ಲೇಖಕ: admin

ಮಡಿಕೇರಿ NEWS DESK ಜ.9 : ಕೊಡಗು ಜಿಲ್ಲಾ ಕಾಂಗ್ರೆಸ್ ನ ಅಲ್ಪಸಂಖ್ಯಾತರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಲ್ಪಸಂಖ್ಯಾತರಿಗೆ ವಿಧಾನ ಪರಿಷತ್ ಸ್ಥಾನ ಮತ್ತು ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಮನವಿ ಸಲ್ಲಿಸಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಅಲ್ಪಸಂಖ್ಯಾತ ಮುಖಂಡರು ಕೊಡಗು ಜಿಲ್ಲೆಯ ಶೇ.99 ರಷ್ಟು ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುತ್ತಾ ಬಂದಿದ್ದಾರೆ ಎಂದು ಗಮನ ಸೆಳೆದರು. ಯಾವುದೇ ಚುನಾವಣೆ ಬಂದರೂ ತಮ್ಮ ರಾಜಕೀಯ ನಿಲುವನ್ನು ಬದಲಾಯಿಸದ ಅಲ್ಪಸಂಖ್ಯಾತರು ಇತರ ಪಕ್ಷಗಳನ್ನು ಬೆಂಬಲಿಸದೆ ನಿರಂತರವಾಗಿ ಕಾಂಗ್ರೆಸ್ ಪಕ್ಷದ ಬಲವನ್ನು ಹೆಚ್ಚಿಸುತ್ತಲೇ ಬಂದಿದ್ದಾರೆ. ಇದೀಗ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ. ಆದರೆ ಕೊಡಗಿನ ಅಲ್ಪಸಂಖ್ಯಾತರಿಗೆ ಅಧಿಕಾರ ಸ್ಥಾನದಲ್ಲಿ ಯಾವುದೇ ಸ್ಥಾನಮಾನ ದೊರೆಯದೆ ಇರುವುದು ಬೇಸರ ಮೂಡಿಸಿದೆ. ಆದ್ದರಿಂದ ವಿಧಾನ ಪರಿಷತ್ ಸ್ಥಾನ ಮತ್ತು…

Read More

ಸೋಮವಾರಪೇಟೆ ಜ.8 NEWS DESK : ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪಿಗೆಕೊಲ್ಲಿ ಗ್ರಾಮದ ಕಾಫಿ ಬೆಳೆಗಾರರಾದ ಡಿ.ಎಸ್. ಪೊನ್ನಪ್ಪ(82) ಹೃದಯಾಘಾತದಿಂದ ನಿಧನರಾದರು. ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ, ಐಗೂರು ಗ್ರಾಮ ಪಂಚಾಯಿತಿ, ಆರ್‍ಎಂಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸ್ವ ಗ್ರಾಮದಲ್ಲಿ ನಡೆಯಿತು.

Read More

ಮಡಿಕೇರಿ ಜ.8 NEWS DESK : ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿನ ಪ್ರಾಯೋಜಕತ್ವ, ವಿಶೇಷ ಪಾಲನೆ, ಉಪಕಾರ್ ಹಾಗೂ ಮುಖ್ಯಮಂತ್ರಿ ಅವರ ಬಾಲಸೇವಾ ಯೋಜನೆಯನ್ನು ಅರ್ಹರಿಗೆ ತಲುಪಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವ್ಯಾಪ್ತಿಯ ಪ್ರಾಯೋಜಕತ್ವ ಹಾಗೂ ಪೋಷಕತ್ವ ಅನುಮೋದನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ಮಿಷನ್ ವಾತ್ಸಲ್ಯ ಮಾರ್ಗಸೂಚಿಯಂತೆ ಪ್ರಾಯೋಜಕತ್ವ ಯೋಜನೆ ಜಾರಿಗೊಳಿಸಿದ್ದು, 18 ವರ್ಷದೊಳಗಿನ ಮಕ್ಕಳ ರಕ್ಷಣೆ, ಪಾಲನೆ ಮತ್ತಿತರ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಎಸ್.ಹೊನ್ನೇಗೌಡ ಅವರು ಪ್ರಾಯೋಜಕತ್ವ ಯೋಜನೆಯಡಿ 4 ಸಾವಿರ ರೂ. ನೀಡಲಾಗುತ್ತಿದ್ದು, 2025-26 ನೇ ಸಾಲಿನ ಮೂರನೇ ತ್ರೈಮಾಸಿಕಕ್ಕೆ 102 ಅರ್ಜಿಗಳು ಸ್ವೀಕೃತವಾಗಿದ್ದು, ಈ ಅರ್ಜಿಗಳಲ್ಲಿ 92 ಅರ್ಜಿಗಳು ಜಿಲ್ಲಾ ಪ್ರಾಯೋಜಕತ್ವ ಮತ್ತು ಪೋಷಕತ್ವ ಅನುಮೋದನಾ ಸಮಿತಿಗೆ ಮಂಡಿಸಲಾಗಿದೆ ಎಂದರು. ವಿಶೇಷ ಪಾಲನಾ…

Read More

ಸುಂಟಿಕೊಪ್ಪ ಜ.8 NEWS DESK : ಗರಗಂದೂರು ರಾಯಲ್ ಪಾರ್ಮೆರ್ಸ್ ಕ್ಲಬ್ ವತಿಯಿಂದ ಹರದೂರು ಗ್ರಾಮ ಪಂಚಾಯಿತಿ ಕಚೇರಿಗೆ ಗಡಿಯಾರವನ್ನು ಕೊಡುಗೆಯಾಗಿ ನೀಡಿದ್ದಾರೆ.  ರಾಯಲ್ ಪಾರ್ಮೆರ್ಸ್ ಕ್ಲಬ್ ಉದ್ಘಾಟನೆಯ ಅಂಗವಾಗಿ ಸಂಘದ ಅಧ್ಯಕ್ಷ ವಿ.ಸಂತೋಷ್ ಹಾಗೂ ಪದಾಧಿಕಾರಿಗಳು ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಗೋಡೆ ಗಡಿಯಾರವನ್ನು ಅಧ್ಯಕ್ಷೆ ಭೋಜಮ್ಮ, ಪಂಚಾಯಿತಿ ಅಧಿಕಾರಿ ಪೂರ್ಣಿಮಾ ಅವರಿಗೆ ಕೊಡುಗೆಯಾಗಿ ನೀಡಿದರು. ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷ ಮುಸ್ತಾಫ, ಸದಸ್ಯರುಗಳು ರಾಯಲ್ ಪಾರ್ಮೆರ್ಸ್ ಕ್ಲಬ್‍ನ ಉಪಾಧ್ಯಕ್ಷ ಸುಧಾಕರ್, ಕಾರ್ಯದರ್ಶಿ ವಿ.ಎ.ಸಂತೋಷ್ ಹಾಗೂ ಪದಾಧಿಕಾರಿಗಳು ಇದ್ದರು.

Read More

ಮಡಿಕೇರಿ ಜ.8 NEWS DESK : ಮಾನವಕುಲ ಭೂಮಂಡಲದಲ್ಲಿ ಸೃಷ್ಟಿಯಾದ ಗಳಿಗೆಯಿಂದಲೂ ಆದಿಮಸಂಜಾತ ಏಕ ಬುಡಕಟ್ಟು ಜನಾಂಗದ ಕೊಡವರು ಆರ್ವಿಭವಿಸಿ ಕೊಡವಲ್ಯಾಂಡ್ ನಲ್ಲಿ ಅರಳಿ ವಿಕಾಸವಾಗಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೊಡವರ ನೈಜ ಚರಿತ್ರೆಯನ್ನು ಬುಡಮೇಲು ಮಾಡುವ ಪ್ರಯತ್ನದಲ್ಲಿ ತೊಡಗಿದ್ದು, ಇವರುಗಳ ವಿರುದ್ಧ ಕೊಡವರು ಜಾಗೃತರಾಗಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕರೆ ನೀಡಿದ್ದಾರೆ. ಸಿಎನ್‍ಸಿ ವತಿಯಿಂದ ಭಾಗಮಂಡಲದಲ್ಲಿ ನಡೆದ 23ನೇ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ 40 ವರ್ಷಗಳಿಂದ ಕೊಡವರ ನೈಜ ಚರಿತ್ರೆಯನ್ನು ಬುಡಮೇಲು ಮಾಡುವ ಪ್ರಯತ್ನಗಳು ವಿಶ್ವ ವಿದ್ಯಾನಿಲಯವೊಂದರ ವ್ಯಕ್ತಿಗಳಿಂದ ನಡೆಯುತ್ತಿದೆ. ಕೊಡಗು ಹಾಗೂ ಈ ದೇಶಕ್ಕೆ ಕೊಡವರ ಕಾಣಿಕೆ ಏನೇನೂ ಇಲ್ಲ ಎಂದು ಪ್ರತಿಬಿಂಬಿಸುವ ಮೂಲಕ ಕೊಡವರನ್ನು ಖಳನಾಯಕರಂತೆ ತೋರಿಸುವ ಕ್ರೂರ ಹುನ್ನಾರ ಮುಂದುವರೆದಿದೆ. ದುರುಳ ಚರಿತ್ರೆಯನ್ನೇ ಕೊಡವರ ಕುರಿತಾದ ಅಧಿಕೃತ ಚರಿತ್ರೆ ಎಂದು ಬಿಂಬಿಸಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ,…

Read More

ಮಡಿಕೇರಿ ಜ.8 NEWS DESK : ಸಾಮಾಜಿಕ ಜಾಲತಾಣದಲ್ಲಿ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಅವಮಾನಿಸಿರುವ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡಗು ಜಿಲ್ಲಾ ಬಿಜೆಪಿಯ ಎಸ್‍ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಾಮಾಜಿಕ ಜಾಲತಾಣದಲ್ಲಿ ಶಾಸಕರಿಗೆ ಶ್ರದ್ಧಾಂಜಲಿ ಅರ್ಪಿಸಿ ಕಟುವಾದ ಶಬ್ಧಗಳಿಂದ ನಿಂದಿಸುವ ಮೂಲಕ ವಿಕೃತಿಯನ್ನು ಮರೆದಿರುವ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು ಮತ್ತು ಕೃತ್ಯವೆಸಗಿದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಶಾಸಕಿ ಭಾಗೀರಥಿ ಅವರು ಎಲ್ಲಾ ಮಹಿಳೆಯರಿಗೆ ಪ್ರೇರಣಾದಾಯಕರಾಗಿದ್ದಾರೆ. ಆದರೆ ರಾಜಕೀಯ ದುರುದ್ದೇಶದಿಂದ ಪರಿಶಿಷ್ಟ ಸಮಾಜದ ಮಹಿಳೆಯೊಬ್ಬರಿಗೆ ಅಗೌರವ ತೋರಲಾಗಿದೆ. ಕೀಳು ಮಟ್ಟದ ಪದ ಬಳಕೆ ಮಾಡಲಾಗಿದೆ, ರಾಷ್ಟ್ರೀಯ ಪಕ್ಷ ಬಿಜೆಪಿಯನ್ನು ಕೂಡ ಅವಮಾನಿಸಲಾಗಿದೆ. ಬಿಜೆಪಿ ಪಕ್ಷ ಮಹಿಳೆಯರು ಹಾಗೂ ಪರಿಶಿಷ್ಟರಿಗೆ ಸಮಾನ ರಾಜಕೀಯ ಅವಕಾಶ ಮತ್ತು ಅಧಿಕಾರವನ್ನು ನೀಡುತ್ತಿದೆ. ಇದನ್ನು ಸಹಿಸದ ಕಿಡಿಗೇಡಿಗಳು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಸಂದೇಶ್ ಎಂಬಾತ ಶಾಸಕರನ್ನು ಅಪಮಾನಿಸಿರುವ ಕುರಿತು ತಿಳಿದುಬಂದಿದ್ದು,…

Read More

ಮಡಿಕೇರಿ ಜ.8 NEWS DESK : ಸುಂಟಿಕೊಪ್ಪದ ಮಂಜಿಕೆರೆ ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ 7ನೇ ವರ್ಷದ ಗಗ್ಗರ ಸೇವೆ (ಕೋಲ) ಜ.18 ರಂದು ನಡೆಯಲಿದೆ. ಅಂದು ಸಂಜೆ 6 ಗಂಟೆಯ ನಂತರ ಕೋಲ ನಡೆಯಲಿದ್ದು, ಅನ್ನದಾನ ಸೇವೆ ನೆರವೇರಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕೊರಗಜ್ಜ ದೈವದ ಕರಿಗಂಧ ಪ್ರಸಾದವನ್ನು ಸ್ವೀಕರಿಸುವಂತೆ ದೈವಸ್ಥಾನದ ದೈವ ಆರಾಧಕ ಎಂ.ಎ.ಮಹೇಶ್ ಮನವಿ ಮಾಡಿದ್ದಾರೆ. ಸೇವೆಗೆ ಸಹಕಾರ ನೀಡುವವರು ಮತ್ತು ಹೆಚ್ಚಿನ ಮಾಹಿತಿಗೆ ಎಂ.ಎ.ಮಹೇಶ್ 8762304217 ನ್ನು ಸಂಪರ್ಕಿಸಬಹುದಾಗಿದೆ.

Read More

ಮೈಸೂರು, ಜ.8 NEWS DESK : ಸಾಂಸ್ಕೃತಿಕ ನಗರಿಯಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಗರದಲ್ಲಿ ಬೀದಿಬದಿ ವ್ಯಾಪಾರಿಗಳ ವಲಯ ನಿರ್ಮಿಸಲು ಆದ್ಯತೆ ನೀಡಲಾಗುವುದು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಸೂಚನೆ ನೀಡಿದ್ದಾರೆ. ಮೈಸೂರಿನಲ್ಲಿ ನಗರ ಪ್ರದಕ್ಷಿಣೆ ನಡೆಸಿದ ಸಂಸದ ಯದುವೀರ್‌ ಹಲವಾರು ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿದ ನಂತರ ಮಾಹಿತಿ ನೀಡಿದರು. ಬೀದಿ ವ್ಯಾಪಾರಿಗಳ ವಲಯಗಳು ಮುಖ್ಯವಾಗಿದ್ದು, ಇದನ್ನು ನಿರ್ಮಿಸಲು ನಾನು ಒತ್ತು ನೀಡುತ್ತೇನೆ, ಶೀಘ್ರದಲ್ಲೇ ಇತರ ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಯದುವೀರ್ ತಿಳಿಸಿದರು. ಇದೇ ವೇಳೆ ಬೀದಿ ಬದಿ ವ್ಯಾಪಾರಿಗಳ ಜೊತೆ ಸಂಸದ ಯದುವೀರ್‌ ಮಾತುಕತೆ ನಡೆಸಿ ಅವರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

Read More

ಸುಂಟಿಕೊಪ್ಪ ಜು.8 NEWS DESK : ಮೈಸೂರು ವಿಶ್ವ ವಿದ್ಯಾನಿಲಯದ 106ನೇ ಘಟಿಕೋತ್ಸವದಲ್ಲಿ ಕೊಡಗಿನ ವಿದ್ಯಾರ್ಥಿನಿ ಬಿ.ಪಿ.ಕೃತಿಕಾ ಸ್ನಾತಕೋತ್ತರ ಪದವಿಯನ್ನು ಮೊದಲ ರ್ಯಾಂಕ್ ನೊಂದಿಗೆ ಪಡೆದಿದ್ದು, 5 ಚಿನ್ನದ ಪದಕಗಳು ಮತ್ತು ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ.  ಮೂಲತಃ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ ಗ್ರಾಮ ನಿವಾಸಿ ನಿವೃತ್ತ ಎ.ಎಸ್.ಐ ಪಾರ್ಥ ಮತ್ತು ನಿವೃತ್ತ ಮುಖ್ಯೋಪಾದ್ಯಾಯನಿ ಗೀತಾ ಪಾರ್ಥ ಅವರ ಪುತ್ರಿ. ಪ್ರಸ್ತುತ ಪೊನ್ನಂಪೇಟೆ ನಿವಾಸಿ ಲವೀನ್ ಬಿದ್ದಪ್ಪ ಅವರ ಪತ್ನಿಯಾಗಿರುವ ಕೃತಿಕಾ ತಮ್ಮ ಎಂ.ಎಡ್ ಪದವಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥವರ್‍ಚಂದ್ ಗೇಹ್ಲೋಟ್ ಅವರಿಂದ ಪ್ರಮಾಣ ಪತ್ರ ಮತ್ತು ಪ್ರಶಸ್ತಿ ಸ್ವೀಕರಿಸಿದರು.  ಈ ಕುರಿತು ಪ್ರತಿಕ್ರಿಯಿಸಿರುವ ಕೃತಿಕಾ, ನನ್ನ ಸಾಧನೆಗೆ ಹೆತ್ತವರು ಮತ್ತು ಪತಿ ಸಹಕಾರ ಮಾರ್ಗದರ್ಶನ ಅವಿಸ್ಮರಣೀಯ. ಪ್ರಯತ್ನ, ಅವಿರತ ಶ್ರಮಕ್ಕೆ ಫಲ ಸಿಕ್ಕಿದ ತೃಪ್ತಿ ಇದೆ ಎಂದು ಅವರು ಹೇಳಿದರು. ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂಸಿ.ಸುಧಾಕರ್, ಮೈಸೂರು ವಿವಿಕುಲಪತಿ…

Read More

ಮೈಸೂರು, ಜ.8 NEWS DESK : ಸಾರ್ವಜನಿಕರು ಸಮಸ್ಯೆಗಳನ್ನು ತಮ್ಮ ಬಳಿಗೆ ತಂದಾಗ ಅವುಗಳನ್ನು ಆಲಿಸಿ ತ್ವರಿತವಾಗಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಪ್ರಮುಖವಾಗಿ ಗ್ರಾಮೀಣ ಭಾಗದ ಜನರನ್ನು ಪದೇಪದೆ ಕಚೇರಿಗಳಿಗೆ ಅಲೆಸುವ ಕೆಲಸ ಮಾಡಿಸಬೇಡಿ ಎಂದು ಅಧಿಕಾರಿಗಳಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಸೂಚನೆ ನೀಡಿದ್ದಾರೆ. ಮೈಸೂರಿನ ಬಸ್‌ ನಿಲ್ದಾಣ ಸಮೀಪದ ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸಂಸದ ಯದುವೀರ್‌ ಮಾಹಿತಿ ನೀಡಿದ್ದಾರೆ. ತಾಲೂಕು ಕಚೇರಿಯಲ್ಲಿನ ಕೆಲವು ಲೋಪದೋಷಗಳ ಕುರಿತು ಜನರು ಅಹವಾಲುಗಳನ್ನು ನನ್ನ ಕಚೇರಿಗೆ ಕಳುಹಿಸಿದ್ದರು. ಈ ನಿಟ್ಟಿನಲ್ಲಿ ಇಂದು ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು ಎಂದರು. :: ನಿರ್ಲಕ್ಷ್ಯ ಮಾಡಿದರೆ ಕ್ರಮ ::  ತಾಲೂಕು ಕಚೇರಿಗಳಿಗೆ ಬರುವ ಹೆಚ್ಚಿನ ಜನರು ಗ್ರಾಮೀಣ ಭಾಗದವರಾಗಿರುತ್ತಾರೆ. ಇವರ ಅಹವಾಲುಗಳನ್ನು ತ್ವರಿತವಾಗಿ ಪರಿಹರಿಸಲು ಎಲ್ಲ ಅಧಿಕಾರಿಗಳು ಮುಂದಾಗಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ಮುಂದೆ…

Read More