ಲೇಖಕ: admin

ಮಡಿಕೇರಿ ಮಾ.7 NEWS DESK : ವಿರಾಜಪೇಟೆಯ ಪುರಸಭೆಯ ಸದಸ್ಯೆ ಮನೆಯಪಂಡ ದೇಚಮ್ಮ ಕಾಳಪ್ಪ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಅವರ ಸಮ್ಮುಖದಲ್ಲಿ ಶಾಸಕರ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿರಾಜಪೇಟೆ ಪುರಸಭೆಯ ಹಾಲಿ ಸದಸ್ಯರು ಮಾಜಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷರು, ಹಾಲಿ ಪಟ್ಟಣ ಸಹಕಾರ ಬ್ಯಾಂಕ್ ನಿರ್ದೇಶಕರಾದ ಮನೆಯಪಂಡ ದೇಚಮ್ಮ ಕಾಳಪ್ಪ  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭ ಕೊಡಗು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜಾ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ವಿರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಪುರಸಭಾ ಸದಸ್ಯ ರಾಜೇಶ್ ಪದ್ಮನಾಭ , ಎಸ್.ಹೆಚ್.ಮತಿನ್, ವಕೀಲ ನರೇಂದ್ರ ಕಾಮತ್, ಗಣೇಶ್ ಮೊದಲಿಯಾರ್ ಹಾಗೂ ಪಕ್ಷದ ಪ್ರಮುಖ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

Read More

ಮಡಿಕೇರಿ ಮಾ.7 NEWS DESK :  ಕುಶಾಲನಗರದ  ನೂತನ ಕೆ ಎಸ್ ಆರ್ ಟಿ ಸಿ ಘಟಕ ನಿರ್ಮಾಣ ಕಾರ್ಯಕ್ಕೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

Read More

ಮಡಿಕೇರಿ ಮಾ.7 NEWS DESK  : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ವಿಜಯ ವಿಠ್ಠಲ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಪಿಯುಸಿ ನಂತರದ ವೃತ್ತಿಪರ ಉನ್ನತ ಶಿಕ್ಷಣ ಕ್ಕಾಗಿ ರಾಜ್ಯ ಸರ್ಕಾರ ನಡೆಸಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಕೆ-ಸಿಇಟಿ ಮತ್ತು ನೀಟ್) 30 ದಿನಗಳ ತರಬೇತಿಯನ್ನು ಕೇಂದ್ರ ಕಚೇರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಆಸಕ್ತರು ಹಾಗೂ ಪೋಷಕರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣ ದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಚೇರಿಯಲ್ಲಿ ಮಾ.7 ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ:0821-2515944 ಸಂಪರ್ಕಿಸಬಹುದು.

Read More

ಮಡಿಕೇರಿ ಮಾ.7 NEWS DESK : ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಮಾರ್ಚ್, 08 ರಂದು ಬೆಳಗ್ಗೆ 9.30 ಗಂಟೆಯಿಂದ 12 ಗಂಟೆವರೆಗೆ ಸಾರ್ವಜನಿಕ ಭಕ್ತಾಧಿಗಳಿಗೆ ವಿಶೇಷ ಸೇವೆ ರುದ್ರಹೋಮ ಮತ್ತು ಏಕಾದಶ ರುದ್ರಾಭಿಷೇಕ ಹಾಗೂ ಅಲಂಕಾರ ಪೂಜೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ನಂತರ ವಿವಿಧ ಪೂಜೆ, ಅರ್ಚನೆಗಳು ನಡೆಯಲಿದೆ. ಈ ದಿನದಂದು ದೇವಾಲಯವು ರಾತ್ರಿಪೂರ್ತಿ ತೆರೆದಿರುತ್ತದೆ. ಭಕ್ತಾದಿಗಳು ದೇವಾಲಯದಲ್ಲಿ ನಡೆಯುವ ಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಬಾಜನರಾಗುವಂತೆ ಕೋರಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ. 9902290302, 9845821566 ನ್ನು ಸಂಪರ್ಕಿಸಬಹುದು ಎಂದು ಶ್ರೀ ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

Read More

ಮಡಿಕೇರಿ ಮಾ.7 NEWS DESK : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ 2023-24 ನೇ ಜನವರಿ ಆವೃತ್ತಿ ಪ್ರವೇಶಾತಿಯನ್ನು ಮಾರ್ಚ್, 31 ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಾದೇಶಿಕ ನಿರ್ದೇಶಕಿ ಸ್ಮಿತಾ ಸುಬ್ಬಯ್ಯ  ತಿಳಿಸಿದ್ದಾರೆ. ಕೆಲಸಕ್ಕೆ ಹೋಗುವ ಆಸಕ್ತರು ಕ.ರಾ.ಮು.ವಿ.ಯಲ್ಲಿ ಪ್ರವೇಶಾತಿ ಪಡೆಯಲು ಅನುಕೂಲ ಮಾಡಿಕೊಡುವ ಸಲುವಾಗಿ 2024ರ ಮಾ.31 ರವರೆಗೆ ಸಾರ್ವತ್ರಿಕ ರಜಾ ದಿನಗಳಾದ ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರ ಮತ್ತು ಭಾನುವಾರಗಳಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕರಾಮುವಿ, ಮಡಿಕೇರಿ ಪ್ರಾದೇಶಿಕ ಕೇಂದ್ರ ಕಚೇರಿಯನ್ನು ತೆರೆಯುವ ಮೂಲಕ ಪ್ರವೇಶಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕ.ರಾ.ಮು.ವಿ ಮಡಿಕೇರಿ ಪ್ರಾದೇಶಿಕ ಕೇಂದ್ರದಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿ ಪ್ರವೇಶಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು ಸ್ನಾತಕ/ಸ್ನಾತಕೋತ್ತರ ಕೋಸ್ರ್ಗಳಾದ ಬಿ.ಎ, ಬಿಕಾಂ, ಬಿ.ಬಿ.ಎ, ಬಿ.ಸಿ.ಎ, ಬಿಲಿಬ್ ಐಎಸ್ಸಿ, ಬಿ.ಎಸ್ಸಿ, ಬಿಎಸ್ ಡಬ್ಲ್ಯು, ಎಂ.ಎ, ಎಂ.ಸಿ.ಜೆ, ಎಂ.ಕಾಂ, ಎಂ.ಎಸ್ಸಿ, ಎಂಲಿಬ್‍ಐಎಸ್ಸಿ,{ಎಂಬಿಎ, ಎಂಸಿಎ, ಎಂಎಸ್‍ಡಬ್ಲ್ಯು ಮತ್ತು ಪಿಜಿ ಸರ್ಟಿಫಿಕೇಟ್ ಡಿಪ್ಲೊಮಾ ಸರ್ಟಿಫಿಕೇಟ್…

Read More

ಸೋಮವಾರಪೇಟೆ ಮಾ.7 NEWS DESK : ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಮೂರು ದಿನಗಳ ಜಾತ್ರೋತ್ಸವಕ್ಕೆ ದೇವಿಗೆ ಜ್ಯೋತಿ ಬೆಳಗುವುದರ ಮೂಲಕ ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ, ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜ್ಜಳ್ಳಿ ನವೀನ್ ಚಾಲನೆ ನೀಡಿದರು. ಪಶುವೈದ್ಯ ಇಲಾಖೆಯ ವತಿಯಿಂದ ಉಚಿತ ಪಶುಚಿಕಿತ್ಸಾ ಶಿಬಿರ, ಉತ್ತಮ ರಾಸುಗಳಿಗೆ ಬಹುಮಾನ ಹಾಗೂ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡಲಾಯಿತು. ಈ ಸಂದರ್ಭ ಗೌಡಳ್ಳಿ ಸಹಕಾರ ಸಂಘದ ಸಿಇಒ ಜಿ.ಕೆ.ಪೊನ್ನಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಇಂದೂದರ್, ಪಶುವೈದ್ಯಾಧಿಕಾರಿ ಸತೀಶ್ ಕುಮಾರ್, ದೇವಾಲಯ ಸಮಿತಿಯ ಉಪಾಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಮಾಜಿ ಅಧ್ಯಕ್ಷ ಎಚ್.ಆರ್.ಮುತ್ತಣ್ಣ, ಪದಾಧಿಕಾರಿಗಳಾದ ಜಿ.ಎ.ಮಹೇಶ್, ಎಚ್.ಪಿ.ಸುರೇಶ್, ವೀರಭದ್ರಪ್ಪ, ನಾಗರತ್ನ, ರಾಮಚಂದ್ರ, ಪ್ರಧಾನ ಅರ್ಚಕ ವಿಶ್ವರೂಪಚಾರ್ ಮತ್ತಿತರರು ಇದ್ದರು.

Read More

ಮಡಿಕೇರಿ ಮಾ.7 NEWS DESK : ಬಿರುನಾಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ನಡೆಯಿತು. ಮಕ್ಕಳ ಸಂತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ನೇತ್ರಾವತಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು,  ವಿದ್ಯಾರ್ಥಿಗಳಲ್ಲಿ  ವ್ಯಾಪಾರ, ವಹಿವಾಟು ಜ್ಞಾನ ಮೂಡಿಸಲು ಸಹಕಾರಿಯಾಗಿದೆ ಎಂದರು. ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತರಕಾರಿಗಳು, ಹಣ್ಣು ಹಂಪಲುಗಳನ್ನು ಸಂಭ್ರಮದಿಂದ ಮಾರಾಟ ಮಾಡಿದರು. ಕಾರ್ಯಕ್ರಮದ ಮೂಲಕ ಗಣಿತದ ಮೂಲ ಕ್ರಿಯೆ ಹಾಗೂ ಲಾಭ ನಷ್ಟಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಯಿತು. ಈ ಸಂದರ್ಭ ಮುಖ್ಯ ಶಿಕ್ಷಕ ರು ಸಹಶಿಕ್ಷಕರು ಭಾಗವಹಿಸಿದ್ದರು.

Read More

ಮಡಿಕೇರಿ ಮಾ.6 NEWS DESK: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಭಾರತೀಯ ಜನತಾ ಪಾರ್ಟಿಯ ಮಡಿಕೇರಿ ನಗರ ಮಂಡಲ ಕೇಂದ್ರ ಸರ್ಕಾರದ ಪರ ಪ್ರಚಾರ ಕಾರ್ಯವನ್ನು ಬಿರುಸುಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಕಳೆದ 10 ವರ್ಷಗಳ ಕಾಲ ದೇಶಕ್ಕಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು ಮತ್ತು ಸಂಸದ ಪ್ರತಾಪ್ ಸಿಂಹ ಅವರ ಸಾಧನೆಯ ಕೈಪಿಡಿಯನ್ನು ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ವಿತರಿಸಿದರು. ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ನಗರಸಭೆಯ ಬಿಜೆಪಿ ಸದಸ್ಯರು ಪಾಲ್ಗೊಂಡಿದ್ದರು.

Read More

ಮಡಿಕೇರಿ ಮಾ.6 NEWS DESK : ಪೊನ್ನಂಪೇಟೆ ತಾಲೂಕಿನ ದೇವರಪುರದಲ್ಲಿ 2023ರ ಡಿಸೆಂಬರ್ 9ರಂದು ನಡೆದಿದ್ದ ದರೋಡೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕೇರಳ ರಾಜ್ಯ ತಲಚೇರಿ ಮೂಲದ ಶಾಲಿನ್(30), ಟಿ.ಶ್ರೀಜಿತ್(38) ಮತ್ತು ಕೆ.ವೈಷ್ಣವ್(27) ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ಈ ಹಿಂದೆ ಈ ದರೋಡೆ ಪ್ರಕರಣಕ್ಕೆ ಸಂಬAಧಿಸಿದAತೆ ಒಟ್ಟು 8 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ 3 ಮಂದಿ ಆರೋಪಿಗಳನ್ನು ಗೋಣಿಕೊಪ್ಪ ಪೊಲೀಸರು ಬಂಧಿಸಿದ್ದು, ಆ ಮೂಲಕ ಒಟ್ಟು 11 ಆರೋಪಿಗಳು ಸೆರೆ ಸಿಕ್ಕಿದಂತಾಗಿದೆ. ಈ ದರೋಡೆ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಶಾಮೀಲಾಗಿರುವ ಹಿನ್ನೆಲೆಯಲ್ಲಿ ತಲೆ ಮರೆಸಿಕೊಂಡಿರುವ ಎಲ್ಲಾ ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ದರೋಡೆ ಕೃತ್ಯಕ್ಕೆ ಬಳಕೆ ಮಾಡಲಾದ 30 ಲಕ್ಷ ರೂ. ಮೌಲ್ಯದ ಒಟ್ಟು 5 ವಾಹನಗಳು ಹಾಗೂ 7ರಿಂದ 8 ಲಕ್ಷ ರೂ. ಹಣವನ್ನೂ ಜಪ್ತಿ ಮಾಡಲಾಗಿದೆ.

Read More

ಮಡಿಕೇರಿ ಮಾ.6 NEWS DESK  : ಭಯೋತ್ಪಾದಕ ಕೃತ್ಯಗಳು ಖಂಡಿಸಿ ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿಯ ಕೊಡಗು ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸಮಿತಿಯ ಪ್ರಮುಖರು ಹಾಗೂ ಕಾರ್ಯಕರ್ತರು ಮಾನವ ಸರಪಳಿ ರಚಿಸಿ, ಭಯೋತ್ಪಾದಕ ಕೃತ್ಯಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ರಾಜ್ಯದಲ್ಲಿ ಮತ್ತೆ ಭಯೋತ್ಪಾದನಾ ಚಟುವಟಿಕೆ ಚಿಗುರೊಡೆಯುತ್ತಿದೆ ಎಂದು ಆರೋಪಿಸಿದ ಪ್ರಮುಖರು ರಾಜ್ಯದ ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆಯನ್ನು ಕೂಗಿರುವ ರಾಷ್ಟ್ರದ್ರೋಹಿಗಳನ್ನು ಬಂಧಿಸಬೇಕು, “ರಾಮೇಶ್ವರಂ ಕೆಫೆ” ಯಲ್ಲಿ ನಡೆದ ಬಾಂಬ್ ಸ್ಫೋಟದ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಹಿಂದೂ ಸಂಘಟನೆಗಳ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Read More