ಲೇಖಕ: admin

ಚೆಟ್ಟಳ್ಳಿ  ಅ.17 :   : ಚೆಟ್ಟಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ  ಸಂಘದ ವತಿಯಿಂದ 16ನೇ ವರ್ಷ  ಕಾವೇರಿ ತೀರ್ಥ ವಿತರಣಾ ಕಾರ್ಯಕ್ರಮ  ಅ.18 ರಂದು ನಡೆಯಲಿದೆ ಎಂದು  ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ  ತಿಳಿಸಿದ್ದಾರೆ. ಪೂರ್ವಹ್ನ  10.30 ಗಂಟೆಗೆ ಸಹಕಾರ ಸಂಘದ ಮುಂದಿರುವ ಕಾವೇರಿ ಮಾತೆಗೆ ವಿಶೇಷ ಅಲಂಕಾರ ದೊಂದಿಗೆ ಪೂಜೆ ಸಲ್ಲಿಸಿ, ನಂತರ  ತೀರ್ಥ ವಿತರಣಾ ಕಾರ್ಯಕ್ರಮ  ನಡೆಯಲಿದೆ. ಕಳೆದ 15 ವರ್ಷಗಳ ಹಿಂದೆ ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ಕಾವೇರಿ ಮಾತೆಯ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿ ಅಂದಿನಿಂದ ಪ್ರತೀ ವರ್ಷ ಕಾವೇರಿ ತೀರ್ಥ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

Read More

ಮಡಿಕೇರಿ ಅ.17 : ಟೀಕ್ ವುಡ್ ಎಸ್ಟೇಟ್‍ನ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದಸರಾ ಹಬ್ಬದ ಪ್ರಯುಕ್ತ ಅ.15 ರಿಂದ ಅ.23ರ ವರೆಗೆ ನವರಾತ್ರಿ ಉತ್ಸವ ನಡೆಯಲಿದೆ. ದೇವಾಲಯದಲ್ಲಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿದ್ದು, ಅ.20 ರಂದು ಚಂಡಿಕಾಹೋಮ ನೆರವೇರಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಆಡಳಿತ ಮಂಡಳಿ ಕೋರಿದೆ.

Read More

ಮಡಿಕೇರಿ ಜ.17 : ನಾಡಹಬ್ಬ ದಸರಾ ಆಚರಣೆ ಸಂದರ್ಭ ಡಿಜೆ ಯನ್ನು ನಾಡಿನ ಜನ ಬಯಸಿದ್ದಾರೆ, ಇದಕ್ಕೆ ತಡೆಯೊಡ್ಡುವ ಕೆಲಸವನ್ನು ಜಿಲ್ಲಾಡಳಿತ ಮಾಡಬಾರದು ಎಂದು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಜೆ ಕುರಿತು ನ್ಯಾಯಾಲಯದ ಆದೇಶ ಇರುವುದು ನಿಜ, ಆದರೆ ವಿಶೇಷ ಸಂದರ್ಭಗಳಲ್ಲಿ 2-3 ದಿನ ಡಿಜೆ ಬಳಸಲು ರಿಯಾಯಿತಿ ಇದೆ ಎಂದರು. ವರ್ಷಕ್ಕೆ ಒಂದು ಬಾರಿ ಬರುವ ದಸರಾ ಸಂದರ್ಭ ಎರಡು ದಿನಗಳಷ್ಟೇ ಡಿಜೆ ಬೇಕು ಎಂದು ಕೇಳುತ್ತಿದ್ದಾರೆ. ಇದಕ್ಕೆ ತಡೆಯೊಡ್ಡುವುದು ಸರಿಯಲ್ಲ. ಯಾರೋ, ಎಲ್ಲಿಂದಲೋ ಬಂದು ನ್ಯಾಯಾಲಯದ ಹೆಸರು ಹೇಳಿ ಇಲ್ಲಿ ಸುದ್ದಿಗೋಷ್ಠಿ ಮಾಡಿದಾಕ್ಷಣ ಅಧಿಕಾರಿಗಳು ಡಿಜೆಯನ್ನು ನಿಲ್ಲಿಸುವ ಅಗತ್ಯವಿಲ್ಲ. ಇಷ್ಟು ವರ್ಷ ಆಗದೇ ಇರುವ ಅನಾಹುತ ಈಗ ಆಗಿ ಬಿಡುತ್ತದೆಯೇ ಎಂದು ಪ್ರಶ್ನಿಸಿದ ಬೋಪಯ್ಯ ಅವರು, ಯಾವುದೇ ಕಾರಣಕ್ಕು ಜಿಲ್ಲಾಡಳಿತ ಡಿಜೆಗೆ ತಡೆಯೊಡ್ಡಬಾರದು ಎಂದರು.

Read More

ಮಡಿಕೇರಿ ಅ.17 : ಕೊಡಗು ಜಿಲ್ಲೆಯ ಕೃಷಿ ಇಲಾಖೆಯ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಯೋಜನೆಯಡಿ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ 2 ಹುದ್ದೆಗಳಿಗೆ ಒಪ್ಪಂದದ ಆಧಾರದ ಮೇಲೆ 2023-24ನೇ ಸಾಲಿನ ಸೀಮಿತ ಅವಧಿಗೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಸೋಮವಾರಪೇಟೆ ತಾಲ್ಲೂಕು ಹಾಗೂ ವಿರಾಜಪೇಟೆ ತಾಲ್ಲೂಕುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಷರತ್ತಿಗೆ ಒಳಪಟ್ಟು ಅರ್ಜಿ ಆಹ್ವಾನಿಸಲಾಗಿದೆ. ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ವಿದ್ಯಾರ್ಹತೆ ಎಂ.ಎಸ್ಸಿ (ಕೃಷಿ/ ತೋಟಗಾರಿಕೆ/ ಮೀನುಗಾರಿಕೆ/ ಅರಣ್ಯ/ ರೇಷ್ಮೆ). ಕನಿಷ್ಠ 2 ವರ್ಷ ಕೃಷಿ ವಿಸ್ತರಣಾ ಮತ್ತು ಸಂಬಂಧಿತ ಚಟುವಟಿಕೆಯಲ್ಲಿ ಅನುಭವ ಹಾಗೂ ಎಂ.ಎಸ್.ಆಫೀಸ್‍ನಲ್ಲಿ ಪರಿಣಿತಿ ಹೊಂದಿರಬೇಕು. ಗರಿಷ್ಟ ವಯೋಮಿತಿ 45 ವರ್ಷ ಮಾಸಿಕ ರೂ.30 ಸಾವಿರ ಆಗಿದೆ. ಈ ಹುದ್ದೆಗಳಿಗೆ ಅರ್ಹರಿರುವ ಅಭ್ಯರ್ಥಿಗಳು ನ.7 ರೊಳಗೆ ಕಚೇರಿ ವೇಳೆಯಲ್ಲಿ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿ(ಆತ್ಮ ವಿಭಾಗ) ಕೊಡಗು…

Read More

ಮಡಿಕೇರಿ ಅ.17 : ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಬಂಧಿಯಾಗಿರುವವರು ತಮ್ಮ ತಮ್ಮ ತಪ್ಪುಗಳನ್ನು ಅರಿತುಕೊಂಡು ಜೀವನದಲ್ಲಿ ಪರಿವರ್ತನೆಯಾಗುವ ಮೂಲಕ ಹೊಸ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಜಿಲ್ಲಾ ಕಾರಾಗೃಹದ ಅಧೀಕ್ಷಕ ಸಂಜಯ್ ಜಿತ್ತಿ ಕರೆ ನೀಡಿದ್ದಾರೆ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ದಿ ಆರ್ಗನೈಜ಼ೇಷನ್ ಫಾರ್ ದ ಡೆವಲಪ್‍ಮೆಂಟ್ ಆಫ್ ಪೀಪಲ್(ಒಡಿಪಿ) ಮೈಸೂರು ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವೆ, ಜಿಲ್ಲಾ ಕಾರಾಗೃಹ, ಮಡಿಕೇರಿ, ಇವರುಗಳ ಸಹಯೋಗದೊಂದಿಗೆ ಜೈಲು ಕೈದಿಗಳ ಜೀವನೋಪಾಯ ಮತ್ತು ಪುನರ್ವಸತಿ ಯೋಜನೆಯಡಿ ಮಡಿಕೇರಿಯ ಜಿಲ್ಲಾ ಕಾರಾಗೃಹದಲ್ಲಿ ಎಲೆಕ್ಟ್ರಿಷಿಯನ್ ಹಾಗೂ ಪ್ಲಂಬಿಂಗ್ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ನಡೆಯಿತು. ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ನಿಮಗೆ ತಪ್ಪಿನ ಅರಿವಾಗಬೇಕು, ಜೀವನದಲ್ಲಿ ಸುಧಾರಣೆಯಾಗಬೇಕು, ನಿಮ್ಮ ಕುಟುಂಬದವರು ನೀವು ಹೊಸ ವ್ಯಕ್ತಿಗಳಾಗಿ ಹೊರ ಬರುವುದುದನ್ನು ಕಾಯುತ್ತಿದ್ದಾರೆ ಎಂದರು. ಎಲೆಕ್ಟ್ರಿಷಿಯನ್ ಹಾಗೂ ಪ್ಲಂಬಿಂಗ್ ತರಬೇತಿ 1 ತಿಂಗಳು ಇಲ್ಲಿ ನಡೆಯುತ್ತಿದ್ದು, ಆಸಕ್ತಿ ವಹಿಸಿ ಕಲಿಯಬೇಕು. ನಾನು ನಿಮ್ಮನ್ನು ಹೊರಗಡೆ ನೋಡಿದಾಗ, ಸ್ವ-ಉದ್ಯೋಗ ನಡೆಸುತ್ತಾ ತಮ್ಮ…

Read More

ಮಡಿಕೇರಿ ಅ.17 : ಕೊಡಗು ಜಿಲ್ಲೆಯಲ್ಲಿ ಹಲವು ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು, ಯೋಜನೆಗಳಿಗೆ ಹಣವಿದ್ದರೂ ಪೂರ್ಣಗೊಳಿಸುತ್ತಿಲ್ಲ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಅವರು ‘ಕೊಡವ ಹೆರಿಟೇಜ್’ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈಗಾಗಲೇ 3 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆದಿದ್ದು, ಉಳಿದ ಕಾಮಗಾರಿ ಆಗದಿರುವ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಈಗ ಆಗಿರುವ ಕಾಮಗಾರಿಗಳು ಮತ್ತು ಆಗಬೇಕಿರುವ ಕಾಮಗಾರಿ ಬಗ್ಗೆ ಒಂದು ವಾರದಲ್ಲಿ ವರದಿ ನೀಡುವಂತೆ ಸಂಬಂಧಪಟ್ಟ ಎಂಜಿನಿಯರ್ ಗೆ ಸೂಚಿಸಿದರು. ಶಾಸಕ ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ವರ್ಣಿತ್ ನೇಗಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸಿದ್ದೇಗೌಡ ಮತ್ತಿತರರು ಹಾಜರಿದ್ದರು.

Read More

ಮಡಿಕೇರಿ ಅ.17 : ಪಶುಪಾಲನಾ ಇಲಾಖೆಯಿಂದ ಕಟ್ಟಡ ಮತ್ತು ಯಂತ್ರೋಪಕರಣ ಸೇರಿದಂತೆ ಸುಮಾರು 181 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪ್ರಾಣಿ ಪ್ರಯೋಗಾಲಯ ಸಂಸ್ಥೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಸಕ ಡಾ.ಮಂತರ್ ಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಅವರು ಮಂಗಳವಾರ ಭೂಮಿಪೂಜೆ ಮಾಡಿದರು. ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪಾಲಿಕ್ಲೀನಿಕ್ ಉಪ ನಿರ್ದೇಶಕ ಡಾ.ಸಿ.ಪಿ.ತಿಮ್ಮಯ್ಯ, ಸಹಾಯಕ ನಿರ್ದೇಶಕ ಪ್ರಸನ್ನ(ಮಡಿಕೇರಿ), ಬಾದಾಮಿ(ಸೋಮವಾರಪೇಟೆ), ಪಾಲಿಕ್ಲೀನಿಕ್ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಚಿದಾನಂದ ಮತ್ತಿತರರು ಉಪಸ್ಥಿತರಿದ್ದರು. ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಲಿಂಗರಾಜು ದೊಡ್ಡಮನಿ ಅವರು ಪ್ರಾಣಿಗಳಿಗೆ ಬರುವ ಸಾಂಕ್ರಾಮಿಕ ಕಾಯಿಲೆಗಳಿಗೆ ಬೇಕಾಗುವ ಲಸಿಕೆ ದಾಸ್ತಾನು ಮಾಡುವುದು ಹಾಗೂ ವಿಷಕಾರಿ ಸಸ್ಯಗಳಿಂದ ಬರುವ ಕಾಯಿಲೆಗಳ ತಪಾಸಣೆ ಮಾಡುವುದು ಮುಖ್ಯ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.

Read More

ಮಡಿಕೇರಿ ಅ.17 : ಗುತ್ತಿಗೆದಾರರ ಮೇಲೆ ನಡೆದ ಐಟಿ ದಾಳಿ ಸಂದರ್ಭ ಪತ್ತೆಯಾದ ಕೋಟಿಗಟ್ಟಲೆ ಹಣ ಯಾರಿಗೆ ಸೇರಿದ್ದು ಎನ್ನುವುದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಬಹಿರಂಗ ಪಡಿಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಬಿಜೆಪಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರುಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಹಣ ಸಂಗ್ರಹದ ಆರೋಪ ಮಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಮಾತನಾಡಿ ಐಟಿ ದಾಳಿಯಾದಾಗ ಸಿಕ್ಕ ಹಣದ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಜನರಿಗೆ ಸತ್ಯವನ್ನು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಶೇ.40 ಕಮಿಷನ್ ಪಡೆಯುತ್ತಿದ್ದಾರೆ ಎಂದು ಹೋರಾಟ ಮಾಡುತ್ತಿದ್ದ ಕಾಂಗ್ರೆಸ್, ಈಗ ಎಷ್ಟು ಹಣ ವಸೂಲಿಯಲ್ಲಿ ತೊಡಗಿದೆ ಎಂದು ಪ್ರಶ್ನಿಸಿದರು. ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದೆ, ಆದರೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕೊಡಗಿನ ರಸ್ತೆಗಳ ಅಭಿವೃದ್ಧಿಯ ಬಗ್ಗೆ ಮೊದಲು…

Read More

ಮಡಿಕೇರಿ ಅ.17 : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ ಮಡಿಕೇರಿ ವತಿಯಿಂದ ಪೊನ್ನಂಪೇಟೆ ತಾಲ್ಲೂಕು ಗೋಣಿಕೊಪ್ಪ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಆಯುಷ್ಮಾನ್ ಭವ ಕಾರ್ಯಕ್ರಮದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯ್ತಿ ಇವರ ಸಂಯುಕ್ತ ಆಶ್ರಯದಲ್ಲಿ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ನಡೆಯಿತು. ಈ ಶಿಬಿರದಲ್ಲಿ ಸಾಮಾನ್ಯ ವೈದಶಾಸ್ತ್ರ, ಶಸ್ತ್ರಚಿಕಿತ್ಸೆ, ಕಣ್ಣು, ಪ್ರಸೂತಿ ಮತ್ತು ಸ್ತ್ರೀ ರೋಗ, ಮಕ್ಕಳ, ಚರ್ಮ ರೋಗ, ಕಿವಿ ಮೂಗು ಗಂಟಲು, ಮೂಳೆ ಮತ್ತು ಕೀಲು, ಸಮುದಾಯ ವೈದ್ಯಕೀಯ, ದಂತ, ಮಾನಸಿಕ ರೋಗ, ಸಾಂಕ್ರಾಮಿಕ ರೋಗಗಳ ನುರಿತ ತಜ್ಞ ವೈದ್ಯರು ವೈದ್ಯಕೀಯ ಸೇವೆಯನ್ನು ನೀಡಲಾಯಿತು. ಶಿಬಿರದಲ್ಲಿ ಸುಮಾರು 300 ಕ್ಕಿಂತ ಹೆಚ್ಚು ಹೊರ ರೋಗಿಗಳು ವ್ಯೆದ್ಯರ ಭೇಟಿ, 26 ಯುಡಿಐಡಿ ಕಾರ್ಡ್‍ಗಳು, 150 ಕ್ಕಿಂತ ಹೆಚ್ಚಿನ ಜನರು ಸಾಂಕ್ರಾಮಿಕ ರೋಗಗಳ ಪರೀಕ್ಷೆಯನ್ನು…

Read More

ಮಡಿಕೇರಿ ಅ.17 : ಡಿವೈನ್ ಪಾರ್ಕ್ ಸಂಸ್ಥೆಯ ಅಂಗ ಸಂಸ್ಥೆಯಾದ ಮೂರ್ನಾಡು ವಿವೇಕ ಜಾಗ್ರತ ಬಳಗದ ವತಿಯಿಂದ ಅತ್ಯಪರೂಪದ ಆತ್ಮೋನ್ನತಿ ಶಿಬಿರ ನಡೆಯಿತು. ಮರಗೋಡಿನ ಗೌಡ ಸಮಾಜದಲ್ಲಿ ನಡೆದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದ ಡಿವೈನ್ ಪಾರ್ಕ್‍ನ ಅಧಿಕಾರಿಗಳಾದ ಪ್ರೇಮಾ ಪ್ರಭಾಕರ್ ಹಾಗೂ ರಾಜೇಶ್ ನಾಯರ್ ಆತ್ಮೋನ್ನತಿ ಕುರಿತು ವಿವರಿಸಿದರು. ಪ್ರತಿಯೊಬ್ಬ ವ್ಯಕ್ತಿ ವ್ಯಕ್ತಿತ್ವ ನಿರ್ಮಾಣದೆಡೆಗೆ ಸಾಗುವ ಪರಿ ಮತ್ತು ಮನುಷ್ಯ ಜನ್ಮದ ಪಾವಿತ್ರ್ಯತೆ ಬಗ್ಗೆ ಅರಿತುಕೊಳ್ಳಬೇಕು. ಭಗವಂತನಿಗೆ ಮೊದಲ ಆದ್ಯತೆ ನೀಡಿ ತನ್ನ ಪಾಲಿಗೆ ಒದಗಿದ ಕರ್ತವ್ಯಗಳನ್ನು ಅತ್ಯಂತ ಪ್ರೀತಿಯಿಂದ ನಿರ್ವಹಿಸುವ ಕಲೆಯನ್ನು ಕರಗತ ಮಾಡಿಕೊಂಡರೆ ಜೀವನ ಜೇನಾಗುತ್ತದೆ. ಸಂತೃಪ್ತಿಯ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮೂರ್ನಾಡು ವಿವೇಕ ಜಾಗ್ರತ ಬಳಗದ ಅಧ್ಯಕ್ಷೆ ದಿವ್ಯ ತೇಜ ಕುಮಾರ್, ಉಪಾಧ್ಯಕ್ಷ ಯಶವಂತ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಶೃತಿ ಸ್ವಾಗತಿಸಿ, ಬಿ.ಜಿ.ಸೌಮ್ಯ ವಂದಿಸಿದರು. ಸುಮಾರು 200ಕ್ಕೂ ಹೆಚ್ಚು ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Read More