ಲೇಖಕ: admin

ಮಡಿಕೇರಿ ಜು.26 NEWS DESK : ಶನಿವಾರಸಂತೆ ಹೋಬಳಿಯ ಮಾಲಂಬಿ ಬಳಿ ಕುಶಾಲನಗರ- ಶನಿವಾರಸಂತೆ ರಸ್ತೆ ಬದಿಯಲ್ಲಿ ಬೃಹತ್ ಮರ ಬಿದ್ದು  ವಾಹನ ಸಂಚಾರಕ್ಕೆ ವ್ಯತ್ಯಯವಾಗಿದೆ. ಅಗ್ನಿಶಾಮಕ ಅಧಿಕಾರಿಗಳು ಸಿಬ್ಬಂದಿಗಳು ಮರ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.

Read More

ಮಡಿಕೇರಿ ಜು.26 NEWS DESK : ಹೆಚ್ಚಿನ‌ ಮಳೆಗೆ ಸೋಮವಾರಪೇಟೆ – ಶಾಂತಳ್ಳಿ ಮುಖ್ಯರಸ್ತೆಯ ಜೇಡಿಗುಂಡಿ ಬಳಿ ಬರೆ ಕುಸಿದು ಸಂಪೂರ್ಣ ರಸ್ತೆ ಮುಚ್ಚಿಹೋಗಿದ್ದು, ಜೆಸಿಬಿ ಗಳ ಮೂಲಕ ರಸ್ತೆ ತೆರವು ಕಾರ್ಯ ನಡೆದಿದೆ.

Read More

ಕಾರ್ಗಿಲ್ ಯುದ್ಧ ಸ್ಮಾರಕ(ಲಡಾಕ್) ಜು.26 : ಕಾರ್ಗಿಲ್ ವಿಜಯ್ ದಿವಾಸ್ ಹಿನ್ನೆಲೆ ದ್ರಾಸ್​ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದರು. ನಂತರ ಅಲ್ಲಿರುವ ಮ್ಯೂಸಿಯಂಗೆ ಭೇಟಿ ನೀಡಿದ ಪ್ರಧಾನ ಮಂತ್ರಿಗಳು ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಬಳಸಿರುವ ಮಿಲಿಟರಿ ಉಪಕರಣಗಳು, ಭಾರತೀಯ ಸೇನೆಯ ಯುದ್ಧ ಸಲಕರಣೆಗಳು, ಹುತಾತ್ಮ ಯೋಧರ ಛಾಯಾಚಿತ್ರಗಳನ್ನು ವೀಕ್ಷಿಸಿದರು.

Read More

ನಾಪೋಕ್ಲು ಜು.26 NEWS DESK : ಆಟೋ ಚಾಲಕರು ಅಪಾಯಕಾರಿ ರಸ್ತೆ ಗುಂಡಿಗಳನ್ನು ಮುಚ್ಚುವುದರ ಮೂಲಕ ಶ್ರಮದಾನ ಮಾಡಿ ಸರ‍್ವಜನಿಕರ ಪ್ರಶಂಸೆಗೆ ಪಾತ್ರರಾದರು. ಹಳೆ ತಾಲೂಕಿನ ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಬಳಿ ರಸ್ತೆ ಹೊಂಡಗಳಾಗಿದ್ದು, ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆಯ ಗುಂಡಿಗಳಲ್ಲಿ ನಿಂತು ಕೆರೆಯಂತಾಗಿದ್ದರಿ0ದ ವಾಹನ ಚಾಲಕರು ಹಾಗೂ ಪಾದಚಾರಿಗಳು ಸಮಸ್ಯೆ ಎದುರಿಸುವಂತಾಗಿತ್ತು. ಇದನ್ನು ಮನಗಂಡು ನಾಪೋಕ್ಲುವಿನ ಆಟೋ ಚಾಲಕರು ಸ್ವಯಂ ಪ್ರೇರಿತರಾಗಿ ಜಲ್ಲಿ ಕಲ್ಲುಗಳನ್ನು ತಂದು ರಸ್ತೆಹೊಂಡ ಮುಚ್ಚುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.. ಈ ಸಂದರ್ಭ ಆಟೋ ಚಾಲಕ ಸಂಘದ ಮಾಜಿ ಅಧ್ಯಕ್ಷ ರಜಾಕ್, ಆಟೋ ಚಾಲಕರಾದ ಸತೀಶ್, ಚೇತನ್ , ಕಿರಣ್, ವಿನು, ಬಿಪಿನ್, ವಿಜು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ರಸ್ತೆ ಹೊಂಡಗಳಿಂದ ವಾಹನ ಸಂಚಾರಕ್ಕೆ ಬಹಳ ಸಮಸ್ಯೆ ಉಂಟಾಗುತ್ತಿದೆ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಆಟೋ ಚಾಲಕರ ಶ್ರಮದಾನ ಮಾಡಿದ್ದಾರೆ. ಈ ಹಿಂದೆ ಗ್ರಾಮೀಣ ಜಲಜೀವನ್ ಮಿಷನ್ ವತಿಯಿಂದ ರಸ್ತೆಗಡ್ಡಲಾಗಿ ಪೈಪ್…

Read More

ಮಡಿಕೇರಿ ಜು.26 NEWS DESK : ಭಾರಿ ಗಾಳಿ ಮಳೆಯಿಂದಾಗಿ ಕೊಡಗಿನ ವಿವಿಧೆಡೆ ಹಾನಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಜಿಲ್ಲೆಯ ಬಹುತೇಕ ಕಡೆ ರಭಸವಾಗಿ ಗಾಳಿ ಬೀಸುತ್ತಿದ್ದು, ಬರೆಗಳು ಕುಸಿಯುತ್ತಿವೆ, ಮರಗಳು ಧರೆಗುರುಳುತ್ತಿವೆ. ವಿದ್ಯುತ್ ಕಂಬಗಳು ಬಿದ್ದು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ವಿರಾಜಪೇಟೆ ತಾಲ್ಲೂಕಿನ ಕಳತ್ಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಮರ ಬಿದ್ದು ಹಾನಿಯಾಗಿದ್ದು, ಮರ ತೆರವುಗೊಳಿಸಿ, ಗ್ರಾಮಸ್ಥರು ಹಾನಿಯಾಗಿದ್ದ ಕೊಠಡಿಯನ್ನು ದುರಸ್ತಿಗೊಳಿಸಿದರು. ಶನಿವಾರಸಂತೆ ಹೋಬಳಿ ಹಾರೆ ಹೊಸೂರು ಗ್ರಾಮದ ಗಂಗಾಧರವರ ಎಂಬುವವರ ಮನೆಯ ಪಕ್ಕದಲ್ಲಿ ಮರ ಬಿದ್ದು ಹಾನಿಯಾಗಿದ್ದು, ತೆರವುಗೊಳಿಸುವ ಕಾರ್ಯ ನಡೆದಿದೆ.

Read More

ಮಡಿಕೇರಿ ಜು.26 NEWS DESK : ಭಾರಿ ಹಾಳಿ ಮಳೆಯಿಂದಾಗಿ ವಿದ್ಯುತ್ ಅಡಚಣೆ ಉಂಟಾಗಿ ನೀರಿನ ಸಮಸ್ಯೆ ಎದುರಿಸುತ್ತಿದ್ದ ಮಾದಾಪುರ ಬಳಿಯ ಜಂಬೂರಿನ ನಿವಾಸಿಗಳಿಗೆ ಸ್ಥಳೀಯ ಸಂಸ್ಥೆ ವತಿಯಿಂದ ಟ್ಯಾಂಕ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ.

Read More

ಬೆಂಗಳೂರು ಜು.26 NEWS DESK : ಬೆಂಗಳೂರಿನ ರಾಷ್ಟಿçÃಯ ಮಿಲಿಟರಿ ಸ್ಮಾರಕದಲ್ಲಿ ರಾಷ್ಟ್ರೀಯ ಸೈನಿಕ ಸ್ಮಾರಕ ಮ್ಯಾನೇಜ್ ಮೆಂಟ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ “ಕಾರ್ಗಿಲ್ ವಿಜಯ ದಿನ” ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುತಾತ್ಮ ಯೋಧರಿಗೆ ಗೌರವ ನಮನ ಅರ್ಪಿಸಿದರು. ದೇಶ ರಕ್ಷಣೆಗಾಗಿ ಬಲಿದಾನಗೈದ ಸೈನಿಕರ ನಿಸ್ವಾರ್ಥ ಸೇವಯನ್ನು ಮುಖ್ಯಮಂತ್ರಿಗಳು ಸ್ಮರಿಸಿಕೊಂಡರು.

Read More

ಮಡಿಕೇರಿ ಜು.26 NEWS DESK : ಹಿಂದು ಜಾಗರಣ ವೇದಿಕೆ, ಮಡಿಕೇರಿ ಮಾಜಿ ಸೈನಿಕರ ಸಂಘದ ಸಹಯೋಗದಲ್ಲಿ  ಮಡಿಕೇರಿಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು. ನಗರದ ಮುಖ್ಯ ರಸ್ತೆಯಲ್ಲಿರುವ  ಯುದ್ಧ ಸ್ಮಾರಕಕ್ಕೆ ನಿವೃತ್ತ ಯೋಧರು, ಹಿಂದು ಜಾಗರಣ ವೇದಿಕೆ, ಹಿಂದು ಯುವ ವಾಹಿನಿ ಹಾಗೂ ದೇಶಾಭಿಮಾನಿಗಳು ಪುಷ್ಪರ್ಚನೆ ಮಾಡಿ ಗೌರವ ನಮನ ಸಲ್ಲಿಸಿ, ಸೈನಿಕರ ತ್ಯಾಗ ಬಲಿದಾವನ್ನು ಸ್ಮರಿಸಿದರು. ಈ ಸಂದರ್ಭ ಮಾತನಾಡಿದ ಭಾರತೀಯ ನೌಕಾದಳದ ನಿವೃತ್ತ ಸೇನಾಧಿಕಾರಿ ಚೋಂಡಿರ ಸುರೇಶ್, ಗಡಿಯಲ್ಲಿದ್ದು ನಮ್ಮ ಜೀವವನ್ನು ಉಳಿಸುವ ಕೆಲಸ ಯೋಧರು ಮಾಡುತ್ತಿದ್ದು ಅವರನ್ನು ನಿತ್ಯ ಸ್ಮರಿಸಬೇಕು  ಹಾಗೂ ಮುಂದಿನ ಪಿಳಿಗೆಗೆಗೂ ಇದರ ಬಗ್ಗೆ ಅರಿವು ಮೂಡಬೇಕು ಎಂದರು. ಈ ಸಂದರ್ಭ  ಮಾಜಿ ಸೈನಿಕರು, ಗಣ್ಯರು ಹಾಗೂ ಸಂಘ-ಸಂಸ್ಥೆಗಳ ಪ್ರಮುಖರು  ಪಾಲ್ಗೊಂಡಿದ್ದರು. ವಿಜಯ್ ದಿವಸ್ ಅಂಗವಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ  ರಕ್ತದಾನ ಶಿಬಿರ ನಡೆಯಲಿದೆ.

Read More

ಮಡಿಕೇರಿ ಜು.26 NEWS DESK : ಕರ್ನಾಟಕ ಸರ್ಕಾರ ಸಾರ್ವಜನಿಕ  ಶಿಕ್ಷಣ ಇಲಾಖೆ ವತಿಯಿಂದ ಪಾರಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶೂ ಮತ್ತು ಸಾಕ್ಸ್‌ಗಳನ್ನು ವಿತರಿಸಲಾಯಿತು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೇಶವ ಅವರು ವಿದ್ಯಾರ್ಥಿಗಳಿಗೆ ಪಾದರಕ್ಷೆಗಳನ್ನು ವಿತರಿಸಿ ಮಾತನಾಡಿ, ಸರ್ಕಾರದಿಂದ ಎಲ್ಲ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಉಚಿತವಾಗಿ ದೊರೆಯುತ್ತಿದ್ದು, ಇದನ್ನ ಸದಾವಕಾಶವಾಗಿ ಬಳಸಿಕೊಂಡು, ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕು. ಹಾಗಾದರೆ ಮಾತ್ರ ಸರಕಾರದ ಇಂತಹ ಯೋಜನೆಗಳಿಗೆ ಅರ್ಥ ಲಭಿಸಲಿದೆ ಎಂದು ಕಿವಿಮಾತು ಹೇಳಿದರು. ಶಾಲಾ ಮುಖ್ಯೋಪಾಧ್ಯಾಯರಾದ ವೇದಪ್ರಸಾದ್, ಶಾಲಾ-ಸಹ ಶಿಕ್ಷಕರು ಹಾಜರಿದ್ದರು.

Read More

ಮಡಿಕೇರಿ ಜು.26 NEWS DESK : ಕೊಡಗು ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಭೇಟಿ ಮಾಡಿ ತಮ್ಮನ್ನು ಅಲೆಮಾರಿ ಸಮುದಾಯದಿಂದ ಕೈಬಿಟ್ಟು ಪಿ.ವಿ.ಜಿ.ಟಿ ಪಟ್ಟಿಗೆ (ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪು) ಸೇರಿಸುವಂತೆ ಮನವಿ ಮಾಡಿದರು. ಹಿಂದಿನಿಂದಲೂ ಕೊಡಗಿನ ನಿವಾಸಿಗಳಾಗಿರುವ ಎರವ, ಬೆಟ್ಟಕುರುಬ, ಸೋಲಿಗ ಕುಟುಂಬಕ್ಕೆ ಸೇರಿದ ತಾವುಗಳು ಅರಣ್ಯ ಹಕ್ಕು ಪತ್ರವನ್ನು ಹೊಂದಿದ್ದು ಸರ್ಕಾರ ಅಲೆಮಾರಿ ಬುಡಕಟ್ಟು ಜನಾಂಗ ಎಂದು ಗುರುತಿಸಿರುವುದರಿಂದ ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತದೇವೆ. ಈ ಹಿಂದೆ ಗಿರಿಜನ ಉಪಯೋಜನೆಯಡಿ ಸೌಲಭ್ಯ ಪಡೆಯುತ್ತಿದ್ದೆವು. ಪ್ರಸ್ತುತ ಅಲೆಮಾರಿ ಬುಡಕಟ್ಟು ವರ್ಗ ಎಂದು ದಾಖಲಾಗಿರುವುದರಿಂದ ಈ ಸೌಲಭ್ಯ ಸಿಗುತ್ತಿಲ್ಲ. ಆದ್ದರಿಂದ ತಮ್ಮನ್ನು ಪಿ ವಿ ಜಿ ಟಿ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕಾಗಿ ಮನವಿ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ. ಲ್ಯಾಂಪ್ಸ್ ಅಧ್ಯಕ್ಷ ಮಣಿ, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಸಿದ್ದಪ್ಪ, ಬೆಟ್ಟ ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ…

Read More