ಲೇಖಕ: admin

ಕುಶಾಲನಗರ ಮೇ 21 NEWS DESK : ಕಾರ್ಕಳ ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಅಂತರ್ ಕಾಲೇಜು ಪದವಿ ಮಟ್ಟದ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕುಶಾಲನಗರದ  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿದೆ. ಸುಮಾರು 14 ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ಮೂಲಕ ಕ್ರೀಡಾಭಿಮಾನಿಗಳ ಮನಸೂರೆಗೊಂಡ ಕುಶಾಲನಗರ‌ ಪದವಿ ಕಾಲೇಜು ತಂಡ ಫೈನಲ್ ಹಂತಕ್ಕೆ ತಲುಪಿತ್ತು. ಫೈನಲ್ ಪಂದ್ಯದಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿರುದ್ಧ ಉತ್ತಮ ಪೈಪೋಟಿ ನೀಡಿದರೂ ಕೂಡ ಆಳ್ವಾಸ್ ತಂಡದ ಆಟದ ಮುಂದೆ ಶರಣಾಗುವುದರ ಮೂಲಕ ‌ಇದೇ ಮೊದಲ ಬಾರಿಗೆ ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಸೋಮವಾರ ಕಾಲೇಜಿಗೆ ಆಗಮಿಸಿದ ಬಾಲ್ ಬ್ಯಾಡ್ಮಿಂಟನ್ ತಂಡಕ್ಕೆ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಸಹಪ್ರಾದ್ಯಾಪಕರು, ಉಪನ್ಯಾಸಕರು, ಸಿಬ್ಬಂದಿಗಳು ಅದ್ದೂರಿ ಸ್ವಾಗತ ನೀಡಿ‌ ಅಭಿನಂಧಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಬಿ.ಎಂ.ಪ್ರವೀಣ್…

Read More

ಸಕಲೇಶಪುರ ಮೇ 21 NEWS DESK : ಕಂಟೈನರ್ ಮತ್ತು ಇನ್ನೋವಾ ವಾಹನದ ನಡುವೆ ಡಿಕ್ಕಿ ಸಂಭವಿಸಿ ತಾಯಿ, ಮಗ ಮೃತಪಟ್ಟಿರುವ ಘಟನೆ ಶಿರಾಡಿಘಾಟ್ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಇನ್ನೋವಾದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಪಾಣೆ ಮಂಗಳೂರು ಸಮೀಪದ ಬೊಂಡಲ ಗ್ರಾಮದ ಶಬ್ಬೀರ್ ಅಹಮ್ಮದ್ ಎಂಬುವವರ ಪತ್ನಿ ಶಫಿಯ (48) ಹಾಗೂ ಅವರ ಪುತ್ರ ಶಫೀಕ್ ( 21) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಗಳವಾರ ಬೆಳಿಗ್ಗೆ ಸಕಲೇಶಪುರದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರು ಹಾಗೂ ಮಂಗಳೂರು ಕಡೆಯಿಂದ ಬರುತ್ತಿದ್ದ ಕಂಟೈನರ್ ಲಾರಿ ನಡುವೆ ಡಿಕ್ಕಿ ಸಂಭವಿಸಿತು. ಕಾರಿನಲ್ಲಿ ಮಕ್ಕಳು ಸಹಿತ 6 ಮಂದಿ ಇದ್ದು, ಎಲ್ಲರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಡಿಕೇರಿ ಮೇ 21 NEWS DESK : ಜಿಲ್ಲೆಯ ಮೊದಲ ಮಹಿಳಾ ಪತ್ರಿಕೆ (ರಾಷ್ಟ್ರಮತ)ಸಂಪಾದಕರಾಗಿದ್ದ ವಿರಾಜಪೇಟೆ ಜೈನರ ಬೀದಿಯ ನಿವಾಸಿ  ಜಯಲಕ್ಮಿ ಗೋವಿಂದ ರಾವ್ (99)ಇಂದು ನಿಧನರಾದರು.

Read More

ಮಡಿಕೇರಿ ಮೇ 21 NEWS DESK : ಪೊನ್ನಂಪೇಟೆ ಸಮೀಪದ ಹುದೂರು ಶ್ರೀ ಭಗವತಿ ಮತ್ತು ಭದ್ರಕಾಳಿ ದೇವರ ವಾರ್ಷಿಕ ಬೇಡು ಹಬ್ಬ ಮೇ 22 ಮತ್ತು  23 ರಂದು ನಡೆಯಲಿದೆ ಎಂದು ತಕ್ಕಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಈ ವರ್ಷ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ತೀರ್ಮಾನಿಸಿದ್ದು, ಮೇ 22 ರಂದು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಹಾಗೂ ಮೇ 23 ರಂದು ಶ್ರೀ ಭಗವತಿ ದೇವಸ್ಥಾನದಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು. ಮೇ22 ರಂದು ಅಪರಾಹ್ನ 3 ಗಂಟೆಗೆ ಶ್ರೀ ಭದ್ರಕಾಳಿ ದೇವರ ಕುದುರೆ ಅಡ್ಡಂಡ ಬಲ್ಯಮನೆ ಸಮೀಪದ ಅಂಬಲದಿಂದ ಹೊರಟು ಹತ್ತಿರದ ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ದೇವರಿಗೆ ಹರಕೆ, ಕಾಣಿಕೆ ಸಲ್ಲಿಸುವ ಮೂಲಕ ಮೊದಲ ದಿನದ ಹಬ್ಬ ನಡೆಯಲಿದ್ದು, 23 ರಂದು ಅಪರಾಹ್ನ 3 ಗಂಟೆಗೆ ಶ್ರೀ ಭಗವತಿ ದೇವರ ಕುದುರೆ ಅಂಬದಿಂದ ಹೊರಟು ಶ್ರೀ ಭಗವತಿ ದೇವಸ್ಥಾನದಲ್ಲಿ ಹರಕೆ ಕಾಣಿಕೆ…

Read More

ಮಡಿಕೇರಿ ಮೇ 20 NEWS DESK : ಕೊಡಗು ಜಿಲ್ಲೆಯ ಬಹುತೇಕ ಕಡೆ ಉತ್ತಮ ಮಳೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಎರಡು ಇಂಚಿಗೂ ಅಧಿಕ ಮಳೆಯಾಗಿದ್ದು, ಕುಶಾಲನಗರ ಭಾಗದಲ್ಲಿ ಅಂಗಡಿ ಮತ್ತು ಮನೆಗಳಿಗೆ ನೀರು ನುಗ್ಗಿದೆ. ಮಡಿಕೇರಿ, ಭಾಗಮಂಡಲ, ವಿರಾಜಪೇಟೆ, ಕದನೂರು, ಕಕ್ಕಬ್ಬೆ, ನಾಪೋಕ್ಲು, ಮೂರ್ನಾಡು, ನಂಜರಾಯಪಟ್ಟಣ, ಗುಡ್ಡೆಹೊಸೂರು, ಸುಂಟಿಕೊಪ್ಪ, ಕುಶಾಲನಗರ, ಬೈಲುಕುಪ್ಪೆ ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿದೆ. ನಿರಂತರ ಎರಡು ಮೂರು ಗಂಟೆಗಳ ಕಾಲ ಮಳೆ ಸುರಿದ ಪರಿಣಾಮ ಮಡಿಕೇರಿ ನಗರದ ರಸ್ತೆಗಳು ಜಲಾವೃತಗೊಂಡವು. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಮನೆ ಮತ್ತು ಅಂಗಡಿಗಳಿಗೆ ನುಗ್ಗುವ ಆತಂಕ ಸೃಷ್ಟಿಸಿತು. ಮಳೆಯಷ್ಟೇ ಆಗುತ್ತಿದ್ದು, ಗಾಳಿ ಇಲ್ಲದ ಕಾರಣ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಬೆಟ್ಟಗುಡ್ಡಗಳಿಂದ ಕೂಡಿರುವ ಮಡಿಕೇರಿಯಲ್ಲಿ ಭಾರೀ ಗಾಳಿ ಬೀಸಿದರೆ ಅನಾಹುತಗಳು ಎದುರಾಗುವುದೇ ಹೆಚ್ಚು. ಸುಂಟಿಕೊಪ್ಪ, ಕುಶಾಲನಗರ, ಬೈಲುಕುಪ್ಪೆ ಭಾಗದಲ್ಲಿ ನಿರಂತರವಾಗಿ ಮಳೆ ಸುರಿದ ಪರಿಣಾಮ ಅಂಗಡಿಗಳು ಮತ್ತು ಮನೆಗಳಿಗೆ ನೀರು ನುಗ್ಗಿದೆ. ಕುಶಾಲನಗರ ಪುರಸಭೆ ವ್ಯಾಪ್ತಿಯ ಗುಮ್ಮನಕೊಲ್ಲಿ, ವೀರಭೂಮಿ,…

Read More

ಪುತ್ತೂರು ಮೇ 20 NEWS DESK : ಜನ ವಿರೋಧಿ ಆಡಳಿತ ನಡೆಸುತ್ತಿರುವ ಕಾಂಗ್ರೆಸನ್ನು ನಿಯಂತ್ರಣದಲ್ಲಿಬೇಕಾದರೆ ವಿಧಾನ ಪರಿಷತ್ ನಲ್ಲಿ ಮೈತ್ರಿಕೂಟದ ಹೆಚ್ಚು ಅಭ್ಯರ್ಥಿಗಳು ಗೆಲುವು ಸಾಧಿಸಬೇಕಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು. ಇಲ್ಲಿನ ಭಾರತ್ ಮಾತಾ ಸಭಾಂಗಣದಲ್ಲಿ ನಡೆದ ಮತದಾರರ ಸಂವಾದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿ, ಜನ ವಿರೋಧಿ ಮಸೂದೆಗಳನ್ನು ತಡೆಯಬೇಕಾದರೆ ವಿಧಾನ ಪರಿಷತ್ ನಲ್ಲಿ ನಮ್ಮ ಪಕ್ಷಗಳ ಬಹುಮತ ಅಗತ್ಯ. ಹಾಗಾಗಿ ಸಮರ್ಥರಾದ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಅವರನ್ನು ಪ್ರಚಂಡ ಮತಗಳಿಂದ ಗೆಲ್ಲಿಸಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿದರು. ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿ, ಊಟ ಶರೀರಕ್ಕೆ ತೃಪ್ತಿ ಕೊಡುತ್ತೆ, ಪಾಠ ಮೆದುಳಿಗೆ ತೃಪ್ತಿ ಕೊಡುತ್ತೆ, ಆಟ ಮನಸ್ಸಿಗೆ ತೃಪ್ತಿ ಕೊಡುತ್ತೆ, ನಿಜವಾದ ನಿಸ್ವಾರ್ಥ ಸೇವೆ ಮನಸ್ಸಿಗೆ ತೃಪ್ತಿ ಕೊಡುತ್ತದೆ, ಇಂತಹ ಸೇವಾ ಮನೋಭಾವನೆಯೊಂದಿಗೆ ವೈದ್ಯಕೀಯ ಹಾಗೂ…

Read More

ಸುಂಟಿಕೊಪ್ಪ ಮೇ 20 NEWS DESK : ಸುಂಟಿಕೊಪ್ಪ ವ್ಯಾಪ್ತಿಯ ಶಾಂತಿಗೇರಿ, ಅಂದಗೋವೆ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಕಾಫಿ ತೋಟಗಳಲ್ಲಿ ಠಿಕಾಣಿ ಹೂಡಿ ಉಪಟಳ ನೀಡುತ್ತಿದ್ದ ಏಳು ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಯುತ್ತಿದೆ. ಅರಣ್ಯ ಇಲಾಖೆಯ ಆರ್ ಆರ್ ಟಿ ತಂಡ ಅಂದಗೋವೆಯಲ್ಲಿ ಸೇರಿಕೊಂಡಿರುವ ಕಾಡಾನೆಗಳನ್ನು ಕಲ್ಲೂರು ಮೂಲಕ ಆನೆಕಾಡು ಅರಣ್ಯಕಟ್ಟುವ ಪ್ರಯತ್ನ ಮಾಡುತ್ತಿದೆ. ಈ ಗ್ರಾಮಗಳ ಜನರು ಎಚ್ಚರ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Read More

ಸುಂಟಿಕೊಪ್ಪ ಮೇ 20 NEWS DESK : ದೇಶದ ಪ್ರತಿಷ್ಠಿತ ವೈದಕೀಯ ಕಾಲೇಜುಗಳಲ್ಲಿ ಒಂದಾಗಿರುವ ಮೈಸೂರು ಮೆಡಿಕಲ್ ಕಾಲೇಜಿನ ಶತಮಾನೋತ್ಸವ ಸಮಾರಂಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಪೈಕಿ ಕಾಲೇಜಿನ ಇತಿಹಾಸದಲ್ಲೇ ಅತ್ಯುನ್ನತ ಪದವಿ ಪುರಸ್ಕಾರ ಮತ್ತು ಗೌರವಗಳಿಗೆ ಪಾತ್ರರಾದ ಮೂಲತಃ ಕೊಡಗಿನವರಾದ ಲೆ.ಜ. ಡಾ.ಬಿ.ಎನ್.ಬಿ.ಎಂ. ಪ್ರಸಾದ್ ಎಸ್.ಎಂ.,ವಿ ಎಸ್.ಎಂ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲರು ಮತ್ತು ನಿರ್ದೇಶಕರಾದ ಡಾ.ದಾಕ್ಷಾಯಿಣಿ ಅವರು ಇತರ ಗಣ್ಯರ ಸಮುಖದಲ್ಲಿ ಡಾ.ಪ್ರಸಾದರನ್ನು ಮೈಸೂರು ಪೇಟಾ ಶಾಲು ಫಲ ತಾಂಬೂಲ ಪ್ರಶಸ್ತಿ ಪತ್ರದೊಂದಿಗೆ ಗೌರವಿಸಿದರು. ಡಾ.ಪ್ರಸಾದ್ ಈ ಕಾಲೇಜಿನಿಂದ 1977 ರಲ್ಲಿ ವೈಧ್ಯರಾಗಿ ಹೊರಹೊಮ್ಮಿ ಭಾರತೀಯ ಭೂಸೇನೆಯನ್ನು ಸೇರಿದರು ಸೇನೆಯಲ್ಲಿ ವಿವಿಧ ಜವಬ್ಧಾರಿಗಳೊಂದಿಗೆ ಹಂತ ಹಂತವಾಗಿ ಪದನ್ನೋತ್ತಿ ಹೊಂದಿ ಅವರು ಭಾರತೀಯ ರಕ್ಷಣಾ ಪಡೆಗಳ ವೈದಕೀಯ ವಿಭಾಗದ ಮಹಾ ನಿರ್ದೇಶಕರಾಗಿ ಮುಖ್ಯ ಸಮಲೋಚಕರಾಗಿ ಜೋತೆಗೆ ಭಾರತ ರಾಷ್ಟ್ರಪತಿಗಳ ಗೌರವ ಸರ್ಜನ್ ಆಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ರಾಷ್ಟ್ರಮಟ್ಟದ ಪ್ರಶಸ್ತಿ…

Read More

ಸುಂಟಿಕೊಪ್ಪ ಮೇ 20 NEWS DESK : ಸೋಮವಾರಪೇಟೆ ತಾಲೂಕಿನ ಮಾದಾಪುರ ವ್ಯಾಪ್ತಿಯಲ್ಲಿನ ಕುಂಬೂರಿನಲ್ಲಿ ನಿರ್ಮಿಸಲಾಗಿರುವ ಪವಿತ್ರ ಕುಟುಂಬ ದೇವಾಲಯವು ಮೇ 21 ರಂದು ಲೋಕಾರ್ಪಣೆಗೊಳ್ಳಲಿದೆ. ನೂತನ ದೇವಾಲಯದ ಉದ್ಘಾಟನೆ ಮತ್ತು ಆರ್ಶಿವಚನವನ್ನು ಮೈಸೂರು ಧರ್ಮಕ್ಷೇತ್ರದ ಆಡಳಿತಾಧಿಕಾರಿ ಪರಮಪೂಜ್ಯ ಡಾ.ಬರ್ನಾಡ್ ಮೊರಾಸ್ ನೇರವೇರಿಸಲಿದ್ದು, ಅತೀ ವಂ.ಗುರುಗಳಾದ ಮೈಸೂರು ಧರ್ಮಾಕ್ಷೇತ್ರದ ಜಾನ್ ಅಲ್ಬರ್ಡ್ ಮೆಂಡೋನ್ಸಾ, ಮಡಿಕೇರಿ ವಲಯದ ಶೇಷ್ಠಗುರುಗಳಾದ ಜಾರ್ಜ್ ದೀಪಕ್ ಉಪಸ್ಥಿತರಿಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಮಾಜಿ ಸಚಿವರಾದ ಎಂ.ಪಿ.ಅಪ್ಪಚ್ಚು ರಂಜನ್ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾಧಿಕಾರಿಗಳಾದ ದೀವಕರ್ ಎಂ.ಲಕ್ಷ್ಮೀಜಾಲ ಎಸ್ಟೇಟ್ ಮಾಲೀಕರಾದ ಕೋಗಂಡ ವಿನಯ್‍ಸೋಮಯ್ಯ ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿದ್ದಪ್ಪ ಉಪಾಧ್ಯಕ್ಷರಾದ ಸುರೇಶ್ ಸದಸ್ಯರುಗಳಾದ ಅಂತೋಣಿ ಪಿ.ಡಿ.ಜೆರ್ಮಿ, ದಮಯಂತಿ ಪಾಲ್ಗೊಳ್ಳಲಿದ್ದಾರೆ. ಮಡಿಕೇರಿ ವಲಯಾದ ಶೃದ್ಧಾ ಕೇಂದ್ರಗಳಲ್ಲಿ ಒಂದಾಗಿರುವ ಕುಂಬೂರುವಿನ ಪವಿತ್ರ ಕುಟುಂಬ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಭವ್ಯ ದಿವ್ಯ ನವೀನ ದೇವಾಲಯಕ್ಕೆ 10 ಹಲವು ಧರ್ಮಗುರುಗಳು ಕನ್ಯಾಸ್ತ್ರೀಯರು ಮತ್ತು ಭಕ್ತರ ತ್ಯಾಗ ಪರಿಶ್ರಮ…

Read More

ಮಡಿಕೇರಿ ಮೇ 20 NEWS DESK : ನಾಲ್’ನಾಡ್ ಹಾಕಿ ಕ್ಲಬ್ ವತಿಯಿಂದ ಅಪ್ಪಚೆಟ್ಟೋಳಂಡ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ಮೇ 22 ರಿಂದ ಬಲ್ಲಮಾವಟಿ ನೇತಾಜಿ ವಿದ್ಯಾಸಂಸ್ಥೆಯ ಮೈದಾನದಲ್ಲಿ ನಡೆಯಬೇಕಾಗಿದ್ದ ನಾಲ್’ನಾಡ್ ವ್ಯಾಪ್ತಿಯ ಅಂತರಗ್ರಾಮ ಹಾಕಿ ಪಂದ್ಯಾಟ ಮತ್ತು ಮಹಿಳೆಯರ ಹಗ್ಗಜಗ್ಗಾಟವನ್ನು ಮಳೆಯ ಕಾರಣದಿಂದ ಮುಂದೂಡಲಾಗಿದ್ದು, ಪಂದ್ಯಾವಳಿಯನ್ನು ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕ್ರೀಡಾಭಿಮಾನಿಗಳು ಮತ್ತು ನೊಂದಾಯಿತ ತಂಡಗಳು ಬದಲಿಸಲಾದ ದಿನಾಂಕವನ್ನು ಗಮನಿಸಿ ಸಹಕರಿಸುವಂತೆ ನಾಲ್’ನಾಡ್ ಹಾಕಿ ಕ್ಲಬ್ ನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಕೋರಿದೆ.

Read More