ಮಡಿಕೇರಿ ಅ.22 : ಕುಶಾಲನಗರದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ 2022-23ನೇ ಸಾಲಿನ ವಾರ್ಷಿಕೋತ್ಸವ ಹಾಗೂ ಶ್ರೀ ನಾರಾಯಣ ಗುರುಗಳ ಗುರು ನಮನ ಕಾರ್ಯಕ್ರಮ ಅ.29 ರಂದು ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಎಸ್.ಸುಧೀರ್ ತಿಳಿಸಿದ್ದಾರೆ. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋಬಳಿ ಸಂಘ ನೋಂದಣಿ ಯಾಗಿ 13 ವರ್ಷಗಳ ನಂತರ ಪ್ರಥಮವಾಗಿ ದೊಡ್ಡ ಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ ಪಟ್ಟಣದ ಬೈಚನಹಳ್ಳಿ ಗ್ರಾಮದ ಶ್ರೀ ಮಾರಿಯಮ್ಮ ದೇವಾಲಯ ಬಳಿಯಿಂದ ಕೋಟಿ ಚೆನ್ನಯ್ಯರ ಹಾಗೂ ಶ್ರೀ ನಾರಾಯಣ ಗುರುಗಳ ಭಾವ ಚಿತ್ರವನ್ನು ವಾದ್ಯಗೋಷ್ಠಿ, ಭಜನಾ ತಂಡದೊಂದಿಗೆ ಸಭಾಂಗಣದವರೆಗೆ ಭವ್ಯ ಮೆರವಣಿಗೆ ನಡೆಸಲಾಗುವುದು. ಸಭಾ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರಿಗೆ ವಿವಿಧ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ 500 ಕ್ಕೂ ಅಧಿಕ ಮಂದಿ ಸಮುದಾಯ ಬಾಂಧವರಿದ್ದು, ಸಂಘಟನೆ ಮೂಲಕ ಸಮಾಜಕ್ಕೆ ಆರ್ಥಿಕ ಕ್ರೋಡೀಕರಣ ಮಾಡಲಾಗಿದೆ. ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್, ಕುಶಾಲನಗರ ವೃತ್ತನಿರೀಕ್ಷಕ ರಾಜೇಶ್ ಕೋಟ್ಯಾನ್ ಮತ್ತಿತರರು ಅಂದಿನ ಕಾರ್ಯಕ್ರನದಲ್ಲಿ…
ಲೇಖಕ: admin
ಮಡಿಕೇರಿ ಅ.22 – ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳ ಎಂಟನೇ ದಿನವಾದ ಸೋಮವಾರ ಆಯುಧಪೂಜಾ ಸಂದಭ೯ ವೈವಿಧ್ಯಮಯ ಕಾಯ೯ಕ್ರಮಗಳು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿಸಲ್ಪಟ್ಟಿದೆ. ಈ ಬಾರಿ ಮಡಿಕೇರಿ ದಸರಾದ ಪ್ರಮುಖ ಆಕಷ೯ಣೆಯಾಗಿರುವ ಭಾರತದ ಹೆಸರಾಂತ ಹಿನ್ನಲೆ ಗಾಯಕ ವಿಜಯಪ್ರಕಾಶ್ ಅವರಿಂದ ಗಾನವೈಭವ ನಡೆಯಲಿದೆ. ಅ. 23 ರಂದು ಸೋಮವಾರ ಶ್ರೀ ಕಾಮಾಕ್ಷಿ ಮಹಿಳಾ ಸಂಘದಿಂದ ಕಥಕ್ಕಳಿ, ಯುವಜಾನಪದ ಬಳಗ ವತಿಯಿಂದ ಜಾನಪದ ನೖತ್ಯ, ಯುವಜನಪದ ಬಳಗದಿಂದ ನೖತ್ಯ, ಮಡಿಕೇರಿ ತಾಲೂಕು ಬಂಟರ ಸಂಘ, ಕ್ವೀನ್ಸ್ ಆಫ್ ಕೂಗ್೯, ಮಂಗಳೂರಿನ ತಾಂಡವಂ ಡಾನ್ಸ್ ಅಕಾಡೆಮಿಯಿಂದ ನೖತ್ಯರಂಗ್ ಸೋಮವಾರದ ಇತರ ಸಾಂಸ್ಕೖತಿಕ ಕಾಯ೯ಕ್ರಮಗಳಾಗಿದೆ.
*ದಸರಾ ಹಬ್ಬದ ಶುಭಾಶಯಗಳು : ಮಾತೆ ಕಾವೇರಿ ಹಾಗೂ ತಾಯಿ ದುರ್ಗೆ ಸರ್ವರಿಗೂ ಶುಭವನ್ನುಂಟು ಮಾಡಲಿ* (ತೇಲಪಂಡ ಶಿವಕುಮಾರ್ ನಾಣಯ್ಯ, ಸದಸ್ಯರು, ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿ)
*ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ದಸರಾ ಹಬ್ಬದ ಶುಭಾಶಯಗಳು* (ಡಿ.ವಿನೋದ್ ಶಿವಪ್ಪ ಹಾಗೂ ಡಿ.ವಿಶಾಲ್ ಶಿವಪ್ಪ, ಮಾಲೀಕರು ಬೆಟ್ಟಗೇರಿ ಸಮೂಹ ಕಾಫಿ ತೋಟಗಳು)
ಮಡಿಕೇರಿ ಅ.22 : ಡಾರ್ಜಿಲಿಂಗ್ ಗೂರ್ಖಾಲ್ಯಾಂಡ್ ಮತ್ತು ಬೋಡೋಲ್ಯಾಂಡ್ ಮಾದರಿಯಲ್ಲಿ ಸಂವಿಧಾನದ ಆರ್ಟಿಕಲ್ 244 ಆರ್/ಡಬ್ಲ್ಯೂ 6ನೇ ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆ ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ. ಕೊಡವ ಲ್ಯಾಂಡ್ ಗಾಗಿ ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಬಿಟ್ಟಂಗಾಲ ಜಂಕ್ಷನ್ ಬಳಿಯಿಂದ ಪಾದಯಾತ್ರೆ ನಡೆಯಿತು. ನಂತರ ಪಟ್ಟಿಬಾಣೆ ಮಂದ್ ಪೆರವನಾಡ್ ನಲ್ಲಿ ಕೊಡವ ಜಾಗೃತಿ ಸಭೆ ನಡೆಸಿದ ನಾಚಪ್ಪ ಅವರು, ಕೊಡವರ ಸಾಂವಿಧಾನಿಕ ಭದ್ರತೆಗಾಗಿ 9 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಿಲ್ಲೆಯಾದ್ಯಂತ ಪಾದಯಾತ್ರೆ ನಡೆಸುತ್ತಿದ್ದು, ಸರ್ಕಾರದ ಗಮನ ಸೆಳೆಯಲಾಗುತ್ತಿದೆ ಎಂದರು. ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು ಎನ್ನುವುದು ಮುಖ್ಯ ಬೇಡಿಕೆಯಾಗಿದ್ದು, ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಹೈಕೋರ್ಟ್ನಲ್ಲಿ ಈ ಕುರಿತು ಅರ್ಜಿ ಸಲ್ಲಿಸಿ ನಮ್ಮ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಹಿರಿಯರಾದ ಸ್ವಾಮಿ ಅವರು ನಮಗೆ ಸ್ಫೂರ್ತಿಯಾಗಿದ್ದು, ಅವರಿಂದ ಪ್ರೇರಣೆಗೊಂಡು ಅವರ ಜನ್ಮದಿನದಿಂದ ಪಾದಯಾತ್ರೆಯನ್ನು…
ಮಡಿಕೇರಿ ಅ.22 : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ವೈದ್ಯರ ಕೊರತೆ ಇದ್ದರೂ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳದೆ ಇರುವುದನ್ನು ಗಮನಿಸಿದರೆ ಜನರ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ತಾತ್ಸಾರ ಮನೋಭಾವವಿದೆ ಎನ್ನುವುದು ಸಾಬೀತಾಗುತ್ತದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು. ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಸಾಕಷ್ಟಿದ್ದರೂ ಕಾಂಗ್ರೆಸ್ ಸರ್ಕಾರ ವಾಸ್ತವ ಪರಿಸ್ಥಿತಿ ಅರಿಯದೆ ಅವಿವೇಕತನದಿಂದ ವರ್ತಿಸುತ್ತಿದೆ. ರಾಜ್ಯದಲ್ಲಿ ವೈದ್ಯರ ಕೊರತೆ ಇಲ್ಲ ಎಂದು ಹೇಳುತ್ತಿರುವುದು ನಿಜಕ್ಕೂ ಶೋಚನೀಯ ಎಂದು ಬೇಸರ ವ್ಯಕ್ತಪಡಿಸಿದರು. ಇತ್ತೀಚೆಗೆ ನಾನು ಉತ್ತರ ಕರ್ನಾಟಕದ ರಾಜ್ಯ ಪ್ರವಾಸ ಕೈಗೊಂಡಾಗ ಅಲ್ಲಿನ ಜಿಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿದ ಸಂದರ್ಭ ಸಾಕಷ್ಟು ವೈದ್ಯರುಗಳಿಲ್ಲದೆ ಮತ್ತು ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಸಾವಿರಾರು ರೋಗಿಗಳು ಪರದಾಡುತ್ತಿರುವ ಅಮಾನವೀಯ ಪರಿಸ್ಥಿತಿಯನ್ನು ಖುದ್ದಾಗಿ ನೋಡಿದ್ದೇನೆ. ಕ್ಯಾಬಿನೆಟ್ ಸಭೆಯ ನಂತರದ ಸರ್ಕಾರದ ಹೇಳಿಕೆ ನೋಡಿ…
ಮಡಿಕೇರಿ ಅ.22 : ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ ಪಾದಯಾತ್ರೆಯ 4ನೇ ಹಂತ ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗಾಮದ ಬೋಟೋಳಿನಾಡ್ ನಲ್ಲಿ ಪೂರ್ಣಗೊಂಡಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಕೋವಿಯೊಂದಿಗೆ ಪಾದಯಾತ್ರೆ ನಡೆಸಿದ ಗ್ರಾಮದ ಕೊಡವ, ಕೊಡವತಿಯರು ಕೊಡವಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆ ಪರ ಘೋಷಣೆಗಳನ್ನು ಕೂಗಿದರು. ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಬೋಟೋಳಿನಾಡ್ “ತಿರಿಕೆ ಪಾಳಿ ಮಂದ್” ನಲ್ಲಿ ಕೊಡವ ಜನಜಾಗೃತಿ ಸಭೆ ನಡೆಸಿದ ನಾಚಪ್ಪ ಅವರು, ಅತ್ಯಂತ ಸೂಕ್ಷö್ಮ ಜನಾಂಗವಾಗಿರುವ ಕೊಡವರಿಗೆ ಸಾಂವಿಧಾನಿಕ ಭದ್ರತೆ ಸಿಗಬೇಕಾದರೆ ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಯ ಬೇಡಿಕೆ ಈಡೇರಬೇಕೆಂದು ಪ್ರತಿಪಾದಿಸಿದರು. ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸಬೇಕು, ಕೊಡವ ಜನಾಂಗದ ಸಮಗ್ರ ಕುಲಶಾಸ್ತç ಅಧ್ಯಯನ ಆರಂಭಿಸಬೇಕು, ಕೊಡವ ಕಸ್ಟಮರಿ ಜನಾಂಗೀಯ ‘ಸಂಸ್ಕಾರ ಗನ್’ ಹಕ್ಕುಗಳನ್ನು ಸಿಖ್ಖರ “ಕಿರ್ಪಾನ್” ಗೆ ಸಮಾನವಾಗಿ ನಮ್ಮ ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಕೊಡವರ “ಧಾರ್ಮಿಕ…
ಮಡಿಕೇರಿ ಅ.21 : ಅಖಿಲ ಕೊಡವ ಸಮಾಜ ಮಾಜಿ ಅಧ್ಯಕ್ಷ ಮಾತಂಡ ಮೊಣ್ಣಪ್ಪ ನಿಧನಕ್ಕೆ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
ಚೆಟ್ಟಳ್ಳಿ ಅ.21 : ಬಂಟ್ವಾಳ ತಾಲೂಕಿನ ಬ್ರಹ್ಮಗಿರಿ ಗೋವಿನ ತೋಟ ಹಾಗೂ ಗೋ ಸೇವಾ ಗತಿವಿಧಿ ಸಂಯುಕ್ತ ಆಶ್ರಯದಲ್ಲಿ ಗೋ ರಥಯಾತ್ರೆಗೆ ಚೆಟ್ಟಳ್ಳಿಯಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ರಥಯಾತ್ರೆಯ ಗೋವಿಗೆ ಬಾಳೆ ಹಣ್ಣು ಹಾಗೂ ಹಸಿ ಹುಲ್ಲನ್ನು ತಿನ್ನಿಸುವ ಮೂಲಕ ಗೌರವ ಸಲ್ಲಿಸಿದರು. ಹಿಂದೂ ಸಂಘಟನೆಯ ಪ್ರಮುಖರಾದ ಬಲ್ಲಾರಂಡ ಕಂಠಿಕಾರ್ಯಪ್ಪ ಮಾತನಾಡಿ, ಹಿಂದೂ ಧರ್ಮ ದಲ್ಲಿ ಗೋವಿಗೆ ಪೂಜ್ಯ ಸ್ಥಾನವಿದ್ದು, ಪ್ರತಿಯೊಂದು ಕಾರ್ಯ ದಲ್ಲೂ ಗೋವಿಗೆ ಪೂಜೆ ಸಲ್ಲಿಸಲಾಗುತ್ತದೆ.ತಾಯಿಯು ಮಗುವಿಗೆ ಒಂದೆದಡು ವರ್ಷ ಹಾಲುಣಿಸಿ ಪೋಷಿಸಿದರೆ ಗೋವು ಸಾವಿನವರೆಗೂ ಹಾಲುಣಿಸುವ ಪುಣ್ಯ ಕಾರ್ಯ ವನ್ನು ಮಾಡುವ ಮೂಲಕ ಗೋಮಾತೆ ಎನಿಸಿಕೊಂಡಿದೆ. ಗೋವನ್ನು ಕಸಾಯಿಕಾನೆಗೆ ಮಾರಾಟಮಾಡುವುದು ತಡೆ ಯಾಗಬೇಕೆಂದರು. ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಈಗಿನ ದಿನಗಳಲ್ಲಿ ಗೋವನ್ನು ಪೋಷಿಸುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಪ್ರತಿಯೊಂದು ಮನೆಯಲ್ಲೂ ಗೋವನ್ನು ಪೋಷಿಸುವಂತಾಗ ಬೇಕೆಂದು ತಿಳಿಸಿದರು. ಕಾವೇರಿ ತೀರ್ಥವನ್ನು ವಿತರಿಸುವ ಮೂಲಕ…
ಕಡಂಗ ಅ.21 : ಬದ್ರಿಯ ಸುನ್ನಿ ಮುಸ್ಲಿಂ ಜಮಾಅತ್ ಅಶ್ರಯದಲ್ಲಿ ತಾಜುಲ್ ಉಲಮರವರ ಹೆಸರಿನಲ್ಲಿ ನ.18 ರಂದು ಉರೂಸ್ ಮುಬಾರಕ್ ಕಾರ್ಯಕ್ರಮ ನಡೆಯಲಿದ್ದು, ಇದರ ಅಂಗವಾಗಿ ಜುಮಾ ನಮಾಜ್ ನಂತರ ಬದ್ರಿಯ ಜಮಾಅತ್ ಅಧ್ಯಕ್ಷ ಅಬ್ದುಲ್ ರಹ್ಮನ್ ಅರಫಾ ಅಧಿಕೃತವಾಗಿ ಪೋಸ್ಟರ್ ಬಿಡುಗಡೆ ಗೊಳಿಸಿದರು. ಈ ಸಂದರ್ಭ ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಸುಲೈಮಾನ್ ಸಿ.ಎಂ., ಎಸ್ ವೈ ಎಸ್ ಅಧ್ಯಕ್ಷ ಅಶ್ರಫ್ ಸಿ.ಎ., ಕೆಎಂಜೆ ಪ್ರಧಾನ ಕಾರ್ಯದರ್ಶಿ ಸಲಾಂ,ಎಸ್ ಎಸ್ ಎಫ್ ಕಾರ್ಯದರ್ಶಿ ರಾಝಿಕ್, ಬದ್ರಿಯಾ ಜಮಾಅತ್ ಪ್ರಧಾನ ಕಾರ್ಯದರ್ಶಿ ರಾಶೀದ್,ಕೋಶಾಧಿಕಾರಿ ಸಿ.ಎ. ರಜಾಕ್,ಬದ್ರಿಯಾ ಮಸೀದಿ ಖತೀಬ್ ಇಸ್ಮಾಯಿಲ್ ಲತೀಫಿ, ಜಮಾಅತ್ ಪದಾಧಿಕಾರಿಗಳು, ಎಸ್ ಎಸ್ ಎಫ್, ಎಸ್ ವೈ ಎಸ್, ಕೆಎಂಜೆ ಯ ಪದಾಧಿಕಾರಿಗಳು ಮತಿತ್ತರರು ಇದ್ದರು. ವರದಿ : ನೌಫಲ್ ಕಡಂಗ






