ಲೇಖಕ: admin

ಮಡಿಕೇರಿ ಏ.16 NEWS DESK : ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಿರುವ ಕೊಡಗು ಜಿಲ್ಲೆಯ ಹಜ್ ಯಾತ್ರಿಕರಿಗೆ ಆಝಾದ್ ನಗರ ಯುನಿಟ್  ಕೆ.ಎಂ.ಜೆ, ಎಸ್‌.ವೈ.ಎಸ್ ಹಾಗೂ ಎಸ್‍ಎಸ್‍ಎಫ್  ವತಿಯಿಂದ ಏ.18 ರಂದು ಹಜ್ ತರಬೇತಿ ಹಾಗೂ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಆಝಾದ್ ನಗರದ ಶಾದಿಮಹಲ್’ ನಲ್ಲಿ ಹಜ್ ತರಬೇತಿ ಹಾಗೂ ಬೀಳ್ಕೊಡುಗೆ ಸಮಾರಂಭ ನಡೆಯಲಿದ್ದು, ದುಆ ನೇತೃತ್ವ ವನ್ನು ಕೂರ್ಗ್ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಅಸ್ಸಯ್ಯಿದ್ ಶಿಹಾಬುದ್ದೀನ್ ಹೈದ್ರೂಸಿ ಎಮ್ಮೆಮಾಡು  ವಹಿಸಲಿದ್ದಾರೆ. ವಯನಾಡು ಇಸ್ಮಾಈಲ್ ಸಖಾಫಿ ರಿಪ್ಪನ್ ತರಬೇತಿ ನೀಡಲಿದ್ದು, ಯಾತ್ರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಆಝಾದ್ ನಗರ ಯುನಿಟ್  ಕೆ.ಎಂ.ಜೆ, ಎಸ್‌.ವೈ.ಎಸ್ ಹಾಗೂ ಎಸ್‍ಎಸ್‍ಎಫ್ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ 8277385660, 9945102631, 9686537473 ಸಂಪರ್ಕಿಸಬಹುದಾಗಿದೆ.

Read More

ಮಡಿಕೇರಿ ಏ.16 NEWS DESK : ಪ್ರಾಮಾಣಿಕವಾಗಿ ಫಲಾನುಭವಿಗಳನ್ನು ತಲುಪುವ ಮತ್ತು ಯಾರಿಗೂ ಹೊರೆಯಿಲ್ಲದ ಏಕೈಕ ಗ್ಯಾರಂಟಿಯೆ0ದರೆ ಅದು “ಮೋದಿ ಗ್ಯಾರಂಟಿ” ಎಂದು ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ ತಿಳಿಸಿದ್ದಾರೆ. ನಗರದ ವಿವಿಧ ಬಡಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರ ಪರ ಎರಡನೇ ಹಂತದ ಮನೆ ಮನೆ ಪ್ರಚಾರ ನಡೆಸಿ ಅವರು ಮಾತನಾಡಿದರು. ಕಳೆದ ಹತ್ತು ವರ್ಷಗಳ ಬಿಜೆಪಿ ನೇತೃತ್ವದ ಆಡಳಿತದಲ್ಲಿ ದೇಶ ಪ್ರಗತಿ ಪಥದತ್ತ ಸಾಗಿದ್ದು, ಈ ಬಾರಿ ಕೂಡ “ಮೋದಿ ಗ್ಯಾರಂಟಿ”ಗೆ ಬಹುಮತ ಲಭಿಸಲಿದೆ. ಇಡೀ ದೇಶದ ಜನ ಒಪ್ಪುವಂತಹ ಗ್ಯಾರಂಟಿಗಳನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಅವರು ನೀಡಿದ್ದಾರೆ ಎಂದರು. ಮೋದಿ ಗ್ಯಾರಂಟಿಗೆ ಮತ ನೀಡಿದರೆ ವಿಕಸಿತ ಭಾರತದ ಹಿತ ಕಾಯಬಹುದಾಗಿದೆ. ಸರ್ವವ್ಯಾಪಿ, ಸರ್ವಸ್ಪರ್ಶಿ ಮತ್ತು ದೂರದೃಷ್ಟಿಯ ಸಂಕಲ್ಪ ಪತ್ರವನ್ನು ಮನೆ ಮನೆಗೆ ತಲುಪಿಸುತ್ತಿದ್ದೇವೆ. ಎಲ್ಲಾ ಕಡೆ ಅಭ್ಯರ್ಥಿ ಯದುವೀರ್ ಅವರ ಪರ ಜನ ಒಲವು ತೋರುತ್ತಿದ್ದಾರೆ. ಮೈಸೂರು- ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಜಯ…

Read More

ಮಡಿಕೇರಿ ಏ.16 NEWS DESK : ಕವಿಯತ್ರಿ ಮೂರ್ನಾಡುವಿನ ಕೆ.ಜಿ.ರಮ್ಯ ಅವರು ರಚಿಸಿದ “ದಾಹಗಳ ಮೈ ಸವರುತ್ತಾ” ಕವನ ಸಂಕಲನಕ್ಕೆ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಲಭ್ಯವಾಗಿದೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿಗಳಲ್ಲಿ ಅತ್ಯಂತ ಪ್ರತಿಷ್ಟಿತವಾದ ದತ್ತಿ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಯನ್ನು ಗೌರಮ್ಮ ಅವರ ಪುತ್ರ ಬಿ.ಜಿ.ವಸಂತ ಅವರು ಕೊಡಗಿನ ಮಹಿಳಾ ಲೇಖಕಿಯರು ಪ್ರಕಟ ಪಡಿಸಿದ ಉತ್ತಮ ‌ಕೃತಿಗೆ ಪ್ರಶಸ್ತಿ ನೀಡಿ ಗೌರವಿಸುವ ಸಲುವಾಗಿ ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ 19 ಲೇಖಕಿಯರಿಗೆ ಈ ಪ್ರಶಸ್ತಿ ನೀಡಲಾಗಿದೆ. 2023-24 ನೇ ಸಾಲಿನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದ್ದು, 9 ಲೇಖಕಿಯರು ತಮ್ಮ ಕೃತಿಗಳನ್ನು ಪ್ರಶಸ್ತಿಗಾಗಿ ಪ್ರಸ್ತುತ ಪಡಿಸಿದ್ದರು. ಜಿಲ್ಲೆಯ ಹಿರಿಯ ಮೂರು ಸಾಹಿತಿಗಳನ್ನು ತೀರ್ಪುಗಾರರನ್ನಾಗಿಸಿ ಅವರು ಎಲ್ಲ ಪುಸ್ತಕಗಳನ್ನು ಪರಮಾರ್ಶಿಸಿ‌  ಕೆ.ಜಿ.ರಮ್ಯ  ಅವರು ರಚಿಸಿದ ಕವನ ಸಂಕಲನಕ್ಕೆ ಪ್ರಶಸ್ತಿ ಲಭ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಧ್ಯಾಪಕಿಯಾಗಿರುವ  ಕೆ.ಜಿ.ರಮ್ಯಾ ಜಿಲ್ಲೆಯ…

Read More

ಸುಂಟಿಕೊಪ್ಪ ಏ.16 NEWS DESK : ನಾರ್ಗಾಣೆ ಗ್ರಾಮದ ಅಣ್ಣಪ್ಪಸ್ವಾಮಿ ದೇವಾಲಯದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರಲಾಗುತ್ತಿರುವ ಧರ್ಮ ದೈವದ ನೇಮೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಎರಡು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಧರ್ಮ ದೈವಗಳ ನೇಮೋತ್ಸವ ಸಂಪನ್ನಗೊಂಡಿತು. ಭಂಡಾರ ಮೆರವಣಿಗೆ, ಎಣ್ಣೆ ಅರ್ಪಣೆ, ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಿತು. ನಂತರ ಭಕ್ತಾಧಿಗಳಿಗೆ ಪ್ರಸಾದ ವಿತರಿಸಲಾಯಿತು. ರಾತ್ರಿ ಧರ್ಮ ದೈವವಾದ ಅಣ್ಣಪ್ಪ, ಪಂಜುರ್ಲಿ ದೈವದ ನೇಮವು ನೇರವೇರಿತು. ನಂತರ ಗುಳಿಗ ಹಾಗೂ ಚಾಮುಂಡೇಶ್ವರಿ ದೈವದ ಜೋಡಿ ಕೋಲ ನಡೆಯಿತು. ನಂತರ ಧರ್ಮ ದೈವದ ಹರಕೆ ಅರ್ಪಿಸಲಾಯಿತು. ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರೆವೇರಿತು. ನೆರೆದಿದ್ದ ಭಕ್ತಾಧಿಗಳಿಗೆ ಇದೇ ಸಂದರ್ಭ ಅನ್ನಸಂತರ್ಪಣೆ ನೆರವರೆತು. ಸುತ್ತ ಮುತ್ತಲ್ಲ ಗ್ರಾಮ ಹಾಗೂ ಊರುಗಳಾದ ವಿರಾಜಪೇಟೆ, ಸಿದ್ಧಾಪುರ ಕುಶಾಲನಗರ ಹಾಗೂ ನೆರೆಯ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು ದೇವರಿಗೆ ವಿಶೇಷ ಪ್ರಾರ್ಥನೆ ನೆರವೇರಿಸಿದರು. ನಾರ್ಗಾಣೆ ಗ್ರಾಮದ ಶ್ರೀ ದೇವಿಯ…

Read More

ಸುಂಟಿಕೊಪ್ಪ,ಏ.16 NEWS DESK : ಸುಂಟಿಕೊಪ್ಪ ಪನ್ಯ ಗ್ರಾಮದಲ್ಲಿ ನೆಲೆನಿಂತಿರುವ ಗ್ರಾಮ ದೇವತೆಯಾದ ಶ್ರೀ ಮಳೂರು ಬೆಳ್ಳಾರಿಕ್ಕಮ್ಮ ದೇವರ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ವಾರ್ಷಿಕೋತ್ಸವದ ಅಂಗವಾಗಿ ಎತ್ತು ಪೋರಾಟ್, ಚೌರಿಕುಣಿತ, ಶ್ರೀ ದೇವರ ಉತ್ಸವ ಮೂರ್ತಿಯ ನೃತ್ಯ ಬಲಿ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಸಂಪ್ನಗೊಂಡಿತು. ಕಳೆದ 7 ದಿನಗಳ ಕಾಲ ಸುಂಟಿಕೊಪ್ಪ, ಉಲುಗುಲಿ, ಆಂಜನಗೇರಿ ಬೇಟ್ಟಗೇರಿ, ಹರದೂರು ಗ್ರಾಮದ ಗ್ರಾಮಸ್ಥರು ವಾಡಿಕೆಯಂತೆ ವೃತದಲ್ಲಿದ್ದು, ಸಾಂಪ್ರದಾಯಿಕ ಪೂಜೆ ವಿಧಿವಿಧಾನಗಳನ್ನು ನೆರವೇರಿಸಿದರು. ದೇವಾಲಯದ ಭಂಡಾರವನ್ನು ಗ್ರಾಮದ ಮಂದನ ರಮೇಶ್ ಅವರ ಮನೆಯಿಂದ ಎತ್ತಿನ ಮೇಲೆ ಇರಿಸುವ ಮೂಲಕ ವಾದ್ಯಗೋಷ್ಠಿಯೊಂದಿಗೆ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತಂದು ದೇವಾಲಯದಲ್ಲಿ ಭಂಡಾರವನ್ನು ಸಮರ್ಪಿಸಲಾಯಿತು. ನಂತರ ಗ್ರಾಮದ ಜನತೆಯಿಂದ ಈಡು ಗಾಯಿ ಎತ್ತು ಪೋರಾಟ್, ಚೌರಿಕುಣಿತದಲ್ಲಿ ಪುರುಷರು ಯುವಕರು ಪಾಲ್ಗೊಂಡು ಬೆಳ್ಳಾರಿಕ್ಕಮ್ಮ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ಪ್ರದಕ್ಷಿಣೆ ನಡೆಸಿ ದೇವಿಗೆ ಪೂಜೆ ಮಹಾಮಂಗಳಾರತಿ ಪ್ರಸಾದ ವಿತರಣೆಯನ್ನು ನಡೆಸಲಾಯಿತು. ದಿನದ ಪೂಜಾ ಕೈಂಕರ್ಯವನ್ನು ಅರ್ಚಕರಾದ ಗಣೇಶ್ ಶರ್ಮ, ಮಂಜುನಾಥ ಉಡುಪ, ಮಂಜುನಾಥ…

Read More

ಸೋಮವಾರಪೇಟೆ ಏ.16 NEWS DESK : ಚೌಡ್ಲು ಪಂಚಾಯಿತಿ ವ್ಯಾಪ್ತಿಯ ಆಲೆಕಟ್ಟೆ-ಕಲ್ಲಾರೆ ಎಂಬಲ್ಲಿ ಕಾಫಿ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದು ನಷ್ಟ ಸಂಭವಿಸಿದೆ. ಗ್ರಾಮದ ಮಲ್ಲಿಕಾರ್ಜುನ ಹಾಗೂ ಚಂದ್ರು ಎಂಬುವವರ ಕಾಫಿ ತೋಟಕ್ಕೆ ಬೆಂಕಿ ತಗುಲಿದ್ದು. ಒಣಗಿದ ಮರಗಳಿಗೆ ಬೆಂಕಿ ಹತ್ತಿಕೊಂಡಿದೆ. ಕಾಫಿ ತೋಟದ ಸಮೀಪ ಇದ್ದ ಮನೆಗಳಿಗೂ ಬೆಂಕಿಯ ಕಿಡಿಗಳು ತಾಗಿವೆ. ತಕ್ಷಣ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ, ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಕಾರ್ಯಚರಣೆಯಲ್ಲಿ ಸಿಬ್ಬಂದಿಗಳಾದ ಪಿ.ಎಸ್.ಸುರೇಶ್, ಪಿ.ಈಶ್ವರ್, ವಿನಯ್, ನಂದೀಶ್, ಪ್ರಶಾಂತ್ ಭಾಗವಹಿಸಿದ್ದರು.

Read More

ಸೋಮವಾರಪೇಟೆ ಏ.16 NEWS DESK : ಸೋಮವಾರಪೇಟೆ ಸಮೀಪದ ಕೋವರ್ ಕೊಲ್ಲಿ ಟಾಟಾ ಕಾಫಿ ಸಂಸ್ಥೆಯ ಶ್ರೀ ವನದುರ್ಗಾದೇವಿ ದೇವಾಲಯದ 50ನೇ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಕಾರ್ಯಕ್ರಮದ ಪ್ರಯುಕ್ತ ಬೆಳಿಗ್ಗೆ ಶ್ರೀ ಗಣಪತಿ ಹೋಮ, ವನದುರ್ಗಾದೇವಿಗೆ ಪಂಚಾಮೃತ ಅಭಿಷೇಕ, ಚಂಡಿಕಾ ಹೋಮ ನೆರವೇರಿತು. ಸಂಜೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಪೂಜಾ ಕಾರ್ಯವನ್ನು ದೇವಾಲಯದ ಅರ್ಚಕ ಬಾಲೂ ಭಟ್, ರಾಘವೇಂದ್ರ ಭಟ್ ಮತ್ತಿತರರು ಇದ್ದರು.

Read More

ಸೋಮವಾರಪೇಟೆ ಏ.16 NEWS DESK : ಸೋಮವಾರಪೇಟೆ ಸಮೀಪದ ಕೋವರ್‍ಕೊಲ್ಲಿ ಟಾಟಾ ಕಾಫಿ ಸಂಸ್ಥೆಯ ಶ್ರೀ ವನದುರ್ಗಾದೇವಿ ದೇವಾಲಯದ 50ನೇ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಕಾರ್ಯಕ್ರಮದ ಪ್ರಯುಕ್ತ ಬೆಳಿಗ್ಗೆ ಶ್ರೀ ಗಣಪತಿ ಹೋಮ, ವನದುರ್ಗಾದೇವಿಗೆ ಪಂಚಾಮೃತ ಅಭಿಷೇಕ, ಚಂಡಿಕಾ ಹೋಮ ನೆರವೇರಿತು. ಸಂಜೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಪೂಜಾ ಕಾರ್ಯವನ್ನು ದೇವಾಲಯದ ಅರ್ಚಕ ಬಾಲೂ ಭಟ್, ರಾಘವೇಂದ್ರ ಭಟ್ ಮತ್ತಿತರರು ಇದ್ದರು.

Read More

ಸೋಮವಾರಪೇಟೆ ಏ.16 NEWS DESK : ಶ್ರೀ ರಾಮನವಮಿ ಉತ್ಸವ ಸಮಿತಿ ಮತ್ತು ಹಿಂದೂ ಜಾಗರಣಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಏ.17ರಂದು ಶ್ರೀ ರಾಮನವಮಿ ಕಾರ್ಯಕ್ರಮ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಸುಭಾಷ್ ತಿಮ್ಮಯ್ಯ ತಿಳಿಸಿದ್ದಾರೆ. ಖಾಸಗಿ ಬಸ್ ನಿಲ್ದಾಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಶ್ರೀ ರಾಮನ ಉತ್ಸವ ಮೂರ್ತಿಯನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿಟ್ಟು ಜಾನಪದ ಕಲಾತಂಡಗಳು ಹಾಗೂ ಸಿಡಿಮದ್ದಿನ ಪ್ರದರ್ಶನದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಶೋಭಾ ಯಾತ್ರೆ ನಡೆಸಲಾಗುವುದೆಂದು ಸುಭಾಷ್ ತಿಮ್ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮಡಿಕೇರಿ ಏ.16 NEWS DESK : ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಕೊಡಗಿನ ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ ಅವರು ನೇಮಕಗೊಂಡಿದ್ದು, ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ತಿತಿಮತಿ ನೊಕ್ಯ ಗ್ರಾಮದವರಾದ ಉಚ್ಛ ನ್ಯಾಯಾಲಯದ ವಕೀಲರಾಗಿದ್ದ ಮೊಣ್ಣಪ್ಪ ಹಾಗೂ ಶೈಲಾ ದಂಪತಿಯ ಪುತ್ರರಾಗಿರುವ ಪೂಣಚ್ಚ ಅವರು 2022ರ ಜೂನ್ 13 ರಂದು ಎರಡು ವರ್ಷಗಳ ಅವಧಿಗೆ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ವರ್ಷ ಜನವರಿ 20 ರಂದು ಕರ್ನಾಟಕದ ಚೀಫ್ ಜಸ್ಟಿಸ್ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದಲ್ಲಿ ಹೈಕೋರ್ಟ್ ಕೊಲಿಜಿಯಮ್, ಪೂಣಚ್ಚ ಅವರನ್ನು ಶಾಶ್ವತವಾಗಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ಮಾಡುವಂತೆ ಶಿಫಾರಸ್ಸು ಮಾಡಿತ್ತು. ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ಒಪ್ಪಿಗೆ ಮೇರೆಗೆ ಜ.15 ರಂದು ಕೇಂದ್ರ ಸರಕಾರ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಸಿ.ಎಂ ಪೂಣಚ್ಚ ಅವರನ್ನು ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿದೆ.

Read More