ನಾಪೋಕ್ಲು ಅ.18 : ತೊಟ್ಟಿಲು ತೂಗುವ ಕೈ ದೇಶವನ್ನು ಆಳುವುದು ಎನ್ನುವ ನಾಣ್ನುಡಿಗೆ ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಗೆ ಸ್ಥಾನಮಾನ ದೊರೆತ್ತಿರುವುದು ಸಾಕ್ಷಿಯಾಗಿದೆ ಎಂದು ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಹೇಳಿದರು. ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮುರ್ನಾಡು ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯುಕ್ತ ಆಶ್ರಯದಲ್ಲಿ ಮಂಡೇಪಂಡ ಅಕ್ಕಮ್ಮ ಗಣಪತಿ ದತ್ತಿನಿಧಿ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ “ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ನಾಪೋಕ್ಲು ಕಸಾಪ ಹೋಬಳಿ ಘಟಕದ ಅಧ್ಯಕ್ಷ ನೆರವಂಡ ಉಮೇಶ್ ಮಾತನಾಡಿ, ಮಹಿಳೆ ತ್ಯಾಗಮಯಿ. ತನ್ನ ಕುಟುಂಬ ನಿರ್ವಹಣೆಯೊಂದಿಗೆ ಸಾಮಾಜಿಕ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವುದು ಪ್ರಶಾಂಸನಾರ್ಹವಿಚಾರ ಎಂದರು. ವಿದ್ಯಾರ್ಥಿಗಳನ್ನು ಅವರ ಆಸಕ್ತಿಗನುಗುಣವಾಗಿ ಅವರ ಗುರಿ ತಲುಪಿಸಿ ಜೀವನವನ್ನು ರೂಪಿಸುವ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದರು. ಕರ್ನಾಟಕ…
ಲೇಖಕ: admin
ನಾಪೋಕ್ಲು ಅ.18 : ಮೂರ್ನಾಡು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ವಿಶೇಷ ವಾರ್ಷಿಕ ಶಿಬಿರದ ಅಂಗವಾಗಿ ನಾಪೋಕ್ಲುವಿನಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ನಗರದ ಕೆಪಿಎಸ್ ಶಾಲೆಯಲ್ಲಿ ವಿಶೇಷ ವಾರ್ಷಿಕ ಶಿಬಿರದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳು ನಾಪೋಕ್ಲು-ಮೂರ್ನಾಡು ರಸ್ತೆಯ ಎರಡು ಬದಿಯಲ್ಲಿ ಪ್ಲಾಸ್ಟಿಕ್, ಕಸ ಕಡ್ಡಿಗಳನ್ನು ಹೆಕ್ಕಿ ಶುಚಿಗೊಳಿಸಿದರು. ಈ ಸಂದರ್ಭ ಮೂರ್ನಾಡು ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ದಮಯಂತಿ, ಸಿಬ್ಬಂದಿ ಮಹೇಶ್ ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ
ಮಡಿಕೇರಿ ಅ.18 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ಶರನ್ನವರಾತ್ರಿಯ 4ನೇ ದಿನ ಬಾಗಿನ ದೀಪದ ಅಲಂಕಾರ ಮಾಡಿ ಪೂಜಿಸಲಾಯಿತು. ಅ.19 ರಂದು ಕಟೀಲು ದುರ್ಗಾ ಅಲಂಕಾರ ನೆರವೇರಲಿದೆ.
ಮಡಿಕೇರಿ ಅ.18 : ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ 2023-24ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನ ಎನ್‌ಎಸ್‌ಎಸ್ ನೋಡಲ್ ಅಧಿಕಾರಿ ವನಿತ್ ಕುಮಾರ್ ಉದ್ಘಾಟಿಸಿ, ಮಾತನಾಡಿ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಕೊಡಗಿಗೆ ಒಂದು ಹೆಮ್ಮೆ. ಎಲ್ಲಾ ಕಾಲೇಜುಗಳಿಗೂ ಇದು ದೊಡ್ಡಣ್ಣನಂತಿದೆ ಎಂದು ಬಣ್ಣಿಸಿದರು. ಸಣ್ಣದಾಗಿ ಆರಂಭವಾದ ರಾಷ್ಟ್ರೀಯ ಸೇವಾಯೋಜನೆ ಇದೀಗ ಹೆಮ್ಮರವಾಗಿ ಬೆಳೆದಿದ್ದು, ಉತ್ತಮ ಮನೋಭಾವನೆಯ ಮೂಲಕ ದೇಶದ ಒಳಗೆ ರಕ್ಷಣೆ ಮಾಡುವ ಕೆಲಸಕ್ಕೆ ಮುಂದಾಗಿದೆ. ಇದು ಸೇವಾ ಮನೋಭಾವ, ನಾಯಕತ್ವ ಗುಣ, ದೇಶ ಪ್ರೇಮ, ತಾಳ್ಮೆಯನ್ನ ಮೈಗೂಡಿಸಿ ಕೊಡುತ್ತದೆ ಎಂದರು. ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ಅನೇಕ ಸ್ವಯಂ ಸೇವಕರು ತಮ್ಮ ಜೀವದ ಹಂಗು ತೊರೆದು ರಕ್ಷಣೆಯಲ್ಲಿ ಮುಂದಾಗಿದ್ದರು. ಅದರಂತೆ ವಿದ್ಯಾರ್ಥಿಗಳು ಕೂಡ ತುರ್ತು ಸಂದರ್ಭದಲ್ಲಿ ಸ್ವಯಂ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ರಾಘವ ಮಾತನಾಡಿ, ಕಾಲೇಜಿನ ಪ್ರಮುಖ ಆಧಾರ ಸ್ತಂಭ ಎನ್‍ಎಸ್‍ಎಸ್ ಹಾಗೂ…
ಮಡಿಕೇರಿ ಅ.18 : ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ 25 ಗ್ರಾಮ ಪಂಚಾಯತ್‍ಗಳಲ್ಲಿ ‘ಸಮಗ್ರ ನಾಗರಿಕ ಸೇವಾ ಕೇಂದ್ರ/ಗ್ರಾಮ ಒನ್ ಕೇಂದ್ರಗಳಿಗೆ ಆಸಕ್ತ ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪ್ರಾಂಚೈಸಿಗಳು https://www.gramaonebls.com/users/registration ಲಿಂಕ್‍ನ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಪ್ರಾಜೆಕ್ಟ್ ಮ್ಯಾನೇಜರ್ ಅಥವಾ ಕೋ-ಆರ್ಡಿನೇಟರ್, ಜಿಲ್ಲಾಧಿಕಾರಿಗಳ ಕಚೇರಿ, ಮಡಿಕೇರಿ, ಇವರನ್ನು ಸಂಪರ್ಕಿಸಬಹುದು.(9611657344/ 9900385301) ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 25 ಗ್ರಾಮ ಪಂಚಾಯಿತಿಗಳ ವಿವರ ಇಂತಿದೆ. ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ, ಬೆಟ್ಟದಳ್ಳಿ, ಗರ್ವಾಲೆ, ನೆರುಗಳಲೆ, ತೋಳೂರು ಶೆಟ್ಟಳ್ಳಿ, ಹರದೂರು, ಕುಶಾಲನಗರ ತಾಲ್ಲೂಕಿನ ಕೆದಕಲ್, 7ನೇ ಹೊಸಕೋಟೆ, ನಾಕೂರು ಶಿರಂಗಾಲ, ಗುಡ್ಡೆಹೊಸೂರು, ವಿರಾಜಪೇಟೆ ತಾಲ್ಲೂಕಿನ ಕಾಕೋಟು ಪರಂಬು, ಬೆಟೋಳಿ, ಅಮ್ಮತ್ತಿ, ಪೊನ್ನಂಪೇಟೆ ತಾಲ್ಲೂಕಿನ ನಿಟ್ಟೂರು, ಬಲ್ಯಮಂಡೂರು, ಕೆ.ಬಾಡಗ, ಕುಟ್ಟ, ನಾಲ್ಕೇರಿ, ಬಿ.ಶೆಟ್ಟಿಗೇರಿ, ಕಿರುಗೂರು, ಪೊನ್ನಂಪೇಟೆ. ಮಡಿಕೇರಿ ತಾಲ್ಲೂಕಿನ ಮರಗೋಡು, ಹೊಸ್ಕೇರಿ, ಗಾಳಿಬೀಡು ಮತ್ತು ಕಡಗದಾಳು.
ಮಡಿಕೇರಿ ಅ.18 : ಪೊನ್ನಂಪೇಟೆ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಾಲಯದಲ್ಲಿ ಅ.15 ರಿಂದ 23ರ ವರೆಗೆ ನವರಾತ್ರಿಯ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದೆ ಎಂದು ದೇವಾಲಯದ ತಕ್ಕಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಚಮ್ಮಟೀರ ಸುಗುಣ ಮುತ್ತಣ್ಣ ತಿಳಿಸಿದ್ದಾರೆ. ಪ್ರತಿನಿತ್ಯ ಸಂಜೆ 7 ಗಂಟೆಯಿಂದ ದುರ್ಗಾ ಪೂಜೆ ನಡೆಯಲಿದ್ದು, ಅ.24 ರಂದು ಬೆಳಿಗ್ಗೆ ಯಿಂದ ವಿವಿಧ ಪೂಜೆಗಳು ಸೇರಿದಂತೆ ಚಾಮುಂಡೇಶ್ವರಿಗೆ ಮಹಾಮಂಗಳಾರತಿ ನಡೆಯಲಿದೆ ಎಂದು ತಿಳಿಸಿದರು. ಇತಿಹಾಸ ಪ್ರಸಿದ್ದದ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಬಹಳ ಹಿಂದಿನ ಕಾಲದಿಂದಲೇ ಇಲ್ಲಿ ದುರ್ಗಾ ಪೂಜೆ (ದುರ್ಗಾ ನಮಸ್ಕಾರ) ಯನ್ನು ಹಿರಿಯರು ಆಚರಿಸಿಕೊಂಡು ಬರುತ್ತಿದ್ದಾರೆ. ಹಿಂದಿನ ಕಾಲಘಟ್ಟದಲ್ಲಿ ವಿಧ್ಯಾರ್ಥಿಗಳ ಪರೀಕ್ಷಾ ಸಮಯದಲ್ಲಿ ಈ ಹಬ್ಬ ನಡೆಯುತ್ತಿದ್ದು, ಇದೀಗ ನವರಾತ್ರಿ ಉತ್ಸವದ ಸಮಯ ಶ್ರೇಷ್ಠ ಎಂಬ ಕಾರಣಕ್ಕೆ ಹಲವು ವರ್ಷಗಳಿಂದ ನವರಾತ್ರಿಯ ಒಂಬತ್ತು ದಿನಗಳ ಕಾಲ ನವದುರ್ಗೆಯರ ಸ್ಮರಣೆ ಮಾಡುತ್ತಾ ವಿವಿಧ ಪೂಜೆಯನ್ನು ಮಾಡಲಾಗುತ್ತದೆ ಎಂದು ಚಮ್ಮಟೀರ ಸುಗುಣ ಮುತ್ತಣ್ಣ…
ಮಡಿಕೇರಿ ಅ.18 : ಮಡಿಕೇರಿ ನಗರದ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಶರನ್ನವರಾತ್ರಿಯ 3ನೇ ದಿನ ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಅಲಂಕಾರ ಮಾಡಿ ಪೂಜಿಸಲಾಯಿತು.
ಮಡಿಕೇರಿ ಅ.18 : ಮಡಿಕೇರಿ ದಸರಾ ಸಾಂಸ್ಕೃತಿಕ ಕಾಯ೯ಕ್ರಮಗಳ ನಾಲ್ಕನೇ ದಿನವಾದ ಅ.19 ರಂದು ರಂದು ಜಾನಪದ ದಸರ ಪ್ರಯುಕ್ತ ವೈವಿಧ್ಯಮಯ ಕಾಯ೯ಕ್ರಮಗಳು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸಂಜೆ 6.30 ಗಂಟೆಯಿಂದ ಆಯೋಜಿಸಲ್ಪಟ್ಟಿದೆ. ಕುಶಾಲನಗದ ಶಾರದಾ ಕಲಾತಂಡದಿಂದ ಜಾನಪದ ವೈವಿಧ್ಯ, ಮಡಿಕೇರಿಯ ಡಾನ್ಸ್ ಲ್ಯಾಬ್ ತಂಡದಿಂದ ನೖತ್ಯ ವೈವಿಧ್ಯ,, ವಿರಾಜಪೇಟೆಯ ಪ್ರೇಮಾಂಜಲಿ ನಾಟ್ಯ ಮಯೂರಿ ಸಂಸ್ಥೆಯಿಂದ ನೖತ್ಯ ವೈವಿಧ್ಯ, ಮಡಿಕೇರಿಯ ನಾಟ್ಯ ಕಲಾ ಡಾನ್ಸ್ ಸ್ಟುಡಿಯೋದಿಂದ ನೖತ್ಯ, ಮಡಿಕೇರಿಯ ಪೊಮ್ಮಕ್ಕಡ ಕೂಟದಿಂದ ನೖತ್ಯ, ಮಡಿಕೇರಿಯ ಸ್ಪಂದನ ಮಹಿಳಾ ಸಂಘದಿಂದ ನೖತ್ಯ, ಕೆ.ಪಿ.ಎಸ್.ಬೀಟ್ಸ್ ಕೊಡಗು ಜಿಲ್ಲಾ ಪತ್ರಕತ೯ರ ಸಂಘ(ರಿ) ತಂಡದಿಂದ ಸಂಗೀತ ರಸಮಂಜರಿ ಸೇರಿದಂತೆ ಅನೇಕ ಕಾಯ೯ಕ್ರಮಗಳು ಆಯೋಜಿಸಲ್ಪಟ್ಟಿದೆ. ಬೆಳಗ್ಗೆ 9.30 ಗಂಟೆಯಿಂದ ಕೊಡಗು ಜಿಲ್ಲಾ ಜಾನಪದ ಪರಿಷತ್ ವತಿಯಿಂದ ಜಾನಪದ ಕಲಾಜಾಥಾ ನಡೆಯಲಿದ್ದು, ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಮಧ್ಯಾಹ್ನ 2 ಗಂಟೆಯವರೆಗೂ ವೈವಿಧ್ಯಮಯ ಜಾನಪದ ನೖತ್ಯ, ಗಾಯನ ಕಾಯ೯ಕ್ರಮಗಳು ಆಯೋಜಿಸಲ್ಪಟ್ಟಿದೆ ಎಂದು ಜಾನಪದ ದಸರಾ ಸಂಚಾಲಕ ಅನಿಲ್…
ಮಡಿಕೇರಿ ಅ.18 : ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ನಿಗದಿಗಿಂತ ಒಂದು ನಿಮಿಷ ಮುಂಚಿತವಾಗಿ ನಸುಕಿನ 1.26 ಗಂಟೆಗೆ ಕರ್ಕಾಟಕ ಲಗ್ನದಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ಪವಿತ್ರ ತೀರ್ಥೋದ್ಭವವಾಯಿತು. ಭಕ್ತರ ಜಯಘೋಷ, ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕುಂಡಿಕೆಯಲ್ಲಿ ತಾಯಿ ಕಾವೇರಿ ತೀರ್ಥರೂಪಿಣಿಯಾಗಿ ಕಾಣಿಸಿಕೊಂಡಳು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಮಠಾಧೀಶರು ಮತ್ತಿತರ ಗಣ್ಯರು ತೀರ್ಥೋದ್ಭವದ ಪವಿತ್ರ ಕ್ಷಣಕ್ಕೆ ಸಾಕ್ಷಿಯಾದರು. ನಸುಕಿನ ವೇಳೆ ತೀರ್ಥೋದ್ಭವವಾದರು ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಭಾಗಮಂಡಲ ಕ್ಷೇತ್ರಕ್ಕೆ ಆಗಮಿಸಿ ಶ್ರೀಭಗಂಡೇಶ್ವರನಿಗೆ ಪೂಜೆ ಸಲ್ಲಿಸಿದರು. ನಂತರ ಕಾಲ್ನಡಿಗೆಯ ಮೂಲಕ ಕಾವೇರಿ ಮಾತೆಯ ಸ್ಮರಣೆಯೊಂದಿಗೆ ತಲಕಾವೇರಿಗೆ ತೆರಳಿದರು. ನೆರೆದಿದ್ದ ಭಕ್ತರಿಗೆ ಕೊಡಗು ಏಕೀಕರಣ ರಂಗದ ವತಿಯಿಂದ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಮಡಿಕೇರಿ ಅ.17 : ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ನಡೆದ 58ನೇ ಘಟಿಕೋತ್ಸವದಲ್ಲಿ ಮಡಿಕೇರಿಯ ಸುಜನ್.ಪಿ “ಫಿಲ್ಮ್ ಮೇಕಿಂಗ್” ವಿಭಾಗದಲ್ಲಿ ಪಿಜಿ (ಪೋಸ್ಟ್ ಗ್ರಾಜುವೇಶನ್) ಚಿನ್ನದ ಪದಕ ಪಡೆದಿದ್ದಾರೆ. ಇವರು ನಗರದ ರಾಜೇಶ್ವರಿ ಶಾಲೆಯಲ್ಲಿ ಪ್ರಾಥಮಿಕ, ಸಂತ ಮೈಕಲರ ಶಾಲೆಯಲ್ಲಿ ಪ್ರೌಢ, ಮೂರ್ನಾಡು ಎಜುಕೇಷನ್ ಟ್ರಸ್ಟ್ ನಲ್ಲಿ ಪಿಯುಸಿ ಶಿಕ್ಷಣ ಮತ್ತು ಮೈಸೂರಿನ ಸೈಂಟ್ ಫಿಲೋಮಿನಾ ಕಾಲೇಜ್ ನಲ್ಲಿ ಪದವಿ ಪಡೆದಿದ್ದಾರೆ. ಸುಜನ್.ಪಿ ನಗರದ ಕುಂಬಳಗೇರಿ ಉಕ್ಕಡದ ನಿವಾಸಿ, ಎಲ್‌ಐಸಿ ಪ್ರತಿನಿಧಿ ಹೆಚ್.ಎಸ್.ಪ್ರೇಮ್ ಕುಮಾರ್ ಹಾಗೂ ದಿ.ಶೀಲಮ್ಮ ಅವರ ಪುತ್ರ.






