ಲೇಖಕ: admin

ಮಡಿಕೇರಿ ಜು.19 NEWS DESK  : ಮಡಿಕೇರಿ ಲಯನ್ಸ್ ಸಂಸ್ಥೆಯ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ಲಯನ್ಸ್ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ನಟರಾಜು ಕೆಸ್ತೂರು ಎಂಜೆಎಫ್, ಕಾರ್ಯದರ್ಶಿ ಮದನ್ ಮಾದಯ್ಯ ಹಾಗೂ ಕೋಶಾಧಿಕಾರಿಯಾಗಿ ಸೋಮಣ್ಣ ಪಿ.ಪಿ ಎಂಜೆಎಫ್ ಅಧಿಕಾರ ಸ್ವೀಕರಿಸಿದರು. ನಿದೇಶಕರುಗಳಾಗಿ ನಿರಂಜನ್ ಎಂ.ಎ, ಮೋಹನ್ ಕುಮಾರ್ ಎಂಜೆ ಎಫ್, ಜೆ.ವಿ.ಕೋಟಿ, ಮುರುಗೇಶ್, ಚಾಮ, ಸಂತೋμï ಅಣ್ವೇಕರ್, ಗೀತಾ ಮಧುಕರ್, ಉಮೇಶ್ ನಾಯಕ್, ರಾಗ ಪ್ರಕೃತಿ, ಕನ್ನಂಡ ಕವಿತಾ, ಅನಿತಾ ಸೋಮಣ್ಣ, ಸಂಜಯ್ ಹೆಚ್.ಎಲ್ ಹಾಗೂ ನಾಗೇಂದ್ರ ಸೇರ್ಪಡೆಗೊಂಡರು. ಲಯನ್ಸ್ ಸಂಸ್ಥೆಯ ಮಾಜಿ ರಾಜ್ಯಪಾಲ ಹಾಗೂ ಇಮಿಡಿಯೆಟ್ ಮಲ್ಟಿಪಲ್ ಕೌನ್ಸಿಲ್ ಛೇರ್ಮನ್ ಲಯನ್ ವಸಂತ್ ಕುಮಾರ್ ಶೆಟ್ಟಿ ಪಿಎಂಜೆಎಫ್ ಪದಗ್ರಹಣ ನೆರವೇರಿಸಿಕೊಟ್ಟರು. ನಂತರ ಮಾತನಾಡಿದ ಅವರು ಲಯನ್ಸ್ ಸಂಸ್ಥೆ ವಿಶ್ವದಾದ್ಯಂತ ಹಲವು ಕಡೆ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಲಯನ್ಸ್ ನ ಮುಖ್ಯ ಗುರಿ ಸೇವೆ ಮತ್ತು ಸಾಂಗತ್ಯವಾಗಿದೆ. ಮುಂದಿನ ಎರಡು ವರ್ಷದಲ್ಲಿ…

Read More

ಮಡಿಕೇರಿ ಜು.19 NEWS DESK : ಬೇಗೂರು ಪಟ್ಟಕೇರಿ ಅಂಬಲ ಒಕ್ಕೂಟದ ವತಿಯಿಂದ ಜು.21 ರಂದು ಬೇಗೂರು ಗ್ರಾಮ ಮಟ್ಟದ 8ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ. ಗ್ರಾಮದ ಬೆಜಾಂಡ ಪ್ರೇಮಾ ರಾಮು ಅವರ ಗದ್ದೆಯಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಕೊಡವಾಮೆ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೇರ ದಿನೇಶ್ ಬೆಳ್ಳಿಯಪ್ಪ, ಪೊನ್ನಪೇಟೆ ದೃತಿ ಕ್ಲಿನಿಕ್‍ನ ವೈದ್ಯಾಧಿಕಾರಿ ಡಾ.ಚೆಪ್ಪುಡೀರ ಕಾವೇರಿ ಪಾಲ್ಗೊಳ್ಳಲಿದ್ದಾರೆ. ಗ್ರಾಮಸ್ಥರು ಮತ್ತು ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಪಟ್ಟಕೇರಿ ಅಂಬಲ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕೋರಿದ್ದಾರೆ.

Read More

ವಿರಾಜಪೇಟೆ ಜು.19 NEWS DESK : ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವಿರಾಜಪೇಟೆಯ ಟೀಂ ಇಂಟೋಪೀಸ್ ಡ್ಯಾನ್ಸ್ ಸ್ಟುಡಿಯೋದ ವಿದ್ಯಾರ್ಥಿಗಳು ಭಾಗವಹಿಸಿ ಚಾಂಪಿಯನ್ ಟ್ರೋಫಿಯನ್ನು ಗೆದ್ದುಕೊಂಡರು. ಸಬ್ ಜೂನಿಯರ್ ವಿಭಾಗದಲ್ಲಿ ಜೀಯ ತೃತಿಯ ಬಹುಮಾನ, ಜೂನಿಯರ್ ವಿಭಾಗದಲ್ಲಿ ಶ್ರೀದೇವಿ ದ್ವಿತೀಯ ಬಹುಮಾನ, ಜೋಡಿ ನೃತ್ಯ ವಿಭಾಗದಲ್ಲಿ ವಿಮರ್ಶ ಮತ್ತು ತನ್ವಿ ತೃತಿಯ ಬಹುಮಾನ, ಹಿರಿಯ ವಿಭಾಗಗಳಲ್ಲಿ ಯಶಿಕಾ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.

Read More

ವಿರಾಜಪೇಟೆ ಜು.19 NEWS DESK : ಪೊನ್ನಂಪೇಟೆಯ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಪಿರಿಯಾಪಟ್ಟಣ ತಾಲ್ಲೂಕು ರಾವಂದೂರುವಿನ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ವಿವಿಧ ತರಬೇತಿ ಪಡೆದರು. ಹದಿನೈದು ದಿವಸಗಳ ಕಾಲ ಜರುಗಿದ ತರಬೇತಿ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಶಿವು ಸೈನಿಕ ಅಕಾಡೆಮಿ ಗೆ ಭೇಟಿ ನೀಡಿ, ಸೈನ್ಯಕ್ಕೆ ಸೇರಲು ಬೇಕಾದ ಮಾಹಿತಿಯನ್ನು ಪಡೆದುಕೊಂಡರು. ಅಕಾಡೆಮಿ ಅಧ್ಯಕ್ಷರು ಹಾಗೂ ಮಾಜಿ ಸೈನಿಕರಾದ ಶಿವು ವಿದ್ಯಾರ್ಥಿಗಳಿಗೆ ಸೈನ್ಯಕ್ಕೆ ಸೇರಲು ಹಾಗೂ ವ್ಯಾಯಾಮ, ದೈಹಿಕ ಕಸರತ್ತು ಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಅಲ್ಲದೇ ಪರಿಶ್ರಮ, ದೈಹಿಕ ಚಟುವಟಿಕೆ, ಮಾನಸಿಕ ಸದೃಢತೆ ಹೊಂದಲು ಬೇಕಾದ ಅಂಶಗಳನ್ನು ಉದಾಹರಣೆ ಸಮೇತ ವಿವರಿಸಿದರು. ಮಾತ್ರವಲ್ಲದೆ ಸಮಾಜದಲ್ಲಿ ಉತ್ತಮ ನಾಯಕರಾಗಿ ಹೊರಹೊಮ್ಮಿ ಎಂದು ಕಿವಿಮಾತು ಹೇಳಿದರು. ಈ ಸಂದರ್ಭ ಪ್ರಾಧ್ಯಾಪಕರಾದ ಗಣೇಶ್ ಪ್ರಸಾದ್, ಶಿವು ಸೈನಿಕ ಅಕಾಡೆಮಿಯ ಕಾರ್ಯದರ್ಶಿ ಸ್ವಾಮಿ, ವಿದ್ಯಾರ್ಥಿ ನಾಯಕರಾದ ಪ್ರಶಾಂತ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Read More

ಸೋಮವಾರಪೇಟೆ ಜು.19 NEWS DESK : ದೊಡ್ಡಮಳ್ತೆಯ ಇತಿಹಾಸ ಪ್ರಸಿದ್ಧ ಹೊನ್ನಮ್ಮನ ಕೆರೆಯು ಭಾರಿ ಮಳೆಯಿಂದ ತುಂಬಿ ಹರಿಯುತ್ತಿದ್ದು, ಸ್ಥಳೀಯ ಗ್ರಾಮಸ್ಥರು ಕೆರೆಗೆ ಪೂಜೆ ಸಲ್ಲಿಸಿದರು. ಈ ಸಂದರ್ಭ ಅಧ್ಯಕ್ಷರಾದ ವಿರೇಶ್, ಪ್ರಮುಖರಾದ ಕಿರಣ್ ಕುಮಾರ್, ರತನ್, ಲೋಕೇಶ್, ತಿಮ್ಮಯ್ಯ, ಹರ್ಷಿತ್ ಇದ್ದರು.

Read More

ಮಡಿಕೇರಿ ಜು.19 NEWS DESK : ಚೆಟ್ಟಳ್ಳಿ-ಮಡಿಕೇರಿ ರಸ್ತೆ ಅಭ್ಯಾಲ ಬಳಿ ಮಣ್ಣು ಕುಸಿದು ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಬದಲಿ ಮಾರ್ಗವಾಗಿ ತೆರಳುವಂತೆ ಪೊಲೀಸ್ ಇಲಾಖೆ ಸೂಚಿಸಿದೆ.

Read More

ಕುಶಾಲನಗರ ಜು.19 NEWS DESK : ಕುಶಾಲನಗರ ಹೋಬಳಿ ಗೊಂದಿಬಸವನಹಳ್ಳಿ ಗ್ರಾಮದ ರೊಂಡೆ ಕೆರೆಯ ಏರಿ ಭಾರಿ ಮಳೆಯಿಂದ ಒಡೆದು ಅಪಾರ ಪ್ರಮಾಣದ ನೀರು ರೈತರ ಜಮೀನುಗಳಿಗೆ ನುಗ್ಗಿದೆ. ಕಳೆದ ಮೂರು ದಿನಗಳಿಂದ ಸುರಿದ ಸತತ ಬಿರುಸಿನ ಮಳೆಯಿಂದ ಕೆರೆಯಲ್ಲಿನ ನೀರಿನ ಪ್ರಮಾಣ ಹೆಚ್ಚಳವಾಗಿ ಒಡೆದು ನೀರೆಲ್ಲಾ ರೈತರ ಕೃಷಿ ಭೂಮಿಗೆ ನುಗ್ಗಿದ್ದು, ಅಕ್ಕ ಪಕ್ಕದ ಜಮೀನುಗಳು ಜಲಾವೃತವಾಗಿವೆ.

Read More

ಸುಂಟಿಕೊಪ್ಪ,ಜು.19  NEWS DESK: ಆನೆ ಮಾನವ ಸಂಘರ್ಷ ಉಪಶಮನಗೊಳಿಸುವ ನಿಟ್ಟಿನಲ್ಲಿ ತಾತ್ಕಲಿಕ ಮತ್ತು ಶಾಶ್ವತ ಪರಿಹಾರಗಳ ಕುರಿತು ಸದ್ಯದಲ್ಲೇ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ ಮೇಲಾಧಿಕಾರಿಗಳಿಗೆ ಸೂಕ್ತ ಪ್ರಸ್ತಾವನೆ ಕಳುಹಿಸಲಾಗುವುದೆಂದು ಅರಣ್ಯ ಇಲಾಖೆಯ ಕೊಡಗು ವೃತ್ತದ ಮಡಿಕೇರಿ ವಿಭಾಗದ ಉಪಸಂರಕ್ಷಣಾದಿಕಾರಿ ಬಾಸ್ಕರ್ ಹೇಳಿದರು. ಕೆದಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿತವಾಗಿದ್ದ ಕಾಫಿ ಬೆಳೆಗಾರರು ಮತ್ತು ಅರಣ್ಯ ಇಲಾಖಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಡಾನೆ ಓಡಿಸುವ ಸಂದರ್ಭದಲ್ಲಿ ಇಲಾಖೆಯವರಿಗೆ ಮತ್ತು ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಬೇಕಾಗುವ ಅಂಬ್ಯುಲೆನ್ಸ್ ವಾಹನ ಒದಗಿಸುವ ಬಗ್ಗೆ ಘೋಷಣೆ, ಒಂದೂವರೆ ವರ್ಷದ ಹಿಂದೆ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಮರುಪರಿಶೀಲನೆ ಮತ್ತು ನಿಯಮಿತವಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ಕರೆಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ಬಾಸ್ಕರ್ ಹೇಳಿದರು. ಈಗಾಗಲೇ ಆನೆ ಓಡಿಸುವ ಕಾರ್ಯಾಚರಣೆ ಚಾಲ್ತಿಯಲ್ಲಿದ್ದು, ಇದು ಹೆಚ್ಚು ಪರಿಣಾಮಕಾರಿಯಾಗಿ ಆಗಬೇಕು, ಯಾವುದೇ ಸಂದರ್ಭದಲ್ಲಿ ಮಾನವ ಜೀವಹಾನಿ ಆಗಬಾರದೆಂಬುದು ನಮ್ಮ ಕಾಳಜಿಯಾಗಿದೆ.…

Read More

ಮಡಿಕೇರಿ ಜು.19 NEWS DESK : ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಡಿ ಬಂಧಿಯಾಗಿರುವ ಆರೋಪಿಯೊಬ್ಬ ಅಂತರ್ ಜಿಲ್ಲಾ ವಾಹನ ಚೋರನೂ ಆಗಿದ್ದಾನೆ ಎನ್ನುವ ಮಾಹಿತಿ ವಿಚಾರಣೆ ವೇಳೆ ಬಹಿರಂಗಗೊಂಡಿದೆ. ಆರ್ಜಿ ಗ್ರಾ.ಪಂ ವ್ಯಾಪ್ತಿಯ ಒಂದನೇ ಪೆರುಂಬಾಡಿ ಗ್ರಾಮದ ನಿವಾಸಿ, ಕೂಲಿ ಕಾರ್ಮಿಕ ಎನ್.ದರ್ಶನ್ ನಾಯಕ್ (26) ಬಂಧಿತ ಆರೋಪಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ 11 ದ್ವಿಚಕ್ರ ವಾಹನಗಳು ಮತ್ತು ಒಂದು ಓಮ್ನಿ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಣಸೂರು, ಹನಗೋಡು, ಬಿಳಿಕೆರೆ, ರಾಮನಾಥಪುರ ಮತ್ತಿತರ ಕಡೆಗಳಲ್ಲಿ ಈತ ವಾಹನಗಳನ್ನು ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕೆಲವು ದಿನಗಳ ಹಿಂದು ಆರ್ಜಿ ಗ್ರಾಮ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಯತ್ನ ಆರೋಪದಡಿ ವಿರಾಜಪೇಟೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಅಲ್ಲದೆ ನಾಲ್ಕು ದ್ವಿಚಕ್ರ ವಾಹನ ಮತ್ತು ಒಂದು ಓಮ್ನಿ ವಾಹನ ವಶಕ್ಕೆ ಪಡೆದಿದ್ದರು. ದರ್ಶನ್ ನಾಯಕ್ ಸೇರಿದಂತೆ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಬಂಧಿತರನ್ನು ವಿಚಾರಣೆಗೊಳಪಡಿಸಿದಾಗ ವಶ…

Read More