ಲೇಖಕ: admin

ಮಡಿಕೇರಿ, NEWS DESK ಮಾ.೭ : ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಸೇಖರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಯೋಜನಾ ಸಮನ್ವಯಾಧಿಕಾರಿ ಎಸ್.ಹೊನ್ನೇಗೌಡ ಅವರು ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಸ್ವೀಕೃತವಾಗಿರುವ ಅನುಮೋದಿಸಿರುವ ಹಾಗೂ ತಿರಸ್ಕರಿಸಿರುವ ಅರ್ಜಿಗಳ ವಿವರವನ್ನು ಸಭೆಗೆ ತಿಳಿಸಿದರು. ಸಭೆಯಲ್ಲಿ ಬಾಳೆಕೋವು ಹಾಡಿಯಿಂದ ನಾಗರಹೊಳೆ ಗದ್ದೆಹಾಡಿ, ಗೋಣಿಗದ್ದೆ ಹಾಡಿ ಕೊಡಂಗೆ ಹಾಡಿ, ನಾಣಚ್ಚಿಗದ್ದೆ ಹಾಡಿ ಮತ್ತು ಕೊಲ್ಲಿಹಾಡಿಯಲ್ಲಿ ಭೂಗತ ಕೇಬಲ್ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಯನ್ನು ಸೆಸ್ಕ್ ವತಿಯಿಂದ ನಿರ್ವಹಿಸಲು ಅನುಮೋದನೆ ನೀಡಲಾಯಿತು. ಸಮುದಾಯ ಹಕ್ಕು ಪತ್ರ ಪಡೆದಿರುವ ಕ್ಲೇಮುದಾರರಿಗೆ ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಜಂಟಿ ಗುರುತಿನ ಚೀಟಿ ನೀಡಲು ತೀರ್ಮಾನಿಸಲಾಯಿತು. ಹಕ್ಕುಪತ್ರ ವಿತರಿಸಲು ಬಾಕಿ ಇರುವ ೨೨ ಸಮುದಾಯ ಹಕ್ಕು ಅರ್ಜಿಗಳಿಗೆ ಸಂಬಂಧಿಸಿದಂತೆ ೧೫ ದಿವಸದೊಳಗೆ ಸರ್ವೇ ಕಾರ್ಯ ಪೂರ್ಣಗೊಳಿಸಿ ಸಲ್ಲಿಸುವಂತೆ ಉಪ ವಿಭಾಗೀಯ ಮಟ್ಟದ ಅರಣ್ಯ ಹಕ್ಕು ಸಮಿತಿಗೆ ಸೂಚಿಸಲಾಯಿತು. ಸಾಕ್ಷಿಗಳ ಕೊರತೆಯಿಂದ ತಿರಸ್ಕರಿಸಿರುವ…

Read More

ಮಡಿಕೇರಿ, NEWS DESK ಮಾ.೭ : ಪವರ್ ಮ್ಯಾನ್/ ಲೈನ್‌ಮ್ಯಾನ್‌ಗಳು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ವಿದ್ಯುತ್ ಕೆಲಸವು ಸೂಕ್ಷö್ಮ ಆಗಿರುವುದರಿಂದ ಒತ್ತಡಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸಲಹೆ ಮಾಡಿದ್ದಾರೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ನಗರದ ಸೆಸ್ಕ್ ವಿಭಾಗೀಯ ಕಚೇರಿಯಲ್ಲಿ ಶನಿವಾರ ನಡೆದ ‘ಪವರ್‌ಮ್ಯಾನ್ /ಲೈನ್‌ಮ್ಯಾನ್‌ಗಳ’ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪವರ್ ಮ್ಯಾನ್‌ಗಳು ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಯಾವುದೇ ಕಾರಣಕ್ಕೂ ವಿಚಲಿತರಾಗದೇ ವಿದ್ಯುತ್ ನಿಯಮಗಳನ್ನು ಖಾತರಿ ಪಡಿಸಿಕೊಂಡು ಪ್ರಜ್ಞೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಮನೆ, ಕಚೇರಿ, ಕೈಗಾರಿಕೆ ಸೇರಿದಂತೆ ಪ್ರತಿಯೊಂದು ಕ್ಷೇತ್ರಕ್ಕೂ ವಿದ್ಯುತ್ ಪೂರೈಕೆ ಅನಿವಾರ್ಯ ಮತ್ತು ಅತ್ಯಗತ್ಯ. ಪ್ರತಿನಿತ್ಯ ಶ್ರಮದಿಂದ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಹೆಚ್ಚಿನ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ಪರಿವರ್ತಕಗಳು ಹಾನಿಯಾಗುವ ಸಾಧ್ಯತೆ ಇದ್ದು, ಈ ಸಂಧರ್ಭದಲ್ಲಿ ಅಪಾಯವನ್ನು ಲೆಕ್ಕಿಸದೆ…

Read More

ಮಡಿಕೇರಿ NEWS DESK ಮಾ.7 : ಕುಶಾಲನಗರದ ಪುಣ್ಯಕೋಟಿ ಗೋಶಾಲೆಗೆ ವಿಶ್ವ ಹಿಂದೂ ಪರಿಷತ್ ನ ಕೊಡಗು ಜಿಲ್ಲಾ ಘಟಕದ ನಿಯೋಗ ಭೇಟಿ ನೀಡಿತು. ಸುಮಾರು 60 ಗೋವುಗಳಿರುವ ಗೋಶಾಲೆಯ ಮೂಲಭೂತ ಸೌಲಭ್ಯಗಳ ಸ್ಥಿತಿಗತಿಯನ್ನು ಪರಿಶೀಲಿಸಿದ ಪ್ರಮುಖರು, ಗೋಪೂಜೆ ಮಾಡಿ ಗೋವುಗಳ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು. ನಂತರ ಒಂದು ಲಾರಿ ಒಣ ಹುಲ್ಲು, ಹಸಿ ಹುಲ್ಲು ಮತ್ತು ಏಳು ಚೀಲ ತೆಂಗಿನ ಹಿಂಡಿಯನ್ನು ನೀಡಿದರು. ವಿಶ್ವ ಹಿಂದೂ ಪರಿಷತ್ ನ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಪ್ರಮುಖರಾದ ಸಂಪತ್ ಕುಮಾರ್ ಮಡಿಕೇರಿ, ಪರಮೇಶ್ ಸೋಮವಾರಪೇಟೆ, ನರಸಿಂಹ ಸುಂಟಿಕೊಪ್ಪ, ಬಜರಂಗದಳದ ಪ್ರಮುಖರಾದ ವಿನಯ್, ತನ್ಮಯ್ ಸೋಮವಾರಪೇಟೆ, ಮೂರ್ನಾಡು ಘಟಕದ ಕಾರ್ಯಕರ್ತರು, ಮಾತೆಯರು ಮತ್ತಿತರರು ಹಾಜರಿದ್ದು ಗೋಶಾಲೆಯ ಅಭಿವೃದ್ಧಿ ಹಾಗೂ ಗೋವುಗಳ ರಕ್ಷಣೆಗಾಗಿ ಅಗತ್ಯ ಸಲಹೆಗಳನ್ನು ನೀಡಿದರು.

Read More

ಮಡಿಕೇರಿ NEWS DESK ಮಾ.7 : ವಿರಾಜಪೇಟೆ ಮೂಲದ ಪ್ರಸ್ತುತ ಮೈಸೂರಿನ ಸಿದ್ಧಾರ್ಥ ನಗರದಲ್ಲಿ ನೆಲೆಸಿರುವ ಕೆ.ಎಲ್.ಸೂರಜ್ (29) ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 525ನೇ ರ‍್ಯಾಂಕ್ ಪಡೆದಿದ್ದಾರೆ.  ಇದು ಐಎಎಸ್ ನ ನಿರೀಕ್ಷೆಯಲ್ಲಿರುವ ಅವರ ನಾಲ್ಕನೇ ಪ್ರಯತ್ನದ ಫಲವಾಗಿದ್ದು, ರ‍್ಯಾಂಕ್ ನಲ್ಲಿ ಸುಧಾರಣೆ ಕಂಡಿದ್ದಾರೆ. 2024 ರಲ್ಲಿ 3ನೇ ಪ್ರಯತ್ನದಲ್ಲಿ 713ನೇ ರ‍್ಯಾಂಕ್ ಗಳಿಸಿ ಕರ್ನಾಟಕ ಕೇಡರ್‌ನಲ್ಲೇ ಐಪಿಎಸ್ ಆಗಿ ಆಯ್ಕೆಯಾಗಿದ್ದು, ಪ್ರಸ್ತುತ ಹೈದರಾಬಾದ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕೆ.ಎಲ್.ಸೂರಜ್ ಅವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿರಾಜಪೇಟೆಯ ಕೆ.ಬಿ.ಶಾಂತಪ್ಪ ಅವರ ಕಿರಿಯ ಸಹೋದರ ನಿವೃತ್ತ ಐಆರ್‌ಎಸ್ ಅಧಿಕಾರಿ ಕೆ.ಬಿ.ಲಿಂಗರಾಜ್ ಅವರ ಪುತ್ರ. ಮೈಸೂರಿನ ಜೆಎಸ್‌ಎಸ್ ಶಾಲೆಯಲ್ಲಿ ಪ್ರಾಥಮಿಕ, ಅಳಿಕೆಯಲ್ಲಿ ಪ್ರೌಢ ಶಿಕ್ಷಣ, ಮೈಸೂರಿನ ವಿದ್ಯಾವರ್ಧಕ ಗೋಲ್ಡನ್ ಜ್ಯೂಬಿಲಿ ಕಾಲೇಜ್ ನಲ್ಲಿ ಪಿಯುಸಿ ಶಿಕ್ಷಣ ಪಡೆದ ಕೆ.ಎಲ್.ಸೂರಜ್ ಎಸ್‌ಜೆಸಿಇ ಕಾಲೇಜ್ ನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿoಗ್ ಪದವಿ ಪಡೆದಿದ್ದಾರೆ.

Read More

ಗೋಣಿಕೊಪ್ಪ, NEWS DESK ಮಾ.7 : ಈ ಸಾಲಿನ ಬಜೆಟ್ ಅಧಿವೇಶನದ ಮೊದಲ ದಿನವೇ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ಪ್ರಯತ್ನದಿಂದ ಕರ್ನಾಟಕ ರಾಜ್ಯ ಘನ ಸರಕಾರ *ಕೊಡವ ಅಭಿವೃದ್ಧಿ ನಿಗಮ* ವನ್ನು ಸ್ಥಾಪಿಸಲು ಘೋಷಣೆ ಮಾಡಿದ್ದು, ಈ *ಸಂಭ್ರಮವನ್ನು* ಗೋಣಿಕೊಪ್ಪಲುವಿನಲ್ಲಿ *ಶಾಸಕರಿಗೆ ಸನ್ಮಾನಿಸುವ* ಮೂಲಕ ಆಚರಿಸಲಾಯಿತು. ಅಧಿವೇಶನದ ಮೊದಲ ದಿನ ಮುಗಿಸಿ ಕ್ಷೇತ್ರಕ್ಕೆ ಮಾನ್ಯ ಶಾಸಕರು ಆಗಮಿಸುತ್ತಿದ್ದ ಸಂದರ್ಭ ಯುಕೊ ಸಂಘಟನೆ ವತಿಯಿಂದ, ಗೋಣಿಕೊಪ್ಪಲುವಿನಲ್ಲಿ ಶಾಸಕರ ಆಗಮನಕ್ಕಾಗಿ ಕಾಯುತ್ತಿದ್ದ ಯುಕೋ ಸಂಘಟನೆಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಶಾಸಕರನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸುವ ಮೂಲಕ ಶಾಸಕರಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು. ಭಾಷಿಕ ಅಲ್ಪಸಂಖ್ಯಾತರು ಹಾಗೂ ಅತ್ಯಂತ ವಿಶಿಷ್ಟ ಹಾಗೂ ಪುರಾತನ ಸಂಸ್ಕೃತಿಯನ್ನು ಹೊಂದಿರುವ ಕೊಡವ ಜನಾಂಗದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಬೇಕೆಂದು ಕೊಡವ ಜನಾಂಗದವರ ದಶಕಗಳ ಬೇಡಿಕೆಯಾಗಿತ್ತು. ಚುನಾವಣೆ ಸಂದರ್ಭದಲ್ಲಿ ಮಾನ್ಯ ಶಾಸಕರು ತಾನು ಆಯ್ಕೆಯಾಗಿ ಬಂದ ಸಂದರ್ಭದಲ್ಲಿ…

Read More

ಬೆಂಗಳೂರು, ಮಾರ್ಚ್ 7, 2026: ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಈಗ ಮಾಹಿತಿ ತಂತ್ರಜ್ಞಾನದ (IT) ಹೊಸ ಕೇಂದ್ರವಾಗಿ ಹೊರಹೊಮ್ಮಲು ಸಜ್ಜಾಗಿದೆ. ವಿಧಾನಸಭೆಯಲ್ಲಿ ಶನಿವಾರ 2026-27ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೆಂಗಳೂರು ನಂತರ ಮೈಸೂರನ್ನು ರಾಜ್ಯದ ಎರಡನೇ ಅತಿದೊಡ್ಡ ಐಟಿ ನಗರವಾಗಿ ಅಭಿವೃದ್ಧಿಪಡಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಮೈಸೂರು ಐಟಿ ನಗರವಾಗಲು ಕಾರಣವೇನು? ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಮತ್ತು ಜನಸಂದಣಿಯ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಹೂಡಿಕೆಗಳನ್ನು ವಿಕೇಂದ್ರೀಕರಿಸಲು ನಿರ್ಧರಿಸಿದೆ. ಹಾಲಿ ಸ್ಥಿತಿ: ಮೈಸೂರಿನಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಕಂಪನಿಗಳಿದ್ದು, 30,000ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಗುರಿ: ಈ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಿ, ಜಾಗತಿಕ ಮಟ್ಟದ ಕಂಪನಿಗಳನ್ನು ಮೈಸೂರಿನತ್ತ ಸೆಳೆಯುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಜಾಗತಿಕ ಸಾಮರ್ಥ್ಯದ ಕೇಂದ್ರಗಳ (GCC) ಕ್ರಾಂತಿ ಭಾರತದಲ್ಲೇ ಮೊದಲ ಬಾರಿಗೆ ವಿಶೇಷ GCC ನೀತಿಯನ್ನು ಜಾರಿಗೆ ತಂದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ ಎಂದು ಸಿಎಂ ಹೆಮ್ಮೆಯಿಂದ ಪ್ರಕಟಿಸಿದರು. 3.5 ಲಕ್ಷ…

Read More

ಬೆಂಗಳೂರು, ಮಾರ್ಚ್ 07, 2026: ನೈಋತ್ಯ ರೈಲ್ವೆ ಇಲಾಖೆಯು ಕಾಚಿಗುಡ–ಯಶವಂತಪುರ ಹಾಗೂ ಬೆಂಗಳೂರು–ಕಲಬುರಗಿ ಮಾರ್ಗಗಳಲ್ಲಿ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಸಮಯದಲ್ಲಿ ಪರಿಷ್ಕರಣೆ ಮಾಡಿದೆ. ಈ ಹೊಸ ವೇಳಾಪಟ್ಟಿಯು ಮಾರ್ಚ್ 15ರಿಂದ ಅಧಿಕೃತವಾಗಿ ಜಾರಿಗೆ ಬರಲಿದ್ದು, ಪ್ರಯಾಣಿಕರು ತಮ್ಮ ಪ್ರಯಾಣದ ಯೋಜನೆಗಳನ್ನು ಈ ಬದಲಾವಣೆಗೆ ಅನುಗುಣವಾಗಿ ಮಾರ್ಪಡಿಸಿಕೊಳ್ಳಲು ಸೂಚಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿಯ ವಿವರಗಳು: 1. ಯಶವಂತಪುರ – ಕಾಚಿಗುಡ (ರೈಲು ಸಂಖ್ಯೆ: 20704) ಹಿಂದೂಪುರ ನಿಲ್ದಾಣ: ಈ ಮೊದಲು ಮಧ್ಯಾಹ್ನ 15.48ಕ್ಕೆ ಬಂದು 15.50ಕ್ಕೆ ನಿರ್ಗಮಿಸುತ್ತಿತ್ತು. ಇನ್ಮುಂದೆ 15.55ಕ್ಕೆ ಆಗಮಿಸಿ 15.57ಕ್ಕೆ ಹೊರಡಲಿದೆ. 2. ಕಾಚಿಗುಡ – ಯಶವಂತಪುರ (ರೈಲು ಸಂಖ್ಯೆ: 20703) ಹಿಂದೂಪುರ ನಿಲ್ದಾಣ: ಮಧ್ಯಾಹ್ನ 12.08ರ ಬದಲು ಪರಿಷ್ಕೃತ ಸಮಯದಂತೆ 12.17ಕ್ಕೆ ಆಗಮಿಸಿ 12.19ಕ್ಕೆ ನಿರ್ಗಮಿಸಲಿದೆ. 3. ಕಲಬುರಗಿ – ಎಸ್‌ಎಂವಿಟಿ ಬೆಂಗಳೂರು (ರೈಲು ಸಂಖ್ಯೆ: 22231) ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ: ಬೆಳಿಗ್ಗೆ 11.00ರ ಬದಲು 11.13ಕ್ಕೆ ಆಗಮಿಸಿ 11.15ಕ್ಕೆ ಹೊರಡಲಿದೆ. ಯಲಹಂಕ ನಿಲ್ದಾಣ:…

Read More

ವಿರಾಜಪೇಟೆಯ ಕಾವೇರಿ ಶಾಲೆಯಲ್ಲಿ ಯು.ಕೆ.ಜಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.      ಈ ಒಂದು ಕಾರ್ಯಕ್ರಮದ ಬಗ್ಗೆ ಪ್ರಾ ಸ್ತಾವಿಕವಾಗಿ ಮಾತನಾಡಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮಾನ್ ಸುದೇ ಶ್ ರವರು 10ನೇ ತರಗತಿಯ ವಿದ್ಯಾರ್ಥಿಗಳಿಗೆ   ಪರೀಕ್ಷೆಯ ಅಂತಿಮ ಹಂತದಲ್ಲಿ ಹೇಗೆ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳ ಬೇಕು ಎಂಬುದನ್ನು ತಿಳಿಸುತ್ತಾ ಶುಭ ಹಾರೈಸಿದರು.    ಈ ಒಂದು ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನವನ್ನು ಅಲಂಕರಿಸಿದ್ದ  ಪೋಷಕ ಶಿಕ್ಷಕ ಸಮಿತಿಯ ಸದಸ್ಯರಾದ ಶ್ರೀಮಾನ್ ಸುಮೇಶ್ ರವರು ಮಾತನಾಡಿ ಪ್ರಸ್ತುತ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸತತ ಪ್ರಯತ್ನದಿಂದ ಮಾತ್ರ ಸಾಧನೆ ಸಾಧ್ಯ ಎಂಬ ಹಿತನುಡಿಗಳೊಂದಿಗೆ ಶುಭ ಹಾರೈಸಿದರು.    ಯು.ಕೆ.ಜಿ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಪಾರ್ವತಿ ಪಿ . ಯು ಪದವಿ ಪ್ರಧಾನ ಮಾಡಿ ಅಭಿನಂದಿಸಿದರು. 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದಂತಹ ಶ್ರೀಮಾನ್ ಸುದೇಶ್ ಬಿ. ಎಸ್…

Read More

ಮಡಿಕೇರಿ, NEWS DESK ಮಾ.೬ : ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ, ವಿರಾಜಪೇಟೆ ತಾಲ್ಲೂಕು, ಅಮ್ಮತ್ತಿ ಹೋಬಳಿ ಘಟಕ ಮತ್ತು ಸಿದ್ದಾಪುರ ಪ್ರೌಢ ಶಾಲೆಯ ಸಂಯುಕ್ತಾಶ್ರಯದಲ್ಲಿ ವಿರಾಜಪೇಟೆಯ ಮೊಣ್ಣಂಡ ಕೆ.ಚೆಂಗಪ್ಪ ಹಾಗೂ ಮರಗೋಡುವಿನ ಚೆರಿಯಮನೆ ಕೃಷ್ಣಪ್ಪ ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸಿದ್ದಾಪುರ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಕನ್ನಡ ಹಾಗೂ ಕೊಡವ ಭಾಷಾ ಬೆಳವಣಿಗೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಸಾಹಿತಿ ಸೋಮಯಂಡ ಕೌಶಲ್ಯ ಸತೀಶ್ ಅವರು ಕೊಡವ ಮತ್ತು ಕನ್ನಡ ಎರಡೂ ಭಾಷೆಗಳಿಗೆ ದ್ರಾವಿಡ ಮೂಲವಾಗಿದೆ. ಭಾಷೆ ಹುಟ್ಟಿ ಬಂದ ವಿವರ, ಜನಾಂಗಗಳ ಬೆಳವಣಿಗೆ ಮತ್ತು ಕೊಡವ ಭಾಷೆಯ ಉಲ್ಲೇಖ ಕನ್ನಡದ ಆದಿ ಕೃತಿಗಳಲ್ಲಿದೆ. ಸರಕಾರ ಕೊಡವ ಮತ್ತು ಕನ್ನಡ ಭಾಷೆಗಳ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ದೇವಣಗೇರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಲೋಕೇಶ ಹೆಚ್.ಡಿ ಅವರು ಜಾನಪದ ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿ ಜಾನಪದ ಕಥೆಗಳ ಮೌಲ್ಯಗಳು, ಒಗಟು ಹಾಗೂ…

Read More

ಕರಡಿಗೋಡುವಿನ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕುಕ್ಕುನೂರು ಕುಟುಂಬಸ್ಥರಿಂದ ಮಳೆ ಪೂಜೆಯನ್ನ ನೆರೆವೇರಿಸಲಾಯಿತು. ದೇವರ ಸನ್ನಿಧಿಯಲ್ಲಿ ನಾಡಿಗೆ ಉತ್ತಮ ಮಳೆಯಾಗಿ ಪ್ರಕೃತಿಯು ಹಚ್ಚ ಹಸಿರಿನಿಂದ ಕಂಗೊಳಿಸಿ ಭೂಮಿಯನ್ನ ತಂಪಾಗಿಸಿ ಧನ ದಾನ್ಯ ಬೆಳೆಗಳು ಸಮೃದ್ಧಿಯಾಗಿ ಬೆಳೆಯಬೇಕು. ಹಾಗು ಜನತೆಗೆ ಉತ್ತಮ ಆರೋಗ್ಯ ದೀರ್ಘಯುಷ್ಯ ವನ್ನ ಕೊಟ್ಟು ಮಳೆಯಿಂದ ಹಸಿರು ಹುಲ್ಲುಗಳು ಚಿಗುರುಹೊಡೆದು ಹುಲ್ಲುಗಾವಲಾಗಿ ಮಾರ್ಪಟ್ಟು ದನ ಕರುಗಳಿಗೆ ಒಳ್ಳೆಯ ಮೇವು ಒದಗಬೇಕು ಜೊತೆಗೆ ಭರತ ಖಂಡದಲ್ಲಿ ಗೋ ಸಂತತಿ ಹೆಚ್ಚಾಗಿ ಪರಿವರ್ತನೆಯಾಗಬೇಕೆಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಂಡರು. ಈ ಸಂದರ್ಭದಲ್ಲಿ ಕುಕ್ಕುನೂರು ಕುಟುಂಬದ ದೇವ ತಕ್ಕಾರದ ಕೆ ಬಿ ದೇವಪ್ರಕಾಶ್ ದೇವಸ್ಥಾನದ ಅಧ್ಯಕ್ಷರಾದ ಕೆ ಬಿ ಪ್ರಸನ್ನ ಕಾರ್ಯದರ್ಶಿ ಚಿದಾನಂದ ಕುಟುಂಬದ ಹಿರಿಯರಾದ ಮೋಹನ್, ಪುರುಷೋತ್ತಮ, ಸೋಮಣ್ಣ, ಜಯರಾಮ್, ಸೂರಜ್, ಸುನಿಲ್, ಕಿಸನ್, ನವೀನ್, ಇನ್ನಿತರರು ಹಾಜರಿದ್ದರು.

Read More