ಲೇಖಕ: admin

ಮಡಿಕೇರಿ ಮಾ.18 NEWS DESK : ಕೊಡಗಿನ ಪುರಾತನ ದೇವಾಲಯಗಳಲ್ಲೊಂದಾದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ 14 ದೇವಾನು ದೇವತೆಗಳ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಶ್ರೀ ಮುತ್ತಪ್ಪ ಜಾತ್ರೆಯು ಏ.3 ರಿಂದ ಏ.6ರ ವರೆಗೆ ನಡೆಯಲಿದೆ. ದೇವಾಲಯದ ತಂತ್ರಿಗಳಾದ ಕೇರಳದ ಪಯ್ಯನ್ನೂರಿನ ಬ್ರಹ್ಮಶ್ರೀ ಕುನ್ನತ್ತಿಲ್ಲತ್ತ್ ಮುರಳಿಕೃಷ್ಣನ್ ನಂಬೂದರಿ ಹಾಗೂ ಪರಿಶಿನಿಕಡವು ಶ್ರೀ ಮುತ್ತಪ್ಪ ಕ್ಷೇತ್ರದ ಆಚಾರಪಟ್ಟ ಮಡೆಯಚ್ಚನ್ ಬ್ಲಾತೂರ್ ಚಂದ್ರನ್ ಮಡೆಯಚ್ಚನ್ ನಾಲ್ಕುದಿನಗಳ ಕಾಲ ವಿವಿಧ ಪೂಜಾ ವಿಧಿವಿಧಾನಗಳು ಜರುಗಲಿದೆ. ಏ.3 ರಂದು ಸಂಜೆ 6.30 ರಿಂದ ಪ್ರಾರ್ಥನೆ, ಪುಣ್ಯಾಹ, ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಕಲಶ ಪೂಜೆ, ವಾಸ್ತು ಪೂಜೆ, ವಾಸ್ತು ಕಲಶಾಭಿಷೇಕ, ವಾಸ್ತು ಬಲಿ, ವಾಸ್ತು ಪುಣ್ಯಾಹ, ಮಹಾ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಕಾರ್ಯಕ್ರಮದ ಪ್ರಯುಕ್ತ ಏ.4 ರಂದು ಬೆಳಿಗ್ಗೆ 7 ಗಂಟೆಯಿಂದ ಗಣಪತಿ ಹೋಮ, 9 ಗಂಟೆಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಅಷ್ಟಾಭಿಷೇಕ,…

Read More

ಮಡಿಕೇರಿ ಮಾ.18 NEWS DESK : ಇದೇ ಮಾ.3 ರಂದು ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಸಂದರ್ಭ ರೋಟರಿ ಮಡಿಕೇರಿ ಸಂಸ್ಥೆಯು ಮಡಿಕೇರಿಯ 31 ಕೇಂದ್ರಗಳಲ್ಲಿ 160 ಪೋಲಿಯೋ ಸ್ವಯಂಸೇವಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುವ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆಯಿತು. ಜಿಲ್ಲಾ ಆರೋಗ್ಯ ಇಲಾಖೆ ಮಾಡಿದ ಮನವಿಗೆ ತಕ್ಷಣ ಸ್ಪಂದಿಸಿದ ರೋಟರಿ ಅಧ್ಯಕ್ಷ ರೋ.ಎನ್.ಡಿ.ಅಚ್ಚಯ್ಯ ಅವರು ಆರೋಗ್ಯ ಇಲಾಖೆಯ ಸಿಬ್ಬಂದಿ ದಿವ್ಯ ಅವರ ನೆರವಿನೊಂದಿಗೆ ಊಟವನ್ನು ವಿತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 31 ಕೇಂದ್ರಗಳಿಗೆ ಆಹಾರ ಪೂರೈಸಲು ಸಾರಿಗೆ ವ್ಯವಸ್ಥೆ ಸಹಿತ ಸಹಕಾರ ನೀಡಿದ ಹೊಟೇಲ್ ಉಡುಪಿ ವೆಜ್ ನ ಮಾಲೀಕ ಶಂಕರ ಪೂಜಾರಿ ಅವರಿಗೆ ಅಚ್ಚಯ್ಯ ಅವರು ಧನ್ಯವಾದಗಳನ್ನು ಅರ್ಪಿಸಿದರು. ವಿಶ್ವ ವ್ಯಾಪಿ ಪೋಲಿಯೋ ನಿರ್ಮೂಲನೆಗೆ ರೋಟರಿ ಸಂಸ್ಥೆ ದೊಡ್ಡ ಮಟ್ಟದ ಶ್ರಮದಾನವನ್ನು ಮಾಡಿದ್ದು, ಸಂಸ್ಥೆಯ ಸಾಮಾಜಿಕ ಕಳಕಳಿ ಇನ್ನು ಮುಂದೆಯೂ ಮುಂದುವರಿಯಲಿದೆ ಎಂದು ಹೇಳಿದರು.

Read More

ಪುತ್ತೂರು ಮಾ.18 NEWS DESK : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಮೇದಿನಿ ಬಿ ಮರಾಠೆ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ ಬಾಲ್‌ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಮಾರ್ಚ್ 21ರಿಂದ 24ರ ವರೆಗೆ ಚೆನ್ನೈನ ಅಣ್ಣಾ ಯುನಿವರ್ಸಿಟಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ತಂಡವನ್ನು ಇವರು ಪ್ರತಿನಿಧಿಸಲಿದ್ದಾರೆ. ಬೆಂಗಳೂರಿನ ಸಿಎಂಆರ್‌ಐಟಿ ಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಉನ್ನತ ಸಾಧನೆಯನ್ನು ಪ್ರದರ್ಶಿಸಿ ಇವರು ತಂಡಕ್ಕೆ ಆಯ್ಕೆಗೊಂಡಿದ್ದಾರೆ. ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಮಾರ್ಗದರ್ಶನವನ್ನು ನೀಡಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ತಿಳಿಸಿದ್ದಾರೆ.

Read More

ಮಡಿಕೇರಿ ಮಾ.18 NEWS DESK : ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ನಕ್ಸಲರು ಸಂಚರಿಸಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಸುಬ್ರಹ್ಮಣ್ಯ ಸಮೀಪದ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಡಮಕಲ್ಲು ಬಳಿಯ ಕೂಜಿಮಲೆಯಲ್ಲಿ ನಾಲ್ವರಿಂದ ಐದು ಮಂದಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಕೂಜಿಮಲೆ ಕಡಮಕಲ್ಲು ಭಾಗದ ಅಂಗಡಿಯೊಂದರಲ್ಲಿ ಅಪರಿಚಿತರು ದಿನಸಿ ಸಾಮಾಗ್ರಿ ಖರೀದಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಗುಂಪಿನಲ್ಲಿ ಇಬ್ಬರು ಮಹಿಳೆಯರೂ ಇದ್ದಾರೆ. ಶನಿವಾರ ಸಂಜೆ ನಡೆದ ಈ ಪ್ರಕರಣ ಹಲವು ಸಂಶಯಗಳನ್ನು ಹುಟ್ಟು ಹಾಕಿರುವ ಹಿನ್ನೆಲೆ ನಕ್ಸಲರ ಸಂಚಾರದ ಕುರಿತು ಶಂಕೆ ವ್ಯಕ್ತವಾಗಿದೆ. ಕೂಜಿಮಲೆ ಕಡಮಕಲ್ಲು ಬೆಟ್ಟ ಪ್ರದೇಶದಿಂದ ಕೂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಪ್ರದೇಶ ವ್ಯಾಪಿಸಿದೆ. ಕಾರ್ಕಳದಿಂದ ಬಂದಿರುವ ನಕ್ಸಲ್ ನಿಗ್ರಹ ದಳ ಕೂಂಬಿಂಗ್ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. 2012 ರಲ್ಲಿ ಮಡಿಕೇರಿ ತಾಲ್ಲೂಕಿನ ಕಾಲೂರು ಗ್ರಾಮದಲ್ಲಿ ಮತ್ತು 2018 ರಲ್ಲಿ ಸಂಪಾಜೆಯ ಗುಡ್ಡೆಗದ್ದೆಯಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರು. ಇದೀಗ ಕೂಜಿಮಲೆ ಕಡಮಕಲ್ಲು…

Read More

ನಾಪೋಕ್ಲು ಮಾ.18 NEWS DESK : ಮಡಿಕೇರಿ-ಕರಿಕೆ ನಡುವೆ ಹೊಸ (ಕೆಎಸ್ಆರ್ ಟಿ ಸಿ) ಸರಕಾರಿ ಬಸ್ ಸಂಚಾರ ಆರಂಭಿಸಿದೆ. ಶಾಸಕ ಎ.ಎಸ್.ಪೊನ್ನಣ್ಣ ಕರಿಕೆಗೆ ಆಗಮಿಸಿದ್ದ ಸಂದರ್ಭ ಬಸ್ ಸೌಲಭ್ಯ ಬೇಕೆಂಬ ಕೋರಿಕೆಯನ್ನು ಪರಿಗಣಿಸಿ ತಕ್ಷಣವೇ ಬಸ್ ಸಂಚಾರ ಆರಂಭಿಸಲು ಆದೇಶಿಸಿದ್ದಾರೆ. ಪ್ರತಿದಿನ ಮಡಿಕೇರಿಯಿಂದ ಬೆಳಿಗ್ಗೆ 7.30ಕ್ಕೆ ಹೊರಡುವ ಬಸ್ 10.15 ಕ್ಕೆ ಕರಿಕೆ ತಲುಪಲಿದೆ.10.30 ಕ್ಕೆ ಕರಿಕೆಯಿಂದ ಹೊರಟು 1.15ಕ್ಕೆ ಮಡಿಕೇರಿ ತಲುಪಲಿದೆ. ಮಧ್ಯಾಹ್ನ 1 ಗಂಟೆಗೆ ಮಡಿಕೇರಿಯಿಂದ ಹೊರಟು 3.45 ಕ್ಕೆ ಕರಿಕೆ ತಲುಪಲಿದೆ. ಸಂಜೆ 4 ಗಂಟೆಗೆ ಕರಿಕೆಯಿಂದ ಹೊರಟು ಸಂಜೆ 6.45ಕ್ಕೆ ಮಡಿಕೇರಿ ತಲುಪಲಿದೆ. ಈಗಾಗಲೇ ಬಸ್ ಸಂಚಾರ ಪ್ರಾರಂಭಗೊಂಡಿದ್ದು, ಚಾಲಕ -ನಿರ್ವಾಹಕರನ್ನು ಎಳ್ಳುಕೊಚ್ಚಿಯಲ್ಲಿ ಗ್ರಾಮ ಪಂಚಾಯಿತಿ ಕಟ್ಟಡದ ಸಮೀಪ ಗ್ರಾಮಸ್ಥರು ಅಭಿನಂದಿಸಿ ಸ್ವಾಗತಿಸಿದರು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷ ಎನ್.ಬಾಲಚಂದ್ರನ್ ನಾಯರ್, ಮಡಿಕೇರಿ ಡಿಪೋ ವ್ಯವಸ್ಥಾಪಕ ಶ್ರೀನಿವಾಸ ಮೂರ್ತಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪಿ.ಪಿ.ಗಣಪತಿ, ರಾಮಾನಾಥ ಬೇಕಲ್, ಹರಿಪ್ರಸಾದ್ ಬೇಕಲ್, ಸುಬ್ರಮಣಿ ಇತರರು ಹಾಜರಿದ್ದರು.…

Read More

ನಾಪೋಕ್ಲು ಮಾ.18 : ಜಿಲ್ಲೆಯ ಖಾಸಗಿ ಅನುದಾನಿತ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖ ಕೊಳ್ಳುತ್ತಿದ್ದು ಮುಚ್ಚುವ ಹಂತಕ್ಕೆ ಬಂದಿವೆ. ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟಿದ್ದರೂ ಆಡಳಿತ ಮಂಡಳಿ ಶಾಲೆಯನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ. ಶಾಲೆಯನ್ನು ಮುನ್ನಡೆಸಲು ಸಾಧ್ಯವಾಗದಿದ್ದಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು ತಕ್ಷಣ ರಾಜೀನಾಮೆ ಕೊಡಲಿ ಎಂದು ಸ್ಥಳೀಯರಾದ ನೆರವಂಡ ಉಮೇಶ್ ಒತ್ತಾಯಿಸಿದರು. ಗ್ರಾಮದ ನೇತಾಜಿ ಪ್ರೌಢಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹಳೆ ವಿದ್ಯಾರ್ಥಿಗಳ ಸಂಘದ ಸಭೆಯಲ್ಲಿ ಅವರು ಮಾತನಾಡಿದರು. ಬಲಮಾವಟಿ ಗ್ರಾಮದಲ್ಲಿರುವ ನೇತಾಜಿ ಕೇಂದ್ರ ವಿದ್ಯಾಸಂಸ್ಥೆಯ ಜಾಗವನ್ನು ಮತ್ತೊಂದು ಖಾಸಗಿ ಸಂಸ್ಥೆಗೆ ಪರಭಾರೆ ಮಾಡಲು ಗುಟ್ಟಾಗಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು ನೇತಾಜಿ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರು ಯಾರ ಗಮನಕ್ಕೂ ತಾರದೆ ಏಕಪಕ್ಷಿಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಶಾಲೆಯನ್ನು ಮುಚ್ಚಲು ವ್ಯವಸ್ಥಿತ ಸಂಚು ರೂಪಿಸಿದ್ದಾರೆ ಎಂದು ಪ್ರಶ್ನಿಸಿದರು. ಶಾಲೆಯ ಹಳೆ ಕಟ್ಟಡ ದುಸ್ಥಿತಿಯಲ್ಲಿದೆ. ಈ ಕಟ್ಟಡದಲ್ಲಿ 25 ಕಾರ್ಮಿಕರಿಗೆ ತoಗಲು ಶಾಲಾ ಆಡಳಿತ ಮಂಡಳಿ ಅವಕಾಶ ನೀಡಿದೆ.…

Read More

ಮಡಿಕೇರಿ ಮಾ.18 NEWS DESK : ಕರ್ನಾಟಕ  ಅರೆ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕವಾದ ಸದಾನಂದ ಮಾವಜಿ  ಮತ್ತು ಸುಳ್ಯ ನಗರ ಪಂಚಾಯತ್ ಸದಸ್ಯರಾಗಿ ನೇಮಕವಾದ ಸಿದ್ದೀಕ್ ಕೊಕೊ, ರಾಜು ಪಂಡಿತ್ ಭಾಸ್ಕರ್ ಪೂಜಾರಿ ಅವರನ್ನು ವಿಧಾನ ಸಭಾ ಸ್ಪೀಕರ್ ಯು.ಟಿ ಖಾದರ್ ಕಾಸರಗೋಡಿನ ಬೇಕಲದಲ್ಲಿ ಅಭಿನಂದಿಸಿದರು. ಈ ಸಂದರ್ಭ  ಕೆಪಿಸಿಸಿ ಮುಖ್ಯ ವಕ್ತಾರ ಟಿ.ಎಂ.ಶಾಹಿದ್ ತೆಕ್ಕಿಲ್, ಕೆ.ಟಿ.ವಿಶ್ವನಾಥ್  ಸೇರಿದಂತೆ ಮತ್ತಿತರರು ಹಾಜರಿದ್ದರು.

Read More

ಮಡಿಕೇರಿ ಮಾ.17 NEWS DESK : ಪ್ರಜಾಪ್ರಭುತ್ವ ಬಲಪಡಿಸಲು 18 ವರ್ಷ ಪೂರ್ಣಗೊಂಡ ಎಲ್ಲರೂ ಮತದಾನ ಮಾಡಬೇಕು. ಸಂವಿಧಾನ ಆಶಯಗಳಿಗೆ ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಕರೆ ನೀಡಿದ್ದಾರೆ. ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮತದಾನದ ಮಹತ್ವ ಜಾಗೃತಿ ಅಭಿಯಾನ ಹಾಗೂ ಸಮಾಜ ಕಲ್ಯಾಣ ಇಲಾಖಾ ನೌಕರರ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶ. ನಿತ್ಯ ಒತ್ತಡದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾರೆ. ಆದ್ದರಿಂದ ಕ್ರೀಡಾಕೂಟ ಸಂದರ್ಭದಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುತ್ತಿರುವುದು ಮೆಚ್ಚುವಂತಹದ್ದು ಎಂದರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಪಾತ್ರ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಅರ್ಹರೆಲ್ಲರೂ ತಪ್ಪದೆ ಮತಹಕ್ಕು ಚಲಾಯಿಸಬೇಕು ಎಂದರು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಮಾತನಾಡಿ, ಸ್ವೀಪ್ ಕಾರ್ಯಕ್ರಮದಡಿ ಕ್ರೀಡಾಕೂಟ ಆಯೋಜಿಸಿ ಮತದಾನ ಜಾಗೃತಿ ಮೂಡಿಸುವುದರೊಂದಿಗೆ ಮತದಾನಕ್ಕೆ ಎಲ್ಲರನ್ನು…

Read More

ಮಡಿಕೇರಿ ಮಾ.17 NEWS DESK : ಇದೇ ಮಾ.25 ರಿಂದ ಆರಂಭವಾಗಲಿರುವ 10ನೇ ತರಗತಿ ವಾರ್ಷಿಕ ಪರೀಕ್ಷೆಯನ್ನು ಎದುರಿಸಲು ಶಿಕ್ಷಕರು ಹಾಗೂ ಪೋಷಕರು ಮಕ್ಕಳಲ್ಲಿ ಸಕಾರಾತ್ಮಕ ಭಾವನೆ ಬೆಳೆಸಿ ಆತ್ಮಸ್ಥೈರ್ಯ ತುಂಬಬೇಕು ಎಂದು ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಭಾಗ್ಯಮ್ಮ ಸಲಹೆ ನೀಡಿದ್ದಾರೆ. ಶಾಲಾ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ವತಿಯಿಂದ 10ನೇ ತರಗತಿ ವಾರ್ಷಿಕ ಪರೀಕ್ಷೆಯ ಸಿದ್ಧತೆ ಕುರಿತು ಕುಶಾಲನಗರದ ಫಾತಿಮ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ ನಡೆಯಿತು. ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿಯಲ್ಲಿ ಪರೀಕ್ಷೆಯ ಬಗ್ಗೆ ಭೀತಿ ಮೂಡಿಸದೆ ಆತ್ಮವಿಶ್ವಾಸ ಬೆಳೆಸಬೇಕು ಎಂದರು. ಜಿಲ್ಲೆಯಲ್ಲಿ 10ನೇ ತರಗತಿ ಪರೀಕ್ಷಾ ಪಲಿತಾಂಶದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎಲ್ಲಾ ಪ್ರೌಢಶಾಲೆಗಳಲ್ಲಿ ಮಕ್ಕಳ ಉತ್ತಮ ಫಲಿತಾಂಶಕ್ಕೆ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ ಎಂದು ಭಾಗ್ಯಮ್ಮ ಹೇಳಿದರು. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯು…

Read More

ಸೋಮವಾರಪೇಟೆ ಮಾ.17 NEWS DESK : ಒಗ್ಗಟ್ಟಿನಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವೆಂದು ಕೋಡಿಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದರು. ಮಠದ ಆವರಣದಲ್ಲಿ ನಡೆದ ಕೊಡಗು ಮತ್ತು ಹಾಸನ ಮಠಾಧೀಶರ ಪರಿಷತ್ತಿನ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಇವತ್ತಿನ ಸನ್ನಿವೇಶದಲ್ಲಿ ಒಗ್ಗಟ್ಟು, ಪರಸ್ಪರ ಪ್ರೀತಿ ವಿಶ್ವಾಸ ಎನ್ನುವುದು ಅನಿವಾರ್ಯವಾಗಿದೆ. ಜನಸಾಮಾನ್ಯರು ಹಾಗೂ ಮಠ ಮಾನ್ಯಗಳ ನಡುವೆ ಉತ್ತಮ ಸಂಬಂಧ, ಸಾಮರಸ್ಯವಿದ್ದರೆ ಸಮಾಜ ನೆಮ್ಮದಿಯಿಂದ ಉತ್ತಮವಾಗಿರುತ್ತದೆ ಎಂದರು. ಹಿಂದಿನ ಕಾಲದಿಂದಲೂ ಸಮಾಜಕ್ಕೆ ವೀರಶೈವ ಲಿಂಗಾಯತ ಮಠಗಳ ಕೊಡುಗೆ ಬಹಳಷ್ಟಿದೆ, ಇದು ಮುಂದುವರೆಯಬೇಕು. ಇಂದು ಹಲವು ಮಠಗಳು, ಸ್ವಾಮೀಜಿಗಳು ಸಂಕಷ್ಟದಲ್ಲಿದ್ದಾರೆ. ಅದಕ್ಕಾಗಿ ಎಲ್ಲಾ  ಮಠಾಧೀಶರು ಸಂಘಟಿತರಾಗಬೇಕು, ಪರಸ್ಪರ ಸೌಹಾರ್ಧತೆಯಿಂದ ಇರಬೇಕು. ಆ ಮೂಲಕ ಮಠಗಳ ಆಸ್ತಿಗಳನ್ನು ರಕ್ಷಿಸಿಕೊಂಡು ಹೋಗಬೇಕು ಎಂದರು. ಸಭೆಯಲ್ಲಿ ಕೊಡಗು, ಹಾಸನ ಮಠದೀಶರ ಪರಿಷತ್ತು ರಚನೆ ಸಂಬಂಧ ಸುದೀರ್ಘ ಚರ್ಚೆ ನಡೆದು ಕೊಡಗು, ಹಾಸನ ವೀರಶೈವ ಲಿಂಗಾಯತ ಮಠಾದೀಶರ ನೂತನ ಆಡಳಿತ ಮಂಡಳಿ ರಚಿಸಲಾಯಿತು. ಗೌರವಾದ್ಯಕ್ಷರಾಗಿ ಕೋಡಿಮಠದ ಸ್ವಾಮೀಜಿ, ಅಧಕ್ಷರಾಗಿ ಅರಕಲಗೂಡು ದೊಡ್ಡ ಮಠದ ಶ್ರೀಮಲ್ಲಿಕಾರ್ಜುನ…

Read More