ಲೇಖಕ: admin

ಮಡಿಕೇರಿ NEWS DESK ಜೂ.9 : ಮಡಿಕೇರಿ ನಗರದ ಮಹದೇವಪೇಟೆಯ ಎಸ್.ಎಸ್ ಆಸ್ಪತ್ರೆಯ 5ನೇ ವಾರ್ಷಿಕೋತ್ಸವವನ್ನು ಸಂಭ್ರಮದಿoದ ನಡೆಯಿತು.  ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ನಗರಸಭಾ ಅಧ್ಯಕ್ಷೆ ಪಿ.ಕಲಾವತಿ ಅವರು, ಇಬ್ಬರು ವಿಶೇಷ ಚೇತನ ಮಕ್ಕಳ ಪೋಷಕರಿಗೆ ಆರ್ಥಿಕ ನೆರವು ನೀಡುವ ಮೂಲಕ ಎಸ್.ಎಸ್ ಆಸ್ಪತ್ರೆಯ ಆಡಳಿತ ಮಂಡಳಿ 5ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದು ಶ್ಲಾಘನೀಯ. ಈ ಕಾರ್ಯ ಇತರರಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಗರಸಭೆಯ ಉಪಾಧ್ಯಕ್ಷ ಮಹೇಶ್ ಜೈನಿ ಅವರು ಮಾತನಾಡಿ, ಎಸ್.ಎಸ್ ಆಸ್ಪತ್ರೆ ಪ್ರತಿವರ್ಷ ಸಮಾಜಮುಖಿ ಕಾರ್ಯದೊಂದಿಗೆ ವಾರ್ಷಿಕೋತ್ಸವವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿದೆ. ವೈದ್ಯಕೀಯ ಸೇವೆಯೊಂದಿಗೆ ಸಮಾಜಕ್ಕೆ ಮಾದರಿಯಾದ ಕಾರ್ಯವನ್ನು ಮಾಡಿರುವುದು ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಾಣ ಮಾಡಿ ಕೊಡಗಿನ ಜನತೆಗೆ ಹೆಚ್ಚಿನ ವೈದ್ಯಕೀಯ ಸೇವೆಯನ್ನು ನೀಡುವಂತಾಗಲಿ ಎಂದು ಶುಭ ಹಾರೈಸಿದರು. ನಗರಸಭೆಯ ಮಾಜಿ ಅಧ್ಯಕ್ಷ ಹೆಚ್.ಎಂ.ನoದಕುಮಾರ್ ಅವರು ಮಾತನಾಡಿ   ಎಸ್.ಎಸ್ ಆಸ್ಪತ್ರೆ ಸೇವಾ ಮನೋಭಾವನೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು,…

Read More

ಮಡಿಕೇರಿ NEWS DESK ಜೂ.9 : ಮಡಿಕೇರಿ ನಗರ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಸ್.ಪ್ರಶಾಂತ್ ಕುಮಾರ್ ಆಯ್ಕೆಯಾಗಿದ್ದಾರೆ. ಪಕ್ಷ ಸಂಘಟನೆಯ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರ ಶಿಫಾರಸ್ಸಿನ ಮೇರೆಗೆ ಪ್ರಶಾಂತ್ ಕುಮಾರ್ ಅವರನ್ನು ಆಯ್ಕೆ ಮಾಡಿರುವುದಾಗಿ ನಗರಾಧ್ಯಕ್ಷ ಉಮೇಶ್ ಸುಬ್ರಮಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮಡಿಕೇರಿ ಜೂ.8 NEWS DESK : ತುಮಕೂರಿನಲ್ಲಿ ನಡೆದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ರಾಜ್ಯ ಮಟ್ಟದ ಸಮ್ಮೇಳನದಲ್ಲಿ “ಶಕ್ತಿ ಪತ್ರಿಕೆಯ ಸೇವೆಯನ್ನು ಪ್ರಶಂಸಿಸಿ ಸನ್ಮಾನಿಸಲಾಯಿತು. ಗಂಗಾಧರಯ್ಯ ಮೆಮೋರಿಯಲ್ ಹಾಲ್ ನಲ್ಲಿ ನಡೆದ ರಾಜ್ಯ ಸಮ್ಮೇಳನ ಹಾಗೂ ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಬೆಳ್ಳಿ ಮಹೋತ್ಸವ ಆಚರಣೆ ಸಂದರ್ಭ ಶಾಸಕ ಜ್ಯೋತಿ ಗಣೇಶ್ ಅವರು ಸಾಧಕರಿಗೆ ಗೌರವ ಸಲ್ಲಿಸಿದರು. “ಶಕ್ತಿ”ಯ ಪರವಾಗಿ ಸಂಪಾದಕ ಜಿ ಚಿದ್ವಿಲಾಸ್ ಸಮ್ಮೇಳನದಲ್ಲಿ ಸನ್ಮಾನ ಸ್ವೀಕರಿಸಿದರು. ಈ ಸಂದರ್ಭ ಎಫ್.ಕೆ.ಸಿ.ಸಿ.ಐ. ನ ಅಧ್ಯಕ್ಷೆ ಉಮಾರೆಡ್ಡಿ, ಹಿರಿಯ ಉಪಾಧ್ಯಕ್ಷ ಸಾಯಿ ರಾಮ್ ಪ್ರಸಾದ್,ಉಪಾಧ್ಯಕ್ಷ ಶಶಿಧರ್, ಮಾಜಿ ಅಧ್ಯಕ್ಷ ಶಿವಕುಮಾರ್, ತುಮಕೂರು ಚೇಂಬರ್ ಅಧ್ಯಕ್ಷ ಪಾಂಡುರಂಗ, ತುಮಕೂರು ಚೇಂಬರ್ ಪದಾಧಿಕಾರಿ ಹಾಗೂ ಎಫ್.ಕೆ.ಸಿ.ಸಿ.ಐ. ನ ಜಿಲ್ಲಾ ಸಮನ್ವಯ ಸಮಿತಿಯ ಅಧ್ಯಕ್ಷ ಸುಬ್ನನ್ ಹಿರೇಮಠ್ ಹಾಗೂ ಇತರರು ವೇದಿಕೆಯಲ್ಲಿದ್ದರು. ಇದೇ ಸಂದರ್ಭ ಎಲ್ಲಾ ಜಿಲ್ಲಾ ಚೇಂಬರ್ ಅಧ್ಯಕ್ಷರನ್ನು ಗೌರವಿಸಲಾಯಿತು. ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ…

Read More

ಮಡಿಕೇರಿ ಜೂ.8 NEWS DESK : ಸಮಾಜದ ಕಣ್ಣು ಹಾಗೂ ಕಿವಿಯಾಗಿರುವ ಪತ್ರಕರ್ತರು, ಸತ್ಯವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಸಮಾಜ ಸೇವಕ ಹಾಗೂ ಉದ್ಯಮಿ, ಲೀಡಿಂಗ್ ಎಡ್ಜ್ ಅಡ್ವಟೈಸಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕ ಎಡಿಕೇರಿ ಪ್ರಸನ್ನ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಕೊಡಗು ಪ್ರೆಸ್‍ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ದಿನವಿಡೀ ಸುದ್ದಿಯ ಹಿಂದಿರುವ ಪತ್ರಕರ್ತರು ವರ್ಷಕ್ಕೊಮ್ಮೆ ಸಂಭ್ರಮದಿಂದ ಕಳೆಯುವುದು ಶ್ಲಾಘನೀಯ ಎಂದ ಅವರು, ಸಮಾಜದ ಕಣ್ಣು ಹಾಗೂ ಕಿವಿಯಾಗಿರುವ ಪತ್ರಕರ್ತರು, ಸತ್ಯವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಾರೆ. ಜತೆಗೆ ಮಾಧ್ಯಮ ಸ್ಪಂದನದ ಮೂಲಕ ಸಮಾಜದ ಕಣ್ಣೀರು ಒರೆಸುವ ಪತ್ರಕರ್ತರ ಸೇವೆ ಶ್ಲಾಘನೀಯ ಎಂದು ಪ್ರಸನ್ನ ಹೇಳಿದರು. ನಾವು ಮಾಡುವ ಸಮಾಜ ಸೇವೆಯನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ನಿರಂತರ ಮಾಡುತ್ತಲೇ ಇರಬೇಕು ಎಂದ ಅವರು, ನಾವು ಮಾಡುವ ಸೇವೆಯನ್ನು ದೇವರು ಗಮನಿಸುತ್ತಲೇ ಇರುತ್ತಾನೆ. ಒಂದಲ್ಲ ಒಂದು ದಿನ ನಮ್ಮ ಸೇವೆಗೆ ಪ್ರತಿಫಲ ಸಿಕ್ಕೇ…

Read More

ಮಡಿಕೇರಿ ಜೂ.8 NEWS DESK : ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆ ಬೆಳೆಸಿಕೊಂಡು ಸಾಹಿತ್ಯಾಸಕ್ತರಾಗಬೇಕು ಎಂದು ಭಾರತ ಸರ್ಕಾರದ ದಕ್ಷಿಣ ವಲಯ ಸಾಂಸ್ಕೃತಿಕ ನಿರ್ದೇಶಕರಾದ ಕೆ.ಕೆ.ಗೋಪಾಲಕೃಷ್ಣ ಅವರು ಕರೆ ನೀಡಿದರು. ಕೇಂದ್ರ ಸಂಸ್ಕೃತಿ ಸಚಿವಾಲಯ, ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ, ತಂಜಾವೂರು ಹಾಗೂ ಕುಶಾಲನಗರ ದಕ್ಷಿಣ ಸಿರಿ ಸ್ನೇಹ ಬಳಗದ ವತಿಯಿಂದ ಕೊಡ್ಲಿಪೇಟೆಯ ಎಸ್‍ಜಿಎಸ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ‘ಮಾನ್ಸೂನ್ ಸಾಂಸ್ಕøತಿಕ ಉತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಸಂಸ್ಕೃತಿ ಸನಾತನ ಸಂಸ್ಕೃತಿ ಹೊಂದಿದ್ದು, ಸಮಾನತೆ, ಭಾತೃತ್ವ, ಏಕತೆ ಹೊಂದಿದೆ. ವಿಶ್ವದಲ್ಲಿಯೇ ಭಾರತೀಯ ಸಂಸ್ಕøತಿಗೆ ಹೆಚ್ಚಿನ ಸ್ಥಾನಮಾನ ಇದೆ ಎಂದರು. ಭಾರತ ಸರ್ಕಾರದ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ ತಂಜಾವೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ದಕ್ಷಿಣ ರಾಜ್ಯಗಳಲ್ಲಿ ಆಯಾಯ ಜಿಲ್ಲೆ, ರಾಜ್ಯಕ್ಕೆ ಸಂಬಂಧಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು. ಅದೇ ರೀತಿ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಕಲಾವಿದರುಗಳಿಗೆ ಹಾಗೂ ಅಕ್ಕಪಕ್ಕದ ಜಿಲ್ಲೆಯ ಕಲಾವಿದರು…

Read More

ಮಡಿಕೇರಿ ಜೂ.8 NEWS DESK : ಎಚ್‍ಪಿವಿ ವೈರಸ್ ಅಂದರೆ ಹ್ಯೂಮನ್ ಪ್ಯಾಪಿಲೋಮ ವೈರಸ್ ಪ್ಯಾಪಿಲೋಮವಿರಿಡೆ ಎಂಬ ವೈರಸ್ ಜಾತಿಗೆ ಸೇರಿದ್ದು, ಇದರಲ್ಲಿ ಒಟ್ಟು 200 ಕ್ಕೂ ಹೆಚ್ಚು ಪ್ರಕಾರಗಳು ಇರುತ್ತದೆ. ಎಚ್‍ಪಿವಿ 16 ಮತ್ತು ಎಚ್‍ಪಿವಿ 18 ವೈರಸ್ ಇದು ಗರ್ಭಕಂಠದ ಕ್ಯಾನ್ಸರ್‍ಗೆ ಮೂಲ ಕಾರಣವಾಗಿರುತ್ತದೆ. ಇದನ್ನು 2030 ಒಳಗೆ ನಿರ್ಮೂಲನೆ ಮಾಡಲು ಜಾಗತಿಕ ಕಾರ್ಯಕ್ರಮ ರೂಪಿಸಲಾಗಿದೆ. ಇದು ಸುಮಾರು 35 ವರ್ಷದಿಂದ 45 ವರ್ಷದ ಒಳಗಿನವರಲ್ಲಿ ಹೆಚ್ಚು ಕಂಡು ಬರುತ್ತದೆ. ಭಾರತದಲ್ಲಿ ಮಹಿಳೆಯರಲ್ಲಿ ಸಂಭವಿಸುವ ಕ್ಯಾನ್ಸರ್ ಪ್ರಕರಣಗಳಲ್ಲಿ ಗರ್ಭಕಂಠ ಕ್ಯಾನ್ಸರ್ ಎರಡನೇ ಪ್ರಮುಖ ಕ್ಯಾನ್ಸರ್ ಆಗಿರುತ್ತದೆ. ವಯಸ್ಸಿನ ಪ್ರಮಾಣೀಕೃತ ಅಂದಾಜುಗಳು ಗರ್ಭಕಂಠದ ಕ್ಯಾನ್ಸರ್(2022) ಇವುಗಳು: ಘಟನೆ 1 ಲಕ್ಷ ಮಹಿಳೆಯರಿಗೆ ವರ್ಷಕ್ಕೆ 11.6. ಮರಣ ಪ್ರಮಾಣ 1 ಲಕ್ಷ ಮಹಿಳೆಯರಿಗೆ ವರ್ಷಕ್ಕೆ 5.1. ಬಾರತ ದೇಶದಲ್ಲಿ 2022 ರಲ್ಲಿ, ಒಟ್ಟು 79,103 ಹೊಸ ಪ್ರಕರಣಗಳು ಮತ್ತು 34,805 ಸಾವುಗಳು ಗರ್ಭಕಂಠದ ಕ್ಯಾನ್ಸರ್ ನಿಂದ ಸಂಭವಿಸಿವೆ ಎಂದು ವರದಿಯಾಗಿದೆ. ಎಚ್‍ಪಿವಿ…

Read More

ವಿರಾಜಪೇಟೆ ಜೂ.8 NEWS DESK : ಅಮೇರಿಕಾದ ಟೆಕ್ಸಾಸ್ ಫ್ರಿಸ್ಕೊ ಹಾಕಿ ಅಸೋಸಿಯೇಷನ್‍ನ ಸ್ಪರ್ಧಾತ್ಮಕ ತಂಡಗಳಿಗೆ ಕೊಡಗಿನ ಇಬ್ಬರು ಸಹೋದರರು ಆಯ್ಕೆಯಾಗುವ ಮೂಲಕ ಅಮೇರಿಕನ್ ಐಸ್ ಹಾಕಿಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಮೇಯನ್ ಮಾಚಯ್ಯ ಮೇರಿಯಂಡ(15) ಅವರನ್ನು ವರ್ಸಿಟಿ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಅವರ ಕಿರಿಯ ಸಹೋದರ ಕ್ರಿಶ್ ಕಾರಿಯಪ್ಪ ಮೇರಿಯಂಡ (13). 2026ರ ಬೇಸಿಗೆ ಋತುವಿಗಾಗಿ ಜೂನಿಯರ್ ವಾರ್ಸಿಟಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರ ಈ ಸಾಧನೆಯು ಕರ್ನಾಟಕದ ಕುಟುಂಬಸ್ಥರು, ಸ್ನೇಹಿತರು ಮತ್ತು ಹಿತೈಷಿಗಳಲ್ಲಿ ಹೆಮ್ಮೆ ತಂದಿದೆ. ಐಸ್ ಹಾಕಿ ಒಂದು ಅಸಮಾನ್ಯ ಕ್ರೀಡೆಯಾಗಿದ್ದು, ಕೊಡಗಿನ ಈ ಸಹೋದರರು ತಮ್ಮ ಪರಿಶ್ರಮ ಹಾಗೂ ತರಬೇತಿಯಿಂದಾಗಿ ಉತ್ತರ ಅಮೇರಿಕಾದಲ್ಲಿ ಬಹು ಬೇಡಿಕೆ ಇರುವ ತಂಡಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಫ್ರಿಸ್ಕೊದ ಇಂಡಿಪೆಂಡೆನ್ಸ್ ಸ್ಕೂಲ್‍ನಲ್ಲಿ 10ನೇ ತರಗತಿಯ ವಿದ್ಯಾರ್ಥಿಯಾಗಿರುವ ಮೇಯನ್ ಅಮೇರಿಕನ್ ಐಸ್ ಹಾಕಿಯಲ್ಲಿ ಉತ್ತಮ ಪ್ರದರ್ಶನದ ನಂತರ ವಾರ್ಸಿಟಿ ತಂಡಕ್ಕೆ ಬಡ್ತಿ ಪಡೆದಿದ್ದಾರೆ. ಇತ್ತೀಚೆಗೆ ನೆಲ್ಸನ್ ಮಿಡಲ್ ಸ್ಕೂಲ್‍ನಲ್ಲಿ…

Read More

ವಿರಾಜಪೇಟೆ ಜೂ.8 NEWS DESK : ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ವತಿಯಿಂದ ಬಸವ ಜಯಂತಿ ಅಂಗವಾಗಿ ಬಸವ ಶ್ರೀ ಕಾಯಕ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಾಂಸ್ಕೃತಿಕ ಉತ್ಸವ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆಯಿತು. ಚಲನಚಿತ್ರ ನಟರಾದ ಅನಿರುದ್ದ ಜತಕರ್, ಪೋಲಿಸ್ ಮಹಾನಿರ್ದೇಶಕರು, ಮತ್ತು ಆಯುಕ್ತರಾಗಿದ್ದ ನಿವೃತ್ತ ಶಂಕರ ಬಿದರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ದಾವಣಗೆರೆಯ ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ಮಾಮಿಜಿಯವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾವಿತ್ರಿಬಾಯಿ ಫುಲೆ ಸಂಘಟನೆಯ ರಾಜ್ರ್ಯಾಧ್ಯಕ್ಷ ಧಾರವಾಡದ ಲತಾ ಮುಳ್ಳುರು, ಸಮಾಜ ಸೇವಕರಾದ ಪರಮಾನಂದ ಬಸಪ್ಪ ಸನ್ನಟ್ಟಿ, ಸುಧಾಕರ್ ಎಸ್ ಜಡಗಿ, ಸಾದಿಕ್, ಷರೀಪ್, ಆರೀಫ ಬೀರೂರು, ಇನ್ನೂ ಅನೇಕ ಗಣ್ಯರು ಭಾಗವಹಿಸಿದ್ದರು. ನಾಟ್ಯ ಮಯೂರಿ ನೃತ್ಯ ಟ್ರಷ್ಟಿನ ಸಂಸ್ಥಾಪಕರಾದ ವಿದುಷಿ ಪ್ರೇಮಾಂಜಲಿ ಆಚಾರ್ಯ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಜ್ಯ ವಿವಿಧ ಕಡೆಗಳಿಂದ ಆಗಮಿಸಿದ ನೃತ್ಯ ಸಂಸ್ಥೆಗಳ ವಿದ್ಯಾರ್ಥಿಗಳು ಉತ್ತಮ ನೃತ್ಯ ಪ್ರದರ್ಶನ ನೀಡಿದರು.…

Read More

ಮಡಿಕೇರಿ ಜೂ.8 NEWS DESK : ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಜೂ.13 ರಂದು ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮುದಾಯದ ವಧು- ವರರ ಸಮಾವೇಶ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಚೊಕ್ಕಾಡಿ ಎನ್.ಅಪ್ಪಯ್ಯ ಅವರು ಶನಿವಾರ ಬೆಳಿಗ್ಗೆ 10 ಗಂಟೆಗೆ ಮಡಿಕೇರಿಯ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಸಮಾವೇಶ ನಡೆಯಲಿದ್ದು, 9.30ಕ್ಕೆ ವಧು- ವರರ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದರು. ನೋಂದಣಿ ಶುಲ್ಕ ರೂ.500 ಪಾವತಿಸಬೇಕು, ವಧು- ವರರು ಕಡ್ಡಾಯವಾಗಿ ಭಾಗವಹಿಸಬೇಕು, ವಧುವಿಗೆ 18 ಹಾಗೂ ವರನಿಗೆ 21 ವರ್ಷವಾಗಿರಬೇಕು, ಪೋಸ್ಟ್ ಕಾರ್ಡ್ ಅಳತೆಯ ಫೋಟೋ, ಜಾತಕ, ಆಧಾರ್ ಕಾರ್ಡ್, ವಿದ್ಯಾರ್ಹತೆ, ಉದ್ಯೋಗ ಮತ್ತಿತರ ಮಾಹಿತಿ ನೀಡಬೇಕು. ಈ ಸಮಾವೇಶದಲ್ಲಿ ವಿಶೇಷ ಚೇತನರು, ವಿದುರ, ವಿಧವೆಯರು, ಮರು ವಿವಾಹ ಬಯಸುವವರು, ವಿಚ್ಛೇದಿತರು ಭಾಗವಹಿಸಬಹುದು. ವಿದೇಶಗಳಲ್ಲಿ ಅಥವಾ ಹೊರ ರಾಜ್ಯಗಳಲ್ಲಿ ನೆಲೆಸಿರುವ ಜನಾಂಗದ ಬಂಧುಗಳು ಪಾಲ್ಗೊಳ್ಳಬಹುದು ಎಂದು ತಿಳಿಸಿದರು. ಹೆಚ್ಚಿನ…

Read More

ಮಡಿಕೇರಿ ಜೂ.8 NEWS DESK : ಕೊಡಗು ಜಿಲ್ಲಾ ವೀರಶೈವ ಲಿಂಗಾಯತ ಸಮಾಜ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಯುವ ಘಟಕದ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ, ಸಿದ್ಧಗಂಗಾ ಮಠದ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳ ಜಯಂತಿ, ಜಗದ್ಗುರು ರೇಣುಕಾಚಾರ್ಯ ಜಯಂತಿ 250 ವರ್ಷ ಕೊಡಗನ್ನು ಆಳಿದ ಹಾಲೇರಿ ಅರಸರ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಹೆಮ್ಮನೆ ಪುಟ್ಟಬಸಪ್ಪ(ಕಲ್ಯಾಣಸ್ವಾಮಿ) ಅವರ ಸಂಸ್ಕರಣೋತ್ಸವ ಕಾರ್ಯಕ್ರಮ ಜೂ.13 ರಂದು ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಪೆÇೀಕ್ಷೇತ್ರ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮಿಗಳು ಶನಿವಾರ ಶನಿವಾರಸಂತೆಯ ಗುಡುಗಳಲೆ ಜಯದೇವ ಜಾತ್ರಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಬೆಳಿಗ್ಗೆ 8 ಗಂಟೆಗೆ ಮದ್ಯಪೇಟೆ ವಿಶ್ವೇಶ್ವರ ದೇವಾಲಯದಿಂದ ಗುಡುಗಳಲೆ ಜಾತ್ರಾ ಮೈದಾನದವರೆಗೆ ಶ್ರೀ ರೇಣುಕಾಚಾರ್ಯರ, ಜಗಜ್ಯೋತಿ ಬಸವೇಶ್ವರರ, ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳವರ, ಮನೆಹಳ್ಳಿ ಮಠದ ಅನಘ ನಿರಂಜನ ಶ್ರೀ ಗುರು ಸಿದ್ಧವೀರೇಶ್ವರ ಸ್ವಾಮಿಗಳ ಪ್ರಸ್ತುತ ಕೊಡಗಿನ ವೀರಶೈವ ಲಿಂಗಾಯತ ಮಠಗಳ…

Read More