್ ಅವರುಗಳನ್ನು…

Read More

ಮಡಿಕೇರಿ ಜು.27 NEWS DESK : ರಸ್ತೆ ಬದಿಯಲ್ಲಿ ನಿಲ್ಲಿಸಿದ ಆಟೋ ಮೇಲೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ಗೌಡಳ್ಳಿ  ಗ್ರಾಮದಲ್ಲಿ ನಡೆದಿದೆ. ಜಯಪ್ಪ ಎಂಬುವರ ಆಟೋದ ಮೇಲೆ ವಿದ್ಯುತ್ ಕಂಬ ಬಿದ್ದಿದ್ದು, ಆಟೋ ಸಂಪೂರ್ಣ ಜಖಂ ಗೊಂಡಿದೆ.  ವಿದ್ಯುತ್ ಇಲಾಖೆ ಆಟೋ ಚಾಲಕನಿಗೆ ಪರಿಹಾರ ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.

Read More

ಮಡಿಕೇರಿ ಜು.27 NEWS DESK : ಭಾಗಮಂಡಲ ಹೋಬಳಿಯ ದೋಣಿಕಾಡು ಎಂಬಲ್ಲಿ ಕಾವೇರಿ ನದಿ ನೀರಿನ ಪ್ರವಾಹದ ರಕ್ಷಣೆಗೆ ದೋಣಿ ಸಹಾಯದಿಂದ ನದಿ ದಾಟುವ ಜನರಿಗೆ ಸುರಕ್ಷತೆಗಾಗಿ ಜಿಲ್ಲಾಡಳಿತದಿಂದ ಜೀವ ರಕ್ಷಕ ಜಾಕೆಟ್ ಗಳನ್ನು ವಿತರಿಸಲಾಯಿತು.

Read More

ಮಡಿಕೇರಿ ಜು.27 NEWS DESK : ಭಾರಿ ಗಾಳಿ ಮಳೆಯಿಂದಾಗಿ ಕರ್ಣಂಗೇರಿ ಗ್ರಾಮದ ಮೊಣಕಾಲ್ಮುರಿ ಶಾಲೆಯ ಹಿಂಭಾಗದ ಹೆಚ್.ಆರ್.ಹೇಮವತಿ ಎಂಬುವವರ ಮನೆ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಜಾನ್ಸನ್ ಪಿಂಟೋ ಹಾಗೂ ತಹಶೀಲ್ದಾರ್ ಪ್ರವೀಣ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಇದೇ ಸಂದರ್ಭ  ಕುಟುಂಬದವರಿಗೆ ಆಹಾರ ಕಿಟ್  ವಿತರಿಸಲಾಯಿತು.

Read More

ಪುತ್ತೂರು ಜು.27 NEWS DESK : ಕೊರೆಯುವ ಚಳಿಯಲ್ಲಿ ಪರ್ವತದ ಮೇಲ್ಭಾಗದಿಂದ ಸುರಿಯುವ ಗುಂಡಿನ ದಾಳಿಯ ಮಧ್ಯೆ ಕಾರ್ಗಿಲ್ ಯುದ್ಧದಲ್ಲಿ ಕೆಚ್ಚೆದೆಯ ಹೋರಾಟವನ್ನು ಮಾಡಿ ಹುತಾತ್ಮರಾಗಿರುವ ಹಾಗೂ ಅದರಲ್ಲಿ ಪಾಲ್ಗೊಂಡಿರುವ ಸೇನಾಪಡೆಗಳ ಎಲ್ಲಾ ಅಧಿಕಾರಿಗಳೂ ನಿತ್ಯ ಸ್ಮರಣೀಯರು ಎಂದು ಭಾರತೀಯ ಸೇನಾಪಡೆಯ ವಿಶ್ರಾಂತ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಎಸ್.ಟಿ.ರಮಾಕಾಂತನ್ ಹೇಳಿದರು. ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿ0ಗ್ ಎಂಡ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಆಶ್ರಯದಲ್ಲಿ ನಡೆದ ಕಾರ್ಗಿಲ್ ವಿಜಯ ದಿವಸ ಸಮಾರಂಭದಲ್ಲಿ ಯೋಧ ನಮನವನ್ನು ಸಲ್ಲಿಸಿ ಮಾತಾಡಿದರು. ವಿಶ್ವದಲ್ಲಿಯೇ ಶ್ರೇಷ್ಟ ಸೇನಾ ಪಡೆಯನ್ನು ಹೊಂದಿರುವ ಭಾರತವು ತನ್ನ ಮೇಲೆ ದಾಳಿಗೆ ಬರುವ ಶತ್ರುವನ್ನು ಕ್ಷಣ ಮಾತ್ರದಲ್ಲಿ ಹುಟ್ಟಡಗಿಸುವ ಸಾಮರ್ಥ್ಯವನ್ನು ಹೊಂದಿದ್ದು ಇದು ನಮ್ಮೆಲರಿಗೂ ಹೆಮ್ಮೆಯಾಗಿದೆ ಎಂದರು. ಯುವ ಇಂಜಿನಿಯರುಗಳಿಗೆ ಸೇನೆಯಲ್ಲಿ ಅನೇಕ ಹುದ್ದೆಗಳಿವೆ. ಸಾಫ್ಟ್ವೇರ್ ಉದ್ಯೋಗಗಳಿಗಿಂತಲೂ ಉನ್ನತ ಮಟ್ಟದ ಜೀವನವನ್ನು ನಡೆಸುವುದಕ್ಕೆ ಬೇಕಾದ ಸವಲತ್ತುಗಳು ಸೇನಾ ಅಧಿಕಾರಿಗಳಿಗೆ ಲಭ್ಯವಿದೆ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯನ್ನು ಸೇರುವ ಆಶಯವನ್ನು ಬೆಳೆಸಿಕೊಳ್ಳಬೇಕು ಎಂದರು.…

Read More

ಕುಶಾಲನಗರ ಜು.27 NEWS DESK : ಕೊಡಗಿನ ಸೈನಿಕ ಶಾಲೆಯಲ್ಲಿ 25ನೇ ಕಾರ್ಗಿಲ್ ವಿಜಯ್ ದಿವಸವನ್ನು ಆಚರಿಸಲಾಯಿತು. ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್, ಆಡಳಿತಾಧಿಕಾರಿ ಮತ್ತು ಉಪ ಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ  ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ತ್ಯಾಗವನ್ನು ಸ್ಮರಿಸುತ್ತಾ, ಯುದ್ಧ ವೀರರ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದರು. ಜೆ.ಡಿ.ಎನ್‌.ಸಿ.ಸಿ ಕಂಪನಿಯ ಎನ್‌ಸಿಸಿ ಅಧಿಕಾರಿಗಳು ಮತ್ತು ಸೈನಿಕ ಶಾಲೆ ಕೊಡಗಿನ ಸೇನಾ ಸಿಬ್ಬಂದಿವರ್ಗದವರೂ ಸಹ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಅಧಿಕಾರಿಗಳು ಭಾರತೀಯ ಸಶಸ್ತ್ರ ಪಡೆಗಳು ರಾಷ್ಟ್ರದ ಸೇವೆಯಲ್ಲಿ ಶೌರ್ಯ ಮತ್ತು ತ್ಯಾಗವನ್ನು ಗೌರವಿಸಲು ಸ್ಮರಣಾರ್ಥವನ್ನು ಅತ್ಯಂತ ಹೆಮ್ಮೆ ಮತ್ತು ಉತ್ಸಾಹದಿಂದ ಆಯೋಜಿಸಲಾಗಿದೆ. ಈ ಮಹತ್ವದ ಘಟನೆಯು ಭಾರತೀಯ ವಾಯುಪಡೆಯ ಆಪರೇಷನ್ ಸಫೇದ್ ಸಾಗರ್ ಮತ್ತು ಭಾರತೀಯ ಸೇನೆಯ ಆಪರೇಷನ್ ವಿಜಯ್‌ನ ಪರಾಕಾಷ್ಠೆಯ ನಂತರ 1999 ರಲ್ಲಿ ಕಾರ್ಗಿಲ್ ಸಂಘರ್ಷದಲ್ಲಿ ಭಾರತದ ವಿಜಯದ 25 ನೇ ವಾರ್ಷಿಕೋತ್ಸವವನ್ನು ಸೂಚಿಸುವುದಾಗಿದೆ ಎಂದರು. ನಮ್ಮ ಭಾರತೀಯ ಸೇನೆಯ ಇತಿಹಾಸದಲ್ಲಿ…

Read More

ಮಡಿಕೇರಿ ಜು.27 NEWS DESK : ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾಗಿ ಜಿಲ್ಲೆಯ ಸಮಾಜ ಸೇವಕರಾದ ಮೇರಿಯಂಡ ಸಂಕೇತ್ ಪೂವಯ್ಯ ನೇಮಕಗೊಂಡಿದ್ದಾರೆ. ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುವ, ಅರಣ್ಯ ಸಚಿವರು ಉಪಾಧ್ಯಕ್ಷರಾಗಿರುವ ಮಂಡಳಿಯ ಮೂರು ವರ್ಷದ ಅವಧಿಗೆ ಸದಸ್ಯರಾಗಿ ಜಿಲ್ಲೆಯಿಂದ ಸಂಕೇತ್ ಪೂವಯ್ಯ ಅವರನ್ನು ನೇಮಕ ಮಾಡಿ ರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

Read More

ಪ್ಯಾರಿಸ್ ಜು.27 NEWS DESK : ಕ್ರಾಂತಿಯ ತೊಟ್ಟಿಲು ಎಂದು ಖ್ಯಾತಿಯನ್ನು ಹೊಂದಿರುವ ಪ್ಯಾರಿಸ್ ನಗರ  33ನೇ ಒಲಿಂಪಿಕ್ಸ್ 2024 ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಯಿತು. ಒಲಿಂಪಿಕ್ಸ್ ಗೇಮ್ ಉದ್ಘಾಟನಾ ಸಮಾರಂಭವು  ‘ಪರೇಡ್ ಆಫ್ ದಿ ನೇಷನ್ಸ್’ ನೊಂದಿಗೆ ಪ್ರಾರಂಭವಾಯಿತು, ಇದರಲ್ಲಿ 205 ದೇಶಗಳ ಕ್ರೀಡಾಪಟುಗಳು ಸಾಂಪ್ರದಾಯಿಕ ಸೀನ್ ನದಿಯಲ್ಲಿ ದೋಣಿಗಳಲ್ಲಿ ಪ್ರಯಾಣಿಸಿದರು. ಸಾಮಾನ್ಯವಾಗಿ ಸ್ಟೇಡಿಯಂ ಒಳಗೆ ನಡೆಯುವ ಕ್ರೀಡಾಪಟುಗಳ ಮೆರವಣಿಗೆಯು ಈ ಸಲ ಬೋಟ್​ಗಳಲ್ಲಿ ಆಯೋಜಿಸಿ ಪ್ರೇಕ್ಷರನ್ನು ಭವ್ಯತೆ ಮತ್ತು ಸಾಂಕೇತಿಕವಾಗಿ ಆಕರ್ಷಿಸಿತು. 1900 ಮತ್ತು 1924 ರ ನಂತರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುತ್ತಿರುವುದು ಇದು ಮೂರನೇ ಬಾರಿ. ಆರು ಕಿಲೋಮೀಟರ್ ಪರೇಡ್ ಆಸ್ರ‍್ಲಿಟ್ಜ್ ಸೇತುವೆಯಿಂದ ಪ್ರಾರಂಭವಾಯಿತು. 85 ದೋಣಿಗಳಲ್ಲಿ 205 ರಾಷ್ಟ್ರಗಳ 6,800 ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ಒಂದು ನಿರಾಶ್ರಿತರ ಒಲಿಂಪಿಕ್ ತಂಡವನ್ನು ಹೊತ್ತೊಯ್ದವು, ಭಾರತದಿಂದ ಎರಡು ಬಾರಿ ಒಲಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮತ್ತು ಟೇಬಲ್ ಟೆನ್ನಿಸ್ ದಂತಕತೆ ಎ ಶರತ್ ಕಮಲ್ ಭಾರತದ…

Read More

ಮಡಿಕೇರಿ ಜು.27 NEWS DESK : 25ನೇ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಕೊಡಗು ಮಾಜಿ ಸೈನಿಕರ ಸಂಘ ಮತ್ತು ಮಡಿಕೇರಿ ಮಾಜಿ ಸೈನಿಕರ ಸಂಘದ ಸಹಯೋಗದಲ್ಲಿ ಮಡಿಕೇರಿ ನಗರಸಭೆಯ ಬಳಿ ಇರುವ ಯುದ್ಧ ಸ್ಮಾರಕ ಮತ್ತು ಜನರಲ್ ತಿಮ್ಮಯ್ಯ ಮ್ಯೂಸಿಯಂ ಯುದ್ಧ ಸ್ಮಾರಕದಲ್ಲಿ ಪುಷ್ಪಗುಚ್ಚವಿರಿಸಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಭಾರತಿಯ ಯೋಧರಿಗೆ ನಮನ ಸಲ್ಲಿಸಲಾಯಿತು. ಮೇಜರ್ ಚಿಂಗಪ್ಪನವರು ಕಾರ್ಗಿಲ್ ಯುದ್ಧದ ಭಾರತೀಯ ಯೋಧರ ತ್ಯಾಗದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

Read More