ಲೇಖಕ: admin

ಮಡಿಕೇರಿ ಮೇ 12 NEWS DESK : ವಿಶಿಷ್ಠ ಆಚರಣೆಯ ಹಳ್ಳಿಗಟ್ಟು ಬೋಡ್ ನಮ್ಮೆಗೆ ಇಂದು ಮೇ-11ನೇ ಶನಿವಾರ ಮೂಕಳೇರ ಬಲ್ಯಮನೆ ಸಮೀಪದ ಊರಿನ ಅಂಬಲದಲ್ಲಿ ದೇವಕಟ್ಟ್ ಬೀಳುವ ಮೂಲಕ ಹಳ್ಳಿಗಟ್ಟು ಊರಿನಲ್ಲಿ ವಿವಿಧ ಕಟ್ಟುಪಾಡುಗಳಿಗೆ ಚಾಲನೆ ನೀಡಲಾಯಿತು. ಮೇ 18 ರಂದು ದೇವಕಟ್ಟನ್ನು ಸಡಿಲಿಸುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಅಲ್ಲಿಯತನಕ ಹಳ್ಳಿಗಟ್ಟು ಊರಿನಲ್ಲಿ ಹಸಿರು ಮರಗಿಡಗಳನ್ನು ಕುಡಿಯುವಂತಿಲ್ಲ, ಪ್ರಾಣಿ ವಧೆ ಮಾಡುವಂತಿಲ್ಲ, ಮಾಂಸಕ್ಕಾಗಿ ಬಳಸುವ ಪ್ರಾಣಿಗಳು ಮಾತ್ರವಲ್ಲ, ಯಾವುದೇ ರೀತಿಯ ಹಿಂಸೆ ಮಾಡುವಂತಿಲ್ಲ, ಹಸಿ ಮೊಟ್ಟೆಯನ್ನು ಒಡೆಯುವಂತಿಲ್ಲ, ಪ್ರಾಣಿ ಬೇಟೆ ನಿಷೇಧ, ಗುಂಡಿನ ಶಬ್ದ ಹಾಗೂ ಊರಿನೊಳಗೆ ವಾಲಗದ ಶದ್ದು ನಿಷೇಧ, ರೊಟ್ಟಿ-ದೋಸೆ ಮಾಡುವಂತಿಲ್ಲ, ಸಾಂಬಾರು ಮಾಡುವಾಗ ಅದಕ್ಕೆ ಒಗ್ಗರಣೆ ಹಾಕಬಾರದು ಹೀಗೆ ನಾನಾರೀತಿಯ ಕಟ್ಟುಪಾಡುಗಳನ್ನು ಊರಿನೊಳಗೆ ಪಾಲಿಸಬೇಕು ಎಂಬ ಕಟ್ಟುಪಾಡುಗಳನ್ನು ವಿಧಿಸಲಾಯಿತು. ಈ ಬಗ್ಗೆ ತಿಳಿಯದೆ ತಪ್ಪು ನಡೆದು ಹೋದರೆ ಅದಕ್ಕೆ ಪರಿಹಾರವಾಗಿ ಹಬ್ಬದ ದಿವಸ ತಪ್ಪೊಪ್ಪಿಕೊಂಡು ತಪ್ಪು ಹಣ ಹಾಕಬೇಕು, ತಿಳಿದು ತಿಳಿದು ತಪ್ಪು…

Read More

ಮಡಿಕೇರಿ ಮೇ 11 NEWS DESK : ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿಯ ಕುಂಬಾರಗಡಿಗೆಯಲ್ಲಿ ನಡೆದ ಅಪ್ರಾಪ್ತೆಯ ಹತ್ಯೆ ಪ್ರಕರಣದ ಆರೋಪಿಯನ್ನು ಇಂದು ಬೆಳಿಗ್ಗೆ ಬಂಧಿಸಲಾಗಿದೆ. ಬಾಲಕಿಯೊಂದಿಗೆ ವಿವಾಹ ಸಾಧ್ಯವಾಗದ ಹಿನ್ನೆಲೆ ಹತಾಶೆಯಿಂದ ಆರೋಪಿ ಪ್ರಕಾಶ್ ದುಷ್ಕö್ಯತ್ಯ ಎಸಗಿದ್ದಾನೆ ಎಂದು ಜಿಲ್ಲಾ ಪೊಲಿಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಎಸ್‌ಪಿ, ಬಂಧಿತ ಆರೋಪಿ ಪ್ರಕಾಶ್ (ಓಂಕಾರಪ್ಪ)ನನ್ನು ವಿಚಾರಣೆಗೆ ಒಳಪಡಿಸಿ, ಹತ್ಯೆಗೊಳಗಾದ ಮೀನಾಳ ರುಂಡವನ್ನು ಕುಂಬಾರಗಡಿಗೆಯ ಆಕೆಯ ಮನೆಯಿಂದ ಸುಮಾರು 50 ರಿಂದ 100 ಮೀಟರ್ ದೂರದ ಮರಕಾಡುಗಳ ನಡುವೆ ಪತ್ತೆ ಮಾಡಲಾಗಿದೆ. ಆರೋಪಿಯಿಂದ ಕೃತ್ಯಕ್ಕೆ ಬಳಸಲಾದ ಕತ್ತಿ ಮತ್ತು ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. 10ನೇ ತರಗತಿ ಪರೀಕ್ಷಾ ಫಲಿತಾಂಶದ ದಿನವಾದ ಮೇ 9 ರಂದೇ ಕುಂಬಾರಗಡಿಗೆಯ ಸುಬ್ರಹ್ಮಣ್ಯ ಹಾಗೂ ಜಾನಕಿ ದಂಪತಿಯ ಕಿರಿಯ ಪುತ್ರಿ ಮೀನಾ ಹಾಗೂ ಪ್ರಕಾಶ್ ನ ವಿವಾಹ ನಿಶ್ಚಿತಾರ್ಥವಿತ್ತು. ಮಗಳಿಗೆ ಇನ್ನೂ 16 ವರ್ಷವಾಗಿದ್ದು,…

Read More

ಮಡಿಕೇರಿ ಮೇ 11 NEWS DESK : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ “ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್” ಪಂದ್ಯಾವಳಿಯ ಶನಿವಾರದ ಮೊದಲ ಪಂದ್ಯದಲ್ಲಿ ಕೂರ್ಗ್ ಯುನೈಟೆಡ್ ತಂಡ ಕೂರ್ಗ್ ಬ್ಲಾಸ್ಟರ್ಸ್ ವಿರುದ್ಧ 89 ರನ್‌ಗಳ ಗೆಲುವು ದಾಖಲಿಸಿತು. ಆ ಮೂಲಕ ಕೂರ್ಗ್ ಯುನೈಟೆಡ್ ಫೈನಲ್ ಪ್ರವೇಶಿಸಿತು. ಟಾಸ್ ಗೆದ್ದ ಕೂರ್ಗ್ ಬ್ಲಾಸ್ಟರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕೂರ್ಗ್ ಯುನೈಟೆಡ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 179 ರನ್ ಗಳನ್ನು ಸೇರಿಸಿತು. ಇದನ್ನು ಬೆನ್ನಟ್ಟಿದ ಕೂರ್ಗ್ ಬ್ಲಾಸ್ಟರ್ಸ್ ತಂಡ 12.3 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡು 90 ರನ್ ಗಳನ್ನಷ್ಟೇ ಗಳಿಸಿ ಸೋಲು ಒಪ್ಪಿಕೊಂಡಿತು. ಕೂರ್ಗ್ ಯುನೈಟೆಡ್ ತಂಡದ ಅಯ್ಯಪ್ಪ ಸಿ.ಆರ್ 52 ಬಾಲ್ ಗಳಲ್ಲಿ ಭರ್ಜರಿ 93 ರನ್ ಗಳನ್ನು ದಾಖಲಿಸಿ, 12 ಬಾಲ್ ಗಳಲ್ಲಿ 4 ವಿಕೆಟ್ ಗಳನ್ನು…

Read More

ಮಡಿಕೇರಿ ಮೇ 11 NEWS DESK : ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿಯಲ್ಲಿ ನಡೆದ ವಿದ್ಯಾರ್ಥಿನಿ ಮೀನಾಳ ಹತ್ಯೆ ಖಂಡನೀಯ ಮತ್ತು ಇದೊಂದು ಹೇಯ ಕೃತ್ಯವೆಂದು ಹಿಂದೂ ಜಾಗರಣಾ ವೇದಿಕೆಯ ಕೊಡಗು ಜಿಲ್ಲಾ ಸಂಯೋಜಕ್ ಕುಕ್ಕೇರ ಅಜಿತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಭಾರತೀಯ ಕಾನೂನಿನಡಿ ಮದುವೆ ಮಾಡಿಕೊಳ್ಳಲು ಪುರುಷರಿಗೆ ಕನಿಷ್ಠ 21 ವರ್ಷ ಹಾಗೂ ಯುವತಿಯರಿಗೆ ಕನಿಷ್ಠ 18ವರ್ಷ ಪೂರ್ಣಗೊಂಡಿರಬೇಕು. ಆದರೆ ಎರಡು ವರ್ಷ ಕಾಯುವ ತಾಳ್ಮೆಯಿಲ್ಲದ 32 ವರ್ಷದ ಆರೋಪಿ 16 ವರ್ಷದ ಬಾಲಕಿಯ ರುಂಡ ಕತ್ತರಿಸಿ ಕೊಲೆ ಮಾಡಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ದೇಶಕ್ಕೆ ಅಪಾರ ಕೊಡುಗೆ ನೀಡಿರುವ ಖ್ಯಾತಿಯ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಈ ರೀತಿಯ ಘಟನೆ ನಡೆದಿರುವುದು ಸಜ್ಜನ ನಾಗರೀಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ದುಷ್ಕೃತ್ಯ ಎಸಗಿರುವ ಆರೋಪಿಗೆ ಕಾನೂನಿನಡಿ ಶಿಕ್ಷೆ ವಿಧಿಸಬೇಕು ಮತ್ತು ಪೊಲೀಸ್ ಇಲಾಖೆ ನಾಗರೀಕ ಸಮಾಜಕ್ಕೆ ಅಭಯ ನೀಡಬೇಕೆಂದು ಅಜಿತ್ ಒತ್ತಾಯಿಸಿದ್ದಾರೆ.

Read More

ಮಡಿಕೇರಿ ಮೇ 11 NEWS DESK : ಅಧಿಕ ತಾಪಮಾನದಿಂದ ಕಂಗಾಲಾಗಿದ್ದ ಕೊಡಗು ಜಿಲ್ಲೆಯ ವಿವಿಧೆಡೆ ಗಾಳಿ ಸಹಿತ ಧಾರಾಕಾರ ಮಳೆಯಾಗಿಯಾಗಿದ್ದು, ಮಳೆಯ ನಿರೀಕ್ಷೆಯಲ್ಲಿದ್ದ ಜನರು ಹಾಗೂ ಕೃಷಿಕ ವರ್ಗ ನಿಟ್ಟುಸಿರು ಬಿಡುವಂತಾಗಿದೆ. ಬರಗಾಲದಿಂದ ತತ್ತರಿಸಿ ಹೋಗಿದ್ದ ರೈತ ಸಮುದಾಯ ಹಾಗೂ ಜಾನುವಾರುಗಳಿಗೆ ಮಳೆರಾಯನ ಆಗಮನ ಸಂತಸ ಮೂಡಿಸಿದೆ. ಕೂಡಿಗೆಯ ವ್ಯಾಪ್ತಿಯಲ್ಲಿ ಮುಂಜಾನೆ ಕೆಲಹೊತ್ತು ಬಿಸಿಲಿನ ವಾತಾವರಣ ಇತ್ತಾದರೂ ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ಕಂಡುಬಂದಿತು. ಸಂಜೆ ಆರು ಗಂಟೆಯ ನಂತರ ಬಿರುಗಾಳಿ ಸಹಿತ ಆರಂಭವಾದ ಮಳೆಗೆ ಕೂಡಿಗೆಯಲ್ಲಿ ನಡೆಯುವ ಸಂತೆ ಮಾರುಕಟ್ಟೆಯ ಬೀದಿ ಬದಿಯ ವ್ಯಾಪಾರಸ್ಥರು ಹಾಗೂ ವಾಹನ ಸವಾರರು ಕೆಲಕಾಲ ಪರದಾಡುವಂತಾಯಿತು. ನಿರಂತರವಾದ ಮಳೆಯಿಂದಾಗಿ ತಗ್ಗು ಪ್ರದೇಶದ ನಿವಾಸಿಗಳಲ್ಲಿ ಮನೆಒಳಗೆ ನೀರು ನುಗ್ಗುವ ಆತಂಕ ಎದುರಾಗಿತ್ತು. ವರದಿ : ಕೆ.ಆರ್.ಗಣೇಶ್-ಕೂಡಿಗೆ 

Read More

ಮಡಿಕೇರಿ ಮೇ 11 NEWS DESK : ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಹವ್ಯಾಸಿ ಛಾಯಾಗ್ರಾಹಕರಿಗೆ “ಪ್ರಜಾಪ್ರಭುತ್ವದ ಮಹದಾದ ಹಬ್ಬವಾದ ಮತದಾನ” ಎಂಬ ವಿಷಯದ ಕುರಿತು ಡೆಮಾಕ್ರಸಿ ಇನ್ ಆಕ್ಷನ್ ಛಾಯಾಗ್ರಹಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

Read More

ಮಡಿಕೇರಿ ಮೇ 11 NEWS DESK : ಅಂಗಡಿಯೊಂದಕ್ಕೆ ನುಗ್ಗಿದ ಚೋರರು ನಗದು ದೋಚಿರುವ ಪ್ರಕರಣ ನಗರದ ಶಾಂತಿನಿಕೇತನ ಬಡಾವಣೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಸರಕಾರಿ ಬಸ್ ಡಿಪೋ ಸಮೀಪದ ಬಡಾವಣೆಯಲ್ಲಿರುವ ಲೋಬೋ ಎಂಬುವವರ ಅಂಗಡಿಯ ಮುಂಬಾಗಿಲಿನ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಸುಮಾರು 1.25 ಲಕ್ಷ ರೂ. ನಗದು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಕ್ಕಳ ಶಾಲಾ ಶುಲ್ಕ ಪಾವತಿಸಲು ಹಣವನ್ನು ಸಂಗ್ರಹಿಸಿಡಲಾಗಿತ್ತು ಎಂದು ಹೇಳಲಾಗಿದೆ. ಶನಿವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಅಂಗಡಿಯಲ್ಲಿದ್ದ ಪಡಿತರ ಸಾಮಾಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಮನೆಗಳಿರುವ ಬಡಾವಣೆಯಲ್ಲೇ ಕಳ್ಳತನ ನಡೆದಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Read More

ಮಡಿಕೇರಿ ಮೇ 11 NEWS DESK : ಹುದಿಕೇರಿ ಟೀ ಎಸ್ಟೇಟ್ ಮತ್ತು ಕೆ ಕೆ ಆರ್ ಟೀ ಎಸ್ಟೇಟ್ ನಲ್ಲಿರುವ ಮಾರಿಯಮ್ಮ ದೇವಾಲಯಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

Read More

ಮಡಿಕೇರಿ ಮೇ 11 NEWS DESK : ನಗರದ ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಶ್ರೀ ಮಾರಿಯಮ್ಮ ಬೇವಿನ ಸೊಪ್ಪಿನ ಕರಗೋತ್ಸವ ಮೇ 12 ರಂದು ಆರಂಭವಾಗಲಿದೆ. ಅನಾದಿ ಕಾಲದಿಂದಲೂ ಶಕ್ತಿ ದೇವಿಯ ಬೇವಿನ ಸೊಪ್ಪಿನ ಕರಗೋತ್ಸವ ನಡೆಸಿಕೊಂಡು ಬರುತ್ತಿದ್ದು, ಭೀಕರ ಸಾಂಕ್ರಾಮಿಕ ರೋಗಗಳು ನಾಡಿಗೆ ಬರಬಾರದೆಂಬ ನಂಬಿಕೆಯಿಂದ ನಾಡಿನ ಸುಭಿಕ್ಷೆಗಾಗಿ ಈ ಕರಗೋತ್ಸವವನ್ನು ಆಚರಿಸಲಾಗುತ್ತಿದೆ. ಮೇ 12 ರಂದು ಮಧ್ಯಾಹ್ನ 2 ಗಂಟೆಗೆ ದೇವಿಯ ಕರಗಗಳ ಶೃಂಗಾರಕ್ಕೆ ದೇವಾಲಯದಿಂದ ಪಂಪಿನ ಕೆರೆಗೆ ತೆರಳಲ್ಲಿದ್ದು, ಸಂಜೆ 6.30ಕ್ಕೆ ಪಂಪಿನ ಕೆರೆಯಲ್ಲಿ ಕರಗಗಳಿಗೆ ವಿಶೇಷ ಪೂಜೆಯ ನಂತರ ವಾದ್ಯಗೋಷ್ಠಿಯೊಂದಿಗೆ ದೇವಿಯ ಕರಗಗಳ ಮೆರವಣಿಗೆ ಆರಂಭವಾಗಲಿದೆ. ಮೇ 13 ರಂದು ದೇವಾಲಯದಲ್ಲಿ ಕರಗಗಳಿಗೆ ವಿಶೇಷ ಪೂಜೆ, ಮೇ 14 ರಂದು ರಾತ್ರಿ 10 ಗಂಟೆಗೆ ಶ್ರೀ ಕಂಚಿ ಕಾಮಾಕ್ಷಿಯಮ್ಮ, ಶ್ರೀ ಮಾರಿಯಮ್ಮ ಸನ್ನಿಧಿಯಲ್ಲಿ ಸಾಂಪ್ರದಾಯಿಕ ದೇವಿಯ ಪೂಜೆಗಳು ಜರುಗಲಿದ್ದು, ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಮೇ 15 ರಂದು…

Read More

ಮಡಿಕೇರಿ ಮೇ 11 NEWS DESK : ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಸಭಾಂಗಣದಲ್ಲಿ ಮೇ 18ರಂದು ರೋಟರಿ ಜಿಲ್ಲೆಯ ವತಿಯಿಂದ ಒಂದು ದಿನದ ಜಿ-20 ಯೋಗ ಶೃಂಗಸಭೆ ನಡೆಯಲಿದೆ ಎಂದು ರೋಟರಿ ಜಿಲ್ಲಾ ಯೋಗ ಹಾಗೂ ಧ್ಯಾನ ಸಮಿತಿ ಸದಸ್ಯ ಬಿ.ಜಿ.ಅನಂತಶಯನ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗ ಪ್ರಚಾರವು ವಿಶ್ವದ ಎಲ್ಲೆಡೆ ಹಾಗೂ ಎಲ್ಲ ವರ್ಗದಲ್ಲೂ ನಡೆಯುವ ಅವಶ್ಯಕತೆ ಇರುವದರಿಂದ ಯೋಗ ಶಾಲಾ ಶಿಕ್ಷಕರು ಯೋಗಪಟುಗಳು ಹಾಗೂ ಆಸಕ್ತರೂ ಭಾಗವಹಿಸುವಂತೆ ಕೋರಿದರು. ಶೃಂಗ ಸಭೆಯಲ್ಲಿ ಪದ್ಮಶ್ರೀ ಡಾ.ನಾಗೇಂದ್ರ, ದೇಶಿ ಕೇಂದ್ರ ಮಹಾಸ್ವಾಮಿಗಳು, ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಅರಳುಮಲ್ಲಿಗೆ ಪಾರ್ಥಸಾರತಿ, ಆಯುಷ್ ಆಯುಕ್ತರು ಜಿ-20 ದೇಶಗಳ ಶೆರ್ಪಾ- (ಬ್ರೆಜಿಲ್) ಹಾಗೂ ಇತರರು ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದು, ಸಭಿಕರೊಡನೆ ಮಾತುಕತೆ ನಡೆಸಲಿದ್ದಾರೆ ಎಂದರು. ಶೃಂಗ ಸಭೆಯ ಉದ್ದೇಶ ವಿಶ್ವದಲ್ಲಿ ಯೋಗವನ್ನು ಜನಪ್ರಿಯಗೊಳಿಸುವುದು, ಯೋಗ ಕೇಂದ್ರಗಳನ್ನು ಆರಂಭಿಸುವುದು, ಆರೋಗ್ಯ ಪ್ರವಾಸೋದ್ಯಮ ಉತ್ತೇಜಿಸುವುದು ಆಗಿದೆ. ರೋಟರಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ, ಪ್ರತಿ ಜಿಲ್ಲೆಗಳಲ್ಲೂ ಯೋಗ…

Read More