ಸೋಮವಾರಪೇಟೆ ಅ.6 : ಸೋಮವಾರಪೇಟೆ ಪ.ಪಂ ವತಿಯಿಂದ ಎಸ್.ಮಹೇಶ್ ಅವರನ್ನು ಸನ್ಮಾನಿಸಲಾಯಿತು. ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ನಾಮಕರಣ ಸದಸ್ಯರಾಗಿದ್ದ ಸಂದರ್ಭ ಕರ್ಕಳ್ಳಿ ಬಾಣೆಯಲ್ಲಿ ಸ್ಮಶಾನಕ್ಕೆ 1.75 ಎಕರೆ ಸರ್ಕಾರಿ ಜಾಗ ಮಂಜೂರು ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ರೂಪಿಸಲು ಸಹಕಾರ ನೀಡಿದ ಸಲುವಾಗಿ ಎಸ್.ಮಹೇಶ್ ಅವರನ್ನು ಶಾಸಕ ಡಾ.ಮಂತರ್‍ಗೌಡ ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭ ತಹಶೀಲ್ದಾರ್ ಎನ್.ಎಸ್.ನರಗುಂದ, ಸದಸ್ಯರಾದ ಪಿ.ಕೆ.ಚಂದ್ರು, ಶೀಲಾ ಡಿಸೋಜ, ಮೃತ್ಯಂಜಯ, ಮಹೇಶ್, ಮೋಹಿನಿ, ಮುಖ್ಯಾಧಿಕಾರಿ ನಾಚಪ್ಪ ಹಾಜರಿದ್ದರು.
ಲೇಖಕ: admin
ಸೋಮವಾರಪೇಟೆ ಅ.6 : ಅಮರಸುಳ್ಯ ದಂಗೆಯ ಮೂಲಕ ಕೊಡಗಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ವಿರುದ್ಧ ಧ್ವನಿ ಎತ್ತಿ ಹೋರಾಡುವ ಮೂಲಕ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಅಡಿಪಾಯ ಹಾಕಿದರು ಎಂದು ಸಂತ ಜೊಸೇಫರ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಛಾಯ ಹೇಳಿದರು. ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಸಂತಜೊಸೇಫರ ಪದವಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಗಂಗಾಧರ್‍ಶೇಟ್ ಸುಲೋಚನಾ ಬಾಯಿ ಸ್ಮಾರಕ ದತ್ತಿ ಉಪನ್ಯಾಸ “ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ನೆನಪು” ವಿಷಯದಲ್ಲಿ ಮಾತನಾಡಿದರು. 1852 ಭಾರತದ ಇತಿಹಾಸದಲ್ಲಿ ಮಹತ್ವದ ವರ್ಷ, ಮೊದಲ ಭಾರತ ಸ್ವಾತಂತ್ರ್ಯ ಸಂಗ್ರಾಮವಾಗಿತ್ತು. ಬ್ರಿಟಿಷರು ಅದನ್ನು ದಂಗೆ ಎಂದೇ ಕರೆದರು. ಅದಕ್ಕಿಂತ ಮೊದಲು 1834ರಲ್ಲಿ ಬ್ರಿಟಿಷರ ವಿರುದ್ಧ ಕೊಡಗಿನಲ್ಲಿ ಅಮರಸುಳ್ಯ ದಂಗೆ ನಡೆಯಿತು. ಕೆದಂಬಾಡಿ ರಾಮೇಗೌಡ, ಗುಡ್ಡೆಮನೆ ಅಪ್ಪಯ್ಯಗೌಡ ಅವರ ನೇತೃತ್ವದಲ್ಲಿ ಹೋರಾಟ ನಡೆಯಿತು. ಬ್ರಿಟಿಷರು ರೈತರ ಹೋರಾಟವನ್ನು ದರೋಡೆ, ಸುಲಿಗೆ ಎಂದು ಕರೆದು ರಾಮೇಗೌಡ, ಅಪ್ಪಯ್ಯಗೌಡರನ್ನು ಮಡಿಕೇರಿಯಲ್ಲಿ ಗಲ್ಲಿಗೇರಿಸಿದರು. ಹೋರಾಟಗಾರರ ಆಸ್ತಿಗಳನ್ನು ಮುಟ್ಟುಗೋಲು…
ವಿರಾಜಪೇಟೆ ಅ.6 : ಗೋಣಿಕೊಪ್ಪಲಿನ ಜಿಮ್ ಫಿಟ್ನೆಸ್ ಮಂತ್ರ ತರಬೇತಿ ಕೇಂದ್ರದಲ್ಲಿ ಪುಲ್ಲಪ್ಸ್, ಫ್ಲಾಂಕ್ ಮತ್ತು ಪುಶ್ ಅಪ್ ಸ್ಪರ್ಧೆ ನಡೆಯಿತು. ಸ್ಪರ್ಧೆಗಳಲ್ಲಿ ಶಿಲ್ಪ, ಧನುಷ್ ತಿಮ್ಮಯ್ಯ, ಪ್ರಿಯಾ ಹಾಗೂ ಅನೇಕ ತರಬೇತಿದಾರರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡರು. ತೀರ್ಪುಗಾರರಾಗಿ ಲಾಲ್ ಕುಮಾರ್ ಹಾಗೂ ಸಂತೋಷ್ ಕುಮಾರ್ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಜಿಮ್‍ನ ಮುಖ್ಯ ತರಬೇತಿದಾರರಾದ ರಫಿಕ್ ಇದ್ದರು.
ವಿರಾಜಪೇಟೆ ಅ.6 : ವಿರಾಜಪೇಟೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ವಿರಾಜಪೇಟೆಯ ಕಾವೇರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ಅನನ್ಯ, ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿನಿ ವಂಶಿ ಡಬಲ್ಸ್‍ನಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ ಎಂದು ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಆನಂದ್ ಕಾರ್ಲ ತಿಳಿಸಿದ್ದಾರೆ.
ವಿರಾಜಪೇಟೆ ಅ.6 : ಕೊಡವರು ತಮ್ಮ ಆಚಾರ ವಿಚಾರ ಪದ್ಧತಿ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲೂ ರಾಜಕೀಯ ಬೆರೆಸಬಾರದು ಎಂದು ಬ್ರಹ್ಮಗಿರಿ ಕೊಡವ ವಾರಪತ್ರಿಕೆ ಸಂಪಾದಕ, ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸ್ಥಾಪಕ ಅಧ್ಯಕ್ಷ ಡಾ.ಉಳ್ಳಿಯಡ ಪೂವಯ್ಯ ಹೇಳಿದರು. ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಕೊಡವ ಸಮಾಜದ ಆವರಣದಲ್ಲಿ ಕೈಲ್ ಪೋಳ್ಡ್ ಹಬ್ಬದ ಪ್ರಯುಕ್ತ ನಡೆದ ಒತ್ತೊರ್ಮೆ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕೊಡವಾಮೆ ಬಗ್ಗೆ, ಕೊಡವ ಜನಾಂಗದ ಬಗ್ಗೆ, ಸಂಸ್ಕೃತಿ, ಆಚಾರ, ವಿಚಾರ ಪದ್ಧತಿ ಪರಂಪರೆ ಬಗ್ಗೆ ಸವಿಸ್ತಾರವಾಗಿ ತಿಳಿಸಿದರಲ್ಲದೆ ಕೊಡವರ ಜನಸಂಖ್ಯೆ ಇಳಿಮುಖವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕೊಡವರು ಸ್ವಾಭಿಮಾನಿಗಳು, ಸರ್ಕಾರದ ಯಾವುದೇ ಮೀಸಲಾತಿ, ಸವಲತ್ತುಗಳು ಸಿಗಬೇಕಾದರೂ ಕೂಡ ಎಲ್ಲಾರು ರಾಜಕೀಯ ರಹಿತವಾಗಿ ಹೋರಾಟ ಮಾಡಬೇಕು. ಹಾಗೂ ಬದುಕಿನ ಪ್ರತಿ ಹೆಜ್ಜೆಯಲ್ಲೂ ಕೊಡವತನವನ್ನು ಮರೆಯಬಾರದು ಎಂದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಗ್ರೀನ್ ಸಿಟಿ ಪೋರಮ್ ಅಧ್ಯಕ್ಷ,…
ಮಡಿಕೇರಿ ಅ.6 : ರಾಷ್ಟ್ರೀಯ ಆರ್ಥೋಡಾಂಟಿಕ್ ಜಾಗೃತಿ ವಾರದ ಅಂಗವಾಗಿ ಮಡಿಕೇರಿಯ ಹಿಲ್ ರೋಡ್ ನಲ್ಲಿರುವ ‘ ಹ್ಯಾಪಿ ಟೀತ್ ‘ ಡೆಂಟಲ್ ಕ್ಲಿನಿಕ್ ನಲ್ಲಿ ಉಚಿತ ವಕ್ರ ಹಲ್ಲು ತಪಾಸಣೆ (ಬ್ರೇಸಸ್ ಗಾಗಿ ಆರ್ಥೋಡಾಂಟಿಕ್ ಕನ್ಸಲ್ಟೇಷನ್ ) ಶಿಬಿರ ನಡೆಯಲಿದೆ ಎಂದು ದಂತ ತಜ್ಞೆ ಡಾ. ಅನುಶ್ರೀ ತಿಳಿಸಿದ್ದಾರೆ . ಇಂದಿನಿಂದ (ಅ.6) ಅ.13 ರವರೆಗೆ ಶಿಬಿರ ನಡೆಯಲಿದೆ. ವಕ್ರ ಹಲ್ಲು ಹಾಗೂ ಹಲ್ಲುಗಳ ನಡುವಿನ ಅಂತರವನ್ನು ಸರಿಪಡಿಸುವ ಚಿಕಿತ್ಸೆಗೆ, ತಪಾಸಣೆಯು ವಯಸ್ಸಿನ ಮಿತಿ ಇಲ್ಲದೆ ಉಚಿತವಾಗಿ ನಡೆಯಲಿದೆ. ತಪಾಸಣೆಗೆ ಬರುವವರು ಲಕ್ಕಿ ಡ್ರಾ ದಲ್ಲಿ ಹೆಸರು ಹಾಕಿ ಆಯ್ಕೆಯಾದಲ್ಲಿ ಚಿಕಿತ್ಸೆಯು ಕೂಡ ಉಚಿತವಾಗಿ ನಡೆಸಲಾಗುವುದು. 2ನೆ ಸ್ಥಾನ ಪಡೆಯುವವರಿಗೆ ಶೇ.50 ರ ರಿಯಾಯಿತಿಯಲ್ಲಿ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಫೋ : 7624960691 ಅನ್ನು ಸಂಪರ್ಕಿಸಬಹುದು. ಸಮಯ : ಸೋಮ – ಶನಿ : ಬೆ :11 ರಿಂದ ಸಂಜೆ 5, ಭಾನು : ಮಧ್ಯಾಹ್ನ 3 ರಿಂದ…
ಮಡಿಕೇರಿ ಅ.5 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಕೊಡಗು ಜಿಲ್ಲೆಯ ಬಿ.ಎಸ್ .ಆನಂದ ಅವರನ್ನು ನೇಮಕ ಮಾಡಲಾಗಿದೆ. ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಎಸ್.ಮಧು ಬಂಗಾರಪ್ಪ ಅವರು ಆದೇಶ ಪತ್ರ ಹಸ್ತಾಂತರಿಸುವ ಸಂದರ್ಭ ಕೆಪಿಸಿಸಿ ಸದಸ್ಯ ಕೆ.ಎ.ಯಾಕುಬ್ ಹಾಜರಿದ್ದರು.
ಮಡಿಕೇರಿ ಅ.5 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಪ್ರಮುಖ ಬೇಡಿಕೆಯಾದ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯ ಕುರಿತು ಆಯೋಗವನ್ನು ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಆಕ್ಷೇಪಣೆ ಸಲ್ಲಿಸಲು ವಿಳಂಬ ಧೋರಣೆ ತೋರುತ್ತಿರುವ ಕೇಂದ್ರ ಗೃಹ ಇಲಾಖೆಗೆ ರೂ.5 ಸಾವಿರ ದಂಡ ವಿಧಿಸಿದೆ. ಉಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಹಾಗೂ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರುಗಳ ಸಮ್ಮುಖದಲ್ಲಿ ನಡೆದ ವಿಚಾರಣೆಯಲ್ಲಿ ಅರ್ಜಿದಾರರ ಪರ ಡಾ.ಸುಬ್ರಮಣ್ಯನ್ ಸ್ವಾಮಿ ಹಾಗೂ ವಕೀಲ ಕೀರನ್ ನಾರಾಯಣ್ ಅವರು ವಾದ ಮಂಡಿಸಿದರು. ನ್ಯಾಯಾಲಯದ ಮುಂದೆ ಹಲವು ಬಾರಿ ಅರ್ಜಿ ವಿಚಾರಣೆಗೆ ಬಂದಿದ್ದು, ಪ್ರತಿವಾದಿಗಳಲ್ಲಿ ಒಂದಾದ ಕೇಂದ್ರವು ಅರ್ಜಿಗೆ ಆಕ್ಷೇಪಿಸಲು ಹೆಚ್ಚಿನ ಸಮಯ ಬಯಸಿ ಹಲವು ಬಾರಿ ವಿಚಾರಣೆಯನ್ನು ಮುಂದೂಡುವಂತೆ ಮಾಡಿದ ಕಾರಣ ದಂಡ ವಿಧಿಸಲಾಗಿದೆ. ಮುಂದಿನ ವಿಚಾರಣೆಯನ್ನು ನ.29 ಕ್ಕೆ ಮುಂದೂಡಿದ್ದು, ಆಕ್ಷೇಪಣೆಯನ್ನು ಸಲ್ಲಿಸುವಂತೆಯೂ ಅದೇಶಿಸಿದೆ. ಕರ್ನಾಟಕ ರಾಜ್ಯ ಸರಕಾರ, ಕೇಂದ್ರ ಕಾನೂನು ಇಲಾಖೆ ಹಾಗೂ…
ಸೋಮವಾರಪೇಟೆ ಅ.5 : ಕೊಡಗು ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ, ಕೊಡಗು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಮಂಡಳಿ ಮತ್ತು ಕೊಡಗು ಜಿಲ್ಲಾ ಕರಾಟೆ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪ್ರತೀಕ್ಷ ಪ್ರಥಮ ಸ್ಥಾನ ಪಡೆದು, ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಗೆ ಆಯ್ಕೆಯಾಗಿದ್ದಾಳೆ. ಇವರು ಸೋಮವಾರಪೇಟೆಯ ಪುಟ್ಟಸ್ವಾಮಿ ಮತ್ತು ಶೋಭಾ ದಂಪತಿಯ ಪುತ್ರಿಯಾಗಿದ್ದು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ.
ಮಡಿಕೇರಿ ಅ.5 : ಭಾಗಮಂಡಲ ಮತ್ತು ತಲಕಾವೇರಿ ಮಾರ್ಗದ ರಸ್ತೆ ಯನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಇಂದು ಪರಿಶೀಲಿಸಿದರು. ಈ ಸಂದರ್ಭ ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು.






