ಲೇಖಕ: admin

ಮಡಿಕೇರಿ ಜ.6 : ಹುಬ್ಬಳ್ಳಿಯಲ್ಲಿ ಕರಸೇವಕರನ್ನು ಬಂಧಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಪೊಲೀಸರ ಕ್ರಮವನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆಯ ವಿರಾಜಪೇಟೆ ತಾಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ವಿರಾಜಪೇಟೆ ಪೊಲೀಸ್ ಉಪ ಅಧಿಕ್ಷಕರ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಯುವ ಘಟಕದ ಪ್ರಮುಖ ಸುನೀಲ್, ರಾಷ್ಟ್ರವೇ ಪ್ರಸ್ತುತ ಪ್ರಭು ಶ್ರೀ ರಾಮಚಂದ್ರರ ಭೌವ್ಯ ಮಂದಿರ ನಿರ್ಮಾಣ ಉದ್ಘಾಟನೆಯ ಹೊಸ್ತಿಲ್ಲಿದೆ. ಇಂತಹ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರನ್ನು ಬಂಧನ ಮಾಡಿ ಹಿಂದೂ ಸಮಾಜಕ್ಕೆ ಕಳಂಕ ತರುವಂತೆ ಮಾಡಿರುವುದು ಖಂಡನೀಯ ಎಂದರು. ಹಬ್ಬದ ವಾತವರಣದಲ್ಲಿರುವ ದೇಶದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದು, ಹಿಂದೂಗಳನ್ನು ಧಮನ ಮಾಡುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು. ಹಿಂದೂಗಳ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದ ಅವರು, ಇಲ್ಲವಾದಲ್ಲಿ ಸಂಘಟನೆಯ ವತಿಯಿಂದ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಹಿಂದೂ…

Read More

ಪುತ್ತೂರು ಜ.6 : ತಂತ್ರಜ್ಞಾನಗಳು ಬದಲಾದಂತೆ ಕ್ರೀಡಾ ಕ್ಷೇತ್ರದಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿವೆ. ಮ್ಯಾಟ್ ಅಂಕಣಗಳು, ನಿಖರ ಫಲಿತಾಂಶವನ್ನು ನೀಡಬಲ್ಲ ಎಲೆಕ್ಟ್ರಾನಿಕ್ ತಂತ್ರಜ್ಞಾನಗಳು ಬಳಕೆಯಾಗುತ್ತಿದ್ದು, ಕ್ರೀಡಾ ಕ್ಷೇತ್ರದ ಉನ್ನತಿಗೆ ಸಹಕಾರಿಯಾಗಿದೆ ಎಂದು ಸ್ವಾಯತ್ತ ವಿವೇಕಾನಂದ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಶ್ರಯದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಟ್ಟದ ಮಂಗಳೂರು ವಿಭಾಗದ ಪುರುಷರ ಖೋಖೋ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಆಟವನ್ನು ಕ್ರೀಡಾಸ್ಫೂರ್ತಿಯಿಂದ ಆಡಬೇಕು ಮತ್ತು ಅಲ್ಲಿನ ಘಟನೆಗಳನ್ನು ಕ್ರೀಡಾಂಗಣದಿಂದ ಹೊರ ಹೋಗುವಾಗ ಮರೆತುಬಿಡಬೇಕು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ಮಾತನಾಡಿ ಕ್ರೀಡೆಗಳು ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ದೈಹಿಕ ಸ್ಥಿರತೆಯನ್ನು ನೀಡುವಲ್ಲಿ ಸಹಕಾರಿಯಾಗಿದೆ. ತನ್ಮೂಲಕ ಶಾರೀರಿಕ ದೃಡತೆ ಮತ್ತು ಆತ್ಮವಿಶ್ವಾಸವನ್ನು ಇದು ಹೆಚ್ಚಿಸುತ್ತದೆ ಎಂದರು. ಕಾಲೇಜು ಪಾಠದ ಜತೆಗೆ ಪಠ್ಯೇತರ ವಿಷಯಗಳಿಗೂ ಸಮಾನ ಅವಕಾಶವನ್ನು ನೀಡುತ್ತಿದ್ದು ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು…

Read More

ಮಡಿಕೇರಿ ಜ.6 :  ಜೆಸಿಐ ಭಾರತದ ವಲಯ 14ರಲ್ಲಿರುವ ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ 13ನೇ ಅಧ್ಯಕ್ಷರಾಗಿ ಬಲ್ಯಮಂಡೂರು ಗ್ರಾಮದ ಪೆಮ್ಮಂಡ ಮಂಜು ಬೋಪಣ್ಣ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. 2023ನೇ ಸಾಲಿನ ಘಟಕ ಅಧ್ಯಕ್ಷ ಮುಕ್ಕಾಟಿರ ನೀತ್ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ  ಘಟಕದ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದು, 2024ನೇ ಸಾಲಿಗೆ ನೂತನ ಘಟಕಾಡಳಿತ ಮಂಡಳಿ ಪದಾಧಿಕಾರಿಗಳನ್ನು  ಆಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ಬೊಜ್ಜಂಗಡ ಎಂ.ಚಂಗಪ್ಪ ಹಾಗೂ ಘಟಕದ ಕಾರ್ಯದರ್ಶಿಯಾಗಿ ಮೂರನೇ ಬಾರಿಗೆ ಚೆಟ್ಟೋಳಿರ ಶರತ್ ಸೋಮಣ್ಣ ಅವರನ್ನು  ಪುನರಾಯ್ಕೆಗೊಳಿಸಿತು. ಘಟಕದ ಉಪಾಧ್ಯಕ್ಷರಾಗಿ  ಹೆಚ್.ಆರ್. ಸತೀಶ್ (ನಿರ್ವಹಣೆ), ಟಿ.ಜೆ. ಆಂಟೋನಿ (ತರಬೇತಿ), ಎಲ್.ಎನ್.ಅಣ್ಣಪ್ಪ  (ಅಭಿವೃದ್ಧಿ ಮತ್ತು ಬೆಳವಣಿಗೆ),  ಕೆ.ಯು. ತನು ತಿಮ್ಮಯ್ಯ (ಕಾರ್ಯಕ್ರಮ),  ಸಿ.ಬಿ.ಸೋಮಣ್ಣ (ವ್ಯವಹಾರ),  ಟಿ. ಜಿ ಗಿರೀಶ್ (Pಡಿ & ಮಾರ್ಕೆಟಿಂಗ್)  ಜಂಟಿ ಕಾರ್ಯದರ್ಶಿಯಾಗಿ ಟಿ.ಎಸ್. ಸುಜಿತ್ ನೇಮಕ ಮಾಡಲಾಯಿತು. ನಿರ್ದೇಶಕರಾಗಿ ಎಂ.ಪಿ. ಬೋಪಣ್ಣ, ಪಿ.ಬಿ.ಗೌತಮ್, ಕೆ.ಎಲ್.ಅಕ್ಷಯ್,  ಜಿ.ಪಿ. ಸ್ವಾಮಿ, ಟಿ.ಜಿ.ಲಿಖಿತ್ ಕುಮಾರ್ ಅವರನ್ನು…

Read More

ಮಡಿಕೇರಿ ಜ.6 : ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ಉಪಟಳ ಆರಂಭಗೊಂಡಿದ್ದು, ಹಸುವೊಂದು ಸಾವನ್ನಪ್ಪಿದೆ. ಪೊನ್ನಂಪೇಟೆ ತಾಲ್ಲೂಕಿನ ನಿಡುಗಂಬ ಗ್ರಾಮದಲ್ಲಿ ಹಾಡಹಗಲೇ ದಾಳಿ ಮಾಡಿದ ಹುಲಿಗೆ ಹಸು ಬಲಿಯಾಗಿದೆ. ಸ್ಥಳೀಯ ನಿವಾಸಿ ಚೆನಿಯಪಂಡ ಬೋಪಣ್ಣಿ ಬೋಪಯ್ಯ ಎಂಬುವವರಿಗೆ ಸೇರಿದ ಹಸವಿದಾಗಿದೆ. ಗದ್ದೆಯಲ್ಲಿ ಹಸು ಮೇಯುತ್ತಿದ್ದಾಗ ಹುಲಿ ದಾಳಿ ಮಾಡಿದೆ. ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು, ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ತಕ್ಷಣ ಹುಲಿಯನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Read More

ವಿರಾಜಪೇಟೆ ಜ.6 :  ವಿರಾಜಪೇಟೆಯ ಕಾವೇರಿ ಸ್ಕೂಲ್ ವಾರ್ಷಿಕೋತ್ಸವ ಸಮಾರಂಭ “ಪ್ರಣವಂ ಭಾರತ್” ಸಂಭ್ರಮದಿಂದ ನಡೆಯಿತು. ನಗರದ ಸೆರೆನಿಟಿ ಸಭಾಂಗಣದಲ್ಲಿ  ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕಾವೇರಿ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷೆ  ಕಾವೇರಿ ಮುತ್ತಣ್ಣ, ವಿದ್ಯಾರ್ಥಿಗಳು ಓದಿಗೆ ಹೆಚ್ಚಿನ ಒತ್ತು ನೀಡಿ, ನಿರಂತರ ಕಲಿಕೆಯಿಂದ ಜ್ಞಾನವನ್ನು ವೃದ್ದಿಸಿಕೊಳ್ಳುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸಾಧಕರಾಗಿ ಹೊರಹೊಮ್ಮುವಂತೆ ಕರೆ ನೀಡಿದರು. ವಿರಾಜಪೇಟೆ ಕ್ಷೇತ್ರ ಸಮನ್ವಯ ಅಧಿಕಾರಿ ವನಜಾಕ್ಷಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಾಲೆಗಳು ಹೊಣೆಗಾರಿಕೆಯ ಪಾತ್ರ ವಹಿಸುತ್ತವೆ. ಮತ್ತು ಇದರಲ್ಲಿ ಮಕ್ಕಳ ಪೋಷಕರು ಜವಾಬ್ದಾರಿಯೂ ಇದೆ. ಮಕ್ಕಳು ತಮ್ಮ ಪೋಷಕರನ್ನು ಹೆಚ್ಚಾಗಿ ಅನುಕರಣೆ ಮಾಡುತ್ತಾರೆ.  ಈ ನಿಟ್ಟಿನಲ್ಲಿ  ಮಕ್ಕಳು ತಮ್ಮ ಜೀವನವನ್ನು ಕಟ್ಟಿಕೊಳ್ಳುವವರೆಗೆ ಪೋಷಕರು ತಮ್ಮ ಅಭ್ಯಾಸಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವೆಂದು ಸಲಹೆ ನೀಡಿದರು. ಕಾವೇರಿ ಸ್ಕೂಲ್‌ನ ಕಾರ್ಯದರ್ಶಿ ಪಿ.ಎನ್.ವಿನೋದ್  ಮಾತನಾಡಿ, ಕಳೆದ ಐದು ವರ್ಷಗಳಿಂದ ಶಾಲಾ ವಾರ್ಷಿಕೋತ್ಸವವನ್ನು ಆಯೋಜಿಸದ ಹಿನ್ನೆಲೆಯಲ್ಲಿ ಈ ವರ್ಷ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ದೇಶವನ್ನು…

Read More

ಮಡಿಕೇರಿ ಜ.6 : ಹುಬ್ಬಳ್ಳಿಯಲ್ಲಿ ಕರಸೇವಕರನ್ನು ಬಂಧಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಪೊಲೀಸರ ಕ್ರಮವನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದರು. ನಗರದ ಡಿವೈಎಸ್‌ಪಿ ಕಚೇರಿ ಎದುರು ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, “ನಾನು ರಾಮಭಕ್ತ ನನ್ನನ್ನು ಕೂಡ ಬಂಧಿಸಿ” ಎಂದು ಘೋಷಣೆಗಳನ್ನು ಕೂಗಿದರು. ರಾಮ ಜನ್ಮಭೂಮಿ ಹೋರಾಟದ ಹಳೆಯ ಪ್ರಕರಣಗಳಿಗೆ ಮರುಜೀವ ನೀಡುವ ಮೂಲಕ ಹುಬ್ಬಳ್ಳಿಯಲ್ಲಿ ರಾಮಭಕ್ತರನ್ನು ಬಂಧಿಸಿರುವ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ. ಸಮಾಜ ಘಾತುಕ ಮತಾಂಧ ಸಂಘಟನೆಗಳ ಅಪರಾಧ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವ ಸರ್ಕಾರ ಹಿಂದೂಗಳ ವಿಚಾರದಲ್ಲಿ ಭಾವನೆಗಳನ್ನು ಕೆಣಕುತ್ತಿದೆ. ಕಾಂಗ್ರೆಸ್ ಪಕ್ಷದ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು ಕೋಮು ಪ್ರಚೋದನೆಯ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವೇದಿಕೆಯ ಪ್ರಮುಖರು ಆರೋಪಿಸಿದರು. ಶ್ರೀರಾಮ ಮಂದಿರಕ್ಕಾಗಿ ಹೋರಾಡಿದ ರಾಮಭಕ್ತರನ್ನು ಮಂದಿರ ಉದ್ಘಾಟನೆಯ ಶುಭ ಸಂದರ್ಭದಲ್ಲೇ ಬಂಧಿಸುತ್ತಿರುವುದು ಖಂಡನೀಯ. ರಾಜ್ಯ ಸರ್ಕಾರ ಕಾನೂನು ಮೀರಿ…

Read More

ನಾಪೋಕ್ಲು ಜ.6 : ನರಿಯಂದಡ ಗ್ರಾಮದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆಯನ್ನು ರಾಮಭಕ್ತ ಸಮಿತಿಯ ಸದಸ್ಯರು ವಿತರಿಸಿದರು. ಗ್ರಾಮದ ಭಗವತಿ ದೇವಾಲಯದಲ್ಲಿ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿ, ಗ್ರಾಮದ ಒಂದು ಹಾಗೂ ಎರಡನೇ ಬ್ಲಾಕಿನ ಮನೆ ಮನೆಗೆ ತೆರಳಿ ಮಂತ್ರಾಕ್ಷತೆಯನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿ ಮಂತ್ರಾಕ್ಷತೆಯ ಉದ್ದೇಶ ಹಾಗೂ ಪಾಲನೆಯ ಬಗ್ಗೆ ವಿವರಿಸಿದರು. ಈ ಸಂದರ್ಭ ಭಗವತಿ ದೇವಸ್ಥಾನದ ಅಧ್ಯಕ್ಷ ಬಟ್ಟಿಯಂಡ ಜಯರಾ೦, ರಾಮಭಕ್ತ ಸಮಿತಿಯ ಸದಸ್ಯ ಕುಕ್ಕೆಮನೆ ನಾರಾಯಣಮೂರ್ತಿ, ಪ್ರಮುಖರಾದ ಮಕ್ಕಿ ಮನೆ ಸುದೀರ್, ಚೆಯ್ಯಂಡ ಲವ ಅಪ್ಪಚ್ಚು, ಮುಂಡಿಯೊಳಂಡಿ ದಿನು ಚಂಗಪ್ಪ, ಬೆಳಿಯ೦ಡ್ರ ಹರಿಪ್ರಸಾದ್, ಶರಣು, ರಾಜಾರಾಮ್ , ಬಟ್ಟಿಯಂಡ ಅಶೋಕ್ , ಸತೀಶ್, ಸಂಪತ್ ಮತ್ತಿತರರು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ತಮ್ಮನ್ನು ತೊಡಗಿಸಿಕೊಂಡಿದ್ದರು. ವರದಿ : ದುಗ್ಗಳ ಸದಾನಂದ. 

Read More

ಮಡಿಕೇರಿ ಜ.6 :  ಪೊನ್ನಂಪೇಟೆ ತಾಲ್ಲೂಕಿನ ಜನ ಸ್ಪಂದನ ಸಭೆಯು ಜ.9 ರಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅಂದು  ಬೆಳಿಗ್ಗೆ 10  ಗಂಟೆಗೆ ದ.ಕೊಡಗಿನ ಟಿ.ಶೆಟ್ಟಿಗೇರಿಯ ಕೊಡವ ಸಮಾಜದಲ್ಲಿ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮಡಿಕೇರಿ ಜ.6 : ಜವಳಿ ಅಭಿವೃದ್ಧಿ ಆಯುಕ್ತಾಲಯ, ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಡಿಕೇರಿ ಕೈಮಗ್ಗ ಮತ್ತು ಜವಳಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಒಂದು ವಾರಗಳ ಕಾಲ (ಜನವರಿ 12 ವರೆಗೆ) ಏರ್ಪಡಿಸಿರುವ ‘ಕಾವೇರಿ ವಸ್ತ್ರಸಿರಿ’ ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಚರಕದಲ್ಲಿ ಕಣಿಕೆ ಸುತ್ತುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಆಧುನಿಕತೆ ಬೆಳೆದಂತೆ ಕೈಮಗ್ಗ ನೇಕಾರರು ಸಂಕಷ್ಟವನ್ನು ಎದುರಿಸುತ್ತಿದ್ದು, ಕೈಮಗ್ಗ ನೇಕಾರರಿಗೆ ಸರ್ಕಾರದಿಂದ ಹಲವು ಸಹಾಯಧನ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು. ಪಿ.ಎಂ.ವಿಶ್ವಕರ್ಮ ಯೋಜನೆಯಡಿ ನೇಕಾರರಿಗೆ ಸಹಾಯಧನದಡಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು ಕೈಮಗ್ಗ ಉತ್ಪನ್ನಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು. ಇಂದಿನ ಕೂಲಿಯನ್ನು ಗಮನಿಸಿದರೂ ಸಹ ಕನಿಷ್ಠ 500 ರೂ. ಸಿಗುತ್ತದೆ. ಅಂತಹದ್ದಲ್ಲಿ ಒಂದು ಸೀರೆ ತಯಾರು ಮಾಡಲು ಕನಿಷ್ಠ ಎರಡು ದಿನ…

Read More