ಮಡಿಕೇರಿ ಜ.5 : ಮೂರ್ನಾಡು ಬಾಡಗ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಸ್ಥಳೀಯ ಕೃಷಿಕರ ಗದ್ದೆಗಳಿಗೆ ದಾಳಿ ಮಾಡುತ್ತಿರುವ ಕಾಡಾನೆಗಳ ಹಿಂಡು ಬೆಳೆಯನ್ನು ತಿಂದು ತೇಗುತ್ತಿವೆ. ಗ್ರಾಮದ ಕೃಷಿಕ ಪಾಂಡಂಡ ಗಣೇಶ್ ಗಣಪತಿ ಅವರ ಗದ್ದೆಗೆ ನುಗ್ಗಿದ ಕಾಡಾನೆಗಳು ಭತ್ತದ ಬೆಳೆಯನ್ನು ನಾಶಪಡಿಸಿವೆ. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಕೊಯ್ಲು ಮಾಡಿದ್ದ ಭತ್ತದ ಫಸಲು ಕಾಡಾನೆ ಪಾಲಾಗಿದೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಲೇಖಕ: admin
ಮಡಿಕೇರಿ ಜ.5 : ಆರನೇ ತರಗತಿಗೆ ಪ್ರವೇಶಕ್ಕೆ ಜನವರಿ, 20 ರಂದು ಕೊಡಗು ಜಿಲ್ಲೆಯ ಆರು ಕೇಂದ್ರಗಳಲ್ಲಿ ನಡೆಯಲಿರುವ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ನೋದಾಯಿತ ಅಭ್ಯರ್ಥಿಗಳ ಪ್ರವೇಶ ಪತ್ರಗಳನ್ನು ನವೋದಯ ವಿದ್ಯಾಲಯ ಸಮಿತಿಯು ತನ್ನ ಅಧಿಕೃತ ವೆಬ್‍ಸೈಟಿನಲ್ಲಿ ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಬಳಸಿ https:/navodaya.gov.in ಈ ಸೈಟಿನಿಂದ ನೇರವಾಗಿ ತಮ್ಮ ಪ್ರವೇಶ ಪತ್ರಗಳನ್ನು ಡೌನ್‍ಲೋಡ್ ಮಾಡಿಕೋಳ್ಳಲು ಸಾಧ್ಯವಾಗದ ಅಭ್ಯರ್ಥಿಗಳು ತಮ್ಮ ಮಗ ಮಗಳು ಓದುತ್ತಿರುವ ಶಾಲೆ ಅಥವಾ ನವೋದಯ ವಿದ್ಯಾಲಯವನ್ನು ಸಂಪರ್ಕಿಸಬಹುದು ಎಂದು ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಒ.ಎಂ. ಪಂಕಜಾಕ್ಷನ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9611862835, 8840383521 ಸಂಪರ್ಕಿಸಬಹುದು.
ಮಡಿಕೇರಿ ಜ.5 : ಪ್ರಾಚೀನ ಆದಿಮ ಸಂಜಾತ ಸೂಕ್ಷ್ಮ ಜನಾಂಗ ಕೊಡವರನ್ನು ವಿಶ್ವ ರಾಷ್ಟ್ರ ಸಂಸ್ಥೆಯ ನಿರ್ಣಯ 217A (III) ರನ್ವಯ ಮಾನ್ಯತೆ ನೀಡಿ ಕೊಡವರ ಸ್ವಯಂ-ನಿರ್ಣಯದ ಹಕ್ಕುಗಳನ್ನು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಗೌರವಿಸಬೇಕು ಮತ್ತು ಖಾತರಿಪಡಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಒತ್ತಾಯಿಸಿದೆ. ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುವ ಧರಣಿ ಸತ್ಯಾಗ್ರಹ ನಡೆಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಹಾಗೂ ಪ್ರಮುಖರು ಅಂತರರಾಷ್ಟ್ರೀಯ ಕಾನೂನಿನಡಿ ಕೊಡವರಿಗೆ ಮಾನ್ಯತೆ, ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡಬೇಕೆಂದು ಒತ್ತಾಯಿಸಿದರು. ಸಂವಿಧಾನದ ಆರ್ಟಿಕಲ್ 244 R/W 6ನೇ ಮತ್ತು 8ನೇ ಶೆಡ್ಯೂಲ್ ಪ್ರಕಾರ, ಕೊಡವರು ಸ್ಥಳೀಯ ಕೊಡವ ಜನರ ಸಾಂಪ್ರದಾಯಿಕ ಮತ್ತು ಅವಿಭಾಜ್ಯ ತಾಯ್ನಾಡಿನ ಹಕ್ಕನ್ನು ಹೊಂದಿದ್ದಾರೆ. ಇದು ಸ್ವಯಂ ಆಳ್ವಿಕೆಯೊಂದಿಗೆ ಕೊಡವಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತ ಪ್ರದೇಶವನ್ನು ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಸಿಎನ್‌ಸಿ ರೂಪಿಸಿದೆ ಎಂದು ನಾಚಪ್ಪ ಹೇಳಿದರು. ಈ ಹಕ್ಕೊತ್ತಾಯಗಳ ಪರ ಪ್ರತಿಪಾದಿಸಿರುವ ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ…
ಮಡಿಕೇರಿ ಜ.5 : ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ವತಿಯಿಂದ ಜಿಲ್ಲೆಯ ವಿವಿಧ ಬ್ರಾಹ್ಮಣ ಸಮಾಜಗಳ ಸಹಯೋಗದೊಂದಿಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ದ್ವಿತೀಯ ವರ್ಷದ ‘ವಿಪ್ರ ಕ್ರೀಡೋತ್ಸವವನ್ನು’ ಆಯೋಜಿಸುತ್ತಿರುವುದಾಗಿ ನಿಧಿಯ ಕ್ರೀಡಾ ಸಮಿತಿಯ ಸಂಚಾಲಕರಾದ ಬಿ.ಕೆ.ಅರುಣ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲಾ ಮಟ್ಟದ ವಿಪ್ರ ಕ್ರೀಡೋತ್ಸವದ ಭಾಗವಾಗಿ ಫೆ.4 ರಂದು ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಆಸಕ್ತ ಬ್ರಾಹ್ಮಣ ಸಮುದಾಯದ ಕ್ರೀಡಾಪಟುಗಳು ಜ.20 ರೊಳಗಾಗಿ ತಮ್ಮ ಹೆಸರನ್ನು ಶಿವಶಂಕರ್ ಮೊ.9480083272, ಭರತೇಶ್ ಖಂಡಿಗೆ ಮೊ.9448647174 ಇವರಲ್ಲಿ ನೋಂದಾಯಿಸಿಕೊಳ್ಳಬೇಕೆಂದರು. ಫೆ.11 ರಂದು ಜಿಲ್ಲಾ ಮಟ್ಟದ ವಿಪ್ರ ಕ್ರಿಕೆಟ್ ಪಂದ್ಯಾವಳಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ ನಡೆಯಲಿದ್ದು, ಮಧ್ಯಾಹ್ನ ಪುರುಷರು ಮತ್ತು ಮಹಿಳೆಯರ ವಿಭಾಗಗಳಲ್ಲಿ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. ಆಸಕ್ತರು ತಮ್ಮ ತಂಡದ ಹೆಸರನ್ನು ಬಿ.ಕೆ. ಅರುಣ್ ಕುಮಾರ್ ಮೊ.9448000446, ಶಿವ ಶಂಕರ್ ಮೊ.9480083272 ಇವರ ಬಳಿ…
ಮಡಿಕೇರಿ ಜ.5 : ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ನೌಕರರ ವೇತನಕ್ಕೆ ಮೀಸಲಿರಿಸಲಾಗಿದ್ದ 10 ಲಕ್ಷ ರೂ.ಗಳನ್ನು ನಿಯಮ ಮೀರಿ, ಸಾಮಾಗ್ರಿ ಖರೀದಿಗೆ ಬಳಸಲಾಗಿದೆ. ಇದರಿಂದ ಕಳೆದ ಮೂರು ತಿಂಗಳಿನಿಂದ ಆಸ್ಪತೆಯ ಡಿ ಗ್ರೂಪ್ ಮತ್ತು ನಾನ್ ಕ್ಲೀನಿಂಗ್ ನೌಕರರು ವೇತನ ದೊರಕದೆ ಸಂಕಷ್ಟಕ್ಕೆ ಸಿಲುಕಿರುವುದಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ಸ್ವಚ್ಛತಾ ಮತ್ತು ಇತರೆ ಕಾರ್ಮಿಕರ ಸಂಘದ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಪಿ.ಆರ್.ಭರತ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆ ಆಧಾರದಲ್ಲಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ನೌಕರರ ವೇತನಕ್ಕೆ ಅಡಚಣೆಯಾಗಬಾರದೆನ್ನುವ ದೃಷ್ಟಿಯಿಂದ ಮೀಸಲು ಇರಿಸಿದ್ದ ಹಣವನ್ನು 2022 ರಲ್ಲಿ ಆಸ್ಪತ್ರೆಗೆ ಬೆಡ್ ಶೀಟ್, ಹಾಸಿಗೆ ಖರೀದಿಗೆ ಬಳಸಿರುವಂತೆ ತೋರಿಸಲಾಗಿದೆ. ಆದರೆ, 2023 ನೇ ಸಾಲಿನಲ್ಲಿ ಮತ್ತೆ ಆಸ್ಪತ್ರೆಗೆ ಬೆಟ್‍ಶೀಟ್ ಮತ್ತಿತರ ಸಾಮಾಗ್ರಿಗಳಿಗೆ ಬೇಡಿಕೆ ಇಡಲಾಗಿದೆ. ಇದನ್ನು ಗಮನಿಸಿದಾಗ ಹಿಂದಿನ ಸಾಲಿನಲ್ಲಿ ಮೀಸಲು ಹಣದಲ್ಲಿ ನಡೆದಿರುವ ಖರೀದಿಯಲ್ಲಿ ದುರುಪಯೋಗವಾಗಿರುವ ಅನುಮಾನಗಳಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು ಆಗ್ರಹಿಸಿದರು. ವಿರಾಜಪೇಟೆ ತಾಲೂಕಿನ ಸರ್ಕಾರಿ…
ಮಡಿಕೇರಿ ಜ.5 : ಅಖಿಲ ಕನಾ೯ಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ರಾಜ್ಯಮಟ್ಟದ 3 ನೇ ವಿಪ್ರ ಮಹಿಳಾ ಸಮ್ಮೇಳನ ಅಭಿಜಾತೆ ಬೆಂಗಳೂರಿನಲ್ಲಿ ಜನವರಿ 6 ಮತ್ತು 7 ರಂದು ಆಯೋಜಿತವಾಗಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಿಳಾ ಸಮಾವೇಶದಲ್ಲಿ ಪ್ರಧಾನ ಮಾಡಲಾಗುವ ಧೀಶಕ್ತಿ ಪ್ರಶಸ್ತಿಗೆ ಮಡಿಕೇರಿಯ ಸವಿತಾ ಭಟ್ ಪೂಕಳ ಆಯ್ಕೆಯಾಗಿದ್ದಾರೆ ಎಂದು ವಿಪ್ರ ಮಹಿಳಾ ಘಟಕದ ಕೊಡಗು ಸಂಚಾಲಕಿಯಾದ ಗೀತಾ ಸಂಪತ್ ಕುಮಾರ್ ಮತ್ತು ಸಹಸಂಚಾಲಕಿ ಸವಿತಾ ಯೊಗೀಶ್ ತಿಳಿಸಿದ್ದಾರೆ. ಅಖಿಲ ಕನಾ೯ಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷರಾದ ಅಶೋಕ್ ಹಾನ೯ಳ್ಳಿಯವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಶಂಕರಪುರಂನಲ್ಲಿರುವ ಶಂಕರ ಮಠದಲ್ಲಿ 2 ದಿನಗಳ ಸಮ್ಮೇಳನ ನಡೆಯಲಿದೆ. ಸಮ್ಮೇಳನದಲ್ಲಿ ಮಡಿಕೇರಿಯ ಶೖತಿಲಯ ಭಜನಾ ತಂಡವು ಭಜನಾ ಸ್ಪಧೆ೯ಯಲ್ಲಿ ಪಾಲ್ಗೊಳ್ಳುತ್ತಿದೆ. ಕೊಡಗಿನ ಪ್ರೇಕ್ಷ ಭಟ್ ತಂಡದವರು ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದು, ಮಾಧ್ಯಮದಲ್ಲಿ ಮಹಿಳೆಯ ಪಾತ್ರ ವಿಚಾರ ಸಂಕಿರಣದಲ್ಲಿ ಕೊಡಗು ಜಿಲ್ಲಾ ಸಂಚಾಲಕಿ ಗೀತಾ ಸಂಪತ್ ನಿರೂಪಕಿ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪುತ್ತೂರು ಜ.5 : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಅಕೌಂಟ್ ಆಫೀಸರ್ ಆಗಿದ್ದ ಶಿವಪ್ರಸಾದ್.ಕೆ ಸೇವಾನಿವೃತ್ತಿ ಹೊಂದಿದರು. ಕಾಲೇಜಿನ ಪ್ರಾರಂಭದ ದಿನಗಳಿಂದಲೂ ಕಛೇರಿಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಇವರು 21 ವರ್ಷಗಳ ಸೇವೆಯನ್ನು ಸಲ್ಲಿಸಿದ್ದಾರೆ. ಸದಾ ನಗುಮುಖದ ಸ್ನೇಹಪರತೆಯ ಇವರು ಕಾಲೇಜಿನಿಂದ ನಿವೃತ್ತಿಹೊಂದಿದ ಪ್ರಥಮ ಸಿಬ್ಬಂದಿಯಾಗಿಯೂ ಗುರುತಿಕೊಂಡರು. ಕಾಲೇಜಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಶಾಲು ಹೊದೆಸಿ ಗೌರವಿಸಿದರು. ಸಂಚಾಲಕ ಟಿ.ಎಸ್.ಸುಬ್ರಮಣ್ಯ ಭಟ್, ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ, ನಿರ್ದೇಶಕರಾದ ರವಿಕೃಷ್ಣ.ಡಿ.ಕಲ್ಲಾಜೆ, ಸತ್ಯನಾರಾಯಣ ಭಟ್, ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ಹಾಗೂ ಕಛೇರಿ ಸಿಬ್ಬಂದಿಗಳು ಶುಭ ಹಾರೈಸಿ ಬೀಳ್ಕೊಟ್ಟರು. ಇವರು ವಿಟ್ಲ ಸಮೀಪದ ಮೈರ ನಿವಾಸಿಯಾಗಿದ್ದು, ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ನಿವೃತ್ತಿ ಜೀವನವನ್ನು ನಡೆಸಲಿದ್ದಾರೆ.
ಬೆಂಗಳೂರು ಜ 5 : ಇಂದಿರಾ ಕ್ಯಾಂಟೀನ್ ಮತ್ತು ಮಧ್ಯಾಹ್ನದ ಶಾಲಾ ಊಟದಲ್ಲಿ ಸಿರಿಧಾನ್ಯ ಬಳಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆ ಮಾಡಿದರು. ಕೃಷಿ ಇಲಾಖೆ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ 2024 ಮತ್ತು ಸಿರಿಧಾನ್ಯ ತಿನಿಸುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ರಾಜ್ಯದ ಜನರು ಮತ್ತು ಶಾಲಾ ಮಕ್ಕಳು ಇನ್ನಷ್ಟು ಸದೃಡವಾಗಿ , ಆರೋಗ್ಯವಂತರಾಗಲು ಇಂದಿರಾ ಕ್ಯಾಂಟೀನ್ ಮತ್ತು ಶಾಲಾ ಊಟದಲ್ಲಿ ಸಿರಿ ಧಾನ್ಯ ಬಳಸುವ ಸಂಬಂಧ ಸದ್ಯದಲ್ಲೇ ಸಂಬಂಧಪಟ್ಟ ಇಲಾಖೆಗಳ ಸಭೆ ಕರೆದು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಘೋಷಿಸಿದರು. ಹಾಗೆಯೇ ಉತ್ತಮ ಗುಣಮಟ್ಟದ ಸಿರಿಧಾನ್ಯ ಬೀಜ ಉತ್ಪಾದನೆ, ಹೊಸ ತಳಿ ಅಭಿವೃದ್ಧಿ ಹಾಗೂ ಸಿರಿಧಾನ್ಯ ರಫ್ತಿಗೆ ಅನುಕೂಲ ಆಗುವಂತೆ ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹದಾಯಕವಾಗಿ ಅಗತ್ಯ ಕೇಂದ್ರವನ್ನು ರಾಜ್ಯ ಸರ್ಕಾರ ಸ್ಥಾಪಿಸಲಿದೆ ಎಂದು ಇದೇ ಸಂದರ್ಭದಲ್ಲಿ ಸಿಎಂ ಭರವಸೆ ನೀಡಿದರು. ಎಲ್ಲಿ ಮಳೆ ಕಡಿಮೆ…
ನಾಪೋಕ್ಲು ಜ.5 : ನಾಪೋಕ್ಲು ಹೋಬಳಿ ವ್ಯಾಪ್ತಿಯ ಭತ್ತ ಹಾಗೂ ಕಾಫಿ ಬೆಳೆಗಾರರಿಗೆ ಮಳೆ, ಮಳೆ ಮೋಡ ಸಂಕಷ್ಟ ತಂದೊಡ್ಡಿದೆ. ನಾಲ್ಕು ನಾಡು ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆನಿಂದಲೇ ನಿರಂತರ ಮಳೆಯಾಗಿ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿತ್ತು. ಕೆಲವು ಭಾಗಗಳಲ್ಲಿ ಮಳೆ ಜೋರಾಗಿ ಸುರಿದು ಕಾಫಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಗ್ರಾಮೀಣ ಪ್ರದೇಶದ ಹಲವೆಡೆ ಬತ್ತದ ಕೊಯ್ಲು ಮುಗಿದಿದ್ದು, ಅಲ್ಪ ಸ್ವಲ್ಪ ಬಾಕಿ ಉಳಿದಿರುವ ರೈತರಿಗೆ ಮಳೆಯಿಂದಾಗಿ ಸಂಕಷ್ಟ ಎದುರಾಗಿದೆ. ಕಾಫಿ ತೋಟಗಳಲ್ಲಿ ಕಾಫಿ ಬಹುತೇಕ ಹಣ್ಣಾಗಿದ್ದು ಕಾಫಿ ಕೊಯ್ಲು ಆರಂಭಗೊಂಡಿದೆ. ಬಿಸಿಲಿನ ಕೊರತೆಯಿಂದ ರೈತರು ಕಾಫಿ ಒಣಗಿಸಲು ಸಮಸ್ಯೆ ಎದುರಿಸುತ್ತಿದ್ದಾರೆ. ಹಿಂದಿನ ವರ್ಷ ಮಳೆಯೂ ಬೇಗನೆ ಸುರಿದಿರುವುದರಿಂದ ಕಾಫಿ ಹಣ್ಣಾಗಿದ್ದು ರೈತರು ಕೊಯ್ಲು ಕೆಲಸದಲ್ಲಿ ತೊಡಗಿದ್ದಾರೆ. ಆದರೆ ಒಣಗಿಸಲು ಬಿಸಿಲಿನ ಕೊರತೆ ಕಾಡುತ್ತಿದೆ. ವಾರಗಟ್ಟಲೆ ಬಿಸಿಲಿನ ತಾಪವೂ ಇಲ್ಲದೆ ಕಾಫಿಯನ್ನು ಒಣಗಿಸುವುದು ಕಷ್ಟಕರವಾಗಿದೆ. ರೋಬಸ್ಟಾ ಕಾಫಿ ಹಲವೆಡೆ ಹಣ್ಣಾಗಿ ಮಳೆಯಿಂದಾಗಿ ಹಣ್ಣಾದ ಕಾಫಿಗಳು ಉದುರುತ್ತಿವೆ. ಕಾಫಿನ ಕೊಯ್ಲಿನ ಜೊತೆಗೆ ಉದುರಿದ ಕಾಫಿ…
ಸಿದ್ದಾಪುರ ಜ.5 : ಅಕ್ಷರ ಫೌಂಡೇಶನ್ ವತಿಯಿಂದ ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಬೆಟ್ಟದ ಕಾಡು ಹಾಗೂ ಕೆಪಿಎಸ್ ಶಾಲೆಯ 4, 5 ಹಾಗೂ 6ನೇ ತರಗತಿ ವಿದ್ಯಾರ್ಥಿಗಳಿಗೆ ಗ್ರಾ.ಪಂ ಮಟ್ಟದ ಗಣಿತ ಕಲಿಕಾ ಆಂದೋಲನ – ಗಣಿತ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ.1,000 ನಗದು, ದ್ವಿತೀಯ ರೂ.600 ಹಾಗೂ ತೃತೀಯ ರೂ.400 ನಗದು ಮತ್ತು ಮೂವರಿಗೂ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಪರಿವೀಕ್ಷಕರಾಗಿ ಕಾರ್ಯನಿರ್ವಹಿಸಿದ ಬೆಟ್ಟದಕಾಡು ಶಾಲೆಯ ಶಿಕ್ಷಕರಾದ ಪುಷ್ಪವೇಣಿ, ಧನಲಕ್ಷ್ಮಿ ಹಾಗೂ ಕೆಪಿಎಸ್ ಶಾಲೆಯ ಪ್ರಾಥಮಿಕ ವಿಭಾಗದ ಶಿಕ್ಷಕರಾದ ಟಿ.ಎಸ್.ಸೌಮ್ಯ, ಕೆ.ಪ್ರಶಾಂತ್ ಭಕ್ತ ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭ ಗ್ರಾ.ಪಂ ಕಾರ್ಯದರ್ಶಿ ಪ್ರವೀಣ್, ಕೆಪಿಎಸ್ ಪ್ರಾಥಮಿಕ ವಿಭಾಗದ ಪ್ರಬಾರ ಮುಖ್ಯ ಶಿಕ್ಷಕಿ ಬಿ.ಭಾರತಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.






