ಲೇಖಕ: admin

ಸೋಮವಾರಪೇಟೆ ಮಾ.17 NEWS DESK : ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿಯಲ್ಲಿ 5 ಕೋಟಿ ರೂ. ಅನುದಾನದಲ್ಲಿ ಪ್ರಾರಂಭಿಸಿದ ಕಾಮಗಾರಿಗಳು ನೆನಗುದಿಗೆ ಬಿದ್ದಿದ್ದು, ತಕ್ಷಣ ಕಾಮಗಾರಿ ಆರಂಭಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ರಾಜ್ಯ ಸರ್ಕಾರ ನಗರೋತ್ಥಾನ ಯೊಜನೆಯಡಿ ಅನುದಾನ ಒದಗಿಸಿದ್ದು, ಕಳೆದ ಒಂದೂವರೆ ವರ್ಷದ ಹಿಂದೆಯೇ ಅಂದಿನ ಶಾಸಕರು ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ, ಇಂದಿಗೂ ಕೆಲವು ಕಾಮಗಾರಿ ಸಮರ್ಪಕವಾಗಿ ಪೂರ್ಣಗೊಂಡಿಲ್ಲ ಎಂದು ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್  ಆರೋಪಿಸಿದ್ದಾರೆ. ಹಾಸನ ಜಿಲ್ಲೆಯ ಗುತ್ತಿಗೆದಾರರೊಬ್ಬರು ಈ ಕಾಮಗಾರಿಯ ಗುತ್ತಿಗೆ ಪಡೆದು ಸೋಮವಾರಪೇಟೆಯ ಗುತ್ತಿಗೆದಾರನಿಗೆ ತುಂಡು ಗುತ್ತಿಗೆ ನೀಡಿದ್ದಾರೆ. ಆದರೆ, ಇವರು ಕಾಮಗಾರಿಯನ್ನು ಮಾಡಿಲ್ಲ. ಕರ್ಕಳ್ಳಿ ಗ್ರಾಮದಲ್ಲಿ ಉದ್ಯಾನವನ ನಿರ್ಮಿಸುವ ನೆಪದಲ್ಲಿ ಕೆರೆಯೊಳಗೆ ತ್ಯಾಜ್ಯ ವಸ್ತುಗಳನ್ನು ತುಂಬಿ ದುರ್ವಾಸನೆ ಬರುವಂತೆ ಮಾಡಿದ್ದಾರೆ. ಕೆಲವೆಡೆ ಕಾಮಗಾರಿಗಾಗಿ ಭೂಮಿ ಅಗೆದು ಹಾಕಿ ವರ್ಷವಾಗುತ್ತಾ ಬಂದರೂ ಕೆಲಸ ಆರಂಭಿಸಿಲ್ಲ ಎಂದು ದೂರಿದ್ದಾರೆ. ಹಣ ವಿನಿಯೋಗವಾಗದೆ ಆರ್ಥಿಕ ವರ್ಷಾಂತ್ಯಕ್ಕೆ…

Read More

ಸುಂಟಿಕೊಪ್ಪ ಮಾ.17 NEWS DESK : ಬಾಲಕನೋರ್ವ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡ ಪರಿಣಾಮ ರೆಸಾರ್ಟ್ ವೊಂದರ ಕಾಂಪೌಂಡ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸುಂಟಿಕೊಪ್ಪ ಸಮೀಪದ ಹೇರೂರು ಎಂಬಲ್ಲಿ ಇಂದು ಸಂಜೆ ನಡೆದಿದೆ. 7ನೇ ಹೊಸಕೋಟೆ ಕಲ್ಲೂರು ಗ್ರಾಮದ ನಿವಾಸಿ ಅಬ್ಬಾಸ್ ಎಂಬುವವರ 15 ವರ್ಷದ ಪುತ್ರ ಅಲ್ಟೋ ಕಾರನ್ನು ಚಲಾಯಿಸಿಕೊಂಡು ಬಸವನಹಳ್ಳಿ ಮಾರ್ಗವಾಗಿ ಅತೀ ವೇಗದಿಂದ ರೆಸಾರ್ಟ್ ಬಳಿ ಧಾವಿಸಿ ಬಂದಿದ್ದಾನೆ ಎಂದು ಆರೋಪಿಸಲಾಗಿದೆ. ನಿಯಂತ್ರಣ ಕಳೆದುಕೊಂಡ ಕಾರು ರಸ್ತೆಯ ಇನ್ನೊಂದು ಬದಿಯಲ್ಲಿರುವ ರೆಸಾರ್ಟ್ ನ ವಾಹನ ಪಾರ್ಕಿಂಗ್ ಸ್ಥಳದಲ್ಲಿನ ಕಾಂಪೌಂಡ್ ಗೆ ಅಪ್ಪಳಿಸಿ ರಸ್ತೆಯಲ್ಲಿ ಮೂರು ಪಲ್ಟಿಯಾಗಿದೆ. ಈ ಸಂದರ್ಭ ಕಾಂಪೌಂಡ್ ಸಮೀಪ ಕರ್ತವ್ಯ ನಿರತರಾಗಿದ್ದ ಇಬ್ಬರು ಮಹಿಳಾ ಸಿಬ್ಬಂದಿಗಳಿಗೆ ಕಾರು ಡಿಕ್ಕಿಯಾಗಿದ್ದು, ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.  ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರಿನಲ್ಲಿದ್ದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ.

Read More

ಮಡಿಕೇರಿ ಮಾ.17 NEWS DESK : ಮಡಿಕೇರಿ ನಗರದ ಶರ್ಮ ಕಾಫಿ ವರ್ಕ್ಸ್ ನ ಮಾಲೀಕ, ಹೊಸ ಬಡಾವಣೆ ನಿವಾಸಿ ಶ್ರೀಧರ್ ಶರ್ಮ(60) ಅವರು ಇಂದು ಮೈಸೂರಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ಮೈಸೂರಿನಲ್ಲಿ ನಡೆಯಲಿದೆ ಎಂದು ಕುಟುಂಬ ವರ್ಗ ತಿಳಿಸಿದೆ. ಶ್ರೀಧರ್ ಶರ್ಮ ಅವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Read More

ಮಡಿಕೇರಿ ಮಾ.17 NEWS DESK : ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (DCC) ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ  (ಬಾಂಡ್ ಗಣಪತಿ), ಕೆ.ಎಸ್ ಪೂವಯ್ಯ, ಹೊಸೂರು ಕೆ ಸತೀಶ್ ಕುಮಾರ್, ಸತೀಶ್ ಎನ್ ಕಾಂಗಿರ, ರಮೇಶ್ ಹೆಚ್.ಎಂ, ಪೂಳಂಡ ಪಿ.ಪೆಮ್ಮಯ್ಯ, ಕೆ.ಬಿ.ಅರುಣ, ಹೆಚ್.ಕೆ.ಮಾದಪ್ಪ, ಎನ್.ಸಿ.ಶರತ್ ಶೇಖರ್, ಎನ್.ಎಮ್.ಉತ್ತಪ್ಪ, ಗುಮ್ಮಟ್ಟೀರ ಎಸ್.ಕಿಲನ್ ಗಣಪತಿ, ಶರವಣ ಕುಮಾರ್ ಟಿ.ಆರ್, ಜಲಜಾಕ್ಷಿ ವೈ.ಪಿ, ಆಡಳಿತ ಮಂಡಳಿ ನಿರ್ದೇಶಕರಾಗಿ ಗೆಲುವು ಸಾಧಿಸಿದ್ದಾರೆ.

Read More

ಮಡಿಕೇರಿ ಮಾ.17 NEWS DESK : ಮಡಿಕೇರಿ ನಗರದ ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ಪೂಜಾ ಕಾಂಪ್ಲೆಕ್ಸ್ ನ 3ನೇ ‌ಅಂತಸ್ತಿನಲ್ಲಿ ಇಂದು ಯುವ ಉದ್ಯಮಿ ರಾಜು ರಾವ್ ಹಾಗೂ ಬಾಡಿಬಿಲ್ಡರ್ ಗಣೇಶ್ ಪೂಜಾರಿ ಅವರ ಅತ್ಯಾಧುನಿಕ ‘ರಾಯಲ್ ಗೋಲ್ಡ್’ ಜಿಮ್ ಉದ್ಘಾಟನೆಗೊಂಡಿತು.

Read More

ಮಡಿಕೇರಿ ಮಾ.17 NEWS DESK : ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಹಳ್ಳಿ ಗ್ರಾಮ ಸಮೀಪ ತೆಪ್ಪದಕಂಡಿ ಎಂಬಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.NEWS DESK ಪಿರಿಯಾಪಟ್ಟಣ ತಾಲ್ಲೂಕು ದೊಡ್ಡಹೊಸೂರು ಗ್ರಾಮದ ನಿವಾಸಿ ಬಸವರಾಜು(37) ಬಂಧಿತ ಆರೋಪಿಯಾಗಿದ್ದು, 245 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯು ಮನೆಯ ಶೌಚಾಲಯದ ಹಿಂಭಾಗದಲ್ಲಿ ಮಣ್ಣಿನಡಿ ಬಚ್ಚಿಟ್ಟಿದ್ದ ಗಾಂಜಾವನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಘಟಕದಲ್ಲಿ ಮಾದಕ ದ್ರವ್ಯ ಪತ್ತೆ ಪರಿಣತಿ ಹೊಂದಿರುವ “ಕಾಪರ್” ಎಂಬ ಶ್ವಾನ ಯಶಸ್ವಿಯಾಗಿರುವುದು ವಿಶೇಷ.NEWS DESK ಸೋಮವಾರಪೇಟೆ ಉಪವಿಭಾಗದ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ವೃತ್ತದ ಸಿಪಿಐ ರಾಜೇಶ್.ಕೆ, ಪಿಎಸ್‌ಐ ಮೋಹನ್ ರಾಜು.ಪಿ ಹಾಗೂ ಸಿಬ್ಬಂದಿಗಳ ತನಿಖಾ ತಂಡ ಕಾರ್ಯಾಚರಣೆ ನಡೆಸಿತು.NEWS DESK ಶ್ವಾನ ಕಾಪರ್, ಕಾಪರ್ ನ ತರಬೇತುದಾರರಾದ ಮನಮೋಹನ್.ಬಿ.ಪಿ ಹಾಗೂ ತನಿಖಾ ತಂಡದ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.NEWS DESK

Read More

ಮಡಿಕೇರಿ ಮಾ.16 NEWS DESK : ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜವಂಶಸ್ಥ ಯದುವೀರ್ ಅವರು AC ROOM ನಿಂದ ಬೀದಿ ಬದಿಯ ಎಳನೀರು ವರೆಗೆ ಬಂದಾಗಿದೆ. ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈ ತಪ್ಪಿತು ಎಂದು ಬೇಸರಗೊಂಡಿದ್ದ ಕಾರ್ಯಕರ್ತರು ಕೂಡ ಯದುವೀರ್ ಅವರ ಚುನಾವಣಾ ಉತ್ಸಾಹ ಕಂಡು ಬೆರಗಾಗಿದ್ದಾರೆ. ಕೊಡಗು ಮತ್ತು ಮೈಸೂರು ಭಾಗದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಸಂಚಲನ ಮೂಡಿಸಿರುವ ಯದುವೀರ್ ಅವರು ಮತದಾರರ ಹೃದಯ ತಟ್ಟುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

Read More

ನಾಪೋಕ್ಲು ಮಾ.16 NEWS DESK : ನಾಪೋಕ್ಲು ಸಮೀಪದ ಹೊದ್ದೂರು ಗ್ರಾಮದ ನೂತನ ಶ್ರೀ ಭಗವತಿ ದೇವಾಲಯದಲ್ಲಿ ದೇವರ ನೃತ್ಯಬಲಿ ಜರುಗುವುದರೊಂದಿಗೆ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಳಶೋತ್ಸವಕ್ಕೆ ತೆರೆ ಎಳೆಯಲಾಯಿತು.  ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವ ಒಂದು ವಾರಗಳ ಕಾಲ ನಡೆದು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ಗಣಪತಿ ಹೋಮ, ಮಹಾಬಲಿ, ಪೀಠ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಮಹಾಪೂಜೆ, ವಿವಿಧ ದೈವಿ ಕಾರ್ಯಕ್ರಮಗಳು ಜರುಗಿತು. ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ವಿಶೇಷ ಶಿಲೆಯಿಂದ ಪುನರ್ ನಿರ್ಮಾಣಗೊಂಡ ದೇವಾಲಯವು ಗ್ರಾಮದ ನೂತನ ಶ್ರದ್ಧಾಭಕ್ತಿಯ ದೈವಿಕ ತಾಣವಾಗಿ ರೂಪುಗೊಂಡಿತು. ಮರಕಡ ಶ್ರೀ ಗುರಪರಾಶಕ್ತಿ ಮಠದ ಪರಮಪೂಜ್ಯ ನರೇಂದ್ರನಾಥ ಯೋಗೇಶ್ವರ ಮಹಾಸ್ವಾಮಿಯವರ ಪೂರ್ಣ ಅನುಗ್ರಹದೊಂದಿಗೆ ನಿತಿನ್ ನರೇಂದ್ರನಾಥ ಯೋಗೇಶ್ವರ ಸ್ವಾಮಿ ಮತ್ತು ಮಾತೆ ಶಕುಂತಲಾ ಅಮ್ಮನವರ ದಿವ್ಯ ನೇತೃತ್ವದಲ್ಲಿ ದೇವಾಲಯ ಜೀರ್ಣೋದ್ಧಾರಗೊಂಡಿದೆ. ಬ್ರಹ್ಮ ಶ್ರೀ  ಕೆ.ಯು.ಪದ್ಮನಾಭ ತಂತ್ರಿಗಳು, ದೇವಾಲಯದ ಮುಖ್ಯ ಅರ್ಚಕ…

Read More

ಬೆಂಗಳೂರು ಮಾ.16 NEWS DESK : ಕಾರೊಂದು ಫ್ಲೈಓವರ್​ನಿಂದ ಕೆಳಗೆ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯ ರಾಮನಗರ ತಾಲ್ಲೂಕಿನ ಕೆಂಪೇಗೌಡನ ದೊಡ್ಡಿ ಬಳಿ ನಡೆದಿದೆ. ಮದ್ದೂರು ತಾಲೂಕಿನ ಕಸ್ತೂರು ಗ್ರಾಮದ ನಿವಾಸಿ ಅಭಿಷೇಕ್ ಮೃತ ದುರ್ದೈವಿಯಾಗಿದ್ದಾರೆ. ನಿಯಂತ್ರಣ ತಪ್ಪಿದ ಕಾರು ಹೆದ್ದಾರಿಯಿಂದ ಅಂಡರ್ ಪಾಸ್​ ಒಳಗಡೆ ಬಿದ್ದಿದೆ. ಅಪಘಾತದ ತೀವ್ರಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.

Read More

ಮಡಿಕೇರಿ ಮಾ.16 NEWS DESK : ನದಿ ಹಾಗೂ ನದಿ ಮೂಲಗಳಿಂದ ಅನ್ಯಬಳಕೆಗೆ ನೀರು ಬಳಸುವುದನ್ನು ನಿಷೇಧ ಮಾಡಿರುವ ಜಿಲ್ಲಾಧಿಕಾರಿಗಳ ಆದೇಶವನ್ನು ವಿರೋಧಿಸಿ ಕೊಡಗು ಜಿಲ್ಲಾ ರೈತ ಸಂಘದ ವತಿಯಿಂದ “ನಮ್ಮ ನೀರು, ನಮ್ಮ ಹಕ್ಕು” ಎಂಬ ಘೋಷವಾಕ್ಯದಡಿ ನಗರದಲ್ಲಿ ಪ್ರತಿಭಟನೆ ನಡೆಯಿತು. ಜಿಲ್ಲಾಡಳಿತದ ಕಚೇರಿ ಎದುರು ಜಮಾಯಿಸಿದ ಸಂಘದ ಪದಾಧಿಕಾರಿಗಳು ಘೋಷಣೆಗಳನ್ನು ಕೂಗಿ ರೈತರಿಗೆ ವಿನಾಯಿತಿ ನೀಡುವಂತೆ ಆಗ್ರಹಿಸಿದರು. ಈ ಸಂದರ್ಭ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ, ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶವಾಗಿದೆ ಹೊರತು ರೈತರಿಂದಲ್ಲ. ಅರಣ್ಯಕ್ಕಿಂತ ಹೆಚ್ಚಿನ ಗಿಡ-ಮರಗಳು ತೋಟಗಳಲ್ಲಿವೆ. ಪ್ರಕೃತಿಯನ್ನು ಪೂಜಿಸುವ ರೈತರು ನೀರನ್ನು ಬಳಸಲು ನಿಜವಾದ ಹಕ್ಕುದಾರರು ಎಂದರು. ಜಿಲ್ಲಾಡಳಿತ ಆದೇಶ ರೈತರಿಗೆ ಮಾರಕವಾಗಲಿದ್ದು, ವಾಣಿಜ್ಯ ಉದ್ದೇಶ ಅಥವಾ ಬೇರೆ ವಿಚಾರಗಳಿಗೆ ನೀರು ಪೋಲು ಮಾಡುವುದನ್ನು ನಾವು ಒಪ್ಪುವುದಿಲ್ಲ. ರೈತರ ಬಳಕೆಗೆ ನಿರ್ಬಂಧ ಸರಿಯಲ್ಲ ಎಂದರು. ನೀರಿನ ಸಂಗ್ರಹಕ್ಕೆ ಚೆಕ್ ಡ್ಯಾಂ ನಿರ್ಮಾಣ ಮಾಡಬೇಕು, ಕೊಳವೆ ಬಾವಿಗಳ ನಿರ್ಮಾಣ ಮಾಡಬೇಕು, ಮಳೆ ಕೊಯ್ಲು, ಅಂತರ್ಜಲ ವೃದ್ಧಿಗೆ…

Read More