ಆರ್ಥಿಕ ಶಿಸ್ತಿನಿಂದ ಕೂಡಿದ ಬಜೆಟ್ ಇದಾಗಿದ್ದು, ತಮ್ಮ ಸುದೀರ್ಘವಾದ 17ನೇ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಪಂಚ ಗ್ಯಾರಂಟಿ ಯೋಜನೆಗಳಿಗೆ ಅನುದಾನವನ್ನು ಒದಗಿಸುವ ಮೂಲಕ ಇತರ ಕ್ಷೇತ್ರಗಳಿಗೂ ಸಮಾನ ಆದ್ಯತೆ ನೀಡಿದ್ದಾರೆ ಎಂದು ಶಾಸಕರು ಶ್ಲಾಘಿಸಿದ್ದಾರೆ. ವಿಶೇಷವಾಗಿ ಆರೋಗ್ಯ, ಶಿಕ್ಷಣ, ಕೃಷಿ, ಜಲಸಂಪನ್ಮೂಲ ಮತ್ತು ಉದ್ಯೋಗ ಸೃಷ್ಟಿ ಸೇರಿದಂತೆ ಮೂಲಭೂತ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ರಾಜ್ಯದ ಅಭಿವೃದ್ಧಿಗೆ ಬಲ ನೀಡಲಿದೆ ಎಂದು ಡಾ.ಮಂಥರ್ ಗೌಡ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದ ಸುದೀರ್ಘ ಮುಖ್ಯಮಂತ್ರಿ ಖ್ಯಾತಿಯ ಸಿದ್ದರಾಮಯ್ಯನವರು ಐತಿಹಾಸಿಕ 17 ನೇ ಬಜೆಟ್ ಮಂಡಿಸುವ ಮೂಲಕ ದಾಖಲೆ ಮಾಡಿದ್ದಾರೆ.ಇದು ಅತ್ಯಂತ ಜನಸ್ನೇಹಿ, ರೈತಪರ, ಮಹಿಳಾ ಪರ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಬಜೆಟ್ ಆಗಿದೆ. ಪ್ರತಿಯೊಂದು ವರ್ಗಕ್ಕೂ ನ್ಯಾಯ ಒದಗಿಸುವ ದೂರದೃಷ್ಟಿ ಬಜೆಟ್ ಆಗಿದೆ. ಈ ಮೂಲಕ ‘ ಸಕಾ೯ರ ಎಲ್ಲಾ ವಗ೯ದವರ ಹಿತಕಾಯಲು ಬದ್ದ ಎಂದು ನಿರೂಪಿಸಿದೆ ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ, ನವ ಕರ್ನಾಟಕದ ನಿರ್ಮಾಣ” ಎಂಬ ನಮ್ಮ ಸರ್ಕಾರದ ಮೂಲ ಆಶಯಕ್ಕೆ…
ಲೇಖಕ: admin
ಮಡಿಕೇರಿ NEWS DESK ಮಾ.6 : ರಾಜ್ಯದ ಕಾಂಗ್ರೆಸ್ ಸರಕಾರ ಕೊಡಗು ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎನ್ನುವುದಕ್ಕೆ ಈ ಬಾರಿಯ ಬಜೆಟ್ ಸಾಕ್ಷಿಯಾಗಿದೆ. ಕಾವೇರಿ ನೀರಿನ ಮೂಲಕ ರಾಜ್ಯ ಸಾಕಷ್ಟು ಲಾಭ ಮಾಡಿಕೊಳ್ಳುತ್ತಿದ್ದರೂ ಜೀವನದಿಯ ತವರು ಜಿಲ್ಲೆಗೆ ವಿಶೇಷವಾದ ಯೋಜನೆ ಅಥವಾ ಅನುದಾನವನ್ನು ಘೋಷಿಸದೆ ಇರುವುದು ವಿಷಾದಕರ ಎಂದು ಕೊಡಗು ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಪ್ರಧಾನ ಸಂಚಾಲಕ ತೇಲಪಂಡ ಶಿವಕುಮಾರ್ ನಾಣಯ್ಯ ಟೀಕಿಸಿದ್ದಾರೆ. ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಸರಕಾರದ ಮೇಲೆ ಒತ್ತಡ ಹೇರಿ ವಿಶೇಷ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಸ್ವತ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯ ಬಗ್ಗೆ ಯಾವುದೇ ಆಸಕ್ತಿ ಹೊಂದದೆ ಇರುವುದು ಸ್ಪಷ್ಟವಾಗುತ್ತಿದೆ. ಪ್ರತಿವರ್ಷ ಅತಿವೃಷ್ಟಿಯಿಂದ ಜಿಲ್ಲೆಯ ಜನ ಹಾಗೂ ರೈತಾಪಿ ವರ್ಗ ಸಂಕಷ್ಟವನ್ನು ಎದುರಿಸುತ್ತಾರೆ. ವನ್ಯಜೀವಿಗಳ ದಾಳಿಯಿಂದ ನಲುಗಿ ಹೋಗಿದ್ದಾರೆ. ರಸ್ತೆಗಳ ಅವ್ಯವಸ್ಥೆಯಿಂದ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗುತ್ತಿದೆ. ಈ ಸಮಸ್ಯೆಗಳ ಪರಿಹಾರಕ್ಕೆ ಶಾಶ್ವತ ಯೋಜನೆಗಳನ್ನು ಘೋಷಿಸದೆ ನಿರ್ಲಕ್ಷಿಸಲಾಗಿದೆ. ಕೊಡಗಿಗೆ ರೈಲು ಸಂಪರ್ಕ ಕಲ್ಪಿಸಲು ಅಗತ್ಯ…
ಮಡಿಕೇರಿ NEWS DESK ಮಾ.6 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 17 ನೇ ಬಜೆಟ್ ನಲ್ಲಿ ಕೊಡಗಿನ ಜನರ ನಿರೀಕ್ಷೆಗಳು ಹುಸಿಯಾಗಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಟೀಕಿಸಿದ್ದಾರೆ. ಜಿಲ್ಲೆಯ ಜನ ಪ್ರಮುಖವಾಗಿ ಪ್ರವಾಸೋದ್ಯಮದ ಅಭಿವೃದ್ಧಿ, ಸರ್ವಋತು ರಸ್ತೆಗಳ ನಿರ್ಮಾಣ ಮತ್ತು ವನ್ಯಜೀವಿಗಳ ಉಪಟಳ ನಿಯಂತ್ರಣಕ್ಕೆ ಶಾಶ್ವತ ಹಾಗೂ ವಿಶೇಷ ಯೋಜನೆ ಘೋಷಿಸುವ ನಿರೀಕ್ಷೆಯಲ್ಲಿದ್ದರು. ಆದರೆ ರಾಜ್ಯ ಕಾಂಗ್ರೆಸ್ ಸರಕಾರ ಇದ್ಯಾವುದಕ್ಕೂ ಆದ್ಯತೆ ನೀಡಿಲ್ಲ. ಜಿಲ್ಲೆಯ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ಯೋಜನೆಗಳನ್ನು ಘೋಷಿಸಿಲ್ಲ. ಅತಿವೃಷ್ಟಿಯಿಂದ ಫಸಲು ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರವನ್ನು ಕೂಡ ನೀಡಿಲ್ಲ. ಮುಂದೆ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲಕುವ ಕೃಷಿಕ ವರ್ಗಕ್ಕೆ ನೆರವಿನ ಪ್ಯಾಕೇಜ್ ನ್ನು ಬಜೆಟ್ ನಲ್ಲಿ ಮೀಸಲಿಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಬಜೆಟ್ ನ ಗಾತ್ರ ರೂ.4.48ಲಕ್ಷ ಕೋಟಿ ಆಗಿದೆ, ಸಾಲದ ಗಾತ್ರ ಹೆಚ್ಚಾಗಿದೆ. ಈ ಹೊರೆ ಜನರ ಮೇಲೆ ಬೀಳಲಿದೆ, ತೆರಿಗೆ ಹೆಚ್ಚಳ ಮಾಡಲಾಗಿದೆ.…
ಮಡಿಕೇರಿ NEWS DESK ಮಾ.6 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17 ನೇ ಬಜೆಟ್ ಮಂಡಿಸಿ ದಾಖಲೆ ಮಾಡಿದ್ದಾರೆ, ಅದೇ ರೀತಿ ರಾಜ್ಯದ ಜನರನ್ನು ಸಾಲದ ಶೂಲಕ್ಕೆ ತಳ್ಳಿದ ದಾಖಲೆಯನ್ನೂ ಬರೆದಿದ್ದಾರೆ. ಈ ಬಜೆಟ್ ನಲ್ಲಿ ವಿರಾಜಪೇಟೆ ಕ್ಷೇತ್ರದ ನಿರೀಕ್ಷೆಗಳು ಹುಸಿಯಾಗಿದೆ ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳು 1.32 ಲಕ್ಷ ಕೋಟಿ ರೂ. ಸಾಲ ಮಾಡುವ ಕುರಿತು ಬಜೆಟ್ ನಲ್ಲಿ ಘೋಷಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ ಸರಕಾರÀ ರಾಜ್ಯದ ಜನರನ್ನು ಸಾಲಗಾರರನ್ನಾಗಿ ಮಾಡಿದೆ. ಸರಕಾರಕ್ಕೆ ಕಾವೇರಿ ತವರು ಜಿಲ್ಲೆ ಕೊಡಗಿನ ಅಭಿವೃದ್ಧಿಯ ಬಗ್ಗೆ ಯಾವುದೇ ಕಾಳಜಿ ಕಾಣುತ್ತಿಲ್ಲ. ಜಿಲ್ಲೆಗೆ ಹೊಸ ಯೋಜನೆಗಳನ್ನೇ ಘೋಷಿಸಿಲ್ಲ, ಪ್ರವಾಸೋದ್ಯಮದ ಅಭಿವೃದ್ಧಿಯ ಬಗ್ಗೆ ಉಲ್ಲೇಖವಿಲ್ಲ. ಮುಖ್ಯಮಂತ್ರಿಗಳಿಗೆ ಆತ್ಮೀಯರಾಗಿರುವ ವಿರಾಜಪೇಟೆ ಕ್ಷೇತ್ರದ ಶಾಸಕರು ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ತಂದು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತಾರೆ ಎನ್ನುವ ನಿರೀಕ್ಷೆ ಜನರಲ್ಲಿತ್ತು. ಆದರೆ ನಿರೀಕ್ಷೆಗಳು ಹುಸಿಯಾಗಿದೆ, ವನ್ಯಜೀವಿಗಳ ದಾಳಿ ತಡೆಗೆ ವಿಶೇಷ ಅನುದಾನ…
ಗುವಾಹಟಿ/ನವದೆಹಲಿ, ಮಾರ್ಚ್ 6, 2026: ಭಾರತೀಯ ವಾಯುಪಡೆಯ (IAF) ಹೆಮ್ಮೆಯ ಸುಖೋಯ್-30 ಎಂಕೆಐ (Su-30MKI) ಯುದ್ಧ ವಿಮಾನವು ಅಸ್ಸಾಂನಲ್ಲಿ ಪತನಗೊಂಡಿದ್ದು, ಇಬ್ಬರು ಯುವ ಪೈಲಟ್‌ಗಳನ್ನು ದೇಶ ಕಳೆದುಕೊಂಡಿದೆ. ಗುರುವಾರ ಸಂಜೆ ರಾಡಾರ್ ಸಂಪರ್ಕ ಕಡಿತಗೊಂಡು ನಾಪತ್ತೆಯಾಗಿದ್ದ ಈ ವಿಮಾನವು ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ ಎಂದು ವಾಯುಪಡೆ ಶುಕ್ರವಾರ ಅಧಿಕೃತವಾಗಿ ತಿಳಿಸಿದೆ. ಘಟನೆಯ ವಿವರ: ಗುರುವಾರ ಸಂಜೆ ಜೋರ್ಹತ್ ವಾಯುನೆಲೆಯಿಂದ ತರಬೇತಿ ಹಾರಾಟಕ್ಕಾಗಿ ಈ ಸುಖೋಯ್ ವಿಮಾನವು ಟೇಕ್ ಆಫ್ ಆಗಿತ್ತು. ಆದರೆ ಸಂಜೆ 7:42 ರ ಸುಮಾರಿಗೆ ವಿಮಾನದೊಂದಿಗಿನ ರಾಡಾರ್ ಸಂಪರ್ಕವು ಹಠಾತ್ ಕಡಿತಗೊಂಡಿತು. ಜೋರ್ಹತ್‌ನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಕರ್ಬಿ ಆಂಗ್ಲಾಂಗ್ ಗುಡ್ಡಗಾಡು ಪ್ರದೇಶದಲ್ಲಿ ವಿಮಾನ ಪತನಗೊಂಡಿರುವುದು ಪತ್ತೆಯಾಗಿದೆ. ವೀರಮರಣ ಅಪ್ಪಿದ ಪೈಲಟ್‌ಗಳು: ಈ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಕ್ವಾಡ್ರನ್ ಲೀಡರ್ ಅನುಜ್ (Sqn Ldr Anuj) ಮತ್ತು ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. “ಈ ಅತ್ಯಂತ…
ನವದೆಹಲಿ, ಮಾರ್ಚ್ 6, 2026: ಜಾಗತಿಕವಾಗಿ ತೈಲ ಪೂರೈಕೆಯ ನಾಡಿಮಿಡಿತ ಎಂದೇ ಕರೆಯಲ್ಪಡುವ ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚಿದ್ದರೂ, ಭಾರತದ ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ಪಿಜಿ ಸರಬರಾಜಿನ ಮೇಲೆ ಯಾವುದೇ ಗಂಭೀರ ಪರಿಣಾಮ ಬೀರದು ಎಂದು ಕೇಂದ್ರ ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ. ಭಾರತವು ಪ್ರಸ್ತುತ ಇಂಧನ ಪೂರೈಕೆಯ ವಿಷಯದಲ್ಲಿ “ಅತ್ಯಂತ ಆರಾಮದಾಯಕ ಮತ್ತು ಸುರಕ್ಷಿತ ಸ್ಥಾನದಲ್ಲಿದೆ” ಎಂದು ಶುಕ್ರವಾರ ತಿಳಿಸಲಾಗಿದೆ. ಸರ್ಕಾರ ನೀಡಿದ ಪ್ರಮುಖ ಭರವಸೆಗಳು: ವೈವಿಧ್ಯಮಯ ಮೂಲಗಳು: ಕಳೆದ ಕೆಲವು ವರ್ಷಗಳಿಂದ ಭಾರತವು ತನ್ನ ತೈಲ ಆಮದು ಬುಟ್ಟಿಯನ್ನು ಕೇವಲ ಕೊಲ್ಲಿ ರಾಷ್ಟ್ರಗಳಿಗೆ ಸೀಮಿತಗೊಳಿಸದೆ, ರಷ್ಯಾ ಸೇರಿದಂತೆ ವಿವಿಧ ಭೌಗೋಳಿಕ ಪ್ರದೇಶಗಳಿಗೆ ವಿಸ್ತರಿಸಿದೆ. ಇದರಿಂದಾಗಿ ಹಾರ್ಮುಜ್ ಜಲಸಂಧಿಯ ಮೇಲಿನ ಅವಲಂಬನೆ ಕಡಿಮೆಯಾಗಿದೆ. ದಾಸ್ತಾನು ಲಭ್ಯತೆ: ದೇಶದಲ್ಲಿ ಪ್ರಸ್ತುತ ಇರುವ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದಾಸ್ತಾನು ದೇಶೀಯ ಬೇಡಿಕೆಯನ್ನು ಪೂರೈಸಲು ಸಂಪೂರ್ಣವಾಗಿ ಸಾಕಾಗುತ್ತದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಪರ್ಯಾಯ ಯೋಜನೆ: ಒಂದು ವೇಳೆ ಹಾರ್ಮುಜ್ ಮಾರ್ಗದಲ್ಲಿ…
ಬೆಂಗಳೂರು, ಮಾರ್ಚ್ 6, 2026: ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ 2026-27ನೇ ಸಾಲಿನ ಆಯವ್ಯಯವನ್ನು ಮಂಡಿಸಿದರು. ಈ ಬಾರಿಯ ಬಜೆಟ್ ಗಾತ್ರವು ಗಮನಾರ್ಹವಾಗಿ ಏರಿಕೆಯಾಗಿದ್ದು, ಸಾಮಾಜಿಕ ಭದ್ರತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ವಿಶೇಷವಾಗಿ ಶಿಕ್ಷಣ ಇಲಾಖೆಗೆ ದಾಖಲೆಯ 47,224 ಕೋಟಿ ರೂ. ಅನುದಾನ ಮೀಸಲಿಡುವ ಮೂಲಕ ಕಲಿಕೆಗೆ ಹೊಸ ವೇಗ ನೀಡಲು ಸರ್ಕಾರ ಮುಂದಾಗಿದೆ. ವಲಯವಾರು ಅನುದಾನ ಹಂಚಿಕೆ ಪಟ್ಟಿ: ಈ ಬಾರಿ ಸಿದ್ದರಾಮಯ್ಯ ಅವರು ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿರುವ ಅನುದಾನದ ವಿವರ ಇಲ್ಲಿದೆ: ಇಲಾಖೆ/ವಲಯ ಅನುದಾನ (ಕೋಟಿ ರೂ.ಗಳಲ್ಲಿ) ಶಿಕ್ಷಣ ಇಲಾಖೆ 47,224 ಮಹಿಳಾ ಮತ್ತು ಮಕ್ಕಳ ಕಲ್ಯಾಣ 34,929 ಇಂಧನ ಇಲಾಖೆ 29,947 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 26,559 ಲೋಕೋಪಯೋಗಿ ಮತ್ತು ಸಾರಿಗೆ 23,100 ನೀರಾವರಿ ವಲಯ 22,436 ನಗರಾಭಿವೃದ್ಧಿ ಮತ್ತು ವಸತಿ 22,203 ಕಂದಾಯ ಇಲಾಖೆ 19,843 ಸಮಾಜ ಕಲ್ಯಾಣ 18,612 ಆರೋಗ್ಯ…
ಬೆಂಗಳೂರು, ಮಾರ್ಚ್ 6, 2026: ಹೆಚ್ಚುತ್ತಿರುವ ಮೊಬೈಲ್ ವ್ಯಾಮೋಹ ಮತ್ತು ಸಾಮಾಜಿಕ ಜಾಲತಾಣಗಳ ಅಡ್ಡ ಪರಿಣಾಮಗಳಿಂದ ಮಕ್ಕಳನ್ನು ರಕ್ಷಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ವಿಧಾನ ಸಭೆಯಲ್ಲಿ ಇಂದು ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಘೋಷಿಸಿದ್ದಾರೆ. ನಿಷೇಧಕ್ಕೆ ಕಾರಣಗಳೇನು? ಬಜೆಟ್ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಮೊಬೈಲ್ ಫೋನ್‌ಗಳ ಅತಿಯಾದ ಬಳಕೆ ಮಕ್ಕಳ ಮಾನಸಿಕ ಆರೋಗ್ಯ, ದೈಹಿಕ ಬೆಳವಣಿಗೆ ಮತ್ತು ವಿದ್ಯಾಭ್ಯಾಸದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಅಡ್ಡ ಪರಿಣಾಮಗಳ ತಡೆ: ಸಾಮಾಜಿಕ ಜಾಲತಾಣಗಳಲ್ಲಿನ ಅನಗತ್ಯ ವಿಷಯಗಳು ಮಕ್ಕಳ ದಾರಿ ತಪ್ಪಿಸುತ್ತಿರುವುದನ್ನು ತಡೆಗಟ್ಟಲು ಈ ಕಠಿಣ ಕ್ರಮ ಅನಿವಾರ್ಯವಾಗಿದೆ. ಕೇಂದ್ರದ ವರದಿ ಬೆಂಬಲ: ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷಾ ವರದಿಯಲ್ಲೂ ಮಕ್ಕಳಿಗೆ ಮೊಬೈಲ್ ಬಳಕೆಯನ್ನು ನಿಯಂತ್ರಿಸುವ ಬಗ್ಗೆ ಶಿಫಾರಸು ಮಾಡಲಾಗಿತ್ತು. ಇದನ್ನು ಆಧರಿಸಿ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ…
ಮಡಿಕೇರಿ, NEWS DESK ಮಾಚ್೯ 6 – ಕೊಡಗು ವಿದ್ಯಾ ಇಲಾಖಾ ನೌಕರರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಹೆಚ್.ಎಸ್.ಚೇತನ್ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದು, ಉಪಾಧ್ಯಕ್ಷರಾಗಿ ಬಿ.ಬಿ.ಸ್ವಾತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಫೆಬ್ರವರಿ 16ರಂದು ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆದು 17 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು.ಅಧ್ಯಕ್ಷ ಹಾಗೂ ಉಪಾಧಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಹೆಚ್.ಎಸ್.ಚೇತನ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಬಿ.ಸ್ವಾತಿ ನಾಮಪತ್ರ ಸಲ್ಲಿಸಿದರು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಹೆಚ್.ಎಸ್.ಚೇತನ್ ಅವರ ಹೆಸರನ್ನು ಟಿ.ಕೆ.ಬಸವರಾಜ್ ಸೂಚಿಸಿದರು. ಡಿ.ಕೆ.ರೇಖಾ ಕುಮಾರಿ ಅನುಮೋದಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಿ.ಬಿ.ಸ್ವಾತಿ ಅವರ ಹೆಸರನ್ನು ದೇವಾನಂದ ಎಂ.ಸಿ. ಅವರು ಸೂಚಿಸಿದರೇ, ಡಿ.ಎಂ.ರೇವತಿ ಅನುಮೋದಿಸಿದರು. ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಹೆಚ್.ಎಸ್.ಚೇತನ್ ಹಾಗೂ ಉಪಾಧ್ಯಕ್ಷರಾಗಿ ಬಿ.ಬಿ.ಸ್ವಾತಿ ಅವರು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಉಪನಿಬಂಧಕರಾದ ಪಿ.ಬಿ.ಮೋಹನ್ ಕುಮಾರ್ ಕಾರ್ಯನಿರ್ವಹಿಸಿದರು. ಇದೇ ಸಂದರ್ಭ ಫೆಬ್ರವರಿ 16 ರಂದು ನಡೆದ ಚುನಾವಣೆಯಲ್ಲಿ…
ಮಡಿಕೇರಿ NEWS DESK ಮಾ.6 : ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಮಡಿಕೇರಿ ನಗರದಲ್ಲಿರುವ ಪೊಲೀಸ್ ವಸತಿ ಗೃಹಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿದರು. ವಸತಿ ಗೃಹದಲ್ಲಿರುವ ಸಮಸ್ಯೆಗಳನ್ನು ಅವಲೋಕಿಸಿದರು. ಇದಕ್ಕೂ ಮೊದಲು ಜಿಲ್ಲಾ ಕವಾಯತು ಮೈದಾನದಲ್ಲಿ ವಾರದ ಕವಾಯತು ನಡೆಸಲಾಯಿತು.






