ನಾಪೋಕ್ಲು ಮಾ.17 NEWS DESK : ಶ್ರೀ ನಾಡು ಕಡಪಾಲಪ್ಪ ದೇವಾಲಯದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಏ.20 ರಿಂದ 25ರ ವರೆಗೆ ನಡೆಯಲಿದೆ. ಬೇಂಗೂರು ಗ್ರಾಮದ ಶ್ರೀ ದೇವರ ನೂತನ ಶಿಲಾಮಯ ಗರ್ಭಗುಡಿಯಲ್ಲಿ ಸಪರಿವಾರ ಸಹಿತ ಕಡಪಾಲಪ್ಪ ದೇವರ ಪುನರ್ ಪ್ರತಿಷ್ಠಾ ಬ್ರಹ್ಮ ಕಳಶೋತ್ಸವವನ್ನು ಉಡುಪಿ ಪೇಜಾವರ ಅದೋಕ್ಷಜ ಮಠದ ವಿಶ್ವ ಪ್ರಸನ್ನ ತೀರ್ಥರ ಅಮೃತಹಸ್ತದಲ್ಲಿ ನೆರವೇರಲಿದೆ. ಅರ್ಚಕ ರಾಧಾಕೃಷ್ಣ ಭಟ್ ಉಪಸ್ಥಿತಿಯಲ್ಲಿ ವೈದಿಕ ವಿದ್ವಾಂಸ ಕಳತೂರು ವೇದಮೂರ್ತಿ ಬ್ರಹ್ಮಶ್ರೀ ಉದಯತಂತ್ರಿ ನೇತೃತ್ವದಲ್ಲಿ, ರಂಜಾಳ ಪೌರೋಹಿತ್ಯ ವಾಚಸ್ಪತಿ ವೇದಮೂರ್ತಿ ಗುರುರಾಜ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ . ಬ್ರಹ್ಮ ಕ್ಷೇತ್ರದ ಕಾವೇರಿ ಮಡಿಲಿನಲ್ಲಿರುವ ನಾಡು ಕಡಪಾಲಪ್ಪ ದೇವಾಲಯಕ್ಕೆ ಸುಮಾರು 1700 ವರ್ಷಗಳ ಇತಿಹಾಸವಿದೆ. ನಾಡಿನ ಭಕ್ತರು ಒಂದಾಗಿ ಜ್ಯೋತಿಷಿ ವೆಂಕಟೇಶ ಆಚಾರ್ಯ ಪಡುಬಿದ್ರೆ ಅವರ ಅಷ್ಟಮಂಗಲ ಪ್ರಶ್ನೆ ನಡೆಸಿದ್ದು, ಇದರ ಅಂಗವಾಗಿ ಏ.20 ರಂದು ಬೆಳಿಗ್ಗೆ ದ್ವಾದಶ ನಾಳಿಕೇರ ಗಣಯಾಗ, ನವಗ್ರಹ ಯಾಗ, ರಕ್ಷಾ ಕಲಶ ಪ್ರತಿಷ್ಠೆ ನಡೆಯಲಿದೆ.…
ಲೇಖಕ: admin
ಸಿದ್ದಾಪುರ ಏ.17 NEWS DESK : ಕರಡಿಗೋಡು ಗ್ರಾಮದಲ್ಲಿ ಕಾಡಾನೆಗಳು ಪ್ರತ್ಯಕ್ಷಗೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದ್ದು, ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸುತ್ತಿದೆ. ಹಾಡಗಲಿನಲ್ಲೇ ಕಾಣಿಸಿಕೊಳ್ಳುತ್ತಿರುವ ಕಾಡಾನೆಗಳ ಹಾವಳಿಯಿಂದ ರೈತರು, ಕಾರ್ಮಿಕರು ತೋಟಕ್ಕೆ ತೆರಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದುಬಾರೆ, ಅವರೆಗುಂದ, ಚಿಕ್ಕನಹಳ್ಳಿ ವ್ಯಾಪ್ತಿಯಲ್ಲಿ ಅರಣ್ಯ ಯಾವುದೇ ಅಡೆತಡೆ ಇಲ್ಲದೆ ಬರುವ ಕಾಡಾನೆಗಳು ಕಾಫಿ ತೋಟಗಳಲ್ಲೇ ಬಿಡು ಬಿಡುತ್ತಿದ್ದು, ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆ ಹಾವಳಿಯಿಂದ ಕಾಫಿ, ಮೆಣಸು, ಬಾಳೆ, ತೆಂಗು, ಅಡಿಕೆ, ಗೆಣಸು ಸೇರಿದಂತೆ ಇತರಕೃಷಿ ಫಸಲನ್ನು ಅಪಾರ ಪ್ರಮಾಣದಲ್ಲಿ ನಾಶ ಮಾಡುತ್ತಿವೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಶಾಶ್ವತ ಯೋಜನೆಯನ್ನ ರೂಪಿಸದೆ ನಿರ್ಲಕ್ಷ ತೋರುತ್ತಿರುವ ಹಿನ್ನೆಲೆಯಲ್ಲಿ ಕಾಡಾನೆಗಳು ಕಾಫಿ ತೋಟ ಹಾಗೂ ಗ್ರಾಮಗಳತ್ತ ಮುಖ ಮಾಡುತ್ತಿವೆ ಎಂದು ಸ್ಥಳೀಯರು ಆರೋಪಿಸಿದರು. ಸಿದ್ದಾಪುರ ಕರಡಿಗೋಡು ರಸ್ತೆಯ ಸರಳ ಎಂಬವರಿಗೆ ಸೇರಿದ ಒಂದು ಎಕರೆ ಜಾಗದಲ್ಲಿ ಬಾಳೆ, ತೆಂಗು, ಅಡಿಕೆ, ಗೆಣಸು ಸೇರಿದಂತೆ ಇತರ ಕೃಷಿ ಫಸಲುಗಳನ್ನು…
ನಾಪೋಕ್ಲು ಏ.17NEWS DESK : ಚೆರಿಯ ಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಉತ್ಸವದ ಪಂದ್ಯಗಳಲ್ಲಿ ಬಿದ್ದಂಡ, ಚೋಯಮಾದಂಡ, ಕುಲ್ಲಚಂಡ, ಪಾಡೆಯಂಡ, ಮೇರಿಯಂಡ, ಕರಿನೆರವಂಡ ತಂಡಗಳು ಮುನ್ನಡೆ ಸಾಧಿಸಿದವು. ದಿನದ ಮೊದಲ ಪಂದ್ಯದಲ್ಲಿ ಬಿದ್ದಂಡ ಮೇಕೆರಿರ ವಿರುದ್ಧ 1-0 ಅಂತರದ ಜಯಗಳಿಸಿದರೆ ಚೋಯ ಮಾಡಂಡ ಪಟ್ಟಡ ವಿರುದ್ಧ -1 0 ಅಂತರದ ಜಯ ಗಳಿಸಿತು. ಕುಲ್ಲಚಂಡ ಮತ್ತು ಪುಟ್ಟಿಚಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು ನಂತರ ನಡೆದ ಟೈ ಬ್ರೇಕರ್ ನಲ್ಲಿ ಕುಲ್ಲಚಂಡ 6-5 ರ ಮುನ್ನಡೆಯೊಂದಿಗೆ ಮುಂದಿನ ಸುತ್ತು ಪ್ರವೇಶಿಸಿತು.ಮಲ್ಲಂಗಡ ಮತ್ತು ಪಾಡೆಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಪಾಡೆಯಂಡ 5-1 ರ ಮುನ್ನಡೆ ಸಾಧಿಸಿತು ಮೇರಿಯಂಡ ಕೋಟೆರ ವಿರುದ್ಧ 2-1ಅಂತರದ ಜಯಗಳಿಸಿದರೆ ಕರಿನೆರವಂಡ ಮಲ್ಲಮಾಡ ವಿರುದ್ಧ 3-0 ಅಂತರದ ಜಯಗಳಿಸಿತು. ಬೊಟ್ಟೋಳಂಡ ಚೊಟ್ಟೇರ ವಿರುದ್ಧ 2-1 ಅಂತರದಿಂದ ಗೆಲುವು ಸಾಧಿಸಿತು.ಬೊವ್ವೇರಿಯಂಡ ಚಿಮ್ಮಣಮಾಡ ವಿರುದ್ಧ 3-1ರ ಅಂತರದಿಂದ ನೆರವಂಡ ಕೊಂಗಂಡ ವಿರುದ್ಧ 1-0 ಅಂತರದಿಂದ, ಅಪ್ಪನೆರವಂಡ…
ಮಡಿಕೇರಿ ಏ.16 NEWS DESK : ಕೊಡವ ಹೊಸ ವರ್ಷಾಚರಣೆ ಎಡಮ್ಯಾರ್ ನ ಎರಡನೇ ದಿನವಾದ ಇಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದೇವಟ್ ಪರಂಬುವಿನಲ್ಲಿ ಕೊಡವರ ನರಮೇಧದ ಸ್ಮಾರಕ ಸ್ಥಳದಲ್ಲಿ ಹಿರಿಯರಿಗೆ ಪುಷ್ಪ ನಮನ ಸಲ್ಲಿಸಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಹಿರಿಯರಿಗೆ ಪುಷ್ಪನಮನ ಸಲ್ಲಿಸಿದ ಪ್ರಮುಖರು ಆದಿಮಸಂಜಾತ ಕೊಡವ ಬುಡಕಟ್ಟು ಜನರ ಸಮಗ್ರ ಸಬಲೀಕರಣಕ್ಕಾಗಿ ಪ್ರಾರ್ಥಿಸಿದರು. ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ಅವರು ಕೊಡವರು ಹಾಗೂ ಕೊಡವಲ್ಯಾಂಡ್ ಪರವಾದ ಬೇಡಿಕೆಗಳು ಶೀಘ್ರ ಈಡೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 32 ಬಾರಿ ರಾಜ್ಯವನ್ನು ರಕ್ಷಿಸಿದ ಕೊಡವ ಬುಡಕಟ್ಟು ಸೈನಿಕರ ಮೇಲೆ ಸೋಲಿನ ಸೇಡು ತೀರಿಸಿಕೊಳ್ಳುವುದಕ್ಕಾಗಿ ಟಿಪ್ಪು ಮೋಸದಿಂದ ದಾಳಿ ಮಾಡಿದ ಪರಿಣಾಮ ಸಹಸ್ರ ಸಹಸ್ರ ಕೊಡವರು ಈ ಕೊಡವ ಭೂಮಿಗಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಎಡಮ್ಯಾರ್ ಹೊಸ ವರ್ಷಾಚರಣೆ ಸಂದರ್ಭ ಅಗಲಿದ ಹಿರಿಯರಿಗೆ ಪುಷ್ಪ ನಮನ ಸಲ್ಲಿಸಿ ಗೌರವಿಸುವುದು ಕೊಡವರಾದ ನಮ್ಮ ಕರ್ತವ್ಯವಾಗಿದೆ ಎಂದರು. ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ…
ಮಡಿಕೇರಿ ಏ.16 NEWS DESK : ಮಡಿಕೇರಿ ತಾಲ್ಲೂಕಿನ ಅಯ್ಯಂಗೇರಿ ಗ್ರಾಮದ ಮನೆಯೊಂದರಲ್ಲಿ ನಡೆದಿದ್ದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಯ್ಯಂಗೇರಿ ಗ್ರಾಮದ ಮಿದ್‌ಲಾಜ್ ಕೆ.ಕೆ.(22) ಹಾಗೂ ಫಾತಿಮಾ (26) ಬಂಧಿತ ಆರೋಪಿಗಳು. ಬಂಧಿತರಿಂದ 177 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಹಾಗೂ 2 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾಗಮಂಡಲ ಠಾಣಾ ವ್ಯಾಪ್ತಿಯ ಅಯ್ಯಂಗೇರಿ ನಿವಾಸಿ ಜಲೀನಾ ಕೆ.ಹೆಚ್. ಎಂಬುವವರು ಇದೇ ಏ.12 ರಂದು ಸಂಬಂಧಿಕರ ಮನೆಗೆ ತೆರಳಿ, ಮರುದಿನ ಹಿಂದಿರುಗಿ ಬಂದಾಗ, ಮನೆಯ ಹಿಂಬಾಗಿಲನ್ನು ಒಡೆದು ಬೀರುವಿನಲ್ಲಿದ್ದ 232 ಗ್ರಾಂ ಚಿನ್ನಾಭರಣಗಳು ಕಳುವಾಗಿರುವುದು ಅವರ ಗಮನಕ್ಕೆ ಬಂದಿತ್ತು. ಈ ಬಗ್ಗೆ ಪೊಲಿಸರಿಗೆ ದೂರು ಸಲ್ಲಿಸಿದ್ದರು. ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಮಹೇಶ್ ಕುಮಾರ್, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅರುಣ್ ಎಲ್. ಅವರ ನೇತೃತ್ವದ ವಿಶೇಷ ತಂಡ, ಪ್ರಕರಣದ ಕುರಿತು ಕ್ಷಿಪ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿ ಭಾಗಮಂಡಲ ಠಾಣಾಧಿಕಾರಿ…
ಸುಂಟಿಕೊಪ್ಪ ಏ.16 NEWS DESK : ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಕೋದಂಡ ರಾಮ ದೇವಾಲಯದಲ್ಲಿ ಏ.17 ರಂದು ರಾಮ ನವಮಿ ಉತ್ಸವವನ್ನು ಆಚರಿಸಲಾಗುವುದು. ದೇವಾಲಯದ ಪ್ರಧಾನ ಅರ್ಚಕ ಜಯಂತ್ ಭಟ್ ನೇತೃತ್ವದಲ್ಲಿ ಬೆಳಿಗ್ಗೆ 9 ಗಂಟೆಗೆ ರಾಮನಿಗೆ ಪಂಚಾಮೃತ ಅಭಿಷೇಕ, 10.30 ಕ್ಕೆ ರಾಮ ತಾರಕ ಹೋಮ, ಮಧ್ಯಾಹ್ನ 12.30 ರಿಂದ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ. 1 ಗಂಟೆಯಿಂದ ಅನ್ನ ಸಂತರ್ಪಣೆ ನಡೆಯಲಿದೆ.
ಸುಂಟಿಕೊಪ್ಪ,ಏ.16 NEWS DESK : ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಮತ್ತೆ ಕಾಡಾನೆಗಳು ಪ್ರತ್ಯಕ್ಷಗೊಂಡು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಸುಂಟಿಕೊಪ್ಪದ ಕೊಡಗರಹಳ್ಳಿ, ಉಪ್ಪುತೋಡು, ಕಂಬಿಬಾಣೆ, 7ನೇ ಹೊಸಕೋಟೆ, ಮತ್ತಿಕಾಡು, ಭೂತನಕಾಡು ಹಾಗೂ ಮಿನುಕೊಲ್ಲಿ ಕೊಡಗರಹಳ್ಳಿ ಉಪ್ಪುತೋಡು, 7ನೇ ಹೊಸಕೋಟೆ, ಕಂಬಿಬಾಣೆ, ಅತ್ತೂರು ನಲ್ಲೂರು, ತೊಂಡೂರು ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಸಂಚರಿಸುತ್ತಿದ್ದು, ಕಾಫಿ ತೋಟಗಳಿಗೆ ನುಗ್ಗಿ ಅಡಿಕೆ, ಕಾಫಿ, ಬಾಳೆ ಬೆಳೆಗಳನ್ನು ನಾಶ ಪಡಿಸುತ್ತಿವೆ. ಮೀಸಲು ಅರಣ್ಯ ಸಂಪೂರ್ಣ ಒಣಗಿದ್ದು, ಅರಣ್ಯದೊಳಗೆ ನೀರಿನ ಕೊರತೆಯಿಂದ ಕಾಡಾನೆನೆಗಳು ಕಾಡು ಬಿಟ್ಟು ಗ್ರಾಮದೊಗೆ ನುಗ್ಗತ್ತುವೆ. ಇದರಿಂದ ಗ್ರಾಮಸ್ಥರು ಭಯಬೀತರಾಗಿದ್ದು, ಕಾಡಾನೆಗಳ ಕಾಟಕ್ಕೆ ರೈತರು ಹೈರಾಣಾಗಿದ್ದಾರೆ. ಅರಣ್ಯ ಇಲಾಖೆ ತಕ್ಷಣವೆ ಆನೆಗಳನ್ನು ಕಾಡಿಗಟ್ಟುವ ಕೆಲಸ ಆಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಡಿಕೇರಿ ಏ.16 NEWS DESK : ವಿಶ್ವ ಪರಿಸರ ದಿನಾಚರಣೆ-2024ರ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ(ಕನ್ನಡ ಮತ್ತು ಇಂಗ್ಲೀಷ್-1000 ಪದಗಳಿಗೆ ಮೀರದಂತೆ) ಮತ್ತು ಪದವಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯು ‘ಭೂಮಿ ಮತ್ತು ಮಣ್ಣಿನ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳು’ ಎಂಬ ಶೀರ್ಷಿಕೆಯಡಿಯಲ್ಲಿ ನಡೆಯಲಿದೆ. ಪ್ರಬಂಧಗಳನ್ನು ಕಳುಹಿಸಲು ಮೇ, 27 ಕಡೆ ದಿನವಾಗಿದೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವ ವಿದ್ಯಾರ್ಥಿಗಳು (ಇಬ್ಬರು ವಿದ್ಯಾರ್ಥಿಗಳ ತಂಡ) ಅಕಾಡೆಮಿಯ ಇ-ಮೇಲ್ ksta.gok@gmail.com ನಲ್ಲಿ ಮೇ, 27 ರೊಳಗೆ ನೋಂದಾಯಿಸಿಕೊಳ್ಳಬಹುದು. ರಸಪ್ರಶ್ನೆ ಸ್ಪರ್ಧೆಯನ್ನು ಜೂನ್, 6 ರಂದು ಅಕಾಡೆಮಿಯ ಸಭಾಂಗಣದಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಅಕಾಡೆಮಿಯ ವೆಬ್‍ಸೈಟ್ https://kstacademy.in ವೀಕ್ಷಿಸಬಹುದು. ಅಥವಾ ಅಕಾಡೆಮಿಯ ಹಿರಿಯ ವೈಜ್ಞಾನಿಕಾಧಿಕಾರಿಯಾದ ಡಾ.ಆನಂದ್ ಆರ್. ಮೊ. 9880405181 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎಂ.ರಮೇಶ್ ತಿಳಿಸಿದ್ದಾರೆ.
ಮಡಿಕೇರಿ ಏ.16 NEWS DESK : ಬಿಜೆಪಿ ದೇಶದ ಅಭಿವೃದ್ಧಿ ಮತ್ತು ಭದ್ರತೆಯ ವಿಚಾರವನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದರೆ, ಕಾಂಗ್ರೆಸ್ ಮಂದಿ ಮೈಸೂರು- ಕೊಡಗು ಕ್ಷೇತ್ರದಲ್ಲಿ ಜಾತಿಯ ಹೆಸರಿನಲ್ಲಿ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಆದರೆ ಕೊಡಗಿನಲ್ಲಿ ಜಾತಿ ರಾಜಕೀಯ ನಡೆಯುವುದಿಲ್ಲ ಎಂದು ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ದೇಶದ ಭದ್ರತೆ ಮತ್ತು ಭವಿಷ್ಯದ ಚುನಾವಣೆಯಾಗಿದ್ದು, ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿಸುವ ಗುರಿಯನ್ನು ಮತದಾರರು ಹೊಂದಿದ್ದಾರೆ. ಆದರೆ ಕೊಡಗಿನಲ್ಲಿ ಅರೆಭಾಷೆ ಮತ್ತು ಒಕ್ಕಲಿಗ ಸಮುದಾಯದ ಕೆಲವು ಪ್ರಮುಖರು ಜನಾಂಗದ ಮತವನ್ನು ಕಾಂಗ್ರೆಸ್‍ಗೆ ನೀಡಬೇಕು ಎಂದು ಕರೆ ನೀಡುತ್ತಿದ್ದಾರೆ. ಇದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು. ಅರೆಭಾಷೆ ಮತ್ತು ಒಕ್ಕಲಿಗ ಸಮುದಾಯದ ಹೆಚ್ಚಿನ ಮಂದಿ ರೈತ ಸಮೂಹಕ್ಕೆ ಸೇರಿದವರಾಗಿದ್ದಾರೆ. ಪ್ರಧಾನಿ ಮೋದಿ ಅವರು ರೈತರಿಗೆ ನೀಡಿರುವ ಕೊಡುಗೆಯನ್ನು ಯಾರೂ ಮರೆತಿಲ್ಲ. ಈ ಸಮುದಾಯ ಮೋದಿ ಅವರ ಮೇಲೆ ಒಲವು ಹೊಂದಿದ್ದು, ಕಾಂಗ್ರೆಸ್ ಗೆ…
ಮಡಿಕೇರಿ ಏ.16 NEWS DESK : ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ ವಯಸ್ಸು 85 ಮೀರಿರುವ ಹಿರಿಯ ನಾಗರೀಕರು(ಎವಿಎಸ್‍ಸಿ), ವಿಕಲಚೇತನರು (ಎವಿಪಿಡಿ) ಮತ್ತು ಕೋವಿಡ್ ಶಂಕಿತ/ಬಾಧಿತ ವ್ಯಕ್ತಿಗಳನ್ನು (ಎವಿಸಿಒ) ಮತ್ತು ಅಗತ್ಯ ಸೇವೆಗಳ ಮೇರೆ ನಿಯೋಜನೆಗೊಂಡಿರುವ(ಎವಿಇಎಸ್) ವ್ಯಕ್ತಿಗಳನ್ನು ಗೈರು ಹಾಜರಿ ಮತದಾರರು ಎಂದು ಪರಿಗಣಿಸಲಾಗುತ್ತದೆ. ಈ ಗೈರು ಹಾಜರಿ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದೆಂಬುದನ್ನು ಗಮನದಲ್ಲಿರಿಸಿ ಇವರುಗಳಿಗೆ ಮನೆಯಿಂದಲೆ ಮತದಾನ (ಹೋಮ್ ವೋಟಿಂಗ್) ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ಅದರಂತೆ ಮನೆಯಿಂದಲೆ ಮತದಾನ(ಹೋಮ್ ವೋಟಿಂಗ್) ಕಾರ್ಯಕ್ಕೆ ಇಬ್ಬರು ಮತಗಟ್ಟೆ ಅಧಿಕಾರಿಗಳು, ಒಬ್ಬರು ಮೈಕ್ರೋ ಅಬ್ಸರ್ವರ್, ಬಿಎಲ್‍ಓ, ವಿಡಿಯೋ ಗ್ರಾಫರ್ ಹಾಗೂ ಸೆಕ್ಟರ್ ಅಧಿಕಾರಿಗಳನ್ನೊಳಗೊಂಡ ತಂಡಗಳು ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 22 ಮಾರ್ಗಗಳಲ್ಲಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ 21 ಮಾರ್ಗಗಳಲ್ಲಿ ಏ.15, ಏ.16 ಮತ್ತು ಏ.17 ರಂದು ಮನೆ ಮನೆಗೆ ತೆರಳಿ ಗೈರು ಹಾಜರಿ ಮತದಾರರಿಂದ ಮತದಾನ ಮಾಡಿಸುವ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಪೈಕಿ ಗುರುತಿಸಲಾದ…






