ಲೇಖಕ: admin

ಮಡಿಕೇರಿ ಮಾ.7 NEWS DESK : ಕರ್ನಾಟಕ ಸರ್ಕಾರದ ಪ್ರಸ್ತುತ ಸಾಲಿನ ಮುಂಗಡ ಪತ್ರದಲ್ಲಿ ತಮ್ಮ ದಶಕಗಳ ಬೇಡಿಕೆ ಕೊಡವ ಅಭಿವೃದ್ಧಿ ನಿಗಮ ಘೋಷಣೆಯಾದ ಹಿನ್ನಲೆಯಲ್ಲಿ ಯುಕೊ ಸಂಘಟನೆಯು  ಗೋಣಿಕೊಪ್ಪದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿತು. ಈ ಸಂದರ್ಭ ಬಜೆಟ್ ಅದಿವೇಶನ ಮುಗಿಸಿ ಗೋಣಿಕೊಪ್ಪಕ್ಕೆ ಆಗಮಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಶಾಸಕ ಪತ್ನಿ ಕಾಂಚನ ಪೊನ್ನಣ್ಣ ಅವರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಒಡ್ಡೋಲಗದೊಂದಿಗೆ ಉುಮಾಮಹೇಶ್ವರಿ ಪೆಟ್ರೋಲ್ ಬಂಕಿನಲ್ಲಿ ಸಿದ್ದಪಡಿಸಿದ್ದ ವೇದಿಕೆಗೆ ವೇದಿಕೆ ಕರೆ ತಂದ ಸಂಘಟನೆಯ ಪ್ರಮುಖರು ಶಾಸಕ ಪೊನ್ನಣ್ಣ ಹಾಗೂ ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆ ಮಾಡ ಮಂಜು ಚಿಣ್ಣಪ್ಪ ಅವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಸಂಘಟನೆಯ ಸಂಚಾಲಕ ಮಂಜು ಚಿಣ್ಣಪ್ಪ, ಶಾಸಕ ಎ.ಎಸ್.ಪೊನ್ನಣ್ಣ  ಅವರ ಇಚ್ಛಾ ಶಕ್ತಿ ಹಾಗೂ ಕಾಳಜಿಯಿಂದಾಗಿ ಪ್ರಸಕ್ತ 2026-27ನೇ ಸಾಲಿನ ಮುಂಗಡ ಪತ್ರದಲ್ಲಿ ‘ಕೊಡವ ಅಭಿವೃದ್ದಿ ನಿಗಮ’ ಘೋಷಣೆಯಾಗುವುದರೊಂದಿಗೆ ಯುನೈಟೆಡ್…

Read More

ಮೈಸೂರು ಮಾ.7 NEWS DESK : ದೇವರೆಂಬ ನಂಬಿಕೆಯು ಜಾತಿಧರ್ಮಗಳನ್ನು ಮೀರಿದಂಥದ್ದು. ಜಾತಿಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳ ಬಗ್ಗೆ ಜಾಗೃತರಾಗಿರಬೇಕೆಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು HD ಕೋಟೆಯ ಶಿರಮಹಳ್ಳಿಯಲ್ಲಿ  ಲಕ್ಷ್ಮಿ ದೇವಿ ಅಮ್ಮನವರ ನೂತನ ದೇವಾಲಯವನ್ನು ಉದ್ಘಾಟಿಸಿ ಮಾತನಾಡಿದರು.  HD ಕೋಟೆಯ ಶಿರಮಹಳ್ಳಿಯ ಜನರು ದೈವಭಕ್ತರು. ದೇಗುಲದಲ್ಲಿ ಸ್ಥಾಪಿಸುವ ಪ್ರತಿಮೆಯಲ್ಲಿ ದೇವರನ್ನು ಕಾಣುವುದು ನಮ್ಮ ನಂಬಿಕೆ. ಬಸವಾದಿ ಶರಣರು, ದೇವರು ಎಲ್ಲೆಡೆಯೂ , ಎಲ್ಲರಲ್ಲಿಯೂ ಇದ್ದಾನೆ ಎಂದಿದ್ದರು. ನಮ್ಮ ಪ್ರಾರ್ಥನೆಯಲ್ಲಿ ಇತರರ ಒಳಿತನ್ನೂ ಕೇಳಬೇಕಾಗಿದ್ದು, ದೇವರೆಂಬ ನಂಬಿಕೆಯು ಜಾತಿಧರ್ಮಗಳನ್ನು ಮೀರಿದಂಥದ್ದು. ಯಾವ ಜಾತಿಧರ್ಮಗಳು ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕೆಂದೇ ತಿಳಿಸುತ್ತದೆ ಎಂದರು. :: ಜಾತಿಧರ್ಮಗಳ ಮರೆತು ಜನರು ಒಗ್ಗಟ್ಟಾಗಬೇಕು ::  ಸಮಾಜದ ಪಟ್ಟಭದ್ರಹಿತಾಸಕ್ತಿಗಳು , ಸಮಾಜದ ಜಾತಿವ್ಯವಸ್ಥೆ ಹಾಗೂ ಅಸಮಾನತೆಗಳನ್ನು ಬೆಂಬಲಿಸುತ್ತಾರೆ. ಜಾತಿಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಕುಶಕ್ತಿಗಳ ಬಗ್ಗೆ ನಾವು ಜಾಗೃತರಾಗಿರಬೇಕು. ಇಂದು ಲಕ್ಷ್ಮೀ ದೇಗುಲದ ಉದ್ಘಾಟನೆಯನ್ನು ಜಾತ್ರೆಯ ರೀತಿಯಲ್ಲಿ ಆಯೋಜಿಸಿರುವುದು ಸಂತಸದ…

Read More

ಮಡಿಕೇರಿ ಮಾ.7 NEWS DESK : ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಭಾಗಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿದರು. ಈ ಭಾಗದ ದಶಕಗಳ ಸಮಸ್ಯೆಯಾದ ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ, ಸರಕಾರ ಹಮ್ಮಿಕೊಂಡಿರುವ ರೈಲ್ವೆ ಬ್ಯಾರಿಕೆಡ್ ಅಳವಡಿಸುವ ಯೋಜನೆಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.  ಈ ಕಾಮಗಾರಿಯೂ ರೂ.88 ಲಕ್ಷಗಳಲ್ಲಿ ಕೈಗೊಳ್ಳಲಾಗಿದ್ದು, ರಾಜ್ಯ ಸರ್ಕಾರ ಒಟ್ಟು ಬ್ಯಾರಿಕೆಡ್ ನಿರ್ಮಾಣಕ್ಕಾಗಿ ರೂ.20 ಕೋಟಿ ಮೀಸಲಿರಿಸಿದೆ. ಬಂಬು ಕಾರ್ಡ್ ಪೈಸಾರಿ ಭಾಗದ ಸುಮಾರು 7 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬ್ಯಾರಿಕೆಡ್ ಅಳವಡಿಸುವ ಕಾಮಗಾರಿ ನಡೆಯಲಿದೆ. ಬಂಬುಕಾಡು ಪೈಸಾರಿಯಿಂದ ಕಿಸಾನ್ ತೋಟದ ಮೂಲೆಯ ತನಕ ರೈಲ್ವೆ ಬ್ಯಾರಿಕೆಡ್ ಅಳವಡಿಸುವ ಕಾರ್ಯಕ್ರಮ ಇದಾಗಿದ್ದು, ತಿತಿಮತಿ ಭಾಗದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು. ನಂತರ ಮಾತನಾಡಿದ ಶಾಸಕರು, ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಅನೇಕ ವೈಜ್ಞಾನಿಕ ಯೋಜನೆಗಳನ್ನು ರೂಪಿಸುತ್ತಿದ್ದು, ಇಲ್ಲಿಯ ಸ್ಥಳೀಯರನ್ನು ನಿರಂತರವಾಗಿ ಕಾಡುತ್ತಿರುವ ಈ ಸಮಸ್ಯೆಗೆ ಶಾಶ್ವತ…

Read More

ಕುಶಾಲನಗರ ಮಾ.7 NEWS DESK : ಸ್ವದೇಶಿ ವಿಜ್ಞಾನ ಆಂದೋಲನ-ಕರ್ನಾಟಕ, ಚಾಮರಾಜನಗರ ವಿಶ್ವವಿದ್ಯಾಲಯ, ಚಾಮರಾಜನಗರ ಹಾಗೂ ಕೊಡಗು ವಿಶ್ವವಿದ್ಯಾಲಯ ಇವುಗಳ ಸಹಯೋಗದೊಂದಿಗೆ ಹಾವೇರಿ ವಿಶ್ವವಿದ್ಯಾಲಯ ಆಯೋಜಿಸುತ್ತಿರುವ “18ನೇ ಕನ್ನಡ ವಿಜ್ಞಾನ ಸಮ್ಮೇಳನ” ದಲ್ಲಿ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅವರಿಗೆ ಭಾರತರತ್ನ ಡಾ. ಸರ್.ಎಂ.ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರ -2026 ನೀಡಿ ಗೌರವಿಸಲಾಯಿತು. ಕೃಷಿ ಸಂಶೋಧನೆ ಮತ್ತು ಉನ್ನತ ಶಿಕ್ಷಣ ಕ್ಷೇತ್ರದ  ಸೇವೆಯನ್ನು ಮುಂದುವರಿಸಲು ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

Read More

ಸುಂಟಿಕೊಪ್ಪ ಮಾ.7 NEWS DESK : ಶಾಲಾ ಕಾಲೇಜು ಹಂತದಲ್ಲೇ ಸಾಹಿತ್ಯ ಕುರಿತು ಆಸಕ್ತಿ ಮತ್ತು ಅಭಿವೃದ್ಧಿಗಳನ್ನು ಹೆಚ್ಚಿಸುವ ಮೂಲಕ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ಮತ್ತು ಉತ್ತೇಜನ ನೀಡುವುದು ದತ್ತಿ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನಿರ್‍ಅಹ್ಮದ್ ಹೇಳಿದ್ದಾರೆ. ಸುಂಟಿಕೊಪ್ಪದ ಮಂಜನಾಥಯ್ಯ ಮೀನಾಕ್ಷಮ್ಮ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೊಡಗು ಕುಶಾಲನಗರ ತಾಲ್ಲೂಕು ಘಟಕದ ಮೂಲಕ ಸುಂಟಿಕೊಪ್ಪ ವತಿಯಿಂದ ಆಯೋಜಿತವಾಗಿದ ಎಸ್.ಎಸ್.ರಾಮಮೂರ್ತಿ ದತ್ತಿ ಮತ್ತು ದಿವಗಂತ ಪಿ.ಎಸ್.ಬೀರಪ್ಪ ದತ್ತಿ ನಿಧಿ ಉಪನ್ಯಾಸದಲ್ಲಿ ಉಪನ್ಯಾಸ ನೀಡಿದರು. ಮಕ್ಕಳಲ್ಲಿ ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸುವ ಕೆಲಸವಾಗಬೇಕಾಗಿದೆ. ಭಾಷೆಯು ನಮ್ಮಲ್ಲಿ ಬಾವನೆ ಕಲ್ಪನೆ ವಿಚಾರ ಅನುಭವ ಮೊದಲಾದವುಗಳಿಗೆ ಮೂರ್ತರೂಪ ನೀಡಿದಾಗ ಅದು ಕಾವ್ಯ ಕಥೆ, ಕಾದಂಬರಿ, ಪ್ರಬಂಧ ಸಾಹಿತ್ಯದ ಹಲವು ವಿಭಾಗಗಳಲ್ಲಿ ನಮಗೆ ಸಾಹಿತ್ಯ ಸಂಬಂಧಿ ಹೊರ ನೋಟಗಳನ್ನು ನೀಡುತ್ತದೆ ಎಂದು ಅವರು ಹೇಳಿದರು. ಸಾಹಿತಿಯೊಬ್ಬ ಪದ್ಯ ಅಥವಾ ಗದ್ಯವನ್ನು ರಚಿಸಿದಾಗ ನೂತನ ಭಾವನ ಪ್ರಪಂಚವನ್ನು ಸೃಷ್ಟಿಸಿ ಸೃಷ್ಟಿಕರ್ತ ಎನಿಸಿಕೊಳ್ಳುತ್ತಾನೆ…

Read More

ವಿರಾಜಪೇಟೆ, NEWS DESK ಮಾ.07: ಸ್ವಚ್ಛತೆಯ ಕುರಿತು ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಬಿಟ್ಟಂಗಾಲ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಫೀಕ್ ಎ ಎ ರವರು ಅಭಿಪ್ರಾಯಪಟ್ಟರು. ಅವರು ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ ಎಸ್ ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ತೋಡು ನಾಂಗಲದಲ್ಲಿ ನಡೆಯುತ್ತಿದ್ದು ಅದರ ಪ್ರಯುಕ್ತ ಜರುಗಿದ ಗ್ರಾಮ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಸ್ವಯಂ ಸೇವಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಪರಿಸರ ಸಂರಕ್ಷಣೆ ಎಂಬುವುದು ಪ್ರತೀ ಮನೆ ಮನೆಗಳಿಂದಲೂ ಆರಂಭವಾಗಬೇಕು. ಸ್ವಚ್ಛ ಪರಿಸರ ನಿರ್ಮಾಣದಿಂದ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳ ಸಮಾಜಮುಖಿ ಕಾರ್ಯಕ್ರಮಗಳು ಗಮನಾರ್ಹವಾಗಿದ್ದು ರಾಷ್ಟ್ರದ ಪ್ರಗತಿಗೆ ಬುನಾದಿಯಾಗಿದೆ ಎಂದು ಹೇಳಿದರು. ಸೆಂಟ್ ಆನ್ಸ್ ಪದವಿ ಕಾಲೇಜಿನ…

Read More

ಮಡಿಕೇರಿ NEWS DESK ಮಾ.7 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರಕಾರ “ಹವ್ಯಕ ಭಾಷಾ ಅಕಾಡೆಮಿ” ಮತ್ತು ಕೊಡವ ಅಭಿವೃದ್ಧಿ ನಿಗಮವನ್ನು ಘೋಷಿಸಿರುವುದು, ಅದರ ಜೊತೆಗೆ ಕುಂಬಾರ, ಈಡಿಗ, ಕಾಡುಗೊಲ್ಲ, ತಿಗಳ, ಗಾಣಿಗ, ಉಪ್ಪಾರ ಸಮುದಾಯಗಳಿಗೆ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿರುವುದು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವಲ್ಲಿ ಮತ್ತು ಸಮುದಾಯದ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರಕಾರದ ಈ ನಿರ್ಧಾರವು ಕೊಡವ ಮತ್ತು ಇತರ ಪಟ್ಟಿ ಮಾಡಲಾದ ಸಮುದಾಯಗಳಿಗೆ ಪ್ರಯೋಜನಕಾರಿಯಾಗಲಿದ್ದು, ಅವರ ಭಾಷೆ, ಸಂಸ್ಕೃತಿ ಮತ್ತು ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡಲಿದೆ. ಕೊಡವ ನ್ಯಾಷನಲ್ ಕೌನ್ಸಿಲ್ ಮೊದಲಿನಿಂದಲೂ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಆದಿಮಸಂಜಾತ ಕೊಡವರಿಗೆ ಎಸ್‌ಟಿ ವರ್ಗೀಕರಣ, ಸಂವಿಧಾನಾತ್ಮಕವಾಗಿ ಕೊಡವ ಧಾರ್ಮಿಕ ಸಂಸ್ಕಾರ ಶಸ್ತ್ರಾಸ್ತ್ರದ ಹಕ್ಕುಗಳ ಖಾತರಿ ಮತ್ತು ಕೊಡವ ಭಾಷೆಯನ್ನು 8ನೇ ಶೆಡ್ಯೂಲ್ ಗೆ ಸೇರಿಸುವಂತೆ ಒತ್ತಾಯಿಸುತ್ತಾ ಬಂದಿದೆ ಎಂದು ತಿಳಿಸಿದ್ದಾರೆ.”ಹವ್ಯಕ…

Read More

ಮಡಿಕೇರಿ, NEWS DESK ಮಾ.೭ : ನಾಗರಹೊಳೆಯ ಆದಿವಾಸಿ ನಿವಾಸಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುತ್ತಿದ್ದು, ಈ ಹಿನ್ನೆಲೆ ಅರಣ್ಯ ಹಕ್ಕು ಕಾಯ್ದೆಯಡಿ ಮತ್ತೊಮ್ಮೆ ಪರಿಶೀಲಿಸಲು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಾಗರಹೊಳೆ ಭಾಗದ ಹಾಡಿಗಳಲ್ಲಿನ ಅರಣ್ಯ ಹಕ್ಕು ಕಾಯ್ದೆ ಅರ್ಜಿಗಳ ವಿಲೇವಾರಿ ಬಗ್ಗೆ ಮತ್ತು ಮೂಲಭೂತ ಸೌಕರ್ಯಗಳ ಸಮಸ್ಯೆಗಳ ಕುರಿತು ಹಾಡಿ ಮುಖಂಡರು ಜಿಲ್ಲಾಧಿಕಾರಿ ಅವರ ಗಮನ ಸೆಳೆದರು. ರಾಜ್ಯ ಮಟ್ಟದ ಅರಣ್ಯ ಹಕ್ಕು ಮೇಲುಸ್ತುವಾರಿ ಸಮಿತಿ ಸದಸ್ಯರಾದ ನಾಣಚ್ಚಿ ಗದ್ದೆಹಾಡಿಯ ರಮೇಶ್, ಬ್ರಹ್ಮಗಿರಿ-ಕಾಂತೂರು ಹಾಡಿಯ ಪ್ರಕಾಶ್ ಹಾಗೂ ಮುತ್ತಪ್ಪ ಅವರು ಮಾತನಾಡಿ, ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ರಹ್ಮಗಿರಿ ಕಾಂತೂರು-ಹಾಡಿಯ ಅರಣ್ಯ ಹಕ್ಕು ಅರ್ಜಿಗಳ ಮರು ಸರ್ವೆ ನಡೆಸಿ ಹಕ್ಕು ಪತ್ರ ವಿತರಿಸಲು ಕೋರಿದರು. ನಾಗರಹೊಳೆ ಹಾಡಿಯ ತಿಮ್ಮ ಹಾಗೂ ಶಿವು ಮಾತನಾಡಿ, ಜಿಲ್ಲೆಯ ಪಿವಿಟಿಜಿ ಜನಾಂಗದವರಿಗೆ ಹ್ಯಾಬಿಟೇಟ್ ಹಕ್ಕು ನೀಡಲು, ಸಮುದಾಯ ಹಕ್ಕುಗಳಿಗೆ ಹಕ್ಕು…

Read More

GRADUATION PARADE OF TECHNICAL OFFICERS HELD AT AIR FORCE TECHNICAL COLLEGE BENGALURU Bengaluru, 07 March 2026 The spectacular ceremonial Passing-Out-Parade (POP) of 106 Aeronautical Engineering Course (AEC) was held at Air Force Technical College (AFTC) on 07 March 2026, in the august presence of dignitaries, officials, air warriors, parents and air veterans. The parade embodied the successful culmination of 62 weeks of rigorous training of 106 AEC. A total of 108 Engineering Officers including 09 officers from Friendly Foreign Countries passed out from the College with flying colours. Air Marshal Sanjiv Ghuratia, Air Officer-in-Charge Maintenance, Air Headquarters & Commodore Commandant…

Read More

ಮಡಿಕೇರಿ ಮಾ.೭ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ೪ನೇ ಕೊಡವ ಪುಸ್ತಕ ಪತ್ತಾಯ ಸ್ಥಾಪನೆ ಕಾರ್ಯಕ್ರಮ ಮೂರ್ನಾಡು ಕೊಡವ ಸಮಾಜದಲ್ಲಿ ಅರ್ಥಪೂರ್ಣವಾಗಿ ನೆರೆವೇರಿತು. ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷರಾದ ತೇಲಪಂಡ ಸಿ.ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೊಡವ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಮಹೇಶ್ ನಾಚಯ್ಯ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಈ ವಿನೂತನ ಯೋಜನೆಯು ಕೇವಲ ಕೊಡವ ಭಾಷೆಯ ಪುಸ್ತಕಗಳ ದಾಸ್ತಾನು ಮಾತ್ರ ಆಗಿರದೆ, ಕೊಡಗಿನ ಬಗ್ಗೆ ಬರೆದಿರುವ ಇನ್ನಿತರ ಭಾಷೆಗಳ ಪುಸ್ತಕಗಳನ್ನು ಪತ್ತಾಯದಲ್ಲಿ ಶೇಖರಿಸಿ ಜತನ ಮಾಡಿ, ಅಧ್ಯಯನಕ್ಕೆ ಅವಕಾಶವಿದೆ ಎಂದರು. ಕೊಡವ ಪುಸ್ತಕ ಪತ್ತಾಯ’ವು ಕೊಡಗಿನ ಸಮಗ್ರ ಮಾಹಿತಿ ನೀಡುವ ಭಂಡಾರವಾಗಿರಬೇಕು. ಆ ಮೂಲಕ ಮುಂದಿನ ದಿನಗಳಲ್ಲಿ ಸಂಶೋಧನೆ, ಅಧ್ಯಯನ ನಡೆಸುವವರಿಗೆ ಕೊಡವ ಪುಸ್ತಕ ಪತ್ತಾಯವು ಒಂದು ವಿಶ್ವವಿದ್ಯಾನಿಲಯ ಮಾದರಿಯಲ್ಲಿ ಆಗಬೇಕು ಎಂಬುದು ಆಶಯವಾಗಿದೆ. ಇದು ಕೇವಲ ಪುಸ್ತಕಗಳ ಸಂಗ್ರಹವಾಗಿರದೆ ಜ್ಞಾನದ ಪತ್ತಾಯವಾಗಬೇಕು ಎಂದರು.…

Read More