ಪುತ್ತೂರು ನ.3 : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಎಂಬಿಎ ವಿಭಾಗದ ವಿದ್ಯಾರ್ಥಿನಿ ಪವಿತ್ರ.ಜಿ ರಾಜ್ಯ ಮಟ್ಟದ ದಸರಾ ಸಿ.ಎಂ ಕಪ್ ಅಥ್ಲೆಟಿಕ್ ಸ್ಪರ್ಧೆ-2023 ಇದರಲ್ಲಿ ಟ್ರಿಪಲ್‌ಜಂಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಅಸೋಸಿಯೇಶನ್ ಮತ್ತು ಮೈಸೂರು ಜಿಲ್ಲಾಡಳಿತ ಇದರ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ 12.90 ಮೀಟರ್ ದೂರ ಜಿಗಿದು ಪವಿತ್ರ ಪ್ರಥಮ ಸ್ಥಾನ ಗಳಿಸಿದ್ದಾರೆ. ಟ್ರಿಪಲ್‌ಜಂಪ್ ಸ್ಪರ್ಧೆಯಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಚತ್ತೀಸ್‌ಘಡದ ಬಿಲಾಸ್ಪುರದಲ್ಲಿ ನಡೆದ 23ರ ಕೆಳಗಿನ ಹರೆಯದವರ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿಯ ಪದಕ, ಕರ್ನಾಟಕ ಹಿರಿಯರ ಅತ್ಲೆಟಿಕ್ ಕ್ರೀಡಾಕೂಟ-2023 ರಲ್ಲಿ ಚಿನ್ನದ ಪದಕ, ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವನಿದ್ಯಾನಿಲಯದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ನೂತನ ಕೂಟ ದಾಖಲೆಯೊಂದಿಗೆ ಉತ್ತಮ ಕ್ರೀಡಾಪಟು…
ಲೇಖಕ: admin
ಮಡಿಕೇರಿ ನ.3 : ಪೊನ್ನಂಪೇಟೆಯ ಹುದ್ದೂರು ಗ್ರಾಮದಲ್ಲಿ ಕೃಷಿ ಪ್ರಶಸ್ತಿ ವಿಜೇತ ರವಿಶಂಕರ್ ಅವರ ಸಸ್ಯ ತಳಿ ಸಂರಕ್ಷಣಾ ಕ್ಷೇತ್ರಕ್ಕೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭೇಟಿ ನೀಡಿ ವಿವಿಧ ತಳಿಯ ಭತ್ತದ ಬೆಳೆ ವೀಕ್ಷಿಸಿದರು. ಕೊಡಗು ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಗಳಿಗೆ ಆದ್ಯತೆ ಸಿಗುತ್ತಿರುವಾಗ ವಿವಿಧ ತಳಿಗಳ ಭತ್ತ ಬೆಳೆಯುತ್ತಿರುವ ರವಿಶಂಕರ್ ಮತ್ತು ಅವರ ಸಹೋದರರ ಕಾಳಜಿ ಬಗ್ಗೆ ಕೃಷಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ, ಶಾಸಕ ಎ.ಎಸ್..ಪೊನ್ನಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಕೃಷಿ ನಿರ್ದೇಶಕ ಡಾ. ಜಿ.ಟಿ.ಪುತ್ರ ಹಾಗೂ ಅಧಿಕಾರಿಗಳು ಹಾಜರಿದ್ದರು.
ಮಡಿಕೇರಿ ನ.3 : ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದು, ಇವರ ಅಂತಿಮ ದರ್ಶನ ಪಡೆಯಲು ಬರುತ್ತಿದ್ದ ಸಂಬಂಧಿಯೊಬ್ಬರು ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಸುಮಾರು 4 ದಿನಗಳ ಹಿಂದೆ ನಾಪತ್ತೆಯಾಗಿದ್ದ ಸುಂಟಿಕೊಪ್ಪ ಹೋಬಳಿಯ ಕೆದಕಲ್ ಗ್ರಾ.ಪಂ ವ್ಯಾಪ್ತಿಯ 7ನೇ ಮೈಲು ನಿವಾಸಿ ಪೌಲ್ ಡಿಸೋಜ ಅವರ ಮೃತ ದೇಹ ಸಮೀಪದ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ಮೃತದೇಹದಲ್ಲಿ ಭಾರವಾದ ಕಲ್ಲುಗಳನ್ನು ಕಟ್ಟಿಕೊಂಡಿರುವುದು ಗೋಚರಿಸಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪತ್ರಿಯರನ್ನು ಅಗಲಿದ್ದಾರೆ. ::: ಸಂಬಂಧಿ ಸಾವು ::: ಈ ನಡುವೆ ಪೌಲ್ ಡಿಸೋಜ ಅವರ ಅಂತಿಮ ದರ್ಶನ ಪಡೆಯಲು ಬರುತ್ತಿದ್ದ ಅಣ್ಣನ ಮಗ ಸಿಲ್ವಿನ್ ಡಿಸೋಜ ಅವರು ಅಪಘಾತದಲ್ಲಿ ಕೊನೆಯುಸಿಳೆದಿದ್ದಾರೆ. ತಾವು ಪ್ರಯಾಣಿಸುತ್ತಿದ್ದ ಕಾರು ಬಿಡದಿ ಬಳಿ ರಸ್ತೆ ಬದಿಯ ಡಿವೈಡರ್‍ಗೆ ಡಿಕ್ಕಿಯಾಗಿ ಮಗುಚಿಕೊಂಡಿದೆ. ಪರಿಣಾಮ ಕಾರಿನಡಿಯಲ್ಲಿ ಸಿಲುಕಿದ ಪೌಲ್ ಡಿಸೋಜ ಅವರು ಮೃತಪಟ್ಟರು. ಕಾರಿನಲ್ಲಿದ್ದ ಉಳಿದ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಡಿಕೇರಿ ನ.3 : ಪೊನ್ನಂಪೇಟೆ ಸಿ.ಐ.ಟಿ ಕಾಲೇಜ್ ನಲ್ಲಿ ನ.5ರ ವರೆಗೆ ನಡೆಯುವ ರಾಜ್ಯ ಮಟ್ಟದ ಕೃಷಿಯಂತ್ರ ಮೇಳವನ್ನು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಉದ್ಘಾಟಿಸಿದರು. ಈ ಸಂದರ್ಭ ಸಿಐಟಿ ಅಧ್ಯಕ್ಷ ಎಂ.ಸಿ.ಕಾರ್ಯಪ್ಪ ಮಾತನಾಡಿ, ರಾಜ್ಯ ಕೃಷಿ ಯಂತ್ರ ಮೇಳದ ಮೂರು ದಿನದ ಕಾರ್ಯಕ್ರಮಕ್ಕೆ ಈ ಬಾರಿ ಸುಮಾರು ರೂ.80 ಲಕ್ಷ ಖರ್ಚು ವೆಚ್ಚ ತಗುಲಿದೆ. ಮುಂದಿನ ವರ್ಷ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆಗೆ ಸರ್ಕಾರದ ಅನುದಾನ ಕಲ್ಪಿಸಲು ಸಚಿವರಲ್ಲಿ ಮನವಿ ಮಾಡಿದರು. ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಪೊನ್ನಂಪೇಟೆಯಲ್ಲಿ ಸಚಿವ ಎನ್.ಚೆಲುವರಾಯಸ್ವಾಮಿಗೆ ಭವ್ಯ ಸ್ವಾಗತ ಕೋರಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ ರಾಜಾ , ಕೊಡಗು ಎಸ್.ಪಿ ರಾಮರಾಜನ್, ಜಿ.ಪಂ.ಸಿಇಓ, ವರ್ಣಿತ್ ನೇಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು…
ಮಡಿಕೇರಿ ನ.3 : ಗಾಂಜಾ ಮಾರಾಟ ಮತ್ತು ಸರಬರಾಜು ಮಾಡುತ್ತಿದ್ದ ಆರೋಪಿಯನ್ನು ಸುಂಟಿಕೊಪ್ಪ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಂಟಿಕೊಪ್ಪದ ನಿವಾಸಿ ಮಧುಸೂದನ್ ಕೆ.ಕೆ(32) ಎಂಬಾತನನ್ನು 420 ಗ್ರಾಂ ಗಾಂಜಾ ಸಹಿತ ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ. ಸೋಮವಾರಪೇಟೆ ಉಪವಿಭಾಗದ ಡಿವೈಎಸ್‍ಪಿ ಆರ್.ಎ.ಗಂಗಾಧರಪ್ಪ, ಸುಂಟಿಕೊಪ್ಪ ಪಿಎಸ್‍ಐ ಶ್ರೀಧರ್ ಎಂ.ಸಿ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು.
ಮಡಿಕೇರಿ ನ.3 : ಕೃಷಿ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ಕುಶಾಲನಗರ ಪೊಲೀಸರು ಮಾಲು ಸಹಿತ ವಶಕ್ಕೆ ಪಡೆದಿದ್ದಾರೆ. ಬಸವನತ್ತೂರು ಗ್ರಾಮದ ಹಾಗಲಕಾಯಿ ರಾಜ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈತನ ಕೃಷಿ ಜಮೀನಿನಲ್ಲಿದ್ದ 1.62 ಕೆ.ಜಿ ಹಸಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಸೋಮವಾರಪೇಟೆ ಉಪವಿಭಾಗದ ಡಿವೈಎಸ್‍ಪಿ ಆರ್.ಎ.ಗಂಗಾಧರಪ್ಪ, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಮೋಹನ್ ರಾಜು ಪಿ. ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಪೊಲೀಸರ ದಕ್ಷ ಕಾರ್ಯಾಚರಣೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸೋಮವಾರಪೇಟೆ ನ.3 : ಬ್ಯಾಂಕಾಕ್ ಮತ್ತು ಶ್ರೀಲಂಕಾದಲ್ಲಿ ನ.8 ರಿಂದ 13ರ ವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಸೆಸ್ಟೊಬಾಲ್ ಚಾಂಪಿಯನ್‍ಶಿಪ್ ಪುರುಷರ ವಿಭಾಗದ ಭಾರತ ತಂಡಕ್ಕೆ ಸುಂಟಿಕೊಪ್ಪದ ಮೊಹಮ್ಮದ್ ಶಾಹಿಲ್ ಆಯ್ಕೆಯಾಗಿದ್ದಾರೆ. ಮೊಹಮ್ಮದ್ ಶಾಹಿಲ್ ಸುಂಟಿಕೊಪ್ಪದ ಕೆ.ಎ.ಉಸ್ಮಾನ್ ಮತ್ತು ಅಸ್ಮತ್ ದಂಪತಿಯ ಪುತ್ರ.
ಮಡಿಕೇರಿ, ನ.3 : ಭ್ರಷ್ಟಾಚಾರ ವಿರೋಧಿ ದಿನದ ಅಂಗವಾಗಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ನಗರದ ಮುಖ್ಯ ರಸ್ತೆಯಲ್ಲಿ ಜಾಥಾ ನಡೆಸುವ ಮೂಲಕ ತೆರಳಿ ಭ್ರಷ್ಟಾಚಾರದ ವಿರುದ್ಧ ಘೋಷಣೆಗಳನ್ನು ಕೂಗಿ ಜಾಗೃತಿ ಮೂಡಿಸಿದರು.
ವಿರಾಜಪೇಟೆ ನ.3 : ಕೊಡಗು ಹೆಗ್ಗಡೆ ವಿದ್ಯಾಭಿವೃದ್ಧಿ ಸಂಘ ಮತ್ತು ಸಮಾಜದ ವಾರ್ಷಿಕ ಮಹಾಸಭೆಯು ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಸದಸ್ಯತ್ವ ಪಡೆಯುವುದರೊಂದಿಗೆ ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು. ಈ ನಿಟ್ಟಿನಲ್ಲಿ ಹೊಸ ಸದಸ್ಯತ್ವ ಪಡೆಯುವರಿಗೆ ಸದಸ್ಯತ್ವ ಶುಲ್ಕವನ್ನು ಹಂತ ಹಂತವಾಗಿ ಮೂರು ವರ್ಷಗಳ ಕಂತಿನಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಭಿಪ್ರಾಯಪಟ್ಟರು. ಸಭೆಯಲ್ಲಿ 2024ರ ಕೊಡಗು ಹೆಗ್ಗಡೆ ಸಮಾಜದ ಕ್ರೀಡಾ ಕೂಟ ಮೇ ತಿಂಗಳ 3 ರಿಂದ 5ರೊಳಗೆ ಹಾತೂರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾರ್ಯಪ್ಪ ಕ್ರೀಡಾಂಗಣದಲ್ಲಿ ನಡೆಲಿದೆಯೆಂದು ಘೋಷಣೆ ಮಾಡಲಾಯಿತು. ಬೆಟ್ಟಗೇರಿ ಗ್ರಾ.ಪಂ ಅಧ್ಯಕ್ಷ ಚಳಿಯಂಡ ಕಮಲಾ ಮತ್ತು ಹಾಲುಗುಂದ ಗ್ರಾ.ಪಂ ಅಧ್ಯಕ್ಷ ಪಂದಿಕಂಡ ಕುಶ ದಿನೇಶ್ ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪಡಿಞರಂಡ ಚಂಗಪ್ಪ, ಸಮಾಜದ ಕಾರ್ಯದರ್ಶಿ ಚಂಗಚಂಡ…
ಕಡಂಗ ನ 3 : ವಿರಾಜಪೇಟೆ ಡೊನೇಟರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ವಿರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತಿ ತಾಲ್ಲೂಕು ಅಧ್ಯಕ್ಷ ರಾಜೇಶ್ ಪದ್ಮನಾಭ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಟ್ರಸ್ಟ್ ಗೌರವಾಧ್ಯಕ್ಷ ರಾಫಿ, ಕಾರ್ಯದರ್ಶಿ ಇರ್ಷಾದ್, ಉಮ್ಮರ್, ಮೊಹಮ್ಮದ್ ರಜಿ, ನಿಸಾರ್ ಅಹಮದ್ ಹಾಜರಿದ್ದರು. ವರದಿ : ನೌಫಲ್ ಕಡಂಗ






